< ಆದಿಕಾಂಡ 36 >
1 ಎದೋಮ್ ಎಂಬ ಏಸಾವನ ವಂಶಾವಳಿ ಇದು:
ଏଷୌର ବଂଶାବଳୀ। ତାହାର ଅନ୍ୟତମ ନାମ ଇଦୋମ୍।
2 ಏಸಾವನು ಕಾನಾನ್ಯರ ಪುತ್ರಿಯರನ್ನು ಅಂದರೆ, ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ,
ଏଷୌ କିଣାନୀୟମାନଙ୍କର ଦୁଇ କନ୍ୟାକୁ, ଅର୍ଥାତ୍, ହିତ୍ତୀୟ ଏଲୋନ୍ର କନ୍ୟା ଆଦାକୁ ଓ ଅନାର କନ୍ୟା ହିବ୍ବୀୟ ସିବୀୟୋନ୍ର ପୌତ୍ରୀ ଅହଲୀବାମାକୁ,
3 ಇಷ್ಮಾಯೇಲನ ಮಗಳೂ ನೆಬಾಯೋತನ ಸಹೋದರಿಯೂ ಆಗಿದ್ದ ಬಾಸೆಮತ್ ಇವರನ್ನು ಮದುವೆಯಾಗಿದ್ದನು.
ତଦ୍ଭିନ୍ନ ନବାୟୋତ୍ର ଭଗିନୀକୁ, ଅର୍ଥାତ୍, ଇଶ୍ମାୟେଲର କନ୍ୟା ବାସମତ୍କୁ ବିବାହ କଲା।
4 ಆದಾಳು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಯೂವೇಲನನ್ನು ಹೆತ್ತಳು.
ଏଥିଉତ୍ତାରେ ଏଷୌର ଔରସରେ ଆଦା ଇଲୀଫସ୍କୁ ଓ ବାସମତ୍ ରୁୟେଲକୁ ପ୍ରସବ କଲେ।
5 ಒಹೊಲೀಬಾಮಳು ಯೆಯೂಷನನ್ನು, ಯಳಾಮನನ್ನು, ಕೋರಹ ಇವರನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಪುತ್ರರು.
ଆଉ ଅହଲୀବାମା, ଯିୟୂଶ୍, ଯାଲମ୍ ଓ କୋରହକୁ ପ୍ରସବ କଲା; ଏଷୌର ଏହି ସମସ୍ତ ସନ୍ତାନ କିଣାନ ଦେଶରେ ଜନ୍ମିଥିଲେ।
6 ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಪುತ್ರಪುತ್ರಿಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು, ತನ್ನ ಸಹೋದರನಾದ ಯಾಕೋಬನ ಬಳಿಯಿಂದ ಸ್ವಲ್ಪ ದೂರವಿದ್ದ ಮತ್ತೊಂದು ಊರಿಗೆ ಹೋದನು.
ଏଥିଉତ୍ତାରେ ଏଷୌ ଆପଣା ଭାର୍ଯ୍ୟାଗଣ ଓ ପୁତ୍ରକନ୍ୟାଗଣ ଓ ଗୃହସ୍ଥିତ ଅନ୍ୟାନ୍ୟ ସମସ୍ତ ଲୋକଙ୍କୁ, ପୁଣି, ଆପଣାର ସମସ୍ତ ପଶ୍ୱାଦି ଓ କିଣାନ ଦେଶରେ ଉପାର୍ଜ୍ଜିତ ସମସ୍ତ ସମ୍ପତ୍ତି ଘେନି ଆପଣା ଭ୍ରାତା ଯାକୁବ ନିକଟରୁ ଅନ୍ୟ ଦେଶକୁ ପ୍ରସ୍ଥାନ କଲା।
7 ಏಕೆಂದರೆ ಅವರ ಸಂಪತ್ತು ಅವರು ಕೂಡಿ ಇರುವುದಕ್ಕೆ ಆಗದಷ್ಟು ಅಭಿವೃದ್ಧಿಯಾಗಿತ್ತು. ಅವರ ಪಶುಪ್ರಾಣಿಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.
ଯେହେତୁ ସେମାନଙ୍କର ସମ୍ପତ୍ତି ପ୍ରଚୁର ଥିବାରୁ ସେମାନେ ଏକତ୍ର ବାସ କରି ପାରିଲେ ନାହିଁ, ପୁଣି, ସେମାନଙ୍କର ପଶ୍ୱାଦି ସକାଶୁ ସେହି ପ୍ରବାସ ସ୍ଥାନରେ ନିର୍ବାହ ଚଳିଲା ନାହିଁ।
8 ಹೀಗೆ ಎದೋಮನು ಎಂಬ ಏಸಾವನು ಸೇಯೀರ್ ಪರ್ವತದಲ್ಲಿ ವಾಸವಾಗಿದ್ದನು.
ଏହିରୂପେ ଏଷୌ ସେୟୀର ପର୍ବତରେ ବାସ କଲା; ସେହି ଏଷୌର ଅନ୍ୟତମ ନାମ ଇଦୋମ୍।
9 ಸೇಯೀರ್ ಪರ್ವತದಲ್ಲಿರುವ ಎದೋಮ್ಯರ ತಂದೆ ಏಸಾವನ ವಂಶಾವಳಿಗಳು ಇವೇ:
ଆଉ ସେୟୀର ପର୍ବତସ୍ଥ ଇଦୋମୀୟମାନଙ୍କର ପୂର୍ବପୁରୁଷ ଏଷୌର ବଂଶାବଳୀ।
10 ಏಸಾವನ ಪುತ್ರರ ಹೆಸರುಗಳು ಯಾವುವೆಂದರೆ: ಏಸಾವನ ಹೆಂಡತಿಯಾಗಿರುವ ಆದಾ ಎಂಬಾಕೆಯ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿ ಬಾಸೆಮತಳ ಮಗ ರೆಯೂವೇಲನು.
ଏଷୌର ସନ୍ତାନମାନଙ୍କର ନାମ ଏହି। ଏଷୌର ଆଦା ନାମ୍ନୀ ଭାର୍ଯ୍ୟାର ପୁତ୍ର ଇଲୀଫସ୍ ଓ ବାସମତ୍ ନାମ୍ନୀ ଭାର୍ଯ୍ୟାର ପୁତ୍ର ରୁୟେଲ।
11 ಎಲೀಫಜನ ಮಕ್ಕಳು ಯಾರೆಂದರೆ: ತೇಮಾನ್, ಓಮಾರ್, ಚೆಫೋ, ಗತಾಮ್, ಕೆನಜ್.
ପୁଣି, ଇଲୀଫସ୍ର ପୁତ୍ର ତୈମନ୍ ଓ ଓମାର୍ ଓ ସଫୋ ଓ ଗୟିତମ୍ ଓ କନସ୍।
12 ತಿಮ್ನಾಳು ಏಸಾವನ ಮಗ ಎಲೀಫಜನಿಗೆ ಉಪಪತ್ನಿಯಾಗಿದ್ದು, ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾ ಎಂಬಾಕೆಯ ಪುತ್ರರು ಇವರೇ.
ପୁଣି, ଏଷୌର ପୁତ୍ର ଇଲୀଫସ୍ର ତିମ୍ନା ନାମ୍ନୀ ଏକ ଉପପତ୍ନୀ ଥିଲା, ସେ ଇଲୀଫସ୍ ଦ୍ଵାରା ଅମାଲେକକୁ ପ୍ରସବ କଲା; ଏମାନେ ଏଷୌର ପତ୍ନୀ ଆଦାର ସନ୍ତାନ।
13 ರೆಯೂವೇಲನ ಮಕ್ಕಳು ಯಾರೆಂದರೆ: ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ, ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
ରୁୟେଲର ପୁତ୍ର ନହତ୍ ଓ ସେରହ ଓ ଶମ୍ମ ଓ ମିସା, ଏମାନେ ଏଷୌର ଭାର୍ଯ୍ୟା ବାସମତ୍ର ସନ୍ତାନ।
14 ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀಬಾಮಳ ಪುತ್ರರು ಯಾರೆಂದರೆ: ಆಕೆಯು ಏಸಾವನಿಗೆ ಯೆಯೂಷ್, ಯಳಾಮ್ ಹಾಗೂ ಕೋರಹ ಇವರನ್ನು ಹೆತ್ತಳು.
ପୁଣି, ସିବୀୟୋନ୍ର ପୌତ୍ରୀ ଅନାର କନ୍ୟା ଯେ ଅହଲୀବାମା, ଏଷୌର ଭାର୍ଯ୍ୟା ଥିଲା, ତାହାର ସନ୍ତାନ ଯିୟୂଶ୍ ଓ ଯାଲମ୍ ଓ କୋରହ।
15 ಏಸಾವನ ಪುತ್ರರ ಮುಖಂಡರು ಯಾರೆಂದರೆ: ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ ತೇಮಾನ್, ಓಮಾರ್, ಚೆಫೋ, ಕೆನಜ್,
ଏଷୌର ସନ୍ତାନମାନଙ୍କ ରାଜାବଳୀ। ଏଷୌର ଜ୍ୟେଷ୍ଠ ପୁତ୍ର ଯେ ଇଲୀଫସ୍, ତାହାର ପୁତ୍ର ରାଜା ତୈମନ୍ ଓ ରାଜା ଓମାର୍ ଓ ରାଜା ସଫୋ ଓ ରାଜା କନସ୍
16 ಕೋರಹ, ಗತಾಮ್, ಅಮಾಲೇಕ್, ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾ ಎಂಬಾಕೆಯ ಮೊಮ್ಮಕ್ಕಳು.
ଓ ରାଜା କୋରହ ଓ ରାଜା ଗୟିତମ୍ ଓ ରାଜା ଅମାଲେକ୍; ଇଦୋମ ଦେଶରେ ଇଲୀଫସ୍ ବଂଶୀୟ ଏହି ରାଜଗଣ ଆଦାର ସନ୍ତାନ ଥିଲେ।
17 ಏಸಾವನ ಮಗ ರೆಯೂವೇಲನ ಪುತ್ರರು ಯಾರೆಂದರೆ: ನಹತ್, ಜೆರಹ, ಶಮ್ಮಾ ಹಾಗೂ ಮಿಜ್ಜಾ; ಎದೋಮ್ ದೇಶದಲ್ಲಿದ್ದ ರೆವುಯೇಲನಿಂದ ಬಂದ ಮುಖಂಡರು ಇವರೇ. ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
ଏଷୌର ପୁତ୍ର ରୁୟେଲର ସନ୍ତାନ ରାଜା ନହତ୍ ଓ ରାଜା ସେରହ ଓ ରାଜା ଶମ୍ମ ଓ ରାଜା ମିସା; ଇଦୋମ ଦେଶରେ ରୁୟେଲ ବଂଶୀୟ ଏହି ରାଜାମାନେ ଏଷୌର ଭାର୍ଯ୍ୟା ବାସମତ୍ର ସନ୍ତାନ ଥିଲେ।
18 ಏಸಾವನ ಹೆಂಡತಿ ಒಹೊಲೀಬಾಮಳ ಪುತ್ರರು ಯಾರೆಂದರೆ: ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ. ಇವರು ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳಿಂದ ಬಂದ ಮುಖಂಡರು.
ପୁଣି, ଏଷୌର ଭାର୍ଯ୍ୟା ଅହଲୀବାମାର ସନ୍ତାନ ରାଜା ଯିୟୂଶ୍ ଓ ରାଜା ଯାଲମ୍ ଓ ରାଜା କୋରହ; ଅନାର କନ୍ୟା ଯେ ଅହଲୀବାମା, ଏଷୌର ଭାର୍ଯ୍ୟା ଥିଲା, ଏମାନେ ତାହାର ସନ୍ତାନ।
19 ಇವರು ಎದೋಮ್ ಎಂಬ ಏಸಾವನ ಪುತ್ರರು. ಇವರು ಮುಖಂಡರಾಗಿದ್ದರು.
ଏମାନେ ଏଷୌର, ଅର୍ଥାତ୍, ଇଦୋମର ସନ୍ତାନ ଓ ଏମାନେ ସେମାନଙ୍କର ରାଜା।
20 ದೇಶದಲ್ಲಿ ವಾಸಿಸುತ್ತಿದ್ದ ಹೋರಿಯನಾದ ಸೇಯೀರನ ಪುತ್ರರು ಯಾರೆಂದರೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
(ପୂର୍ବକାଳର) ସେହି ଦେଶ ନିବାସୀ ହୋରୀୟ ସେୟୀରର ସନ୍ତାନ ଲୋଟନ୍ ଓ ଶୋବଲ୍ ଓ ସିବୀୟୋନ୍ ଓ ଅନା
21 ದೀಶೋನ್, ಏಚೆರ್, ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯೀರನ ಮಕ್ಕಳಾದ ಹೋರಿಯರ ಮುಖಂಡರು.
ଓ ଦିଶୋନ୍ ଓ ଏତ୍ସର ଓ ଦୀଶନ୍; ସେୟୀରର ଏହି ପୁତ୍ରଗଣ ଇଦୋମ ଦେଶର ହୋରୀୟ ବଂଶଜ ରାଜା ଥିଲେ।
22 ಲೋಟಾನನ ಪುತ್ರರು ಯಾರೆಂದರೆ: ಹೋರಿ ಮತ್ತು ಹೋಮಾಮ್. ಲೋಟಾನನಿಗೆ ತಿಮ್ನಾ ಎಂಬ ಸಹೋದರಿ ಇದ್ದಳು.
ଲୋଟନ୍ର ପୁତ୍ର ହୋରି ଓ ହେମମ୍, ପୁଣି, ଲୋଟନ୍ର ତିମ୍ନା ନାମ୍ନୀ ଭଗିନୀ ଥିଲା।
23 ಶೋಬಾಲನ ಮಕ್ಕಳು ಯಾರೆಂದರೆ: ಅಲ್ವಾನ್, ಮಾನಹತ್, ಏಬಾಲ್, ಶೆಫೋ ಮತ್ತು ಓನಾಮ್.
ପୁଣି, ଶୋବଲ୍ର ପୁତ୍ରଗଣ ଅବଲନ୍ ଓ ମାନହତ୍ ଓ ଏବଲ୍ ଓ ଶଫୋ ଓ ଓନମ୍।
24 ಸಿಬೆಯೋನನ ಮಕ್ಕಳು: ಅಯ್ಯಾಹ ಮತ್ತು ಅನಾಹ ಎಂಬುವರು. ತನ್ನ ತಂದೆ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಕಾಡಿನಲ್ಲಿ ಬಿಸಿನೀರಿನ ಒರತೆಗಳನ್ನು ಕಂಡುಕೊಂಡವನೂ ಅರಣ್ಯದಲ್ಲಿ ಹೇಸರಗತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ.
ପୁଣି, ସିବୀୟୋନ୍ର ପୁତ୍ର ଅୟା ଓ ଅନା; ଏହି ଅନା ଆପଣା ପିତା ସିବୀୟୋନ୍ର ଗଧ ଚରାଇବା ସମୟରେ ପ୍ରାନ୍ତରରେ ଉଷ୍ଣ ଜଳର ଝର ଆବିଷ୍କାର କଲା।
25 ಅನಾಹನ ಮಕ್ಕಳು ಯಾರೆಂದರೆ: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.
ସେହି ଅନାର ପୁତ୍ର ଦିଶୋନ୍ ଓ କନ୍ୟା ଅହଲୀବାମା।
26 ದೀಶೋನನ ಮಕ್ಕಳು ಯಾರೆಂದರೆ: ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
ପୁଣି, ଦିଶୋନ୍ର ପୁତ୍ର ହିମ୍ଦନ୍ ଓ ଇଶବନ୍ ଓ ଯିତ୍ରନ୍ ଓ କରାନ୍।
27 ಏಚೆರನ ಮಕ್ಕಳು ಯಾರೆಂದರೆ: ಬಿಲ್ಹಾನ್, ಜಾವಾನ್ ಮತ್ತು ಆಕಾನ್.
ଏତ୍ସରର ପୁତ୍ର ବିଲ୍ହନ୍ ଓ ସାବନ୍ ଓ ଆକନ୍।
28 ದೀಶಾನನ ಮಕ್ಕಳು ಯಾರೆಂದರೆ: ಊಚ್ ಮತ್ತು ಅರಾನ್.
ପୁଣି, ଦୀଶନ୍ର ପୁତ୍ର ଊଷ୍ ଓ ଅରାନ୍।
29 ಹೋರಿಯರಿಂದ ಬಂದ ಮುಖಂಡರು ಯಾರೆಂದರೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
ହୋରୀୟ ବଂଶଜ ରାଜା ଏହି; ରାଜା ଲୋଟନ୍ ଓ ରାଜା ଶୋବଲ୍ ଓ ରାଜା ସିବୀୟୋନ୍ ଓ ରାଜା ଅନା
30 ದೀಶೋನ್, ಏಚೆರ್, ದೀಶಾನ್. ಹೋರಿಯರಿಂದ ಹುಟ್ಟಿದ ಸೇಯೀರ್ ದೇಶದಲ್ಲಿ ಮುಖಂಡರು ಇವರೇ.
ଓ ରାଜା ଦିଶୋନ୍ ଓ ରାଜା ଏତ୍ସର ଓ ରାଜା ଦୀଶନ୍। ଏମାନେ ସେୟୀର ଦେଶର ହୋରୀୟ ବଂଶଜ ରାଜା ଥିଲେ।
31 ಇಸ್ರಾಯೇಲರನ್ನು ಯಾವ ಅರಸನೂ ಆಳುವುದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
ଆଉ, ଇସ୍ରାଏଲୀୟ ସନ୍ତାନମାନଙ୍କ ଉପରେ କୌଣସି ରାଜା ରାଜତ୍ୱ କରିବା ପୂର୍ବେ ଏହି ରାଜାମାନେ ଇଦୋମ ଦେଶରେ ରାଜ୍ୟ କଲେ।
32 ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು. ಅವನ ಪಟ್ಟಣದ ಹೆಸರು ದಿನ್ಹಾಬಾ.
ବିୟୋରର ବେଲା ନାମକ ପୁତ୍ର ଇଦୋମ୍ ଦେଶରେ ରାଜତ୍ୱ କଲା, ତାହାର ରାଜଧାନୀର ନାମ ଦିନ୍ହାବା।
33 ಬೆಲಗನ ಮರಣದ ನಂತರ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗ ಯೋಬಾಬನು ಉತ್ತರಾಧಿಕಾರಿಯಾದನು.
ବେଲାର ମରଣ ଉତ୍ତାରେ, ତାହା ପଦରେ ବସ୍ରା ନିବାସୀ ସେରହର ପୁତ୍ର ଯୋବବ୍ ରାଜତ୍ୱ କଲା।
34 ಯೋಬಾಬನ ಮರಣದ ನಂತರ ಅವನ ಬದಲಾಗಿ ತೇಮಾನೀಯರ ದೇಶದ ಹುಷಾಮನು ಅರಸನಾದನು.
ପୁଣି, ଯୋବବ୍ର ମରଣ ଉତ୍ତାରେ ତୈମନ୍ ଦେଶୀୟ ହୂଶମ୍ ତାହା ପଦରେ ରାଜତ୍ୱ କଲା।
35 ಹುಷಾಮನ ಮರಣದ ನಂತರ ಅವೀತದ ಬೆದದನ ಮಗ ಹದದ ಅರಸನಾದನು. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್.
ହୂଶମ୍ର ମରଣ ଉତ୍ତାରେ, ବଦଦର ପୁତ୍ର ଯେ ହଦଦ୍ ମୋୟାବ କ୍ଷେତ୍ରରେ ମିଦୀୟନକୁ ଜୟ କଲା, ସେ ତାହା ପଦରେ ରାଜତ୍ୱ କଲା; ତାହାର ରାଜଧାନୀର ନାମ ଅବୀତ୍।
36 ಹದದ ಮೃತನಾದ ಮೇಲೆ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಅರಸನಾದನು.
ହଦଦ୍ର ମରଣ ଉତ୍ତାରେ ମସ୍ରେକା ନିବାସୀ ସମ୍ଳ ତାହା ପଦରେ ରାଜତ୍ୱ କଲା।
37 ಸಮ್ಲಾಹನ ಮರಣದ ನಂತರ ಅವನ ಬದಲಾಗಿ ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.
ପୁଣି, ସମ୍ଳର ମରଣ ଉତ୍ତାରେ (ଫରାତ୍) ନଦୀର ନିକଟସ୍ଥ ରହୋବୋତ୍ ନିବାସୀ ଶୌଲ ତାହା ପଦରେ ରାଜତ୍ୱ କଲା।
38 ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ ಹಾನಾನ್ ಅರಸನಾದನು.
ଶୌଲର ମରଣ ଉତ୍ତାରେ, ଅକ୍ବୋରର ପୁତ୍ର ବାଲ୍ହାନନ୍ ତାହା ପଦରେ ରାଜତ୍ୱ କଲା।
39 ಅಕ್ಬೋರನ ಮಗ ಬಾಳ್ ಹಾನಾನನು ಮೃತನಾದ ಮೇಲೆ ಅವನ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾವು. ಅವನ ಹೆಂಡತಿಯ ಹೆಸರು ಮೆಹೇಟಬೇಲ್. ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
ପୁଣି, ଅକ୍ବୋରର ପୁତ୍ର ବାଲ୍ହାନନ୍ର ମରଣ ଉତ୍ତାରେ, ହଦର ତାହା ପଦରେ ରାଜତ୍ୱ କଲା; ତାହାର ରାଜଧାନୀର ନାମ ପାଉ ଓ ତାହାର ଭାର୍ଯ୍ୟାର ନାମ ମହେଟବେଲ ଥିଲା; ସେ ମଟ୍ରେଦର ପୁତ୍ରୀ ଓ ମେଷାହବର ପୌତ୍ରୀ।
40 ಕುಟುಂಬ, ಸ್ಥಳ, ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವುವೆಂದರೆ: ತಿಮ್ನಾ, ಅಲ್ವಾ, ಯೆತೇತ,
ଏଷୌଠାରୁ ଉତ୍ପନ୍ନ, ପୁଣି, ଗୋଷ୍ଠୀ ଓ ସ୍ଥାନ ଓ ନାମ ଭେଦାନୁସାରେ ଯେଉଁ ଯେଉଁ ରାଜା ଥିଲେ, ସେମାନଙ୍କ ନାମାବଳୀ; ଯଥା, ରାଜା ତିମ୍ନା ଓ ରାଜା ଅଳ୍ବା ଓ ରାଜା ଯିଥେତ୍।
41 ಒಹೊಲೀಬಾಮ, ಏಲಾ, ಪೀನೋನ್,
ଓ ରାଜା ଅହଲୀବାମା ଓ ରାଜା ଏଲା ଓ ରାଜା ପୀନୋନ୍
42 ಕೆನಜ್, ತೇಮಾನ್, ಮಿಬ್ಜಾರ,
ଓ ରାଜା କନସ୍ ଓ ରାଜା ତୈମନ୍ ଓ ରାଜା ମିବ୍ସର୍
43 ಮಗ್ದೀಯೇಲ್ ಮತ್ತು ಗೀರಾಮ್ ಇವರೇ ತಮ್ಮ ನಿವಾಸಸ್ಥಳಗಳ ಪ್ರಕಾರ ಎದೋಮ್ಯರ ಮುಖಂಡರು. ಎದೋಮ್ಯರ ತಂದೆ ಏಸಾವನು ವಂಶಾವಳಿ ಇದೇ.
ଓ ରାଜା ମଗ୍ଦୀୟେଲ ଓ ରାଜା ଈରମ୍; ଏମାନେ ଆପଣା ଆପଣା ଅଧିକୃତ ଦେଶରେ ବସତି ସ୍ଥାନାନୁସାରେ ଇଦୋମର ରାଜଗଣ ଥିଲେ। ଇଦୋମୀୟମାନଙ୍କ ଆଦିପୁରୁଷ ଏଷୌର ବୃତ୍ତାନ୍ତ ସମାପ୍ତ।