< ಯೆಹೆಜ್ಕೇಲನು 42 >

1 ಆಮೇಲೆ ಅವನು ನನ್ನನ್ನು ಉತ್ತರದ ಮಾರ್ಗವಾಗಿ ಹೊರಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ, ಪ್ರತ್ಯೇಕವಾದ ಸ್ಥಳಕ್ಕೆ ಎದುರಾಗಿಯೂ ಉತ್ತರದ ಕಡೆಯಲ್ಲಿ ಕಟ್ಟಡದ ಮುಂದೆ ಇದ್ದ ಕೊಠಡಿಗೆ ಕರೆತಂದನು.
וַיֹּוצִאֵ֗נִי אֶל־הֶֽחָצֵר֙ הַחִ֣יצֹונָ֔ה הַדֶּ֖רֶךְ דֶּ֣רֶךְ הַצָּפֹ֑ון וַיְבִאֵ֣נִי אֶל־הַלִּשְׁכָּ֗ה אֲשֶׁ֨ר נֶ֧גֶד הַגִּזְרָ֛ה וַאֲשֶֽׁר־נֶ֥גֶד הַבִּנְיָ֖ן אֶל־הַצָּפֹֽון׃
2 ಉತ್ತರ ಭಾಗದಲ್ಲಿ ಬಾಗಿಲು ಇದ್ದ ಕಟ್ಟಡವು ಸುಮಾರು ಐವತ್ತೆರಡು ಮೀಟರ್ ಉದ್ದ ಮತ್ತು ಇಪ್ಪತ್ತಾರು ಮೀಟರ್ ಅಗಲವಿತ್ತು.
אֶל־פְּנֵי־אֹ֙רֶךְ֙ אַמֹּ֣ות הַמֵּאָ֔ה פֶּ֖תַח הַצָּפֹ֑ון וְהָרֹ֖חַב חֲמִשִּׁ֥ים אַמֹּֽות׃
3 ಒಳಗಿನ ಅಂಗಳಕ್ಕೆ ಇದ್ದ ಇಪ್ಪತ್ತು ಮೊಳಕ್ಕೆ ಎದುರಾಗಿಯೂ ಹೊರಗಿನ ಅಂಗಳಕ್ಕೆ ಇದ್ದ ಕಲ್ಲು ಹಾಸಿದ ನೆಲಕ್ಕೆ ಎದುರಾಗಿಯೂ ಮೂರು ಅಂತಸ್ತುಗಳಲ್ಲಿಯೂ ಪಡಸಾಲೆಗಳ ಮೇಲೆ ಪಡಸಾಲೆಗಳಿದ್ದವು.
נֶ֣גֶד הָֽעֶשְׂרִ֗ים אֲשֶׁר֙ לֶחָצֵ֣ר הַפְּנִימִ֔י וְנֶ֣גֶד רִֽצְפָ֔ה אֲשֶׁ֖ר לֶחָצֵ֣ר הַחִֽיצֹונָ֑ה אַתִּ֥יק אֶל־פְּנֵֽי־אַתִּ֖יק בַּשְּׁלִשִֽׁים׃
4 ಕೊಠಡಿಗಳ ಮುಂದೆ ಸುಮಾರು ಐದು ಮೀಟರ್ ಅಗಲ ಮತ್ತು ಸುಮಾರು ಐವತ್ತೆರಡು ಮೀಟರ್ ಉದ್ದದ ಒಳ ಮಾರ್ಗವಿತ್ತು. ಅದರ ಬಾಗಿಲುಗಳು ಉತ್ತರಕ್ಕೆ ಎದುರಾಗಿದ್ದವು.
וְלִפְנֵ֨י הַלְּשָׁכֹ֜ות מַהֲלַךְ֩ עֶ֨שֶׂר אַמֹּ֥ות רֹ֙חַב֙ אֶל־הַפְּנִימִ֔ית דֶּ֖רֶךְ אַמָּ֣ה אֶחָ֑ת וּפִתְחֵיהֶ֖ם לַצָּפֹֽון׃
5 ಈಗ ಮೇಲಿನ ಕೊಠಡಿಗಳೇ ಚಿಕ್ಕದಾಗಿದ್ದವು. ಏಕೆಂದರೆ ಕಟ್ಟಡದ ಕೆಳಗಿನ ಭಾಗಕ್ಕಿಂತಲೂ ಮತ್ತು ಮಧ್ಯ ಭಾಗಕ್ಕಿಂತಲೂ ಪಡಸಾಲೆಗಳು ಎತ್ತರದಲ್ಲಿದ್ದವು.
וְהַלְּשָׁכֹ֥ות הָעֶלְיֹונֹ֖ת קְצֻרֹ֑ות כִּֽי־יֹוכְל֨וּ אַתִּיקִ֜ים מֵהֵ֗נָה מֵֽהַתַּחְתֹּנֹ֛ות וּמֵהַתִּֽכֹנֹ֖ות בִּנְיָֽן׃
6 ಇವು ಮೂರು ಅಂತಸ್ತುಗಳಾಗಿದ್ದವು. ಆದರೆ ಅಂಗಳದ ಕಂಬಗಳ ಹಾಗೆ ಇವುಗಳಿಗೆ ಕಂಬಗಳಿರಲಿಲ್ಲ. ಆದ್ದರಿಂದ ನೆಲಕ್ಕೆ ಎತ್ತರದಲ್ಲಿನ ಮೇಲಣ ಕೋಣೆಗಳು ಕೆಳಗಿನ ಮತ್ತು ನಡುವಣ ಕೋಣೆಗಳಿಗಿಂತ ಚಿಕ್ಕದಾಗಿದ್ದವು.
כִּ֤י מְשֻׁלָּשֹׁות֙ הֵ֔נָּה וְאֵ֤ין לָהֶן֙ עַמּוּדִ֔ים כְּעַמּוּדֵ֖י הַחֲצֵרֹ֑ות עַל־כֵּ֣ן נֶאֱצַ֗ל מֵהַתַּחְתֹּונֹ֛ות וּמֵהַתִּֽיכֹנֹ֖ות מֵהָאָֽרֶץ׃
7 ಕೊಠಡಿಗಳಿಗೆ ಎದುರಾಗಿ ಹೊರಗಿದ್ದ ಗೋಡೆಯು ಕೊಠಡಿಗಳ ಮುಂದೆ ಹೊರಗಿನ ಅಂಗಳದ ಕಡೆಗೆ ಇದ್ದದ್ದು ಐವತ್ತು ಮೊಳ ಉದ್ದವಾಗಿತ್ತು.
וְגָדֵ֤ר אֲשֶׁר־לַחוּץ֙ לְעֻמַּ֣ת הַלְּשָׁכֹ֔ות דֶּ֛רֶךְ הֶחָצֵ֥ר הַחִֽצֹונָ֖ה אֶל־פְּנֵ֣י הַלְּשָׁכֹ֑ות אָרְכֹּ֖ו חֲמִשִּׁ֥ים אַמָּֽה׃
8 ಏಕೆಂದರೆ ಹೊರಗಿನ ಅಂಗಳದಲ್ಲಿದ್ದ ಕೊಠಡಿಗಳ ಉದ್ದವು ಐವತ್ತು ಮೊಳ ಉದ್ದವಾಗಿಯೂ ಮತ್ತು ದೇವಾಲಯದ ಮುಂದೆ ನೂರು ಮೊಳಗಳಿದ್ದವು.
כִּֽי־אֹ֣רֶךְ הַלְּשָׁכֹ֗ות אֲשֶׁ֛ר לֶחָצֵ֥ר הַחִֽצֹונָ֖ה חֲמִשִּׁ֣ים אַמָּ֑ה וְהִנֵּ֛ה עַל־פְּנֵ֥י הַהֵיכָ֖ל מֵאָ֥ה אַמָּֽה׃
9 ಈ ಕೊಠಡಿಗಳ ಕೆಳಗೆ ಹೊರಗಿನ ಅಂಗಳದಿಂದ ಅವುಗಳೊಳಗೆ ಪ್ರವೇಶಿಸುವ ಹಾಗೆ ಪೂರ್ವದಿಕ್ಕಿಗೆ ಪ್ರವೇಶವಿತ್ತು.
וּמִתַּחֲתָה לְּשָׁכֹות (וּמִתַּ֖חַת הַלְּשָׁכֹ֣ות) הָאֵ֑לֶּה הַמָּבֹוא (הַמֵּבִיא֙) מֵֽהַקָּדִ֔ים בְּבֹאֹ֣ו לָהֵ֔נָּה מֵֽהֶחָצֵ֖ר הַחִצֹנָֽה׃
10 ಕೊಠಡಿಗಳು ಪೂರ್ವದ ಕಡೆಗೆ ಅಂಗಳದ ಗೋಡೆಯ ಪ್ರತ್ಯೇಕ ಸ್ಥಳಕ್ಕೂ ಕಟ್ಟಡಕ್ಕೂ ಎದುರಾಗಿದ್ದವು.
בְּרֹ֣חַב ׀ גֶּ֣דֶר הֶחָצֵ֗ר דֶּ֧רֶךְ הַקָּדִ֛ים אֶל־פְּנֵ֧י הַגִּזְרָ֛ה וְאֶל־פְּנֵ֥י הַבִּנְיָ֖ן לְשָׁכֹֽות׃
11 ಅವುಗಳ ಮುಂದಿನ ದಾರಿಯು ಉತ್ತರದ ಕಡೆಯಲ್ಲಿದ್ದ ಕೊಠಡಿಗಳ ಆಕಾರದ ಹಾಗೆಯೇ ಇತ್ತು. ಅವುಗಳ ಉದ್ದವೂ ಅಗಲವೂ ಒಂದೇ ಆಗಿತ್ತು. ಉತ್ತರ ದಿಕ್ಕಿನ ಬಾಗಿಲುಗಳು
וְדֶ֙רֶךְ֙ לִפְנֵיהֶ֔ם כְּמַרְאֵ֣ה הַלְּשָׁכֹ֗ות אֲשֶׁר֙ דֶּ֣רֶךְ הַצָּפֹ֔ון כְּאָרְכָּ֖ן כֵּ֣ן רָחְבָּ֑ן וְכֹל֙ מֹוצָ֣אֵיהֶ֔ן וּכְמִשְׁפְּטֵיהֶ֖ן וּכְפִתְחֵיהֶֽן׃
12 ದಕ್ಷಿಣ ಕಡೆಗಿದ್ದ ಕೊಠಡಿಗಳ ಬಾಗಿಲುಗಳ ಪ್ರಕಾರ ಅವುಗಳನ್ನು ಒಬ್ಬನು ಪ್ರವೇಶಿಸುವಂತೆ ಪೂರ್ವದ ಕಡೆಯ ಗೋಡೆಗೆ ಸರಿಯಾದ ಮಾರ್ಗದ ಕೊನೆಯಲ್ಲಿ ಒಂದು ಬಾಗಿಲಿತ್ತು.
וּכְפִתְחֵ֣י הַלְּשָׁכֹ֗ות אֲשֶׁר֙ דֶּ֣רֶךְ הַדָּרֹ֔ום פֶּ֖תַח בְּרֹ֣אשׁ דָּ֑רֶךְ דֶּ֗רֶךְ בִּפְנֵי֙ הַגְּדֶ֣רֶת הֲגִינָ֔ה דֶּ֥רֶךְ הַקָּדִ֖ים בְּבֹואָֽן׃
13 ಆಗ ಅವನು ನನಗೆ, “ಪ್ರತ್ಯೇಕ ಸ್ಥಳದ ಮುಂದೆ ಇರುವ ಉತ್ತರ ಮತ್ತು ದಕ್ಷಿಣದ ಕೊಠಡಿಗಳು ಪರಿಶುದ್ಧವಾದವು. ಅಲ್ಲಿ ಯೆಹೋವ ದೇವರಿಗಾಗಿ ಬರುವ ಯಾಜಕರು ಅತಿ ಪರಿಶುದ್ಧ ಪದಾರ್ಥಗಳನ್ನು ಭುಜಿಸುತ್ತಾರೆ. ಮತ್ತು ಕಾಣಿಕೆಯನ್ನೂ ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ಅಲ್ಲಿಡುತ್ತಾರೆ. ಆ ಸ್ಥಳವು ಪರಿಶುದ್ಧ.
וַיֹּ֣אמֶר אֵלַ֗י לִֽשְׁכֹ֨ות הַצָּפֹ֜ון לִֽשְׁכֹ֣ות הַדָּרֹום֮ אֲשֶׁ֣ר אֶל־פְּנֵ֣י הַגִּזְרָה֒ הֵ֣נָּה ׀ לִֽשְׁכֹ֣ות הַקֹּ֗דֶשׁ אֲשֶׁ֨ר יֹאכְלוּ־שָׁ֧ם הַכֹּהֲנִ֛ים אֲשֶׁר־קְרֹובִ֥ים לַֽיהוָ֖ה קָדְשֵׁ֣י הַקֳּדָשִׁ֑ים שָׁ֞ם יַנִּ֣יחוּ ׀ קָדְשֵׁ֣י הַקֳּדָשִׁ֗ים וְהַמִּנְחָה֙ וְהַחַטָּ֣את וְהָאָשָׁ֔ם כִּ֥י הַמָּקֹ֖ום קָדֹֽשׁ׃
14 ಯಾಜಕರು ಅವುಗಳಲ್ಲಿ ಪ್ರವೇಶಿಸುವಾಗ ಅವರು ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗಿನ ಅಂಗಳಕ್ಕೆ ಹೋಗಬಾರದು. ಅವರು ತಾವು ಸೇವೆಗಾಗಿ ಧರಿಸಿದ ವಸ್ತ್ರಗಳನ್ನು ಅಲ್ಲೇ ತೆಗೆದಿಡಬೇಕು. ಏಕೆಂದರೆ ಅವು ಪರಿಶುದ್ಧವಾಗಿವೆ. ಅವರು ಜನರಿಗೆ ಸಂಬಂಧಪಟ್ಟ ಬೇರೆ ವಸ್ತ್ರಗಳನ್ನು ಧರಿಸಿಕೊಂಡು ಸಮೀಪಿಸಬೇಕು,” ಎಂದನು.
בְּבֹאָ֣ם הַכֹּהֲנִ֗ים וְלֹֽא־יֵצְא֤וּ מֵהַקֹּ֙דֶשׁ֙ אֶל־הֶחָצֵ֣ר הַחִיצֹונָ֔ה וְשָׁ֞ם יַנִּ֧יחוּ בִגְדֵיהֶ֛ם אֲשֶׁר־יְשָׁרְת֥וּ בָהֶ֖ן כִּֽי־קֹ֣דֶשׁ הֵ֑נָּה יִלְבְּשׁוּ (וְלָבְשׁוּ֙) בְּגָדִ֣ים אֲחֵרִ֔ים וְקָרְב֖וּ אֶל־אֲשֶׁ֥ר לָעָֽם׃
15 ಹೀಗೆ ಅವನು ಒಳಗಿನ ಆಲಯದ ಅಳತೆಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಿಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು.
וְכִלָּ֗ה אֶת־מִדֹּות֙ הַבַּ֣יִת הַפְּנִימִ֔י וְהֹוצִיאַ֙נִי֙ דֶּ֣רֶךְ הַשַּׁ֔עַר אֲשֶׁ֥ר פָּנָ֖יו דֶּ֣רֶךְ הַקָּדִ֑ים וּמְדָדֹ֖ו סָבִ֥יב ׀ סָבִֽיב׃
16 ಅವನು ಅಳೆಯುವ ಕೋಲಿನಿಂದ ಪೂರ್ವದ ಭಾಗವನ್ನು ಅಳೆದನು. ಅದು ಅಳೆಯುವ ಕೋಲಿನ ಪ್ರಕಾರ ಸುಮಾರು 265 ಮೀಟರ್ ಆಗಿತ್ತು.
מָדַ֛ד ר֥וּחַ הַקָּדִ֖ים בִּקְנֵ֣ה הַמִּדָּ֑ה חֲמֵשׁ־אֵמֹות (מֵאֹ֥ות) קָנִ֛ים בִּקְנֵ֥ה הַמִּדָּ֖ה סָבִֽיב׃
17 ಉತ್ತರದ ಕಡೆಯಲ್ಲಿಯೂ ಸಹ ಅವನು ಉತ್ತರದ ಭಾಗವನ್ನು ಅಳತೆಯ ಕೋಲಿನ ಪ್ರಕಾರ ಸುತ್ತಲಾಗಿ ಸುಮಾರು 265 ಮೀಟರ್ ಎಂದು ಅಳೆದನು.
מָדַ֖ד ר֣וּחַ הַצָּפֹ֑ון חֲמֵשׁ־מֵאֹ֥ות קָנִ֛ים בִּקְנֵ֥ה הַמִּדָּ֖ה סָבִֽיב׃
18 ಅವನು ಅಳತೆಯ ಕೋಲಿನಿಂದ ದಕ್ಷಿಣದ ಭಾಗವನ್ನು ಸುಮಾರು 265 ಮೀಟರ್ ಎಂದು ಅಳೆದನು.
אֵ֛ת ר֥וּחַ הַדָּרֹ֖ום מָדָ֑ד חֲמֵשׁ־מֵאֹ֥ות קָנִ֖ים בִּקְנֵ֥ה הַמִּדָּֽה׃
19 ಅವನು ಪಶ್ಚಿಮದ ಕಡೆಗೆ ತಿರುಗಿ ಅಳತೆಯ ಕೋಲಿನಿಂದ ಸುಮಾರು 265 ಮೀಟರ್ ಎಂದು ಅಳೆದನು.
סָבַ֖ב אֶל־ר֣וּחַ הַיָּ֑ם מָדַ֛ד חֲמֵשׁ־מֵאֹ֥ות קָנִ֖ים בִּקְנֵ֥ה הַמִּדָּֽה׃
20 ಅವನು ನಾಲ್ಕು ಕಡೆಗಳಿಂದ ಅಳೆದನು. ಪರಿಶುದ್ಧವಾದ ಮತ್ತು ಅಪರಿಶುದ್ಧವಾದ ಸ್ಥಳವನ್ನೂ ಪ್ರತ್ಯೇಕಪಡಿಸುವ ಹಾಗೆ ಅದಕ್ಕೆ ಸುತ್ತಲು ಸುಮಾರು 265 ಮೀಟರ್ ಉದ್ದ ಮತ್ತು ಸುಮಾರು 265 ಮೀಟರ್ ಗೋಡೆ ಇತ್ತು.
לְאַרְבַּ֨ע רוּחֹ֜ות מְדָדֹ֗ו חֹ֤ומָה לֹו֙ סָבִ֣יב ׀ סָבִ֔יב אֹ֚רֶךְ חֲמֵ֣שׁ מֵאֹ֔ות וְרֹ֖חַב חֲמֵ֣שׁ מֵאֹ֑ות לְהַבְדִּ֕יל בֵּ֥ין הַקֹּ֖דֶשׁ לְחֹֽל׃

< ಯೆಹೆಜ್ಕೇಲನು 42 >