< ಯೆಹೆಜ್ಕೇಲನು 6 >

1 ಯೆಹೋವ ದೇವರು ಈ ವಾಕ್ಯವು ನನಗೆ ಬಂದಿತು:
BOEIPA ol te kai taengla ha pawk tih,
2 “ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಪರ್ವತಗಳಿಗೆ ಅಭಿಮುಖನಾಗಿ ನಿಂತು, ಅವುಗಳಿಗೆ ವಿರೋಧವಾಗಿ ಹೀಗೆ ಪ್ರವಾದಿಸು,
Hlang capa aw, Israel tlang taengla na maelhmai khueh lamtah amih te tonghma thil laeh.
3 ‘ಇಸ್ರಾಯೇಲಿನ ಪರ್ವತಗಳೇ, ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಹೌದು, ಸಾರ್ವಭೌಮ ಯೆಹೋವ ದೇವರು ಪರ್ವತಗಳಿಗೂ ಗುಡ್ಡಗಳಿಗೂ ನದಿಗಳಿಗೂ ಕಣಿವೆಗಳಿಗೂ ಹೀಗೆ ಹೇಳುತ್ತಾರೆ, ನಾನೇ ನಿಮ್ಮ ಮೇಲೆ ಖಡ್ಗವನ್ನು ಹಿಡಿದು, ನಿಮ್ಮ ಪೂಜಾಸ್ಥಳಗಳನ್ನು ನಾಶಮಾಡುತ್ತೇನೆ.
Te vaengah, 'Israel tlang rhoek aw ka Boeipa Yahovah ol he hnatun uh. Ka Boeipa Yahovah loh tlang taeng neh mol taengah, kolrhawk sokca taeng neh kolrhawk taengah khaw he ni a thui. Kai kamah loh nangmih soah cunghang kang khuen vetih na hmuensang ka phae ni.
4 ನಿಮ್ಮ ಯಜ್ಞವೇದಿಗಳು ಹಾಳಾಗುವುವು. ನಿಮ್ಮ ಧೂಪವೇದಿಗಳು ಚೂರುಚೂರಾಗುವುವು. ನಿಮ್ಮ ಜನರು ನಿಮ್ಮ ವಿಗ್ರಹಗಳ ಮುಂದೆ ಹತರಾಗಿ ಬೀಳುವಂತೆ ಮಾಡುವೆನು.
Na hmueihtuk te pong vetih na bunglawn khaw tlawt ni. Na mueirhol hmai ah na rhok ka cungku sak ni.
5 ಇಸ್ರಾಯೇಲರ ಹೆಣಗಳನ್ನು ದೇವತಾ ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಬಲಿಪೀಠಗಳ ಸುತ್ತಲೂ ನಿಮ್ಮ ಎಲುಬುಗಳನ್ನು ಎರಚಿ ಬಿಡುವೆನು.
A mueirhol hmai ah Israel ca rhoek kah rhok te ka khueh vetih na hmueihtuk kaepvai ah na rhuh ka haeh ni.
6 ನೀವು ವಾಸಮಾಡುವ ನಿಮ್ಮ ಎಲ್ಲಾ ಸ್ಥಳಗಳು ಹಾಳಾಗುವುವು. ಪೂಜಾ ಸ್ಥಳಗಳೂ ನಾಶವಾಗುವುವು. ಹೀಗೆ ನಿಮ್ಮ ಬಲಿಪೀಠಗಳು ಸಹ ನಾಶವಾಗಿ, ನಿಮ್ಮ ವಿಗ್ರಹಗಳು ಒಡೆದುಹೋಗಿ ಇಲ್ಲದಂತಾಗುವುವು. ನೀವು ರೂಪಿಸಿದ ಎಲ್ಲವೂ ಕಡಿದು ಬಿದ್ದು ಅಳಿದುಹೋಗುವುವು.
Na tolrhum tom kah khopuei rhoek te khaw a khah uh vetih hmuensang khaw rhawp ni. Te dongah na hmueihtuk rhoek te boe uh vetih paeng ni. Na mueirhol rhoek te kangkuen uh vetih na bunglawn a tlawt vaengah na bibi khaw hmata ni.
7 ಹತರಾದವರು ನಿಮ್ಮ ಮಧ್ಯದಲ್ಲಿ ಬೀಳುವರು. ಆಗ ನೀವು ನಾನೇ ಯೆಹೋವ ದೇವರೆಂದು ತಿಳಿಯುವಿರಿ.
Na khui ah rhok a yalh vaengah BOEIPA kamah te nan ming uh bitni.
8 “‘ಆದರೆ ನಾನು ಕೆಲವರನ್ನು ಉಳಿಸುತ್ತೇನೆ; ಹೇಗೆಂದರೆ, ನೀವು ದೇಶಗಳ ಮತ್ತು ಜನಾಂಗಗಳ ನಡುವೆ ಚದರಿಹೋದಾಗ ನಿಮ್ಮಲ್ಲಿ ಕೆಲವರು ಖಡ್ಗದಿಂದ ತಪ್ಪಿಸಿಕೊಳ್ಳುವಿರಿ.
Tedae nangmih te diklai ah kan thaek cakhaw namtom taengah cunghang lamloh hlangyong rhoek la na om ham kan hlun ni.
9 ನಿಮ್ಮಲ್ಲಿ ತಪ್ಪಿಸಿಕೊಂಡವರು, ತಾವು ಸೆರೆಯಾಗಿ ಹೋಗುವಾಗ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳುವರು. ಅನ್ಯದೇವತೆಗಳಲ್ಲಿ ವಿಶ್ವಾಸವಿಟ್ಟು, ನನ್ನನ್ನೂ ತೊರೆದ ತಮ್ಮ ಹೃದಯವನ್ನು ಮತ್ತು ಅನ್ಯ ದೇವರ ವಿಗ್ರಹಗಳಲ್ಲಿ ಮೋಹಗೊಂಡ ತಮ್ಮ ಕಣ್ಣುಗಳನ್ನು ಮುರಿದವನು ನಾನೇ ಎಂಬುದಾಗಿ ಜ್ಞಾಪಕಮಾಡಿಕೊಳ್ಳುವರು. ಅವರು ತಮ್ಮ ಅಸಹ್ಯ ಕಾರ್ಯಗಳನ್ನು ಮಾಡುವ ಕೇಡುಗಳ ನಿಮಿತ್ತ ತಮ್ಮ ಬಗ್ಗೆ ತಾವೇ ಅಸಹ್ಯಪಡುವರು.
Te vaengah nangmih kah hlangyong rhoek loh namtom taengah kai m'poek uh ni. Te ah te a sol uh tih a lungbuei khaw mat ka paeng sak coeng. Tedae kai taeng lamloh a nong te cukhalh uh tih a mik khaw a mueirhol hnukah cukhalh uh. A maelhmai ah ko-oek lalh la a tueilaehkoi boeih dongah boethae te a saii uh dongah ni.
10 ನಾನೇ ಯೆಹೋವ ದೇವರೆಂದೂ, ನಾನು ಈ ಕೇಡನ್ನು ಮಾಡುತ್ತಿರುವೆನೆಂದೂ, ನಾನು ವ್ಯರ್ಥವಾಗಿ ಹೇಳುವುದಿಲ್ಲವೆಂದೂ ತಿಳಿದುಕೊಳ್ಳುವರು.
Te vaengah BOEIPA kamah loh he boethae he amih soah saii ham a poeyoek la ka thui pawt te a ming uh bitni.
11 “‘ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನೀನು ಚಪ್ಪಾಳೆ ಹೊಡೆದು ನೆಲವನ್ನೊದ್ದು ಹೀಗೆ ಹೇಳು, “ಆಹಾ!” ಇಸ್ರಾಯೇಲ್ ವಂಶದವರ ಅಸಹ್ಯವಾದ ಕೆಟ್ಟಕೆಲಸಗಳೆಷ್ಟು! ಅವರು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸತ್ತೇ ಸಾಯುವರು.
Ka Boeipa Yahovah loh he ni a thui. Na kut te ngawn lamtah na kho te daep laeh. Anunae Israel imkhui kah boethae tueilaehkoi cungkuem dongah ni cunghang dongah, khokha dongah, duektahaw dongah a cungku uh eh,’ ti saeh.
12 ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು. ಹತ್ತಿರದಲ್ಲಿರುವವನು ಖಡ್ಗದಿಂದ ಬೀಳುವನು. ಉಳಿದ ಮುತ್ತಿಗೆಯಲ್ಲಿರುವವನು ಕ್ಷಾಮದಿಂದ ಸಾಯುವನು. ಹೀಗೆ ನಾನು ಅವರ ಮೇಲೆ ನನ್ನ ರೋಷವನ್ನು ತೀರಿಸಿಕೊಳ್ಳುವೆನು.
Khohla te duektahaw ah duek vetih a yoei te cunghang dongah cungku ni. Khokha kah aka sueng tih a kueinah khaw duek ni. Te tlam ni amih soah ka kosi ka sah eh.
13 ಆಮೇಲೆ ಅವರಲ್ಲಿ ಹತರಾದವರು, ಅವರ ವಿಗ್ರಹಗಳ ಮಧ್ಯದಲ್ಲಿ ಅವರ ಬಲಿಪೀಠಗಳ ಸುತ್ತಲಾಗಿಯೂ ಎತ್ತರವಾದ ಪ್ರತಿಯೊಂದು ಗುಡ್ಡದ ಮೇಲೆಯೂ, ಸಮಸ್ತ ಪರ್ವತಗಳ ತುದಿಯಲ್ಲಿಯ ಪ್ರತಿಯೊಂದು ಹಸಿರಾದ ಮರದ ಕೆಳಗೂ, ಪ್ರತಿಯೊಂದು ದಪ್ಪವಾದ ಏಲಾ ಮರದ ಕೆಳಗಡೆಯೂ, ಅವರು ತಮ್ಮ ವಿಗ್ರಹಗಳಿಗೆಲ್ಲಾ ಸುವಾಸನೆಯನ್ನು ಅರ್ಪಿಸುವುದರಲ್ಲಿಯೂ ನಾನೇ ಯೆಹೋವ ದೇವರೆಂದು ತಿಳಿಯುವಿರಿ.
Te vaengah BOEIPA kamah he m'ming uh bitni. Amih rhok te a mueirhol lakli ah, som tom kah a hmueihtuk kaepvai ah om kangna saeh. Tlang lu tom ah pomsang uh tih thing hing hmui tom neh rhokael bu hmui kah hmuen tom ah a mueirhol cungkuem ham hmuehmuei botui hnap a nawn uh.
14 ನಾನು ಅವರ ವಿರುದ್ಧ ಕೈಯೆತ್ತಿ, ಅವರು ವಾಸವಾಗಿರುವ ದೇಶವನ್ನೆಲ್ಲಾ ಮರುಭೂಮಿಯಿಂದ ದಿಬ್ಲದವರೆಗೂ ಹಾಳುಪಾಳುಮಾಡುವೆನು, ನಾನೇ ಯೆಹೋವ ದೇವರು, ಎಂದು ಅವರಿಗೆ ತಿಳಿಯುವುದು.’”
Ka kut he amih ka thueng thil vetih khohmuen he Diblath khosoek lamloh a tolrhum boeih ah khopong neh a rhaerhap la ka khueh ni. Te vaengah BOEIPA kamah te m'ming uh bitni,” a ti.

< ಯೆಹೆಜ್ಕೇಲನು 6 >