< ಯೆಹೆಜ್ಕೇಲನು 44 >
1 ಆಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಹೊರಗಿನ ಪರಿಶುದ್ಧಸ್ಥಳದ ಬಾಗಿಲಿನ ಮಾರ್ಗವಾಗಿ ಮತ್ತೆ ಬರಮಾಡಿದನು. ಅದು ಮುಚ್ಚಿತ್ತು.
Så førte han mig tilbake mot helligdommens ytre port, som vendte mot øst; den var lukket.
2 ಆಮೇಲೆ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಈ ಬಾಗಿಲು ಮುಚ್ಚೇ ಇರಬೇಕು. ಇದು ತೆರೆಯಬಾರದು. ಯಾವ ಮನುಷ್ಯನೂ ಇದರಿಂದ ಪ್ರವೇಶಿಸಬಾರದು. ಏಕೆಂದರೆ ಇಸ್ರಾಯೇಲರ ಯೆಹೋವ ದೇವರು ಇದರಿಂದ ಪ್ರವೇಶಿಸಿದ್ದಾರೆ. ಆದ್ದರಿಂದ ಇದು ಮುಚ್ಚಿರಬೇಕು.
Og Herren sa til mig: Denne port skal være lukket, den skal ikke åpnes, og ingen skal gå inn gjennem den; for Herren, Israels Gud, har gått inn gjennem den; derfor skal den være lukket.
3 ಇದು ಪ್ರಭುವಿಗಾಗಿ ಇದೆ; ಪ್ರಭುವು ಅವರೊಳಗೆ ಕುಳಿತುಕೊಂಡು, ಯೆಹೋವ ದೇವರ ಮುಂದೆ ರೊಟ್ಟಿಯನ್ನು ತಿನ್ನಬೇಕು. ಆತನು ಆ ಬಾಗಿಲಿನ ಪಡಸಾಲೆಯ ಮೂಲಕ ಪ್ರವೇಶಿಸಿ ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.”
Men fyrsten skal, fordi han er fyrste, ha lov til å sitte der og holde måltid for Herrens åsyn; han skal gå inn gjennem portens forhall, og samme vei skal han gå ut.
4 ಆಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿನ ಮಾರ್ಗವಾಗಿ ಆಲಯದ ಮುಂದೆ ಕರೆದುಕೊಂಡು ಹೋದನು. ನಾನು ನೋಡಿದೆ ಯೆಹೋವ ದೇವರ ಮಹಿಮೆಯು ಯೆಹೋವ ದೇವರ ಆಲಯವನ್ನು ತುಂಬಿಕೊಂಡಿತು, ನಾನು ಬೋರಲು ಬಿದ್ದೆನು.
Så førte han mig gjennem nordporten til plassen foran huset, og jeg så, og se, Herrens herlighet fylte Herrens hus, og jeg falt ned på mitt ansikt.
5 ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ಯೆಹೋವ ದೇವರ ಆಲಯದ ಸಕಲ ನೇಮನಿಷ್ಠೆಗಳ ವಿಷಯವಾಗಿಯೂ ನಿಯಮದ ವಿಷಯವಾಗಿಯೂ ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು ಮನದಟ್ಟು ಮಾಡಿಕೋ. ಆಲಯದೊಳಗಿನ ಪ್ರವೇಶವನ್ನೂ ಪರಿಶುದ್ಧಸ್ಥಳದ ಪ್ರತಿಯೊಂದು ಹಾದುಹೋಗುಗಳನ್ನೂ ಗಮನಿಸು.
Og Herren sa til mig: Menneskesønn! Akt på og se med dine øine og hør med dine ører alt det jeg sier dig om alle forskriftene og alle lovene om Herrens hus, og du skal legge nøie merke til inngangen til huset og alle utgangene fra helligdommen.
6 ತಿರುಗಿಬೀಳುವ ಇಸ್ರಾಯೇಲನ ಮನೆತನದವರಿಗೆ ನೀನು ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ಎಲ್ಲಾ ಅಸಹ್ಯಗಳನ್ನು ಸಾಕುಮಾಡಿರಿ.
Og du skal si til de gjenstridige, til Israels hus: Så sier Herren, Israels Gud: Det får nu være nok med alle eders vederstyggeligheter, Israels hus,
7 ಅವುಗಳಲ್ಲಿ ನೀವು ನನ್ನ ರೊಟ್ಟಿಯನ್ನೂ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವಾಗ ನಿಮ್ಮ ಎಲ್ಲಾ ಅಸಹ್ಯಗಳಿಗೋಸ್ಕರ ನನ್ನ ಒಡಂಬಡಿಕೆಯನ್ನು ಮೀರುವಂಥ ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿಯಿಲ್ಲದಂಥ ಪರಕೀಯರನ್ನು ನನ್ನ ಪರಿಶುದ್ಧ ಸ್ಥಳಕ್ಕೆ ಕರೆತಂದು ನನ್ನ ಆಲಯವನ್ನು ಅಪವಿತ್ರಪಡಿಸಿದಿರಿ.
at I har latt fremmede med uomskåret hjerte og uomskåret kjøtt komme inn i min helligdom og være der, så mitt hus blev vanhelliget, mens I bar frem min mat, fett og blod, og således brøt min pakt, for ikke å nevne alle eders andre vederstyggeligheter.
8 ನೀವು ನನ್ನ ಪರಿಶುದ್ಧ ವಸ್ತುಗಳನ್ನು ಕಾಯಲಿಲ್ಲ, ಬದಲಿಗೆ ಅನ್ಯದೇಶೀಯರನ್ನು ನನ್ನ ಪರಿಶುದ್ಧ ಸ್ಥಳದಲ್ಲಿ ನನ್ನ ವಸ್ತುಗಳ ಮೇಲೆ ಪಾರುಪತ್ಯಗಾರರನ್ನಾಗಿ ನೇಮಿಸಿದಿರಿ.
Og I tok ikke vare på det som var å vareta i mine helligdommer; men I satte andre i stedet for eder til å ta vare på det jeg vilde ha varetatt i min helligdom.
9 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿಯಿಲ್ಲದ ಯಾವೊಬ್ಬ ಪರಕೀಯನೂ ಇಸ್ರಾಯೇಲರೊಳಗಿರುವ ಯಾವೊಬ್ಬ ಅಪರಿಚಿತನೂ ನನ್ನ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಬಾರದು.
Så sier Herren, Israels Gud: Ingen fremmed med uomskåret hjerte og uomskåret kjøtt skal komme inn i min helligdom, ingen av alle de fremmede som bor blandt Israels barn.
10 “‘ಇಸ್ರಾಯೇಲರು ತಪ್ಪಿಸಿಕೊಂಡು ನನ್ನಿಂದ ಅಗಲಿ, ತಮ್ಮ ವಿಗ್ರಹಗಳ ಕಡೆಗೆ ತಿರುಗಿಕೊಂಡ ವೇಳೆಯಲ್ಲಿ ನನಗೆ ದೂರವಾಗಿ ಹೋದ ಲೇವಿಯರೂ ಸಹ ತಮ್ಮ ಪಾಪಗಳನ್ನು ಹೊರುವರು.
Ja, endog de levitter som gikk bort fra mig da Israel fór vill og forvillet sig bort fra mig efter sine motbydelige avguder, de skal bære sin misgjerning.
11 ಆದರೂ ಅವರು ನನ್ನ ಪರಿಶುದ್ಧ ಸ್ಥಳದಲ್ಲಿ ಸೇವಿಸುವವರಾಗಿರುವರು. ಆಲಯದ ಬಾಗಿಲುಗಳ ಮೇಲ್ವಿಚಾರವನ್ನು ಹೊಂದಿ ಆಲಯಕ್ಕೆ ಸೇವೆಮಾಡುವರು. ಅವರು ಜನರಿಗೋಸ್ಕರ ದಹನಬಲಿಯನ್ನೂ ಸಮಾಧಾನ ಬಲಿಯನ್ನೂ ಮಾಡಿ ಅವರಿಗೆ ಸೇವೆ ಮಾಡುವ ಹಾಗೆ ಅವರ ಮುಂದೆ ನಿಲ್ಲುವರು.
De skal være tjenere i min helligdom, opsynsmenn ved husets porter og tjenere i huset; de skal slakte brennofferet og slaktofferet for folket, og de skal stå for deres åsyn og tjene dem.
12 ಆದರೆ ಅವರು ತಮ್ಮ ವಿಗ್ರಹಗಳ ಮುಂದೆ ಜನರಿಗಾಗಿ ಸೇವೆಮಾಡಿ ಇಸ್ರಾಯೇಲಿನ ಮನೆತನದವರಿಗೆ ಪಾಪದ ಆತಂಕವಾದದ್ದರಿಂದ, ನಾನು ಅವರಿಗೆ ವಿರುದ್ಧವಾಗಿ ನನ್ನ ಕೈಯನ್ನು ಚಾಚಿದ್ದೇನೆ. ಅವರು ತಮ್ಮ ಪಾಪವನ್ನು ಹೊರುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
Fordi de tjente dem for deres motbydelige avguders åsyn og var et anstøt til misgjerning for Israels hus, derfor har jeg løftet min hånd imot dem, sier Herren, Israels Gud, og de skal bære sin misgjerning.
13 ಅವರು ಯಾಜಕರಾಗಿ ನನ್ನನ್ನು ಸಮೀಪಿಸದೆ ಮಹಾಪರಿಶುದ್ಧ ಸ್ಥಳದಲ್ಲಿ ನನ್ನ ಪರಿಶುದ್ಧವಾದವುಗಳಲ್ಲಿ ಒಂದನ್ನಾದರೂ ಸಮೀಪಿಸದೆ, ತಮ್ಮ ನಾಚಿಕೆಯನ್ನೂ ತಾವು ಮಾಡಿದ ಅಸಹ್ಯಗಳನ್ನೂ ಹೊರುವರು.
De skal ikke nærme sig til mig for å tjene mig som prester eller for å nærme sig til nogen av mine hellige ting - de høihellige; men de skal bære sin skam og de vederstyggeligheter som de har gjort sig skyldige i.
14 ಆದರೆ ನಾನು ಅವರನ್ನು ಆಲಯದ ಎಲ್ಲಾ ಸೇವೆಗೋಸ್ಕರವೂ ಅದರಲ್ಲಿ ಮಾಡುವಂತಹ ಎಲ್ಲವುಗಳಿಗೋಸ್ಕರವೂ ಆಲಯದ ಕಾರ್ಯಗಳನ್ನು ನೋಡಿಕೊಳ್ಳುವವರನ್ನಾಗಿ ಮಾಡುವೆನು.
Jeg vil sette dem til å ta vare på det som er å vareta i huset, med alt arbeidet der og alt som der skal gjøres.
15 “‘ಆದರೆ ಇಸ್ರಾಯೇಲರು ನನ್ನನ್ನು ಬಿಟ್ಟುಹೋದಾಗ ನನ್ನ ಪರಿಶುದ್ಧಸ್ಥಳದ ಕಾಯಿದೆಯನ್ನು ಪಾಲಿಸಿದ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವಂತೆ ನನ್ನ ಸಮೀಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
Men de levittiske prester, Sadoks sønner, som tok vare på det som var å vareta i min helligdom, da Israels barn forvillet sig bort fra mig, de skal trede nær til mig for å tjene mig, og de skal stå for mitt åsyn og frembære for mig fett og blod, sier Herren, Israels Gud.
16 ಇವರು ಮಾತ್ರ ನನ್ನ ಪರಿಶುದ್ಧ ಸ್ಥಳವನ್ನು ಪ್ರವೇಶಿಸಿ, ಇವರು ಮಾತ್ರ ನನಗೆ ಸೇವೆ ಮಾಡುವುದಕ್ಕಾಗಿ ನನ್ನ ಮೇಜಿನ ಬಳಿಗೆ ಬರುವರು ಮತ್ತು ನನಗೆ ಕಾವಲುಗಾರರಾಗಿ ಸೇವೆ ಸಲ್ಲಿಸಬೇಕು.
De skal gå inn i min helligdom, og de skal trede nær til mitt bord for å tjene mig, og de skal ta vare på det jeg vil ha varetatt.
17 “‘ಅವರು ಒಳಗಿನ ಅಂಗಳಗಳ ಬಾಗಿಲನ್ನು ಪ್ರವೇಶಿಸುವಾಗ ನಾರಿನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಅವರು ಒಳಗಿನ ಅಂಗಳದ ಬಾಗಿಲುಗಳಲ್ಲಿಯೂ ಒಳಗಡೆಯೂ ಸೇವಿಸುತ್ತಿರುವಾಗ ಅವರ ಮೇಲೆ ಉಣ್ಣೆಯ ಉಡುಪೂ ಇರಕೂಡದು.
Og når de går inn i den indre forgårds porter, da skal de klæ sig i linklær; det skal ikke komme ull på dem når de tjener i den indre forgårds porter eller i huset.
18 ಅವರ ತಲೆಗಳ ಮೇಲೆ ನಾರಿನ ಮುಂಡಾಸಗಳೂ, ಅವರ ಸೊಂಟಗಳ ಮೇಲೆ ನಾರಿನ ಒಳಉಡುಪುಗಳೂ ಇರಬೇಕು. ಅವರು ಬೆವರು ಬರುವಂಥವುಗಳನ್ನು ಕಟ್ಟಿಕೊಳ್ಳಬಾರದು.
De skal ha linhuer på hodet og benklær av lin om lendene; de skal ikke omgjorde sig med noget som fremkaller sved.
19 ಇದಲ್ಲದೆ ಅವರು ಹೊರಗಿನ ಅಂಗಳಕ್ಕೆ ತೀರಾ ಹೊರಗಿನ ಅಂಗಳಕ್ಕೆ ಜನರ ಬಳಿಗೆ ಹೋಗುವಾಗ ತಾವು ಸೇವೆಮಾಡಿದ ತಮ್ಮ ವಸ್ತ್ರಗಳನ್ನು ತೆಗೆದು ಪರಿಶುದ್ಧ ಕೊಠಡಿಗಳಲ್ಲಿ ಇಟ್ಟು ಬೇರೆ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ತಮ್ಮ ವಸ್ತ್ರಗಳಿಂದ ಜನರನ್ನು ಪರಿಶುದ್ಧಗೊಳಿಸಬಾರದು.
Og når de går ut i den ytre forgård, til folket i den ytre forgård, skal de ta av sig de klær som de har forrettet tjeneste i, og legge dem ned i de hellige kammer, og de skal ta på sig andre klær og ikke gjøre folket hellig med sine klær.
20 “‘ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳದೆ ಉದ್ದಕೂದಲನ್ನು ಬೆಳೆಸದೆ ತಮ್ಮ ತಲೆ ಕೂದಲುಗಳನ್ನು ಕತ್ತರಿಸಬೇಕು.
De skal ikke rake hodet og heller ikke la håret vokse fritt; de skal klippe sitt hodehår.
21 ಯಾವ ಯಾಜಕನೇ ಆಗಲಿ, ಒಳಗಿನ ಅಂಗಳದಲ್ಲಿ ಪ್ರವೇಶಿಸುವಾಗ ದ್ರಾಕ್ಷಾರಸವನ್ನು ಕುಡಿಯಬಾರದು.
Vin skal ingen av prestene drikke når de går inn i den indre forgård.
22 ಯಾಜಕರು ವಿಧವೆಯನ್ನಾಗಲಿ ಗಂಡನಿಂದ ಬಿಡಲಾದವಳನ್ನಾಗಲಿ ಮದುವೆಯಾಗಬಾರದು; ಆದರೆ ಇಸ್ರಾಯೇಲ್ ಸಂತಾನದ ಕನ್ಯೆಯನ್ನಾಗಲಿ, ಯಾಜಕನ ವಿಧವೆಯನ್ನಾಗಲಿ ಮದುವೆಮಾಡಿಕೊಳ್ಳಲಿ.
En enke eller en kvinne som hennes mann har skilt sig fra, skal de ikke ta til hustru, men bare jomfruer av Israels ætt; men de kan ta en enke som er enke efter en prest.
23 ಅವರು ನನ್ನ ಜನರಿಗೆ ಪರಿಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಇರುವ ವ್ಯತ್ಯಾಸವನ್ನು ಬೋಧಿಸಿ, ಅವರಿಗೆ ಶುದ್ಧಾಶುದ್ಧ ವ್ಯತ್ಯಾಸವನ್ನೂ ವಿವರಿಸಬೇಕು.
De skal lære mitt folk å skille mellem hellig og vanhellig og forklare dem forskjellen mellem urent og rent.
24 “‘ವ್ಯಾಜ್ಯವಾಗುವಾಗ ಅದನ್ನು ತೀರಿಸಲು ಯಾಜಕರು ನನ್ನ ನ್ಯಾಯಾನುಸಾರವಾಗಿ ನ್ಯಾಯಾಧಿಪತಿಗಳಾಗಿ ನ್ಯಾಯತೀರಿಸಲಿ. ಅವರು ನನ್ನ ತೀರ್ಪುಗಳನ್ನೂ, ನನ್ನ ನಿಯಮಗಳನ್ನೂ ನಾನು ನೇಮಿಸಿದ ಹಬ್ಬಗಳಲ್ಲಿಯೂ ನನ್ನ ಸಬ್ಬತ್ ದಿನಗಳಲ್ಲಿಯೂ ಪರಿಶುದ್ಧವಾಗಿ ಪಾಲಿಸಬೇಕು.
I rettssaker skal de stå frem og dømme, efter mine forskrifter skal de dømme i dem; mine lover og bud skal de holde på alle mine høitider, og mine sabbater skal de holde hellige.
25 “‘ಯಾಜಕರು ಸತ್ತ ಮನುಷ್ಯರ ಬಳಿಗೆ ಬಂದು ಅಶುದ್ಧರಾಗಬಾರದು. ಆದರೆ ತಂದೆತಾಯಿ, ಮಗ, ಮಗಳು, ಸಹೋದರ, ಗಂಡನಿಲ್ಲದ ಸಹೋದರಿ, ಇವರಿಗೋಸ್ಕರ ಅವರು ಅಶುದ್ಧರಾಗಬಹುದು.
Ingen av dem må gå inn til et lik, så han blir uren; bare når det gjelder far eller mor eller sønn eller datter eller bror eller en søster som ikke har tilhørt nogen mann, kan de gjøre sig urene.
26 ಅವನು ಶುದ್ಧನಾದ ಮೇಲೆ ಅವನಿಗೆ ಏಳು ದಿವಸಗಳನ್ನು ಪ್ರತ್ಯೇಕಿಸಬೇಕು.
Når han så er blitt ren igjen, skal de telle syv dager for ham;
27 ಅವನು ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವುದಕ್ಕೋಸ್ಕರ ಒಳಗಿನ ಅಂಗಳದ ಪರಿಶುದ್ಧ ಸ್ಥಳಕ್ಕೆ ಬರುವ ದಿನದಲ್ಲಿ ತನ್ನ ಪಾಪ ಪರಿಹಾರಕ ಬಲಿಯನ್ನು ಅರ್ಪಿಸಬೇಕೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
og den dag han går inn i helligdommen, inn i den indre forgård, for å tjene i helligdommen, skal han ofre sitt syndoffer, sier Herren, Israels Gud.
28 “‘ಅದು ಅವರಿಗೆ ಬಾಧ್ಯತೆಯಾಗಿರುವುದು; ನಾನೇ ಅವರಿಗೆ ಬಾಧ್ಯನಾಗಿರುವೆನು. ನೀವು ಇಸ್ರಾಯೇಲಿನಲ್ಲಿ ಅವರಿಗೆ ಸ್ವಾಸ್ತ್ಯವನ್ನು ಕೊಡಬಾರದು. ಏಕೆಂದರೆ ನಾನೇ ಅವರಿಗೆ ಸ್ವಾಸ್ತ್ಯವಾಗಿರುವೆನು.
Og deres arvedel skal være den at jeg er deres arv. Og nogen eiendom skal I ikke gi dem i Israel; jeg er deres eiendom.
29 ಧಾನ್ಯ ಸಮರ್ಪಣೆಯನ್ನು ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ಅವರು ತಿನ್ನಬೇಕು. ಇಸ್ರಾಯೇಲಿನಲ್ಲಿ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದ್ದೆಲ್ಲವೂ ಅವರಿಗೆ ಸಲ್ಲಬೇಕು.
Matofferet og syndofferet og skyldofferet skal de ete, og alt bannlyst i Israel skal høre dem til.
30 ಇದಲ್ಲದೆ ಎಲ್ಲಾ ಪ್ರಥಮ ಫಲಗಳಲ್ಲಿ ಉತ್ಕೃಷ್ಟವಾದದ್ದೂ ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸಿದ ಎಲ್ಲಾ ಪದಾರ್ಥಗಳು ಯಾಜಕನದ್ದಾಗಬೇಕು. ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ನೀವು ಯಾಜಕರಿಗೆ ಕೊಡತಕ್ಕದ್ದು.
Og de første frukter av all førstegrøde av alle slag og hver offergave av alle slag, av alle eders offergaver, skal tilhøre prestene, og det første av eders deig skal I gi presten, så velsignelse må komme over ditt hus.
31 ಯಾಜಕರು ತಾನಾಗಿ ಸತ್ತುಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲಾದ ಪಕ್ಷಿಯನ್ನಾಗಲಿ, ಪ್ರಾಣಿಯನ್ನಾಗಲಿ ತಿನ್ನಬಾರದು.
Noget selvdødt eller sønderrevet av fugler eller dyr skal prestene ikke ete.