< ಯೆಹೆಜ್ಕೇಲನು 40 >

1 ನಮ್ಮ ಸೆರೆಯ ಇಪ್ಪತ್ತೈದನೆಯ ವರ್ಷದ ಆರಂಭದ ತಿಂಗಳಿನ ಹತ್ತನೆಯ ದಿನದಲ್ಲಿ, ಪಟ್ಟಣವು ನಾಶವಾದ ಮೇಲೆ, ಹದಿನಾಲ್ಕನೆಯ ವರ್ಷದ ಅದೇ ದಿನದಲ್ಲಿ, ಯೆಹೋವ ದೇವರ ಕೈ ನನ್ನ ಮೇಲೆ ಇದ್ದು ನನ್ನನ್ನು ಅಲ್ಲಿಗೆ ಬರಮಾಡಿತು.
בְּעֶשְׂרִים וְחָמֵשׁ שָׁנָה לְגָלוּתֵנוּ בְּרֹאשׁ הַשָּׁנָה בֶּעָשׂוֹר לַחֹדֶשׁ בְּאַרְבַּע עֶשְׂרֵה שָׁנָה אַחַר אֲשֶׁר הֻכְּתָה הָעִיר בְּעֶצֶם ׀ הַיּוֹם הַזֶּה הָיְתָה עָלַי יַד־יְהֹוָה וַיָּבֵא אֹתִי שָֽׁמָּה׃
2 ದೇವರ ದರ್ಶನಗಳಲ್ಲಿ ಅವರು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ನಿಲ್ಲಿಸಿದರು. ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.
בְּמַרְאוֹת אֱלֹהִים הֱבִיאַנִי אֶל־אֶרֶץ יִשְׂרָאֵל וַיְנִיחֵנִי אֶל־הַר גָּבֹהַּ מְאֹד וְעָלָיו כְּמִבְנֵה־עִיר מִנֶּֽגֶב׃
3 ಅವರು ನನ್ನನ್ನು ಅಲ್ಲಿಗೆ ತಂದಾಗ, ಅಲ್ಲಿ ಕಂಚಿನಂತೆ ತೋರುವ ಒಬ್ಬ ಮನುಷ್ಯನು ಇದ್ದನು. ಅವನ ಕೈಯಲ್ಲಿ ನಾರಿನ ನೂಲೂ ಅಳತೆಯ ಕೋಲೂ ಇತ್ತು. ಅವನು ಬಾಗಿಲಲ್ಲೇ ನಿಂತಿದ್ದನು.
וַיָּבֵיא אוֹתִי שָׁמָּה וְהִנֵּה־אִישׁ מַרְאֵהוּ כְּמַרְאֵה נְחֹשֶׁת וּפְתִיל־פִּשְׁתִּים בְּיָדוֹ וּקְנֵה הַמִּדָּה וְהוּא עֹמֵד בַּשָּֽׁעַר׃
4 ಆ ಮನುಷ್ಯನು ನನಗೆ, “ಮನುಷ್ಯಪುತ್ರನೇ ನಿನ್ನ ಕಣ್ಣುಗಳಿಂದ ನೋಡಿ ನಿನ್ನ ಕಿವಿಗಳಿಂದ ಕೇಳು ಮತ್ತು ನಾನು ತೋರಿಸುವ ಎಲ್ಲಾ ಸಂಗತಿಗಳಿಗೆ ನೀನು ಮನಸ್ಸಿಡು. ನಾನು ನಿನಗೆ ಅವುಗಳನ್ನೆಲ್ಲಾ ತೋರಿಸುವುದಕ್ಕಾಗಿಯೇ ಇಲ್ಲಿಗೆ ನಿನ್ನನ್ನು ಬರಮಾಡಿದ್ದೇನೆ. ನೀನು ನೋಡುವುದನ್ನೆಲ್ಲಾ ಇಸ್ರಾಯೇಲ್ ಜನರಿಗೆ ತಿಳಿಸು,” ಎಂದರು.
וַיְדַבֵּר אֵלַי הָאִישׁ בֶּן־אָדָם רְאֵה בְעֵינֶיךָ וּבְאׇזְנֶיךָ שְּׁמָע וְשִׂים לִבְּךָ לְכֹל אֲשֶׁר־אֲנִי מַרְאֶה אוֹתָךְ כִּי לְמַעַן הַרְאוֹתְכָה הֻבָאתָה הֵנָּה הַגֵּד אֶת־כׇּל־אֲשֶׁר־אַתָּה רֹאֶה לְבֵית יִשְׂרָאֵֽל׃
5 ನಾನು ದೇವಾಲಯದ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರೆದಿರುವ ಒಂದು ಗೋಡೆಯನ್ನು ಕಂಡೆನು. ಆ ಮನುಷ್ಯನ ಕೈಯಲ್ಲಿದ್ದ ಅಳತೆ ಕೋಲು ಸುಮಾರು ಮೂರು ಮೀಟರ್ ಉದ್ದವಿತ್ತು, ಪ್ರತಿಯೊಂದೂ ಒಂದು ಮೀಟರ್ ಮತ್ತು ಒಂದು ಅಂಗೈ ಅಗಲವಾಗಿತ್ತು. ಆ ಮನುಷ್ಯನು ಗೋಡೆಯನ್ನು ಅಳೆದನು. ಅದು ಒಂದು ಕೋಲು ಅಗಲ ಮತ್ತು ಒಂದು ಕೋಲು ಎತ್ತರವಾಗಿತ್ತು.
וְהִנֵּה חוֹמָה מִחוּץ לַבַּיִת סָבִיב ׀ סָבִיב וּבְיַד הָאִישׁ קְנֵה הַמִּדָּה שֵׁשׁ־אַמּוֹת בָּֽאַמָּה וָטֹפַח וַיָּמׇד אֶת־רֹחַב הַבִּנְיָן קָנֶה אֶחָד וְקוֹמָה קָנֶה אֶחָֽד׃
6 ಆಮೇಲೆ ಅವನು ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಬಾಗಿಲಿಗೆ ಬಂದು, ಅದರ ಮೆಟ್ಟಲುಗಳನ್ನು ಹತ್ತಿ ಆ ಬಾಗಿಲಿನ ಹೊಸ್ತಿಲನ್ನು ಅಳೆದನು, ಅದು ಒಂದೇ ಕೋಲು ಅಗಲವಾಗಿತ್ತು. ಅಗಲವಾದ ಹೊಸ್ತಿಲಿನ ಬಾಗಿಲೂ ಅಲ್ಲಿ ಇತ್ತು.
וַיָּבוֹא אֶל־שַׁעַר אֲשֶׁר פָּנָיו דֶּרֶךְ הַקָּדִימָה וַיַּעַל בְּמַעֲלוֹתָו וַיָּמׇד ׀ אֶת־סַף הַשַּׁעַר קָנֶה אֶחָד רֹחַב וְאֵת סַף אֶחָד קָנֶה אֶחָד רֹֽחַב׃
7 ಕಾವಲುಗಾರರ ಕೋಣೆಯ ಉಪವಿಭಾಗಗಳು ಒಂದು ಕೋಲು ಉದ್ದ ಮತ್ತು ಒಂದು ಕೋಲು ಅಗಲವಿದ್ದವು ಮತ್ತು ಕೋಣೆಯ ಉಪವಿಭಾಗಗಳ ನಡುವಿನ ಗೋಡೆಗಳು ಸುಮಾರು ಮೂರು ಮೀಟರ್ ದಪ್ಪವಾಗಿದ್ದವು. ಮತ್ತು ದೇವಾಲಯಕ್ಕೆ ಎದುರಾಗಿರುವ ದ್ವಾರಮಂಟಪದ ಮುಂದಿನ ಹೆಬ್ಬಾಗಿಲಿನ ಹೊಸ್ತಿಲು ಒಂದು ಕೋಲು ಆಳವಾಗಿತ್ತು.
וְהַתָּא קָנֶה אֶחָד אֹרֶךְ וְקָנֶה אֶחָד רֹחַב וּבֵין הַתָּאִים חָמֵשׁ אַמּוֹת וְסַף הַשַּׁעַר מֵאֵצֶל אֻלָם הַשַּׁעַר מֵהַבַּיִת קָנֶה אֶחָֽד׃
8 ನಂತರ ಅವನು ಹೆಬ್ಬಾಗಿಲಿನ ದ್ವಾರಮಂಟಪವನ್ನು ಅಳೆದನು.
וַיָּמׇד אֶת־אֻלָם הַשַּׁעַר מֵהַבַּיִת קָנֶה אֶחָֽד׃
9 ಆಮೇಲೆ ಬಾಗಿಲಿನ ದ್ವಾರಾಂಗಣವನ್ನು ಸುಮಾರು ನಾಲ್ಕು ಮೀಟರ್ ಅದರ ಕಂಬಗಳನ್ನು ಸುಮಾರು ಒಂದು ಮೀಟರ್ ಎಂದು ಅಳೆದನು. ಹೆಬ್ಬಾಗಿಲಿನ ದ್ವಾರಮಂಟಪವು ದೇವಾಲಯಕ್ಕೆ ಎದುರಾಗಿತ್ತು.
וַיָּמׇד אֶת־אֻלָם הַשַּׁעַר שְׁמֹנֶה אַמּוֹת וְאֵילָו שְׁתַּיִם אַמּוֹת וְאֻלָם הַשַּׁעַר מֵהַבָּֽיִת׃
10 ಪೂರ್ವದಿಕ್ಕಿನ ಕೋಣೆಯ ಉಪವಿಭಾಗಗಳು ಈ ಕಡೆಯಲ್ಲಿ ಮೂರೂ ಆ ಕಡೆಯಲ್ಲಿ ಮೂರೂ ಇದ್ದವು. ಆ ಮೂರಕ್ಕೂ ಒಂದೇ ಅಳತೆ ಇತ್ತು. ಎರಡೂ ಕಡೆಯ ಕಂಬಗಳಿಗೂ ಸಹ ಒಂದೇ ಅಳತೆ ಇತ್ತು.
וְתָאֵי הַשַּׁעַר דֶּרֶךְ הַקָּדִים שְׁלֹשָׁה מִפֹּה וּשְׁלֹשָׁה מִפֹּה מִדָּה אַחַת לִשְׁלׇשְׁתָּם וּמִדָּה אַחַת לָאֵילִם מִפֹּה וּמִפּֽוֹ׃
11 ಅನಂತರ ಅವನು ಹೆಬ್ಬಾಗಿಲ ದ್ವಾರವನ್ನು ಅಳೆದನು. ಅದರ ಅಗಲ ಸುಮಾರು ಐದು ಮೀಟರ್ ಹಾಗು ಉದ್ದ ಸುಮಾರು ಆರುವರೆ ಮೀಟರ್ ಇತ್ತು.
וַיָּמׇד אֶת־רֹחַב פֶּתַח־הַשַּׁעַר עֶשֶׂר אַמּוֹת אֹרֶךְ הַשַּׁעַר שְׁלוֹשׁ עֶשְׂרֵה אַמּֽוֹת׃
12 ಪ್ರತಿಯೊಂದು ಕೋಣೆಯ ಉಪವಿಭಾಗಗಳ ಮುಂದೆ ಸುಮಾರು ಅರ್ಧ ಮೀಟರ್ ಎತ್ತರದ ಗೋಡೆಯಿತ್ತು. ಕೋಣೆಯ ಉಪವಿಭಾಗಗಳು ಸುಮಾರು ಮೂರು ಚದರ ಮೀಟರ್ ಆಗಿದ್ದವು.
וּגְבוּל לִפְנֵי הַתָּאוֹת אַמָּה אֶחָת וְאַמָּֽה־אַחַת גְּבוּל מִפֹּה וְהַתָּא שֵׁשׁ־אַמּוֹת מִפּוֹ וְשֵׁשׁ אַמּוֹת מִפּֽוֹ׃
13 ಆಗ ಅವನು, ಒಂದು ಕೋಣೆಯ ಉಪವಿಭಾಗದ ಮಾಳಿಗೆಯಿಂದ ಇನ್ನೊಂದು ಕೋಣೆಯ ಉಪವಿಭಾಗದ ಮಾಳಿಗೆಯವರೆಗೆ ಅಳೆದನು. ಆ ದ್ವಾರದಿಂದ ಈ ದ್ವಾರಕ್ಕೇರುವ ಅಗಲವು ಸುಮಾರು ಹದಿಮೂರು ಮೀಟರಿತ್ತು.
וַיָּמׇד אֶת־הַשַּׁעַר מִגַּג הַתָּא לְגַגּוֹ רֹחַב עֶשְׂרִים וְחָמֵשׁ אַמּוֹת פֶּתַח נֶגֶד פָּֽתַח׃
14 ಬಾಗಿಲಿನ ಚೌಕಟ್ಟಿನ ಕಂಬಗಳನ್ನು ಅಳತೆಮಾಡಲು ಸುಮಾರು ಮೂವತ್ತೆರಡು ಮೀಟರ್ ಇದ್ದವು. ಅದು ಬಾಗಿಲಿನ ಸುತ್ತಮುತ್ತಲಿರುವ ಕಂಬದವರೆಗೂ ಇತ್ತು.
וַיַּעַשׂ אֶת־אֵילִים שִׁשִּׁים אַמָּה וְאֶל־אֵיל הֶחָצֵר הַשַּׁעַר סָבִיב ׀ סָבִֽיב׃
15 ಪ್ರವೇಶದ ಬಾಗಿಲಿನ ಮುಂದುಗಡೆಯಿಂದ ಒಳಬಾಗಿಲಿನ ದ್ವಾರದ ಅಂಗಳದವರೆಗೂ ಸುಮಾರು ಇಪ್ಪತ್ತೇಳು ಮೀಟರ್ ದೂರವಿತ್ತು.
וְעַל פְּנֵי הַשַּׁעַר (היאתון) [הָאִיתוֹן] עַל־לִפְנֵי אֻלָם הַשַּׁעַר הַפְּנִימִי חֲמִשִּׁים אַמָּֽה׃
16 ಕೋಣೆಯ ಉಪವಿಭಾಗಗಳು ಮತ್ತು ಬಾಗಿಲ ಚೌಕಟ್ಟಿನ ಒಳಗಡೆ ಇರುವ ಅವುಗಳ ಕಂಬಗಳಲ್ಲಿಯೂ ಇಕ್ಕಟ್ಟಾದ ಕಿಟಕಿಗಳಿದ್ದವು. ಕೈಸಾಲೆಗಳಿಗೂ ಸಹ ಒಳಗಡೆ ಸುತ್ತಲೂ ಕಿಟಕಿಗಳಿದ್ದವು. ಒಂದೊಂದು ಕಂಬದ ಮೇಲೆ ಖರ್ಜೂರದ ಮರಗಳಿಂದ ಅಲಂಕರಿಸಲಾಗಿದ್ದವು.
וְחַלּוֹנוֹת אֲטֻמוֹת אֶֽל־הַתָּאִים וְאֶל אֵלֵיהֵמָה לִפְנִימָה לַשַּׁעַר סָבִיב ׀ סָבִיב וְכֵן לָאֵֽלַמּוֹת וְחַלּוֹנוֹת סָבִיב ׀ סָבִיב לִפְנִימָה וְאֶל־אַיִל תִּמֹרִֽים׃
17 ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆತಂದನು. ಅಲ್ಲಿ ನಾನು ಕೆಲವು ಕೋಣೆಗಳನ್ನು ಮತ್ತು ಅಂಗಳದ ಸುತ್ತಲೂ ನಿರ್ಮಿಸಲಾದ ಒಂದು ಕಾಲುದಾರಿಯನ್ನು ಕಂಡೆನು. ಕಾಲುದಾರಿ ಉದ್ದಕ್ಕೂ ಮೂವತ್ತು ಕೋಣೆಗಳಿದ್ದವು.
וַיְבִיאֵנִי אֶל־הֶחָצֵר הַחִיצוֹנָה וְהִנֵּה לְשָׁכוֹת וְרִֽצְפָה עָשׂוּי לֶחָצֵר סָבִיב ׀ סָבִיב שְׁלֹשִׁים לְשָׁכוֹת אֶל־הָרִֽצְפָֽה׃
18 ಬಾಗಿಲುಗಳ ಪಾರ್ಷ್ವದಲ್ಲಿಯೂ ಬಾಗಿಲುಗಳ ಉದ್ದಕ್ಕೆ ಸರಿಯಾಗಿಯೂ ಇದ್ದ ಆ ಕಲ್ಲು ಹಾಸಿದ ನೆಲವು ಕೆಳಗಿನ ನೆಲಗಟ್ಟಾಗಿತ್ತು.
וְהָרִֽצְפָה אֶל־כֶּתֶף הַשְּׁעָרִים לְעֻמַּת אֹרֶךְ הַשְּׁעָרִים הָרִֽצְפָה הַתַּחְתּוֹנָֽה׃
19 ಆಗ ಅವನು ಕೆಳಗಿನ ಬಾಗಿಲಿನ ಮುಂದುಗಡೆಯಿಂದ ಒಳಗಿನ ಅಂಗಳದ ಹೊರಗಡೆಯವರೆಗೂ ಪೂರ್ವಕ್ಕೂ ಉತ್ತರಕ್ಕೂ ಇರುವ ಅಗಲವನ್ನು ಸುಮಾರು ಐವತ್ತಮೂರು ಮೀಟರ್ ಎಂದು ಅಳೆದನು.
וַיָּמׇד רֹחַב מִלִּפְנֵי הַשַּׁעַר הַתַּחְתּוֹנָה לִפְנֵי הֶחָצֵר הַפְּנִימִי מִחוּץ מֵאָה אַמָּה הַקָּדִים וְהַצָּפֽוֹן׃
20 ಇದಲ್ಲದೆ ಉತ್ತರದ ಕಡೆಗೆ ಅಭಿಮುಖವಾದ ಹೊರಗಿನ ಬಾಗಿಲಿನ ಉದ್ದವನ್ನೂ ಅಗಲವನ್ನೂ ಅಳೆದನು.
וְהַשַּׁעַר אֲשֶׁר פָּנָיו דֶּרֶךְ הַצָּפוֹן לֶחָצֵר הַחִיצוֹנָה מָדַד אׇרְכּוֹ וְרׇחְבּֽוֹ׃
21 ಅದರ ಕೋಣೆಯ ಉಪವಿಭಾಗಗಳು ಈ ಕಡೆಗೂ ಆ ಕಡೆಗೂ ಮೂರು ಇದ್ದವು. ಅದರ ಕಂಬಗಳು ಮತ್ತು ಅದರ ಕೈಸಾಲೆಗಳು ಮೊದಲನೆಯ ಬಾಗಿಲಿನ ಅಳತೆಯಂತೆ ಇದ್ದವು. ಅದರ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.
וְתָאָו שְׁלוֹשָׁה מִפּוֹ וּשְׁלֹשָׁה מִפּוֹ וְאֵילָו וְאֵֽלַמָּו הָיָה כְּמִדַּת הַשַּׁעַר הָרִאשׁוֹן חֲמִשִּׁים אַמָּה אׇרְכּוֹ וְרֹחַב חָמֵשׁ וְעֶשְׂרִים בָּאַמָּֽה׃
22 ಅದರ ಕಿಟಕಿಗಳೂ ಅದರ ಕೈಸಾಲೆಗಳೂ ಅದರ ಖರ್ಜೂರದ ಗಿಡಗಳೂ ಪೂರ್ವ ಕಡೆಯ ಬಾಗಿಲಿನ ಕಡೆಗೆ ಅಭಿಮುಖವಾಗಿದ್ದವು. ಅವರು ಏಳು ಮೆಟ್ಟಲುಗಳನ್ನು ಏರಿದಾಗ, ಅದರ ಕೈಸಾಲೆಗಳು ಅದರ ಮುಂದಿದ್ದವು.
וְחַלּוֹנָו וְאֵֽילַמָּו וְתִימֹרָו כְּמִדַּת הַשַּׁעַר אֲשֶׁר פָּנָיו דֶּרֶךְ הַקָּדִים וּבְמַעֲלוֹת שֶׁבַע יַעֲלוּ־בוֹ וְאֵילַמָּו לִפְנֵיהֶֽם׃
23 ಒಳಗಿನ ಅಂಗಳದ ಬಾಗಿಲು ಉತ್ತರ ಮತ್ತು ಪೂರ್ವಕ್ಕಿರುವ ಬಾಗಿಲಿಗೆ ಎದುರಾಗಿತ್ತು. ಅವನು ಬಾಗಿಲಿನಿಂದ ಬಾಗಿಲಿಗೆ ಸುಮಾರು ಐವತ್ತಮೂರು ಮೀಟರ್ ಎಂದು ಅಳೆದನು.
וְשַׁעַר לֶחָצֵר הַפְּנִימִי נֶגֶד הַשַּׁעַר לַצָּפוֹן וְלַקָּדִים וַיָּמׇד מִשַּׁעַר אֶל־שַׁעַר מֵאָה אַמָּֽה׃
24 ಆಮೇಲೆ ಆತನು ನನ್ನನ್ನು ದಕ್ಷಿಣದ ಕಡೆಗೆ ಕರೆತಂದನು ಅಲ್ಲಿಯೂ ಬಾಗಿಲು ಇತ್ತು, ಅವನು ಅದರ ಕಂಬಗಳನ್ನು ಅದರ ಕೈಸಾಲೆಗಳನ್ನು ಈ ಅಳತೆಯ ಪ್ರಕಾರವೇ ಅಳೆದನು.
וַיּוֹלִכֵנִי דֶּרֶךְ הַדָּרוֹם וְהִנֵּה־שַׁעַר דֶּרֶךְ הַדָּרוֹם וּמָדַד אֵילָו וְאֵילַמָּו כַּמִּדּוֹת הָאֵֽלֶּה׃
25 ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಆ ಕಿಟಕಿಗಳ ಹಾಗೆಯೇ ಕಿಟಕಿಗಳೂ ಇದ್ದವು. ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.
וְחַלּוֹנִים לוֹ וּלְאֵֽילַמָּו סָבִיב ׀ סָבִיב כְּהַחַלֹּנוֹת הָאֵלֶּה חֲמִשִּׁים אַמָּה אֹרֶךְ וְרֹחַב חָמֵשׁ וְעֶשְׂרִים אַמָּֽה׃
26 ಅದಕ್ಕೆ ಏರುವ ಹಾಗೆ ಏಳೂ ಮೆಟ್ಟಲುಗಳು ಇದ್ದವು. ಅದರ ಕೈಸಾಲೆಗಳು ಅದರ ಮುಂದೆ ಇದ್ದವು. ಅದರ ಕಂಬಗಳು ಮೇಲೆ ಆ ಕಡೆಗೂ ಈ ಕಡೆಗೂ ಒಂದೊಂದು ಖರ್ಜೂರದ ಮರದಿಂದ ಅಲಂಕರಿಸಲಾಗಿತ್ತು.
וּמַעֲלוֹת שִׁבְעָה עֹֽלוֹתָו וְאֵלַמָּו לִפְנֵיהֶם וְתִמֹרִים לוֹ אֶחָד מִפּוֹ וְאֶחָד מִפּוֹ אֶל־אֵילָֽו׃
27 ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಬಾಗಿಲಿತ್ತು. ಅವನು ಒಂದು ಬಾಗಿಲಿನಿಂದ ಮತ್ತೊಂದು ಬಾಗಿಲಿಗೆ ದಕ್ಷಿಣವಾಗಿ ಸುಮಾರು ಐವತ್ತಮೂರು ಮೀಟರ್ ಎಂದು ಅಳೆದನು.
וְשַׁעַר לֶחָצֵר הַפְּנִימִי דֶּרֶךְ הַדָּרוֹם וַיָּמׇד מִשַּׁעַר אֶל־הַשַּׁעַר דֶּרֶךְ הַדָּרוֹם מֵאָה אַמּֽוֹת׃
28 ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಿಲಿನಿಂದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅವನು ಈ ಅಳತೆಗಳ ಪ್ರಕಾರ ದಕ್ಷಿಣದ ಬಾಗಿಲನ್ನು ಅಳೆದನು.
וַיְבִיאֵנִי אֶל־חָצֵר הַפְּנִימִי בְּשַׁעַר הַדָּרוֹם וַיָּמׇד אֶת־הַשַּׁעַר הַדָּרוֹם כַּמִּדּוֹת הָאֵֽלֶּה׃
29 ಅಲ್ಲಿನ ಕೋಣೆಯ ಉಪವಿಭಾಗಗಳನ್ನೂ ಅದರ ಕಂಬಗಳನ್ನೂ ಅದರ ಪಡಸಾಲೆಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಸುತ್ತಲೂ ಇರುವ ಅದರ ಪಡಸಾಲೆಗಳಲ್ಲಿಯೂ ಕಿಟಕಿಗಳಿದ್ದವು. ಅದರ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.
וְתָאָו וְאֵילָו וְאֵֽלַמָּו כַּמִּדּוֹת הָאֵלֶּה וְחַלּוֹנוֹת לוֹ וּלְאֵלַמָּו סָבִיב ׀ סָבִיב חֲמִשִּׁים אַמָּה אֹרֶךְ וְרֹחַב עֶשְׂרִים וְחָמֵשׁ אַמּֽוֹת׃
30 ಸುತ್ತಲಿರುವ ಕೈಸಾಲೆಗಳೂ ಸುಮಾರು ಇಪ್ಪತ್ತೈದು ಮೀಟರ್ ಉದ್ದವಾಗಿಯೂ ಸುಮಾರು ಹದಿಮೂರು ಮೀಟರ್ ಅಗಲವಾಗಿಯೂ ಇದ್ದವು.
וְאֵלַמּוֹת סָבִיב ׀ סָבִיב אֹרֶךְ חָמֵשׁ וְעֶשְׂרִים אַמָּה וְרֹחַב חָמֵשׁ אַמּֽוֹת׃
31 ಅದರ ಪಡಸಾಲೆಗಳು ಹೊರಗಿನ ಅಂಗಳದ ಕಡೆಗಿದ್ದವು. ಅದರ ಕಂಬಗಳಲ್ಲಿ ಖರ್ಜೂರದ ಮರಗಳಿಂದ ಅಲಂಕರಿಸಲಾಗಿದ್ದವು. ಅದಕ್ಕೆ ಏರುವುದಕ್ಕೆ ಎಂಟು ಮೆಟ್ಟಲುಗಳು ಇದ್ದವು.
וְאֵלַמָּו אֶל־חָצֵר הַחִצוֹנָה וְתִמֹרִים אֶל־אֵילָו וּמַעֲלוֹת שְׁמוֹנֶה מַעֲלָֽו׃
32 ಅವನು ನನ್ನನ್ನು ಪೂರ್ವದ ಕಡೆಗಿರುವ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅವನು ಈ ಅಳತೆಗಳ ಪ್ರಕಾರ ಬಾಗಿಲನ್ನು ಅಳೆದನು.
וַיְבִיאֵנִי אֶל־הֶחָצֵר הַפְּנִימִי דֶּרֶךְ הַקָּדִים וַיָּמׇד אֶת־הַשַּׁעַר כַּמִּדּוֹת הָאֵֽלֶּה׃
33 ಅಲ್ಲಿನ ಕೋಣೆಯ ಉಪವಿಭಾಗಗಳನ್ನೂ ಅದರ ಕಂಬಗಳನ್ನೂ ಅದರ ಪಡಸಾಲೆಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಸುತ್ತಲೂ ಇರುವ ಅದರ ಪಡಸಾಲೆಗಳಲ್ಲಿಯೂ ಕಿಟಕಿಗಳಿದ್ದವು. ಅದರ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.
וְתָאָו וְאֵלָו וְאֵֽלַמָּו כַּמִּדּוֹת הָאֵלֶּה וְחַלּוֹנוֹת לוֹ וּלְאֵלַמָּו סָבִיב ׀ סָבִיב אֹרֶךְ חֲמִשִּׁים אַמָּה וְרֹחַב חָמֵשׁ וְעֶשְׂרִים אַמָּֽה׃
34 ಅದರ ಪಡಸಾಲೆಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಖರ್ಜೂರದ ಮರಗಳಿಂದ ಅಲಂಕರಿಸಲಾಗಿದ್ದವು; ಮೇಲೆ ಹತ್ತುವುದಕ್ಕೆ ಎಂಟು ಮೆಟ್ಟಲುಗಳು ಇದ್ದವು.
וְאֵלַמָּו לֶחָצֵר הַחִיצוֹנָה וְתִמֹרִים אֶל־אֵלָו מִפּוֹ וּמִפּוֹ וּשְׁמֹנֶה מַעֲלוֹת מַעֲלָֽו׃
35 ಅವನು ನನ್ನನ್ನು ಉತ್ತರದ ಬಾಗಿಲಿನ ಬಳಿಗೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಅಳೆದನು;
וַיְבִיאֵנִי אֶל־שַׁעַר הַצָּפוֹן וּמָדַד כַּמִּדּוֹת הָאֵֽלֶּה׃
36 ಅಲ್ಲಿಯ ಕೋಣೆಯ ಉಪವಿಭಾಗಗಳು, ಅಲ್ಲಿನ ಕಂಬಗಳು, ಅಲ್ಲಿನ ಕೈಸಾಲೆಗಳು ಮತ್ತು ಅದರ ಸುತ್ತಲೂ ಇರುವ ಕಿಟಕಿಗಳ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.
תָּאָו אֵלָו וְאֵלַמָּו וְחַלּוֹנוֹת לוֹ סָבִיב ׀ סָבִיב אֹרֶךְ חֲמִשִּׁים אַמָּה וְרֹחַב חָמֵשׁ וְעֶשְׂרִים אַמָּֽה׃
37 ಅದರ ಪಡಸಾಲೆಗಳು ಹೊರಗಿನ ಅಂಗಳದ ಕಡೆಗೆ ಇದ್ದವು. ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಖರ್ಜೂರದ ಮರಗಳಿಂದ ಅಲಂಕರಿಸಲಾಗಿದ್ದವು; ಮೇಲೆ ಹತ್ತುವುದಕ್ಕೆ ಎಂಟು ಮೆಟ್ಟಲುಗಳು ಇದ್ದವು.
וְאֵילָו לֶחָצֵר הַחִיצוֹנָה וְתִמֹרִים אֶל־אֵילָו מִפּוֹ וּמִפּוֹ וּשְׁמֹנֶה מַעֲלוֹת מַעֲלָֽו׃
38 ಕೊಠಡಿಗಳೂ ಅವುಗಳ ಪ್ರವೇಶಗಳೂ ಬಾಗಿಲುಗಳ ಕಂಬಗಳ ಬಳಿಯಲ್ಲಿ, ದಹನಬಲಿಯನ್ನು ತೊಳೆಯುವಲ್ಲಿ ಇದ್ದವು;
וְלִשְׁכָּה וּפִתְחָהּ בְּאֵילִים הַשְּׁעָרִים שָׁם יָדִיחוּ אֶת־הָעֹלָֽה׃
39 ಕೈಸಾಲೆಯಲ್ಲಿ ಎರಡು ಕಡೆಯಲ್ಲಿಯೂ ಎರಡು ಮೇಜುಗಳು ಈ ಕಡೆಗೆ ಮತ್ತು ಎರಡು ಮೇಜುಗಳು ಆ ಕಡೆಗೆ ಇದ್ದವು. ದಹನಬಲಿಯನ್ನೂ ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ವಧಿಸುವ ಹಾಗೆ ಅವು ಇದ್ದವು.
וּבְאֻלָם הַשַּׁעַר שְׁנַיִם שֻׁלְחָנוֹת מִפּוֹ וּשְׁנַיִם שֻׁלְחָנוֹת מִפֹּה לִשְׁחוֹט אֲלֵיהֶם הָעוֹלָה וְהַחַטָּאת וְהָאָשָֽׁם׃
40 ಉತ್ತರ ಹೆಬ್ಬಾಗಿಲ ಪ್ರವೇಶಸ್ಥಾನದ ಮೆಟ್ಟಲುಗಳ ಹತ್ತಿರ, ಆ ಬಾಗಿಲ ಕೈಸಾಲೆಯ ಹೊರಗೆ, ಒಂದು ಕೊನೆಯಲ್ಲಿ ಎರಡು ಮೇಜುಗಳೂ ಇದ್ದವು.
וְאֶל־הַכָּתֵף מִחוּצָה לָֽעוֹלֶה לְפֶתַח הַשַּׁעַר הַצָּפוֹנָה שְׁנַיִם שֻׁלְחָנוֹת וְאֶל־הַכָּתֵף הָאַחֶרֶת אֲשֶׁר לְאֻלָם הַשַּׁעַר שְׁנַיִם שֻׁלְחָנֽוֹת׃
41 ಬಾಗಿಲಿನ ಕೊನೆಯಲ್ಲಿ ಈ ಕಡೆ ನಾಲ್ಕು ಮೇಜುಗಳೂ ಆ ಕಡೆ ನಾಲ್ಕು ಮೇಜುಗಳೂ ಈ ರೀತಿ ಎಂಟು ಮೇಜುಗಳಿದ್ದವು; ಇವುಗಳ ಮೇಲೆ ಅವರು ಯಜ್ಞಗಳನ್ನು ಅರ್ಪಿಸುತ್ತಿದ್ದರು.
אַרְבָּעָה שֻׁלְחָנוֹת מִפֹּה וְאַרְבָּעָה שֻׁלְחָנוֹת מִפֹּה לְכֶתֶף הַשָּׁעַר שְׁמוֹנָה שֻׁלְחָנוֹת אֲלֵיהֶם יִשְׁחָֽטוּ׃
42 ದಹನಬಲಿಗಾಗಿ ಇದ್ದ ಆ ನಾಲ್ಕು ಮೇಜುಗಳು ಕೆತ್ತಿದ ಕಲ್ಲುಗಳಿಂದ ನಿರ್ಮಿತವಾಗಿದ್ದವು. ಅವುಗಳ ಉದ್ದ ಮತ್ತು ಅಗಲ ಸುಮಾರು ಎಂಬತ್ತು ಸೆಂಟಿಮೀಟರ್, ಎತ್ತರವೂ ಸುಮಾರು ಐವತ್ತಮೂರು ಸೆಂಟಿಮೀಟರ್. ಇವುಗಳ ಮೇಲೆ ಅವರು ದಹನಬಲಿಯನ್ನೂ ಅರ್ಪಣೆಯನ್ನೂ ವಧಿಸುವ ಸಲಕರಣೆಗಳನ್ನೂ ಇಡುತ್ತಿದ್ದರು.
וְאַרְבָּעָה שֻׁלְחָנוֹת לָעוֹלָה אַבְנֵי גָזִית אֹרֶךְ אַמָּה אַחַת וָחֵצִי וְרֹחַב אַמָּה אַחַת וָחֵצִי וְגֹבַהּ אַמָּה אֶחָת אֲלֵיהֶם וְיַנִּיחוּ אֶת־הַכֵּלִים אֲשֶׁר יִשְׁחֲטוּ אֶת־הָעוֹלָה בָּם וְהַזָּֽבַח׃
43 ಒಳಗೆ ಸುತ್ತಲಾಗಿ ಅಂಗೈ ಅಗಲದಷ್ಟು ಕೊಂಡಿಗಳು ಜಡಿಯಲಾಗಿದ್ದವು. ಮೇಜುಗಳ ಮೇಲೆ ಬಲಿಯ ಮಾಂಸವಿತ್ತು.
וְהַֽשְׁפַתַּיִם טֹפַח אֶחָד מוּכָנִים בַּבַּיִת סָבִיב ׀ סָבִיב וְאֶל־הַשֻּׁלְחָנוֹת בְּשַׂר הַקׇּרְבָֽן׃
44 ಅನಂತರ ಅವನು ನನ್ನನ್ನು ಒಳಗಿನ ಪ್ರಾಕಾರಕ್ಕೆ ಕರೆತಂದರು. ಅಲ್ಲಿ ಎರಡು ಕೊಠಡಿಗಳು ಇದ್ದವು. ಒಂದು ಉತ್ತರದ ಬಾಗಿಲಿನ ಕಡೆಗೆ ದಕ್ಷಿಣಕ್ಕೆ ಅಭಿಮುಖವಾಗಿತ್ತು; ಮತ್ತೊಂದು ಪೂರ್ವದ ಬಾಗಿಲಿನ ಕಡೆಗೆ ಉತ್ತರಕ್ಕೆ ಅಭಿಮುಖವಾಗಿತ್ತು.
וּמִחוּצָה לַשַּׁעַר הַפְּנִימִי לִֽשְׁכוֹת שָׁרִים בֶּחָצֵר הַפְּנִימִי אֲשֶׁר אֶל־כֶּתֶף שַׁעַר הַצָּפוֹן וּפְנֵיהֶם דֶּרֶךְ הַדָּרוֹם אֶחָד אֶל־כֶּתֶף שַׁעַר הַקָּדִים פְּנֵי דֶּרֶךְ הַצָּפֹֽן׃
45 ಅವನು ನನಗೆ ಹೇಳಿದ್ದೇನೆಂದರೆ, “ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೊಠಡಿ ದೇವಾಲಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಯಾಜಕರದು.
וַיְדַבֵּר אֵלָי זֹה הַלִּשְׁכָּה אֲשֶׁר פָּנֶיהָ דֶּרֶךְ הַדָּרוֹם לַכֹּהֲנִים שֹׁמְרֵי מִשְׁמֶרֶת הַבָּֽיִת׃
46 ಉತ್ತರಕ್ಕೆ ಅಭಿಮುಖವಾಗಿರುವ ಕೊಠಡಿ ಬಲಿಪೀಠದ ಮೇಲ್ವಿಚಾರಕರಾದ ಯಾಜಕರದು. ಚಾದೋಕನ ಪುತ್ರರಾದ ಇವರು ಲೇವಿಯ ಕುಲದವರಲ್ಲಿ ಯೆಹೋವ ದೇವರ ಸನ್ನಿಧಿಯ ಸೇವಕರಾಗಿದ್ದಾರೆ.”
וְהַלִּשְׁכָּה אֲשֶׁר פָּנֶיהָ דֶּרֶךְ הַצָּפוֹן לַכֹּהֲנִים שֹׁמְרֵי מִשְׁמֶרֶת הַמִּזְבֵּחַ הֵמָּה בְנֵֽי־צָדוֹק הַקְּרֵבִים מִבְּנֵֽי־לֵוִי אֶל־יְהֹוָה לְשָׁרְתֽוֹ׃
47 ಹೀಗೆ ಅವನು ಅಂಗಳವನ್ನು ಅಳೆದನು. ಅದರ ಉದ್ದವು ಸುಮಾರು ಐವತ್ತು ಮೀಟರ್, ಅಗಲವು ಸುಮಾರು ಐವತ್ತು ಮೀಟರ್ ಚಚ್ಚೌಕವಾಗಿತ್ತು. ಆ ಬಲಿಪೀಠವು ದೇವಾಲಯದ ಮುಂದೆ ಇತ್ತು.
וַיָּמׇד אֶת־הֶחָצֵר אֹרֶךְ ׀ מֵאָה אַמָּה וְרֹחַב מֵאָה אַמָּה מְרֻבָּעַת וְהַמִּזְבֵּחַ לִפְנֵי הַבָּֽיִת׃
48 ಅವನು ನನ್ನನ್ನು ಮನೆಯ ದ್ವಾರಮಂಟಪಕ್ಕೆ ಕರೆದುಕೊಂಡು ಹೋಗಿ, ದ್ವಾರಮಂಟಪ ಪ್ರತಿಯೊಂದು ಕಂಬವನ್ನೂ ಅಳೆದನು. ದ್ವಾರಮಂಟಪ ಅಗಲವು ಸುಮಾರು ಏಳು ಮೀಟರ್ ಮತ್ತು ಪಕ್ಕದ ಗೋಡೆಗಳ ಅಗಲವು ಎರಡೂ ಬದಿಗಳಲ್ಲಿ ಸುಮಾರು ಒಂದೂವರೆ ಮೀಟರ್ ಆಗಿತ್ತು.
וַיְבִאֵנִי אֶל־אֻלָם הַבַּיִת וַיָּמָד אֵל אֻלָם חָמֵשׁ אַמּוֹת מִפֹּה וְחָמֵשׁ אַמּוֹת מִפֹּה וְרֹחַב הַשַּׁעַר שָׁלֹשׁ אַמּוֹת מִפּוֹ וְשָׁלֹשׁ אַמּוֹת מִפּֽוֹ׃
49 ದ್ವಾರಮಂಟಪದ ಅಗಲವು ಸುಮಾರು ಹನ್ನೊಂದು ಮೀಟರ್ ಮತ್ತು ಮುಂಭಾಗದಿಂದ ಹಿಂಭಾಗಕ್ಕೆ ಸುಮಾರು ಆರು ಮೀಟರ್. ಅದನ್ನು ಹತ್ತಲು ಮೆಟ್ಟಿಲುಗಳಿದ್ದವು ಮತ್ತು ಎರಡೂ ಬದಿಗಳಲ್ಲಿ ಬಾಗಿಲಿನ ಚೌಕಟ್ಟುಗಳ ಬದಿಗಳಲ್ಲಿ ಕಂಬಗಳು ಇದ್ದವು.
אֹרֶךְ הָאֻלָם עֶשְׂרִים אַמָּה וְרֹחַב עַשְׁתֵּי עֶשְׂרֵה אַמָּה וּבַֽמַּעֲלוֹת אֲשֶׁר יַעֲלוּ אֵלָיו וְעַמֻּדִים אֶל־הָאֵילִים אֶחָד מִפֹּה וְאֶחָד מִפֹּֽה׃

< ಯೆಹೆಜ್ಕೇಲನು 40 >