< ಎಜ್ರನು 3 >
1 ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಾಯೇಲರು, ಏಳನೆಯ ತಿಂಗಳಿನಲ್ಲಿ ಏಕಮನಸ್ಸಿನಿಂದ ಯೆರೂಸಲೇಮಿಗೆ ಕೂಡಿಬಂದರು.
And now the seventh month was come, and the children of Israel were in their cities: and the people gathered themselves together as one man to Jerusalem.
2 ಆಗ ಯೋಚಾದಾಕನ ಮಗನಾದ ಯೇಷೂವನೂ, ಅವನ ಜೊತೆ ಯಾಜಕರೂ, ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ, ಅವನ ಸಹಾಯಕರು ಎದ್ದು ದೇವರ ಮನುಷ್ಯನಾದ ಮೋಶೆಯ ನಿಯಮದಲ್ಲಿ ಬರೆದಿರುವ ಹಾಗೆ ದಹನಬಲಿಗಳನ್ನು ಅರ್ಪಿಸುವುದಕ್ಕೆ ಇಸ್ರಾಯೇಲ್ ದೇವರ ಬಲಿಪೀಠವನ್ನು ಕಟ್ಟಿಸಿದರು.
And Josue the son of Josedec rose up, and his brethren the priests, and Zorobabel the son of Salathiel, and his brethren, and they built the altar of the God of Israel that they might offer holocausts upon it, as it is written in the law of Moses the mall of God.
3 ಸುತ್ತಮುತ್ತಲಿನ ಜನರ ಭಯವಿದ್ದರೂ, ಅವರು ಬಲಿಪೀಠವನ್ನು ಅದರ ಅಸ್ತಿವಾರದ ಮೇಲೆ ಕಟ್ಟಿದರು. ಅದರ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ ಅರ್ಪಿಸಿದರು.
And they set the altar of God upon its bases, while the people of the lands round about put them in fear, and they offered upon it a holocaust to the Lord morning and evening.
4 ಇದಲ್ಲದೆ ದೇವರ ನಿಯಮದಲ್ಲಿ ಬರೆದಿರುವಂತೆ ಅವರು ಗುಡಾರಗಳ ಹಬ್ಬವನ್ನು ಆಚರಿಸಿ ಪ್ರತಿದಿನದ ಕಾರ್ಯಕ್ಕೆ ತಕ್ಕ ನೇಮಕದ ಹಾಗೆ ಲೆಕ್ಕದಿಂದ ಪ್ರತಿದಿನದ ದಹನಬಲಿಗಳನ್ನು ಅರ್ಪಿಸಿದರು.
And they kept the feast of tabernacles, as it is written, and offered the holocaust every day orderly according to the commandment, the duty of the day in its day.
5 ಅದರ ತರುವಾಯ ಅವರು ನಿತ್ಯ ದಹನಬಲಿ, ಅಮಾವಾಸ್ಯೆ ಬಲಿ, ಯೆಹೋವ ದೇವರ ಎಲ್ಲಾ ಪರಿಶುದ್ಧ ಹಬ್ಬಗಳಲ್ಲಿಯೂ ಜನರು ಅರ್ಪಿಸುವ ಸ್ವಂತ ಇಚ್ಛೆಯಿಂದ ತಂದ ಬಲಿದಾನಗಳ ಬಲಿಯನ್ನೂ ಸಮರ್ಪಿಸಿದರು.
And afterwards the continual holocaust, both on the new moons, and on all the solemnities of the Lord, that were consecrated, and on all in which a free-will offering was made to the Lord.
6 ಏಳನೆಯ ತಿಂಗಳಿನ, ಮೊದಲನೆಯ ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಲು ಪ್ರಾರಂಭಿಸಿದರು. ಆದರೆ ಯೆಹೋವ ದೇವರ ಮಂದಿರದ ಅಸ್ತಿವಾರವನ್ನು ಇನ್ನೂ ಹಾಕಿರಲಿಲ್ಲ.
From the first day of the seventh month they began to offer holocausts to the Lord: but the temple of God was not yet founded.
7 ಅವರು ಕಲ್ಲುಕುಟಿಕರಿಗೂ, ಬಡಗಿಯವರಿಗೂ, ಹಣವನ್ನು ಕೊಟ್ಟು ಪಾರಸಿಯ ಅರಸನಾದ ಕೋರೆಷನಿಂದ ಹೊಂದಿದ ಅಪ್ಪಣೆಯ ಪ್ರಕಾರ, ಲೆಬನೋನಿನಿಂದ ಯೊಪ್ಪದ ಸಮುದ್ರದ ಮಟ್ಟಿಗೂ ದೇವದಾರು ಮರಗಳನ್ನು ತೆಗೆದುಕೊಂಡು ಬರಲು ಸೀದೋನ್ಯರಿಗೂ, ಟೈರಿನವರಿಗೂ ಅನ್ನಪಾನಗಳನ್ನೂ, ಎಣ್ಣೆಯನ್ನೂ ಕೊಟ್ಟರು.
And they gave money to hewers of stones and to masons: and meat and drink, and oil to the Sidonians and Tyrians, to bring cedar trees from Libanus to the sea of Joppe, according to the orders which Cyrus king of the Persians had given them.
8 ಅವರು ಯೆರೂಸಲೇಮಿನಲ್ಲಿದ್ದ ದೇವರ ಆಲಯಕ್ಕೆ ಬಂದ ಎರಡನೆಯ ವರ್ಷದ, ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ, ಯೋಚಾದಾಕನ ಮಗ ಯೇಷೂವನೂ, ಉಳಿದ ಅವರ ಸಹೋದರರಾದ ಯಾಜಕರೂ, ಲೇವಿಯರೂ ಸೆರೆಯಿಂದ ಯೆರೂಸಲೇಮಿಗೆ ಬಂದ ಎಲ್ಲರೂ, ಕೆಲಸವನ್ನು ಪ್ರಾರಂಭಿಸಿ ಇಪ್ಪತ್ತು ವರ್ಷ ಪ್ರಾಯಕ್ಕೆ ಹೆಚ್ಚಿದ ಲೇವಿಯರನ್ನು ಯೆಹೋವ ದೇವರ ಆಲಯದ ಕೆಲಸ ಮಾಡುವವರ ಮೇಲೆ ಮೇಲ್ವಿಚಾರಕರನ್ನಾಗಿ ನೇಮಿಸಿದರು.
And in the second year of their coming to the temple of God in Jerusalem, the second month, Zorobabel the son of Salathiel, and Josue the son of Josedec, and the rest of their brethren the priests, and the Levites, and all that were come from the captivity to Jerusalem began, and they appointed Levites from twenty years old and upward, to hasten forward the work of the Lord.
9 ಯೇಷೂವನೂ, ಅವನ ಮಕ್ಕಳೂ, ಅವನ ಸಹೋದರರೂ, ಕದ್ಮಿಯೇಲ್ ಮತ್ತು ಅವನ ಮಕ್ಕಳೂ, ಇವರು ಹೋದವ್ಯನ ವಂಶಜರು. ಹೇನಾದಾದನ ಮಕ್ಕಳೂ, ಅವರ ಮಕ್ಕಳೂ, ಅವರ ಸಹೋದರರೂ, ಲೇವಿಯರೂ ಆಗ ದೇವರ ಆಲಯದಲ್ಲಿ ಕೆಲಸ ಮಾಡುವವರ ಮೇಲ್ವಿಚಾರಣೆ ಮಾಡಲು ನಿಂತರು.
Then Josue and his sons and his brethren, Cedmihel, and his sons, and the children of Juda, as one man, stood to hasten them that did the work in the temple of God: the sons of Henadad, and their sons, and their brethren the Levites.
10 ಕಟ್ಟುವವರು ಯೆಹೋವ ದೇವರ ಮಂದಿರಕ್ಕೆ ಅಸ್ತಿವಾರ ಹಾಕಿದಾಗ ಇಸ್ರಾಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಯೆಹೋವ ದೇವರನ್ನು ಸ್ತುತಿಸುವುದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವರಾಗಿ ತುತೂರಿಗಳನ್ನೂದುವ ಯಾಜಕರನ್ನೂ, ತಾಳಗಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಸಿದ್ಧಪಡಿಸಿದರು.
And when the masons laid the foundations of the temple of the Lord, the priests stood in their ornaments with trumpets: and the Levites the sons of Asaph with cymbals, to praise God by the hands of David king of Israel.
11 ಪರಸ್ಪರವಾಗಿ ಹಾಡುತ್ತಾ, ಕೃತಜ್ಞತಾಸ್ತುತಿ ಮಾಡುತ್ತಾ ಯೆಹೋವ ದೇವರನ್ನು ಕೀರ್ತಿಸಿದರು: “ಯೆಹೋವ ದೇವರು ಒಳ್ಳೆಯವರು! ಅವರ ಅಚಲ ಪ್ರೀತಿ ಇಸ್ರಾಯೇಲರ ಮೇಲೆ ಶಾಶ್ವತ!” ಈ ಸ್ತುತಿ ಕೀರ್ತನೆ ಕೇಳಿಸಿದ ಕೂಡಲೆ, ಯೆಹೋವ ದೇವರ ಆಲಯಕ್ಕೆ ಅಸ್ತಿವಾರ ಹಾಕಲಾಯಿತೆಂದು ಜನರೆಲ್ಲರು ಉತ್ಸಾಹಧ್ವನಿಯಿಂದ ಆರ್ಭಟಿಸಿದರು.
And they sung together hymns, and praise to the Lord: because he is good, for his mercy endureth for ever towards Israel. And all the people shouted with a great shout, praising the Lord, because the foundations of the temple of the Lord were laid.
12 ಮೊದಲಿನ ಮಂದಿರವನ್ನು ಕಂಡಿದ್ದ ವೃದ್ಧರಾದ ಯಾಜಕರೂ ಲೇವಿಯ ಅನೇಕ ಕುಟುಂಬಗಳ ಪ್ರಮುಖರೂ ಅನೇಕರು ಈ ಮಂದಿರದ ಅಸ್ತಿವಾರವನ್ನು ತಮ್ಮ ಮುಂದೆ ಹಾಕುತ್ತಿರುವಾಗ ದೊಡ್ಡ ಶಬ್ದದಿಂದ ಅತ್ತರು.
But many of the priests and the Levites, and the chief of the fathers and the ancients that had seen the former temple; when they had the foundation of this temple before their eyes, wept with a loud voice: and many shouting for joy, lifted up their voice.
13 ಜನರು ಹೀಗೆ ಮಹಾಧ್ವನಿಯಿಂದ ಆರ್ಭಟಿಸುತ್ತಾ ಇದ್ದುದರಿಂದ, ಹರ್ಷಧ್ವನಿ ಯಾವುದು, ಅಳುವವರ ಧ್ವನಿ ಯಾವುದು ಎಂದು ಗುರುತಿಸಲಾಗಲಿಲ್ಲ. ಗದ್ದಲವು ಬಹು ದೂರದವರೆಗೂ ಕೇಳಿಸುತ್ತಿತ್ತು.
So that one could not distinguish the voice of the shout of joy, from the noise of the weeping of the people: for one with another the people shouted with a loud shout, and the voice was heard afar off.