< ಎಜ್ರನು 10 >
1 ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅತ್ತು ದೇವರ ಆಲಯದ ಮುಂದೆ ಅಡ್ಡಬಿದ್ದ ತರುವಾಯ ಇಸ್ರಾಯೇಲರಲ್ಲಿ ಸ್ತ್ರೀಯರೂ, ಪುರುಷರೂ, ಮಕ್ಕಳು ಮಹಾಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡು ಬಂದರು. ಜನರು ಬಹಳವಾಗಿ ಅತ್ತರು.
當厄斯德拉淚流如注,俯伏在天主殿祈禱認罪時,有很大的一群以色列人,男、女、孩童都聚集在她四周,民眾也都流淚痛哭。
2 ಆಗ ಏಲಾಮನ ವಂಶಜರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ, “ನಾವು ಅನ್ಯದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡದ್ದರಿಂದ, ನಮ್ಮ ದೇವರಿಗೆ ವಿರೋಧವಾಗಿ ದ್ರೋಹಮಾಡಿದ್ದೇವೆ. ಆದರೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲರಲ್ಲಿ ನಿರೀಕ್ಷೆ ಉಂಟು.
當時厄藍子孫中有一位,即耶希耳的兒子舍加尼雅,發言向厄斯德拉說:「我們由本地異民中娶了外婦女,實在得罪了天主,但對此事為以色列還有希望。
3 ಆದಕಾರಣ ನಮ್ಮ ಒಡೆಯನಾದ ನಿನ್ನ ಯೋಚನೆಯ ಪ್ರಕಾರವಾಗಿಯೂ, ನಮ್ಮ ದೇವರ ಆಜ್ಞೆಗೆ ಭಯಪಡುವವರ ಯೋಚನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ, ಅವರಿಂದ ಹುಟ್ಟಿದವರನ್ನೂ ಕಳುಹಿಸಿಬಿಡಲು, ಈಗಲೇ ನಮ್ಮ ದೇವರ ಮುಂದೆ ಒಡಂಬಡಿಕೆ ಮಾಡಿಕೊಂಡು, ದೇವರ ನಿಯಮದ ಪ್ರಕಾರ ನಡೆಯೋಣ.
現在我們與我們的天主立約,離棄這些婦女和她們所生的兒女,全照我主和那些對我們天主誡命起敬起畏者的意見,依照法律行事。
4 ನೀನು ಏಳು, ಏಕೆಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ನಿಲ್ಲುತ್ತೇವೆ. ಧೈರ್ಯದಿಂದ ಅದನ್ನು ಮಾಡು,” ಎಂದನು.
起來! 因為這事全在妳身上,我們支持妳,妳應勇敢去作! 」
5 ಆಗ ಎಜ್ರನು ಎದ್ದು, ಮಹಾಯಾಜಕರೂ ಲೇವಿಯರೂ ಸಮಸ್ತ ಇಸ್ರಾಯೇಲರೂ ಈ ಮಾತಿನ ಪ್ರಕಾರವಾಗಿ ಮಾಡಲು, ಅವರು ಆಣೆಯಿಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು.
厄斯德拉便起來,令司祭並肋未人首領起誓,必按這話去做;他們就發了誓。
6 ಆಮೇಲೆ ಎಜ್ರನು ಎದ್ದು ದೇವರ ಆಲಯದ ಮುಂಭಾಗದ ಸ್ಥಳವನ್ನು ಬಿಟ್ಟು, ಎಲ್ಯಾಷೀಬನ ಮಗ ಯೆಹೋಹಾನಾನನ ಕೊಠಡಿಗೆ ಹೋಗಿ, ದುಃಖಿಸುತ್ತಾ ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು. ಏಕೆಂದರೆ ಸೆರೆಯಿಂದ ಯೆರೂಸಲೇಮಿಗೆ ಬಂದಿದ್ದ ಯೆಹೂದ್ಯರ ಅಪನಂಬಿಗಸ್ತಿಕೆಯ ಬಗ್ಗೆ ತುಂಬಾ ದುಃಖಿತನಾಗಿದ್ದನು.
厄斯德拉遂離開天主的殿,到了厄肋雅史的兒子約哈南的房裏,在那裏過夜,飯也不吃,水也不喝,因為她對充軍歸來者的罪惡悲傷。
7 ತರುವಾಯ ಸೆರೆಯಿಂದ ಬಂದವರೆಲ್ಲರೂ ಯೆರೂಸಲೇಮಿಗೆ ಕೂಡಿಬರಬೇಕೆಂದು ಸಮಸ್ತ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಸಾರಲಾಗಿತ್ತು.
首領們遂在猶大和耶路撒冷發出通告,令充軍歸來的人都聚集在耶路撒冷;
8 ಇದಲ್ಲದೆ ಯಾವನಾದರೂ ಪ್ರಧಾನರ, ಹಿರಿಯರ ನಿರ್ಣಯದ ಪ್ರಕಾರ ಮೂರು ದಿವಸದಲ್ಲಿ ಬಾರದೆ ಇದ್ದರೆ, ಅವನ ಆಸ್ತಿಯೆಲ್ಲಾ ದಂಡವಾಗಿ ತೆಗೆದುಕೊಳ್ಳಲಾಗುವುದೆಂದೂ, ಅವನು ಸೆರೆಯಿಂದ ಬಂದವರ ಕೂಟದಿಂದ ಬಹಿಷ್ಕೃತನಾಗುವನು ಎಂದೂ ಪ್ರಕಟಿಸಿದರು.
照眾首領和長老的議決:凡三日不來者,他的一切財產應充公,他本人也應由充軍歸來的會眾中革除。
9 ಆಗ ಯೆಹೂದ ಮತ್ತು ಬೆನ್ಯಾಮೀನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿದರು. ಅದು ಒಂಬತ್ತನೆಯ ತಿಂಗಳ, ಇಪ್ಪತ್ತನೆಯ ದಿವಸವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೋಸ್ಕರವೂ, ಮಳೆಗೋಸ್ಕರವೂ ನಡುಗಿ ಕುಳಿತುಕೊಂಡಿದ್ದರು.
所有猶大和本雅明人,三又內都聚集在耶路撒冷,時在九月日,眾人都坐在天主殿前的廣場上,為了這事和大雨的緣故,都戰戰兢兢。
10 ಆಗ ಯಾಜಕನಾದ ಎಜ್ರನು ಎದ್ದು ಅವರಿಗೆ, “ನೀವು ಇಸ್ರಾಯೇಲರ ಅಪರಾಧವನ್ನು ಅಧಿಕವಾಗಿ ಮಾಡಲು, ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದರಿಂದ ದ್ರೋಹ ಮಾಡಿದಿರಿ.
厄斯德拉司祭起來向他們說:「你們娶了外方婦女而失了信,增加了以色列的罪孽;
11 ಆದ್ದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಯೆಹೋವ ದೇವರ ಮುಂದೆ ನಿಮ್ಮ ಪಾಪಗಳನ್ನು ಅರಿಕೆಮಾಡಿ, ಅವರ ಚಿತ್ತದ ಪ್ರಕಾರಮಾಡಿ, ಈ ದೇಶದ ಜನರಿಂದಲೂ, ಅನ್ಯ ಸ್ತ್ರೀಯರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ,” ಎಂದನು.
現今你們應向上主你們的天主認罪,承行衪的旨意,離開本地異民和外方婦女」。
12 ಆಗ ಸಭೆಯೆಲ್ಲಾ ಉತ್ತರವಾಗಿ ದೊಡ್ಡ ಶಬ್ದದಿಂದ, “ನೀನು ಸರಿಯಾಗಿ ಹೇಳಿದೆ! ನೀನು ಹೇಳಿದ ಪ್ರಕಾರವೇ ನಾವು ಮಾಡಬೇಕು.
全會眾都高聲回答說:「你怎樣說,我們就怎樣做。
13 ಆದರೆ ಜನರು ಅನೇಕರು. ಇದು ಮಳೆಗಾಲವಾಗಿರುವುದರಿಂದ ಹೊರಗೆ ಇರಲಾರೆವು. ಇದಲ್ಲದೆ ಇದು ಒಂದೆರಡು ದಿನಗಳ ಕೆಲಸವಲ್ಲ. ಏಕೆಂದರೆ ಈ ಕಾರ್ಯದಲ್ಲಿ ನಮ್ಮ ಅಪರಾಧವು ದೊಡ್ಡದು.
但因人民眾多,又兼雨季,我們不能留在露天地裏,何況又不是一兩天能完成的事,因為我們在這事上越規的人實在太多。
14 ಆದಕಾರಣ ದಯಮಾಡಿ ಸಭೆಯ ಎಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಈ ಕಾರ್ಯದ ನಿಮಿತ್ತ ನಮ್ಮ ದೇವರ ಕಠಿಣ ಕೋಪವು ನಮ್ಮನ್ನು ಬಿಟ್ಟು ಹೋಗುವವರೆಗೆ, ನಮ್ಮ ಪಟ್ಟಣಗಳಲ್ಲಿ ಯಹೂದ್ಯರಲ್ಲದ ಸ್ತ್ರೀಯರನ್ನು ತೆಗೆದುಕೊಂಡವರು, ನೇಮಿಸಿದ ಕಾಲದಲ್ಲಿ ಬಂದು, ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ, ಅದರ ನ್ಯಾಯಾಧಿಪತಿಗಳೂ ಇರಲಿ,” ಎಂದರು.
讓我們的首領為眾會眾負責好了! 凡在我們城內娶了外方婦女人,照指定的時候,同自己城內的長老和判官,一起前來了結此案,直到挽回我們的天主對此事的盛怒」。
15 ಆದರೆ ಅಸಾಯೇಲನ ಮಗ ಯೋನಾತಾನ್ ಹಾಗು, ತಿಕ್ವನ ಮಗ ಯಹ್ಜೆಯ ಇದನ್ನು ವಿರೋಧಿಸಿದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈನೂ ಅವರನ್ನು ಬೆಂಬಲಿಸಿದರು.
只有阿撒耳的兒子約納堂,和提克瓦的兒子雅赫則雅,起來反對這種辦法;還有默叔藍和肋未人沙貝泰,支持他們。
16 ಸೆರೆಯಿಂದ ಬಂದವರು ಇದೇ ಪ್ರಕಾರ ಮಾಡಿದರು. ಆದ್ದರಿಂದ ಯಾಜಕ ಎಜ್ರನು, ಕುಟುಂಬಗಳ ಮುಖ್ಯಸ್ಥರನ್ನಾಗಿ ಕುಟುಂಬಕ್ಕೆ ಒಬ್ಬೊಬ್ಬರನ್ನು ಆಯ್ದುಕೊಂಡನು. ಅವರನ್ನು ಹೆಸರು ಹಿಡಿದು ನೇಮಿಸಿದನು. ಈ ಕಾರ್ಯವನ್ನು ಶೋಧಿಸಲು ಹತ್ತನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಕುಳಿತುಕೊಂಡರು.
由充軍歸來的子民就這樣做了。厄斯德拉司祭,於是由各家族為自己選擇了一些族長,都的提名指定的。他們便在十月一日,開庭審查此案,
17 ಅನ್ಯ ಸ್ತ್ರೀಯರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಮುಗಿಸಿದರು.
直到一且日,方才辦完關於娶外方婦女的男子的案件。
18 ಯಾಜಕರ ವಂಶಜರಲ್ಲಿ ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡವರು ಯಾರೆಂದರೆ: ಯೋಚಾದಾಕನ ಮಗ ಯೇಷೂವನು ಮತ್ತು ಅವನ ಸಹೋದರರಲ್ಲಿ: ಮಾಸೇಯನು, ಎಲೀಯೆಜೆರನು, ಯಾರೀಬನು, ಗೆದಲ್ಯನು.
在司祭中,發現有些人娶了外方的婦女;約匝達克的兒子耶叔亞的子孫和他的兄弟中,有瑪阿色雅、厄里阿厄則爾、雅黎布和革達里雅;
19 ಇವರು ತಮ್ಮ ಹೆಂಡತಿಯರನ್ನು ಹೊರಡಿಸಿಬಿಡುವೆವೆಂದು ಪ್ರತಿಜ್ಞೆ ಮಾಡಿ, ತಾವು ಅಪರಾಧಸ್ಥರಾದ್ದರಿಂದ ಅಪರಾಧ ಕಳೆಯುವುದಕ್ಕೆ ಮಂದೆಯಿಂದ ತಂದ ಒಂದು ಟಗರನ್ನು ಅರ್ಪಿಸಿದರು.
他們宣誓辭去自己的妻子,為贖自己的罪,獻了一公綿羊作贖過祭。
20 ಇಮ್ಮೇರನ ವಂಶಜರಲ್ಲಿ: ಹನಾನೀ, ಜೆಬದ್ಯ.
依默爾的子孫,有哈納尼和則巴狄雅;
21 ಹಾರಿಮನ ವಂಶಜರಲ್ಲಿ: ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ.
哈陵的子孫有瑪阿色雅、厄里雅、舍瑪雅、耶希耳和烏雅;
22 ಪಷ್ಹೂರನ ವಂಶಜರಲ್ಲಿ: ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೆಯೇಲ್, ಯೋಜಾಬಾದ್ ಮತ್ತು ಎಲ್ಲಾಸ.
帕市胡爾的子孫,有厄里約乃、瑪阿色雅、依市瑪耳、乃塔乃耳、約匝巴得和厄拉撒;
23 ಲೇವಿಯರಲ್ಲಿ ಯೋಜಾಬಾದ್, ಶಿಮ್ಮೀ, ಕೆಲೀಟನೆಂಬ ಕೇಲಾಯ, ಪೆತಹ್ಯ, ಯೆಹೂದ, ಎಲೀಯೆಜೆರ್.
肋未人有約匝巴得、史米、刻拉雅即刻里達、培塔希雅、猶達和厄里厄則爾;
24 ಹಾಡುಗಾರರಲ್ಲಿ: ಎಲ್ಯಾಷೀಬ್. ದ್ವಾರಪಾಲಕರಲ್ಲಿ: ಶಲ್ಲೂಮ್, ಟೆಲೆಮ್, ಊರಿ.
歌詠者中有厄肋雅史布;守門者中有沙隆、特冷和烏黎。
25 ಇಸ್ರಾಯೇಲರಲ್ಲಿ: ಪರೋಷನ ವಂಶಜರಲ್ಲಿ: ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯಾಮಿನ್, ಎಲಿಯಾಜರ್, ಮಲ್ಕೀಯ, ಬೆನಾಯ.
以色列平民帕洛士的子孫,有辣米雅、依齊雅。瑪耳基雅、米雅明、厄肋阿匝爾、瑪耳基雅和貝納雅;
26 ಏಲಾಮನ ವಂಶಜರಲ್ಲಿ: ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೀಮೋತ್, ಎಲೀಯ.
厄藍的子孫,有瑪塔尼雅、則加黎雅、耶希耳、阿貝狄、耶勒摩特和厄里雅、;
27 ಜತ್ತೂ ವಂಶಜರಲ್ಲಿ: ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೀಮೋತ್, ಜಾಬಾದ್ ಮತ್ತು ಅಜೀಜಾ.
厄突的子孫,有厄里約乃、厄肋雅史布、瑪塔尼雅、耶勒摩特、匝巴得和阿齊匝;
28 ಬೇಬೈನ ವಂಶಜರಲ್ಲಿ: ಯೆಹೋಹಾನಾನ್, ಹನನ್ಯ, ಜಬ್ಬೈ, ಅತ್ಲೈ.
貝拜的子孫,有約哈南、哈納尼雅、匝拜和阿特來;
29 ಬಾನೀ ವಂಶಜರಲ್ಲಿ: ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್ ಮತ್ತು ರಾಮೋತ್.
巴尼的子孫,有默叔藍、瑪路克、哈達雅、雅叔布、舍阿耳和耶勒摩特;
30 ಪಹತ್ ಮೋವಾಬಿನ ವಂಶಜರಲ್ಲಿ: ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲಯೇಲ್, ಬಿನ್ನೂಯ್, ಮನಸ್ಸೆ.
帕哈特摩阿布的子孫,有阿德納、革拉耳、貝納雅、瑪阿色雅、瑪塔尼雅、貝匝肋耳、彼奴依和默納舍;
31 ಹಾರಿಮನ ವಂಶಜರಲ್ಲಿ: ಎಲೀಯೆಜೆರ್, ಇಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್,
哈陵的子孫,有厄里厄則爾、依史雅、瑪耳基雅、舍瑪雅、史默紅、
32 ಬೆನ್ಯಾಮೀನ್, ಮಲ್ಲೂಕ್, ಶೆಮರ್ಯ.
本雅明、瑪路克和舍瑪黎雅;
33 ಹಾಷುಮ್ ವಂಶಜರಲ್ಲಿ: ಮತ್ತೆನೈ, ಮತ್ತತ್ತ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ, ಶಿಮ್ಮೀ.
哈雄的子孫,有瑪特厏、瑪達達、匝巴得、厄里培約特、耶勒買、默納舍和史米;
34 ಬಾನೀ ವಂಶಜರಲ್ಲಿ: ಮಾದೈ, ಅಮ್ರಾಮ್, ಉಯೇಲ್,
巴尼的子孫,有瑪阿待、阿默蘭、約厄耳、
36 ವನ್ಯಾಹ, ಮೆರೇಮೋತ್, ಎಲ್ಯಾಷೀಬ್,
瓦尼雅、默勒摩特、厄肋雅史布、
37 ಮತ್ತನ್ಯ, ಮತ್ತೆನೈ, ಯಾಸೈ.
瑪塔尼雅、瑪特乃、雅阿掃、
38 ಬಾನೀ, ಬಿನ್ನೂಯ್ ವಂಶಜರಲ್ಲಿ: ಶಿಮ್ಮೀ,
巴尼、彼奴依、史米、
39 ಶೆಲೆಮ್ಯ, ನಾತಾನ್, ಅದಾಯ,
舍肋米雅、納堂、阿達雅、
41 ಅಜರಯೇಲ್, ಶೆಲೆಮ್ಯ, ಶೆಮರ್ಯ,
阿匝勒耳、舍勒米雅、舍瑪黎雅、
42 ಶಲ್ಲೂಮ್, ಅಮರ್ಯ, ಯೋಸೇಫ್.
沙隆、阿瑪黎雅、約色夫;
43 ನೆಬೋ ವಂಶಜರಲ್ಲಿ: ಯೆಹಿಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋಯೇಲ್ ಮತ್ತು ಬೆನಾಯ.
乃波的子孫,有耶依耳、瑪提提雅、匝巴得、則彼納、約厄耳和貝納雅;
44 ಇವರೆಲ್ಲರು ಅನ್ಯ ಸ್ತ್ರೀಯರನ್ನು ಮದುವೆಯಾಗಿದ್ದರು. ಇವರಲ್ಲಿ ಕೆಲವರಿಗೆ ಈ ಹೆಂಡತಿಯರಿಂದ ಮಕ್ಕಳಾಗಿದ್ದರು.
以上諸人都娶了外方婦女,有的婦女也生了兒女。