< ಯೆಹೆಜ್ಕೇಲನು 39 >

1 “ಮನುಷ್ಯಪುತ್ರನೇ, ನೀನು, ಗೋಗನಿಗೆ ವಿರುದ್ಧವಾಗಿ ಪ್ರವಾದಿಸಿ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆಂದು ಹೇಳು, ರೋಷ್, ಮೆಷೆಕ್ ಮತ್ತು ತೂಬಲಿಗೆ ಮುಖ್ಯ ಪ್ರಭುವಾದ ಓ ಗೋಗನೇ, ನಿನಗೆ ನಾನು ವಿರೋಧವಾಗಿದ್ದೇನೆ.
וְאַתָּ֤ה בֶן־אָדָם֙ הִנָּבֵ֣א עַל־גֹּ֔וג וְאָ֣מַרְתָּ֔ כֹּ֥ה אָמַ֖ר אֲדֹנָ֣י יְהוִ֑ה הִנְנִ֤י אֵלֶ֙יךָ֙ גֹּ֔וג נְשִׂ֕יא רֹ֖אשׁ מֶ֥שֶׁךְ וְתֻבָֽל׃
2 ನಾನು ನಿನಗೆ ವಿರುದ್ಧವಾಗಿ ನಿನ್ನನ್ನು ತಿರುಗಿಸಿ ಮುಂದರಿಸಿ ಉತ್ತರ ದಿಕ್ಕಿನ ಕಟ್ಟಕಡೆಯಿಂದ ಬರಮಾಡಿ ಇಸ್ರಾಯೇಲಿನ ಪರ್ವತಗಳ ಮೇಲೆ ನುಗ್ಗಿಸಿ,
וְשֹׁבַבְתִּ֙יךָ֙ וְשִׁשֵּׁאתִ֔יךָ וְהַעֲלִיתִ֖יךָ מִיַּרְכְּתֵ֣י צָפֹ֑ון וַהֲבִאֹותִ֖ךָ עַל־הָרֵ֥י יִשְׂרָאֵֽל׃
3 ನಾನು ನಿನ್ನ ಎಡಗೈಯಿಂದ ನಿನ್ನ ಬಿಲ್ಲನ್ನು ಹೊಡೆಯುವೆನು ಮತ್ತು ನಿನ್ನ ಬಲಗೈಯಿಂದ ನಿನ್ನ ಬಾಣಗಳನ್ನು ಉದುರಿ ಬೀಳುವಂತೆ ಮಾಡುವೆನು.
וְהִכֵּיתִ֥י קַשְׁתְּךָ֖ מִיַּ֣ד שְׂמֹאולֶ֑ךָ וְחִצֶּ֕יךָ מִיַּ֥ד יְמִינְךָ֖ אַפִּֽיל׃
4 ನೀನೂ ನಿನ್ನ ಎಲ್ಲಾ ದಳಗಳೂ ಮತ್ತು ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳ ಮೇಲೆ ಬೀಳುವಿರಿ. ಮಾಂಸತಿನ್ನುವ ಎಲ್ಲ ತರಹದ ಪಕ್ಷಿಗಳಿಗೂ ಮತ್ತು ಕಾಡುಮೃಗಗಳಿಗೂ ಆಹಾರವಾಗುವಂತೆ ನಾನು ನಿನ್ನನ್ನು ಕೊಡುವೆನು.
עַל־הָרֵ֨י יִשְׂרָאֵ֜ל תִּפֹּ֗ול אַתָּה֙ וְכָל־אֲגַפֶּ֔יךָ וְעַמִּ֖ים אֲשֶׁ֣ר אִתָּ֑ךְ לְעֵ֨יט צִפֹּ֧ור כָּל־כָּנָ֛ף וְחַיַּ֥ת הַשָּׂדֶ֖ה נְתַתִּ֥יךָ לְאָכְלָֽה׃
5 ನೀನು ತೆರೆದ ಬಯಲಿನಲ್ಲಿ ಬೀಳುವೆ, ಏಕೆಂದರೆ ನಾನೇ ಇದನ್ನು ಹೇಳಿರುವೆನು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
עַל־פְּנֵ֥י הַשָּׂדֶ֖ה תִּפֹּ֑ול כִּ֚י אֲנִ֣י דִבַּ֔רְתִּי נְאֻ֖ם אֲדֹנָ֥י יְהוִֽה׃
6 ನಾನು ಮಾಗೋಗ್ ಮತ್ತು ಅವರೊಂದಿಗೆ ದ್ವೀಪಗಳಲ್ಲಿ ನಿರ್ಭಯವಾಗಿ ವಾಸಿಸುವವರ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ, ಅವರು ನಾನೇ ಯೆಹೋವ ದೇವರೆಂದು ತಿಳಿಯುವರು.
וְשִׁלַּחְתִּי־אֵ֣שׁ בְּמָגֹ֔וג וּבְיֹשְׁבֵ֥י הָאִיִּ֖ים לָבֶ֑טַח וְיָדְע֖וּ כִּי־אֲנִ֥י יְהוָֽה׃
7 “‘ಹೀಗೆ ನನ್ನ ಜನರಾದ ಇಸ್ರಾಯೇಲ್ ಮಧ್ಯದಲ್ಲಿ ನಾನು ನನ್ನ ಪರಿಶುದ್ಧವಾದ ಹೆಸರನ್ನು ವ್ಯಕ್ತಗೊಳಿಸುವೆನು. ಅವರು ಇನ್ನೆಂದಿಗೂ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರವಾಗದಂತೆ ಮಾಡುವೆನು. ಇಸ್ರಾಯೇಲಿನಲ್ಲಿ ಪರಿಶುದ್ಧನಾದ ಯೆಹೋವ ದೇವರು ನಾನೇ ಎಂದು ಇತರ ದೇಶದವರಿಗೆ ಗೊತ್ತಾಗುವುದು.
וְאֶת־שֵׁ֨ם קָדְשִׁ֜י אֹודִ֗יעַ בְּתֹוךְ֙ עַמִּ֣י יִשְׂרָאֵ֔ל וְלֹֽא־אַחֵ֥ל אֶת־שֵׁם־קָדְשִׁ֖י עֹ֑וד וְיָדְע֤וּ הַגֹּויִם֙ כִּי־אֲנִ֣י יְהוָ֔ה קָדֹ֖ושׁ בְּיִשְׂרָאֵֽל׃
8 ಇದು ಬಂದಿತು, ಇದು ನೆರವೇರಿತು. ನಾನು ಮುಂತಿಳಿಸಿದ ದಿನವು ಇದೇ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
הִנֵּ֤ה בָאָה֙ וְנִֽהְיָ֔תָה נְאֻ֖ם אֲדֹנָ֣י יְהוִ֑ה ה֥וּא הַיֹּ֖ום אֲשֶׁ֥ר דִּבַּֽרְתִּי׃
9 “‘ಇಸ್ರಾಯೇಲಿನ ಪಟ್ಟಣಗಳ ನಿವಾಸಿಗಳು ಬಯಲಿಗೆ ಬಂದು, ಶತ್ರುವಿನ ಆಯುಧಗಳಿಗೆ ಬೆಂಕಿಯಿಕ್ಕಿ ಸುಟ್ಟುಬಿಡುವರು, ಖೇಡ್ಯ, ಗುರಾಣಿ, ಬಿಲ್ಲು, ಬಾಣ, ದೊಣ್ಣೆ, ಈಟಿ ಇವುಗಳನ್ನು ಏಳು ವರ್ಷಗಳ ತನಕ ಸುಡುತ್ತಲೇ ಬರುವರು.
וְֽיָצְא֞וּ יֹשְׁבֵ֣י ׀ עָרֵ֣י יִשְׂרָאֵ֗ל וּבִעֲר֡וּ וְ֠הִשִּׂיקוּ בְּנֶ֨שֶׁק וּמָגֵ֤ן וְצִנָּה֙ בְּקֶ֣שֶׁת וּבְחִצִּ֔ים וּבְמַקֵּ֥ל יָ֖ד וּבְרֹ֑מַח וּבִעֲר֥וּ בָהֶ֛ם אֵ֖שׁ שֶׁ֥בַע שָׁנִֽים׃
10 ಅದಕ್ಕಾಗಿ ಅವರು ಬಯಲಿನಿಂದ ಮರಗಳನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಅರಣ್ಯಗಳಲ್ಲಿ ಯಾವುದನ್ನೂ ಕತ್ತರಿಸಿಕೊಳ್ಳುವುದೂ ಇಲ್ಲ, ಅವರು ಆಯುಧಗಳನ್ನು ಬೆಂಕಿಗೆ ಸೌದೆಯಾಗಿ ಉಪಯೋಗಿಸುವರು. ಅವರು ಸೂರೆಯಾದವುಗಳನ್ನು ಸೂರೆ ಮಾಡುವರು ಮತ್ತು ಕೊಳ್ಳೆ ಹೊಡೆದವರನ್ನು ತಾವು ಕೊಳ್ಳೆಹೊಡೆಯುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
וְלֹֽא־יִשְׂא֨וּ עֵצִ֜ים מִן־הַשָּׂדֶ֗ה וְלֹ֤א יַחְטְבוּ֙ מִן־הַיְּעָרִ֔ים כִּ֥י בַנֶּ֖שֶׁק יְבַֽעֲרוּ־אֵ֑שׁ וְשָׁלְל֣וּ אֶת־שֹׁלְלֵיהֶ֗ם וּבָֽזְזוּ֙ אֶת־בֹּ֣זְזֵיהֶ֔ם נְאֻ֖ם אֲדֹנָ֥י יְהוִֽה׃ ס
11 “‘ಆ ದಿನದಲ್ಲಿ ನಾನು ಗೋಗನಿಗೆ ಇಸ್ರಾಯೇಲಿನ ಸಮಾಧಿಗಳಲ್ಲಿ ಸ್ಥಳವನ್ನು ಕೊಡುತ್ತೇನೆ. ಸಮುದ್ರದ ಪೂರ್ವದಲ್ಲಿರುವ ಪ್ರಯಾಣಿಕರು ಹಾದುಹೋಗುವ ಕಣಿವೆಯೇ, ಆಗ ಅದು ಹಾದು ಹೋಗುವವರನ್ನು ನಿಲ್ಲಿಸುವುದು. ಅಲ್ಲಿ ಗೋಗನನ್ನೂ ಅವನ ಎಲ್ಲಾ ದಳವನ್ನು ಸಮಾಧಿಮಾಡುವರು. ಆ ಕಣಿವೆಯನ್ನು ಹಾಮೋನ್ ಗೋಗ್ ಎಂದು ಕರೆಯುವರು.
וְהָיָ֣ה בַיֹּ֣ום הַה֡וּא אֶתֵּ֣ן לְגֹוג֩ ׀ מְקֹֽום־שָׁ֨ם קֶ֜בֶר בְּיִשְׂרָאֵ֗ל גֵּ֤י הָעֹֽבְרִים֙ קִדְמַ֣ת הַיָּ֔ם וְחֹסֶ֥מֶת הִ֖יא אֶת־הָעֹֽבְרִ֑ים וְקָ֣בְרוּ שָׁ֗ם אֶת־גֹּוג֙ וְאֶת־כָּל־הֲמֹונֹ֔ה וְקָ֣רְא֔וּ גֵּ֖יא הֲמֹ֥ון גֹּֽוג׃
12 “‘ಇಸ್ರಾಯೇಲನ ಮನೆತನದವರು ದೇಶವನ್ನು ಶುದ್ಧಮಾಡುವ ಹಾಗೆ ಅವರನ್ನು ಏಳು ತಿಂಗಳುಗಳವರೆಗೂ ಸಮಾಧಿಮಾಡುವರು.
וּקְבָרוּם֙ בֵּ֣ית יִשְׂרָאֵ֔ל לְמַ֖עַן טַהֵ֣ר אֶת־הָאָ֑רֶץ שִׁבְעָ֖ה חֳדָשִֽׁים׃
13 ದೇಶದ ಎಲ್ಲಾ ಜನರು ಅವರನ್ನು ಹೂಳಿಡುವರು. ನಾನು ಮಹಿಮೆಯನ್ನು ಹೊಂದುವ ದಿನವು ಅವರಿಗೆ ಸ್ಮರಣ ದಿನವಾಗಿರುವುದು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
וְקָֽבְרוּ֙ כָּל־עַ֣ם הָאָ֔רֶץ וְהָיָ֥ה לָהֶ֖ם לְשֵׁ֑ם יֹ֚ום הִכָּ֣בְדִ֔י נְאֻ֖ם אֲדֹנָ֥י יְהוִֽה׃
14 ದೇಶವನ್ನು ಶುದ್ಧೀಕರಿಸುವ ಹಾಗೆ ಅದರ ಮೇಲೆ ಮಿಕ್ಕವರನ್ನು ಹೂಳಿಡುವುದಕ್ಕೆ ಯಾವಾಗಲೂ ದೇಶವನ್ನು ಹಾದುಹೋಗುವ ಮನುಷ್ಯರನ್ನೇ ನಿರಂತರವಾಗಿ ನೇಮಿಸುವರು. “‘ಮತ್ತು ಇವರು ಏಳು ತಿಂಗಳುಗಳಾದ ಮೇಲೆ ಹುಡುಕುವರು.
וְאַנְשֵׁ֨י תָמִ֤יד יַבְדִּ֙ילוּ֙ עֹבְרִ֣ים בָּאָ֔רֶץ מְקַבְּרִ֣ים אֶת־הָעֹבְרִ֗ים אֶת־הַנֹּותָרִ֛ים עַל־פְּנֵ֥י הָאָ֖רֶץ לְטַֽהֲרָ֑הּ מִקְצֵ֥ה שִׁבְעָֽה־חֳדָשִׁ֖ים יַחְקֹֽרוּ׃
15 ಪ್ರಯಾಣಿಕರು ಆ ದೇಶದಲ್ಲಿ ಹಾದುಹೋಗುತ್ತಿರುವಾಗ ಯಾವುದಾದರೊಂದು ಮನುಷ್ಯನ ಎಲುಬನ್ನು ಕಂಡರೆ ಅಲ್ಲಿ ಒಂದು ಗುರುತನ್ನು ಹಾಕುವರು, ಹೂಣಿಡುವವರು ಅದನ್ನು ಹಾಮೋನ್ ಗೋಗಿನ ಕಣಿವೆಯಲ್ಲಿ ಹೂಳಿಡುವ ತನಕ ಆ ಗುರುತು ಹಾಗೆಯೇ ಇರುವದು.
וְעָבְר֤וּ הָעֹֽבְרִים֙ בָּאָ֔רֶץ וְרָאָה֙ עֶ֣צֶם אָדָ֔ם וּבָנָ֥ה אֶצְלֹ֖ו צִיּ֑וּן עַ֣ד קָבְר֤וּ אֹתֹו֙ הַֽמְקַבְּרִ֔ים אֶל־גֵּ֖יא הֲמֹ֥ון גֹּֽוג׃
16 ಆ ನಗರಕ್ಕೆ ಹಾಮೋನ ಎಂದು ಹೆಸರಾಗುವದು, ಹೀಗೆ ಅವರು ದೇಶವನ್ನು ಶುದ್ಧಿಮಾಡುವರು.’
וְגַ֥ם שֶׁם־עִ֛יר הֲמֹונָ֖ה וְטִהֲר֥וּ הָאָֽרֶץ׃ ס
17 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಮನುಷ್ಯಪುತ್ರನೇ, ನೀನು ಪ್ರತಿಯೊಂದು ರೀತಿಯ ಪಕ್ಷಿಗಳಿಗೂ ಮತ್ತು ಪ್ರತಿಯೊಂದು ಕಾಡುಮೃಗಗಳಿಗೂ, ‘ಮಾತನಾಡಿ ಒಟ್ಟಾಗಿ ಬನ್ನಿರಿ. ನಾನು ನಿಮಗಾಗಿ ಅರ್ಪಿಸುವ ನನ್ನ ಯಜ್ಞಕ್ಕೋಸ್ಕರ ಪ್ರತಿಯೊಂದು ಕಡೆಯಿಂದಲೂ ಸೇರಿರಿ. ಇದು ಇಸ್ರಾಯೇಲ್ ಪರ್ವತಗಳ ಮೇಲೆ ನಡೆಯುವ ಮಹಾಯಜ್ಞವಾಗಿದೆ. ಅಲ್ಲಿ ನೀವು ಮಾಂಸವನ್ನು ತಿನ್ನಬಹುದು ಮತ್ತು ರಕ್ತವನ್ನು ಕುಡಿಯಬಹುದು.
וְאַתָּ֨ה בֶן־אָדָ֜ם כֹּֽה־אָמַ֣ר ׀ אֲדֹנָ֣י יְהֹוִ֗ה אֱמֹר֩ לְצִפֹּ֨ור כָּל־כָּנָ֜ף וּלְכֹ֣ל ׀ חַיַּ֣ת הַשָּׂדֶ֗ה הִקָּבְצ֤וּ וָבֹ֙אוּ֙ הֵאָסְפ֣וּ מִסָּבִ֔יב עַל־זִבְחִ֗י אֲשֶׁ֨ר אֲנִ֜י זֹבֵ֤חַ לָכֶם֙ זֶ֣בַח גָּדֹ֔ול עַ֖ל הָרֵ֣י יִשְׂרָאֵ֑ל וַאֲכַלְתֶּ֥ם בָּשָׂ֖ר וּשְׁתִ֥יתֶם דָּֽם׃
18 ಟಗರು, ಕುರಿಮರಿ, ಹೋತ, ಹೋರಿ ಮತ್ತು ಬಾಷಾನಿನ ಕೊಬ್ಬಿದ ಪ್ರಾಣಿಗಳಂತೆ ನೀವು ಶೂರರ ಮಾಂಸವನ್ನು ತಿನ್ನುವಿರಿ ಮತ್ತು ಭೂಮಿಯ ರಾಜಕುಮಾರರ ರಕ್ತವನ್ನು ಕುಡಿಯುವಿರಿ.
בְּשַׂ֤ר גִּבֹּורִים֙ תֹּאכֵ֔לוּ וְדַם־נְשִׂיאֵ֥י הָאָ֖רֶץ תִּשְׁתּ֑וּ אֵילִ֨ים כָּרִ֤ים וְעַתּוּדִים֙ פָּרִ֔ים מְרִיאֵ֥י בָשָׁ֖ן כֻּלָּֽם׃
19 ನಾನು ನಿಮಗೋಸ್ಕರ ಅರ್ಪಿಸಿದ ನನ್ನ ಯಜ್ಞದಲ್ಲಿ ನಿಮಗೆ ತೃಪ್ತಿಯಾಗುವವರೆಗೂ ಕೊಬ್ಬನ್ನು ತಿಂದು ಮತ್ತೇರುವವರೆಗೂ ರಕ್ತವನ್ನು ಕುಡಿಯಬಹುದು.
וַאֲכַלְתֶּם־חֵ֣לֶב לְשָׂבְעָ֔ה וּשְׁתִ֥יתֶם דָּ֖ם לְשִׁכָּרֹ֑ון מִזִּבְחִ֖י אֲשֶׁר־זָבַ֥חְתִּי לָכֶֽם׃
20 ನಾನು ಸಿದ್ಧಪಡಿಸುವ ಆ ಔತಣದಲ್ಲಿ ಕುದುರೆ ರಾಹುತ ಶೂರ ಸಕಲ ವಿಧವಾದ ಸೈನಿಕ ಇವರನ್ನು ಬೇಕಾದಷ್ಟು ಭಕ್ಷಿಸುವಿರಿ,’ ಇದು ಸಾರ್ವಭೌಮ ಯೆಹೋವ ದೇವರ ನುಡಿ.
וּשְׂבַעְתֶּ֤ם עַל־שֻׁלְחָנִי֙ ס֣וּס וָרֶ֔כֶב גִּבֹּ֖ור וְכָל־אִ֣ישׁ מִלְחָמָ֑ה נְאֻ֖ם אֲדֹנָ֥י יְהוִֽה׃
21 “ನಾನು ನನ್ನ ಮಹಿಮೆಯನ್ನು ಇತರ ಜನಾಂಗಗಳಲ್ಲಿ ಸ್ಥಾಪಿಸಲು ಎಲ್ಲಾ ಜನಾಂಗಗಳು ನಾನು ನಡೆಸಿದ ನನ್ನ ನ್ಯಾಯತೀರ್ಪನ್ನು ಮತ್ತು ಅವರ ಮೇಲೆ ಇರಿಸಿದ ನನ್ನ ಕೈಯನ್ನು ನೋಡುವುವು.
וְנָתַתִּ֥י אֶת־כְּבֹודִ֖י בַּגֹּויִ֑ם וְרָא֣וּ כָל־הַגֹּויִ֗ם אֶת־מִשְׁפָּטִי֙ אֲשֶׁ֣ר עָשִׂ֔יתִי וְאֶת־יָדִ֖י אֲשֶׁר־שַׂ֥מְתִּי בָהֶֽם׃
22 ಹೀಗೆ ಇಸ್ರಾಯೇಲನ ಮನೆತನದವರು ಯೆಹೋವ ದೇವರಾದ ನಾನೇ ಅಂದಿನಿಂದಲೂ ಇನ್ನು ಮುಂದೆಯೂ ಅವರ ದೇವರಾಗಿರುವೆನು ಎಂದು ತಿಳಿಯುವರು.
וְיָֽדְעוּ֙ בֵּ֣ית יִשְׂרָאֵ֔ל כִּ֛י אֲנִ֥י יְהוָ֖ה אֱלֹֽהֵיהֶ֑ם מִן־הַיֹּ֥ום הַה֖וּא וָהָֽלְאָה׃
23 ಇಸ್ರಾಯೇಲನ ಮನೆತನದವರು ತಮ್ಮ ಅಕ್ರಮಗಳ ನಿಮಿತ್ತವಾಗಿ ಸೆರೆಗೆ ಹೋದರೆಂದು ಇತರ ಜನಾಂಗಗಳು ತಿಳಿಯುವುವು. ಅವರು ನನಗೆ ವಿರೋಧವಾಗಿ ವಿಶ್ವಾಸದ್ರೋಹಮಾಡಿದ್ದರಿಂದ ನಾನು ಅವರಿಗೆ ನನ್ನ ಮುಖವನ್ನು ಮರೆಮಾಡಿಕೊಂಡು ಅವರನ್ನು ಅವರ ವೈರಿಗಳ ಕೈಗೆ ಒಪ್ಪಿಸಿದೆನು. ಹೀಗೆ ಅವರೆಲ್ಲರೂ ಖಡ್ಗದಿಂದ ಹತರಾದರು.
וְיָדְע֣וּ הַ֠גֹּויִם כִּ֣י בַעֲוֹנָ֞ם גָּל֣וּ בֵֽית־יִשְׂרָאֵ֗ל עַ֚ל אֲשֶׁ֣ר מָֽעֲלוּ־בִ֔י וָאַסְתִּ֥ר פָּנַ֖י מֵהֶ֑ם וָֽאֶתְּנֵם֙ בְּיַ֣ד צָרֵיהֶ֔ם וַיִּפְּל֥וּ בַחֶ֖רֶב כֻּלָּֽם׃
24 ಅವರ ಅಶುದ್ಧತ್ವದ ಪ್ರಕಾರವೂ ಅವರ ಅಕ್ರಮಗಳ ಪ್ರಕಾರವೂ ನಾನು ಅವರನ್ನು ದಂಡಿಸಿ, ನನ್ನ ಮುಖವನ್ನು ಅವರಿಂದ ಮರೆಮಾಡಿದ್ದೇನೆ.
כְּטֻמְאָתָ֥ם וּכְפִשְׁעֵיהֶ֖ם עָשִׂ֣יתִי אֹתָ֑ם וָאַסְתִּ֥ר פָּנַ֖י מֵהֶֽם׃ ס
25 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಪವಿತ್ರ ನಾಮಕ್ಕೆ ಇನ್ನು ಅಪಕೀರ್ತಿ ಬಾರದಂತೆ ನಾನು ಈಗ ಆಸಕ್ತನಾಗಿ ಯಾಕೋಬ್ಯರ ದುರಾವಸ್ಥೆಯನ್ನು ತಪ್ಪಿಸಿ, ಇಸ್ರಾಯೇಲ್ ವಂಶದವರಿಗೆಲ್ಲಾ ಕೃಪೆ ತೋರುವೆನು.
לָכֵ֗ן כֹּ֤ה אָמַר֙ אֲדֹנָ֣י יְהוִ֔ה עַתָּ֗ה אָשִׁיב֙ אֶת־שְׁבִית (שְׁב֣וּת) יַֽעֲקֹ֔ב וְרִֽחַמְתִּ֖י כָּל־בֵּ֣ית יִשְׂרָאֵ֑ל וְקִנֵּאתִ֖י לְשֵׁ֥ם קָדְשִֽׁי׃
26 ನಾನು ನನ್ನ ಜನರನ್ನು ಇತರ ಜನಾಂಗಗಳ ವಶದಿಂದ ತಪ್ಪಿಸಿ ಆ ಶತ್ರುಗಳ ದೇಶಗಳಿಂದ ಒಟ್ಟುಗೂಡಿಸಿ, ಬಹು ಜನಾಂಗಗಳ ಕಣ್ಣೆದುರಿಗೆ ಅವರ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.
וְנָשׂוּ֙ אֶת־כְּלִמָּתָ֔ם וְאֶת־כָּל־מַעֲלָ֖ם אֲשֶׁ֣ר מָעֲלוּ־בִ֑י בְּשִׁבְתָּ֧ם עַל־אַדְמָתָ֛ם לָבֶ֖טַח וְאֵ֥ין מַחֲרִֽיד׃
27 ಅನಂತರ ಅವರು ಸ್ವದೇಶದಲ್ಲಿ ಯಾರ ಭಯವೂ ಇಲ್ಲದೆ ನೆಮ್ಮದಿಯಿಂದ ವಾಸಿಸುತ್ತಿರುವಾಗ ತಾವು ನನಗೆ ಮಾಡಿದ ಎಲ್ಲಾ ದ್ರೋಹಗಳ ಹೊರೆಯನ್ನು ಹೊರುತ್ತಾ ತಮ್ಮ ನಾಚಿಕೆಯನ್ನು ಮರೆತುಬಿಡುವರು.
בְּשֹׁובְבִ֤י אֹותָם֙ מִן־הָ֣עַמִּ֔ים וְקִבַּצְתִּ֣י אֹתָ֔ם מֵֽאַרְצֹ֖ות אֹֽיְבֵיהֶ֑ם וְנִקְדַּ֣שְׁתִּי בָ֔ם לְעֵינֵ֖י הַגֹּויִ֥ם רַבִּֽים׃
28 ನಾನು ಅವರನ್ನು ಜನಾಂಗಗಳೊಳಗಿಂದ ಸೆರೆಹೋಗುವಂತೆ ಮಾಡಿ, ಆಮೇಲೆ ಅವರಲ್ಲಿ ಒಬ್ಬರನ್ನಾದರೂ ಉಳಿಸದೆ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡಿದುದರಿಂದ ನಾನೇ ಅವರ ಯೆಹೋವ ದೇವರೆಂದು ಅವರು ತಿಳಿಯುವರು.
וְיָדְע֗וּ כִּ֣י אֲנִ֤י יְהוָה֙ אֱלֹ֣הֵיהֶ֔ם בְּהַגְלֹותִ֤י אֹתָם֙ אֶל־הַגֹּויִ֔ם וְכִנַּסְתִּ֖ים עַל־אַדְמָתָ֑ם וְלֹֽא־אֹותִ֥יר עֹ֛וד מֵהֶ֖ם שָֽׁם׃
29 ನಾನು ನನ್ನ ಮುಖವನ್ನು ಎಂದಿಗೂ ಮರೆಮಾಡುವುದಿಲ್ಲ. ನಾನು ನನ್ನ ಆತ್ಮವನ್ನು ಇಸ್ರಾಯೇಲಿನ ಮನೆತನದವರ ಮೇಲೆ ಸುರಿದಿರುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
וְלֹֽא־אַסְתִּ֥יר עֹ֛וד פָּנַ֖י מֵהֶ֑ם אֲשֶׁ֨ר שָׁפַ֤כְתִּי אֶת־רוּחִי֙ עַל־בֵּ֣ית יִשְׂרָאֵ֔ל נְאֻ֖ם אֲדֹנָ֥י יְהוִֽה׃ פ

< ಯೆಹೆಜ್ಕೇಲನು 39 >