< ಗಲಾತ್ಯದವರಿಗೆ ಬರೆದ ಪತ್ರಿಕೆ 1 >

1 ಮನುಷ್ಯರಿಂದಾಗಲಿ, ಮನುಷ್ಯನ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ ಕ್ರಿಸ್ತ ಯೇಸುವಿನ ಮುಖಾಂತರವೂ ಅವರನ್ನು ಮರಣದಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಅಪೊಸ್ತಲನಾದ ಪೌಲನೆಂಬ ನಾನೂ
Pawulu, mutumwa - uutali mutumwa uzwa kubantu naanka kwiinda mumilimo yabantu, pesi kwiindilila muli Jesu Kkilisito mpawo a Leza Taata, oyo wakamubusya kuzwa kubafu -
2 ನನ್ನ ಜೊತೆಯಲ್ಲಿರುವ ಎಲ್ಲಾ ಪ್ರಿಯರೂ, ಗಲಾತ್ಯದಲ್ಲಿರುವ ಸಭೆಗಳಿಗೆ ಬರೆಯುವುದು:
mpawo aboonse balombe bali andime, muzibunga zyaku Galantiya:
3 ನಮ್ಮ ತಂದೆಯಾದ ದೇವರಿಂದಲೂ ಕರ್ತ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಇರಲಿ.
Luzyalo kulindinywe mpawo aluumuno luzwa kuli Leza taatesu mpawo a Mwami Jesu Kkilisito,
4 ಈ ಯೇಸುವೇ ನಮ್ಮನ್ನು ಈಗಿನ ದುಷ್ಟ ಯುಗದೊಳಗಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ ನಮ್ಮ ಪಾಪಗಳಿಗಾಗಿ ತಮ್ಮನ್ನೇ ಬಲಿಯಾಗಿ ಒಪ್ಪಿಸಿದರು. (aiōn g165)
Wakalipeda lwakwe kuzibi zyesu kuchitilakuti atwaangunune kuzwa kububi bwalino, kwiinda mukuyanda kwa Leza wesu mpwao a Taata, (aiōn g165)
5 ದೇವರಿಗೆ ಯುಗಯುಗಾಂತರಗಳಿಗೂ ಮಹಿಮೆಯಾಗಲಿ. ಆಮೆನ್. (aiōn g165)
Kulinguwe akube bulemu kwalyoonse alyoonse. Amen. (aiōn g165)
6 ಕ್ರಿಸ್ತ ಯೇಸುವಿನ ಕೃಪೆಯಲ್ಲಿ ನಿಮ್ಮನ್ನು ಕರೆದ ದೇವರನ್ನು ನೀವು ಇಷ್ಟು ಬೇಗನೆ ಬಿಟ್ಟು ಬೇರೆ ಸುವಾರ್ತೆಯ ಕಡೆಗೆ ತಿರುಗಿದಿರೆಂದು ನಾನು ಆಶ್ಚರ್ಯಪಡುತ್ತೇನೆ.
Ndagamba kuti mulikubweeda achakufwambana kuzwa kulinguwe wakamwiita muluzyalo lwa Kkilisito. Ndagamba kuti wasandukila kumakani asiyene,
7 ಅದು ಸುವಾರ್ತೆಯೇ ಅಲ್ಲ, ಆದರೆ ಕೆಲವರು ನಿಮ್ಮನ್ನು ಗಲಿಬಿಲಿಗೆ ಒಳಪಡಿಸಿ, ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ವಕ್ರಪಡಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ.
teensi kuti kulaambi makani, Pesi kulibamwi bantu bayanda kumuchitila mapenzi a Kkilisito
8 ಆದರೂ ನಾವು ನಿಮಗೆ ಸಾರಿದ ಸುವಾರ್ತೆಯಲ್ಲದೆ ಬೇರೊಂದನ್ನು ನಾವೇ ಆಗಲಿ, ಪರಲೋಕದೊಳಗಿಂದ ಬಂದ ದೇವದೂತನೇ ಆಗಲಿ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ.
Pesi nikubakuti swe naa mungelo uuzwa kujulu walikukambawuka kulinduwe makani aatali mbuli aya ngitwakali kukambawuka kulindinywe, ngabe mutuke.
9 ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ, ಅವನು ಶಾಪಗ್ರಸ್ತನಾಗಲಿ ಎಂದು ಮೊದಲು ಹೇಳಿದಂತೆಯೇ ಈಗಲೂ ನಾನು ಪುನಃ ಹೇಳುತ್ತೇನೆ.
Mbuli mbutwamba kumatalikilo, mpawo lino ndaamba lubo, “naa umwi wakambawuka kulindinywe makani aatali mbuli ngimwakatambula, ayo ngabe mutuke.”
10 ನಾನು ಈಗ ಯಾರ ಅನುಮೋದವನ್ನು ಗಳಿಸಲು ಯತ್ನಿಸುತ್ತಿದ್ದೇನೆ? ಮಾನವರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತಿಸುತ್ತಿದ್ದೇನೋ? ಇನ್ನೂ ಮನುಷ್ಯರನ್ನೇ ಮೆಚ್ಚಿಸುವವನಾಗಿದ್ದರೆ, ನಾನು ಕ್ರಿಸ್ತ ಯೇಸುವಿನ ದಾಸನಾಗಿರಲಾರೆ.
Sa lino ndikulanguula buuya bwamuntu nanka bwa Leza? Saa ndikulangula kuboteezya muntuma? kuti nkecheezya kubotezya muntu, nsichili mulanda waKkilisito.
11 ಪ್ರಿಯರೇ, ನಾನು ಸಾರಿದ ಸುವಾರ್ತೆಯು ಮಾನವೀಯವಾದದ್ದಲ್ಲವೆಂದು ನಿಮಗೆ ತಿಳಿಯಪಡಿಸುತ್ತೇನೆ.
Mbuli mbiyanda kuti muzibe, nobakwesu, kuti makani ngindakambawuka teensi aamuntu.
12 ನಾನು ಅದನ್ನು ಯಾವ ಮನುಷ್ಯನಿಂದಲೂ ಪಡೆಯಲಿಲ್ಲ, ನನಗೆ ಯಾವ ಮನುಷ್ಯನೂ ಉಪದೇಶಿಸಲಿಲ್ಲ, ಆದರೆ ನಾನು ಅದನ್ನು ಕ್ರಿಸ್ತ ಯೇಸುವಿನ ಪ್ರಕಟನೆಯಿಂದಲೇ ಸ್ವೀಕರಿಸಿಕೊಂಡೆನು.
Teensi ndakatambula kuzwa kumuntu naba oomwe naanka kuyiisigwa. Nikuba boobo, kwakalikwinda muchiyubunuzyo cha Jesu Kkilisito kulindime.
13 ನಾನು ಯೆಹೂದ್ಯ ವಿಶ್ವಾಸದಲ್ಲಿದ್ದಾಗ ನನ್ನ ಹಿಂದಿನ ನಡತೆಯನ್ನು ನೀವು ಕೇಳಿದ್ದೀರಷ್ಟೇ. ನಾನು ದೇವರ ಸಭೆಯನ್ನು ಮಿತಿಮೀರಿ ಹಿಂಸೆಪಡಿಸಿ ಹಾಳುಮಾಡಲು ಯತ್ನಿಸುತ್ತಿದ್ದೆನು.
Mwakamvwa ataata akupona kwangu mutunsiyansiya twaba Juda, mbuli mbundakapenzya mbungano zya Leza kuzwa mubwelede mpawo ndalikwezya kuzimwaya.
14 ಇದಲ್ಲದೆ ನಾನು ನನ್ನ ಪಿತೃಗಳ ಸಂಪ್ರದಾಯಗಳಲ್ಲಿ ಅತ್ಯಂತ ಅಭಿಮಾನವುಳ್ಳವನಾಗಿ ಸಮಕಾಲಿಕರಾದ ನನ್ನ ಜನರೊಳಗೆ ಅನೇಕರಿಗಿಂತ ಯೆಹೂದ್ಯ ವಿಶ್ವಾಸದಲ್ಲಿ ಎಷ್ಟೋ ಪ್ರಗತಿಯನ್ನು ಹೊಂದಿದವನಾಗಿದ್ದೆನು.
Ndakakkomena muchanza chamuJuda bwindilide kubiingi oboo bakali beselalyangu, kuzwa kubantu bangu. Obu mbubo bwindilide bwechiyandisyo nchindakali aacho kuchaanza chabamataata.
15 ಆದರೆ ದೇವರು ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ, ತಮ್ಮ ಕೃಪೆಯ ಮೂಲಕ ನನ್ನನ್ನು ಕರೆದು,
Pesi elyo nakandibikka kumbali kuzwa muda lyabaama, mpawo ooyo wakandiita kwiinda muluzyalo lwakwe,
16 ದೇವರು ತಮ್ಮ ಪುತ್ರನನ್ನು ನನ್ನಲ್ಲಿ ಪ್ರಕಟಿಸಿ, ಯೆಹೂದ್ಯರಲ್ಲದವರಲ್ಲಿ ಸುವಾರ್ತೆಯನ್ನು ಸಾರಬೇಕೆಂದು ಮನಸ್ಸು ಮಾಡಿದರು. ಕೂಡಲೇ ದೇವರ ಪುತ್ರ ಆಗಿರುವವರ ಪ್ರಕಟಣೆಯ ತರುವಾಯ ನಾನು ಯಾವ ಮನುಷ್ಯರನ್ನು ವಿಚಾರಿಸಲಿಲ್ಲ.
wakabotelwa akutondezya mwanakwe mulindime, kuchitila kuti ndikakkambawuke akati kabamaasi, Teenda kabukakubuzya aamubili abulowa.
17 ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ, ನಾನು ಅರೇಬಿಯಾಕ್ಕೆ ಹೋದೆನು. ಅನಂತರ ಪುನಃ ದಮಸ್ಕಕ್ಕೆ ಹಿಂದಿರುಗಿದೆನು.
Teensi ndakayinka ku Jelusalema kuli baabo bakali batumwa kunembo lyangu. Kwinda kuchita oobu, ndakayinka ku Alabbiya mpawo ndaboola ku Damasikkasi.
18 ಮೂರು ವರ್ಷಗಳ ನಂತರವೇ ನಾನು ಕೇಫನನ್ನು ಪರಿಚಯಮಾಡಿಕೊಳ್ಳಲು ಯೆರೂಸಲೇಮಿಗೆ ಹೋಗಿ ಅವನೊಂದಿಗೆ ಹದಿನೈದು ದಿವಸ ಇದ್ದೆನು.
Alimwi nikwakiinda minyaka yotaatwe ndakayinka ku Jelusalema kuti nkazibe Sifasi mpawo ndakakukkala anguwe mazuba aalikkumi amusanu.
19 ಆದರೆ ಕರ್ತ ಯೇಸುವಿನ ಸಹೋದರನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ.
Pesi takwe mutumwa ngwindakabona kunze kwa Jemusi, mwanike wa Mwami.
20 ಈಗ ನಾನು ನಿಮಗೆ ಬರೆಯುತ್ತಿರುವ ವಿಷಯಗಳು ಸುಳ್ಳಲ್ಲ ಎಂದು ದೇವರ ಮುಂದೆ ನಾನು ನಿಶ್ಚಯವಾಗಿ ನಿಮಗೆ ಹೇಳುತ್ತೇನೆ.
Kulizezi nzindalemba kulindinywe, ndasyomezya kunembo lya Leza kuti nsilikubeja pe.
21 ಆಮೇಲೆ ಸಿರಿಯಾ ಮತ್ತು ಕಿಲಿಕ್ಯ ಪ್ರಾಂತಗಳಿಗೆ ಬಂದೆನು.
Mpawo ndakayinka kuchisi cha Siliya aku Silisiya.
22 ಆಗ ಕ್ರಿಸ್ತ ಯೇಸುವಿನಲ್ಲಿರುವ ಯೂದಾಯದ ಸಭೆಗಳಿಗೆ ನನ್ನ ಪರಿಚಯವಿರಲಿಲ್ಲ.
Teensi ndakalizibidwe kumenso akumambungano aku Judaya ali muli Kkilisito.
23 ಆದರೆ ಅವರು, “ಹಿಂದೊಮ್ಮೆ ನಮ್ಮನ್ನು ಹಿಂಸಿಸುತ್ತಿದ್ದ ಇವನು, ತಾನು ನಾಶಮಾಡಲು ಪ್ರಯತ್ನಿಸಿದ್ದ ವಿಶ್ವಾಸವನ್ನೇ ಈಗ ಪ್ರಸಂಗಿಸುತ್ತಿದ್ದಾನೆ,” ಎಂಬುದನ್ನು ಮಾತ್ರ ಕೇಳಿದ್ದರು.
Bakazimvwa biyo kazilikwambwa, “mwalumi wakali kutupenzya lino ngulikukambawuka makkani mabotu aa lusyomo ndwakali kwezya kumwaya.”
24 ಅವರು ನನ್ನ ದೆಸೆಯಿಂದ ದೇವರನ್ನು ಕೊಂಡಾಡಿದರು.
Mpawo bakalemeka Leza nkambo kangu.

< ಗಲಾತ್ಯದವರಿಗೆ ಬರೆದ ಪತ್ರಿಕೆ 1 >