< ಯೆಹೆಜ್ಕೇಲನು 45 >

1 “‘ಇದಲ್ಲದೆ ನೀವು ದೇಶವನ್ನು ಚೀಟುಹಾಕಿ ಸೊತ್ತಾಗಿ ಹಂಚುವಾಗ, ಒಂದು ಪರಿಶುದ್ಧ ಭಾಗವನ್ನು ಪ್ರತ್ಯೇಕಿಸಿ, ಯೆಹೋವ ದೇವರಿಗೆ ಕಾಣಿಕೆಯಾಗಿ ಕೊಡಬೇಕು. ಅದು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಹತ್ತು ಸಾವಿರ ಮೊಳ ಅಗಲವಾಗಿಯೂ ಇರಲಿ. ಇದು ಅದರ ಎಲ್ಲಾ ಮೇರೆಗಳಲ್ಲಿ ಸುತ್ತಲಾಗಿ ಪರಿಶುದ್ಧವಾಗಿರಲಿ.
וּבְהַפִּֽילְכֶם אֶת־הָאָרֶץ בְּנַחֲלָה תָּרִימוּ תְרוּמָה לַיהֹוָה ׀ קֹדֶשׁ מִן־הָאָרֶץ אֹרֶךְ חֲמִשָּׁה וְעֶשְׂרִים אֶלֶף אֹרֶךְ וְרֹחַב עֲשָׂרָה אָלֶף קֹדֶשׁ־הוּא בְכׇל־גְּבוּלָהּ סָבִֽיב׃
2 ಇಲ್ಲಿ ಈ ಪರಿಶುದ್ಧ ಸ್ಥಳಕ್ಕಾಗಿ ಐನೂರು ಮೊಳ ಉದ್ದದ, ಐನೂರು ಮೊಳ ಅಗಲದ ಚಚ್ಚೌಕವಾಗಿರುವುದು. ಮತ್ತು ಅದರ ಸುತ್ತಲೂ ಸುಮಾರು ಇಪ್ಪತ್ತಾರು ಮೀಟರ್ ತೆರೆದ ಭೂಮಿ ಇರಬೇಕು. ಇರುವುದು.
יִֽהְיֶה מִזֶּה אֶל־הַקֹּדֶשׁ חֲמֵשׁ מֵאוֹת בַּחֲמֵשׁ מֵאוֹת מְרֻבָּע סָבִיב וַחֲמִשִּׁים אַמָּה מִגְרָשׁ לוֹ סָבִֽיב׃
3 ಈ ಅಳತೆಯು, ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಮತ್ತು ಹತ್ತು ಸಾವಿರ ಮೊಳ ಅಗಲವಾಗಿಯೂ ಇರುವಂತೆ ನೀನು ಅಳೆಯಬೇಕು ಮತ್ತು ಪರಿಶುದ್ಧ ಸ್ಥಳವೂ ಅತಿ ಶುದ್ಧವಾದದ್ದೂ ಇರಬೇಕು; ಪರಿಶುದ್ಧವಾದ ಜಾಗವೂ ಆಗಿರಬೇಕು.
וּמִן־הַמִּדָּה הַזֹּאת תָּמוֹד אֹרֶךְ (חמש) [חֲמִשָּׁה] וְעֶשְׂרִים אֶלֶף וְרֹחַב עֲשֶׂרֶת אֲלָפִים וּבֽוֹ־יִהְיֶה הַמִּקְדָּשׁ קֹדֶשׁ קׇדָשִֽׁים׃
4 ದೇಶದ ಪರಿಶುದ್ಧ ಭಾಗವು ಯೆಹೋವ ದೇವರಿಗೆ ಸೇವೆ ಮಾಡಲು ಸಮೀಪಿಸುವಂತೆ, ಪರಿಶುದ್ಧಸ್ಥಳದ ಸೇವಕರಾದಂಥ ಯಾಜಕರದಾಗಿರಬೇಕು. ಅದು ಅವರ ಮನೆಗಳಿಗೆ ಸ್ಥಳವಾಗಿಯೂ ಪರಿಶುದ್ಧ ಸ್ಥಳಕ್ಕೆ ಪರಿಶುದ್ಧ ಜಾಗವಾಗಿಯೂ ಇರಬೇಕು.
קֹדֶשׁ מִן־הָאָרֶץ הוּא לַכֹּהֲנִים מְשָׁרְתֵי הַמִּקְדָּשׁ יִֽהְיֶה הַקְּרֵבִים לְשָׁרֵת אֶת־יְהֹוָה וְהָיָה לָהֶם מָקוֹם לְבָתִּים וּמִקְדָּשׁ לַמִּקְדָּֽשׁ׃
5 ಇಪ್ಪತ್ತೈದು ಸಾವಿರ ಮೊಳ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಲಯದಲ್ಲಿ ಸೇವೆ ಮಾಡುವ ಲೇವಿಯರಿಗೆ ತಮಗೆ ಸೊತ್ತಾಗಿ ಇಪ್ಪತ್ತು ಕೊಠಡಿಗಳಿಗಾಗಿ ಇರಬೇಕು.
וַחֲמִשָּׁה וְעֶשְׂרִים אֶלֶף אֹרֶךְ וַעֲשֶׂרֶת אֲלָפִים רֹחַב (יהיה) [וְֽהָיָה] לַלְוִיִּם מְשָׁרְתֵי הַבַּיִת לָהֶם לַאֲחֻזָּה עֶשְׂרִים לְשָׁכֹֽת׃
6 “‘ನೀವು ಪಟ್ಟಣದ ಸೊತ್ತನ್ನು ಕಾಣಿಕೆಯಾದ ಪರಿಶುದ್ಧಭಾಗಕ್ಕೆ ಎದುರಾಗಿ ಐದು ಸಾವಿರ ಮೊಳ ಅಗಲವಾಗಿಯೂ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ನೇಮಿಸಬೇಕು. ಇದು ಸಮಸ್ತ ಇಸ್ರಾಯೇಲಿನ ಮನೆತನದವರಿಗೋಸ್ಕರ ಇರುವುದು.
וַאֲחֻזַּת הָעִיר תִּתְּנוּ חֲמֵשֶׁת אֲלָפִים רֹחַב וְאֹרֶךְ חֲמִשָּׁה וְעֶשְׂרִים אֶלֶף לְעֻמַּת תְּרוּמַת הַקֹּדֶשׁ לְכׇל־בֵּית יִשְׂרָאֵל יִהְיֶֽה׃
7 “‘ಕಾಣಿಕೆಯಾದ ಪರಿಶುದ್ಧಭಾಗದ ಮುಂದೆಯೂ ಪಟ್ಟಣದ ಸೊತ್ತಿನ ಮುಂದೆಯೂ ಅದರ ಪಶ್ಚಿಮದ ಕಡೆಯಲ್ಲಿ ಪಶ್ಚಿಮಕ್ಕೂ ಅದರ ಪೂರ್ವದ ಕಡೆಯಲ್ಲಿ ಪೂರ್ವಕ್ಕೂ ಪ್ರಭುವಿಗೆ ಪಾಲು ಇರಬೇಕು. ಅದರ ಉದ್ದವು ಭಾಗಗಳಲ್ಲಿ ಒಂದಕ್ಕೆ ಎದುರಾಗಿ, ಪಶ್ಚಿಮ ಮೇರೆ ಮೊದಲುಗೊಂಡು ಪೂರ್ವ ಮೇರೆಯ ತನಕ ಒಂದು ಗೋತ್ರದ ಸ್ವಾಸ್ತ್ಯದ ಉದ್ದಕ್ಕೆ ಸರಿಸಮಾನವಾಗಿರುವುದು.
וְלַנָּשִׂיא מִזֶּה וּמִזֶּה לִתְרוּמַת הַקֹּדֶשׁ וְלַאֲחֻזַּת הָעִיר אֶל־פְּנֵי תְרֽוּמַת־הַקֹּדֶשׁ וְאֶל־פְּנֵי אֲחֻזַּת הָעִיר מִפְּאַת־יָם יָמָּה וּמִפְּאַת־קֵדְמָה קָדִימָה וְאֹרֶךְ לְעֻמּוֹת אַחַד הַחֲלָקִים מִגְּבוּל יָם אֶל־גְּבוּל קָדִֽימָה׃
8 ಈ ಭೂಮಿಯು ಅವನಿಗೆ ಇಸ್ರಾಯೇಲಿನಲ್ಲಿ ಸೊತ್ತಾಗಿರುವುದು. ಆಗ ನನ್ನ ಪ್ರಭುಗಳು ನನ್ನ ಜನರನ್ನು ಉಪದ್ರವ ಪಡಿಸುವುದೇ ಇಲ್ಲ. ಉಳಿದ ಭೂಮಿಯನ್ನು ಇಸ್ರಾಯೇಲಿನ ಮನೆತನದವರಿಗೆ ಅವರ ಗೋತ್ರಗಳ ಅನುಸಾರವಾಗಿ ಕೊಡಲಾಗುವುದು.
לָאָרֶץ יִֽהְיֶה־לּוֹ לַאֲחֻזָּה בְּיִשְׂרָאֵל וְלֹא־יוֹנוּ עוֹד נְשִׂיאַי אֶת־עַמִּי וְהָאָרֶץ יִתְּנוּ לְבֵֽית־יִשְׂרָאֵל לְשִׁבְטֵיהֶֽם׃
9 “‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಪ್ರಭುಗಳೇ, ನೀವು ಸಾಕುಮಾಡಿರಿ, ಬಲಾತ್ಕಾರವನ್ನೂ ಸುಲಿಗೆಯನ್ನೂ ಬಿಡಿರಿ. ನ್ಯಾಯವನ್ನೂ ನೀತಿಯನ್ನೂ ನಡೆಸಿರಿ. ನನ್ನ ಜನರನ್ನು ಓಡಿಸಬೇಡಿರಿ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
כֹּה־אָמַר אֲדֹנָי יֱהֹוִה רַב־לָכֶם נְשִׂיאֵי יִשְׂרָאֵל חָמָס וָשֹׁד הָסִירוּ וּמִשְׁפָּט וּצְדָקָה עֲשׂוּ הָרִימוּ גְרֻשֹֽׁתֵיכֶם מֵעַל עַמִּי נְאֻם אֲדֹנָי יֱהֹוִֽה׃
10 ನ್ಯಾಯವಾದ ತಕ್ಕಡಿಯೂ ನ್ಯಾಯವಾದ ಎಫಾವೂ ನ್ಯಾಯವಾದ ಬಾತ್ ಅಳತೆಯೂ ನಿಮಗಿರಬೇಕು.
מֹֽאזְנֵי־צֶדֶק וְאֵֽיפַת־צֶדֶק וּבַת־צֶדֶק יְהִי לָכֶֽם׃
11 ಎಫಾ ಎಂಬ ಧಾನ್ಯದ ಅಳತೆ ಮತ್ತು ಬತ್ ಎಂಬ ರಸದ್ರವ್ಯದ ಅಳತೆ ಒಂದೇ ಪ್ರಮಾಣವಾಗಿರಬೇಕು; ಬತ್ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು, ಎಫಾ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು; ಈ ಹೋಮೆರ್ ಎರಡಕ್ಕೂ ಪ್ರಮಾಣಿತ ಅಳತೆಗೆ ಸಂಬಂಧವಾಗಿರಬೇಕು.
הָאֵיפָה וְהַבַּת תֹּכֶן אֶחָד יִֽהְיֶה לָשֵׂאת מַעְשַׂר הַחֹמֶר הַבָּת וַֽעֲשִׂירִת הַחֹמֶר הָאֵיפָה אֶל־הַחֹמֶר יִהְיֶה מַתְכֻּנְתּֽוֹ׃
12 ಒಂದು ಶೆಕೆಲ್ ಇಪ್ಪತ್ತು ಗೇರಾ ತೂಕವಾಗಿರಬೇಕು. ನಿಮ್ಮಲ್ಲಿ ಸಲ್ಲುವ ಮಾನೆಯು ಇಪ್ಪತ್ತು ಶೇಕೆಲು, ಇಪ್ಪತ್ತೈದು ಶೇಕೆಲು ಅಥವಾ ಹದಿನೈದು ಶೆಕೆಲ್ ತೂಕದ್ದಾಗಿರಲಿ.
וְהַשֶּׁקֶל עֶשְׂרִים גֵּרָה עֶשְׂרִים שְׁקָלִים חֲמִשָּׁה וְעֶשְׂרִים שְׁקָלִים עֲשָׂרָה וַֽחֲמִשָּׁה שֶׁקֶל הַמָּנֶה יִהְיֶה לָכֶֽם׃
13 “‘ಇದು ಸಮರ್ಪಿಸಬೇಕಾದ ವಿಶೇಷ ಕಾಣಿಕೆ: ನೀವು ಜವೆಗೋಧಿಯ ಓಮೆರಿನಲ್ಲಿ ಏಫದ ಆರನೆಯ ಪಾಲನ್ನು ಕಾಣಿಕೆಯಾಗಿ ಕೊಡಬೇಕು.
זֹאת הַתְּרוּמָה אֲשֶׁר תָּרִימוּ שִׁשִּׁית הָאֵיפָה מֵחֹמֶר הַחִטִּים וְשִׁשִּׁיתֶם הָאֵיפָה מֵחֹמֶר הַשְּׂעֹרִֽים׃
14 ಒಂದು ಬಾತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗ, ಒಂದು ಹೋಮೆರ್ ಅಳತೆಯ ಜವೆಗೋದಿಯಲ್ಲಿ ಎಫಾ ಅಳತೆಯ ಆರನೆಯ ಒಂದು ಪಾಲು; ಒಂದು ಬಾತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗವೆಷ್ಟೆಂದರೆ, ಒಂದು ಕೋರ್ ಅಂದರೆ, ಹತ್ತು ಬಾತ್ ಅಥವಾ ಒಂದು ಹೋಮೆರ್ ಅಳತೆಯ ಎಣ್ಣೆಯಲ್ಲಿ ಒಂದು ಬಾತ್ ಅಳತೆಯ ಹತ್ತನೆಯ ಒಂದು ಪಾಲು; ಏಕೆಂದರೆ ಹತ್ತು ಬಾತ್ ಒಂದೇ ಓಮೆರ್.
וְחֹק הַשֶּׁמֶן הַבַּת הַשֶּׁמֶן מַעְשַׂר הַבַּת מִן־הַכֹּר עֲשֶׂרֶת הַבַּתִּים חֹמֶר כִּֽי־עֲשֶׂרֶת הַבַּתִּים חֹֽמֶר׃
15 ಇಸ್ರಾಯೇಲಿನ ನೀರಿರುವ ಹುಲ್ಲುಗಾವಲುಗಳಿಂದ ಇನ್ನೂರು ಮಂದಿಯ ಹಿಂಡಿನಿಂದ ಒಂದು ಕುರಿಯನ್ನು ತೆಗೆದುಕೊಳ್ಳಬೇಕು. ಇವುಗಳನ್ನು ಜನರಿಗಾಗಿ ಪ್ರಾಯಶ್ಚಿತ್ತವನ್ನು ಮಾಡಲು ಧಾನ್ಯಯಜ್ಞಗಳು, ದಹನಬಲಿಗಳು ಮತ್ತು ಸಮಾಧಾನದ ಅರ್ಪಣೆಗಳಿಗಾಗಿ ಬಳಸಲಾಗುವುದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
וְשֶׂה־אַחַת מִן־הַצֹּאן מִן־הַמָּאתַיִם מִמַּשְׁקֵה יִשְׂרָאֵל לְמִנְחָה וּלְעוֹלָה וְלִשְׁלָמִים לְכַפֵּר עֲלֵיהֶם נְאֻם אֲדֹנָי יֱהֹוִֽה׃
16 ದೇಶದಲ್ಲಿರುವ ಜನರೆಲ್ಲರೂ ಈ ಕಾಣಿಕೆಯನ್ನು ಇಸ್ರಾಯೇಲನ ಪ್ರಭುವಿಗಾಗಿ ಕೊಡಬೇಕು.
כֹּל הָעָם הָאָרֶץ יִהְיוּ אֶל־הַתְּרוּמָה הַזֹּאת לַנָּשִׂיא בְּיִשְׂרָאֵֽל׃
17 ಹಬ್ಬಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ವಿಶ್ರಾಂತಿಯ ದಿನಗಳಲ್ಲಿಯೂ ಇಸ್ರಾಯೇಲಿನ ಮನೆತನದವರ ಎಲ್ಲಾ ಸಭೆಗಳಲ್ಲಿಯೂ ಹೋಮಗಳನ್ನು ಅರ್ಪಣೆಗಳನ್ನು ನೈವೇದ್ಯಗಳನ್ನು ಕೊಡುವುದು ಪ್ರಭುವಿನ ಕೆಲಸವಾಗಿರುವುದು. ಆತನು ಇಸ್ರಾಯೇಲ್ಯರಿಗೆ ಪ್ರಾಯಶ್ಚಿತ್ತ ಮಾಡಲು ಪಾಪ ಪರಿಹಾರಕ ಬಲಿಗಳನ್ನು, ಧಾನ್ಯದ ಅರ್ಪಣೆಗಳನ್ನು, ದಹನಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಒದಗಿಸುವನು.
וְעַֽל־הַנָּשִׂיא יִֽהְיֶה הָעוֹלוֹת וְהַמִּנְחָה וְהַנֵּסֶךְ בַּחַגִּים וּבֶחֳדָשִׁים וּבַשַּׁבָּתוֹת בְּכׇֽל־מוֹעֲדֵי בֵּית יִשְׂרָאֵל הֽוּא־יַעֲשֶׂה אֶת־הַחַטָּאת וְאֶת־הַמִּנְחָה וְאֶת־הָעוֹלָה וְאֶת־הַשְּׁלָמִים לְכַפֵּר בְּעַד בֵּֽית־יִשְׂרָאֵֽל׃
18 “‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನೀನು ಪೂರ್ಣಾಂಗವಾದ ಒಂದು ಎಳೆಯ ಹೋರಿಯನ್ನು ತೆಗೆದುಕೊಂಡು ಪರಿಶುದ್ಧ ಸ್ಥಳವನ್ನು ಶುದ್ಧಮಾಡಬೇಕು.
כֹּה־אָמַר אֲדֹנָי יֱהֹוִה בָּֽרִאשׁוֹן בְּאֶחָד לַחֹדֶשׁ תִּקַּח פַּר־בֶּן־בָּקָר תָּמִים וְחִטֵּאתָ אֶת־הַמִּקְדָּֽשׁ׃
19 ಯಾಜಕನು ದೋಷಪರಿಹಾರ ಬಲಿಯ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಅಂಚಿನ ನಾಲ್ಕು ಮೂಲೆಗಳಿಗೂ ಒಳಗಿನ ಅಂಗಳದ ಬಾಗಿಲಿನ ಅಂಚಿಗೆ ಹಚ್ಚಬೇಕು;
וְלָקַח הַכֹּהֵן מִדַּם הַחַטָּאת וְנָתַן אֶל־מְזוּזַת הַבַּיִת וְאֶל־אַרְבַּע פִּנּוֹת הָעֲזָרָה לַמִּזְבֵּחַ וְעַל־מְזוּזַת שַׁעַר הֶחָצֵר הַפְּנִימִֽית׃
20 ತಿಳಿಯದೆ ಅಥವಾ ಅಜ್ಞಾನದಿಂದ ಪಾಪಮಾಡುವ ಪ್ರತಿಯೊಬ್ಬರಿಗೂ ತಿಂಗಳ ಏಳನೇ ದಿನದಲ್ಲಿ ನೀವು ಅದೇ ರೀತಿ ಮಾಡಬೇಕು; ಈ ರೀತಿಯಾಗಿ ನೀವು ದೇವಾಲಯಕ್ಕೆ ಪ್ರಾಯಶ್ಚಿತ್ತವನ್ನು ಮಾಡಬೇಕು.
וְכֵן תַּֽעֲשֶׂה בְּשִׁבְעָה בַחֹדֶשׁ מֵאִישׁ שֹׁגֶה וּמִפֶּתִי וְכִפַּרְתֶּם אֶת־הַבָּֽיִת׃
21 “‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ನಿಮಗೆ ಏಳು ದಿನಗಳ ಹಬ್ಬವಾಗಿರುವ ಪಸ್ಕಹಬ್ಬವು ಇರಬೇಕು. ಅದರಲ್ಲಿ ನೀವು ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.
בָּרִאשׁוֹן בְּאַרְבָּעָה עָשָׂר יוֹם לַחֹדֶשׁ יִהְיֶה לָכֶם הַפָּסַח חָג שְׁבֻעוֹת יָמִים מַצּוֹת יֵאָכֵֽל׃
22 ಆ ದಿನದಲ್ಲಿ ಪ್ರಭುವು ತನಗಾಗಿಯೂ ದೇಶದ ಎಲ್ಲಾ ಜನರಿಗಾಗಿಯೂ ದೋಷಪರಿಹಾರ ಬಲಿಗಾಗಿ ಹೋರಿಯನ್ನು ಸಿದ್ಧಮಾಡಬೇಕು.
וְעָשָׂה הַנָּשִׂיא בַּיּוֹם הַהוּא בַּעֲדוֹ וּבְעַד כׇּל־עַם הָאָרֶץ פַּר חַטָּֽאת׃
23 ಹಬ್ಬದ ಏಳು ದಿವಸಗಳಲ್ಲಿ ಪ್ರತಿದಿನವೂ ಅವನು ಯೆಹೋವ ದೇವರಿಗೆ ದಹನಬಲಿಗಾಗಿ ಪೂರ್ಣಾಂಗವಾದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಮತ್ತು ಪ್ರತಿದಿನವೂ ದೋಷಪರಿಹಾರ ಬಲಿಗಾಗಿ ಮೇಕೆಯ ಮರಿಯನ್ನೂ ಸಿದ್ಧಮಾಡಬೇಕು.
וְשִׁבְעַת יְמֵי־הֶחָג יַעֲשֶׂה עוֹלָה לַיהֹוָה שִׁבְעַת פָּרִים וְשִׁבְעַת אֵילִים תְּמִימִם לַיּוֹם שִׁבְעַת הַיָּמִים וְחַטָּאת שְׂעִיר עִזִּים לַיּֽוֹם׃
24 ಅವನು ಒಂದೊಂದು ಹೋರಿಗೆ ಮತ್ತು ಟಗರಿಗೆ ಐದು ಕಿಲೋಗ್ರಾಂ ಗೋಧಿಹಿಟ್ಟನ್ನೂ ಸುಮಾರು ಮೂರುವರೆ ಲೀಟರ್ ಎಣ್ಣೆಯನ್ನು ಧಾನ್ಯ ಸಮರ್ಪಣೆಯಾಗಿ ಅರ್ಪಿಸಬೇಕು.
וּמִנְחָה אֵיפָה לַפָּר וְאֵיפָה לָאַיִל יַעֲשֶׂה וְשֶׁמֶן הִין לָאֵיפָֽה׃
25 “‘ಏಕೆಂದರೆ ತಿಂಗಳಿನ ಹದಿನೈದನೆಯ ದಿವಸದಲ್ಲಿ ಪ್ರಾರಂಭವಾಗುವ ಹಬ್ಬದ ಏಳು ದಿವಸಗಳಲ್ಲಿಯೂ ಅವನು ದೋಷಪರಿಹಾರಕ ಬಲಿಪ್ರಾಣಿ, ದಹನಬಲಿಪ್ರಾಣಿ, ಧಾನ್ಯ ಸಮರ್ಪಣೆ, ಎಣ್ಣೆ ಇವುಗಳನ್ನು ಅದೇ ಕ್ರಮದಂತೆ ಕೊಡಬೇಕು.
בַּשְּׁבִיעִי בַּֽחֲמִשָּׁה עָשָׂר יוֹם לַחֹדֶשׁ בֶּחָג יַעֲשֶׂה כָאֵלֶּה שִׁבְעַת הַיָּמִים כַּֽחַטָּאת כָּעֹלָה וְכַמִּנְחָה וְכַשָּֽׁמֶן׃

< ಯೆಹೆಜ್ಕೇಲನು 45 >