< ಆದಿಕಾಂಡ 38 >
1 ಆ ಕಾಲದಲ್ಲಿ ಯೆಹೂದನು ತನ್ನ ಸಹೋದರರ ಬಳಿಯಿಂದ ಹೊರಟು, ಅದುಲ್ಲಾಮೂರಿನವನಾದ ಹೀರಾನ ಬಳಿಗೆ ಹೋದನು.
А у то време догоди се, те Јуда отиде од браће своје и уврати се код неког Одоламејца, коме име беше Ирас.
2 ಅಲ್ಲಿ ಯೆಹೂದನು ಕಾನಾನ್ಯನಾದ ಶೂಗನ ಮಗಳನ್ನು ಕಂಡು, ಅವಳನ್ನು ಮದುವೆಯಾಗಿ ಅವಳನ್ನು ಕೂಡಿದನು.
И онде виде Јуда кћер неког Хананејца, коме име беше Сава, и узе је и леже с њом;
3 ಅವಳು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಯೆಹೂದನು ಅವನಿಗೆ ಏರ್ ಎಂದು ಹೆಸರಿಟ್ಟನು.
И она затрудне и роди сина, коме надеде име Ир.
4 ಆಕೆಯು ತಿರುಗಿ ಗರ್ಭಿಣಿಯಾಗಿ ಮಗನನ್ನು ಹೆತ್ತು, ಅವನಿಗೆ ಓನಾನ್ ಎಂದು ಹೆಸರಿಟ್ಟಳು.
И опет затрудневши роди сина, коме надеде име Авнан.
5 ಆಕೆಯು ಮತ್ತೊಂದು ಸಾರಿ ಮಗನನ್ನು ಹೆತ್ತು, ಅವನಿಗೆ ಶೇಲಹ ಎಂದು ಹೆಸರಿಟ್ಟಳು. ಆಕೆಯು ಅವನನ್ನು ಹೆತ್ತಾಗ, ಯೆಹೂದನು ಕೆಜೀಬಿನಲ್ಲಿ ಇದ್ದನು.
И опет роди сина, и надеде му име Силом; а Јуда беше у Хасви кад она тога роди.
6 ಇದಾದ ಮೇಲೆ ಯೆಹೂದನು ತನ್ನ ಜೇಷ್ಠಪುತ್ರ ಏರನಿಗೆ ತಾಮಾರ್ ಎಂಬ ಹೆಣ್ಣನ್ನು ತಂದು ಮದುವೆಮಾಡಿದನು.
И Јуда ожени првенца свог Ира девојком по имену Тамара.
7 ಆದರೆ ಯೆಹೂದನ ಜೇಷ್ಠಪುತ್ರ ಏರನು ಯೆಹೋವ ದೇವರ ದೃಷ್ಟಿಯಲ್ಲಿ ದುಷ್ಟನಾಗಿದ್ದುದರಿಂದ, ಯೆಹೋವ ದೇವರು ಅವನನ್ನು ಸಾವಿಗೀಡುಮಾಡಿದರು.
Али Ир првенац Јудин беше неваљао пред Господом, и уби га Господ.
8 ಆಗ ಯೆಹೂದನು ಓನಾನನಿಗೆ, “ನಿನ್ನ ಸಹೋದರನ ಹೆಂಡತಿಯ ಬಳಿಗೆ ಹೋಗಿ, ಅವಳನ್ನು ಮದುವೆಯಾಗಿ, ನಿನ್ನ ಅಣ್ಣನಿಗೆ ಸಂತತಿಯನ್ನು ಉಂಟುಮಾಡು,” ಎಂದನು.
А Јуда рече Авнану: Уђи к жени брата свог и ожени се њом на име братово, да подигнеш семе брату свом.
9 ಆದರೆ ಓನಾನನು ಆ ಸಂತತಿಯು ತನ್ನದಾಗತಕ್ಕದ್ದಲ್ಲವೆಂದು ತಿಳಿದುಕೊಂಡು, ತನ್ನ ಅಣ್ಣನಿಗೆ ಸಂತತಿಯನ್ನು ಉಂಟು ಮಾಡದ ಹಾಗೆ, ತನ್ನ ವೀರ್ಯವನ್ನು ನೆಲದ ಮೇಲೆ ಚೆಲ್ಲಿದನು.
А Авнан, знајући да неће бити његов пород, кад леже са женом брата свог просипаше на земљу, да не роди деце брату свом.
10 ಅವನು ಮಾಡಿದ್ದು ಯೆಹೋವ ದೇವರ ದೃಷ್ಟಿಯಲ್ಲಿ ಮೆಚ್ಚಿಗೆಯಾಗಿರಲಿಲ್ಲ. ಆದ್ದರಿಂದ ಅವರು ಇವನನ್ನೂ ಸಾವಿಗೀಡುಮಾಡಿದರು.
Али Господу не би мило што чињаше, те уби и њега.
11 ಆಗ ಯೆಹೂದನು ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ದೊಡ್ಡವನಾಗುವವರೆಗೆ ವಿಧವೆಯಾಗಿದ್ದು, ನಿನ್ನ ತಂದೆಯ ಮನೆಯಲ್ಲಿರು,” ಎಂದನು. ಏಕೆಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳಾದರೋ ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು.
И Јуда рече Тамари снаси својој: Остани удовицом у кући оца свог докле одрасте Силом син мој. Јер говораше: Да не умре и он као браћа му. И отиде Тамара, и живеше у кући оца свог.
12 ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ಸತ್ತಳು. ಯೆಹೂದನು ಆದರಣೆ ಹೊಂದಿದ ಮೇಲೆ, ತಾನೂ, ತನ್ನ ಸ್ನೇಹಿತನಾಗಿರುವ ಅದುಲ್ಲಾಮ್ಯನಾದ ಹೀರಾನನೂ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವವರ ಬಳಿಗೆ ತಿಮ್ನಾ ಊರಿಗೆ ಹೋದರು.
А кад прође много времена, умре кћи Савина, жена Јудина. И кад се Јуда утеши, пође у Тамну к људима што му стрижаху овце, сам с Ирасом пријатељем својим Одоламејцем.
13 ಆಗ ತಾಮಾರಳಿಗೆ, “ನಿನ್ನ ಮಾವನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವುದಕ್ಕೆ ತಿಮ್ನಾ ಊರಿಗೆ ಹೋಗುತ್ತಿದ್ದಾನೆ,” ಎಂದು ತಿಳಿಸಿದಾಗ,
И јавише Тамари говорећи: Ето свекар твој иде у Тамну да стриже овце своје.
14 ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು, ಮುಸುಕುಹಾಕಿ ಮುಚ್ಚಿಕೊಂಡು, ತಿಮ್ನಾ ಊರಿನ ಮಾರ್ಗದಲ್ಲಿರುವ ಏನಯಿಮೂರಿನ ಬಹಿರಂಗ ಸ್ಥಳದಲ್ಲಿ ಕೂತುಕೊಂಡಳು. ಏಕೆಂದರೆ ಶೇಲಹನು ದೊಡ್ಡವನಾಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲವೆಂದು ಹಾಗೆ ಮಾಡಿದಳು.
А она скиде са себе удовичко рухо своје, и узе покривало и покри лице, и седе на раскршће на путу који иде у Тамну. Јер виде да је Силом одрастао, а њу још не удаше за њ.
15 ಯೆಹೂದನು ಅವಳನ್ನು ಕಂಡಾಗ, ಅವಳು ಮುಖ ಮುಚ್ಚಿಕೊಂಡಿದ್ದರಿಂದ ಅವಳು ವೇಶ್ಯೆಯೆಂದು ತಿಳಿದುಕೊಂಡನು.
А Јуда када виде, помисли да је курва, јер беше покрила лице своје.
16 ಮಾರ್ಗದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು, “ನನ್ನನ್ನು ನಿನ್ನ ಬಳಿಗೆ ಬರಗೊಡಿಸು,” ಎಂದನು. ಏಕೆಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ. ಅವಳು, “ನೀನು ನನ್ನ ಬಳಿಗೆ ಬಂದರೆ, ನನಗೆ ಏನು ಕೊಡುವೆ?” ಎಂದಳು.
Па сврну с пута к њој и рече јој: Пусти да легнем с тобом. Јер није познао да му је снаха. А она рече: Шта ћеш ми дати да легнеш са мном?
17 ಅವನು, “ಮಂದೆಯಿಂದ ನಿನಗೆ ಮೇಕೆಯ ಮರಿಯನ್ನು ಕಳುಹಿಸುತ್ತೇನೆ,” ಎಂದನು. ಅವಳು, “ನೀನು ಅದನ್ನು ಕಳುಹಿಸುವವರೆಗೆ ಈಡು ಕೊಡುವೆಯೋ?” ಎಂದಳು.
А он рече: Послаћу ти јаре из стада. А она рече: Али да ми даш залог докле га не пошаљеш.
18 ಅದಕ್ಕೆ ಅವನು, “ನಿನಗೆ ಕೊಡತಕ್ಕ ಈಡು ಏನು?” ಎಂದಾಗ. ಅವಳು, “ನಿನ್ನ ಮುದ್ರೆಯೂ ನಿನ್ನ ದಾರವೂ ನಿನ್ನ ಕೈಯಲ್ಲಿರುವ ಕೋಲೂ,” ಎಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು, ಆಕೆಯನ್ನು ಕೂಡಿದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು.
А он рече: Какав залог да ти дам? А она рече: Ето, прстен и рубац, и штап што ти је у руци. И он јој даде, те леже с њом, и она затрудне од њега.
19 ತರುವಾಯ ಅವಳು ಎದ್ದು ಹೋಗಿ, ಮುಸುಕನ್ನು ತೆಗೆದಿಟ್ಟು, ತನ್ನ ವಿಧವೆಯ ವಸ್ತ್ರಗಳನ್ನು ಹಾಕಿಕೊಂಡಳು.
После уставши Тамара отиде и скиде покривало са себе и обуче удовичко рухо.
20 ಯೆಹೂದನು ಆ ಸ್ತ್ರೀಯ ಕೈಯಿಂದ ಈಡು ತೆಗೆದುಕೊಳ್ಳುವದಕ್ಕೆ ತನ್ನ ಸ್ನೇಹಿತನಾದ ಅದುಲ್ಲಾಮ್ಯನ ಕೈಯಿಂದ ಮೇಕೆಯ ಮರಿಯನ್ನು ಕಳುಹಿಸಿದಾಗ ಆಕೆಯು ಸಿಗಲಿಲ್ಲ.
А Јуда посла јаре по пријатељу свом Одоламејцу да му донесе натраг од жене залог. Али је он не нађе.
21 ಅದುಲ್ಲಾಮ್ಯನು ಆಕೆಯ ಊರಿನವರನ್ನು, “ಏನಯಿಮಿನ ಬಹಿರಂಗ ಮಾರ್ಗದ ಬಳಿಯಲ್ಲಿದ್ದ ವೇಶ್ಯೆ ಎಲ್ಲಿ?” ಎಂದು ಕೇಳಿದಾಗ. ಅವರು, “ಈ ಸ್ಥಳದಲ್ಲಿ ಯಾವ ವೇಶ್ಯೆಯೂ ಇರಲಿಲ್ಲ,” ಎಂದರು.
Па питаше људе по оном месту где је она била говорећи: Где је она курва што је била на раскршћу на овом путу? А они рекоше: Није овде било курве.
22 ಆಗ ಅವನು ಯೆಹೂದನ ಬಳಿಗೆ ತಿರುಗಿಬಂದು, “ಆಕೆಯು ನನಗೆ ಸಿಕ್ಕಲಿಲ್ಲ, ಇದಲ್ಲದೆ ಆ ಸ್ಥಳದ ಮನುಷ್ಯರು, ‘ಈ ಸ್ಥಳದಲ್ಲಿ ದೇವದಾಸಿ ಇರಲಿಲ್ಲ,’ ಎಂದು ಹೇಳಿದರು,” ಎಂದು ಹೇಳಿದನು.
И врати се к Јуди и рече: Не нађох је, него још рекоше мештани: Није овде било курве.
23 ಆಗ ಯೆಹೂದನು, “ನಾವು ಅಪಹಾಸ್ಯಕ್ಕೆ ಒಳಗಾಗದ ಹಾಗೆ ಅವಳು ಅದನ್ನು ತೆಗೆದುಕೊಂಡು ಹೋಗಲಿ, ಈ ಮೇಕೆಯ ಮರಿಯನ್ನು ನಾನು ಕಳುಹಿಸಿದೆನು, ಆದರೆ ಆಕೆಯು ನಿನಗೆ ಸಿಕ್ಕಲಿಲ್ಲ,” ಎಂದನು.
А Јуда рече: Нека јој, да се не срамотимо; ја сам слао јаре, али је ти не нађе.
24 ಹೆಚ್ಚು ಕಡಿಮೆ ಮೂರು ತಿಂಗಳಾದ ಮೇಲೆ ಯೆಹೂದನಿಗೆ, “ನಿನ್ನ ಸೊಸೆ ತಾಮಾರಳು ವೇಶ್ಯಾವೃತ್ತಿಮಾಡಿ ವ್ಯಭಿಚಾರದಿಂದ ಗರ್ಭಿಣಿಯಾಗಿದ್ದಾಳೆ,” ಎಂದು ತಿಳಿಸಿದರು. ಆಗ ಯೆಹೂದನು, “ಅವಳನ್ನು ಹೊರಗೆ ತನ್ನಿರಿ, ಅವಳನ್ನು ಸುಡಬೇಕು,” ಎಂದನು.
А кад прође до три месеца дана, јавише Јуди говорећи: Тамара снаха твоја учини прељубу, и ево затрудне од прељубе. А Јуда рече: Изведите је да се спали.
25 ಆಕೆಯನ್ನು ಹೊರಗೆ ತಂದಾಗ, ಆಕೆಯು ತನ್ನ ಮಾವನಿಗೆ, “ಈ ಒತ್ತೆಯ ಸಾಮಾನುಗಳನ್ನು ಕೊಟ್ಟ ಆ ಮನುಷ್ಯನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಆದ್ದರಿಂದ ಈ ಮುದ್ರೆಯೂ ದಾರವೂ ಕೋಲೂ ಯಾರವೆಂದು ತಿಳಿದುಕೋ,” ಎಂದು ಹೇಳಿದಳು.
А кад је поведоше, посла к свекру свом и поручи: С човеком чије је ово затруднела сам. И рече: Тражи чији је овај прстен и рубац и штап.
26 ಆಗ ಯೆಹೂದನು ಅವುಗಳನ್ನು ಗುರುತಿಸಿ, “ಆಕೆಯು ನನಗಿಂತ ನೀತಿವಂತಳು, ಏಕೆಂದರೆ ನಾನು ನನ್ನ ಮಗ ಶೇಲಹನಿಗೆ ಅವಳನ್ನು ಕೊಡಲಿಲ್ಲ,” ಎಂದನು. ಅವನು ಮತ್ತೆ ಆಕೆಯೊಡನೆ ಸಂಸರ್ಗವಿಲ್ಲದೆ ಇದ್ದನು.
А Јуда позна и рече: Правија је од мене, јер је не дадох сину свом Силому. И више не леже с њом.
27 ಅವಳು ಹೆರುವ ಸಮಯದಲ್ಲಿ, ಅವಳಿ ಮಕ್ಕಳು ಆಕೆಯ ಗರ್ಭದಲ್ಲಿದ್ದವು.
А кад дође време да роди, а то близанци у утроби њеној.
28 ಆಕೆಯು ಹೆರುವಾಗ ಒಂದು ಮಗುವು ತನ್ನ ಕೈಚಾಚಿತು. ಆಗ ಸೂಲಗಿತ್ತಿಯು, “ಇದು ಮೊದಲು ಬಂದದ್ದು,” ಎಂದು ಹೇಳಿ ಅದರ ಕೈಗೆ ಕೆಂಪು ನೂಲನ್ನು ಕಟ್ಟಿದಳು.
И кад се порађаше, једно дете помоли руку, а бабица узе и веза му црвен конац око руке говорећи: Овај је први.
29 ಆ ಮಗುವು ತನ್ನ ಕೈಯನ್ನು ಹಿಂದಕ್ಕೆ ಎಳೆದಾಗ, ಅವನ ಸಹೋದರನು ಹೊರಗೆ ಬಂದನು. ಆಗ ಅವಳು, “ನೀನು ಕಿತ್ತುಕೊಂಡು ಹೊರಗೆ ಬಂದೆಯಾ?” ಎಂದಳು. ಹೀಗೆ ಅವನಿಗೆ ಪೆರೆಚ್ ಎಂದು ಹೆಸರಾಯಿತು.
Али он увуче руку, и гле изађе брат његов, а она рече: Како продре? Продирање нека ти буде. И надеше му име Фарес.
30 ತರುವಾಯ ತನ್ನ ಕೈಯಲ್ಲಿ ಕೆಂಪು ನೂಲು ಇದ್ದ ಅವನ ಸಹೋದರನು ಹೊರಗೆ ಬಂದನು. ಅವನಿಗೆ ಜೆರಹ ಎಂದು ಹೆಸರಾಯಿತು.
А после изађе брат му, коме око руке беше црвени конац, и надеше му име Зара.