< ಎಜ್ರನು 6 >

1 ಆಗ ಅರಸನಾದ ದಾರ್ಯಾವೆಷನ ಅಪ್ಪಣೆಯ ಪ್ರಕಾರ ಅವರು ಬಾಬಿಲೋನಿನ ಭಂಡಾರದಲ್ಲಿದ್ದ ಗ್ರಂಥಾಲಯದಲ್ಲಿ ಹುಡುಕಿದರು.
בֵּאדַיִן דָּרְיָוֶשׁ מַלְכָּא שָׂם טְעֵם וּבַקַּרוּ ׀ בְּבֵית סִפְרַיָּא דִּי גִנְזַיָּא מְהַחֲתִין תַּמָּה בְּבָבֶֽל׃
2 ಮೇದ್ಯರ ದೇಶದಲ್ಲಿರುವ ಅಹ್ಮೆತಾ ರಾಜಧಾನಿಯಲ್ಲಿ ಜ್ಞಾಪಕಾರ್ಥದ ಒಂದು ಸುರುಳಿ ಸಿಕ್ಕಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು:
וְהִשְׁתְּכַח בְּאַחְמְתָא בְּבִירְתָא דִּי בְּמָדַי מְדִינְתָּא מְגִלָּה חֲדָה וְכֵן־כְּתִיב בְּגַוַּהּ דִּכְרוֹנָֽהֿ׃
3 ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಅರಸನಾದ ಕೋರೆಷನು ಯೆರೂಸಲೇಮಿನಲ್ಲಿರುವ ದೇವರ ಆಲಯಕ್ಕೋಸ್ಕರ ಕೊಟ್ಟ ಅಪ್ಪಣೆ ಏನೆಂದರೆ: ಜನರು ಬಲಿಗಳನ್ನು ಸಮರ್ಪಿಸುವುದಕ್ಕಾಗಿ ಆಲಯವನ್ನು ಪುನಃ ಕಟ್ಟಬೇಕು. ಅದರ ಅಸ್ತಿವಾರಗಳನ್ನು ಬಲವಾಗಿ ಹಾಕಬೇಕು. ಅದರ ಎತ್ತರ 27 ಮೀಟರ್, ಅದರ ಅಗಲ 27 ಮೀಟರ್ ಆಗಿರಲಿ.
בִּשְׁנַת חֲדָה לְכוֹרֶשׁ מַלְכָּא כּוֹרֶשׁ מַלְכָּא שָׂם טְעֵם בֵּית־אֱלָהָא בִֽירוּשְׁלֶם בַּיְתָא יִתְבְּנֵא אֲתַר דִּֽי־דָבְחִין דִּבְחִין וְאֻשּׁוֹהִי מְסֽוֹבְלִין רוּמֵהּ אַמִּין שִׁתִּין פְּתָיֵהּ אַמִּין שִׁתִּֽין׃
4 ದೊಡ್ಡ ಕಲ್ಲುಗಳ ಮೂರು ಸಾಲುಗಳೂ, ಹೊಸ ತೊಲೆಗಳ ಒಂದು ಸಾಲೂ ಇರಲಿ. ಅದರ ಖರ್ಚು ಅರಮನೆಯ ಬೊಕ್ಕಸದಿಂದ ಕೊಡಲಾಗುವುದು.
נִדְבָּכִין דִּי־אֶבֶן גְּלָל תְּלָתָא וְנִדְבָּךְ דִּי־אָע חֲדַת וְנִפְקְתָא מִן־בֵּית מַלְכָּא תִּתְיְהִֽב׃
5 ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಲ್ಲಿರುವ ಮಂದಿರದಿಂದ ತೆಗೆದುಕೊಂಡು ಬಾಬಿಲೋನಿಗೆ ಒಯ್ದ ದೇವರ ಆಲಯದ ಬೆಳ್ಳಿಬಂಗಾರದ ಸಲಕರಣೆಗಳನ್ನು ತಿರುಗಿ ಯೆರೂಸಲೇಮಿನಲ್ಲಿರುವ ಮಂದಿರಕ್ಕೆ ತೆಗೆದುಕೊಂಡುಹೋಗಿ, ದೇವರ ಆಲಯದೊಳಗೆ ಅದರದರ ಸ್ಥಳದಲ್ಲಿ ಇಡಬೇಕು.
וְאַף מָאנֵי בֵית־אֱלָהָא דִּי דַהֲבָה וְכַסְפָּא דִּי נְבֽוּכַדְנֶצַּר הַנְפֵּק מִן־הֵיכְלָא דִי־בִירוּשְׁלֶם וְהֵיבֵל לְבָבֶל יַהֲתִיבוּן וִיהָךְ לְהֵיכְלָא דִי־בִירֽוּשְׁלֶם לְאַתְרֵהּ וְתַחֵת בְּבֵית אֱלָהָֽא׃
6 ಬಳಿಕ ದಾರ್ಯಾವೆಷನು ಬರೆದು ಕಳುಹಿಸಿದ್ದು ಏನೆಂದರೆ, ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಅಧಿಪತಿಯಾದ ತತ್ತೆನೈನೇ, ಶೆತರ್ ಬೋಜೆನೈಯೇ, ನದಿಯ ಆಚೆಯಲ್ಲಿರುವ ನಿಮ್ಮ ಜೊತೆಗಾರರು ಸಹ ಆ ಸ್ಥಳವನ್ನು ಬಿಟ್ಟು ದೂರವಾಗಿರಿ.
כְּעַן תַּתְּנַי פַּחַת עֲבַֽר־נַהֲרָה שְׁתַר בּוֹזְנַי וּכְנָוָתְהוֹן אֲפַרְסְכָיֵא דִּי בַּעֲבַר נַהֲרָה רַחִיקִין הֲווֹ מִן־תַּמָּֽה׃
7 ದೇವರ ಆಲಯವನ್ನು ಕಟ್ಟುವ ಕೆಲಸಕ್ಕೆ ನೀವು ಅಡ್ಡಿಮಾಡಬೇಡಿರಿ. ಯೆಹೂದ್ಯರ ಅಧಿಪತಿಯೂ, ಯೆಹೂದ್ಯರ ಹಿರಿಯರೂ ಅದರ ಸ್ಥಳದಲ್ಲಿ ದೇವರ ಆಲಯವನ್ನು ಕಟ್ಟಿಸಲಿ.
שְׁבֻקוּ לַעֲבִידַת בֵּית־אֱלָהָא דֵךְ פַּחַת יְהוּדָיֵא וּלְשָׂבֵי יְהוּדָיֵא בֵּית־אֱלָהָא דֵךְ יִבְנוֹן עַל־אַתְרֵֽהּ׃
8 ಇದಲ್ಲದೆ ದೇವರ ಈ ಆಲಯವನ್ನು ಕಟ್ಟುವುದಕ್ಕೆ ಯೆಹೂದ್ಯರ ಹಿರಿಯರಿಗೆ ನೀವು ಮಾಡತಕ್ಕದ್ದನ್ನು ಕುರಿತು ನಾನು ಕೊಡುವ ಅಪ್ಪಣೆ ಏನೆಂದರೆ: ಅವರು ಅಭ್ಯಂತರ ಮಾಡದ ಹಾಗೆ ನದಿಯ ಆಚೆಯಲ್ಲಿಂದ ಬರುವ ಅರಸನ ತೆರಿಗೆಯಿಂದಲೇ ಈ ಮನುಷ್ಯರಿಗೆ ವೆಚ್ಚವನ್ನು ಕೊಡಬೇಕು.
וּמִנִּי שִׂים טְעֵם לְמָא דִֽי־תַֽעַבְדוּן עִם־שָׂבֵי יְהוּדָיֵא אִלֵּךְ לְמִבְנֵא בֵּית־אֱלָהָא דֵךְ וּמִנִּכְסֵי מַלְכָּא דִּי מִדַּת עֲבַר נַהֲרָה אׇסְפַּרְנָא נִפְקְתָא תֶּהֱוֵא מִֽתְיַהֲבָא לְגֻבְרַיָּא אִלֵּךְ דִּי־לָא לְבַטָּלָֽא׃
9 ಪರಲೋಕದ ದೇವರಿಗೆ ದಹನಬಲಿಗಳ ನಿಮಿತ್ತ ಅವರಿಗೆ ಬೇಕಾದ ಹೋರಿಗಳೂ, ಟಗರುಗಳೂ, ಕುರಿಮರಿಗಳೂ, ಗೋಧಿಯೂ, ಉಪ್ಪೂ, ದ್ರಾಕ್ಷಾರಸವೂ, ಎಣ್ಣೆಯೂ ಪ್ರತಿದಿನ ತಪ್ಪದೆ ಯೆರೂಸಲೇಮಿನಲ್ಲಿರುವ ಯಾಜಕರ ನೇಮಕದ ಪ್ರಕಾರ ಅವರಿಗೆ ಕೊಡಬೇಕು.
וּמָה חַשְׁחָן וּבְנֵי תוֹרִין וְדִכְרִין וְאִמְּרִין ׀ לַעֲלָוָן ׀ לֶאֱלָהּ שְׁמַיָּא חִנְטִין מְלַח ׀ חֲמַר וּמְשַׁח כְּמֵאמַר כָּהֲנַיָּא דִי־בִירֽוּשְׁלֶם לֶהֱוֵא מִתְיְהֵב לְהֹם יוֹם ׀ בְּיוֹם דִּי־לָא שָׁלֽוּ׃
10 ಇದಲ್ಲದೆ ಅವರು ಪರಲೋಕದ ದೇವರಿಗೆ ಸುವಾಸನೆಯುಳ್ಳ ಬಲಿಗಳನ್ನು ಅರ್ಪಿಸುವ ಹಾಗೆಯೂ, ಅರಸನ ಪ್ರಾಣಕ್ಕೋಸ್ಕರವೂ, ಅವನ ಮಕ್ಕಳ ಪ್ರಾಣಕ್ಕೋಸ್ಕರವೂ ಪ್ರಾರ್ಥನೆ ಮಾಡಬೇಕು.
דִּֽי־לֶהֱוֺן מְהַקְרְבִין נִיחוֹחִין לֶאֱלָהּ שְׁמַיָּא וּמְצַלַּיִן לְחַיֵּי מַלְכָּא וּבְנֽוֹהִי׃
11 ನಾನು ಕೊಡುವ ಅಪ್ಪಣೆ ಏನೆಂದರೆ, ಯಾವನಾದರೂ ಈ ನನ್ನ ಆಜ್ಞೆಯನ್ನು ಬದಲು ಮಾಡಿದರೆ, ಅವನ ಮನೆಯಿಂದ ಒಂದು ತೊಲೆಯನ್ನು ತೆಗೆದು ಅದರಿಂದಲೇ ಅವನನ್ನು ಗಲ್ಲಿಗೆ ಏರಿಸಬೇಕು. ಅವನ ಮನೆಯನ್ನು ಇದರ ನಿಮಿತ್ತ ತಿಪ್ಪೆಯನ್ನಾಗಿ ಮಾಡಿಬಿಡಬೇಕು.
וּמִנִּי שִׂים טְעֵם דִּי כׇל־אֱנָשׁ דִּי יְהַשְׁנֵא פִּתְגָמָא דְנָה יִתְנְסַח אָע מִן־בַּיְתֵהּ וּזְקִיף יִתְמְחֵא עֲלֹהִי וּבַיְתֵהּ נְוָלוּ יִתְעֲבֵד עַל־דְּנָֽה׃
12 ಇದಲ್ಲದೆ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕಾಗಿ ಆ ಸ್ಥಳವನ್ನು ಆರಿಸಿಕೊಂಡಿರಲು, ಯೆರೂಸಲೇಮಿನ ಈ ದೇವಾಲಯವನ್ನು ಕಟ್ಟಬೇಕೆಂಬ ಆಜ್ಞೆಯನ್ನು ಬದಲಿಸುವುದಕ್ಕಾಗಲಿ, ದೇವಾಲಯವನ್ನು ನಾಶಮಾಡುವುದಕ್ಕಾಗಲಿ ಕೈಯೆತ್ತುವ ಪ್ರತಿಯೊಬ್ಬ ರಾಜನನ್ನೂ, ಜನರನ್ನೂ ದೇವರು ನಾಶಮಾಡಲಿ. ದಾರ್ಯಾವೆಷನಾದ ನಾನು ಈ ಆಜ್ಞೆಯನ್ನು ಕೊಟ್ಟಿದ್ದೇನೆ. ಇದನ್ನು ಶ್ರದ್ಧೆಯಿಂದ ಪಾಲಿಸಬೇಕು, ಎಂಬುದು.
וֵֽאלָהָא דִּי שַׁכִּן שְׁמֵהּ תַּמָּה יְמַגַּר כׇּל־מֶלֶךְ וְעַם דִּי ׀ יִשְׁלַח יְדֵהּ לְהַשְׁנָיָה לְחַבָּלָה בֵּית־אֱלָהָא דֵךְ דִּי בִירוּשְׁלֶם אֲנָה דָרְיָוֶשׁ שָׂמֶת טְעֵם אׇסְפַּרְנָא יִתְעֲבִֽד׃
13 ಆಗ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆನೈಯೂ, ಶೆತರ್ ಬೋಜೆನೈಯೂ, ಅವರ ಜೊತೆಗಾರರೂ ಅರಸನಾದ ದಾರ್ಯಾವೆಷನು ಕಳುಹಿಸಿದ ಆಜ್ಞೆಯ ಪ್ರಕಾರ ತ್ವರೆಯಾಗಿ ಮಾಡಿದರು.
אֱדַיִן תַּתְּנַי פַּחַת עֲבַֽר־נַהֲרָה שְׁתַר בּוֹזְנַי וּכְנָוָתְהוֹן לׇקֳבֵל דִּֽי־שְׁלַח דָּרְיָוֶשׁ מַלְכָּא כְּנֵמָא אׇסְפַּרְנָא עֲבַֽדוּ׃
14 ಹಾಗೆಯೇ ಯೆಹೂದ್ಯರ ಹಿರಿಯರು ಕಟ್ಟಿಸಿ, ಪ್ರವಾದಿಗಳಾದ ಹಗ್ಗಾಯನೂ, ಇದ್ದೋನನ ಮಗನಾದ ಜೆಕರ್ಯನೂ ಪ್ರವಾದಿಸಿದ್ದರಿಂದ ಅಭಿವೃದ್ಧಿಯನ್ನು ಹೊಂದಿದರು. ಅವರು ಇಸ್ರಾಯೇಲ್ ದೇವರ ಅಪ್ಪಣೆಯ ಪ್ರಕಾರವೂ, ಕೋರೆಷ್, ದಾರ್ಯಾವೆಷ್ ಹಾಗೂ ಅರ್ತಷಸ್ತ ಎಂಬ ಪರ್ಷಿಯದ ರಾಜರ ಅಪ್ಪಣೆಯ ಪ್ರಕಾರವೂ ಕಟ್ಟಿ ತೀರಿಸಿದರು.
וְשָׂבֵי יְהוּדָיֵא בָּנַיִן וּמַצְלְחִין בִּנְבוּאַת חַגַּי (נביאה) [נְבִיָּא] וּזְכַרְיָה בַּר־עִדּוֹא וּבְנוֹ וְשַׁכְלִלוּ מִן־טַעַם אֱלָהּ יִשְׂרָאֵל וּמִטְּעֵם כּוֹרֶשׁ וְדָרְיָוֶשׁ וְאַרְתַּחְשַׁשְׂתְּא מֶלֶךְ פָּרָֽס׃
15 ಅರಸನಾದ ದಾರ್ಯಾವೆಷನ ಆಳಿಕೆಯ ಆರನೆಯ ವರ್ಷದ ಆಡಾರ್ ತಿಂಗಳ, ಮೂರನೆಯ ದಿವಸದಲ್ಲಿ ಈ ಆಲಯವನ್ನು ಕಟ್ಟಿ ಮುಗಿಸಲಾಯಿತು.
וְשֵׁיצִיא בַּיְתָה דְנָה עַד יוֹם תְּלָתָה לִירַח אֲדָר דִּי־הִיא שְׁנַת־שֵׁת לְמַלְכוּת דָּרְיָוֶשׁ מַלְכָּֽא׃
16 ಆಗ ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ಸೆರೆಯಿಂದ ಬಂದ ಮಿಕ್ಕಾದವರೂ ದೇವರ ಆಲಯವನ್ನು ಸಂತೋಷದಿಂದ ಪ್ರತಿಷ್ಠಾಪಿಸಿದರು.
וַעֲבַדוּ בְנֵֽי־יִשְׂרָאֵל כָּהֲנַיָּא וְלֵוָיֵא וּשְׁאָר בְּנֵי־גָלוּתָא חֲנֻכַּת בֵּית־אֱלָהָא דְנָה בְּחֶדְוָֽה׃
17 ದೇವರ ಆಲಯದ ಪ್ರತಿಷ್ಠಾಪನೆಗೋಸ್ಕರ ನೂರು ಹೋರಿಗಳನ್ನೂ, ಇನ್ನೂರು ಟಗರುಗಳನ್ನೂ, ನಾನೂರು ಕುರಿಮರಿಗಳನ್ನೂ, ಇಸ್ರಾಯೇಲ್ ಕುಲ ಗೋತ್ರಗಳ ಲೆಕ್ಕದ ಪ್ರಕಾರ, ಸಮಸ್ತ ಇಸ್ರಾಯೇಲರ ದೋಷಪರಿಹಾರ ಬಲಿಗಾಗಿ ಹನ್ನೆರಡು ಮೇಕೆಯ ಹೋತಗಳನ್ನೂ ಅರ್ಪಿಸಿದರು.
וְהַקְרִבוּ לַחֲנֻכַּת בֵּית־אֱלָהָא דְנָה תּוֹרִין מְאָה דִּכְרִין מָאתַיִן אִמְּרִין אַרְבַּע מְאָה וּצְפִירֵי עִזִּין (לחטיא) [לְחַטָּאָה] עַל־כׇּל־יִשְׂרָאֵל תְּרֵֽי־עֲשַׂר לְמִנְיָן שִׁבְטֵי יִשְׂרָאֵֽל׃
18 ಮೋಶೆಯ ಗ್ರಂಥದಲ್ಲಿ ಬರೆದ ಹಾಗೆ ಯೆರೂಸಲೇಮಿನಲ್ಲಿ ವಾಸವಾಗಿರುವ ದೇವರ ಆರಾಧನೆಗೋಸ್ಕರ ಯಾಜಕರನ್ನು ಮತ್ತು ಲೇವಿಯರನ್ನು ಅವರ ಸರತಿಯ ಪ್ರಕಾರವೂ ನೇಮಿಸಿದರು.
וַהֲקִימוּ כָהֲנַיָּא בִּפְלֻגָּתְהוֹן וְלֵוָיֵא בְּמַחְלְקָתְהוֹן עַל־עֲבִידַת אֱלָהָא דִּי בִירוּשְׁלֶם כִּכְתָב סְפַר מֹשֶֽׁה׃
19 ಇದಲ್ಲದೆ ಸೆರೆಯಿಂದ ಬಂದವರು ಮೊದಲನೆಯ ತಿಂಗಳಿನ, ಹದಿನಾಲ್ಕನೆಯ ದಿವಸದಲ್ಲಿ ಪಸ್ಕವನ್ನು ಆಚರಿಸಿದರು.
וַיַּעֲשׂוּ בְנֵי־הַגּוֹלָה אֶת־הַפָּסַח בְּאַרְבָּעָה עָשָׂר לַחֹדֶשׁ הָרִאשֽׁוֹן׃
20 ಯಾಜಕರೂ ಲೇವಿಯರೂ ಕೂಡ ಶುದ್ಧ ಮಾಡಿಕೊಂಡಿದ್ದರು. ಅವರೆಲ್ಲರು ಶುದ್ಧರಾದ ನಂತರ, ಲೇವಿಯರು ಸೆರೆಯಿಂದ ಬಂದವರೆಲ್ಲರಿಗೋಸ್ಕರವೂ, ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ, ತಮಗೋಸ್ಕರವೂ ಪಸ್ಕದ ಕುರಿಮರಿಯನ್ನು ವಧಿಸಿದರು.
כִּי הִֽטַּהֲרוּ הַכֹּהֲנִים וְהַלְוִיִּם כְּאֶחָד כֻּלָּם טְהוֹרִים וַיִּשְׁחֲטוּ הַפֶּסַח לְכׇל־בְּנֵי הַגּוֹלָה וְלַאֲחֵיהֶם הַכֹּהֲנִים וְלָהֶֽם׃
21 ಸೆರೆಯಿಂದ ತಿರುಗಿ ಬಂದ ಇಸ್ರಾಯೇಲರು ತಮ್ಮ ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರನ್ನು ಹುಡುಕಲು ದೇಶದ ಜನಾಂಗಗಳ ಅಶುದ್ಧತೆಯಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡು, ಅವರ ಕಡೆಗೆ ಸೇರಿದ ಸಮಸ್ತರೂ ಅದನ್ನು ತಿಂದು,
וַיֹּאכְלוּ בְנֵֽי־יִשְׂרָאֵל הַשָּׁבִים מֵֽהַגּוֹלָה וְכֹל הַנִּבְדָּל מִטֻּמְאַת גּוֹיֵֽ־הָאָרֶץ אֲלֵהֶם לִדְרֹשׁ לַֽיהֹוָה אֱלֹהֵי יִשְׂרָאֵֽל׃
22 ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಸಂತೋಷದಿಂದ ಏಳು ದಿವಸ ಆಚರಿಸಿದರು. ಏಕೆಂದರೆ ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರ ಆಲಯದ ಕಾರ್ಯದಲ್ಲಿ ಅವರ ಕೈಗಳನ್ನು ಬಲಪಡಿಸುವುದಕ್ಕೆ ಅಸ್ಸೀರಿಯ ದೇಶದ ಅರಸನ ಹೃದಯವನ್ನು, ಅವರ ಕಡೆಗೆ ಮನಪರಿವರ್ತಿಸಿದ್ದರಿಂದ ಯೆಹೋವ ದೇವರು ಅವರನ್ನು ಸಂತೋಷಪಡಿಸಿದರು.
וַיַּֽעֲשׂוּ חַג־מַצּוֹת שִׁבְעַת יָמִים בְּשִׂמְחָה כִּי ׀ שִׂמְּחָם יְהֹוָה וְֽהֵסֵב לֵב מֶֽלֶךְ־אַשּׁוּר עֲלֵיהֶם לְחַזֵּק יְדֵיהֶם בִּמְלֶאכֶת בֵּית־הָאֱלֹהִים אֱלֹהֵי יִשְׂרָאֵֽל׃

< ಎಜ್ರನು 6 >