< ಯೆಹೆಜ್ಕೇಲನು 4 >
1 “ಮನುಷ್ಯಪುತ್ರನೇ, ನೀನು ಒಂದು ಇಟ್ಟಿಗೆಯನ್ನು ತೆಗೆದುಕೊಂಡು, ನಿನ್ನ ಮುಂದಿಟ್ಟುಕೊಂಡು, ಅದರ ಮೇಲೆ ಯೆರೂಸಲೇಮ್ ನಗರದ ನಕ್ಷೆಯನ್ನು ಬರೆ.
「人子,你拿一塊磚,放在你面前,把一座耶路撒冷城刻劃在上面。
2 ಆ ನಕ್ಷೆಯ ಸುತ್ತಲು ದಿಬ್ಬ ಹಾಕಿ, ಒಡ್ಡು ಕಟ್ಟಿ, ಪಾಳೆಯಗಳನ್ನು ಮಾಡಿ, ಭಿತ್ತಿಭೇದಕ ಯಂತ್ರಗಳನ್ನು ನಿಲ್ಲಿಸಿ, ಅದನ್ನು ಮುತ್ತಿಗೆ ಹಾಕು.
安排圍城的事;製造攻城的雲梯,堆起攻城的高台,擺列攻城的陣營,四周架起破城機。
3 ಆಮೇಲೆ ಕಬ್ಬಿಣದ ಹಂಚನ್ನು ತೆಗೆದುಕೊಂಡು, ಅದನ್ನು ನಿನಗೂ, ಆ ಪಟ್ಟಣಕ್ಕೂ ಮಧ್ಯೆ ಕಬ್ಬಿಣದ ಗೋಡೆಯನ್ನಾಗಿ ನಿಲ್ಲಿಸಿ, ಆ ಪಟ್ಟಣದ ಮೇಲೆ ದೃಷ್ಟಿಯಿಡು, ಅದು ಮುತ್ತಲಾಗುವುದು. ನೀನು ಅದನ್ನು ಮುತ್ತಿದಂತಾಗುವುದು. ಇದು ಇಸ್ರಾಯೇಲಿನ ಜನರಿಗೆ ಒಂದು ಸಂಕೇತ.
再拿一個鐵鏊,將它立在你和城的中間,當作鐵牆。然後朝著城板起面孔,使城好像被圍困,你好像在攻城:這樣給以色列家一個徵兆。」
4 “ನೀನು ನಿನ್ನ ಎಡಗಡೆಯಲ್ಲಿ ಮಲಗಿ, ಇಸ್ರಾಯೇಲಿನ ಜನರ ಅಕ್ರಮಗಳನ್ನು ನಿಮ್ಮ ಮೇಲಿಡಬೇಕು. ನೀನು ಎಡಗಡೆಯಲ್ಲಿ ಮಲಗುವ ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮಗಳನ್ನು ನಿಮ್ಮ ಮೇಲೆ ಹೊತ್ತುಕೊಂಡಿರಬೇಕು.
你要向左側臥下! 我把以色列家的罪惡放在你身上。你臥多少日子,就多少日子承擔他們的罪惡。
5 ನಾನು ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರ ತೊಂಬತ್ತು ದಿವಸಗಳಾಗಿವೆ. ಹೀಗೆ ನೀನು ಇಸ್ರಾಯೇಲಿನ ಜನರ ಅಕ್ರಮಗಳನ್ನು ಹೊರಬೇಕು.
我把他們犯罪的年數算為三百九十日,你要在這些日子內承擔以色列家的罪惡。
6 “ನೀನು ಇವುಗಳನ್ನು ಮಾಡಿದ ಮೇಲೆ ಇನ್ನೊಂದು ಸಾರಿ ಬಲಗಡೆಯಲ್ಲಿ ಮಲಗಿ, ಯೆಹೂದ ಜನರ ಅಕ್ರಮವನ್ನು ನಲವತ್ತು ದಿವಸ ಹೊರಬೇಕು. ನಾನು ನಿನಗೆ ಒಂದೊಂದು ದಿನವನ್ನು ಒಂದೊಂದು ವರ್ಷಕ್ಕೆ ನೇಮಿಸಿದ್ದೇನೆ.
滿了那些日子,你要向右側臥下,為承擔猶大家的罪惡,共四十日;我給你規定一日算一年。
7 ನೀನು ಯೆರೂಸಲೇಮಿನ ಮುತ್ತಿಗೆಯ ಕಡೆಗೆ ನಿನ್ನ ಮುಖವನ್ನು ಇಡಬೇಕು. ನಿನ್ನ ಭುಜವನ್ನು ನೀನು ಬರಿದುಮಾಡಿಕೊಂಡು, ಅದಕ್ಕೆ ವಿರೋಧವಾಗಿ ಪ್ರವಾದಿಸಬೇಕು.
你要朝著被圍困的耶路撒冷板起面孔,露出臂膊,向她預言。
8 ನಾನು ನಿನ್ನ ಮೇಲೆ ಹಗ್ಗಗಳನ್ನು ಇಡುತ್ತೇನೆ. ನೀನು ನಿನ್ನ ಮುತ್ತಿಗೆಯ ದಿವಸಗಳು ಮುಗಿಯುವವರೆಗೂ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೊರಳದಂತೆ ನಿನ್ನನ್ನು ಬಂಧಿಸುವೆನು.
看,我要用繩索捆縛你,叫你不能輾轉反側,直到你被困的日子期滿。」「
9 “ನೀನು ಗೋಧಿ, ಜವೆಗೋಧಿ, ಅವರೆ, ಅಲಸಂದಿ, ನವಣೆ, ಸಜ್ಜೆಗಳನ್ನು ತೆಗೆದುಕೊಂಡು, ಅವುಗಳನ್ನು ಒಂದು ಮಡಿಕೆಯಲ್ಲಿಟ್ಟು, ನೀನು ಒಂದು ಕಡೆಯಲ್ಲಿ ಮಲಗುವ ದಿವಸಗಳ ಲೆಕ್ಕದ ಪ್ರಕಾರ ನಿನಗಾಗಿ ರೊಟ್ಟಿಯನ್ನು ಮಾಡಿಕೊಂಡು, ಮುನ್ನೂರ ತೊಂಬತ್ತು ದಿನಗಳು ಅವರಿಂದಲೇ ತಿನ್ನಬೇಕು.
你要拿小麥、大麥、豆子、扁豆、黍米和粗麥,裝在一個器皿裏,用來為你做一些餅,在你三百九十日側臥的日子內,就吃這些餅。
10 ನೀನು ತಿನ್ನುವ ಆಹಾರದ ತೂಕದ ಪ್ರಕಾರ ಅದು ಒಂದು ದಿನಕ್ಕೆ 230 ಗ್ರಾಂ ಇರಲಿ, ನೀನು ಅದನ್ನು ಆಗಾಗ್ಗೆ ತಿನ್ನಬೇಕು.
每天要按分量吃,每日二十「協刻耳,」按時食用。
11 ನೀನು ನೀರನ್ನು ಸಹ ಅಳತೆಯ ಪ್ರಕಾರ ಸುಮಾರು ಅರ್ಧ ಲೀಟರ್ ಕಾಲಕಾಲಕ್ಕೆ ಸರಿಯಾಗಿ ಕುಡಿಯಬೇಕು.
喝水也要有分量,每日喝六分之一「歆」的水,按時而飲。
12 ಇದಲ್ಲದೆ ನೀನು ಆಹಾರವನ್ನು ಜವೆಗೋಧಿಯ ರೊಟ್ಟಿಗಳಂತೆ ತಿನ್ನಬೇಕು. ಅದನ್ನು ಸೌದೆಗೆ ಬದಲಾಗಿ ಮನುಷ್ಯರ ಮಲವನ್ನು ಉರಿಸಿ ಅವರ ಕಣ್ಣುಗಳ ಮುಂದೆ ಅಡಿಗೆ ಮಾಡಬೇಕು.”
你吃那食物像吃烙的大麥餅,且用人糞在他們眼前烤。」
13 ಯೆಹೋವ ದೇವರು ಹೇಳಿದ್ದೇನೆಂದರೆ, “ಈ ರೀತಿಯಾಗಿ ಇಸ್ರಾಯೇಲಿನ ಜನರು ನಾನು ಅವರನ್ನು ಓಡಿಸುವ ಜನಾಂಗಗಳ ನಡುವೆ ಅಶುದ್ಧ ಆಹಾರವನ್ನು ತಿನ್ನುವರು.”
上主說:「以色列子民也要這樣在我趕他們所到的異民中,吃不潔之物。」
14 ಅದಕ್ಕೆ ನಾನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ನಾನು ಹೊಲಸನ್ನು ಮುಟ್ಟಿದವನಲ್ಲ, ನಾನು ಹುಟ್ಟಿದ ದಿನದಿಂದ ಇಂದಿನವರೆಗೂ ಸತ್ತ ಪಶುವಿನ ಮಾಂಸವನ್ನಾಗಲಿ, ಕಾಡುಮೃಗ ಕೊಂದ ಪಶುವಿನ ಮಾಂಸವನ್ನಾಗಲಿ ತಿಂದವನೇ ಅಲ್ಲ. ಯಾವ ಅಸಹ್ಯ ಪದಾರ್ಥವೂ ನನ್ನ ಬಾಯೊಳಗೆ ಸೇರಲಿಲ್ಲ,” ಎಂದು ಅರಿಕೆಮಾಡಿದೆ.
我答說:「哎呀! 吾主上主! 我從來沒有受過玷污;從幼年到現在,沒有吃過自然死的,或被撕裂的獸肉;不潔的祭肉從未進過我的口。」
15 ಆಗ ಅವರು ನನಗೆ, “ಇಗೋ, ಮನುಷ್ಯನ ಮಲಕ್ಕೆ ಬದಲಾಗಿ ಹಸುವಿನ ಸಗಣಿಯನ್ನು ಬಳಸಲು ನಿನಗೆ ಅನುಮತಿಸಿದ್ದೇನೆ. ಅದರಿಂದ ನೀನು ರೊಟ್ಟಿಯನ್ನು ತಯಾರಿಸಬಹುದು,” ಎಂದನು.
他向我說:「好罷! 我許你用牛糞代人糞烤你的餅。」
16 ಇದಾದ ಮೇಲೆ ಅವರು ನನಗೆ, “ಮನುಷ್ಯಪುತ್ರನೇ, ಇಗೋ, ನಾನು ಯೆರೂಸಲೇಮಿನಲ್ಲಿ ಆಹಾರ ಸರಬರಾಜನ್ನು ಮುರಿಯುವೆನು. ಅವರು ತೂಕದ ಪ್ರಕಾರ ಚಿಂತೆಯಿಂದ ರೊಟ್ಟಿಯನ್ನು ತಿನ್ನುವರು. ನೀರನ್ನು ಅಳತೆಯ ಪ್ರಕಾರ ನಿರಾಶೆಯಿಂದ ಕುಡಿಯುವರು.
他又向我說:「人子! 看,我要斷絕耶路撒冷的糧源,叫他們懷著焦慮吃配給的飯,懷著恐怖喝限制的水;
17 ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಸ್ತಬ್ಧರಾಗಿ, ಒಬ್ಬರ ಸಂಗಡ ಒಬ್ಬರು ತಮ್ಮ ಪಾಪಗಳಿಗಾಗಿ ಕ್ಷಯಿಸಿ ಹೋಗುವರು.
甚至缺少食糧和水,個個消瘦,因自己的罪惡而歸於消滅。」