< ಯೆಹೆಜ್ಕೇಲನು 37 >

1 ಯೆಹೋವ ದೇವರ ಕೈ ನನ್ನ ಮೇಲೆ ಇತ್ತು; ಅದು ಆತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಯಲ್ಲಿ ಇಳಿಸಿತು.
دست خداوند بر من فرود آمده، مرا درروح خداوند بیرون برد و در همواری قرار داد و آن از استخوانها پر بود.۱
2 ನಾನು ಎಲುಬುಗಳ ಮಧ್ಯೆ ಆ ಕಣಿವೆಯನ್ನು ಬಳಸಿಕೊಂಡು ಬರುವಂತೆ ಮಾಡಿದನು. ತೆರೆದಿರುವ ಆ ಕಣಿವೆಯಲ್ಲಿ ಒಣಗಿ ಹೋದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು.
و مرا به هرطرف آنها گردانید. و اینک آنها بر روی همواری بی‌نهایت زیاده و بسیار خشک بود.۲
3 ಆತನು ನನಗೆ, “ನರಪುತ್ರನೇ, ಈ ಎಲುಬುಗಳು ಜೀವಿಸುವಂಥವೇ?” ಎಂದಾಗ, ನಾನು ಉತ್ತರವಾಗಿ, “ಸಾರ್ವಭೌಮ ಯೆಹೋವ ದೇವರೇ, ನೀವೇ ತಿಳಿದಿರುವಿರಿ,” ಎಂದೆನು.
و او مراگفت: «ای پسر انسان آیا می‌شود که این استخوانها زنده گردد؟» گفتم: «ای خداوند یهوه تو می‌دانی.»۳
4 ಅವರು ನನಗೆ ಹೇಳಿದ್ದೇನೆಂದರೆ, “ಈ ಎಲುಬುಗಳ ಮೇಲೆ ಪ್ರವಾದಿಸಿ, ಅವುಗಳಿಗೆ ಹೇಳು: ‘ಒಣಗಿದ ಎಲುಬುಗಳೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ,
پس مرا فرمود: «براین استخوانها نبوت نموده، به اینها بگو: ای استخوانهای خشک کلام خداوند را بشنوید!۴
5 ಸಾರ್ವಭೌಮ ಯೆಹೋವ ದೇವರು ಈ ಎಲುಬುಗಳಿಗೆ ಹೀಗೆ ಹೇಳುತ್ತಾರೆ: ಇಗೋ, ನಾನು ನಿಮ್ಮಲ್ಲಿ ಉಸಿರನ್ನು ಬರಮಾಡುತ್ತೇನೆ. ನೀವು ಬದುಕುವಿರಿ;
خداوند یهوه به این استخوانها چنین می‌گوید: اینک من روح به شمادرمی آورم تا زنده شوید.۵
6 ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ ಮಾಂಸವನ್ನು ತಂದು ಮತ್ತು ಚರ್ಮದಿಂದ ಮುಚ್ಚಿ ನಿಮ್ಮೊಳಗೆ ಉಸಿರನ್ನು ಕೊಟ್ಟು ಬದುಕಿಸುತ್ತೇನೆ ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.’”
و پیه‌ها بر شما خواهم نهاد و گوشت بر شما خواهم آورد و شما را به پوست خواهم پوشانید و در شما روح خواهم نهاد تا زنده شوید. پس خواهید دانست که من یهوه هستم.»۶
7 ಅದರಂತೆ ನಾನು ಆಜ್ಞೆಯನ್ನು ಪಡೆದ ಪ್ರಕಾರ ಪ್ರವಾದಿಸಿದೆನು. ನಾನು ಪ್ರವಾದಿಸುವಾಗ ಅಲ್ಲಿ ಒಂದು ಶಬ್ದವಾಯಿತು. ಅದು ಕದಲುತ್ತಿತ್ತು, ಎಲುಬುಗಳೆಲ್ಲಾ ಒಂದುಗೂಡಿ ಎಲುಬಿಗೆ ಎಲುಬು ಸೇರಿಕೊಂಡಿತು.
پس من چنانکه مامور شدم نبوت کردم. و چون نبوت نمودم، آوازی مسموع گردید. و اینک تزلزلی واقع شد و استخوانها به یکدیگر یعنی هر استخوانی به استخوانش نزدیک شد.۷
8 ನಾನು ನೋಡಿದಾಗ, ನರಗಳು ಮತ್ತು ಮಾಂಸವು ಅವುಗಳ ಮೇಲೆ ಬಂದವು. ಅವುಗಳ ಮೇಲೆ ಚರ್ಮವು ಮುಚ್ಚಿಕೊಂಡಿತು. ಆದರೆ ಅವುಗಳಿಗೆ ಉಸಿರೇ ಇರಲಿಲ್ಲ.
و نگریستم و اینک پیه‌ها و گوشت به آنها برآمد و پوست آنها را از بالا پوشانید. امادر آنها روح نبود.۸
9 ಆಮೇಲೆ ಆತನು ನನಗೆ ಹೇಳಿದ್ದೇನೆಂದರೆ, “ಉಸಿರಿನ ಕಡೆಗೆ ಪ್ರವಾದಿಸು, ಮನುಷ್ಯಪುತ್ರನೇ, ಆ ಉಸಿರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಓ ಉಸಿರೇ, ನಾಲ್ಕು ದಿಕ್ಕುಗಳಿಂದ ಬಂದು ಈ ಹತಶರೀರಗಳು ಬದುಕುವಂತೆ ಅದರ ಮೇಲೆ ಊದು.’”
پس او مرا گفت: «بر روح نبوت نما! ای پسر انسان بر روح نبوت کرده، بگو: خداوند یهوه چنین می‌فرماید که‌ای روح ازبادهای اربع بیا و به این کشتگان بدم تا ایشان زنده شوند.»۹
10 ನಾನು ಆತನ ಆಜ್ಞೆಯ ಹಾಗೆಯೇ ಪ್ರವಾದಿಸಿದೆನು, ಅವುಗಳಲ್ಲಿ ಉಸಿರು ಬಂತು. ಅವುಗಳಲ್ಲಿ ಪಾದದ ಮೇಲೆ ಅವುಗಳು ನಿಂತವು, ಅತ್ಯಂತ ಮಹಾಸೈನ್ಯವಾದವು.
پس چنانکه مرا امر فرمود، نبوت نمودم. وروح به آنها داخل شد و آنها زنده گشته، بر پایهای خود لشکر بی‌نهایت عظیمی ایستادند.۱۰
11 ಆಮೇಲೆ ಆತನು ನನಗೆ ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ಈ ಎಲುಬುಗಳು ಸಂಪೂರ್ಣ ಇಸ್ರಾಯೇಲ್ ಮನೆತನಗಳೇ. ಇಗೋ, ‘ನಮ್ಮ ಎಲುಬುಗಳು ಒಣಗಿಹೋದವು. ನಮ್ಮ ನಿರೀಕ್ಷೆಯು ಸಹ ಕಳೆದು ಹೋಗಿದೆ. ಸಂಪೂರ್ಣವಾಗಿ ನಾಶವಾದೆವು ಎಂದು ಅವರು ಹೇಳುವರು.’
و اومرا گفت: «ای پسر انسان این استخوانها تمامی خاندان اسرائیل می‌باشند. اینک ایشان می‌گویند: استخوانهای ما خشک شد و امید ما ضایع گردیدو خودمان منقطع گشتیم.۱۱
12 ಆದ್ದರಿಂದ ನೀನು ಪ್ರವಾದಿಸಿ ಅವರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆಯುವೆನು ಮತ್ತು ಸಮಾಧಿಗಳಿಂದ ನೀವು ಹೊರಗೆ ಬರುವಂತೆ ಮಾಡುವೆನು. ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನು ತರುವೆನು.
لهذا نبوت کرده، به ایشان بگو: خداوند یهوه چنین می‌فرماید: اینک من قبرهای شما را می‌گشایم. و شما را‌ای قوم من از قبرهای شما درآورده، به زمین اسرائیل خواهم آورد.۱۲
13 ನನ್ನ ಜನರೇ, ಯಾವಾಗ ನಾನು ನಿಮ್ಮ ಸಮಾಧಿಗಳನ್ನು ತೆರೆದು ಹೊರಗೆ ಬರಮಾಡುವೆನೋ ಆಗ ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.
و‌ای قوم من چون قبرهای شما رابگشایم و شما را از قبرهای شما بیرون آورم، آنگاه خواهید دانست که من یهوه هستم.۱۳
14 ನನ್ನ ಆತ್ಮವನ್ನು ನಿಮ್ಮೊಳಗೆ ಇಟ್ಟಾಗ ನೀವು ಬದುಕುವಿರಿ ಮತ್ತು ನಾನು ನಿಮ್ಮನ್ನು ನಿಮ್ಮ ಸ್ವಂತ ದೇಶದಲ್ಲಿರಿಸುವೆನು; ಆಗ ಯೆಹೋವ ದೇವರಾದ ನಾನೇ ಇದನ್ನು ನುಡಿದು ನೆರವೇರಿಸಿದ್ದೇನೆ ಎಂದು ನೀವು ತಿಳಿಯುವಿರಿ, ಎಂದು ಯೆಹೋವ ದೇವರು ಹೇಳುತ್ತಾರೆ.’”
وروح خود را در شما خواهم نهاد تا زنده شوید. وشما را در زمین خودتان مقیم خواهم ساخت. پس خواهید دانست که من یهوه تکلم نموده و بعمل آورده‌ام. قول خداوند این است.»۱۴
15 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
و کلام خداوند بر من نازل شده، گفت:۱۵
16 “ಮನುಷ್ಯಪುತ್ರನೇ, ನೀನು ಒಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ, ‘ಯೆಹೂದನದು ಮತ್ತು ಅವನ ಜೊತೆಗಾರರಾದ ಇಸ್ರಾಯೇಲಿನ ಮಕ್ಕಳದು,’ ಎಂದು ಬರೆದಿಡು. ಆಮೇಲೆ ಮತ್ತೊಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ, ‘ಎಫ್ರಾಯೀಮಿನ ಕೋಲು ಯೋಸೇಫನಿಗೂ ಅವನ ಜೊತೆಗಾರರಾದ ಇಸ್ರಾಯೇಲನ ಮನೆತನದವರೆಲ್ಲರಿಗೂ ಇರುವ ಕೋಲು,’ ಎಂದು ಬರೆದಿಡು.
«وتو‌ای پسر انسان یک عصا برای خود بگیر و بر آن بنویس برای یهودا و برای بنی‌اسرائیل رفقای وی. پس عصای دیگر بگیر و بر آن بنویس برای یوسف عصای افرایم و تمامی خاندان اسرائیل رفقای وی.۱۶
17 ಆ ಎರಡನ್ನು ಒಂದೇ ಕೋಲಾಗುವ ಹಾಗೆ ಜೋಡಿಸು. ಅವು ಒಂದಾಗಿ ನಿನ್ನ ಕೈಯಲ್ಲಿರುವುವು.
و آنها را برای خودت با یکدیگریک عصا ساز تا در دستت یک باشد.۱۷
18 “‘ಇದರ ಅರ್ಥವೇನೆಂದು ನೀನು ನಮಗೆ ಹೇಳುವುದಿಲ್ಲವೋ?’ ಎಂದು ನಿನ್ನ ದೇಶದ ಜನರು ನಿನ್ನನ್ನು ಪ್ರಶ್ನಿಸುವಾಗ,
و چون ابناء قومت تو را خطاب کرده، گویند: آیا ما راخبر نمی دهی که از این کارها مقصود تو چیست؟۱۸
19 ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಎಫ್ರಾಯೀಮಿನ ಕೈಯಲ್ಲಿರುವ ಯೋಸೇಫನ ಕೋಲನ್ನೂ ಅವನ ಜೊತೆಗಾರರಾದ ಇಸ್ರಾಯೇಲರ ಗೋತ್ರಗಳನ್ನೂ ತೆಗೆದುಕೊಂಡು ಅವನ ಸಂಗಡ ಅಂದರೆ ಯೆಹೂದನ ಕೋಲಿನ ಸಂಗಡ ಸೇರಿಸಿ ಅವುಗಳನ್ನು ಒಂದೇ ಕೋಲನ್ನಾಗಿ ಮಾಡುವೆನು. ಅವರು ನನ್ನ ಕೈಯಲ್ಲಿ ಒಂದಾಗುವರು,’ ಎಂದು ಹೇಳು.
آنگاه به ایشان بگو: خداوند یهوه چنین می‌فرماید: اینک من عصای یوسف را که در دست افرایم است و اسباط اسرائیل را که رفقای وی‌اند، خواهم گرفت و آنها را با وی یعنی با عصای یهودا خواهم پیوست و آنها را یک عصا خواهم ساخت و در دستم یک خواهد شد.۱۹
20 ನೀನು ಬರೆದ ಆ ಕೋಲುಗಳು ಅವರ ಕಣ್ಣುಗಳ ಮುಂದೆ ನಿನ್ನ ಕೈಯಲ್ಲಿ ಹಿಡಿದು ಅವರಿಗೆ ಹೇಳು:
پس آن عصاها که بر آنها نوشتی در دست تو در نظر ایشان باشد.۲۰
21 ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಾನು ಇಸ್ರಾಯೇಲರನ್ನು ಅವರು ಹೋಗಿರುವ ಕಡೆಯಿಂದ ಒಂದುಗೂಡಿಸಿ ಅವರ ಸ್ವಂತ ದೇಶಕ್ಕೆ ತರುವೆನು.
و به ایشان بگو: خداوند یهوه چنین می‌فرماید: اینک من بنی‌اسرائیل را از میان امت هایی که به آنها رفته‌اند گرفته، ایشان را از هرطرف جمع خواهم کرد و ایشان را به زمین خودشان خواهم آورد.۲۱
22 ನಾನು ಅವರನ್ನು ಇಸ್ರಾಯೇಲ್ ಪರ್ವತಗಳಿರುವ ದೇಶದಲ್ಲಿ ಒಂದೇ ಜನಾಂಗವನ್ನಾಗಿ ಮಾಡುತ್ತೇನೆ. ಅವರೆಲ್ಲರಿಗೂ ಒಬ್ಬನೇ ಅರಸನಾಗಿರುವನು. ಇನ್ನು ಮೇಲೆ ಅವರು ಎರಡು ಜನಾಂಗದವರಾಗಿಯೂ, ಭಿನ್ನರಾಜ್ಯದವರಾಗಿಯೂ ಇರುವುದಿಲ್ಲ.
و ایشان را در آن زمین بر کوههای اسرائیل یک امت خواهم ساخت. ویک پادشاه بر جمیع ایشان سلطنت خواهد نمودو دیگر دو امت نخواهند بود و دیگر به دومملکت تقسیم نخواهند شد.۲۲
23 ಅವರು ಇನ್ನು ತಮ್ಮ ವಿಗ್ರಹಗಳಿಂದಲೂ ತಮ್ಮ ಅಸಹ್ಯ ವಸ್ತುಗಳಿಂದಲೂ ತಮ್ಮ ಅಕ್ರಮಗಳಿಂದಲೂ ಅಶುದ್ಧವಾಗುವುದಿಲ್ಲ. ಅವರ ಎಲ್ಲಾ ಪಾಪದ ಹಿಂಜಾರುವಿಕೆಯಿಂದಲೂ ನಾನು ಅವರನ್ನು ರಕ್ಷಿಸಿ, ಅವರನ್ನು ಶುದ್ಧಮಾಡುವೆನು. ಹೀಗೆ ಅವರು ನನ್ನ ಜನರಾಗಿರುವರು ನಾನು ಅವರಿಗೆ ದೇವರಾಗಿರುವೆನು.
و خویشتن رادیگر به بتها و رجاسات و همه معصیت های خودنجس نخواهند ساخت. بلکه ایشان را از جمیع مساکن ایشان که در آنها گناه ورزیده‌اند نجات داده، ایشان را طاهر خواهم ساخت. و ایشان قوم من خواهند بود و من خدای ایشان خواهم بود.۲۳
24 “‘ನನ್ನ ಸೇವಕನಾದ ದಾವೀದನು ಅವರ ಮೇಲೆ ಅರಸನಾಗಿರುವನು. ಅವರೆಲ್ಲರಿಗೂ ಒಬ್ಬನೇ ಕುರುಬನಿರುವನು; ನನ್ನ ನ್ಯಾಯಗಳನ್ನು ಅನುಸರಿಸಿ, ನನ್ನ ನಿಯಮಗಳನ್ನು ಪಾಲಿಸುವಂತೆ ಮಾಡುವೆನು.
و بنده من داود، پادشاه ایشان خواهد بود. ویک شبان برای جمیع ایشان خواهد بود. و به احکام من سلوک نموده و فرایض مرا نگاه داشته، آنها را بجا خواهند‌آورد.۲۴
25 ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ನಿಮ್ಮ ಪಿತೃಗಳು ವಾಸಮಾಡಿದ ಆ ದೇಶದಲ್ಲಿಯೂ ಅವರೂ ಅವರ ಮಕ್ಕಳೂ ಮತ್ತು ಅವರ ಮೊಮ್ಮಕ್ಕಳೂ ಎಂದೆಂದಿಗೂ ಅಲ್ಲಿಯೇ ವಾಸಮಾಡುವರು; ನನ್ನ ಸೇವಕನಾದ ದಾವೀದನು ಎಂದೆಂದಿಗೂ ಅವರಿಗೆ ರಾಜಕುಮಾರನಾಗಿರುವನು.
و در زمینی که به بنده خود یعقوب دادم و پدران ایشان در آن ساکن می‌بودند، ساکن خواهند شد. و ایشان و پسران ایشان و پسران پسران ایشان تا به ابد در آن سکونت خواهند نمود و بنده من داود تا ابدالابادرئیس ایشان خواهد بود.۲۵
26 ಇದಾದ ಮೇಲೆ ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಇದು ಅವರೊಂದಿಗೆ ನಿತ್ಯವಾದ ಒಡಂಬಡಿಕೆಯಾಗಿರುವುದು. ನಾನು ಅವರನ್ನು ನೆಲೆಗೊಳಿಸಿ ವೃದ್ಧಿಗೊಳಿಸುವೆನು. ನನ್ನ ಪರಿಶುದ್ಧ ಸ್ಥಳವನ್ನು ಎಂದೆಂದಿಗೂ ಅವರ ಮಧ್ಯದಲ್ಲಿಡುವೆನು.
و با ایشان عهدسلامتی خواهم بست که برای ایشان عهدجاودانی خواهد بود و ایشان را مقیم ساخته، خواهم افزود و مقدس خویش را تا ابدالاباد در میان ایشان قرار خواهم داد.۲۶
27 ನನ್ನ ಗುಡಾರವು ಸಹ ಅವರೊಂದಿಗಿರುವುದು. ನಾನು ಅವರ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.
و مسکن من برایشان خواهد بود و من خدای ایشان خواهم بود وایشان قوم من خواهند بود.۲۷
28 ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಯೆಹೋವ ದೇವರಾದ ನಾನೇ ಇಸ್ರಾಯೇಲರನ್ನು ಪರಿಶುದ್ಧಗೊಳಿಸಿದೆನೆಂದು ಎಲ್ಲಾ ದೇಶದ ಜನಾಂಗಗಳು ಸಹ ತಿಳಿದುಕೊಳ್ಳುವರು.’”
پس چون مقدس من در میان ایشان تا به ابد بر قرار بوده باشد، آنگاه امت‌ها خواهند دانست که من یهوه هستم که اسرائیل را تقدیس می‌نمایم.»۲۸

< ಯೆಹೆಜ್ಕೇಲನು 37 >