< ಯೆಶಾಯನು 18 >
1 ಕೂಷ್ ನದಿಯ ಆಚೆಯಲ್ಲಿರುವ ಸೀಮೆ, ರೆಕ್ಕೆಗಳನ್ನು ಪಟಪಟನೆ ಬಡಿಯುವ ನಾಡಿಗೆ ಕಷ್ಟ!
हाय कूश नदी के दूसरी ओर के देश पर जहां पंखों की फड़फड़ाहट की आवाज सुनाई देती है,
2 ಇದು ಆಪಿನ ದೋಣಿಗಳಲ್ಲಿ ಸಮುದ್ರ ಮಾರ್ಗದಿಂದ ರಾಯಭಾರಿಗಳನ್ನು ನೀರಿನ ಮೇಲೆ ಕಳುಹಿಸುತ್ತದೆ. ಶೀಘ್ರವಾಗಿ ಬರುತ್ತಿರುವ ದೂತರೇ, ಎತ್ತರವಾದವರೂ, ನುಣುಪಾದ ಚರ್ಮವುಳ್ಳ ಜನರ ಬಳಿಗೂ, ಸರ್ವರಿಗೂ ಭಯಪ್ರಧರಾಗಿರುವ ಜನರ ಬಳಿಗೂ, ವಿಚಿತ್ರ ಭಾಷೆಯಿರುವ ಹಾಗೂ ನದಿಗಳಿಂದ ವಿಂಗಡವಾಗಿರುವ ಆಕ್ರಮಣಕಾರಿ ರಾಷ್ಟ್ರದವರ ಬಳಿಗೂ ಹೋಗಿರಿ.
वह जो पानी में पपीरस नौकाओं में समुद्र के द्वारा दूत भेजता है, तुम जो स्वस्थ और लंबे डीलडौल के हो, उस देश में उन लोगों के पास जाओ, जहां दूर-दूर तक जिनका डर मन में है, तथा जो देश सिद्ध एवं सुंदर है, और जिनके बीच से नदियां बहती हैं.
3 ಜಗದ ಸಕಲ ನಿವಾಸಿಗಳೇ! ಭೂಮಿಯಲ್ಲಿ ವಾಸಿಸುವವರೇ! ಬೆಟ್ಟಗಳ ಮೇಲೆ ಧ್ವಜವನ್ನು ಎತ್ತುವಾಗ ಅದನ್ನು ನೀವು ನೋಡುವಿರಿ, ತುತೂರಿಯನ್ನು ಊದುವಾಗ ಕೇಳಿಸಿಕೊಳ್ಳುವಿರಿ.
हे सारी पृथ्वी के लोगों सुनो, जब पर्वतों पर झंडा ऊंचा किया जाए और जब तुरही फूंकी जायेगी,
4 ಯೆಹೋವ ದೇವರು ನನಗೆ ಹೀಗೆ ಹೇಳಿದರು, “ನಾನು ನನ್ನ ವಿಶ್ರಾಂತಿಯನ್ನು ತೆಗೆದುಕೊಳ್ಳುವೆನು. ಬಿಸಿಹಗಲಿನ ಸೂರ್ಯನಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದಂತೆಯೂ ನಾನು ನನ್ನ ನಿವಾಸಸ್ಥಾನದಲ್ಲಿ ಸುಮ್ಮನೆ ನೋಡುತ್ತಿರುವೆನು.”
तब याहवेह ने मुझसे कहा, “सूर्य की तेज धूप तथा कटनी के समय ओस के बादल में रहकर मैं चुपचाप देखूंगा.”
5 ಏಕೆಂದರೆ ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಲ್ಲಿ ದ್ರಾಕ್ಷಿ ಕಾಯಿಯಾಗುವಾಗ ಅವರು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ, ಚಿಗುರುಗಳನ್ನು ಕಡಿದುಹಾಕುವರು.
क्योंकि जैसे ही कलियां खिल जाएं और फूल पके हुए दाख बन जाएं, तब याहवेह टहनी से वह अंकुरों को छांटेंगे, और बढ़ती हुई डालियों को काटकर अलग कर देंगे.
6 ಅವುಗಳೆಲ್ಲ ಬೆಟ್ಟದ ಹದ್ದುಗಳಿಗೂ, ಭೂಮಿಯ ಮೃಗಗಳಿಗೂ ಆಹಾರವಾಗುವುವು. ಅದು ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿಯೂ, ಕಾಡುಮೃಗಗಳಿಗೆ ಚಳಿಗಾಲದಲ್ಲಿಯೂ ಆಹಾರವಾಗುವುದು.
जो मांसाहारी पक्षियों और पृथ्वी के पशुओं के लिए होगा; मांसाहारी पक्षी इन पर धूप में, तथा पृथ्वी के पशु इस पर सर्दी में बैठेंगे.
7 ಆಗ ಎತ್ತರವಾದ ಹಾಗೂ ನುಣುಪು ಚರ್ಮವುಳ್ಳ ಜನರಿಂದಲೂ, ಸರ್ವರಿಗೂ ಭಯಪ್ರಧರಾದ ಜನರಿಂದಲೂ, ವಿಚಿತ್ರ ಭಾಷೆಯಿಂದ ಹಾಗೂ ನದಿಗಳಿಂದ ವಿಂಗಡವಾಗಿರುವ ಆಕ್ರಮಣಕಾರಿ ಜನರಿಂದಲೂ ಸರ್ವಶಕ್ತರಾದ ಯೆಹೋವ ದೇವರಿಗೆ ಕಾಣಿಕೆಗಳು ತರಲಾಗುವುದು. ಹೌದು, ಸೇನಾಧೀಶ್ವರ ಯೆಹೋವ ದೇವರ ಹೆಸರುಳ್ಳ ಚೀಯೋನ್ ಪರ್ವತಕ್ಕೆ ಕಾಣಿಕೆಗಳು ತರಲಾಗುವುದು.
स्वस्थ और लंबे डीलडौल के लोग जो अजीब भाषा का, आक्रामक राष्ट्र हैं, जिन्हें दूर और पास के सब लोग डरते हैं, और जो देश सिद्ध एवं सुंदर है, जिसके बीच से नदियां बहती हैं— उनकी ओर से उस समय सेनाओं के याहवेह के नाम में प्रतिष्ठित ज़ियोन पर्वत पर भेंट लाई जाएगी.