< ಯೆಶಾಯನು 51 >

1 ನೀತಿಯನ್ನು ಹಿಂಬಾಲಿಸುವವರೇ, ಯೆಹೋವ ದೇವರನ್ನು ಹುಡುಕುವವರೇ, ನನ್ನ ಕಡೆಗೆ ಕಿವಿಗೊಡಿರಿ. ನಿಮ್ಮನ್ನು ಯಾವ ಬಂಡೆಯೊಳಗಿಂದ ಒಡೆದು ಕಡಿದಿರುತ್ತಾರೋ ಮತ್ತು ಯಾವ ಗುಂಡಿಯೊಳಗಿಂದ ಅಗೆದಿರುತ್ತಾರೋ ಆ ಬಂಡೆಯಾದಾತನನ್ನು ನೋಡಿರಿ.
שִׁמְעוּ אֵלַי רֹדְפֵי צֶדֶק מְבַקְשֵׁי יְהֹוָה הַבִּיטוּ אֶל־צוּר חֻצַּבְתֶּם וְאֶל־מַקֶּבֶת בּוֹר נֻקַּרְתֶּֽם׃
2 ನಿಮ್ಮ ತಂದೆಯಾದ ಅಬ್ರಹಾಮನನ್ನು ಮತ್ತು ನಿಮ್ಮನ್ನು ಹೆತ್ತ ಸಾರಳನ್ನೂ ದೃಷ್ಟಿಸಿರಿ. ನಾನು ಅವನನ್ನು ಕರೆದಾಗ ಅವನು ಒಬ್ಬನೇ ಮನುಷ್ಯ, ನಾನು ಅವನನ್ನು ಆಶೀರ್ವದಿಸಿ, ವೃದ್ಧಿಗೊಳಿಸಿದೆನು.
הַבִּיטוּ אֶל־אַבְרָהָם אֲבִיכֶם וְאֶל־שָׂרָה תְּחוֹלֶלְכֶם כִּֽי־אֶחָד קְרָאתִיו וַאֲבָרְכֵהוּ וְאַרְבֵּֽהוּ׃
3 ಯೆಹೋವ ದೇವರು ಚೀಯೋನನ್ನು ಸಂತೈಸೇ ಸಂತೈಸುವರು. ಅವರು ಅದರ ಹಾಳಾದ ಸ್ಥಳಗಳನ್ನು ಕರುಣೆಯಿಂದ ನೋಡುವರು. ಅದರ ಮರುಭೂಮಿಯನ್ನು ಏದೆನ್ ಹಾಗೆಯೂ, ಹಾಳು ಪ್ರದೇಶವನ್ನು ಯೆಹೋವ ದೇವರ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ, ಉಲ್ಲಾಸವೂ, ಉಪಕಾರ ಸ್ತುತಿಯೂ, ಇಂಪಾದ ಸ್ವರವೂ ಕಂಡು ಬರುವುವು.
כִּֽי־נִחַם יְהֹוָה צִיּוֹן נִחַם כׇּל־חׇרְבֹתֶיהָ וַיָּשֶׂם מִדְבָּרָהּ כְּעֵדֶן וְעַרְבָתָהּ כְּגַן־יְהֹוָה שָׂשׂוֹן וְשִׂמְחָה יִמָּצֵא בָהּ תּוֹדָה וְקוֹל זִמְרָֽה׃
4 ನನ್ನ ಜನರೇ, ಕೇಳಿರಿ. ನನ್ನ ಜನಾಂಗವೇ, ನನ್ನ ಕಡೆಗೆ ಕಿವಿಗೊಡಿರಿ. ಏಕೆಂದರೆ ನಿಯಮವು ನನ್ನಿಂದ ಹೊರಡುವುದು ಮತ್ತು ನನ್ನ ನ್ಯಾಯವನ್ನು ಜನಾಂಗಕ್ಕೆ ಬೆಳಕನ್ನಾಗಿ ಮಾಡುವೆನು.
הַקְשִׁיבוּ אֵלַי עַמִּי וּלְאוּמִּי אֵלַי הַאֲזִינוּ כִּי תוֹרָה מֵאִתִּי תֵצֵא וּמִשְׁפָּטִי לְאוֹר עַמִּים אַרְגִּֽיעַ׃
5 ನನ್ನ ನೀತಿಯು ತ್ವರೆಯಾಗಿ ಸಮೀಪಿಸಿತು. ನನ್ನ ರಕ್ಷಣೆಯು ಹೊರಟಿತು ಮತ್ತು ನನ್ನ ಕೈ ಜನಾಂಗಕ್ಕೆ ನ್ಯಾಯವನ್ನು ತೀರಿಸುವುದು. ನನ್ನ ಭುಜದ ಮೇಲೆ ಭರವಸೆ ಇಟ್ಟು, ದ್ವೀಪಗಳು ನನಗೋಸ್ಕರ ಕಾದುಕೊಂಡಿರುತ್ತವೆ.
קָרוֹב צִדְקִי יָצָא יִשְׁעִי וּזְרֹעַי עַמִּים יִשְׁפֹּטוּ אֵלַי אִיִּים יְקַוּוּ וְאֶל־זְרֹעִי יְיַחֵלֽוּן׃
6 ಆಕಾಶಗಳ ಕಡೆಗೆ ನಿಮ್ಮ ಕಣ್ಣುಗಳನ್ನು ಎತ್ತಿರಿ ಮತ್ತು ಕೆಳಗಿರುವ ಭೂಮಿಯನ್ನು ನೋಡಿರಿ. ಏಕೆಂದರೆ ಆಕಾಶಗಳು ಹೊಗೆಯಂತೆ ಅಗೋಚರವಾಗುವುವು. ಭೂಮಿಯು ಹಳೆಯ ಬಟ್ಟೆಯಂತಾಗುವುದು ಮತ್ತು ಅದರಲ್ಲಿ ವಾಸಿಸುವವರು ಸೊಳ್ಳೆಗಳೋಪಾದಿಯಲ್ಲಿ ಸಾಯುವರು. ಆದರೆ ನನ್ನ ರಕ್ಷಣೆಯು ಶಾಶ್ವತವಾಗಿರುವುದು, ನನ್ನ ನೀತಿಯು ಎಂದಿಗೂ ರದ್ದಾಗದು.
שְׂאוּ לַשָּׁמַיִם עֵֽינֵיכֶם וְֽהַבִּיטוּ אֶל־הָאָרֶץ מִתַּחַת כִּֽי־שָׁמַיִם כֶּעָשָׁן נִמְלָחוּ וְהָאָרֶץ כַּבֶּגֶד תִּבְלֶה וְיֹשְׁבֶיהָ כְּמוֹ־כֵן יְמוּתוּן וִישֽׁוּעָתִי לְעוֹלָם תִּֽהְיֶה וְצִדְקָתִי לֹא תֵחָֽת׃
7 ನೀತಿಯನ್ನು ಅರಿತು, ನನ್ನ ನಿಯಮವನ್ನು ಹೃದಯದಲ್ಲಿಟ್ಟುಕೊಂಡಿರುವ ಜನರೇ, ನನಗೆ ಕಿವಿಗೊಡಿರಿ. ಮನುಷ್ಯರ ನಿಂದೆಗೆ ಭಯಪಡಬೇಡಿರಿ, ಅವರ ದೂಷಣೆಗೆ ಹೆದರಬೇಡಿರಿ.
שִׁמְעוּ אֵלַי יֹדְעֵי צֶדֶק עַם תּוֹרָתִי בְלִבָּם אַל־תִּֽירְאוּ חֶרְפַּת אֱנוֹשׁ וּמִגִּדֻּפֹתָם אַל־תֵּחָֽתּוּ׃
8 ಏಕೆಂದರೆ ನುಸಿಯು ಬಟ್ಟೆಯನ್ನು ತಿನ್ನುವಂತೆ, ಅವರನ್ನು ತಿಂದುಬಿಡುವುದು ಮತ್ತು ಹುಳವು ಅವರನ್ನು ಉಣ್ಣೆಯಂತೆ ತಿನ್ನುವುದು. ಆದರೆ ನನ್ನ ನೀತಿಯು ಶಾಶ್ವತವಾಗಿರುವುದು ಮತ್ತು ನನ್ನ ರಕ್ಷಣೆಯು ತಲತಲಾಂತರಗಳಿಗೂ ಇರುವುದು.
כִּי כַבֶּגֶד יֹאכְלֵם עָשׁ וְכַצֶּמֶר יֹאכְלֵם סָס וְצִדְקָתִי לְעוֹלָם תִּֽהְיֶה וִישׁוּעָתִי לְדוֹר דּוֹרִֽים׃
9 ಯೆಹೋವ ದೇವರ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಳ್ಳು ಬಲವನ್ನು ಧರಿಸಿಕೋ. ಹಿಂದಿನ ಜನಾಂಗಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?
עוּרִי עוּרִי לִבְשִׁי־עֹז זְרוֹעַ יְהֹוָה עוּרִי כִּימֵי קֶדֶם דֹּרוֹת עוֹלָמִים הֲלוֹא אַתְּ־הִיא הַמַּחְצֶבֶת רַהַב מְחוֹלֶלֶת תַּנִּֽין׃
10 ಸಮುದ್ರವನ್ನೂ, ದೊಡ್ಡ ಅಗಾಧದ ನೀರನ್ನೂ ಬತ್ತಿಸಿ, ವಿಮುಕ್ತರಾದವರು, ಹಾದು ಹೋಗುವುದಕ್ಕೆ ಸಮುದ್ರದ ತಳವನ್ನು ಮಾರ್ಗವನ್ನಾಗಿ ಮಾಡಿದಂಥವನು ನೀನಲ್ಲವೋ?
הֲלוֹא אַתְּ־הִיא הַמַּחֲרֶבֶת יָם מֵי תְּהוֹם רַבָּה הַשָּׂמָה מַֽעֲמַקֵּי־יָם דֶּרֶךְ לַעֲבֹר גְּאוּלִֽים׃
11 ಆದಕಾರಣ ಯೆಹೋವ ದೇವರು ವಿಮೋಚಿಸಿದವರು, ಹಿಂದಿರುಗಿಕೊಂಡು ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು. ದುಃಖವೂ, ನಿಟ್ಟುಸಿರೂ ಓಡಿಹೋಗುವುವು.
וּפְדוּיֵי יְהֹוָה יְשׁוּבוּן וּבָאוּ צִיּוֹן בְּרִנָּה וְשִׂמְחַת עוֹלָם עַל־רֹאשָׁם שָׂשׂוֹן וְשִׂמְחָה יַשִּׂיגוּן נָסוּ יָגוֹן וַאֲנָחָֽה׃
12 “ನಾನೇ, ನಾನೇ ನಿಮ್ಮನ್ನು ಸಂತೈಸುವವನಾಗಿದ್ದೇನೆ. ಹಾಗಾದರೆ ಸಾಯುವ ಮನುಷ್ಯನಿಗೂ, ಹುಲ್ಲಿನಂತ್ತಿರುವ ಮಾನವನಿಗೂ ಭಯಪಡುವ ನೀನು ಯಾರು?
אָנֹכִי אָנֹכִי הוּא מְנַחֶמְכֶם מִי־אַתְּ וַתִּֽירְאִי מֵאֱנוֹשׁ יָמוּת וּמִבֶּן־אָדָם חָצִיר יִנָּתֵֽן׃
13 ಆಕಾಶವನ್ನು ಹಾಸಿ, ಭೂಮಿಯ ಅಸ್ತಿವಾರವನ್ನು ಹಾಕಿ, ನಿನ್ನನ್ನು ಉಂಟುಮಾಡಿದ ಯೆಹೋವ ದೇವರನ್ನು ನೀನು ಮರೆತುಬಿಟ್ಟು, ಹಿಂಸಕನ ಉಗ್ರಕ್ಕೆ ಎಡೆಬಿಡದೆ ಪ್ರತಿದಿನವೂ ಅವನು ನಾಶಪಡಿಸುವನೋ ಎಂಬಂತೆ ಅಂಜಿಕೊಂಡಿದ್ದೀಯಲ್ಲಾ, ಆ ಹಿಂಸಕನ ಕೋಪವು ಎಲ್ಲಿ?
וַתִּשְׁכַּח יְהֹוָה עֹשֶׂךָ נוֹטֶה שָׁמַיִם וְיֹסֵד אָרֶץ וַתְּפַחֵד תָּמִיד כׇּל־הַיּוֹם מִפְּנֵי חֲמַת הַמֵּצִיק כַּאֲשֶׁר כּוֹנֵן לְהַשְׁחִית וְאַיֵּה חֲמַת הַמֵּצִֽיק׃
14 ಸೆರೆಯಲ್ಲಿ ಕುಗ್ಗಿರುವವನು ತಾನು ಸಾಯದಂತೆಯೂ, ತನಗೆ ಆಹಾರದ ಕೊರತೆ ಇರದಂತೆಯೂ, ತಾನು ಬಿಡುಗಡೆ ಹೊಂದುವಂತೆಯೂ ಆತುರಪಡುತ್ತಾನೆ.
מִהַר צֹעֶה לְהִפָּתֵחַ וְלֹא־יָמוּת לַשַּׁחַת וְלֹא יֶחְסַר לַחְמֽוֹ׃
15 ಆದರೆ ತೆರೆಗಳು ಬೋರ್ಗರೆಯುವಾಗ, ಸಮುದ್ರವನ್ನು ವಿಭಾಗಿಸಿದ ನಿನ್ನ ದೇವರಾಗಿರುವ ಯೆಹೋವ ದೇವರು ನಾನೇ, ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು.
וְאָֽנֹכִי יְהֹוָה אֱלֹהֶיךָ רֹגַע הַיָּם וַיֶּהֱמוּ גַּלָּיו יְהֹוָה צְבָאוֹת שְׁמֽוֹ׃
16 ಆಕಾಶಗಳನ್ನು ನೆಡುವುದಕ್ಕೂ, ಭೂಮಿಯ ಅಸ್ತಿವಾರವನ್ನು ಹಾಕುವುದಕ್ಕೂ, ಚೀಯೋನಿಗೆ ನೀನು ನನ್ನ ಜನರೆಂದು ಹೇಳುವುದಕ್ಕೂ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿಟ್ಟು, ನನ್ನ ಕೈ ನೆರಳಿನಿಂದ ನಿನ್ನನ್ನು ಮುಚ್ಚಿದ್ದೇನೆ.”
וָאָשִׂם דְּבָרַי בְּפִיךָ וּבְצֵל יָדִי כִּסִּיתִיךָ לִנְטֹעַ שָׁמַיִם וְלִיסֹד אָרֶץ וְלֵאמֹר לְצִיּוֹן עַמִּי־אָֽתָּה׃
17 ಯೆಹೋವ ದೇವರ ಕೈಯಿಂದ ಆತನ ಕೋಪದ ಪಾತ್ರೆಯನ್ನು ಕುಡಿದ ಯೆರೂಸಲೇಮೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಎದ್ದೇಳು! ನೀನು ತತ್ತರಗೊಳಿಸುವಂಥ ಪಾತ್ರೆಯಲ್ಲಿದ್ದ ಮಡ್ಡಿಯನ್ನು ಕುಡಿದು ಹೀರಿಬಿಟ್ಟಿದ್ದೀ.
הִתְעוֹרְרִי הִֽתְעוֹרְרִי קוּמִי יְרוּשָׁלַ͏ִם אֲשֶׁר שָׁתִית מִיַּד יְהֹוָה אֶת־כּוֹס חֲמָתוֹ אֶת־קֻבַּעַת כּוֹס הַתַּרְעֵלָה שָׁתִית מָצִֽית׃
18 ಅವಳು ಹೆತ್ತ ಎಲ್ಲಾ ಪುತ್ರರಲ್ಲಿ ಅವಳನ್ನು ನಡೆಸುವುದಕ್ಕೆ ಒಬ್ಬನೂ ಇಲ್ಲ. ಅವಳು ಬೆಳೆಯಿಸಿದ ಎಲ್ಲಾ ಪುತ್ರರಲ್ಲಿ, ಅವಳ ಕೈಯನ್ನು ಹಿಡಿಯುವವನು ಒಬ್ಬನೂ ಇಲ್ಲ.
אֵין־מְנַהֵל לָהּ מִכׇּל־בָּנִים יָלָדָה וְאֵין מַחֲזִיק בְּיָדָהּ מִכׇּל־בָּנִים גִּדֵּֽלָה׃
19 ಈ ಎರಡು ಸಂಗತಿಗಳು ನಿನಗೆ ಸಂಭವಿಸಿವೆ, ನಿನಗೋಸ್ಕರ ಚಿಂತಿಸುವವರು ಯಾರಿದ್ದಾರೆ? ನಾಶನವೋ ಸಂಹಾರವೋ ಕ್ಷಾಮವೋ ಖಡ್ಗವೋ, ಯಾರು ನಿನ್ನನ್ನು ಸಂತೈಸುವರು?
שְׁתַּיִם הֵנָּה קֹרְאֹתַיִךְ מִי יָנוּד לָךְ הַשֹּׁד וְהַשֶּׁבֶר וְהָרָעָב וְהַחֶרֶב מִי אֲנַחֲמֵֽךְ׃
20 ನಿನ್ನ ಪುತ್ರರು ಮೂರ್ಛೆ ಹೋಗಿ, ಬಲೆಗೆ ಸಿಕ್ಕಿದ ಕಾಡು ಗೂಳಿಗಳಂತೆ, ಎಲ್ಲಾ ಬೀದಿಗಳು ಕೂಡುವ ಚೌಕಗಳಲ್ಲಿ ಅವರು ಬಿದ್ದಿದ್ದಾರೆ. ಅವರು ಯೆಹೋವ ದೇವರ ರೋಷದಿಂದಲೂ, ನಿನ್ನ ದೇವರ ಗದರಿಕೆಯಿಂದಲೂ ತುಂಬಿದ್ದಾರೆ.
בָּנַיִךְ עֻלְּפוּ שָׁכְבוּ בְּרֹאשׁ כׇּל־חוּצוֹת כְּתוֹא מִכְמָר הַֽמְלֵאִים חֲמַת־יְהֹוָה גַּעֲרַת אֱלֹהָֽיִךְ׃
21 ನೀನು ಹಿಂಸೆಗೊಳಗಾಗಿದ್ದೀ. ಕುಡಿದು ಅಮಲೇರಿದ್ದೀ. ಆದರೆ ದ್ರಾಕ್ಷಾರಸದಿಂದಲ್ಲ. ಆದ್ದರಿಂದ ಈಗ ಇದನ್ನು ಕೇಳು.
לָכֵן שִׁמְעִי־נָא זֹאת עֲנִיָּה וּשְׁכֻרַת וְלֹא מִיָּֽיִן׃
22 ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ, ನಿನ್ನ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, “ನಾನು ನಿನ್ನ ಕೈಯೊಳಗಿಂದ ತತ್ತರಿಸುವಂಥ ಪಾತ್ರೆಯನ್ನೂ, ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ. ಇನ್ನು ಮೇಲೆ ನೀನು ಅದನ್ನು ತಿರುಗಿ ಕುಡಿಯುವುದೇ ಇಲ್ಲ.
כֹּה־אָמַר אֲדֹנַיִךְ יְהֹוָה וֵאלֹהַיִךְ יָרִיב עַמּוֹ הִנֵּה לָקַחְתִּי מִיָּדֵךְ אֶת־כּוֹס הַתַּרְעֵלָה אֶת־קֻבַּעַת כּוֹס חֲמָתִי לֹא־תוֹסִיפִי לִשְׁתּוֹתָהּ עֽוֹד׃
23 ಆದರೆ ನಾವು ಹಾದುಹೋಗುವಂತೆ, ನೀನು ನೆಲಕ್ಕೆ ಬೀಳು ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ ಮತ್ತು ನೀನು ಹಾದುಹೋದವರಿಗೆ ನಿನ್ನ ಶರೀರವನ್ನು ನೆಲದಂತೆಯೂ, ಬೀದಿಯಂತೆಯೂ ಮಾಡಿಕೊಂಡಿಯಲ್ಲಾ.”
וְשַׂמְתִּיהָ בְּיַד־מוֹגַיִךְ אֲשֶׁר־אָמְרוּ לְנַפְשֵׁךְ שְׁחִי וְנַעֲבֹרָה וַתָּשִׂימִי כָאָרֶץ גֵּוֵךְ וְכַחוּץ לַעֹבְרִֽים׃

< ಯೆಶಾಯನು 51 >