< ಆದಿಕಾಂಡ 26 >
1 ಅಬ್ರಹಾಮನ ದಿನಗಳಲ್ಲಿ ಬಂದ ಮೊದಲನೆಯ ಬರವಲ್ಲದೆ, ದೇಶದಲ್ಲಿ ಮತ್ತೊಂದು ಬರವು ಬಂದಿತು. ಆಗ ಇಸಾಕನು ಗೆರಾರಿನಲ್ಲಿದ್ದ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಹೋದನು.
Un bads bija tai zemē pēc tā pirmā bada, kas bija Ābrahāma laikā. Un Īzaks nogāja uz Ģeraru pie Abimeleha, Fīlistu ķēniņa.
2 ಆಗ ಯೆಹೋವ ದೇವರು ಅವನಿಗೆ ಕಾಣಿಸಿಕೊಂಡು, “ಈಜಿಪ್ಟಿಗೆ ಇಳಿದು ಹೋಗಬೇಡ. ನಾನು ನಿನಗೆ ಹೇಳುವ ದೇಶದಲ್ಲಿ ವಾಸವಾಗಿರು.
Un Tas Kungs viņam parādījās un sacīja: nenoej uz Ēģipti, mīti tai zemē, ko Es tev saku.
3 ಈ ದೇಶದಲ್ಲಿ ಪ್ರವಾಸಿಯಾಗಿರು. ಆಗ ನಾನು ನಿನ್ನ ಸಂಗಡ ಇದ್ದು, ನಿನ್ನನ್ನು ಆಶೀರ್ವದಿಸುವೆನು. ನಿನಗೂ, ನಿನ್ನ ಸಂತಾನಕ್ಕೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ತಂದೆ ಅಬ್ರಹಾಮನಿಗೆ ನಾನು ಮಾಡಿದ ಪ್ರಮಾಣವನ್ನು ಈಡೇರಿಸುವೆನು.
Piemājo šinī zemē, un Es būšu ar tevi, un Es tevi svētīšu; jo tev un tavam dzimumam Es došu visas šās zemes un piepildīšu to zvērestu, ko Es tavam tēvam Ābrahāmam esmu zvērējis.
4 ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವಾಗುವುದು.
Un Es vairošu tavu dzimumu kā debess zvaigznes un došu tavam dzimumam visas šās zemes, un iekš tavas sēklas visas zemes tautas svētīsies, -
5 ಏಕೆಂದರೆ ಅಬ್ರಹಾಮನು ನನ್ನ ಮಾತಿಗೆ ನನ್ನ ವಿಧಿಯನ್ನೂ, ನನ್ನ ಆಜ್ಞೆಗಳನ್ನೂ, ನನ್ನ ಕಟ್ಟಳೆಗಳನ್ನೂ ನನ್ನ ನೇಮಗಳನ್ನೂ, ಕೈಗೊಂಡು ನಡೆದನು,” ಎಂದರು.
Tāpēc ka Ābrahāms Manai balsij ir klausījis un turējis Manas pavēles, Manus iestādījumus, likumus un baušļus.
6 ಆಗ ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು.
Tā Īzaks mita Ģerarā.
7 ಆ ಸ್ಥಳದ ಮನುಷ್ಯರು ಅವನ ಹೆಂಡತಿಯ ವಿಷಯದಲ್ಲಿ ವಿಚಾರಿಸಿದಾಗ ಅವನು, ರೆಬೆಕ್ಕಳು ನೋಟಕ್ಕೆ ಚೆಲುವೆಯಾಗಿದ್ದುದರಿಂದ ಆಕೆಯ ನಿಮಿತ್ತ ಆ ಸ್ಥಳದ ಜನರು ತನ್ನನ್ನು ಕೊಂದಾರೆಂದು, ಆಕೆ ತನ್ನ ಹೆಂಡತಿಯೆಂದು ಹೇಳುವುದಕ್ಕೆ ಅಂಜಿ ಅವನು, “ಆಕೆಯು ನನ್ನ ತಂಗಿ” ಎಂದನು.
Un tās vietas ļaudis vaicāja par viņa sievu, - un viņš sacīja: tā ir mana māsa, jo viņam bija bail sacīt: tā ir mana sieva, - lai tās vietas ļaudis mani nenokauj Rebekas dēļ, jo tā bija skaista vaigā.
8 ಅವನು ಅಲ್ಲಿ ಬಹಳ ದಿನಗಳಿದ್ದ ಮೇಲೆ, ಒಂದು ದಿನ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನು ಕಿಟಕಿಯಿಂದ ನೋಡುತ್ತಿದ್ದಾಗ, ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸಮಾಡುವುದನ್ನು ಕಂಡನು.
Un kad viņš labu laiku tur bija dzīvojis, tad Abimelehs, Fīlistu ķēniņš, skatījās pa logu, un redz, Īzaks smējās ar savu sievu Rebeku.
9 ಆಗ ಅಬೀಮೆಲೆಕನು ಇಸಾಕನನ್ನು ಕರೆದು, “ಆಕೆಯು ಖಂಡಿತ ನಿನ್ನ ಹೆಂಡತಿಯಾಗಿದ್ದಾಳೆ. ಆದರೆ ನೀನು, ‘ಆಕೆಯು ನನ್ನ ತಂಗಿ,’ ಎಂದು ಏಕೆ ಹೇಳಿದೆ?” ಎಂದನು. ಇಸಾಕನು ಅವನಿಗೆ, “ನಾನು ಆಕೆಯ ನಿಮಿತ್ತ ಸಾಯಬಾರದೆಂದು ಹಾಗೆ ಹೇಳಿದೆನು,” ಎಂದನು.
Tad Abimelehs aicināja Īzaku un sacīja: redzi, tiešām tā ir tava sieva, kā tad tu esi sacījis, tā ir mana māsa? Un Īzaks uz to sacīja: tāpēc ka es domāju, lai man viņas dēļ nebūtu jāmirst.
10 ಆಗ ಅಬೀಮೆಲೆಕನು, “ನೀನು ನಮಗೆ ಮಾಡಿದ್ದೇನು? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯನ್ನು ತೆಗೆದುಕೊಂಡಿದ್ದರೆ, ನೀನು ನಮ್ಮ ಮೇಲೆ ಅಪರಾಧವನ್ನು ಬರಮಾಡುತ್ತಿದ್ದೆಯಲ್ಲಾ,” ಎಂದನು.
Tad Abimelehs sacīja: kāpēc tu mums to esi darījis? Gandrīz viens no šiem ļaudīm būtu varējis gulēt pie tavas sievas, tad tu mums būtu uzvedis noziegumu.
11 ಅಬೀಮೆಲೆಕನು ತನ್ನ ಜನರಿಗೆಲ್ಲಾ, “ಈ ಮನುಷ್ಯನನ್ನಾಗಲಿ, ಅವನ ಹೆಂಡತಿಯನ್ನಾಗಲಿ ಮುಟ್ಟುವವನು ಖಂಡಿತವಾಗಿ ಸಾಯಬೇಕು,” ಎಂದು ಅಪ್ಪಣೆಕೊಟ್ಟನು.
Un Abimelehs pavēlēja visiem ļaudīm sacīdams: kas šo vīru vai viņa sievu aizskar, tam būs mirt.
12 ಇಸಾಕನು ಆ ದೇಶದಲ್ಲಿ ಬಿತ್ತಿದ ವರ್ಷದಲ್ಲಿಯೇ ನೂರರಷ್ಟು ಬೆಳೆಯನ್ನು ಹೊಂದಿದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು.
Un Īzaks sēja tanī zemē un dabūja tai gadā simtkārtīgus augļus, jo Tas Kungs to svētīja.
13 ಅವನು ಬಹಳ ಶ್ರೀಮಂತನಾಗಿ, ಕ್ರಮೇಣವಾಗಿ ಹೆಚ್ಚಿದ್ದರಿಂದ ಅಭಿವೃದ್ಧಿಯಾದನು.
Un tas vīrs tapa liels un auga augumā, kamēr viņš palika ļoti liels.
14 ಏಕೆಂದರೆ ಅವನಿಗೆ ಕುರಿ ಮಂದೆಗಳೂ ದನಗಳ ಹಿಂಡುಗಳೂ ಬಹಳ ಮಂದಿ ಸೇವಕರೂ ಇದ್ದರು. ಆದ್ದರಿಂದ ಫಿಲಿಷ್ಟಿಯರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು.
Un tam bija manta no sīkiem un manta no lieliem lopiem un daudz saimes, un Fīlisti viņu apskauda.
15 ಅವನ ತಂದೆ ಅಬ್ರಹಾಮನ ದಿನಗಳಲ್ಲಿ ಅಬ್ರಹಾಮನ ಸೇವಕರು ಅಗೆದ ಬಾವಿಗಳನ್ನೆಲ್ಲಾ ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದರು.
Un visas akas, ko viņa tēva kalpi bija rakuši viņa tēva Ābrahāma laikā, tās Fīlisti aizbēra un pildīja ar smiltīm.
16 ಅಬೀಮೆಲೆಕನು ಇಸಾಕನಿಗೆ, “ನಮ್ಮನ್ನು ಬಿಟ್ಟು ಹೋಗು, ಏಕೆಂದರೆ ನೀನು ನಮಗಿಂತ ಬಲಿಷ್ಠನಾಗಿಬಿಟ್ಟೆ,” ಎಂದನು.
Un Abimelehs sacīja uz Īzaku: ej projām no mums, jo tu esi palicis jo varenāks nekā mēs.
17 ಆಗ ಇಸಾಕನು ಅಲ್ಲಿಂದ ಹೋಗಿ ಗೆರಾರಿನ ತಗ್ಗಿನಲ್ಲಿ ಗುಡಾರ ಹಾಕಿ, ಅಲ್ಲಿ ವಾಸಮಾಡಿದನು.
Tad Īzaks no turienes aizgāja un nometās Ģeraras ielejā, un dzīvoja tur.
18 ಇದಲ್ಲದೆ ಇಸಾಕನು ತನ್ನ ತಂದೆ ಅಬ್ರಹಾಮನ ದಿನಗಳಲ್ಲಿ ಅಗೆದಂಥ ಬಾವಿಗಳನ್ನು ತಿರುಗಿ ಅಗೆದನು. ಏಕೆಂದರೆ ಅಬ್ರಹಾಮನು ಮರಣದ ನಂತರ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರುಕೊಟ್ಟನು.
Un Īzaks atkal atraka tās ūdens akas, kas bija raktas viņa tēva Ābrahāma laikā, un ko Fīlisti pēc tam bija aizbēruši, kad Ābrahāms bija miris, un viņš viņu vārdus nosauca pēc tiem vārdiem, ar ko viņa tēvs tās bija nosaucis.
19 ಇಸಾಕನ ಸೇವಕರು ತಗ್ಗಿನಲ್ಲಿ ಅಗೆದಾಗ, ಅಲ್ಲಿ ಅವರಿಗೆ ಉಕ್ಕುವ ಒರತೆಯ ಬಾವಿಯು ಸಿಕ್ಕಿತು.
Un Īzaka kalpi raka tanī ielejā un tur atrada aku ar dzīvu ūdeni.
20 ಗೆರಾರಿನ ಮಂದೆಯನ್ನು ಮೇಯಿಸುವವರು, “ಈ ನೀರು ನಮ್ಮದು,” ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ, ಏಸೆಕ್, ಎಂದು ಹೆಸರಿಟ್ಟನು.
Bet Ģeraras gani bārās ar Īzaka ganiem sacīdami: šis ūdens mums pieder. Tad viņš tās akas vārdu nosauca Eseku (strīdus), tāpēc ka tie ar viņu bija strīdējušies.
21 ತರುವಾಯ ಅವರು ಇನ್ನೊಂದು ಬಾವಿಯನ್ನು ಅಗೆದಾಗ, ಅದಕ್ಕಾಗಿಯೂ ಅವರು ಜಗಳವಾಡಿದಾಗ, ಅವನು ಅದಕ್ಕೆ, ಸಿಟ್ನಾ, ಎಂದು ಹೆಸರಿಟ್ಟನು.
Tad tie raka citu aku, un par to arīdzan bārās; tāpēc viņš viņas vārdu nosauca Sitna (sūdzība).
22 ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗೆದಾಗ, ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು, “ಈಗ ಯೆಹೋವ ದೇವರು ನಮಗೆ ಸ್ಥಳವನ್ನು ಮಾಡಿದ್ದಾರೆ. ನಾವು ಈ ದೇಶದಲ್ಲಿ ಅಭಿವೃದ್ಧಿ ಹೊಂದುವೆವು,” ಎಂದು ಹೇಳಿ ಅದಕ್ಕೆ, ರೆಹೋಬೋತ್, ಎಂದು ಹೆಸರಿಟ್ಟನು.
Un viņš cēlās no turienes un raka citu aku, un tie par to nebārās; tad viņš viņas vārdu nosauca Rehobot (platums) un sacīja: jo nu Tas Kungs mūs ir izplatījis, un mēs esam augļojušies šinī zemē.
23 ಅಲ್ಲಿಂದ ಅವನು ಬೇರ್ಷೆಬಕ್ಕೆ ಹೋದನು.
Tad viņš no turienes gāja augšup uz Bēršebu.
24 ಅದೇ ರಾತ್ರಿಯಲ್ಲಿ ಯೆಹೋವ ದೇವರು ಅವನಿಗೆ ಕಾಣಿಸಿಕೊಂಡು, “ನಿನ್ನ ತಂದೆ ಅಬ್ರಹಾಮನ ದೇವರು ನಾನೇ, ಭಯಪಡಬೇಡ. ಏಕೆಂದರೆ ನಾನು ನಿನ್ನ ಸಂಗಡ ಇದ್ದೇನೆ, ನನ್ನ ದಾಸನಾದ ಅಬ್ರಹಾಮನಿಗೋಸ್ಕರ ನಿನ್ನನ್ನು ಆಶೀರ್ವದಿಸಿ, ನಿನ್ನ ಸಂತತಿಯನ್ನು ಹೆಚ್ಚಿಸುವೆನು,” ಎಂದರು.
Un Tas Kungs viņam parādījās tanī naktī un sacīja: Es esmu Ābrahāma, tava tēva Dievs; nebīsties, jo Es esmu ar tevi un tevi svētīšu un vairošu tavu dzimumu Ābrahāma, Sava kalpa, dēļ.
25 ಆಗ ಇಸಾಕನು ಅಲ್ಲಿ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಹೇಳಿಕೊಂಡು, ತನ್ನ ಗುಡಾರವನ್ನು ಹಾಕಿದನು. ಆಗ ಇಸಾಕನ ಸೇವಕರು ಅಲ್ಲಿ ಒಂದು ಬಾವಿಯನ್ನು ಅಗೆದರು.
Un viņš tur uztaisīja altāri un piesauca Tā Kunga vārdu un tur uzcēla savu telti, un Īzaka kalpi tur raka vienu aku.
26 ತರುವಾಯ ಅಬೀಮೆಲೆಕನೂ, ಅವನ ಸ್ನೇಹಿತರಲ್ಲಿ ಒಬ್ಬನಾದ ಅಹುಜ್ಜತನೂ, ಅವನ ಮುಖ್ಯ ಸೈನ್ಯಾಧಿಪತಿ ಫೀಕೋಲನೂ ಗೆರಾರಿನಿಂದ ಅವನ ಬಳಿಗೆ ಬಂದರು.
Un Abimelehs nāca pie tā no Ģeraras, un viens no viņa draugiem Aūzats un Pīkols, viņa karaspēka virsnieks.
27 ಇಸಾಕನು ಅವರಿಗೆ, “ನನ್ನ ಬಳಿಗೆ ನೀವು ಏಕೆ ಬಂದಿದ್ದೀರಿ? ನೀವು ನನ್ನನ್ನು ಹಗೆಮಾಡಿ, ನಿಮ್ಮ ಬಳಿಯಿಂದ ನನ್ನನ್ನು ಕಳುಹಿಸಿಬಿಟ್ಟಿರಲ್ಲಾ?” ಎಂದನು.
Tad Īzaks uz tiem sacīja: kāpēc jūs nākat pie manis, jūs, kas mani ienīstat un mani no sevis esat izdzinuši?
28 ಅದಕ್ಕೆ ಅವರು, “ನಿಶ್ಚಯವಾಗಿ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ ಎಂದು ತಿಳಿದು, ನಮಗೂ, ನಿನಗೂ ಮಧ್ಯದಲ್ಲಿ ಒಂದು ಪ್ರಮಾಣವಿರುವ ಹಾಗೆ, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳೋಣವೆಂದು ನಾವು ತೀರ್ಮಾನಿಸಿದ್ದೇವೆ.
Un tie sacīja: mēs redzēt redzam, ka Tas Kungs ir ar tevi; tad esam sacījuši: sazvērēsimies kopā, mēs un tu, un darīsim derību ar tevi,
29 ಅದೇನೆಂದರೆ, ನಾವು ನಿನ್ನನ್ನು ಮುಟ್ಟದೆ, ನಿನಗೆ ಒಳ್ಳೆಯದನ್ನೇ ಮಾಡಿ, ನಿನ್ನನ್ನು ಸಮಾಧಾನದಿಂದ ಕಳುಹಿಸಿದ ಹಾಗೆ ನೀನು ನಮಗೂ ಕೇಡು ಮಾಡಬಾರದು. ಏಕೆಂದರೆ ನೀನು ಈಗ ಯೆಹೋವ ದೇವರಿಂದ ಆಶೀರ್ವಾದ ಹೊಂದಿರುವೆ,” ಎಂದರು.
Ka tu mums ļauna nedari, (it) kā mēs tevi neesam aizskāruši, un (it) kā mēs tev labu vien esam darījuši un tevi ar mieru atlaiduši; tu nu esi Tā Kunga svētīts.
30 ಆಗ ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು. ಅವರೆಲ್ಲರೂ ತಿಂದು ಕುಡಿದರು.
Un viņš tiem darīja dzīres, un tie ēda un dzēra,
31 ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡರು. ಅನಂತರ ಇಸಾಕನು ಅವರನ್ನು ಸಾಗಕಳುಹಿಸಿದನು. ಅವರು ಸಮಾಧಾನದಿಂದ ಹೊರಟು ಹೋದರು.
Un cēlās rītā agri un zvērēja viens otram, un Īzaks tos atlaida; tad tie no viņa aizgāja ar mieru.
32 ಅದೇ ದಿನದಲ್ಲಿ ಇಸಾಕನ ಸೇವಕರು ಬಂದು ತಾವು ಅಗೆದ ಬಾವಿಯಲ್ಲಿ, “ನೀರು ಸಿಕ್ಕಿತ್ತು,” ಎಂದು ಅವನಿಗೆ ಹೇಳಿದರು.
Un tanī dienā Īzaka kalpi nāca un viņam sacīja, kas bija noticis ar to aku, ko tie bija rakuši, un viņam sacīja: mēs esam ūdeni atraduši.
33 ಅದಕ್ಕೆ ಅವನು, ಷಿಬಾ, ಎಂದು ಹೆಸರಿಟ್ಟನು. ಆದ್ದರಿಂದ ಇಂದಿನವರೆಗೂ ಬೇರ್ಷೆಬ ಎಂದು ಆ ಪಟ್ಟಣಕ್ಕೆ ಹೆಸರಾಯಿತು.
Un viņš to nosauca Šebu (zvērests), tādēļ tās pilsētas vārds ir Bēršeba līdz šai dienai.
34 ಏಸಾವನು ನಲವತ್ತು ವರ್ಷದವನಾಗಿದ್ದಾಗ, ಹಿತ್ತಿಯನಾದ ಬೇರಿಯನ ಮಗಳಾದ ಯೆಹೂದೀತಳನ್ನೂ, ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಮದುವೆಯಾದನು.
Un Ēsavs bija četrdesmit gadus vecs un ņēma par sievu Juditu, Berus, tā Hetieša, meitu, un Basmatu, Elona, tā Hetieša, meitu.
35 ಇವರ ದೆಸೆಯಿಂದ ಇಸಾಕನಿಗೂ, ರೆಬೆಕ್ಕಳಿಗೂ ಮನೋವ್ಯಥೆಯಾಯಿತು.
Un tās darīja sirdēstus Īzakam un Rebekai.