< ಯೆಹೆಜ್ಕೇಲನು 31 >

1 ಹನ್ನೊಂದನೆಯ ವರ್ಷದ, ಮೂರನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
十一年三月一日,上主的話傳給我說:「
2 “ಮನುಷ್ಯಪುತ್ರನೇ, ಈಜಿಪ್ಟಿನ ಅರಸನಾದ ಫರೋಹನೊಂದಿಗೂ ಮತ್ತು ಅವನ ಸಮೂಹದೊಂದಿಗೂ ಮಾತನಾಡಿ, “‘ನೀನು ನಿನ್ನ ದೊಡ್ಡಸ್ತಿಕೆಯಲ್ಲಿ ಯಾರಿಗೆ ಸಮಾನವಾಗಿರುವೆ?
人子,你要向埃及王法郎和他的民眾說:你的偉大相似誰呢﹖
3 ಅಸ್ಸೀರಿಯವು ಲೆಬನೋನಿನ ಸುಂದರವಾದ ಕೊಂಬೆಗಳುಳ್ಳ ದೇವದಾರು ಆಗಿದೆ. ಅದರ ನೆರಳು ದಟ್ಟವಾಗಿದೆ, ಬಹಳ ಎತ್ತರವಾಗಿದೆ, ಅದರ ತುದಿಯು ದಟ್ಟವಾದ ಕೊಂಬೆಗಳ ನಡುವೆಯಿತ್ತು.
看,你是一棵黎巴嫩香柏,枝葉美觀,蔭影濃密,枝幹高大,樹梢插入雲霄。
4 ಅದನ್ನು ಜಲಪ್ರವಾಹಗಳು ಬೆಳೆಸಿದವು, ಆಳವಾದ ಬುಗ್ಗೆಗಳು ಅದನ್ನು ಎತ್ತರಕ್ಕೆ ಬೆಳೆಸಿದವು. ಅವುಗಳ ತೊರೆಗಳು ಅದರ ಬುಡದ ಸುತ್ತಲೂ ಹರಿದು ತಮ್ಮ ಕಾಲುವೆಗಳನ್ನು ಹೊಲದ ಎಲ್ಲಾ ಮರಗಳಿಗೆ ಕಳುಹಿಸಿದವು.
水使它長大,淵泉使它長高;河水由四周流入栽植它之地,支流灌溉田中其他的樹木。
5 ಆದ್ದರಿಂದ ಅದರ ಎತ್ತರವು ಬಯಲಿನ ಎಲ್ಲಾ ಮರಗಳಿಗಿಂತ ಎತ್ತರವಾಗಿತ್ತು. ಅದು ಹಬ್ಬಿದ್ದುದರಿಂದ ಮತ್ತು ಹೆಚ್ಚು ನೀರಿನ ದೆಸೆಯಿಂದ ಅದರ ಕೊಂಬೆಗಳು ಅಧಿಕವಾದವು; ಅದರ ರೆಂಬೆಗಳು ಉದ್ದವಾದವು.
為此它的枝幹高過田間的一切樹木,因為水多,生長時枝業繁茂,枝條特長。
6 ಅದರ ಕೊಂಬೆಗಳಲ್ಲಿ ಆಕಾಶದ ಎಲ್ಲಾ ಪಕ್ಷಿಗಳು ತಮ್ಮ ಗೂಡುಗಳನ್ನು ಮಾಡಿದವು. ಅದರ ರೆಂಬೆಗಳ ಕೆಳಗೆ ಬಯಲಿನ ಎಲ್ಲಾ ಮೃಗಗಳು ಮರಿಗಳಿಗೆ ಜನ್ಮ ಕೊಟ್ಟವು. ಅದರ ಕೆಳಗೆ ನೆರಳಿನಲ್ಲಿ ಎಲ್ಲಾ ಮಹಾಜನಾಂಗಗಳು ವಾಸಮಾಡಿದವು.
天上的一切飛鳥在它枝幹上築巢,田間的野獸在他的枝葉下生子,各國的人民住在它的蔭影下。
7 ಹೀಗೆ ಅದರ ತನ್ನ ದೊಡ್ಡಸ್ತಿಕೆಯಲ್ಲಿ ತನ್ನ ನೀಳವಾದ ಕೊಂಬೆಗಳಿಂದ ಸುಂದರವಾಗಿತ್ತು. ಏಕೆಂದರೆ ಅದರ ಬೇರು ಸಾಕಷ್ಟು ನೀರಿನ ಆಸರೆ ಪಡೆದಿತ್ತು.
它的枝葉廣闊,高大華麗,因為它的根深入多水之地。
8 ದೇವರ ತೋಟದ ದೇವದಾರುಗಳು ಅದನ್ನು ಮರೆಮಾಡಲಿಲ್ಲ. ತುರಾಯಿ ಮರಗಳು ಅದರ ಕೊಂಬೆಗಳಿಗೆ ಸಮವಾಗಲಿಲ್ಲ. ಆಲದ ಮರಗಳು ಅದರ ರೆಂಬೆಗಳಷ್ಟೂ ಇಲ್ಲ. ಆ ದೇವರ ತೋಟದ ಯಾವುದೇ ಮರವು ಇದರ ಸೌಂದರ್ಯಕ್ಕೆ ಸಮವಾಗಿಲ್ಲ.
天主樂園中的香柏,都不能同它相比,扁柏不及它的枝幹,楓樹不及它的枝椏,天主樂園中所有的樹木都沒有它那樣美麗。
9 ನಾನು ಅದನ್ನು ಅದರ ಕೊಂಬೆಗಳ ಸಮೂಹದಿಂದ ಸುಂದರಗೊಳಿಸಿದೆನು. ಅದರಿಂದ ದೇವರ ತೋಟದಲ್ಲಿನ ಏದೆನಿನ ಮರಗಳೆಲ್ಲಾ ಅದರ ಮೇಲೆ ಹೊಟ್ಟೆಕಿಚ್ಚು ಪಟ್ಟವು.
我使它枝葉茂盛而美麗,致令「伊甸」──天主樂園──中所有的樹木都嫉妒它。
10 “‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಅವನು ಎತ್ತರವಾಗಿ ಬೆಳೆದು ತನ್ನ ತುದಿ ಮೋಡಗಳನ್ನು ಮುಟ್ಟುವಷ್ಟು ನೀಳವಾಗಿದ್ದುದರ ಬಗ್ಗೆ ಗರ್ವಪಟ್ಟನು.
因此吾主上主這樣說:因它枝幹高大,枝梢插入雲霄,遂因自己高大而心高氣傲。
11 ಆದ್ದರಿಂದ ನಾನು ಅವನನ್ನು ಜನಾಂಗಗಳಲ್ಲಿ ಶೂರನಾದ ಒಬ್ಬನ ಕೈಗೆ ಕೊಟ್ಟಿದ್ದೇನೆ. ಇವನು ನಿಶ್ಚಯವಾಗಿ ಅದನ್ನು ದಂಡಿಸುತ್ತಾನೆ ಅದರ ದುಷ್ಟತ್ವದ ನಿಮಿತ್ತ ನಾನು ಅದನ್ನು ತಳ್ಳಿಹಾಕಿದ್ದೇನೆ.
我必將它交在列國最強的人手中,他們要任意對待它;我必要因它的罪行而將它剷除;
12 ಜನಾಂಗಗಳಲ್ಲಿ ಭಯಂಕರವಾದ ವಿದೇಶಿಯರು ಅದನ್ನು ಕಡಿದುಹಾಕುವರು. ಎಲ್ಲಾ ಬೆಟ್ಟಗಳ ಮೇಲೆಯೂ ತಗ್ಗುಗಳಲ್ಲಿಯೂ ಅದರ ಕೊಂಬೆಗಳು ಬೀಳುವುವು. ದೇಶದ ಹಳ್ಳಗಳಲ್ಲೆಲ್ಲಾ ಅದರ ರೆಂಬೆಗಳು ಮುರಿದು ಹೋಗುವುವು. ಭೂಮಿಯ ಜನಗಳೆಲ್ಲಾ ಅದರ ನೆರಳಿನಿಂದ ದೂರ ಸರಿದು ಅದನ್ನು ಬಿಟ್ಟುಬಿಡುವರು.
列國最兇殘的人必要將它伐倒,把它拋棄在山上;它的枝椏,倒臥在山谷中,枝條折落在一切窪地上;萬國的人民都要離開它的蔭影,而棄捨它;
13 ಕೆಳಗೆ ಬಿದ್ದ ಮರದ ಮೇಲೆ ಆಕಾಶದ ಪಕ್ಷಿಗಳೆಲ್ಲಾ ಕೂತುಕೊಳ್ಳುವುವು. ಎಲ್ಲಾ ಕಾಡುಮೃಗಗಳು ಅದರ ರೆಂಬೆಗಳ ಬಳಿಯಲ್ಲಿರುವುವು.
天上飛鳥都棲在它倒了的枝幹上,田間的各種野獸都停在它的枝條下,
14 ನೀರಾವರಿಯ ಯಾವ ಮರಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗುಲಿಸದೆ ಇರುವುದರಿಂದ ನೀರನ್ನು ಹೀರುತ್ತಲಿರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ಚಾಚಿಕೊಳ್ಳದೆ ಇರಲೆಂದು ಹೀಗಾಯಿತು, ಅವೆಲ್ಲಾ ಮರಣದ ಪಾಲಾಗುವುವು. ಅವುಗಳಿಗೆ ಅಧೋಲೋಕವೇ ಗತಿಯಾಗುವುದು, ಪಾತಾಳಕ್ಕೆ ಇಳಿದು ಹೋದ ಮನುಷ್ಯ ಜನ್ಮದವರ ಬಳಿಗೆ ಒಂದೇ ಗುಂಪಾಗಿ ಸೇರುವುವು.
這是為使一切有水滋潤的樹木,不要因自己的軀幹高大而自負,不要再讓枝梢插入雲霄,免得各種有水滋潤的樹木,因高聳而自大,因為他們都要歸於死亡,降到陰間,到那些已降入深淵的人子中。 (questioned)
15 “‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದು ಸಮಾಧಿಗೆ ಇಳಿದ ದಿನದಲ್ಲಿ ನಾನು ಆಳವಾದ ಬುಗ್ಗೆಗಳನ್ನು ದುಃಖದಿಂದ ಮುಚ್ಚಿದೆನು; ನಾನು ಅದರ ಪ್ರವಾಹವನ್ನು ತಡೆಹಿಡಿದೆನು. ಮಹಾಜಲವನ್ನು ನಿಲ್ಲಿಸಿದೆನು. ನಾನು ಲೆಬನೋನನ್ನು ಸಹ ಅವನಿಗೋಸ್ಕರ ಗೋಳಿಡುವಂತೆ ಮಾಡಿದೆನು. ಬಯಲಿನ ಮರಗಳೆಲ್ಲಾ ಕುಗ್ಗಿಹೋದವು. (Sheol h7585)
吾主上主這樣說:在它下到陰府的那天,我要使人哀弔它;為了它我要使深淵閉塞,使江河凝結,洪水停流,使黎巴嫩為它舉哀,使田間所有的樹木因它而枯萎。 (Sheol h7585)
16 ನಾನು ಅದನ್ನು ಕುಳಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು. ಅಧೋಲೋಕದ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವುವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿಕೊಂಡವು. (Sheol h7585)
當我使它下到陰府與已在深淵的人在一起時,也使列國因它下墜之聲而戰慄;那時「伊甸」中的各種樹木,黎巴嫩一切有水滋潤的華麗而高大的樹木,在陰間都感到安慰。 (Sheol h7585)
17 ಇದಲ್ಲದೆ, ಅದಕ್ಕೆ ತೋಳಬಲವಾಗಿ ಜನಾಂಗಗಳ ಮಧ್ಯೆ ಅದರ ನೆರಳನ್ನು ಆಶ್ರಯಿಸಿದವರು, ಅದರೊಂದಿಗೆ ಪಾತಾಳಕ್ಕಿಳಿದು, ಖಡ್ಗಹತರ ಜೊತೆಗೆ ಸೇರಿದರು. (Sheol h7585)
那些在各國住在它蔭影下幫助過它的的人,也隨它下到陰府,同那喪身刀下的人在一起。「 (Sheol h7585)
18 “‘ನೀನು ಹೀಗೆ ಘನತೆಯಿಂದಲೂ ದೊಡ್ಡಸ್ತಿಕೆಯಿಂದಲೂ ಏದೆನಿನ ಯಾವ ಮರಗಳಿಗೆ ಸಮನಾಗಿರುವೆ? ಆದರೂ ನೀನು ಏದೆನಿನ ಮರಗಳ ಸಂಗಡ ಭೂಮಿಯ ಕೆಳಭಾಗಗಳಿಗೆ ದೂಡಿದವನಾಗುವೆ. ಸುನ್ನತಿಯಿಲ್ಲದವರ ಮಧ್ಯದಲ್ಲಿ ಖಡ್ಗದಿಂದ ಹತರಾದವರ ಸಂಗಡ ಮಲಗುವೆ. “‘ಇದೇ ಫರೋಹನನೂ ಅವನ ಎಲ್ಲಾ ಜನಸಮೂಹವೂ ಆಗಿವೆ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’”
伊甸」的樹木中,就華麗和高大說,你相似那一棵﹖你也要同「伊甸」的樹木一起被推入陰間,在未受割損的人中,同喪身刀下的人臥在一起:這是指法郎和他所有的人民說的──吾主上主的斷語。」 (questioned)

< ಯೆಹೆಜ್ಕೇಲನು 31 >