< ಯೆಹೆಜ್ಕೇಲನು 30 >

1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
וַיְהִ֥י דְבַר־יְהוָ֖ה אֵלַ֥י לֵאמֹֽר׃
2 “ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “‘“ಅಯ್ಯೋ ಆ ದಿನ!” ಎಂದು, ಅಳುತ್ತಾ ಹೇಳಿರಿ.
בֶּן־אָדָ֕ם הִנָּבֵא֙ וְאָ֣מַרְתָּ֔ כֹּ֥ה אָמַ֖ר אֲדֹנָ֣י יְהוִ֑ה הֵילִ֖ילוּ הָ֥הּ לַיֹּֽום׃
3 ಏಕೆಂದರೆ ಆ ದಿನವು ಸಮೀಪವಾಯಿತು, ಯೆಹೋವ ದೇವರ ದಿನವು, ಆ ಕಾರ್ಮುಗಿಲಿನ ದಿನವು ಸಮೀಪವಾಯಿತು. ಅದೇ ಜನಾಂಗಗಳಿಗೆ ನ್ಯಾಯತೀರಿಸುವ ಕಾಲವಾಗಿರುವದು.
כִּֽי־קָרֹ֣וב יֹ֔ום וְקָרֹ֥וב יֹ֖ום לַֽיהוָ֑ה יֹ֣ום עָנָ֔ן עֵ֥ת גֹּויִ֖ם יִֽהְיֶֽה׃
4 ಖಡ್ಗವು ಈಜಿಪ್ಟಿಗೆ ವಿರುದ್ಧವಾಗಿ ಬರುವುದು. ಕೂಷ್ ಪಟ್ಟಣವು ಸಂಕಟಪಡುವುದು. ಈಜಿಪ್ಟಿನಲ್ಲಿ ಕೊಲ್ಲಲಾದವರು ಬಿದ್ದಾಗ, ಅವಳ ಸಂಪತ್ತು ಸೂರೆಯಾಗುವುದು. ಅವಳ ಅಡಿಪಾಯಗಳು ಕಿತ್ತುಹೋಗುವವು.
וּבָאָ֥ה חֶ֙רֶב֙ בְּמִצְרַ֔יִם וְהָיְתָ֤ה חַלְחָלָה֙ בְּכ֔וּשׁ בִּנְפֹ֥ל חָלָ֖ל בְּמִצְרָ֑יִם וְלָקְח֣וּ הֲמֹונָ֔הּ וְנֶהֶרְס֖וּ יְסֹודֹתֶֽיהָ׃
5 ಕೂಷ್ಯರು, ಪೂಟ್ಯರು, ಲೂದ್ಯರು, ಎಲ್ಲಾ ಅರಬ್ಬಿಯರೂ ಕೂಬ್ಯರೂ ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಅವರ ಸಂಗಡ ಖಡ್ಗದಿಂದ ಹತರಾಗುವರು.
כּ֣וּשׁ וּפ֤וּט וְלוּד֙ וְכָל־הָעֶ֣רֶב וְכ֔וּב וּבְנֵ֖י אֶ֣רֶץ הַבְּרִ֑ית אִתָּ֖ם בַּחֶ֥רֶב יִפֹּֽלוּ׃ פ
6 “‘ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ಈಜಿಪ್ಟಿನ ಸಹಾಯಕರು ಬೀಳುವರು. ಅದರ ಶಕ್ತಿಯ ಮದವು ಇಳಿದುಹೋಗುವುದು. ಅಲ್ಲಿಯ ಜನರು ಮಿಗ್ದೋಲಿನಿಂದ ಸೆವೇನೆಯ ಗೋಪುರದವರೆಗೆ ಖಡ್ಗದಿಂದ ಹತರಾಗುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
כֹּ֚ה אָמַ֣ר יְהוָ֔ה וְנָֽפְלוּ֙ סֹמְכֵ֣י מִצְרַ֔יִם וְיָרַ֖ד גְּאֹ֣ון עֻזָּ֑הּ מִמִּגְדֹּ֣ל סְוֵנֵ֗ה בַּחֶ֙רֶב֙ יִפְּלוּ־בָ֔הּ נְאֻ֖ם אֲדֹנָ֥י יְהוִֽה׃
7 ಆಗ ಅವರು ಹಾಳಾಗಿರುವ ದೇಶಗಳೊಳಗೆ ತಾವೂ ಹಾಳಾಗುವರು. ಹಾಳಾದ ಪಟ್ಟಣಗಳ ಮಧ್ಯದಲ್ಲಿ ಅದರ ಪಟ್ಟಣಗಳು ಹಾಳಾಗಿ ಇರುವುವು.
וְנָשַׁ֕מּוּ בְּתֹ֖וךְ אֲרָצֹ֣ות נְשַׁמֹּ֑ות וְעָרָ֕יו בְּתֹוךְ־עָרִ֥ים נַחֲרָבֹ֖ות תִּֽהְיֶֽינָה׃
8 ನಾನು ಈಜಿಪ್ಟಿನಲ್ಲಿ ಬೆಂಕಿಯಿಟ್ಟ ಮೇಲೆ ಅದಕ್ಕೆ ಸಹಾಯ ಮಾಡುವವರೆಲ್ಲರೂ ನಾಶವಾದ ಮೇಲೆ ಅವರಿಗೆ ನಾನೇ ಯೆಹೋವ ದೇವರೆಂದು ತಿಳಿಯುವುದು.
וְיָדְע֖וּ כִּֽי־אֲנִ֣י יְהוָ֑ה בְּתִתִּי־אֵ֣שׁ בְּמִצְרַ֔יִם וְנִשְׁבְּר֖וּ כָּל־עֹזְרֶֽיהָ׃
9 “‘ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣಮಾಡಿ ನಿಶ್ಚಿಂತರಾದ ಕೂಷ್ಯರನ್ನು ಹೆದರಿಸುವರು. ಈಜಿಪ್ಟಿನ ದಿನದಲ್ಲಿ ಆದ ಹಾಗೆ ಅವರ ಮೇಲೆ ದೊಡ್ಡ ದುಃಖ ಉಂಟಾಗುವುದು, ಏಕೆಂದರೆ ಇಗೋ, ಆ ದಿನ ಬರುವುದು ನಿಶ್ಚಯ.
בַּיֹּ֣ום הַה֗וּא יֵצְא֨וּ מַלְאָכִ֤ים מִלְּפָנַי֙ בַּצִּ֔ים לְהַחֲרִ֖יד אֶת־כּ֣וּשׁ בֶּ֑טַח וְהָיְתָ֨ה חַלְחָלָ֤ה בָהֶם֙ בְּיֹ֣ום מִצְרַ֔יִם כִּ֥י הִנֵּ֖ה בָּאָֽה׃ ס
10 “‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಈಜಿಪ್ಟಿನ ಜನಸಮೂಹವನ್ನು ಕೊನೆಗಾಣಿಸುವೆನು.
כֹּ֥ה אָמַ֖ר אֲדֹנָ֣י יְהוִ֑ה וְהִשְׁבַּתִּי֙ אֶת־הֲמֹ֣ון מִצְרַ֔יִם בְּיַ֖ד נְבוּכַדְרֶאצַּ֥ר מֶלֶךְ־בָּבֶֽל׃
11 ಆ ದೇಶವನ್ನು ನಾಶಪಡಿಸುವುದಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು. ಅವರು ಈಜಿಪ್ಟಿಗೆ ವಿರೋಧವಾಗಿ ಖಡ್ಗ ಹಿರಿದು ದೇಶವನ್ನು ಹತರಾದವರಿಂದ ತುಂಬಿಸುವರು.
ה֠וּא וְעַמֹּ֤ו אִתֹּו֙ עָרִיצֵ֣י גֹויִ֔ם מֽוּבָאִ֖ים לְשַׁחֵ֣ת הָאָ֑רֶץ וְהֵרִ֤יקוּ חַרְבֹותָם֙ עַל־מִצְרַ֔יִם וּמָלְא֥וּ אֶת־הָאָ֖רֶץ חָלָֽל׃
12 ಇದಲ್ಲದೆ ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು. ದೇಶವನ್ನೂ ಅದರಲ್ಲಿನ ಸಮಸ್ತವನ್ನೂ ವಿದೇಶಿಯರ ಕೈಯಿಂದ ನಾಶಮಾಡಿಸುವೆನು. ಯೆಹೋವ ದೇವರಾದ ನಾನೇ ಇದನ್ನು ನುಡಿದಿದ್ದೇನೆ.
וְנָתַתִּ֤י יְאֹרִים֙ חָֽרָבָ֔ה וּמָכַרְתִּ֥י אֶת־הָאָ֖רֶץ בְּיַד־רָעִ֑ים וַהֲשִׁמֹּתִ֞י אֶ֤רֶץ וּמְלֹאָהּ֙ בְּיַד־זָרִ֔ים אֲנִ֥י יְהוָ֖ה דִּבַּֽרְתִּי׃ ס
13 “‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ನಾನು ಮೂರ್ತಿಗಳನ್ನು ನಾಶಮಾಡುವೆನು. ಮತ್ತು ನೋಫಿನ ವಿಗ್ರಹಗಳನ್ನು ಕೊನೆಗೊಳಿಸುವೆನು. ಈಜಿಪ್ಟ್ ದೇಶದ ರಾಜಕುಮಾರ ಇನ್ನು ಮುಂದೆ ಇರುವುದಿಲ್ಲ, ನಾನು ಈಜಿಪ್ಟ್ ದೇಶದಲ್ಲಿ ಭಯವನ್ನು ಉಂಟುಮಾಡುವೆನು.
כֹּֽה־אָמַ֞ר אֲדֹנָ֣י יְהוִ֗ה וְהַאֲבַדְתִּ֨י גִלּוּלִ֜ים וְהִשְׁבַּתִּ֤י אֱלִילִים֙ מִנֹּ֔ף וְנָשִׂ֥יא מֵאֶֽרֶץ־מִצְרַ֖יִם לֹ֣א יִֽהְיֶה־עֹ֑וד וְנָתַתִּ֥י יִרְאָ֖ה בְּאֶ֥רֶץ מִצְרָֽיִם׃
14 ನಾನು ಪತ್ರೋಸನ್ನು ನಾಶಮಾಡಿ, ಚೋವನ್ ಪಟ್ಟಣಕ್ಕೆ ಬೆಂಕಿಯಿಡುವೆನು. ತೆಬೆಸ್ ಪಟ್ಟಣವನ್ನು ದಂಡಿಸುವೆನು.
וַהֲשִׁמֹּתִי֙ אֶת־פַּתְרֹ֔וס וְנָתַ֥תִּי אֵ֖שׁ בְּצֹ֑עַן וְעָשִׂ֥יתִי שְׁפָטִ֖ים בְּנֹֽא׃
15 ಈಜಿಪ್ಟಿಗೆ ರಕ್ಷಣೆಯ ಕೋಟೆಯಾದ ಪೆಲೂಸಿಯಮ್ ಪಟ್ಟಣದ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ತೆಬೆಸಿನ ನಿವಾಸಿಗಳನ್ನೆಲ್ಲಾ ಕಡಿದುಬಿಡುವೆನು.
וְשָׁפַכְתִּ֣י חֲמָתִ֔י עַל־סִ֖ין מָעֹ֣וז מִצְרָ֑יִם וְהִכְרַתִּ֖י אֶת־הֲמֹ֥ון נֹֽא׃
16 ನಾನು ಈಜಿಪ್ಟಿಗೆ ಕಿಚ್ಚನ್ನು ಹಚ್ಚಿಸಲು ಪೆಲೂಸಿಯಮ್ ಪ್ರಾಣಸಂಕಟ ಪಡುವುದು. ತೆಬೆಸವು ಬಿರುಗಾಳಿಯಿಂದ ತೆಗೆದುಕೊಳ್ಳಲಾಗುವುದು, ನೋಫಿನ ಮೇಲೆ ನಿರಂತರವಾಗಿ ಇಕ್ಕಟ್ಟು ಇರುವುದು.
וְנָתַ֤תִּי אֵשׁ֙ בְּמִצְרַ֔יִם ח֤וּל תָּחִיל (תָּחוּל֙) סִ֔ין וְנֹ֖א תִּהְיֶ֣ה לְהִבָּקֵ֑עַ וְנֹ֖ף צָרֵ֥י יֹומָֽם׃
17 ಓನಿನ ಮತ್ತು ಪಿಬೇಸೆತಿನ ಯೌವನಸ್ಥರು ಖಡ್ಗದಿಂದ ಸಾಯುವರು. ಈ ಪಟ್ಟಣಗಳ ನಿವಾಸಿಗಳು ತಾವಾಗಿಯೇ ಸೆರೆಯಾಗಿ ಹೋಗುವುವು.
בַּח֥וּרֵי אָ֛וֶן וּפִי־בֶ֖סֶת בַּחֶ֣רֶב יִפֹּ֑לוּ וְהֵ֖נָּה בַּשְּׁבִ֥י תֵלַֽכְנָה׃
18 ನಾನು ಈಜಿಪ್ಟಿನ ನೊಗಗಳನ್ನು ಮುರಿಯುವಾಗ ತಹಪನೇಸಿನಲ್ಲಿ ಹಗಲು ಕತ್ತಲಾಗುವುದು. ಅದರ ಶಕ್ತಿಯ ಮದವು ಅಡಗಿಹೋಗುವುದು. ಅದನ್ನು ಮೇಘವು ಮುಚ್ಚುವುದು. ಅದರ ಪುತ್ರಿಯರು ಸೆರೆಗೆ ಹೋಗುವರು.
וּבִֽתְחַפְנְחֵס֙ חָשַׂ֣ךְ הַיֹּ֔ום בְּשִׁבְרִי־שָׁם֙ אֶת־מֹטֹ֣ות מִצְרַ֔יִם וְנִשְׁבַּת־בָּ֖הּ גְּאֹ֣ון עֻזָּ֑הּ הִ֚יא עָנָ֣ן יְכַסֶּ֔נָּה וּבְנֹותֶ֖יהָ בַּשְּׁבִ֥י תֵלַֽכְנָה׃
19 ಹೀಗೆ ನಾನು ಈಜಿಪ್ಟನ್ನು ದಂಡಿಸುವೆನು. ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’”
וְעָשִׂ֥יתִי שְׁפָטִ֖ים בְּמִצְרָ֑יִם וְיָדְע֖וּ כִּֽי־אֲנִ֥י יְהוָֽה׃ פ
20 ಇದಲ್ಲದೆ ಹನ್ನೊಂದನೆಯ ವರ್ಷದ ಮೊದಲನೆಯ ತಿಂಗಳಿನ, ಏಳನೆಯ ದಿನದಲ್ಲಿ, ಯೆಹೋವ ದೇವರ ವಾಕ್ಯವು ನನಗೆ ಬಂದು ಹೇಳಿದ್ದೇನೆಂದರೆ,
וַיְהִ֗י בְּאַחַ֤ת עֶשְׂרֵה֙ שָׁנָ֔ה בָּֽרִאשֹׁ֖ון בְּשִׁבְעָ֣ה לַחֹ֑דֶשׁ הָיָ֥ה דְבַר־יְהוָ֖ה אֵלַ֥י לֵאמֹֽר׃
21 “ಮನುಷ್ಯಪುತ್ರನೇ, ನಾನು ಈಜಿಪ್ಟಿನ ಅರಸನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ. ಇಗೋ, ಆ ದೇಶವನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ. ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ ಅದನ್ನು ಬಿಗಿಸಲಿಲ್ಲ.
בֶּן־אָדָ֕ם אֶת־זְרֹ֛ועַ פַּרְעֹ֥ה מֶֽלֶךְ־מִצְרַ֖יִם שָׁבָ֑רְתִּי וְהִנֵּ֣ה לֹֽא־חֻ֠בְּשָׁה לָתֵ֨ת רְפֻאֹ֜ות לָשׂ֥וּם חִתּ֛וּל לְחָבְשָׁ֥הּ לְחָזְקָ֖הּ לִתְפֹּ֥שׂ בֶּחָֽרֶב׃ ס
22 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಈಜಿಪ್ಟ್ ದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿಯುತ್ತೇನೆ. ಅವನ ಕೈಯಿಂದ ಖಡ್ಗವನ್ನು ಬೀಳಿಸುತ್ತೇನೆ.
לָכֵ֞ן כֹּה־אָמַ֣ר ׀ אֲדֹנָ֣י יְהֹוִ֗ה הִנְנִי֙ אֶל־פַּרְעֹ֣ה מֶֽלֶךְ־מִצְרַ֔יִם וְשָֽׁבַרְתִּי֙ אֶת־זְרֹ֣עֹתָ֔יו אֶת־הַחֲזָקָ֖ה וְאֶת־הַנִּשְׁבָּ֑רֶת וְהִפַּלְתִּ֥י אֶת־הַחֶ֖רֶב מִיָּדֹֽו׃
23 ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು.
וַהֲפִצֹותִ֥י אֶת־מִצְרַ֖יִם בַּגֹּויִ֑ם וְזֵרִיתִ֖ם בָּאֲרָצֹֽות׃
24 ಬಾಬಿಲೋನಿನ ಅರಸನ ತೋಳುಗಳನ್ನು ನಾನು ಬಲಪಡಿಸುವೆನು, ಅವನ ಕೈಯಲ್ಲಿ ನನ್ನ ಖಡ್ಗವನ್ನಿಡುವೆನು. ಫರೋಹನ ತೋಳುಗಳು ಬಿದ್ದು ಹೋಗುವುವು. ಇವನು ಅವನ ಮುಂದೆ ಗಾಯ ಹೊಂದಿದವನಂತೆ ನರಳಾಡುವನು.
וְחִזַּקְתִּ֗י אֶת־זְרֹעֹות֙ מֶ֣לֶךְ בָּבֶ֔ל וְנָתַתִּ֥י אֶת־חַרְבִּ֖י בְּיָדֹ֑ו וְשָׁבַרְתִּי֙ אֶת־זְרֹעֹ֣ות פַּרְעֹ֔ה וְנָאַ֛ק נַאֲקֹ֥ות חָלָ֖ל לְפָנָֽיו׃
25 ನಾನು ಬಾಬಿಲೋನಿನ ಅರಸನ ಕೈಗಳನ್ನು ಬಲಪಡಿಸುತ್ತೇನೆ, ಆದರೆ ಫರೋಹನ ಕೈಗಳು ಬಲಹೀನವಾಗುವುವು. ನಾನು ನನ್ನ ಖಡ್ಗವನ್ನು ಬಾಬಿಲೋನಿನ ಅರಸನ ಕೈಗೆ ಕೊಡುವೆನು. ಅವನು ಅದನ್ನು ಈಜಿಪ್ಟಿನ ವಿರೋಧವಾಗಿ ಪ್ರಯೋಗಿಸುವನು. ಆಗ ಅವರು ನಾನೇ ಯೆಹೋವ ದೇವರು ಎಂದು ತಿಳಿದುಕೊಳ್ಳುವರು.
וְהַחֲזַקְתִּ֗י אֶת־זְרֹעֹות֙ מֶ֣לֶךְ בָּבֶ֔ל וּזְרֹעֹ֥ות פַּרְעֹ֖ה תִּפֹּ֑לְנָה וְֽיָדְע֞וּ כִּֽי־אֲנִ֣י יְהוָ֗ה בְּתִתִּ֤י חַרְבִּי֙ בְּיַ֣ד מֶֽלֶךְ־בָּבֶ֔ל וְנָטָ֥ה אֹותָ֖הּ אֶל־אֶ֥רֶץ מִצְרָֽיִם׃
26 ನಾನು ಈಜಿಪ್ಟಿನವರನ್ನು ಜನಾಂಗಗಳೊಗೆ ಚದುರಿಸಿ ದೇಶಗಳಲ್ಲಿ ಹರಡಿಸುತ್ತೇನೆ; ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”
וַהֲפִצֹותִ֤י אֶת־מִצְרַ֙יִם֙ בַּגֹּויִ֔ם וְזֵרִיתִ֥י אֹותָ֖ם בָּאֲרָצֹ֑ות וְיָדְע֖וּ כִּֽי־אֲנִ֥י יְהוָֽה׃ ס

< ಯೆಹೆಜ್ಕೇಲನು 30 >