< ಆದಿಕಾಂಡ 31 >

1 ಲಾಬಾನನ ಮಕ್ಕಳು, “ನಮ್ಮ ತಂದೆಗೆ ಇದ್ದವುಗಳನ್ನೆಲ್ಲಾ ಯಾಕೋಬನು ತೆಗೆದುಕೊಂಡು, ನಮ್ಮ ತಂದೆಗಿದ್ದವುಗಳಿಂದ ಈ ಘನತೆಯನ್ನೆಲ್ಲಾ ಪಡೆದಿದ್ದಾನೆ,” ಎಂದು ಹೇಳುವ ಮಾತುಗಳನ್ನು ಯಾಕೋಬನು ಕೇಳಿದನು.
روزی یعقوب شنید که پسران لابان می‌گفتند: «یعقوب همهٔ دارایی پدر ما را گرفته و از اموال پدر ماست که اینچنین ثروتمند شده است.»
2 ಇದಲ್ಲದೆ ಯಾಕೋಬನು ಲಾಬಾನನ ಮುಖವನ್ನು ನೋಡಿದಾಗ, ಅದು ತನ್ನ ಕಡೆಗೆ ಮೊದಲು ಇದ್ದ ಹಾಗೆ ಇರಲಿಲ್ಲ.
یعقوب به‌زودی دریافت که رفتار لابان با وی مثل سابق دوستانه نیست.
3 ಆಗ ಯೆಹೋವ ದೇವರು ಯಾಕೋಬನಿಗೆ, “ನಿನ್ನ ತಂದೆಗಳ ದೇಶಕ್ಕೂ, ನಿನ್ನ ಬಂಧುಗಳ ಬಳಿಗೂ ಹಿಂದಿರುಗಿ ಹೋಗು. ನಾನು ನಿನ್ನ ಸಂಗಡ ಇರುವೆನು,” ಎಂದರು.
در این موقع خداوند به یعقوب فرمود: «به سرزمین پدرانت و نزد خویشاوندانت بازگرد و من با تو خواهم بود.»
4 ಯಾಕೋಬನು ರಾಹೇಲಳನ್ನೂ, ಲೇಯಳನ್ನೂ ಹೊಲದಲ್ಲಿದ್ದ ತನ್ನ ಮಂದೆಯ ಬಳಿಗೆ ಕರೆಸಿದನು.
پس یعقوب، برای راحیل و لیه پیغام فرستاد که به صحرا، جایی که گله او هست، بیایند تا با آنها صحبت کند.
5 ಅವರಿಗೆ, “ನಿಮ್ಮ ತಂದೆಯ ಮುಖವು ಮೊದಲು ನನ್ನ ಕಡೆಗೆ ಇದ್ದ ಹಾಗೆ ಈಗ ಇಲ್ಲದಿರುವುದನ್ನು ನಾನು ನೋಡಿದ್ದೇನೆ. ಆದರೆ ನನ್ನ ತಂದೆಯ ದೇವರು ನನ್ನ ಕಡೆಗೆ ಇದ್ದಾರೆ.
وقتی آمدند یعقوب به آنها گفت: «من متوجه شده‌ام که رفتار پدر شما با من مثل سابق دوستانه نیست، ولی خدای پدرم مرا ترک نکرده است.
6 ನಾನು ಪೂರ್ಣಬಲದಿಂದ ನಿಮ್ಮ ತಂದೆಯ ಸೇವೆ ಮಾಡಿದ್ದು ನಿಮಗೆ ತಿಳಿದಿದೆ.
شما می‌دانید که با چه کوشش طاقت فرسایی به پدرتان خدمت کرده‌ام،
7 ಆದರೆ ನಿಮ್ಮ ತಂದೆಯು ನನಗೆ ವಂಚನೆಮಾಡಿ, ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದನು. ಆದಾಗ್ಯೂ ದೇವರು ಅವನಿಂದ ನನಗೆ ಕೇಡು ಮಾಡಗೊಡಿಸಲಿಲ್ಲ.
اما او بارها حق مرا پایمال کرده و مرا فریب داده است. ولی خدا نگذاشت او به من ضرری برساند؛
8 ನಿಮ್ಮ ತಂದೆ ನನಗೆ, ‘ಚುಕ್ಕೆಯುಳ್ಳದ್ದು ನಿನಗೆ ಸಂಬಳವಾಗಿರಲಿ,’ ಅಂದಾಗ, ಮಂದೆಯೆಲ್ಲಾ ಚುಕ್ಕೆಯುಳ್ಳದ್ದನ್ನೇ ಈಯಿತು. ಅವನು, ‘ರೇಖೆಯುಳ್ಳದ್ದು ನಿನಗೆ ಸಂಬಳವಾಗಿರಲಿ,’ ಎಂದಾಗ, ಮಂದೆಯೆಲ್ಲಾ ರೇಖೆಯುಳ್ಳದ್ದನ್ನೇ ಈಯಿತು.
زیرا هر وقت پدرتان می‌گفت:”حیواناتِ خالدار از آن تو باشند،“تمامی گله بره‌های خالدار می‌آوردند و موقعی که از این فکر منصرف می‌شد و می‌گفت:”تمام خط‌دارها مال تو باشند،“آنگاه تمام گله بره‌های خط‌دار می‌زاییدند!
9 ಹೀಗೆ ದೇವರು ನಿಮ್ಮ ತಂದೆಯ ಪಶುಗಳನ್ನು ತೆಗೆದು, ನನಗೆ ಕೊಟ್ಟಿದ್ದಾರೆ.
بدین طریق خدا اموال پدر شما را گرفته و به من داده است.
10 “ಇದಲ್ಲದೆ ಕುರಿಗಳು ಸಂಗಮ ಮಾಡುವಾಗ, ಸ್ವಪ್ನದಲ್ಲಿ ನಾನು ನನ್ನ ಕಣ್ಣುಗಳನ್ನೆತ್ತಿ ನೋಡಲಾಗಿ, ಕುರಿಗಳ ಮೇಲೆ ಏರುವ ಟಗರುಗಳು ಚುಕ್ಕೆ, ಮಚ್ಚೆ, ರೇಖೆಗಳುಳ್ಳವುಗಳಾಗಿದ್ದವು.
«هنگامی که فصل جفتگیری گله فرا رسید، در خواب دیدم قوچهایی که با میشها جفتگیری می‌کردند خط‌دار، خالدار و ابلق بودند.
11 ದೇವದೂತನು ಸ್ವಪ್ನದಲ್ಲಿ ನನಗೆ, ‘ಯಾಕೋಬನೇ’ ಎಂದನು. ಅದಕ್ಕೆ ನಾನು, ‘ಇಲ್ಲಿ ಇದ್ದೇನೆ,’ ಎಂದೆನು.
آنگاه فرشتۀ خدا در خواب به من گفت:”یعقوب!“و من گفتم:”بله، امر بفرما!“
12 ಅವನು ನನಗೆ, ‘ನಿನ್ನ ಕಣ್ಣುಗಳನ್ನೆತ್ತಿ ಕುರಿಗಳನ್ನೇರುವ ಎಲ್ಲಾ ಟಗರುಗಳನ್ನು ನೋಡು. ಅವು ಚುಕ್ಕೆ, ಮಚ್ಚೆ, ರೇಖೆಯೂ ಉಳ್ಳವುಗಳಾಗಿವೆ. ಏಕೆಂದರೆ ಲಾಬಾನನು ನಿನಗೆ ಮಾಡಿದ್ದನ್ನೆಲ್ಲಾ ಕಂಡಿದ್ದೇನೆ.
گفت:”ببین، تمام قوچهایی که با میشها جفتگیری می‌کنند خط‌دار، خالدار و ابلق هستند، زیرا از آنچه که لابان به تو کرده است آگاه هستم.
13 ನೀನು ಸ್ತಂಭವನ್ನು ಅಭಿಷೇಕಿಸಿ, ನನಗೆ ಪ್ರಮಾಣ ಮಾಡಿದ ಬೇತೇಲಿನ ದೇವರು ನಾನೇ. ಈಗ ಎದ್ದು ಈ ದೇಶದಿಂದ ಹೊರಟು, ನಿನ್ನ ಬಂಧುಗಳ ದೇಶಕ್ಕೆ ಹಿಂದಿರುಗಿ ಹೋಗು,’ ಎಂದು ಹೇಳಿದ್ದಾರೆ,” ಎಂದನು.
من همان خدایی هستم که در بیت‌ئیل به تو ظاهر شدم، جایی که ستونی از سنگ بر پا نموده بر آن روغن ریختی و نذر کردی که مرا پیروی کنی. اکنون این دیار را ترک کن و به وطن خود بازگرد.“»
14 ಆಗ ರಾಹೇಲಳು, ಲೇಯಳು ಅವನಿಗೆ, “ನಮ್ಮ ತಂದೆಯ ಮನೆಯಲ್ಲಿ ಇನ್ನೇನಾದರೂ ಭಾಗವೂ, ಬಾಧ್ಯತೆಯೂ ಇದೆಯೋ?
راحیل و لیه در جواب یعقوب گفتند: «در هر حال چیزی از ثروت پدرمان به ما نخواهد رسید،
15 ಅವನು ನಮ್ಮನ್ನು ಹೊರಗಿನವರಂತೆ ಎಣಿಸಿದ್ದಾನಲ್ಲಾ. ಅವನು ನಮ್ಮನ್ನು ಮಾರಿ, ನಮ್ಮ ಹಣವನ್ನೂ ನುಂಗೇ ಬಿಟ್ಟನಲ್ಲಾ.
زیرا او با ما مثل بیگانه رفتار کرده است. او ما را فروخته و پولی را که از این بابت دریافت داشته، تماماً تصاحب کرده است.
16 ಆದ್ದರಿಂದ ದೇವರು ನಮ್ಮ ತಂದೆಯಿಂದ ತೆಗೆದುಕೊಂಡ ಐಶ್ವರ್ಯವೆಲ್ಲಾ ನಮ್ಮದು, ನಮ್ಮ ಮಕ್ಕಳದು. ಹಾಗಾದರೆ ಈಗ ದೇವರು ನಿನಗೆ ಹೇಳಿದ್ದನ್ನೆಲ್ಲಾ ಮಾಡು,” ಎಂದರು.
ثروتی که خدا از اموال پدرمان به تو داده است، به ما و فرزندانمان تعلق دارد. پس آنچه خدا به تو فرموده است انجام بده.»
17 ಆಗ ಯಾಕೋಬನು ಎದ್ದು ತನ್ನ ಮಕ್ಕಳನ್ನೂ, ತನ್ನ ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿ,
روزی هنگامی که لابان برای چیدن پشم گلهٔ خود بیرون رفته بود، یعقوب بدون اینکه او را از قصد خود آگاه سازد، زنان و فرزندان خود را بر شترها سوار کرده، تمام گله‌ها و اموال خود را که در فَدّان‌اَرام فراهم آورده بود برداشت تا نزد پدرش اسحاق به زمین کنعان برود. پس با آنچه که داشت گریخت. او با خانواده از رود فرات عبور کرد و به سوی کوهستان جلعاد پیش رفت. (در ضمن راحیل بُتهای خاندان پدرش را دزدید و با خود برد.)
18 ತನ್ನ ಎಲ್ಲಾ ಪಶುಗಳನ್ನೂ, ತಾನು ಸಂಪಾದಿಸಿದ ಎಲ್ಲಾ ಸಂಪತ್ತನ್ನೂ, ಪದ್ದನ್ ಅರಾಮಿನಲ್ಲಿ ತಾನು ಸಂಪಾದಿಸಿದ ಪಶುಗಳನ್ನೂ ಕಾನಾನ್ ದೇಶದಲ್ಲಿದ್ದ ತನ್ನ ತಂದೆ ಇಸಾಕನ ಬಳಿಗೆ ತೆಗೆದುಕೊಂಡು ಹೊರಟನು.
19 ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕೆ ಹೋಗಿದ್ದನು. ಆಗ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
20 ಆದರೆ ಯಾಕೋಬನು ತಾನು ಹೋಗುವುದನ್ನು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ವಂಚಿಸಿ ಓಡಿಹೋದನು.
21 ಅವನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖವಾಗಿ ಯೂಫ್ರೇಟೀಸ್ ನದಿಯನ್ನು ದಾಟಿದನು.
22 ಯಾಕೋಬನು ಓಡಿಹೋದನೆಂದು ಮೂರನೆಯ ದಿವಸದಲ್ಲಿ ಲಾಬಾನನಿಗೆ ತಿಳಿಯಿತು.
سه روز بعد، به لابان خبر دادند که یعقوب فرار کرده است.
23 ಆಗ ಅವನು ತನ್ನ ಬಂಧುಗಳನ್ನು ಕರೆದುಕೊಂಡು, ಅವನನ್ನು ಬೆನ್ನಟ್ಟಿ, ಏಳು ದಿನ ಪ್ರಯಾಣಮಾಡಿ, ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.
پس او چند نفر را با خود برداشت و با شتاب به تعقیب یعقوب پرداخت و پس از هفت روز در کوهستان جلعاد به او رسید.
24 ಆ ರಾತ್ರಿ ದೇವರು ಸ್ವಪ್ನದಲ್ಲಿ ಅರಾಮಿನವನಾದ ಲಾಬಾನನ ಬಳಿಗೆ ಬಂದು ಅವನಿಗೆ, “ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು,” ಎಂದರು.
همان شب، خدا در خواب بر لابان ظاهر شد و فرمود: «مراقب باش حرفی به یعقوب نزنی.»
25 ತರುವಾಯ ಲಾಬಾನನು ಯಾಕೋಬನನ್ನು ಸಂಧಿಸಿದಾಗ, ಯಾಕೋಬನು ಗಿಲ್ಯಾದ್ ಪರ್ವತದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹ ಅಲ್ಲಿಯೇ ಗುಡಾರವನ್ನು ಹಾಕಿಸಿದ್ದನು.
یعقوب در کوهستانِ جلعاد خیمه زده بود که لابان با افرادش به او رسید. او نیز در آنجا خیمۀ خود را بر پا کرد.
26 ಲಾಬಾನನು ಯಾಕೋಬನಿಗೆ, “ನೀನು ಏನು ಮಾಡಿದೆ? ನನಗೆ ತಿಳಿಸದೆ ಮೋಸಮಾಡಿದ್ದೀಯೆ ಮತ್ತು ನನ್ನ ಪುತ್ರಿಯರನ್ನು ಯುದ್ಧದಲ್ಲಿ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಹೋದೆಯಲ್ಲಾ.
لابان از یعقوب پرسید: «چرا مرا فریب دادی و دختران مرا مانند اسیران جنگی برداشتی و رفتی؟
27 ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಹೋದೆ? ಏಕೆ ಮೋಸಮಾಡಿದೆ? ನನಗೆ ತಿಳಿಸಿದ್ದರೆ ಸಂತೋಷದಿಂದ ಹಾಡು, ತಾಳ, ವೀಣೆಗಳ ಸಂಗೀತದೊಂದಿಗೆ ನಿನ್ನನ್ನು ಕಳುಹಿಸುತ್ತಿದ್ದೆನು.
چرا به من خبر ندادی تا جشنی برایتان بر پا کنم و با ساز و آواز شما را روانه سازم؟
28 ಆದರೆ ನೀನು ನನ್ನ ಮೊಮ್ಮಕ್ಕಳಿಗೂ, ನನ್ನ ಹೆಣ್ಣು ಮಕ್ಕಳಿಗೂ ಮುದ್ದು ಕೊಡುವುದಕ್ಕೂ ಬಿಡಲಿಲ್ಲ. ನೀನು ಮಾಡಿದ್ದು ಬುದ್ಧಿಹೀನ ಕೆಲಸವೇ ಸರಿ.
لااقل می‌گذاشتی نوه‌ها و دخترانم را ببوسم و با آنها خداحافظی کنم! کار احمقانه‌ای کردی!
29 ನಿನಗೆ ಕೇಡು ಮಾಡುವುದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ, ‘ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಹೇಳದಂತೆ ಎಚ್ಚರವಾಗಿರು,’ ಎಂದು ಹೇಳಿದರು.
قدرت آن را دارم که به تو صدمه برسانم، ولی شبِ گذشته خدای پدرت بر من ظاهر شده، گفت:”مراقب باش حرفی به یعقوب نزنی.“
30 ಈಗ ನೀನು ನಿನ್ನ ತಂದೆಯ ಮನೆಯನ್ನು ಬಹಳವಾಗಿ ಹಾರೈಸಿದ್ದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ?” ಎಂದನು.
از همهٔ اینها گذشته، تو که می‌خواستی بروی و اینقدر آرزو داشتی که به زادگاه خویش بازگردی، دیگر چرا بُتهای مرا دزدیدی؟»
31 ಅದಕ್ಕೆ ಯಾಕೋಬನು ಉತ್ತರವಾಗಿ ಲಾಬಾನನಿಗೆ, “ನೀನು ನಿನ್ನ ಪುತ್ರಿಯರನ್ನು ನನ್ನಿಂದ ಬಲಾತ್ಕಾರದಿಂದ ಹಿಂದಕ್ಕೆ ತೆಗೆದುಕೊಳ್ಳುವೆ ಎಂದು ಭಯಪಟ್ಟೆನು.
یعقوب در جواب وی گفت: «علّت فرار پنهانی من این بود که می‌ترسیدم به زور دخترهایت را از من پس بگیری.
32 ಆದರೆ ಯಾರ ಬಳಿಯಲ್ಲಿ ನಿನ್ನ ದೇವರುಗಳು ಸಿಕ್ಕುವುವೋ ಅವರು ಸಾಯಲಿ. ನನ್ನ ಬಳಿಯಲ್ಲಿ ನಿನ್ನದೇನಾದರೂ ಇದ್ದರೆ, ನಮ್ಮ ಬಂಧುಗಳ ಮುಂದೆ ವಿಚಾರಿಸಿ ಅದನ್ನು ತೆಗೆದುಕೋ,” ಎಂದನು. ಆದರೆ ರಾಹೇಲಳು ಅವುಗಳನ್ನು ಕದ್ದುಕೊಂಡದ್ದು ಯಾಕೋಬನಿಗೆ ತಿಳಿದಿರಲಿಲ್ಲ.
اما در مورد بُتهایت، هر که از ما آنها را دزدیده باشد، کُشته شود. اگر از مال خودت چیزی در اینجا پیدا کردی، در حضور این مردان قسم می‌خورم آن را بدون چون و چرا به تو پس بدهم.» (یعقوب نمی‌دانست که راحیل بُتها را با خود آورده است.)
33 ಆಗ ಲಾಬಾನನು ಯಾಕೋಬನ ಗುಡಾರದಲ್ಲಿಯೂ, ಲೇಯಳ ಗುಡಾರದಲ್ಲಿಯೂ, ಆ ಇಬ್ಬರು ದಾಸಿಯರ ಗುಡಾರಗಳಲ್ಲಿಯೂ ಹೋಗಿ ಹುಡುಕಿದರೂ, ಅವುಗಳನ್ನು ಕಾಣಲಿಲ್ಲ. ಲೇಯಳ ಗುಡಾರದಿಂದ ಹೊರಟು ರಾಹೇಲಳ ಗುಡಾರದೊಳಗೆ ಹೋದನು.
لابان به جستجو پرداخت. اول خیمهٔ یعقوب، بعد خیمهٔ لیه و سپس خیمهٔ کنیزان یعقوب را جستجو کرد، ولی بُتها را نیافت. سرانجام به خیمهٔ راحیل رفت.
34 ಆದರೆ ರಾಹೇಲಳು ವಿಗ್ರಹಗಳನ್ನು ತೆಗೆದುಕೊಂಡು ಒಂಟೆಯ ಸಾಮಗ್ರಿಯಲ್ಲಿಟ್ಟು, ಅದರ ಮೇಲೆ ಕುಳಿತುಕೊಂಡಳು. ಲಾಬಾನನು ಗುಡಾರವನ್ನೆಲ್ಲಾ ಹುಡುಕಿದರೂ, ಅವನು ಅವುಗಳನ್ನು ಕಾಣಲಿಲ್ಲ.
راحیل که بُتها را دزدیده بود، آنها را زیر جهاز شتر پنهان نموده، روی آن نشسته بود! پس با این که لابان با دقت داخل خیمه را جستجو کرد چیزی پیدا نکرد.
35 ರಾಹೇಲಳು ತನ್ನ ತಂದೆಗೆ, “ಅಪ್ಪಾ, ನಾನು ನಿನ್ನ ಮುಂದೆ ಎದ್ದು ನಿಂತುಕೊಳ್ಳದೇ ಇರುವುದರಿಂದ, ನನ್ನ ಮೇಲೆ ಕೋಪಬಾರದೆ ಇರಲಿ. ಏಕೆಂದರೆ ನಾನು ಮುಟ್ಟಾಗಿದ್ದೇನೆ,” ಎಂದಳು. ಅವನು ಹುಡುಕಿ ಆ ವಿಗ್ರಹಗಳನ್ನು ಕಂಡುಕೊಳ್ಳದೆ ಹೋದನು.
راحیل به پدرش گفت: «پدر، از این که نمی‌توانم در حضور تو بایستم مرا ببخش، چون عادت زنان بر من است.»
36 ಆಗ ಯಾಕೋಬನು ಕೋಪಗೊಂಡು ಲಾಬಾನನೊಂದಿಗೆ ವಾದಿಸಿದನು. ಯಾಕೋಬನು ಉತ್ತರವಾಗಿ ಲಾಬಾನನಿಗೆ, “ನೀನು ನನ್ನನ್ನು ಬೆನ್ನಟ್ಟಿ ಬರುವುದಕ್ಕೆ ನನ್ನ ಅಪರಾಧವೇನು?” ನನ್ನ ಪಾಪವೇನು?
یعقوب دیگر طاقت نیاورد و با عصبانیت به لابان گفت: «چه جرمی مرتکب شده‌ام که مرا اینچنین تعقیب کردی؟
37 ನೀನು ನನ್ನ ಸಲಕರಣೆಗಳನ್ನೆಲ್ಲಾ ಹುಡುಕಿದ ಮೇಲೆ ನಿನ್ನ ಮನೆಯ ಯಾವ ವಸ್ತುಗಳನ್ನು ಕಂಡುಕೊಂಡೆ? ನನಗೂ, ನಿನಗೂ ಬಂಧುಗಳಾಗಿರುವವರ ಮುಂದೆ ಅದನ್ನು ಇಲ್ಲಿ ಇಡು. ಅವರೇ ನಮ್ಮಿಬ್ಬರ ಮಧ್ಯೆ ನ್ಯಾಯತೀರಿಸಲಿ.
حال که تمام اموالم را تفتیش کردی، چه چیزی یافتی؟ اگر از مال خود چیزی یافته‌ای آن را پیش همهٔ مردان خودت و مردان من بیاور تا آنها ببینند و قضاوت کنند که از آن کیست!
38 “ಈ ಇಪ್ಪತ್ತು ವರ್ಷ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಕುರಿಗಳೂ, ಮೇಕೆಗಳೂ ಮರಿ ಹಾಕಲಿಲ್ಲ. ನಿನ್ನ ಕುರಿ ಹೋತಗಳನ್ನು ನಾನು ತಿನ್ನಲಿಲ್ಲ.
در این بیست سال که نزد تو بوده‌ام و از گلهٔ تو مراقبت نموده‌ام، حتی یکی از بچه‌های حیواناتت تلف نشد و هرگز یکی از آنها را نخوردم.
39 ಮೃಗಗಳಿಂದ ಘಾಯವಾದವುಗಳನ್ನು ನಿನ್ನ ಬಳಿಗೆ ತಾರದೆ, ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ, ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡೆ.
اگر حیوان درنده‌ای به یکی از آنها حمله می‌کرد و آن را می‌کشت، حتی بدون این که به تو بگویم، تاوانش را می‌دادم. اگر گوسفندی از گله در روز یا در شب دزدیده می‌شد، مرا مجبور می‌کردی پولش را بدهم.
40 ನನ್ನ ಸ್ಥಿತಿ ಹೀಗೆ ಇತ್ತು: ಹಗಲಲ್ಲಿ ಬಿಸಿಲಿನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು. ನನ್ನ ಕಣ್ಣುಗಳಿಗೆ ನಿದ್ರೆ ತಪ್ಪಿಹೋಯಿತು.
در گرمای سوزان روز و سرمای شدید شب، بدون این که خواب به چشمانم راه دهم، برای تو کار کردم.
41 ನಿನ್ನ ಇಬ್ಬರು ಪುತ್ರಿಯರಿಗಾಗಿ ಹದಿನಾಲ್ಕು ವರ್ಷ, ನಿನ್ನ ಮಂದೆಗಳಿಗೋಸ್ಕರ ಆರು ವರ್ಷ, ಈ ಪ್ರಕಾರ ಇಪ್ಪತ್ತು ವರ್ಷ ನಿನ್ನ ಮನೆಯಲ್ಲಿದ್ದು, ನಿನ್ನ ಸೇವೆ ಮಾಡಿದೆನು. ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದೆ.
آری، بیست سال تمام برای تو زحمت کشیدم، چهارده سال به خاطر دو دخترت و شش سال برای به دست آوردن این گله‌ای که دارم! تو بارها حق مرا پایمال کردی.
42 ನನ್ನ ತಂದೆ ದೇವರೂ, ಅಬ್ರಹಾಮನ ದೇವರೂ, ಇಸಾಕನ ಭಯವೂ ನನ್ನೊಂದಿಗೆ ಇಲ್ಲದೆ ಹೋಗಿದ್ದರೆ, ನಿಶ್ಚಯವಾಗಿ ನೀನು ನನ್ನನ್ನು ಬರಿಗೈಯಿಂದ ಕಳುಹಿಸುತ್ತಿದ್ದೆ. ನನ್ನ ಬಾಧೆಯನ್ನೂ, ನನ್ನ ಕಷ್ಟವನ್ನೂ ದೇವರು ಕಂಡು, ನಿನ್ನೆ ರಾತ್ರಿ ನಿನ್ನನ್ನು ಗದರಿಸಿದ್ದಾರೆ,” ಎಂದನು.
اگر رحمت خدای جدم ابراهیم و هیبت خدای پدرم اسحاق با من نمی‌بود، اکنون مرا تهیدست روانه می‌کردی. ولی خدا مصیبت و زحمات مرا دیده و به همین سبب دیشب بر تو ظاهر شده است.»
43 ಲಾಬಾನನು ಅದಕ್ಕೆ ಉತ್ತರವಾಗಿ ಯಾಕೋಬನಿಗೆ, “ಈ ಪುತ್ರಿಯರು ನನ್ನ ಪುತ್ರಿಯರೇ, ಈ ಮಕ್ಕಳು ನನ್ನ ಮಕ್ಕಳೇ, ಈ ಮಂದೆಯು ನನ್ನ ಮಂದೆಯೇ, ಅಂತು ನೀನು ಕಾಣುವುದೆಲ್ಲಾ ನನ್ನದೇ. ಹಾಗಾದರೆ ನನ್ನ ಪುತ್ರಿಯರಿಗಾಗಲಿ, ಅವರು ಹೆತ್ತ ಮಕ್ಕಳಿಗಾಗಲಿ ನಾನು ಈ ಹೊತ್ತು ಏನು ಮಾಡಲಿ?
لابان گفت: «زنان تو، دختران من و فرزندانت، فرزندان من و گله‌ها و هر آنچه که داری از آن من است. پس امروز چگونه می‌توانم به دختران و نوه‌هایم ضرر برسانم؟
44 ಆದ್ದರಿಂದ ನೀನು ಇಲ್ಲಿ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ, ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ,” ಎಂದನು.
حال بیا با هم عهد ببندیم و از این پس طبق آن عمل کنیم.»
45 ಆಗ ಯಾಕೋಬನು ಒಂದು ಕಲ್ಲನ್ನು ತೆಗೆದುಕೊಂಡು ಸ್ತಂಭವಾಗಿ ನಿಲ್ಲಿಸಿದನು.
پس یعقوب سنگی برداشت و آن را به عنوان نشانهٔ عهد، به صورت ستونی بر پا کرد
46 ಯಾಕೋಬನು ತನ್ನ ಕಡೆಯವರಿಗೆ, “ಕಲ್ಲುಗಳನ್ನು ಕೂಡಿಸಿರಿ,” ಎಂದನು. ಅವರು ಕಲ್ಲುಗಳನ್ನು ತೆಗೆದುಕೊಂಡು ಒಂದು ಕುಪ್ಪೆ ಮಾಡಿದರು. ಅವರು ಆ ಕುಪ್ಪೆಯ ಬಳಿಯಲ್ಲಿ ಕುಳಿತುಕೊಂಡು ಊಟಮಾಡಿದರು.
و به همراهان خود گفت که سنگها گرد آورند و آنها را به صورت توده‌ای بر پا کنند. آنگاه یعقوب و لابان با هم در پای تودهٔ سنگها غذا خوردند.
47 ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು. ಯಾಕೋಬನು ಗಲೇದ್ ಎಂದು ಹೆಸರಿಟ್ಟನು.
آنها آن تودهٔ سنگها را «تودهٔ شهادت» نامیدند که به زبان لابان یجرسهدوتا و به زبان یعقوب جَلعید خوانده می‌شد. لابان گفت: «اگر یکی از ما شرایط این عهد را رعایت نکند، این سنگها علیه او شهادت خواهند داد.»
48 ಆಗ ಲಾಬಾನನು, “ಈ ಕುಪ್ಪೆಯು ಈ ಹೊತ್ತು ನಿನಗೂ ನನಗೂ ಸಾಕ್ಷಿಯಾಗಿದೆ,” ಎಂದನು. ಆದ್ದರಿಂದ ಅದಕ್ಕೆ ಗಲೇದ್ ಎಂದೂ,
49 ಮಿಚ್ಪಾ ಎಂದೂ ಹೆಸರಾಯಿತು. ಏಕೆಂದರೆ, “ನನಗೂ ನಿನಗೂ ಮಧ್ಯದಲ್ಲಿ ನಾವು ಒಬ್ಬರಿಗೊಬ್ಬರು ಅಗಲಿರುವಾಗ ಯೆಹೋವ ದೇವರು ನಮ್ಮನ್ನು ನೋಡಿಕೊಳ್ಳುತ್ತಾ ಇರಲಿ.
همچنین آن تودۀ سنگها را مِصفَه (یعنی «برج دیدبانی») نام نهادند، چون لابان گفت: «وقتی که ما از یکدیگر دور هستیم، خداوند بر ما دیدبانی کند.
50 ನೀನು ನನ್ನ ಪುತ್ರಿಯರನ್ನು ಉಪದ್ರವಪಡಿಸಿದರೆ, ಇಲ್ಲವೆ ನನ್ನ ಮಕ್ಕಳ ಹೊರತಾಗಿ ಬೇರೆ ಹೆಂಡತಿಯರನ್ನು ನೀನು ಪಡೆದರೆ, ಯಾವ ಮನುಷ್ಯನೂ ವಿಚಾರಿಸಲು ಇಲ್ಲದಿದ್ದರೂ ನನಗೂ ನಿನಗೂ ನಡುವೆ ದೇವರೇ ಈ ಒಪ್ಪಂದಕ್ಕೆ ಸಾಕ್ಷಿ,” ಎಂದನು.
اگر تو با دخترانم با خشونت رفتار کنی یا زنان دیگری بگیری، من نخواهم فهمید، ولی خدا آن را خواهد دید.»
51 ಲಾಬಾನನು ಯಾಕೋಬನಿಗೆ, “ನಿನಗೂ ನನಗೂ ಮಧ್ಯೆ ನಾನು ಹಾಕಿಸಿರುವ ಈ ಕುಪ್ಪೆಯನ್ನು ನೋಡು, ಈ ಸ್ತಂಭವನ್ನು ನೋಡು,
لابان افزود: «این توده و این ستون را ببین که آن را میان ما برپا داشته‌ام.
52 ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಹತ್ತಿರ ಬರುವುದಿಲ್ಲ; ನೀನು ಈ ಕುಪ್ಪೆಯನ್ನು ಮತ್ತು ಸ್ತಂಭವನ್ನು ಕೇಡಿಗಾಗಿ ದಾಟುವುದಿಲ್ಲವೆಂಬುದಕ್ಕೆ ಈ ಕುಪ್ಪೆಯೂ ಈ ಸ್ತಂಭವೂ ಸಾಕ್ಷಿಯಾಗಿವೆ.
اینها شاهد عهد ما خواهند بود. هیچ‌یک از ما نباید به قصد حمله به دیگری از این توده بگذرد.
53 ಅಬ್ರಹಾಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು. ಆಗ ಯಾಕೋಬನು ತನ್ನ ತಂದೆ ಇಸಾಕನ ಭಯದ ಮೇಲೆ ಪ್ರಮಾಣ ಮಾಡಿದನು.
خدای جد ما ابراهیم و خدای جد ما ناحور میان ما داوری کند.» سپس یعقوب به هیبت خدای پدرش اسحاق قسم یاد نمود که این عهد را نگه دارد.
54 ಯಾಕೋಬನು ಆ ಬೆಟ್ಟದಲ್ಲಿ ಬಲಿಯನ್ನು ಅರ್ಪಿಸಿ, ಭೋಜನ ಮಾಡುವುದಕ್ಕೆ ತನ್ನ ಬಂಧುಗಳನ್ನು ಕರೆಕಳುಹಿಸಿದನು. ಅವರು ಭೋಜನ ಮಾಡಿ ಬೆಟ್ಟದಲ್ಲಿಯೇ ರಾತ್ರಿ ಇಳಿದುಕೊಂಡರು.
آنگاه یعقوب در همان کوهستان برای خداوند قربانی کرد و همراهانش را به مهمانی دعوت نموده، با ایشان غذا خورد و همگی شب را در آنجا به سر بردند.
55 ಮುಂಜಾನೆ ಲಾಬಾನನು ಎದ್ದು ತನ್ನ ಪುತ್ರ ಪುತ್ರಿಯರಿಗೆ ಮುದ್ದಿಟ್ಟು ಅವರನ್ನು ಆಶೀರ್ವದಿಸಿದನು. ಲಾಬಾನನು ಹೊರಟು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.
لابان صبح زود برخاسته، دختران و نوه‌هایش را بوسید و آنها را برکت داد و به خانهٔ خویش مراجعت نمود.

< ಆದಿಕಾಂಡ 31 >