< ಯೆಶಾಯನು 54 >
1 “ಬಂಜೆಯೇ ಹೆರದವಳೇ, ನೀನು ಹರ್ಷಧ್ವನಿಗೈ! ಪ್ರಸವವೇದನೆ ಪಡದವಳೇ, ಸ್ವರವೆತ್ತಿ ಹರ್ಷದಿಂದ ಕೂಗು! ಏಕೆಂದರೆ ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಮಕ್ಕಳು ಹೆಚ್ಚು,” ಎಂದು ಯೆಹೋವ ದೇವರು ಹೇಳುತ್ತಾರೆ.
Réjouis-toi, femme stérile qui n’as point enfanté! Fais éclater ton allégresse et chante, toi qui n’as pas été en mal d’enfant! Car plus nombreux seront les enfants de la femme délaissée que de la femme mariée, a dit l’Eternel.
2 “ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು ಮತ್ತು ನಿವಾಸದ ಪರದೆಗಳು ಹರಡಲಿ. ಹಿಂದೆಗೆಯಬೇಡ; ನಿನ್ನ ಗುಡಾರದ ಹಗ್ಗಗಳನ್ನು ಉದ್ದಮಾಡಿ, ಅದರ ಗೂಟಗಳನ್ನು ಬಲಪಡಿಸು.
Elargis l’emplacement de ta tente, qu’on déploie les tentures de ta demeure, n’y épargne rien! Allonge tes cordes, fixe solidement tes chevilles!
3 ನೀನು ಬಲಗಡೆಗೂ, ಎಡಗಡೆಗೂ ಹಬ್ಬಿಕೊಳ್ಳುವೆ. ನಿನ್ನ ಸಂತಾನವು ಜನಾಂಗಗಳನ್ನು ವಶಪಡಿಸಿಕೊಂಡು, ಹಾಳಾದ ಪಟ್ಟಣಗಳನ್ನು ನಿವಾಸವಾಗ ಮಾಡುವುದು.
Car de droite et de gauche tu déborderas, et tes enfants recueilleront l’héritage des nations, peupleront des villes devenues solitaires.
4 “ಹೆದರಬೇಡ, ಏಕೆಂದರೆ ನಿನಗೆ ನಾಚಿಕೆಯಾಗುವುದಿಲ್ಲ. ಗಾಬರಿಪಡಬೇಡ, ನಿನ್ನ ಯೌವನದ ಲಜ್ಜೆಯನ್ನು ಮರೆತುಬಿಡುವೆ. ನಿನ್ನ ವೈಧವ್ಯದಲ್ಲಿ ನಿನಗಾದ ನಿಂದೆಯನ್ನು ಎಂದಿಗೂ ನಿನ್ನ ಜ್ಞಾಪಕಕ್ಕೆ ತರುವುದಿಲ್ಲ.
Ne crains pas, car tu ne seras plus humiliée; ne sois pas confuse, car tu ne subiras plus d’outrage; car la honte de ta jeunesse, tu l’oublieras, le déshonneur de ton veuvage, tu ne t’en souviendras plus.
5 ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ. ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು. ನಿನ್ನ ವಿಮೋಚಕನು ಇಸ್ರಾಯೇಲಿನ ಪರಿಶುದ್ಧನೇ. ಸಮಸ್ತ ಭೂಮಿಯ ದೇವರು ಎಂದು ಆತನನ್ನು ಕರೆಯಲಾಗುತ್ತದೆ.
Oui, ton époux ce sera ton Créateur, qui a nom l’Eternel-Cebaot, ton sauveur sera le Saint d’Israël, qui s’appelle le Dieu de toute la terre.
6 ನೀನು ತ್ಯಜಿಸಿದ ಮನನೊಂದಿರುವ ಯೌವನದ ಪತ್ನಿಯ ಹಾಗೆ ತಿರಸ್ಕಾರಹೊಂದಿರುವೆ. ಯೆಹೋವ ದೇವರು ನಿನ್ನನ್ನು ಕರೆದಿದ್ದಾನೆ, ಎಂದು ನಿನ್ನ ದೇವರು ಹೇಳುತ್ತಾರೆ.
Car comme une femme abandonnée et au cœur affligé, l’Eternel t’a rappelée; la compagne de la jeunesse peut-elle être un objet de dédain? Ainsi parle le Seigneur.
7 ಕ್ಷಣಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ. ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು.
Un court instant je t’ai délaissée, et avec une grande tendresse je veux te recueillir.
8 ನನಗೆ ಬೇಸರವಾದಾಗ ನನ್ನ ಮುಖವನ್ನು ನಿನಗೆ ಕ್ಷಣಮಾತ್ರವೇ ಮರೆಮಾಡಿಕೊಂಡೆನು. ಆದರೆ ಶಾಶ್ವತವಾದ ದಯೆಯಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿದ್ದೇನೆ, ಎಂದು ನಿನ್ನ ವಿಮೋಚಕನಾದ ಯೆಹೋವ ದೇವರು ಹೇಳುತ್ತಾರೆ.
Dans un transport de colère je t’ai, un instant, dérobé ma face; désormais je t’aimerai d’une affection sans bornes, dit ton libérateur, l’Eternel.
9 “ಇದು ನನಗೆ ನೋಹನ ಕಾಲದ ಪ್ರಳಯದಂತಿದೆ. ನೋಹನ ಕಾಲದ ಪ್ರಳಯವು ಪುನಃ ಭೂಮಿಯನ್ನು ಆವರಿಸುವುದಿಲ್ಲ ಎಂದು ನಾನು ಪ್ರಮಾಣ ಮಾಡಿದ ಹಾಗೆಯೇ, ಇನ್ನು ನಿನ್ನ ಮೇಲೆ ಕೋಪಗೊಳ್ಳುವುದಿಲ್ಲ, ನಿನ್ನನ್ನು ಗದರಿಸುವುದಿಲ್ಲ, ಎಂದು ಪ್ರಮಾಣ ಮಾಡಿದ್ದೇನೆ.
Certes, je ferai en cela comme pour les eaux de Noé: de même que j’ai juré que le déluge de Noé ne désolerait plus la terre, ainsi je jure de ne plus m’irriter ni diriger des menaces contre toi.
10 ಪರ್ವತಗಳು ಸ್ಥಳವನ್ನು ಬಿಟ್ಟು ಹೋದರೂ, ಬೆಟ್ಟಗಳು ಕದಲಿ ಹೋದರೂ, ನನ್ನ ಕುಂದದ ಪ್ರೀತಿಯು ನಿನ್ನನ್ನು ಬಿಟ್ಟು ಹೋಗದು, ನನ್ನ ಸಮಾಧಾನದ ಒಡಂಬಡಿಕೆಯು ನಿನ್ನನ್ನು ಬಿಟ್ಟು ಕದಲದು,” ಎಂದು ನಿನ್ನನ್ನು ಕರುಣಿಸುವ ಯೆಹೋವ ದೇವರು ಹೇಳುತ್ತಾರೆ.
Que les montagnes chancellent, que les collines s’ébranlent, ma tendresse pour toi ne chancellera pas, ni mon alliance de paix ne sera ébranlée, dit Celui qui t’aime, l’Eternel!
11 ಸಂಕಟಕ್ಕೊಳಗಾದವಳೇ! ಬಿರುಗಾಳಿಯಿಂದ ಬಡಿಯಲಾಗಿ ಆದರಣೆ ಹೊಂದದವಳೇ, ನಾನು ನಿನ್ನ ಕಲ್ಲುಗಳನ್ನು ಸುಂದರವಾದ ಬಣ್ಣಗಳೊಂದಿಗೆ ಇಟ್ಟು, ನಿನ್ನ ಅಸ್ತಿವಾರವನ್ನು ನೀಲಮಣಿಗಳಿಂದ ಹಾಕಿ ಗಾರೆಯಿಂದ ಕಟ್ಟುವೆನು.
O infortunée, battue par la tempête, privée de consolation! Vois, je cimenterai tes pierres avec le stuc, et je te bâtirai sur le saphir.
12 ನಿನ್ನ ಕಿಟಕಿಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ ಮತ್ತು ನಿನ್ನ ಮೇರೆಗಳನ್ನು ಮನೋಹರವಾದ ರತ್ನಗಳಿಂದ ನಾನು ಮಾಡುವೆನು.
Je te construirai des créneaux en pur cristal, des portes en escarboucles, et toutes tes barrières seront en pierres précieuses.
13 ನಿನ್ನ ಮಕ್ಕಳೆಲ್ಲಾ ಯೆಹೋವ ದೇವರಿಂದಲೇ ಬೋಧನೆ ಪಡೆಯುವರು. ನಿನ್ನ ಮಕ್ಕಳ ಸಮಾಧಾನವು ಅಧಿಕವಾಗಿರುವುದು.
Tous tes enfants seront les disciples de l’Eternel; grande sera la concorde de tes enfants.
14 ನೀನು ನೀತಿಯಲ್ಲಿ ನೆಲೆಗೊಂಡಿರುವೆ. ಬಾಧೆಯಿಂದ ದೂರವಾಗಿರುವೆ. ನೀನು ಭೀತಿಯಿಂದ ಭಯಪಡುವುದಿಲ್ಲ, ಏಕೆಂದರೆ ಅದು ನಿನ್ನ ಸಮೀಪಕ್ಕೆ ಬಾರದು.
Tu seras affermie par la justice: bannis toute idée d’oppression, car tu n’auras rien à craindre; de terreur, car tu seras garantie contre elle.
15 ನೋಡು, ಯಾರಾದರೂ ನಿನ್ನ ಸಂಗಡ ವ್ಯಾಜ್ಯವಾಡಿದರೆ, ಅದು ನನ್ನ ಅಪ್ಪಣೆಯಿಂದ ಅಲ್ಲ; ಯಾರು ನಿನ್ನ ಮೇಲೆ ದಾಳಿಮಾಡುತ್ತಾರೋ, ಅವರು ನಿನಗೆ ಅಧೀನವಾಗುವರು.
Que si l’on se mettait contre toi, ce serait sans mon aveu; quiconque se mettra contre toi succombera sur ton sol.
16 “ಬೆಂಕಿಯಲ್ಲಿ ಕೆಂಡವನ್ನು ಊದುತ್ತಾ, ತನ್ನ ಕೆಲಸಕ್ಕೆ ಆಯುಧಗಳನ್ನು ತರುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ. ನಾಶಮಾಡುವ ಕೆಡುಕನನ್ನು ಸೃಷ್ಟಿಸಿದವನೂ ನಾನೇ.
Certes, c’est moi qui ai créé le forgeron, lequel attise la braise ardente et façonne l’instrument pour l’usage auquel il est destiné; moi aussi j’ai créé le destructeur qui cause des dégâts.
17 ನಿನಗೆ ವಿರೋಧವಾಗಿ ನಿರ್ಮಿಸಿದ ಆಯುಧಗಳು ಸಫಲವಾಗುವುದಿಲ್ಲ. ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು ನಾಲಿಗೆಯನ್ನು ನ್ಯಾಯತೀರ್ಪಿನಲ್ಲಿ ನೀನು ಖಂಡಿಸುವೆ. ಇದೇ ಯೆಹೋವ ದೇವರ ಸೇವಕರ ಬಾಧ್ಯತೆಯು, ಇದು ನನ್ನಿಂದ ಅವರಿಗೆ ದೊರೆಯುವ ಸಮರ್ಥನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
Tout instrument forgé contre toi sera impuissant, toute langue qui se dressera contre toi pour t’accuser sera convaincue d’injustice; tel est le partage des serviteurs de l’Eternel, et l’arrêt équitable qu’ils obtiennent de moi, dit l’Eternel.