< ಗಲಾತ್ಯದವರಿಗೆ ಬರೆದ ಪತ್ರಿಕೆ 4 >
1 ಆದರೆ ನಾನು ಹೇಳುವುದೇನೆಂದರೆ, ವಾರಸುದಾರನು ತಾನು ಇಡೀ ಆಸ್ತಿಗೆಲ್ಲಾ ಧಣಿಯಾಗಿದ್ದರೂ ಬಾಲಕನಾಗಿರುವ ತನಕ ಅವನಿಗೂ ದಾಸನಿಗೂ ವ್ಯತ್ಯಾಸವಿರುವುದಿಲ್ಲ.
Ina gusa mi unu kaba acoo am mani, barki ti cukuno titi ahana timeme, ida zo mesas nan nirere ba.
2 ಆದರೆ ಅವನ ತಂದೆಯು ಮುಂಚಿತವಾಗಿ ನೇಮಿಸಿದ ದಿನದವರೆಗೂ ಅವನು ಪೋಷಕರ ಹಾಗೂ ಆಡಳಿತಗಾರರ ಕೈಕೆಳಗಿರುವನು.
Senki ma raa atari ta na akura aweme.
3 ಅದರಂತೆಯೇ ನಾವು ಬಾಲಕರಾಗಿದ್ದಾಗ ಲೋಕದ ಮೂಲಪಾಠಗಳಿಗೆ ಗುಲಾಮರಾಗಿದ್ದೆವು.
In kuri in buki si, uganiya sa tazi ahana, a noki duru atize ti cincin ti uney.
4 ಆದರೆ ನಿಯಮಿತ ಕಾಲವು ಪರಿಪೂರ್ಣವಾದಾಗ, ದೇವರು ತಮ್ಮ ಮಗನನ್ನು ಸ್ತ್ರೀಯಿಂದ ಹುಟ್ಟಿದವನಾಗಿಯೂ ನಿಯಮಕ್ಕೆ ಒಳಗಾದವನನ್ನಾಗಿಯೂ ಕಳುಹಿಸಿಕೊಟ್ಟರು.
senki uganiya wa eh, Asere matumi vana umeme, uyo uney, uyoh udungurka ma.
5 ಹೀಗೆ ದೇವರು ನಿಯಮಕ್ಕೆ ಒಳಗಾದ ನಮ್ಮನ್ನು ವಿಮೋಚಿಸಿ, ನಾವು ಪುತ್ರರ ಸ್ಥಾನವನ್ನು ಹೊಂದುವಂತೆ ಮಾಡಿದರು.
Ma wu anime barke ma bure anu udungurka me, barki a wu tize turume gu ahana.
6 ನೀವು ದೇವರ ಪುತ್ರರಾಗಿರುವುದರಿಂದ, ದೇವರು ತಮ್ಮ ಪುತ್ರ ಆಗಿರುವವರ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿ, “ಅಪ್ಪಾ ತಂದೆಯೇ!” ಎಂದು ಕರೆಯುವಂತೆ ಮಾಡಿದ್ದಾರೆ.
Barki si a hana wani, Asere ma nya duru bibei bu usam me anyimo iriba iru, sa make matiti “Acoo adang”
7 ಹೀಗಿರುವಲ್ಲಿ ಇನ್ನು ನೀನು ದಾಸನಲ್ಲ ಪುತ್ರನಾಗಿದ್ದೀ. ನೀನು ದೇವರ ಮಗು ಎಂದ ಮೇಲೆ ದೇವರ ಮೂಲಕ ವಾರಸುದಾರನೂ ಆಗಿದ್ದೀ.
I zo si anirere ba senki vana inka vana, anime ani izi unu kaba atri ta Asere.
8 ಮುಂಚೆ ನೀವು ದೇವರನ್ನು ಅರಿಯದವರಾಗಿದ್ದಾಗ, ಸ್ವಾಭಾವಿಕವಾಗಿ ದೇವರಲ್ಲದವುಗಳಿಗೆ ನೀವು ಗುಲಾಮರಾಗಿದ್ದೀರಿ.
Senki uganya ugino me sa da ya rusi Asere ba, ya zi Asere, barji ni kara me daa Asere ba.
9 ಈಗಲಾದರೋ ನೀವು ದೇವರನ್ನು ಅರಿತುಕೊಂಡಿದ್ದೀರಿ. ನಿಜವಾಗಿ ಹೇಳಬೇಕಾದರೆ, ದೇವರು ನಿಮ್ಮನ್ನು ಅರಿತುಕೊಂಡಿದ್ದಾರೆ. ಹೀಗಿರಲಾಗಿ ನೀವು ಬಲಹೀನವಾದ ದರಿದ್ರ ಮೂಲಪಾಠಗಳಿಗೆ ಪುನಃ ಗುಲಾಮರಾಗಬೇಕೆಂದು ಅಪೇಕ್ಷಿಸಿ, ಅವುಗಳಿಗೆ ನೀವು ತಿರುಗಿಕೊಳ್ಳುವುದು ಹೇಗೆ?
A na me sa irusa Asere nani Asere a rusa shi, nyanini gamara karu timumum ti zatu nu kara? I nyara ikuri iriba anirere me?
10 ನೀವು ದಿನಗಳನ್ನೂ ಮಾಸಗಳನ್ನೂ ಕಾಲಗಳನ್ನೂ ಸಂವತ್ಸರಗಳನ್ನೂ ಆಚರಿಸುತ್ತೀರಿ.
I hire tiye, tipei maganiya nan tiwe.
11 ನಾವು ನಿಮ್ಮ ಮಧ್ಯದಲ್ಲಿ ಪ್ರಯಾಸಪಟ್ಟದ್ದು ವ್ಯರ್ಥವಾಯಿತೇನೋ ಎಂದು ನಿಮ್ಮ ವಿಷಯದಲ್ಲಿ ನಾನು ಭಯಪಡುತ್ತೇನೆ.
In kunna biyau bishi gu katuma kam nan si kazi zenzen.
12 ಪ್ರಿಯರೇ, ನಾನು ನಿಮ್ಮ ಹಾಗೆ ಆದ್ದರಿಂದ ನೀವು ನನ್ನ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೆ ಯಾವ ಕೇಡನ್ನೂ ಮಾಡಲಿಲ್ಲ.
Ma vavi si ni hennu, wuna ni gu mi ma cukuno gusi wani ya ivum kalapi ba.
13 ನಾನು ಮುಂಚೆ ನಿಮಗೆ ಸುವಾರ್ತೆ ಸಾರಿದ್ದು, ನನ್ನ ಶರೀರದ ಬಲಹೀನತೆಯಿಂದ ಎಂದು ನೀವು ಬಲ್ಲಿರಿ.
Senki irusa barki ukoni unipum um wa wu in bezi si tize tiso me innu tuba me.
14 ನನ್ನ ದೇಹಸ್ಥಿತಿ ನಿಮಗೆ ಬೇಸರಗೊಳಿಸುವುದಾಗಿದ್ದರೂ ನೀವು ನನ್ನನ್ನು ಹೀನೈಸಲಿಲ್ಲ, ತಿರಸ್ಕರಿಸಲಿಲ್ಲ. ಆದರೆ ನನ್ನನ್ನು ದೇವದೂತನಂತೆಯೂ ಕ್ರಿಸ್ತ ಯೇಸುವಿನಂತೆಯೂ ಸೇರಿಸಿಕೊಂಡಿರಿ.
Ukoni umme ya dara si ya ceki mi ba senki ya sokin mi anyimo a shime gu ina kadure ka Asere, gu mi Yeso in nnice nime.
15 ನೀವು ಕೋರಿದ ಆ ಶುಭವೆಲ್ಲಿ? ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಡುತ್ತಿದ್ದಿರಿ ಎಂದು ನಿಮ್ಮ ವಿಷಯವಾಗಿ ನಾನು ಸಾಕ್ಷಿಕೊಡುತ್ತೇನೆ.
Abani ugongonushi me? ma boo si inka idi cukuno anime idi gamirka aje ashi me i nyam.
16 ಹೀಗಿರಲಾಗಿ ಸತ್ಯವನ್ನು ಹೇಳಿದ್ದರಿಂದ ನಾನು ನಿಮಗೆ ಶತ್ರುವಾಗಿಬಿಟ್ಟೆನೋ?
Barki anime unu eru usi mani barki kadndere sa in boo si?
17 ಅವರು ನಿಮ್ಮನ್ನು ಆಕರ್ಷಿಸಲು ಆಸಕ್ತರಾಗಿದ್ದಾರೆ. ಆದರೆ ಒಳ್ಳೆಯ ಅಭಿಪ್ರಾಯದಿಂದ ಅಲ್ಲ. ನೀವು ಅವರ ವಿಷಯದಲ್ಲಿ ಆಸಕ್ತರಾಗಬೇಕೆಂದು ಅವರು ನಿಮ್ಮನ್ನು ನಮ್ಮಿಂದ ಪ್ರತ್ಯೇಕಿಸುವುದಕ್ಕೆ ಅಪೇಕ್ಷಿಸುತ್ತಾರೆ.
Wa nyara wa rii nikara ni shi me vat senke barki una u rii ba wa nyara wa su isi a matara baki i wuzi we katuma.
18 ನಾನು ನಿಮ್ಮ ಸಂಗಡ ಇರುವಾಗ ಮಾತ್ರವಲ್ಲದೆ ಯಾವಾಗಲೂ ಉತ್ತಮ ಕಾರ್ಯಗಳಲ್ಲಿ ನೀವು ಆಸಕ್ತರಾಗಿರುವುದು ಒಳ್ಳೆಯದು.
Imum irizi ukem iriba i katuma una u rii daki uganiya sa inzi nan si ba.
19 ನನ್ನ ಮಕ್ಕಳೇ, ಕ್ರಿಸ್ತ ಯೇಸುವು ನಿಮ್ಮಲ್ಲಿ ರೂಪುಗೊಳ್ಳುವ ತನಕ ನಾನು ನಿಮಗಾಗಿ ಪುನಃ ಪ್ರಸವವೇದನೆ ಪಡುತ್ತೇನೆ.
Ahana a cincin am, in raa anyimo u gamara nipum gu unu yoo barki si ubuki uganiya u katuma ka sere a nyimo a si me.
20 ನಾನು ಈಗ ನಿಮ್ಮ ಜೊತೆಯಲ್ಲಿದ್ದು ನನ್ನ ಸ್ವರವನ್ನು ಬದಲಾಯಿಸಬೇಕೆಂದು ಅಪೇಕ್ಷಿಸುತ್ತೇನೆ, ಏಕೆಂದರೆ, ನಾನು ನಿಮ್ಮ ವಿಷಯದಲ್ಲಿ ಚಿಂತಿಸುವವನಾಗಿದ್ದೇನೆ.
In daa zina nan si aname in gamirka nire ni gbirang, barki immu me ya hirzan iriba.
21 ಮೋಶೆಯ ನಿಯಮದ ಕೆಳಗಿರಲು ಬಯಸುವವರೇ, ನಿಯಮವು ಏನು ಹೇಳುತ್ತದೆಯೆಂದು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೀರಾ? ನನಗೆ ಹೇಳಿರಿ.
mi si za izin ni suo iciki anyimo udungurka, idaa kunna si udungurka me ba?
22 ಏಕೆಂದರೆ ದಾಸಿಯಿಂದ ಒಬ್ಬನು, ಧರ್ಮಪತ್ನಿಯಿಂದ ಒಬ್ಬನು ಹೀಗೆ ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರೆಂದು ಪವಿತ್ರ ವೇದದಲ್ಲಿ ಬರೆದಿದೆ.
nyettike abanga a Ibarahim maa zinni na hana ware, u indei urere u eh sa unee u matara.
23 ದಾಸಿಯ ಮಗನು ಶಾರೀರಿಕವಾಗಿ ಹುಟ್ಟಿದವನು. ಆದರೆ ಧರ್ಮಪತ್ನಿಯ ಮಗನಾದರೋ ದೇವರ ವಾಗ್ದಾನದ ಮೂಲಕ ಹುಟ್ಟಿದನು.
Senki uge sa urere yoo me anyimo anipum, senki ukasu me a yoo we unee faangh anyimo u inko utize me.
24 ಈ ಸಂಗತಿಗಳು ಉಪಮಾನವಾಗಿವೆ. ಹೇಗೆಂದರೆ, ಇವರು ಎರಡು ಒಡಂಬಡಿಕೆಗಳೇ. ಒಂದು ಒಡಂಬಡಿಕೆ ಸೀನಾಯಿ ಪರ್ವತದಿಂದ ಉಂಟಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು. ಅದೇ ಹಾಗರ್.
tige a daa ke a boo si gu tiroo tini, anime wa ciki gu u inko utize tire me tini. Unu udei anyimo aweme suro upana u sinai manno ma yoo ahana arere. Me mani Hajaratu.
25 ಹಾಗರ್ ಅರೇಬಿಯಾದಲ್ಲಿರುವ ಸೀನಾಯಿ ಪರ್ವತ. ಅದು ಈಗಿನ ಯೆರೂಸಲೇಮಿಗೆ ಸರಿಹೊಂದುತ್ತಾಳೆ. ಏಕೆಂದರೆ ಆಕೆಯು ಈಗಲೂ ತನ್ನ ಮಕ್ಕಳ ಸಹಿತ ದಾಸ್ಯದಲ್ಲಿದ್ದಾಳೆ.
Hajaratu mazi gu nipana ni sinai anyimo Arabuja, ma turi gu urshalima ugeme; mara anyimo ani rere nan na hana ameme.
26 ಆದರೆ ಸ್ವರ್ಗೀಯ ಯೆರೂಸಲೇಮ್ ಸ್ವತಂತ್ರಳು. ಈಕೆಯೇ ನಮ್ಮ ತಾಯಿ.
urshalima wa zesere me uzi faangh.
27 ಏಕೆಂದರೆ, “ಬಂಜೆಯೇ, ಹೆರದವಳೇ, ಆನಂದಿಸು. ಪ್ರಸವವೇದನೆ ಪಡದವಳೇ, ಸ್ವರವೆತ್ತಿ ಹರ್ಷದಿಂದ ಸ್ವರವೆತ್ತಿ ಕೂಗು; ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಎಷ್ಟೋ ಹೆಚ್ಚು ಮಕ್ಕಳಿದ್ದಾರೆ,” ಎಂದು ಪವಿತ್ರ ವೇದದಲ್ಲಿ ಬರೆದಿದೆ.
nyettike, ''Kunna urunta, aney uzatu yoo, soo ni iyeze a mgbirang apuru arum; si sa idaa kunna uzito uyoo ba. Barki ahana unee sa a gidi wa teki unee sa ma zin nu ruma me.”
28 ಪ್ರಿಯರೇ, ನಾವು ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೇವೆ.
si a henu, gu Ishaku, ahana u inko utize tini.
29 ಆದರೆ ಆಗ ಶರೀರಕ್ಕನುಸಾರವಾಗಿ ಹುಟ್ಟಿದವನು ಆತ್ಮಕ್ಕನುಸಾರವಾಗಿ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ, ಈಗಲೂ ನಡೆಯುತ್ತದೆ.
uganiya ugino me unu ge sa a yoo me anipum ma yomi uge sa a yoo me abibeu, izi in.
30 ಆದರೆ ಪವಿತ್ರ ವೇದವು ಏನು ಹೇಳುತ್ತದೆ? “ದಾಸಿಯನ್ನೂ, ಅವಳ ಮಗನನ್ನೂ ಹೊರಗೆ ಹಾಕು. ಏಕೆಂದರೆ ದಾಸಿಯ ಮಗನು ಧರ್ಮಪತ್ನಿಯ ಮಗನೊಂದಿಗೆ ಎಂದಿಗೂ ವಾರಸುದಾರನಾಗಬಾರದು.” ಎಂದಲ್ಲವೇ?
U nyettike wa guna? “Gido urere u eh me nan vana me, vana urere u eh me mada kaba tirunga ta acoo me nan vana u unee a faangh ba.”
31 ಹೀಗಿರುವಲ್ಲಿ ಪ್ರಿಯರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳೇ ಆಗಿದ್ದೇವೆ.
Anime, nihenu, daa haru ahana a unee urere mani be; senki unee u riri mani.