< ಯೆಶಾಯನು 57 >

1 ನೀತಿವಂತನು ನಾಶವಾಗುವನು ಆದರೆ ಯಾರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಭಕ್ತಿಯುಳ್ಳ ಮನುಷ್ಯರು ಕಣ್ಮರೆಯಾಗುವರು. ನೀತಿವಂತನು ಮುಂದೆ ಬರುವ ಕೇಡಿನಿಂದ ಪಾರಾದರು ಎಂಬುದನ್ನು ಯಾರೂ ಯೋಚಿಸರು.
義人死去,沒有人放在心上;虔誠的人被收去,沒有人予以注意:義人被接去,是為了脫離災難,
2 ಅವರು ಸಮಾಧಾನಕ್ಕೆ ಪ್ರವೇಶಿಸುತ್ತಾರೆ. ಅವರಲ್ಲಿ ನೆಟ್ಟಗೆ ನಡೆಯುವ ಪ್ರತಿಯೊಬ್ಬರೂ ತಮ್ಮ ಮರಣದ ಹಾಸಿಗೆಗಳಲ್ಲಿ ವಿಶ್ರಮಿಸಿಕೊಳ್ಳುತ್ತಾರೆ.
而進入安息;躬行正直的人,將安眠於自己的處所。
3 “ಆದರೆ ನೀವು ಮಾಟಗಾತಿಯ ಮಕ್ಕಳೇ, ವೇಶ್ಯೆ ಮತ್ತು ವ್ಯಭಿಚಾರಿಗಳ ಸಂತಾನದವರೇ, ಇಲ್ಲಿಗೆ ಬನ್ನಿರಿ.
巫女的兒子,姦婦淫女的後裔,你們近前來!
4 ಯಾರನ್ನು ಹಾಸ್ಯಮಾಡುತ್ತೀರಿ? ಯಾರ ವಿಷಯವಾಗಿ ನೀವು ಬಾಯಿ ಅಗಲಿಸಿ, ನಾಲಿಗೆಯನ್ನು ಚಾಚುತ್ತೀರಿ?
你們戲謔誰呢﹖你們向誰張口吐舌呢﹖不是你們這些反叛的兒子,不忠的後裔,
5 ಹಸಿರಾದ ಏಲಾ ಮರಗಳ ಕೆಳಗೆ ವಿಗ್ರಹಗಳಿಂದ ಮದವೇರಿಸಿಕೊಂಡು, ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಮಕ್ಕಳೂ, ಸುಳ್ಳಿನ ಸಂತತಿಯೂ ಅಲ್ಲವೋ?
在橡樹林中,在一切綠樹下慾火中燒;在山谷中,在磐石的夾縫裏祭殺嬰兒嗎﹖
6 ಹಳ್ಳದ ನುಣುಪಾದ ಕಲ್ಲುಗಳು ನಿಮ್ಮ ಪಾಲು. ಅವುಗಳೇ ಹೌದು, ಅವೇ ನಿನ್ನ ಪಾಲು. ಅವುಗಳಿಗೆ ನೀನು ಪಾನದ್ರವ್ಯವನ್ನು ಮತ್ತು ಧಾನ್ಯ ಸಮರ್ಪಣೆಯನ್ನು ಅರ್ಪಿಸಿದ್ದೀಯೆ. ನಾನು ಇದನ್ನೆಲ್ಲಾ ಕಂಡು ನನ್ನ ಕೋಪವನ್ನು ಅಡಗಿಸಿಕೊಳ್ಳಲು ಆಗುವುದೇ?
山谷中的光石竟是你的家產,它們竟成了你的產業;並且你還給它們奠了酒,獻了供物,對這些事我豈能容忍﹖
7 ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀಯೆ, ಬಲಿಯನ್ನರ್ಪಿಸಲು ಆ ಬೆಟ್ಟವನ್ನೇರಿದ್ದೀ.
在巍峨高聳的山上,你安置了你的床榻,並且上那裏去奉獻犧牲。
8 ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ ನಿನ್ನ ಜ್ಞಾಪಕದ ಚಿಹ್ನೆಯನ್ನು ಇಟ್ಟಿದ್ದೀಯೆ. ಏಕೆಂದರೆ ನನ್ನನ್ನು ಬಿಟ್ಟು ಬೇರೊಬ್ಬನಿಗೆ ನಿನ್ನನ್ನು ತೋರ್ಪಡಿಸಿಕೊಂಡಿದ್ದೀ. ಏರಿಹೋಗಿ ನಿನ್ನ ಮಂಚವನ್ನು ಅಗಲಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ. ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿ ಮಾಡಿದ್ದೀಯೆ.
你在門和門框後安置了你的記號,瞞著我裸體上了床,舖開了你的床榻,你喜歡與誰同寢,便與他茍合,且看了他的手。
9 ಬಹು ಸುಗಂಧದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ. ದೂರಕ್ಕೆ ನಿನ್ನ ರಾಯಭಾರಿಗಳನ್ನು ಕಳುಹಿಸಿದ್ದೀ. ಪಾತಾಳದಷ್ಟು ನೀಚಸ್ಥಿತಿಗೆ ಇಳಿದಿದ್ದೀಯೆ. (Sheol h7585)
你擦滿了香膏,加多了香料,往摩肋客那裏去,又遣發使者到遠方去,你甚至深入了陰間。 (Sheol h7585)
10 ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ, ‘ಏನೂ ಪ್ರಯೋಜನವಿಲ್ಲ,’ ಎಂದುಕೊಳ್ಳಲಿಲ್ಲ. ನೀನು ಹೊಸ ಬಲವನ್ನು ತಂದುಕೊಂಡು, ಬೇಸರಗೊಳ್ಳದೆ ಮುಂದುವರೆದಿರುವೆ.
你因路途遙遠,已感疲倦,但總不說:「絕望了!」因為你找著了你新生的力量,所以你不覺困乏。
11 “ನೀನು ಯಾರಿಗೆ ಹೆದರಿ, ಬೆದರಿ, ನನ್ನನ್ನು ಮರೆತು, ನನಗೆ ಸುಳ್ಳಾಡಿ ಮೋಸ ಮಾಡಿರುವೆ. ಇಂಥ ದ್ರೋಹಕ್ಕೂ ನೀನು ಹಿಂಜರಿಯಲಿಲ್ಲವಲ್ಲಾ! ಬಹುಕಾಲದಿಂದ ನಾನು ಸುಮ್ಮನೆ ಇದ್ದುದರಿಂದಲೇ, ನೀನು ನನ್ನನ್ನು ಗೌರವಿಸದೆ ಇರುವುದಕ್ಕೆ ಕಾರಣವಲ್ಲವೆ?
你害怕誰,畏懼誰,竟使你失去忠信,而不懷念我,不關心我﹖難道因為我久不作聲,你就不怕我了嗎﹖
12 ನಾನೇ ನಿನ್ನ ನೀತಿಯನ್ನೂ, ನಿನ್ನ ಕ್ರಿಯೆಗಳನ್ನೂ ತಿಳಿಯ ಮಾಡುವೆನು. ಏಕೆಂದರೆ ಅವು ನಿನಗೆ ಪ್ರಯೋಜನವಾಗುವುದಿಲ್ಲ.
我要披露你的義舉,以及與你毫無裨益的行為。
13 ನೀನು ಸಹಾಯಕ್ಕಾಗಿ ಕೂಗುವಾಗ ನಿನ್ನ ವಿಗ್ರಹಗಳು ನಿನ್ನನ್ನು ರಕ್ಷಿಸಲಿ. ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವುದು. ವ್ಯರ್ಥವಾದದ್ದು ಅವುಗಳನ್ನು ತೆಗೆದುಕೊಂಡು ಹೋಗುವುದು. ಆದರೆ ನನ್ನಲ್ಲಿ ಆಶ್ರಯಿಸುವವನು, ದೇಶವನ್ನು ವಶಮಾಡಿಕೊಂಡು, ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು.”
當你呼求時,讓你那一夥救你罷!但是一陣風要把它們全部捲走,一口氣要把他們吹去。唯有那依賴我的,將承受地業,繼承我的聖山。
14 ನಂತರ ಹೀಗೆ ಹೇಳಲಾಗುವುದು: ಮಣ್ಣು ಹಾಕಿರಿ, ಹಾಕಿರಿ, ಮಾರ್ಗವನ್ನು ಸರಿಮಾಡಿರಿ, ನನ್ನ ಜನರ ದಾರಿಯೊಳಗಿಂದ ಆತಂಕವನ್ನು ಎತ್ತಿ ಹಾಕಿರಿ,
有個聲音說:「修路,修路!把路修平,把我民族道路上的障礙除去!」
15 ಏಕೆಂದರೆ ಉನ್ನತನೂ, ಮಹೋನ್ನತನೂ, ನಿತ್ಯವಾಗಿ ವಾಸಿಸುವವನೂ, ಪರಿಶುದ್ಧನು ಎಂಬ ಹೆಸರುಳ್ಳಾತನೂ ಹೇಳುವುದೇನೆಂದರೆ: “ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿಸುವ ನಾನಾದರೂ, ಪಶ್ಚಾತ್ತಾಪ ಪಡುವ ದೀನಮನದೊಂದಿಗೆ ನಾನಿದ್ದೇನೆ. ದೀನನ ಆತ್ಮವನ್ನು ಹಾಗು ಪಶ್ಚಾತ್ತಾಪ ಪಡುವ ಮನಸ್ಸನ್ನು ಉಜ್ಜೀವಗೊಳಿಸುವವನಾಗಿದ್ದೇನೆ.
因為至高者,卓越者,居於永遠者,名為聖者的這樣說:「我雖居於高處及聖所,但我也與懺悔和心靈謙卑的人在一起,為振奮謙卑者的心情,甦醒懺悔者的心靈。
16 ನಾನು ಎಂದೆಂದಿಗೂ ವ್ಯಾಜ್ಯವಾಡುವುದಿಲ್ಲ. ಯಾವಾಗಲೂ ಕೋಪಿಸಿಕೊಳ್ಳೆನು. ಏಕೆಂದರೆ ಆತ್ಮವೂ, ನಾನು ಉಂಟುಮಾಡಿದ ಜೀವವೂ ನನ್ನಿಂದ ಕುಂದಿ ಹೋದಾವು.
我不願永遠爭辯,也不願永久發怒,因為生氣是由我而出,靈魂是由我而造。
17 ಅವನ ದುರಾಶೆಯ ಅನ್ಯಾಯಕ್ಕೆ ನಾನು ಕೋಪಗೊಂಡು, ಅವನನ್ನು ಹೊಡೆದೆನು. ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತನಾದೆನು. ಅವನು ಮೊಂಡುತನದಿಂದ ತನ್ನ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಾ ಬಂದಿದ್ದಾನೆ.
因了她的罪惡我一時發怒,打擊了她,在怒氣中掩住我的面;可是她仍背叛,走她隨心所欲的道路。
18 ನಾನು ಅವನ ಮಾರ್ಗವನ್ನು ನೋಡಿದ್ದೇನೆ. ಅವನನ್ನು ಸ್ವಸ್ಥಮಾಡಿ, ಅವನನ್ನು ನಡೆಸುತ್ತೇನೆ. ಅವನಿಗೂ, ಅವನ ದುಃಖಿತರಿಗೂ ಆದರಣೆಗಳನ್ನು ಪುನಃಸ್ಥಾಪಿಸುವೆನು.
我看見了她的行為,我要醫治她,我要引她回來,將安慰賜給她和她的憂傷者。
19 ನಾನು ತುಟಿಗಳಿಗೆ ಸ್ತೋತ್ರವನ್ನು ಉಂಟುಮಾಡುವೆನು; ದೂರವಾದವನಿಗೂ ಸಮೀಪವಾದವನಿಗೂ ಸಮಾಧಾನವಿರಲಿ, ಸಮಾಧಾನವಿರಲಿ. ನಾನು ಅವರನ್ನು ಸ್ವಸ್ಥ ಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
在他們的口唇上安放讚頌之辭:「平安,平安歸於遠近的人 !」上主說。【我要醫好她。】
20 ಆದರೆ ದುಷ್ಟರು ಸುಮ್ಮನಿರಲಾರದಂಥ, ಅದರ ನೀರುಗಳು ಕೆಸರನ್ನೂ, ಮೈಲಿಗೆಯನ್ನೂ ಕಾರುವಂಥ ಅಲ್ಲಕಲ್ಲೋಲವಾಗಿರುವ ಸಮುದ್ರದ ಹಾಗಿದ್ದಾರೆ.
但惡人將如翻騰的大海,不能平息,它的海浪捲起黃土與淤泥。
21 “ದುಷ್ಟರಿಗೆ ಸಮಾಧಾನವೇ ಇಲ್ಲ,” ಎಂದು ನನ್ನ ದೇವರು ಹೇಳುತ್ತಾರೆ.
我的天主說:惡人決無平安!

< ಯೆಶಾಯನು 57 >