< ಇಬ್ರಿಯರಿಗೆ ಬರೆದ ಪತ್ರಿಕೆ 9 >
1 ಮೊದಲನೆಯ ಒಡಂಬಡಿಕೆಯಲ್ಲಿ ದೈವಿಕ ಆರಾಧನೆಯ ಕ್ರಮಗಳಿದ್ದವು. ಮಾತ್ರವಲ್ಲದೆ ಮಾನವ ನಿರ್ಮಿತ ಪವಿತ್ರ ಸ್ಥಳವೂ ಇತ್ತು.
Akcüka ngthumkhän naw hjawkhah ning up lü hjawkhahnak vaia hnün pi khyang naw pawhki.
2 ಅದರೊಳಗೆ ಒಂದು ಗುಡಾರವು ಕಟ್ಟಲಾಗಿತ್ತು. ಅದರ ಪ್ರಥಮ ಭಾಗದಲ್ಲಿ ದೀಪಸ್ತಂಭ, ಮೇಜು, ಸಮ್ಮುಖದ ರೊಟ್ಟಿ ಇವುಗಳಿದ್ದವು. ಅದು ಪವಿತ್ರ ಸ್ಥಳ ಎಂದು ಕರೆಯಲಾಗಿತ್ತು.
Hjam cun mdüih lü akpung da ka cun Ngcimkia hnüna ami sui. Acua mei mdäinak ve lü Pamhnam üng peta muk taknak capawi veki.
3 ಎರಡನೆಯ ತೆರೆಯ ಆಚೆ ಅತಿ ಪವಿತ್ರ ಸ್ಥಳ ಎಂದು ಕರೆಯಲಾದ ಗುಡಾರವಿತ್ತು.
Anghngihnak jihsunga hnua ta Hjama k'uma ngcimcaih säihkia hnüna ami sui veki.
4 ಅದರಲ್ಲಿ ಚಿನ್ನದ ಧೂಪಾರತಿ, ಒಳಗೂ ಹೊರಗೂ ಚಿನ್ನದಿಂದ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇವುಗಳಿದ್ದವು. ಆ ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆಯೂ ಆರೋನನ ಚಿಗುರಿದ ಕೋಲೂ ಒಡಂಬಡಿಕೆಯ ಶಿಲಾಶಾಸನಗಳೂ ಇದ್ದವು.
Ang’ui mei am sinak xüi am ami pyan khahnak ve lü xüi am ami bu ngthumkhän teta ja mana ja xüi um pi veki. Acuna k'uma Arona ksawngkhe a hnah lut lawki ja Pamhnam naw a jah ngthupeta ng’yuknak lung phehlep nghngih pi veki.
5 ಮಂಜೂಷದ ಮೇಲೆ ಮಹಿಮೆಯ ಕೆರೂಬಿಯರು ಕರುಣಾಸನವನ್ನು ಮುಚ್ಚಿಕೊಂಡಿದ್ದವು. ಸದ್ಯಕ್ಕೆ ಈ ವಿಷಯಗಳನ್ನು ಸವಿಸ್ತಾರವಾಗಿ ನಾನು ಹೇಳುವುದಕ್ಕಾಗದು.
Tetaa khana Pamhnam veki tia mdannak Kherupina ami sui khankhawngsä xawi naw mkhye mhlätnaka hnün cun ami ngphya am khümki xawi. Tuha kcün hin anaküt jah pyennak vai am ni.
6 ಇವುಗಳು ಹೀಗೆ ಸಿದ್ಧವಾದ ಬಳಿಕ ಯಾಜಕರು ಯಾವಾಗಲೂ ಹೊರಗಿನ ಗುಡಾರವನ್ನು ಪ್ರವೇಶಿಸಿ ದೈವಿಕ ಆರಾಧನೆಯನ್ನು ನಡೆಸುತ್ತಿದ್ದರು.
Ahine cun hikba pitpyangnak khamkie ni. Ktaiyüe cun ami mta bilo khaia mhnüp tä hjama k'um akan akcüknaka khüi yahkie,
7 ಆದರೆ ಎರಡನೆಯ ಭಾಗದೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೆ ಒಂದೇ ಸಾರಿ ಪ್ರವೇಶಿಸುತ್ತಿದ್ದನು. ಅವನು ರಕ್ತವನ್ನು ತೆಗೆದುಕೊಳ್ಳದೆ ಎಂದಿಗೂ ಹೋಗುತ್ತಿರಲಿಲ್ಲ. ಬಲಿಯ ರಕ್ತವನ್ನು ತನಗೋಸ್ಕರವೂ ಜನರು ತಿಳಿಯದೆ ಮಾಡಿದ ಪಾಪಗಳಿಗೋಸ್ಕರವೂ ಸಮರ್ಪಿಸುತ್ತಿದ್ದನು.
lüpi Ktaiyü ngvai säih ni hjama k'um säiha lut lü kum mat üng ahun däk lut yahki. Ani naw Pamhnama veia ami peta thi cun ceh lü amäta kcah ja khyange naw am ksing lü ami mkhyea phäh mhlätnak ngkengtainak pawhki.
8 ಹೊರಗಿನ ಗುಡಾರವು ಇನ್ನೂ ಇರುವ ತನಕ ಅತಿ ಪವಿತ್ರ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಲಿಲ್ಲವೆಂಬುದನ್ನು ಪವಿತ್ರಾತ್ಮ ದೇವರು ವ್ಯಕ್ತಪಡಿಸುತ್ತಾರೆ
Akpung da ka hjam a vea küt üng Angcimnak Säiha Hnün käh nghmawngei khaia Ngmüimkhya Ngcim naw jah mtheiki.
9 ಈ ಗುಡಾರವು ಈ ಕಾಲವನ್ನು ಸೂಚಿಸುವ ಒಂದು ಮಾದರಿಯಾಗಿದೆ. ಆಗ ಆರಾಧಿಸುವವರ ಮನಸ್ಸಾಕ್ಷಿಯನ್ನು ಪರಿಪೂರ್ಣ ಮಾಡಲಾರದ ಕಾಣಿಕೆಗಳೂ ಯಜ್ಞಗಳೂ ಅರ್ಪಿಸಲಾಗುತ್ತಿದ್ದವು.
Ahin msuimcäpnak naw tuha kcün mdanki ni. Petmsawtnak ja khyüksei ngkengnak Pamhnam üng pet naw mküimtokiea mlung cun am kümsak thei,
10 ಅವು ಅನ್ನಪಾನಾದಿಗಳಲ್ಲಿಯೂ ವಿವಿಧ ಸ್ನಾನಗಳಲ್ಲಿಯೂ ಮುಂತಾದ ಬಾಹ್ಯಾಚಾರದ ಕ್ರಮಗಳಾಗಿದ್ದವು. ಅವು ಹೊಸ ಕ್ರಮಕಾಲದವರೆಗೆ ಮಾತ್ರ ನೇಮಕವಾಗಿದ್ದವು.
isetiakyaküng, amimi naw ei ja awk ja ngcimnak amjü mjüa pawi ami pawh vai hlüki. Ahine cun akpunga bilawha kya lü Pamhnam naw akthai a pawh law vei cäpa sumeia kyaki ni.
11 ಆದರೆ ಕ್ರಿಸ್ತ ಯೇಸು ಈಗಾಗಲೇ ಮಹಾಯಾಜಕರಾಗಿ ಬಂದಿದ್ದಾರೆ. ಅವರು ಕೊಡುವ ಒಳ್ಳೆಯವುಗಳು ಈಗಾಗಲೇ ನಮಗೆ ದೊರೆತಿವೆ. ಅವರು ಹಿಂದಿನವುಗಳಿಗಿಂತಲೂ ಶ್ರೇಷ್ಠವಾದದ್ದೂ ಪರಿಪೂರ್ಣವಾದದ್ದೂ ಆಗಿರುವ ಗುಡಾರವನ್ನು ಅಂದರೆ ಕೈಯಿಂದ ಕಟ್ಟಿರದಂತದ್ದೂ ಇಹಲೋಕದ ಸೃಷ್ಟಿಗೆ ಸಂಬಂಧಪಟ್ಟಿರದಂತದ್ದೂ ಆಗಿರುವ ಗುಡಾರವನ್ನು ಪ್ರವೇಶಿಸಿದರು.
Lüpi Khritaw cun Ktaiyü Ngvai Säiha, akdawa lawki cun hia ve pängki ni. Ania khüinak hjam cun kümbe lü däm bawki ni, acuna hjam cun nghngicima sawngsaka am kya lü khawmdek mhnünmcengnak üngpi am ngpüi.
12 ಕ್ರಿಸ್ತ ಯೇಸು ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತಮ್ಮ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವರಾಗಿ ಒಂದೇ ಸಾರಿ ಮಹಾ ಪವಿತ್ರ ಸ್ಥಳದೊಳಗೆ ಪ್ರವೇಶಿಸಿದರು. (aiōnios )
Khritaw hjama k'uma cit lü Angcimnak Säih Hnüna ahun a luh üng me ja sea thi cun khahnak vaia käh pawh lü mimi naw angläta küikyannak mi yah vaia amäta thi ni a cehpüi ta. (aiōnios )
13 ಹೋತ ಹೋರಿಗಳ ರಕ್ತವನ್ನೂ ಅಶುದ್ಧರಾದವರ ಮೇಲೆ ಚಿಮುಕಿಸಲಾಯಿತು. ಯಜ್ಞಪಶುಗಳ ಬೂದಿಯನ್ನೂ ಅವರ ಮೇಲೆ ತೂರಲಾಯಿತು. ಇದು ಅವರ ದೇಹವನ್ನು ಶುದ್ಧೀಕರಿಸಿತು.
Meea ja seea thi ja seca mei üng mkhih mput cun khawning üng am ngcimkia khyange khana kthüih lü acun naw am ami ngcimnak cun lolaki ni.
14 ನಿತ್ಯಾತ್ಮರಿಂದ ತಮ್ಮನ್ನು ತಾವೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತ ಯೇಸುವಿನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ನಮ್ಮನ್ನು ಬಿಡಿಸಿ ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುವುದಲ್ಲವೇ? (aiōnios )
Ahin hin cangkia kyase, Khritawa thi naw ta ihlawka kümkawi khai ni! Anglät Ngmüimkhya üngkhyüh Pamhnama vei amät kung cun kümbekia ngkengnaka kba peki. A thi naw mimät ksingeinak cun ia am kyahkia thumning üngkhyüh jah mcim lü xüngseikia Pamhnam mi khüih khaie. (aiōnios )
15 ಈ ಕಾರಣದಿಂದ ಕರೆಯಲಾದವರು ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಸ್ವೀಕರಿಸುವಂತೆ ಕ್ರಿಸ್ತ ಯೇಸು ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿದ್ದಾರೆ. ಮೊದಲಿನ ಒಡಂಬಡಿಕೆಯ ಕೆಳಗೆ ಮಾಡಿದ ಪಾಪಗಳಿಂದ ಅವರನ್ನು ವಿಮೋಚಿಸಲು ಯೇಸು ಆಗಲೇ ಈಡಾಗಿ ತಮ್ಮ ಪ್ರಾಣಕೊಟ್ಟಿದ್ದಾರೆ. (aiōnios )
Ahina phäha Khritaw cun ngthumkhän akthai pawhkia kyase Pamhnam naw a jah khüa khyange naw angläta dawkyanak Pamhnama khyütam cun yahei khaie. Ahin cun päng khawhki, Khritawa thihnak naw khyange cun akcük ngthumkhäna kea ami pawha mkhyekatnak üngkhyüh jah mhlätki ni. (aiōnios )
16 ಮರಣ ಶಾಸನವು ಎಲ್ಲಿದೆಯೋ ಅಲ್ಲಿ ಅದನ್ನು ಮಾಡಿಕೊಂಡಾತನ ಮರಣ ಅವಶ್ಯ ಎಂಬುದನ್ನು ರುಜುಪಡಿಸಬೇಕು.
Ahina kya lü ngthumkhän pawhkia khyang cun thih yahki tia mdan vai hlüki.
17 ಮರಣ ಶಾಸನವು ಬರೆದವನು ಜೀವದಿಂದಿರುವವರೆಗೂ ಅದು ಎಂದಿಗೂ ಜಾರಿಗೆ ಬರುವುದಿಲ್ಲ.
Ngthumkhän ti hin acun a pawh k'um üng xüngkia kyase a thih käna ni a kthamah ve.
18 ಆದ್ದರಿಂದ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಪ್ರತಿಷ್ಠಾಪನೆ ಆಗಲಿಲ್ಲ.
Acuna kyase, akcüka ngthumkhän hin thisen mi sumeia phäh kthamahki ni.
19 ಮೋಶೆಯು ಪ್ರತಿಯೊಂದು ಆಜ್ಞೆಯನ್ನು ನಿಯಮದ ಪ್ರಕಾರ ಜನರೆಲ್ಲರಿಗೆ ಹೇಳಿದ ಮೇಲೆ ಅವನು ನೀರು, ಕೆಂಪು ಉಣ್ಣೆ, ಹಿಸ್ಸೋಪು ಇವುಗಳೊಂದಿಗೆ ಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಚಿಮುಕಿಸಿದನು.
Akcüka Mosi naw Thum üng veki ngthupete cun khyangea veia a sangkhap ma ni. Acun käna meea ja seea thi cun lo lü tui am kcaw lü tomu asen ja hisop sumei lü khyang avan ja Thum caupa khana a kthüih yah ni.
20 ಹಾಗೆ ಚಿಮುಕಿಸುವಾಗ ಮೋಶೆಯು, “ಇದು ದೇವರು ನಿಮಗೆ ಆಜ್ಞಾಪಿಸಿದ ಒಡಂಬಡಿಕೆಯ ರಕ್ತ,” ಎಂದು ಹೇಳಿದನು.
Ani naw, “Hina thi hin ngthumkhän msing lü Pamhnam naw acun nami kcangnak vaia ngthu ning jah peki” tia a pyen.
21 ಅದೇ ರೀತಿಯಾಗಿ ಮೋಶೆಯು ಗುಡಾರದ ಮೇಲೆಯೂ ಸೇವೆಯ ಎಲ್ಲಾ ಉಪ ಪಾತ್ರೆಗಳ ಮೇಲೆಯೂ ರಕ್ತವನ್ನು ಚಿಮುಕಿಸಿದನು.
Acuna tänga Mosi naw pi thi cun Ngcimkia Hjam ja hjawkhanak üng sumeiea khana a kthüih hü ni.
22 ಹೀಗೆ ದೇವರ ನಿಯಮದ ಪ್ರಕಾರ ಎಲ್ಲವೂ ರಕ್ತದಿಂದಲೇ ಶುದ್ಧಿಯಾಗಬೇಕು. ರಕ್ತಧಾರೆ ಇಲ್ಲದೆ ಪಾಪಪರಿಹಾರವು ಉಂಟಾಗುವುದಿಲ್ಲ.
Thum cun naw akcanga anaküt hin thi naw ngcimsak khyäü lü thi angsawi üngva mkhyekatnake jah mhlätki.
23 ಆದ್ದರಿಂದ ಪರಲೋಕದಲ್ಲಿರುವ ವಸ್ತುಗಳ ಛಾಯೆಯಂತೆ ಇರುವ ವಸ್ತುಗಳನ್ನು ಈ ಯಜ್ಞಗಳಿಂದ ಶುದ್ಧಿಮಾಡುವುದು ಅವಶ್ಯವಾಗಿದೆ. ಹಾಗಾದರೆ ಪರಲೋಕದ ನಿಜ ವಸ್ತುಗಳಿಗೆ ಇವುಗಳಿಗಿಂತ ಉತ್ತಮವಾದ ಯಜ್ಞಗಳು ಅವಶ್ಯಕವಾಗಿವೆ.
Acune cun khankhaw ka lupjawng laka kya lü ahikba kunga jah ngcimsak vaia kyaki. Lüpi khankhawa kae naw akdaw säiha khahnak cun hlüeiki ni.
24 ಏಕೆಂದರೆ ಕ್ರಿಸ್ತ ಯೇಸು ನಿಜ ದೇವಾಲಯದ ಪ್ರತಿರೂಪದಂತಿರುವ, ಕೈಯಿಂದ ಕಟ್ಟಿದ ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವಂತೆ ಪರಲೋಕದಲ್ಲಿಯೇ ಪ್ರವೇಶಿಸಿದರು.
Khritaw cun nghngicima sawngsak, khankhawa ka akcanga lupjawng laka kyaki, Ngcimkia hnün cu am lut. Ani cun Pamhnama maa mimia kcaha a ponaka khankhawa citki ni.
25 ಇದಲ್ಲದೆ ಮಹಾಯಾಜಕನು ಪ್ರತಿವರ್ಷವೂ ತನ್ನ ಸ್ವಂತದ್ದಾಗಿರದ ರಕ್ತವನ್ನು ತೆಗದುಕೊಂಡು ಅತಿ ಪವಿತ್ರ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ ಯೇಸು ತಮ್ಮನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಪ್ರವೇಶಿಸಲಿಲ್ಲ.
Judah khyangea Ktaiyü ngvai säih cun khyükseia thi am akum tä Angcimnak Säiha Hnüna cit yahki. Lüpi Khritaw cun amät khah khaia angläta am cit,
26 ಹಾಗಿದ್ದರೆ, ಕ್ರಿಸ್ತ ಯೇಸುವು ಲೋಕದ ಅಸ್ತಿವಾರದಿಂದ ಅನೇಕ ಸಾರಿ ಬಾಧೆಪಡಬೇಕಾಗಿತ್ತು. ಆದರೆ ಈಗ ಅವರು ಒಂದೇ ಸಾರಿ ಲೋಕಾಂತ್ಯದಲ್ಲಿ ಪಾಪ ನಿವಾರಣೆ ಮಾಡುವುದಕ್ಕೆ ತಮ್ಮನ್ನು ತಾವೇ ಯಜ್ಞ ಮಾಡಿಕೊಳ್ಳುವವರಾಗಿ ಪ್ರತ್ಯಕ್ಷರಾದರು. (aiōn )
acukba vai sü ta khawmdek mhnün üngkhyüh ani khawvei khuikha khai sü. Atuh ta, acuna hnün üng, kcün naküt apäih law hlü hnüh üng mkhyenak cun avana a lawh vaia ahun sawxat po law lü amät cun ngkengtaisaki ni. (aiōn )
27 ಒಂದೇ ಸಾರಿ ಸಾಯುವುದೂ ತರುವಾಯ ನ್ಯಾಯತೀರ್ಪು ಪಡೆಯುವುದೂ ಮನುಷ್ಯರಿಗಾಗಿ ನೇಮಕವಾಗಿದೆ.
Khyang avan ahun thi lü acun käna Pamhnam naw ngthu jah mkhyah khai.
28 ಅದರಂತೆಯೇ ಕ್ರಿಸ್ತ ಯೇಸು ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವುದಕ್ಕೋಸ್ಕರ ಒಂದೇ ಸಾರಿ ಸಮರ್ಪಿತರಾದರು. ತಮಗಾಗಿ ಕಾದಿರುವವರಿಗೆ ರಕ್ಷಣೆ ಕೊಡಲು ಕ್ರಿಸ್ತ ಯೇಸು ಎರಡನೆಯ ಸಲ ಕಾಣಿಸಿಕೊಳ್ಳುವರು. ಆಗ ಪಾಪ ಹೊತ್ತುಕೊಳ್ಳುವುದಕ್ಕಾಗಿ ಬರುವುದಿಲ್ಲ.
Acukba kunga Khritaw naw ngkengnak ahun pawh lü khyang khawhaha mkhyenake a jah lawh päih ni. Anghngihnak a po law vai cun mkhyenaka phäh am ni lü a jah küikyan vai k'äihkiea phäh ni.