< ಯೆರೆಮೀಯನು 23 >
1 “ನನ್ನ ಹುಲ್ಲುಗಾವಲಿನ ಕುರಿಗಳನ್ನು ಹಾಳು ಮಾಡಿ ಚದರಿಸುವ ಕುರುಬರಿಗೆ ಕಷ್ಟ!” ಎಂದು ಯೆಹೋವ ದೇವರು ಹೇಳುತ್ತಾರೆ.
၁ထာဝရဘုရားမိန့်တော်မူသည်ကား၊ ငါ့ထံမှာ ကျက်စားသော သိုးတို့ကို ဖျက်ဆီး၍၊ အရပ်ရပ်သို့ ကွဲပြား စေသော သိုးထိန်းတို့သည် အမင်္ဂလာရှိကြ၏။
2 ಆದ್ದರಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರು ತನ್ನ ಜನರನ್ನು ಮೇಯಿಸುವ ಕುರುಬರಿಗೆ ವಿರೋಧವಾಗಿ ಹೀಗೆ ಹೇಳುತ್ತಾರೆ: “ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟು ಮತ್ತು ಅವುಗಳ ಮೇಲೆ ಕಾಳಜಿ ತೋರಿಸಲಿಲ್ಲ. ಇಗೋ, ನೀನು ಮಾಡಿದ ಕೆಟ್ಟತನಕ್ಕಾಗಿ ನಾನು ನಿನಗೆ ಶಿಕ್ಷೆಯನ್ನು ಕೊಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
၂ထိုကြောင့်၊ ဣသရေလအမျိုး၏ ဘုရားသခင် ထာဝရဘုရား မိန့်တော်မူသည်ကား၊ ငါ၏ လူတို့ကို ကျွေးမွေးရသော သိုးထိန်းတို့အမှုမှာ သင်တို့သည် ငါ၏ သိုးစုကို မကြည့်ရှု၊ မပြုစု၊ အရပ်ရပ်သို့ ကွဲပြားစေ၍ နှင်ထုတ်သောကြောင့်၊ သင်တို့ပြုသော ဒုစရိုက်အပြစ်ကို သင်တို့အပေါ်မှာ ငါသက်ရောက်စေမည်ဟု ထာဝရ ဘုရားမိန့်တော်မူ၏။
3 “ಆದರೆ ನಾನು ನನ್ನ ಮಂದೆಯ ಶೇಷವನ್ನು, ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ದೇಶಗಳಿಂದ ಕೂಡಿಸಿ, ಅವರನ್ನು ತಮ್ಮ ಹಟ್ಟಿಗಳಿಗೆ ತಿರುಗಿ ತರುವೆನು. ಅವರು ಪೀಳಿಗೆಯಾಗಿ ಹೆಚ್ಚುವರು.
၃တဖန်မိန့်တော်မူသည်ကား၊ ငါ၏သိုးစုကို ငါနှင်ထုတ်သော ပြည်ရှိသမျှတို့၌ ကျန်ကြွင်းသော သိုး တို့ကို ငါစုဝေး၍၊ နေရင်းသိုးခြံသို့ တဖန်ငါဆောင်ခဲ့ ဦးမည်။ သူတို့သည်လည်း၊ သားဘွား၍ များပြားကြလိမ့် မည်။
4 ಅವರನ್ನು ಮೇಯಿಸತಕ್ಕ ಕುರುಬರನ್ನು ಅವರ ಮೇಲೆ ಇಡುತ್ತೇನೆ. ಅವರು ಇನ್ನು ಮೇಲೆ ಭಯಪಡುವುದೇ ಇಲ್ಲ, ಅಂಜುವುದಿಲ್ಲ, ಕೊರತೆ ಪಡುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
၄သူတို့ကို ကျွေးမွေးသော သိုးထိန်းတို့ကို သူတို့ အပေါ်မှာ ငါခန့်ထားသဖြင့်၊ သူတို့သည် နောက်တဖန် ကြောက်ခြင်း၊ ထိတ်လန့်ခြင်းမရှိ ရကြ။ ဆုံးမခြင်းကိုလည်း မခံရကြဟု ထာဝရဘုရား မိန့်တော်မူ၏။
5 “ಇಗೋ, ದಿನಗಳು ಬರಲಿವೆ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆಗ ನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಎಬ್ಬಿಸುತ್ತೇನೆ. ಒಬ್ಬ ಅರಸನು ರಾಜ್ಯವನ್ನಾಳಿ ವೃದ್ಧಿಯಾಗುವನು. ಭೂಮಿಯಲ್ಲಿ ನ್ಯಾಯವನ್ನೂ, ನೀತಿಯನ್ನೂ ನಡೆಸುವನು.
၅ထာဝရဘုရား မိန့်တော်မူသည်ကား၊ သန့်ရှင်း သော အညွန့်ကို ဒါဝိဒ်အဘို့ ငါပေါက်စေသည်အတိုင်း၊ ဥာဏ်ကောင်းသောရှင်ဘုရင်တဦးသည် စိုးစံ၍၊ မြေကြီး ပေါ်မှာ တရားသဖြင့် ဖြောင့်မတ်စွာ စီရင်ရာ ကာလ သည် ရောက်လိမ့်မည်။
6 ಆತನ ದಿನಗಳಲ್ಲಿ ಯೆಹೂದ್ಯರು ಸುರಕ್ಷಿತರಾಗಿರುವರು. ಇಸ್ರಾಯೇಲರು ನೆಮ್ಮದಿಯಿಂದ ವಾಸಿಸುವರು. ಯೆಹೋವ ಚಿದ್ಕೇನು ಎಂದರೆ, ಯೆಹೋವ ದೇವರೇ ನಮ್ಮ ಸದ್ಧರ್ಮ ಎಂಬ ಹೆಸರು ಅವರಿಗಿರುವುದು.
၆ထိုမင်းလက်ထက်၌ ယုဒပြည်သည် ကယ်တင် ခြင်းသို့ရောက်၍၊ ဣသရေလပြည်လည်း ငြိမ်ဝပ်စွာ နေရ လိမ့်မည်။ ထိုမင်းသည် ယေဟောဝါဇေဒကနုဟူသော ဘွဲ့နာမရှိလိမ့်သတည်း။
7 “ಆದ್ದರಿಂದ ಇಗೋ, ದಿನಗಳು ಬರಲಿವೆ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆಗ, ‘ಇಸ್ರಾಯೇಲನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ಯೆಹೋವ ದೇವರ ಜೀವದಾಣೆ,’ ಎಂದು ಹೇಳುವುದೇ ಇಲ್ಲ.
၇သို့ဖြစ်၍၊ ထာဝရဘုရားမိန့်တော်မူသည်ကား၊ ဣသရေလအမျိုးသားတို့ကို အဲဂုတ္တုပြည်မှ နှုတ်ဆောင် သော ထာဝရဘုရားအသက်ရှင်တော်မူသည်ဟူ၍ မကျိန်ဆိုဘဲ၊
8 ಆದರೆ, ‘ಇಸ್ರಾಯೇಲಿನ ಮನೆತನದವರ ಸಂತಾನವನ್ನು ಉತ್ತರ ದೇಶದಿಂದಲೂ ಬರಮಾಡಿದ ಯೆಹೋವ ದೇವರ ಜೀವದಾಣೆ,’ ಎಂದು ಹೇಳುವರು. ಅವರು ತಮ್ಮ ದೇಶದಲ್ಲಿಯೇ ವಾಸಮಾಡುವರು.”
၈ဣသရေလအမျိုးသား အစဉ်အဆက်တို့ကို မြောက်ပြည်မှစ၍၊ နှင့်ထုတ်ဘူးသော ပြည်ရှိသမျှတို့မှ ပို့ဆောင်သော ထာဝရဘုရား အသက်ရှင်တော်မူသည် ဟူ၍ ကျိန်ဆိုရသော ကာလသည် နောက်တဖန် ရောက် လိမ့်မည်။ သူတို့သည် နေရင်းပြည်၌ တဖန် နေရကြ လိမ့်မည်။
9 ಪ್ರವಾದಿಗಳ ನಿಮಿತ್ತ: ನನ್ನ ಹೃದಯವು ನನ್ನಲ್ಲಿ ಮುರಿದಿದೆ. ನನ್ನ ಎಲುಬುಗಳೆಲ್ಲಾ ಕದಲುತ್ತವೆ. ಯೆಹೋವ ದೇವರ ನಿಮಿತ್ತವೂ, ಆತನ ಪರಿಶುದ್ಧ ವಾಕ್ಯಗಳ ನಿಮಿತ್ತವೂ, ಮತ್ತನಾದ ಮನುಷ್ಯನ ಹಾಗೆಯೂ, ದ್ರಾಕ್ಷಾರಸಕ್ಕೆ ಒಳಗಾದ ಪುರುಷನ ಹಾಗೆಯೂ ಇದ್ದೇನೆ.
၉ပရောဖက်များနှင့် ဆိုင်သော စကားဟူမူကား၊ ထာဝရဘုရားကြောင့်၎င်း၊ သန့်ရှင်းသော စကားတော် ကြောင့်၎င်း ငါ့စိတ်ပျက်လျက်ရှိ၏။ ငါ့အရိုးရှိသမျှတို့သည် လှုပ်ရှားကြ၏။ ယစ်မူးသောသူနှင့် စပျစ်ရည်နိုင်သော သူကဲ့သို့ ငါဖြစ်၏။
10 ಏಕೆಂದರೆ ದೇಶವು ವ್ಯಭಿಚಾರಗಳಿಂದ ತುಂಬಿದೆ. ದೇಶವು ಶಾಪದಿಂದ ದುಃಖಿಸುತ್ತದೆ. ಮರುಭೂಮಿಯ ಮನೋಹರವಾದ ಸ್ಥಳಗಳು ಒಣಗಿ ಹೋಗಿವೆ. ಪ್ರವಾದಿಗಳು ಕೆಟ್ಟ ಮಾರ್ಗವನ್ನು ಅನುಸರಿಸುತ್ತಾರೆ ಮತ್ತು ತಮ್ಮ ಶಕ್ತಿಯನ್ನು ಅನ್ಯಾಯವಾಗಿ ಬಳಸುತ್ತಾರೆ.
၁၀အကြောင်းမူကား၊ မတရားသော မေထုန်၌မှီဝဲ သောသူတို့သည် တပြည်လုံး၌ အနှံ့အပြားရှိကြ၏။ ထိုသူတို့ကြောင့် တပြည်လုံးမြည်တမ်းရ၏။ တော၌ ကျက်စားရာအရပ်တို့သည် သွေ့ခြောက်ကြ၏။ ပြည်သား များလိုက်သောလမ်းသည် မဖြောင့်၊ သူတို့အစွမ်းသတ္တိ သည် တရားဘက်၌ မနေတတ်။
11 “ಪ್ರವಾದಿಯೂ ಯಾಜಕನೂ ಕೂಡ ಭ್ರಷ್ಟರೇ. ಹೌದು, ನನ್ನ ಆಲಯದಲ್ಲಿ ಅವರ ಕೆಟ್ಟತನವನ್ನು ಕಂಡಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
၁၁ပရောဖက်နှင့်ယဇ်ပုရောဟိတ်နှစ်ပါးတို့သည် ဘုရားကို မရိုမသေပြုကြပြီ။ ငါ့အိမ်၌ပင် သူတို့ပြုသော အဓမ္မအမှုကို ငါတွေ့ပြီဟု ထာဝရဘုရား မိန့်တော်မူ၏။
12 “ಆದ್ದರಿಂದ ಅವರ ಮಾರ್ಗವು ಕತ್ತಲೆಯಲ್ಲಿರುವ ಜಾರುವ ಸ್ಥಳಗಳ ಹಾಗಿರುವುದು. ಅವರು ಮುಗ್ಗರಿಸಿಬೀಳುವರು. ನಾನು ಕೇಡನ್ನು ದಂಡನೆಯ ವರ್ಷವನ್ನಾಗಿ ಅವರ ಮೇಲೆ ಬರಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
၁၂ထိုကြောင့်၊ သူတို့သွားသောလမ်းသည် မှောင်မိုက်၌ ချောတတ်သော လမ်းကဲ့သို့ဖြစ်၍၊ သူတို့သည် တွန်းတိုးခြင်းကို ခံရ၍ လဲကြလိမ့်မည်။ အကြောင်းမူကား၊ သူတို့သည် ဆုံးမခြင်းကို ခံရသော ကာလ၌ သူတို့အပေါ်မှာ ဘေးဥပဒ်ကို သင့်ရောက် စေမည်ဟု ထာဝရဘုရား မိန့်တော်မူ၏။
13 “ಸಮಾರ್ಯದ ಪ್ರವಾದಿಗಳಲ್ಲಿ ಅಸಹ್ಯಕರ ವಿಷಯವನ್ನು ನೋಡಿದ್ದೇನೆ. ಅವರು ಬಾಳನಿಂದ ಪ್ರವಾದನೆಯನ್ನು ಕೇಳಿ, ನನ್ನ ಜನರಾದ ಇಸ್ರಾಯೇಲನ್ನು ತಪ್ಪುವಂತೆ ಮಾಡಿದ್ದಾರೆ.
၁၃ရှမာရိပြည်သား ပရောဖက်တို့၌လည်း၊ မိုက် သောသဘောကို ငါမြင်ပြီ။ သူတို့သည် ဗာလဘုရားကို မှီဝဲ၍ ပရောဖက်ပြုသဖြင့်၊ ငါ၏လူ ဣသရေလ အမျိုးသားတို့ကို မှားယွင်းစေကြပြီ။
14 ಯೆರೂಸಲೇಮಿನ ಪ್ರವಾದಿಗಳಲ್ಲಿ ಭಯಂಕರವಾದದ್ದನ್ನು ನೋಡಿದ್ದೇನೆ. ಅವರು ವ್ಯಭಿಚಾರ ಮಾಡಿ, ಸುಳ್ಳಿನಲ್ಲಿ ನಡೆದುಕೊಂಡದ್ದಲ್ಲದೆ, ದುಷ್ಟರು ತಮ್ಮ ದುಷ್ಟತ್ವವನ್ನು ಬಿಟ್ಟು ತಿರುಗದ ಹಾಗೆ ಅವರ ಕೈಗಳನ್ನು ಬಲಪಡಿಸುತ್ತಾರೆ. ಅವರೆಲ್ಲರೂ ನನಗೆ ಸೊದೋಮಿನ ಹಾಗೆಯೂ, ಅದರ ನಿವಾಸಿಗಳು ಗೊಮೋರದ ಹಾಗೆಯೂ ಇದ್ದಾರೆ.”
၁၄ယေရုရှလင်မြို့သား ပရောဖက်တို့၌လည်း၊ စက်ဆုပ်ရွံရှာဘွယ်သောသဘောကို ငါမြင်ပြီ။ သူတို့သည် မတရားသော မေထုန်၌မှီဝဲလျက်၊ မုသာကိုလည်း သုံးလျက်၊ အဓမ္မပြုသောသူတို့ကို အားပေးတတ်သဖြင့်၊ အဘယ်သူမျှမိမိပြုသော အဓမ္မအမှုကို မစွန့်။ ထိုသူ ရှိသမျှတို့သည် ငါ၌ သောဒုံမြို့သားကဲ့သို့၎င်း၊ ယေရု ရှလင်မြို့သားတို့သည် ဂေါမောရမြို့သားကဲ့သို့၎င်း ဖြစ်ကြ၏။
15 ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಪ್ರವಾದಿಗಳ ವಿಷಯವಾಗಿ ಹೇಳುವುದೇನೆಂದರೆ: “ನಾನು ಅವರಿಗೆ ಕಹಿಯಾದ ಆಹಾರ ತಿನ್ನುವುದಕ್ಕೆ ಕೊಡುವೆನು. ವಿಷದ ನೀರನ್ನು ಕುಡಿಯ ಕೊಡುವೆನು. ಏಕೆಂದರೆ ಯೆರೂಸಲೇಮಿನ ಪ್ರವಾದಿಗಳ ಕಡೆಯಿಂದ ಭ್ರಷ್ಟತ್ವವು ದೇಶಕ್ಕೆಲ್ಲಾ ಹರಡಿದೆ.”
၁၅ထိုကြောင့်၊ ကောင်းကင်ဗိုလ်ခြေအရှင် ထာဝရ ဘုရားသည် ပရောဖက်တို့အမှု၌ မိန့်တော်မူသည်ကား၊ သူတို့ကို ဒေါနနှင့် ငါကျွေးမည်။ ဆေးခါးကိုလည်း သောက်စေမည်။ ယေရုရှလင်မြို့သား ပရောဖက်တို့သည် မူလအမြစ်ဖြစ်၍၊ အဓမ္မအမှုသည် တပြည်လုံးကို နှံ့ပြား လေပြီ။
16 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮಗೆ ಪ್ರವಾದಿಸುವ ಪ್ರವಾದಿಗಳ ವಾಕ್ಯಕ್ಕೆ ಕಿವಿಗೊಡಬೇಡಿರಿ. ಅವರು ನಿಮ್ಮಲ್ಲಿ ವ್ಯರ್ಥವಾದ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ. ಯೆಹೋವ ದೇವರ ಬಾಯಿಂದಲ್ಲ, ಸ್ವಂತ ಹೃದಯದಿಂದ ದರ್ಶನವನ್ನು ಹೇಳುತ್ತಾರೆ.
၁၆ကောင်းကင်ဗိုလ်ခြေ အရှင်ထာဝရဘုရား မိန့်တော်မူသည်ကား၊ ပရောဖက်ပြု၍ သင်တို့အား ဟောတတ်သော ဆရာတို့၏ စကားကို နားမထောင် ကြနှင့်။ သူတို့သည် သင်တို့အား အချည်းနှီးဟောတတ် ကြ၏။ ထာဝရဘုရား၏ နှုတ်တော်ထွက်သို့မလိုက်၊ ကိုယ်အလိုအလျောက် ရူပါရုံကို မြင်သည်အတိုင်း ဟောပြောတတ်ကြ၏။
17 ಆದರೂ ನನ್ನನ್ನು ಅಸಹ್ಯಿಸುವವರಿಗೆ, ಅವರು, ‘ನಿಮಗೆ ಸಮಾಧಾನವಾಗುವುದು, ಎಂದು ಯೆಹೋವ ದೇವರು ಹೇಳಿದ್ದಾರೆ,’ ಎಂದು ಹೇಳುತ್ತಲೇ ಇದ್ದಾರೆ. ತಮ್ಮ ಹೃದಯದ ಹಟದ ಪ್ರಕಾರ ನಡೆದುಕೊಳ್ಳುವವರೆಲ್ಲರಿಗೆ ‘ನಿಮ್ಮ ಮೇಲೆ ಕೇಡು ಬರುವುದಿಲ್ಲ,’ ಎನ್ನುತ್ತಾರೆ.
၁၇ထာဝရဘုရား၏ နှုတ်ကပတ်တော်ကို မထီမဲ့မြင် ပြုသော သူတို့အား၊ သင်တို့သည် ငြိမ်ဝပ်ခြင်းရှိကြ လိမ့်မည်ဟု ဟောတတ်ကြ၏။ မိမိတို့စိတ်နှလုံးခိုင်မာခြင်း သဘောသို့လိုက်သော သူတို့အား၊ သင်တို့သည် ဘေးဥပဒ် နှင့် မတွေ့ရကြဟု ဟောတတ်ကြ၏။
18 ಆದರೆ ಯಾರು ಯೆಹೋವ ದೇವರ ಆಲೋಚನೆಯ ಸಭೆಯಲ್ಲಿ ನಿಂತು ಆತನ ವಾಕ್ಯವನ್ನು ತಿಳಿದುಕೊಂಡು ಕೇಳಿದ್ದಾರೆ? ಯಾರು ಆತನ ವಾಕ್ಯವನ್ನು ಲಕ್ಷ್ಯವಿಟ್ಟು ಕೇಳಿದ್ದಾರೆ?
၁၈ထိုသူတို့တွင် အဘယ်သူသည် ထာဝရဘုရားနှင့် တိုင်ပင်ဘက်ပြုသနည်း။ အဘယ်သူသည် အမှုတော်ကို ကြားမြင်သနည်း။ အဘယ် သူသည် နှုတ်ကပတ်တော်ကို နားထောင်၍ ကြားသနည်း။
19 ಇಗೋ, ಯೆಹೋವ ದೇವರ ಬಿರುಗಾಳಿಯು ಉಗ್ರವಾಗಿ ಹೊರಟಿದೆ. ಅಘೋರವಾದ ಆ ಬಿರುಗಾಳಿಯು ದುಷ್ಟರ ತಲೆಯ ಮೇಲೆ ಕಠಿಣವಾಗಿ ಬೀಳುವುದು
၁၉ထာဝရဘုရား၏ လေဘွေတော်သည် ပူသော အရှိန်နှင့်ထွက်၏။ ပြင်းစွာသော လေဘွေဖြစ်၍၊ မတရား သော သူတို့ခေါင်းပေါ်မှာ ပြင်းစွာ တိုက်လိမ့်မည်။
20 ಆತನು ತನ್ನ ಹೃದಯದ ಆಲೋಚನೆಗಳನ್ನು ನಡೆಸಿ ತೀರಿಸುವವರೆಗೂ ಯೆಹೋವ ದೇವರ ಕೋಪವು ತಿರುಗುವುದಿಲ್ಲ. ಅಂತ್ಯ ದಿವಸಗಳಲ್ಲಿ ನೀವು ಅದನ್ನು ಸಂಪೂರ್ಣವಾಗಿ ಗ್ರಹಿಸುವಿರಿ.
၂၀ထာဝရဘုရားသည် လက်စသတ်၍၊ အကြံ အစည်တော်ကို ပြည့်စုံစေတော်မမူမှီ အမျက်တော် မငြိမ်း ရ။ နောက်ကာလ၌ သင်တို့သည် ရှင်းလင်းစွာ နားလည် ကြလိမ့်မည်။
21 ನಾನು ಈ ಪ್ರವಾದಿಗಳನ್ನು ಕಳುಹಿಸಲಿಲ್ಲ; ಆದರೂ ಅವರು ತಮ್ಮ ಸಂದೇಶದೊಂದಿಗೆ ಓಡಿದ್ದಾರೆ ನಾನು ಅವರ ಸಂಗಡ ಮಾತನಾಡಲಿಲ್ಲ. ಆದರೂ ಪ್ರವಾದಿಸಿದರು.
၂၁ငါမစေလွှတ်ဘဲ ထိုပရောဖက်တို့သည် ပြေးကြ ပြီ။ ငါမမှာထားဘဲ သူတို့သည် ကိုယ်အလိုအလျောက် ဟောပြောကြပြီ။
22 ಆದರೆ ಅವರು ನನ್ನ ಆಲೋಚನಾ ಸಭೆಯಲ್ಲಿ ನಿಂತಿದ್ದರೆ, ಆಗ ಅವರು ಜನರಿಗೆ ನನ್ನ ವಾಕ್ಯಗಳನ್ನು ಹೇಳಿಕೊಟ್ಟು, ಅವರನ್ನು ತಮ್ಮ ಕೆಟ್ಟ ಮಾರ್ಗದಿಂದಲೂ, ತಮ್ಮ ಕ್ರಿಯೆಗಳ ಕೆಟ್ಟತನದಿಂದಲೂ ತಿರುಗಿಸುತ್ತಿದ್ದರು.”
၂၂ထိုသူတို့သည် ငါနှင့် တိုင်ပင်ဘက်ပြုလျှင်၊ ငါ့စကားကို ငါ၏ လူမျိုးအားဆင့်ဆို၍၊ ငါ၏လူမျိုးကို မတရားသော လမ်းမှ၎င်း၊ မကောင်း သောအကျင့်ဓလေ့ မှ၎င်း လွဲသွားစေကြပြီ။
23 ಯೆಹೋವ ದೇವರು ಹೀಗೆನ್ನುತ್ತಾರೆ, “ಹತ್ತಿರದಲ್ಲಿ ಇದ್ದರೆ ಮಾತ್ರ ನಾನು ದೇವರೋ? ದೂರದಲ್ಲಿದ್ದರೆ ನಾನು ದೇವರಲ್ಲವೋ?”
၂၃ငါသည်နီးသော အရပ်၌သာ ဘုရားဖြစ် သလော။ ဝေးသော အရပ်၌လည်း ဘုရားဖြစ်သည် မဟုတ်လောဟု ထာဝရဘုရား မေးတော်မူ၏။
24 ನನ್ನ ಕಣ್ಣಿಗೆ ಬೀಳದಂತೆ ಯಾವನಾದರೂ ಗುಪ್ತಸ್ಥಳಗಳಲ್ಲಿ ಮರೆಮಾಚಿಕೊಳ್ಳಲು ಸಾಧ್ಯವೇ? ಎಂದು ಯೆಹೋವ ದೇವರು ಹೇಳುತ್ತಾರೆ. “ನಾನು ಭೂಮ್ಯಾಕಾಶಗಳಲ್ಲಿ ವ್ಯಾಪಿಸಿರುವವನಲ್ಲವೇ?” ಎಂದು ಯೆಹೋವ ದೇವರು ಹೇಳುತ್ತಾರೆ.
၂၄ငါမမြင်စေခြင်းငှါ အဘယ်သူသည် မထင်ရှား သော အရပ်၌ ပုန်းရှောင်၍ နေနိုင်သနည်းဟု ထာဝရ ဘုရားမေးတော်မူ၏။ ငါသည် ကောင်းကင်မြေကြီးကို နှံ့ပြားသည် မဟုတ်လောဟု ထာဝရဘုရား မေးတော် မူ၏။
25 “‘ನನಗೆ ಕನಸು ಬಿತ್ತು, ಕನಸು ಬಿತ್ತು,’ ಎಂದು ನನ್ನ ಹೆಸರು ಹೇಳಿ ಸುಳ್ಳು ಪ್ರವಾದಿಸುವ ಪ್ರವಾದಿಗಳ ನುಡಿಯನ್ನು ಕೇಳಿದ್ದೇನೆ.
၂၅ငါသည် အိပ်မက်မြင်ပြီ၊ အိပ်မက်မြင်ပြီဟု၊ ငါ့နာမကို အမှီပြု၍၊ မုသာဖြင့် ဟောပြောသော ပရောဖက်တို့၏ စကားကို ငါကြားပြီ။
26 ಸುಳ್ಳು ಪ್ರವಾದಿಸುವ ಪ್ರವಾದಿಗಳ ಹೃದಯದಲ್ಲಿ ಇದು ಎಷ್ಟರವರೆಗೆ ಇರುವುದು? ಹೌದು, ಅವರು ತಮ್ಮ ಮನಸ್ಸಿನ ಭ್ರಮೆಗಳನ್ನು ಪ್ರವಾದಿಸುವವರೇ.
၂၆ထိုပရောဖက်တို့သည် အဘယ်မျှကာလပတ်လုံး ဤသို့ကြံစည် ကြလိမ့်မည်နည်း။ သူတို့သည် မုသာစကား ကို ဟောပြောတတ်ကြ၏။ ကိုယ်စိတ်နှလုံး လှည့်စားသည် အတိုင်း ဟောပြောတတ်ကြ၏။
27 ಅವರ ಪಿತೃಗಳು ಬಾಳನಿಂದ ನನ್ನ ಹೆಸರನ್ನು ಹೇಗೆ ಮರೆತರೋ, ಹಾಗೆಯೇ ಇವರು ತಮ್ಮ ತಮ್ಮ ನೆರೆಯವರಿಗೆ ತಿಳಿಸುವ ಕನಸುಗಳಿಂದ ನನ್ನ ಜನರು ನನ್ನ ಹೆಸರನ್ನು ಮರೆತುಬಿಡುವಂತೆ ಮಾಡುವುದಕ್ಕೆ ಯೋಚಿಸುತ್ತಾರೆ.
၂၇ဘိုးဘေးတို့သည် ဗာလကြောင့် ငါ့နာမကို မေ့လျော့သကဲ့သို့၊ သူတို့သည် အိမ်နီးချင်းတယောက်ကို တယောက်ပြောတတ်သော အိပ်မက်များအားဖြင့် ငါ၏ လူမျိုးသည် ငါ့နာမကို မေ့လျော့စေမည်ဟု အကြံရှိကြ သည်တကား။
28 ಕನಸುಕಂಡ ಪ್ರವಾದಿಯು ಕನಸನ್ನು ತಿಳಿಸಿದರೆ ತಿಳಿಸಲಿ ಆದರೆ ನನ್ನ ವಾಕ್ಯವನ್ನು ಕೇಳಿದವನು ಅದನ್ನು ಯಥಾರ್ಥವಾಗಿ ನುಡಿಯಲಿ. ಹೊಟ್ಟನ್ನು ಕಾಳಿನೊಂದಿಗೆ ಹೋಲಿಸಲಾದೀತೆ?” ಎಂದು ಯೆಹೋವ ದೇವರು ಹೇಳುತ್ತಾರೆ.
၂၈အိပ်မက်မြင်သော ပရောဖက်သည် အိပ်မက် စကားကို ပြောပါလေစေ။ ငါ၏နှုတ်ကပတ်တော်ကို ခံရ သော သူသည် နှုတ်ကပတ်စကားတော်ကို မှန်ကန်စွာ ဟောပြောပါလေစေ။ အဖျင်းသည်စပါးနှင့် အဘယ်သို့ ဆိုင်သနည်းဟု ထာဝရဘုရား မိန့်တော်မူ၏။
29 “ನನ್ನ ವಾಕ್ಯ ಬೆಂಕಿಗೆ ಸಮಾನ, ಬಂಡೆಯನ್ನು ಪುಡಿಪುಡಿ ಮಾಡುವ ಸುತ್ತಿಗೆಗೆ ಸಮಾನ.” ಇದು ಯೆಹೋವ ದೇವರಾದ ನನ್ನ ನುಡಿ.
၂၉ငါ၏ နှုတ်ကပတ်တော်သည် မီးကဲ့သို့၎င်း၊ ကျောက်ကို ထုချေသောသံတူကဲ့သို့၎င်း ဖြစ်သည်မဟုတ် လောဟု ထာဝရဘုရား မေးတော်မူ၏။
30 ಆದ್ದರಿಂದ ಇಗೋ, “ತನ್ನ ನೆರೆಯವನಿಂದ ನನ್ನ ವಾಕ್ಯಗಳನ್ನು ಕದ್ದುಕೊಳ್ಳುವ ಪ್ರತಿಯೊಬ್ಬ ಪ್ರವಾದಿಗೆ ನಾನು ವಿರೋಧವಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
၃၀သို့ဖြစ်၍၊ ငါ့စကားတော်ကို အိမ်နီးချင်း တယောက်မှတယောက်ခိုးသော ပရောဖက်တို့ကို ငါသည် ဆန့်ကျင်ဘက်ပြုမည်ဟု ထာဝရဘုရား မိန့်တော်မူ၏။
31 “ಇಗೋ, ತಮ್ಮ ನಾಲಿಗೆಗಳನ್ನು ಆಡಿಸುತ್ತಾ, ‘ಯೆಹೋವ ದೇವರು ನುಡಿಯುತ್ತಾರೆ,’ ಎಂದು ಅನ್ನುವ ಪ್ರವಾದಿಗಳಿಗೆ ನಾನು ವಿರೋಧವಾಗಿದ್ದೇನೆ.
၃၁မိမိတို့အလိုအလျောက် ဟောပြောလျက်နှင့် အမိန့်တော်ရှိသည်ဟုဆိုသော ပရောဖက်တို့ကို ငါသည် ဆန့်ကျင်ဘက်ပြုမည်ဟု ထာဝရဘုရားမိန့်တော်မူ၏။
32 ಸುಳ್ಳಿನ ಕನಸುಗಳನ್ನು ಪ್ರವಾದಿಸಿ, ತಮ್ಮ ಸುಳ್ಳುಗಳಿಂದಲೂ ತಮ್ಮ ನಿರರ್ಥಕವಾದ ವಿಚಾರಗಳಿಂದಲೂ ನನ್ನ ಜನರು ತಪ್ಪುವಂತೆ ಮಾಡುವವರಿಗೆ ವಿರೋಧವಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. “ನಾನು ಅವರನ್ನು ಕಳುಹಿಸಲಿಲ್ಲ, ಅವರಿಗೆ ಅಪ್ಪಣೆ ಕೊಡಲಿಲ್ಲ. ಆದ್ದರಿಂದ ಅವರು ಹೇಗೂ ಈ ಜನರಿಗೆ ಪ್ರಯೋಜನವಾಗಿರುವುದೇ ಇಲ್ಲ,” ಎಂದು ಯೆಹೋವ ದೇವರು ನುಡಿಯುತ್ತಾರೆ.
၃၂မှားသာအိပ်မက်ကိုဟောပြော၍၊ မုသာစကား နှင့် အချည်းနှီးစကားအားဖြင့် ငါ၏လူမျိုးကိုမှားယွင်း စေသော ပရောဖက်တို့ကို ငါသည် ဆန့်ကျင်ဘက်ပြုမည်။ သူတို့ကို ငါမစေလွှတ်၊ မမှာထားသောကြောင့်၊ ဤလူမျိုး သည် ကျေးဇူးမရှိဟု ထာဝရဘုရား မိန့်တော်မူ၏။
33 “ಪ್ರವಾದಿಯಾಗಲಿ, ಯಾಜಕನಾಗಲಿ, ಈ ಜನರಲ್ಲಿ ಯಾರೇ ಆಗಲಿ, ‘ಯೆಹೋವ ದೇವರು ದಯಪಾಲಿಸಿರುವ ಹೊರೆ ಏನು?’ ಎಂದು ನಿನ್ನನ್ನು ಕೇಳಿದರೆ, ನೀನು ಅವರಿಗೆ ಹೀಗೆಂದು ಹೇಳು: ‘ನೀವೇ, ಯೆಹೋವ ದೇವರ ಹೊರೆ. ನಿಮ್ಮನ್ನು ಆತನು ಎಸೆದುಬಿಡುವನು.’
၃၃ဤလူမျိုးတွင် ဆင်းရဲသားဖြစ်စေ၊ ပရောဖက် ဖြစ်စေ၊ ယဇ်ပုရောဟိတ်ဖြစ်စေ၊ တစုံတယောက်က၊ ထာဝရဘုရား၏ ဗျာဒိတ်တော်အဘယ်သို့နည်းဟု သင့်ကို မေးလျှင်၊ ပြန်ပြောရမည်မှာ၊ သင်တို့နှင့်ဆိုင်သော ဗျာဒိတ်တော်ဟူမူကား၊ သင်တို့ကို ငါစွန့်ပစ်မည်ဟု ထာဝရဘုရား မိန့်တော်မူ၏။
34 ಒಬ್ಬ ಪ್ರವಾದಿಯಾಗಲಿ, ಯಾಜಕನಾಗಲಿ ಅಥವಾ ಒಬ್ಬ ಜನಸಾಮಾನ್ಯನೇ ಆಗಲಿ, ‘ಯೆಹೋವ ದೇವರು ಹೊರೆ,’ ಎಂದು ಹೇಳಿದ್ದೇಯಾದರೆ, ನಾನು ಅವನನ್ನೂ, ಅವನ ಮನೆಯವರನ್ನೂ ದಂಡಿಸುವೆನು.
၃၄ထာဝရဘုရား၏ ဗျာဒိတ်တော်ရှိသည်ဟု ပြော ဆိုသော ပရောဖက်၊ ယဇ်ပုရောဟိတ်၊ ပြည်သူပြည်သား ကို၎င်း၊ ထိုသူ၏ အိမ်သူအိမ်သားတို့ကို၎င်း၊ ငါသည် ဒဏ်ပေးမည်။
35 ‘ಯೆಹೋವ ದೇವರು ಕೊಟ್ಟ ಉತ್ತರವೇನು? ಯೆಹೋವ ದೇವರು ನುಡಿದದ್ದು ಏನು?’ ಎಂದು ನಿಮ್ಮ ನಿಮ್ಮ ನೆರೆಹೊರೆಯವರನ್ನು ಮತ್ತು ಅಣ್ಣತಮ್ಮಂದಿರನ್ನು ವಿಚಾರಿಸಬೇಕೇ ಹೊರತು,
၃၅သင်တို့က၊ ထာဝရဘုရားသည် အဘယ်သို့ ပြန်ပြောတော်မူသနည်းဟူ၍၎င်း၊ အဘယ်သို့ မိန့်တော်မူသနည်းဟူ၍၎င်း၊ အိမ်နီးချင်း၊ ညီအစ်ကို ချင်း တယောက်ကိုတယောက် မေးမြန်းရမည်။
36 ‘ಯೆಹೋವ ದೇವರ ಹೊರೆ,’ ಎಂಬ ಮಾತನ್ನು ಎತ್ತಲೇ ಕೂಡದು. ಪ್ರತಿಯೊಬ್ಬನ ನುಡಿ ಅವನವನಿಗೆ ಹೊರೆ. ಜೀವಸ್ವರೂಪನಾದ ದೇವರ ನುಡಿಗಳನ್ನು ಹೌದು, ನಮ್ಮ ದೇವರೂ ಸೇನಾಧೀಶ್ವರ ಯೆಹೋವ ದೇವರ ನುಡಿಗಳನ್ನು ನೀವು ತಲೆಕೆಳಗಾಗಿಸಿದ್ದೀರಿ.
၃၆ထာဝရဘုရား၏ ဗျာဒိတ်တော်ရှိသည်ဟူ၍ နောက်တဖန် မဆိုရ။ လူတိုင်းမိမိစကားမှတပါး အခြား သောဗျာဒိတ်တော်မရှိရ။ အကြောင်းမူကား၊ သင်တို့သည် အသက်ရှင်တော်မူသောဘုရား၊ ငါတို့၏ ဘုရားသခင် တည်းဟူသော ကောင်းကင်ဗိုလ်ခြေ အရှင်ထာဝရဘုရား ၏ စကားတော်ကို ဖျက်ကြပြီ။
37 ‘ಯೆಹೋವ ದೇವರಿಂದ ನಿಮಗೆ ಯಾವ ಉತ್ತರ ದೊರಕಿತು? ಯೆಹೋವ ದೇವರು ಏನು ನುಡಿದಿದ್ದಾರೆ?’ ಎಂದು ಪ್ರವಾದಿಯನ್ನು ಕೇಳಿರಿ.
၃၇ထာဝရဘုရားသည် သင့်အား အဘယ်သို့ ပြန်ပြောတော်မူသနည်း။ ထာဝရဘုရားသည် အဘယ်သို့ မိန့်တော်မူသနည်းဟု ပရောဖက်ကို မေးလော့။
38 ‘ಯೆಹೋವ ದೇವರ ಹೊರೆ,’ ಎಂದು ಹೇಳಬೇಡಿ. ಹೇಳಿದರೆ ಯೆಹೋವ ದೇವರು ಇಂತೆನ್ನುತ್ತಾನೆ: ‘ನಾನು ನಿಮಗೆ, ಯೆಹೋವ ದೇವರು ಹೊರೆ,’ ಎಂಬ ಮಾತನ್ನು ಎತ್ತಲೇಕೂಡದೆಂದು ಹೇಳಿ ಕಳುಹಿಸಿದರೂ, ನೀವು ಎತ್ತಿದ್ದೀರಿ.
၃၈သင်တို့က၊ ထာဝရဘုရား၏ ဗျာဒိတ်တော်ဟု ဆိုကြသည်ဖြစ်၍၊ ထာဝရဘုရားမိန့်တော်မူသည်ကား၊ ထာဝရဘုရား၏ ဗျာဒိတ်တော်ရှိသည်ဟု မဆိုရမည် အကြောင်း၊ ငါ ပညတ်သော်လည်း၊ သင်တို့သည် ထာဝရ ဘုရား၏ ဗျာဒိတ်တော်ရှိသည်ဟူသော စကားကို သုံးကြ သောကြောင့်၊
39 ಈ ಕಾರಣ ನಿಮ್ಮನ್ನು ಮತ್ತು ನಿಮಗೂ ನಿಮ್ಮ ಪೂರ್ವಜರಿಗೂ ನಾನು ಕೊಟ್ಟ ನಗರವನ್ನು ನನ್ನೆದುರಿನಿಂದ ಎತ್ತಿ ಎಸೆದುಬಿಡುವೆನು.
၃၉ငါသည် သင်တို့ကို၎င်း၊ သင်တို့နှင့် ဘိုးဘေးတို့ အား ငါပေးသော မြို့ကို၎င်း၊ ငါ့ထံမှ အကုန်အစင် ကျုံး၍ ပစ်လိုက်မည်။
40 ನೀವು ನಿಂದೆಗೆ ಗುರಿಯಾಗುವಿರಿ. ಎಂದಿಗೂ ಮರೆಯಲಾಗದ ಶಾಶ್ವತ ಅವಮಾನವನ್ನು ನಿಮಗೆ ಬರಮಾಡುವೆನು.”
၄၀အစဉ်အမြဲ မမေ့လျော့နိုင်သော ထာဝရကဲ့ရဲ့ ခြင်းနှင့် အရှက်ကွဲခြင်းကို သင်တို့အပေါ်မှာ သက်ရောက် စေမည်။