< ಯೆಹೆಜ್ಕೇಲನು 28 >
1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
সদাপ্রভুর বাক্য আমার কাছে উপস্থিত হল,
2 “ಮನುಷ್ಯಪುತ್ರನೇ, ಟೈರಿನ ಆಡಳಿತ ಅಧಿಕಾರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ನೀನು ಗರ್ವದಿಂದ, “ನಾನು ಒಬ್ಬ ದೇವರು ದೇವರ ಸ್ಥಾನದಲ್ಲಿ ಸಮುದ್ರಗಳ ಮಧ್ಯದಲ್ಲಿ ಕುಳಿತುಕೊಂಡಿರುವೆನು,” ಎಂದು ಹೇಳಿಕೊಂಡಿದ್ದೀ. ಆದರೆ ನೀನು ದೇವರಲ್ಲ, ಮನುಷ್ಯನೇ, ಆದರೂ ನಿನ್ನನ್ನು ನೀನೇ ದೇವರಿಗೆ ಸಮನೆಂದು ಭಾವಿಸಿದೆ.
“হে মানবসন্তান, তুমি সোরের শাসনকর্তাকে বলো, ‘সার্বভৌম সদাপ্রভু এই কথা বলেন, “‘তোমার অন্তরের অহংকারে তুমি বলো, “আমি দেবতা; সমুদ্রের মাঝখানে আমি ঈশ্বরের সিংহাসনে বসে আছি।” কিন্তু তুমি একজন মানুষ, দেবতা নও, যদিও তুমি মনে করো যে তুমি ঈশ্বরের মতো জ্ঞানী।
3 ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆಯಾ? ನಿಮ್ಮಿಂದ ಮರೆಮಾಡಲು ಯಾವುದೇ ರಹಸ್ಯವಿಲ್ಲ.
তুমি কি দানিয়েলের থেকেও জ্ঞানী? তোমার কাছে কি কোনও গুপ্ত বিষয় লুকানো হয়নি?
4 ನಿನ್ನ ಜ್ಞಾನದಿಂದಲೂ ನಿನ್ನ ವಿವೇಕದಿಂದಲೂ ನಿನಗೆ ಐಶ್ವರ್ಯವನ್ನು ಗಳಿಸಿಕೊಂಡಿರುವೆ. ಚಿನ್ನವನ್ನೂ ಬೆಳ್ಳಿಯನ್ನೂ ನಿನ್ನ ಭಂಡಾರಗಳಲ್ಲಿ ಇಟ್ಟುಕೊಂಡಿರುವೆ.
তোমার জ্ঞান ও বুদ্ধি দিয়ে তুমি নিজের জন্য সম্পদ লাভ করেছ এবং তোমার কোষাগারে সোনা ও রুপো জমা করেছ।
5 ವ್ಯಾಪಾರದಲ್ಲಿ ನಿನ್ನ ಅಧಿಕ ಚಾತುರ್ಯದಿಂದಲೂ ನಿನ್ನ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. ನಿನ್ನ ಆಸ್ತಿಯ ನಿಮಿತ್ತ ನಿನ್ನ ಹೃದಯ ಗರ್ವಪಟ್ಟಿದೆ.
ব্যবসায়ে তোমার দারুণ দক্ষতায় তুমি তোমার সম্পদ বাড়িয়েছ, এবং তোমার সম্পদের কারণে তোমার হৃদয় অহংকারে ভরে গিয়েছে।
6 “‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ನೀನು ದೇವರಂತೆ ಬುದ್ಧಿವಂತನು ಎಂದು ಭಾವಿಸಿಕೊಂಡಿರುವೆ;
“‘এই জন্য সার্বভৌম সদাপ্রভু এই কথা বলেন “‘যেহেতু তুমি নিজেকে মনে করো, ঈশ্বরের মতো জ্ঞানী,
7 ಆದ್ದರಿಂದ ಭಯಂಕರ ಜನಾಂಗದವರಾದ ವಿದೇಶಿಯರನ್ನು ನಾನು ನಿನ್ನ ಮೇಲೆ ಬೀಳಮಾಡುವೆನು. ಅವರು ನಿನ್ನ ಸೌಂದರ್ಯ ಮತ್ತು ಜ್ಞಾನದ ವಿರುದ್ಧವಾಗಿ ಖಡ್ಗವನ್ನು ಹಿರಿಯುವರು; ನಿನ್ನ ಹೊಳೆಯುವ ವೈಭವವನ್ನು ಕೆಡಿಸುವರು.
আমি তোমার বিরুদ্ধে বিদেশিদের নিয়ে আসব, জাতিদের মধ্যে সবচেয়ে নির্মম; তারা তোমার সৌন্দর্য এবং জ্ঞানের বিরুদ্ধে তাদের তরোয়াল উঠাবে এবং তোমার উজ্জ্বল ঐশ্বর্যকে বিদ্ধ করবে।
8 ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು. ಸಮುದ್ರಗಳ ಮಧ್ಯದಲ್ಲಿ ಭಯಂಕರವಾದ ಮರಣದ ಹಾಗೆ ನೀನು ಸಾಯುವೆ.
তারা তোমাকে কুয়োতে নামাবে, এবং তুমি সমুদ্রের গভীরে এক ভয়ংকর মৃত্যু ভোগ করবে।
9 ನಿನ್ನನ್ನು ಕೊಲ್ಲಲು ಬರುವವನ ಮುಂದೆ ಇನ್ನು, “ನಾನು ದೇವರು,” ಎಂದು ಹೇಳುವೆಯೋ? ನಿನ್ನನ್ನು ಕೊಲ್ಲುವವನ ಕೈಯಲ್ಲಿ ನೀನು ದೇವರಲ್ಲ ನರಪ್ರಾಣಿಯೇ;
তোমার বধকারীদের সাক্ষাতে, তুমি কি তখন বলবে, “আমি ঈশ্বর”? যাদের হাতে তুমি বধ হয়েছ, তুমি কেবল একজন মানুষ, ঈশ্বর নও।
10 ನೀನು ವಿದೇಶಿಯರ ಕೈಯಿಂದ ಸುನ್ನತಿಹೀನರ ಮರಣಕ್ಕೆ ಗುರಿಯಾಗುವೆ. ಏಕೆಂದರೆ ನಾನೇ ಇದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳಿದ್ದಾರೆ.’”
তুমি বিদেশিদের হাতে অচ্ছিন্নত্বকের মতো মরবে। আমি বলেছি, সার্বভৌম সদাপ্রভু এই কথা বলেন।’”
11 ಯೆಹೋವ ದೇವರ ವಾಕ್ಯವು ಪುನಃ ನನಗೆ ಬಂದಿತು,
সদাপ্রভুর বাক্য আমার কাছে উপস্থিত হল,
12 “ಮನುಷ್ಯಪುತ್ರನೇ, ಟೈರಿನ ಅರಸನ ವಿಷಯದಲ್ಲಿ ಶೋಕಗೀತೆಯನ್ನೆತ್ತಿ ಅವನಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ನೀನು ಸರ್ವಸುಲಕ್ಷಣ ಶಿರೋಮಣಿ. ಸಂಪೂರ್ಣಜ್ಞಾನಿ, ಪರಿಪೂರ್ಣ ಸುಂದರವಾದ ನೀನು ಲೆಕ್ಕವನ್ನು ಮುದ್ರಿಸುತ್ತೀ.
“হে মানবসন্তান, সোরের রাজার জন্য তুমি বিলাপ করে বলো, ‘সার্বভৌম সদাপ্রভু এই কথা বলেন, “‘তুমি ছিলে নিখুঁতের মুদ্রাংক, জ্ঞানে পূর্ণ এবং সৌন্দর্যে নিখুঁত।
13 ದೇವರ ತೋಟವಾದ ಏದೆನಿನಲ್ಲಿ ನೀನಿದ್ದೆ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇಧಿಕ, ಕೆಂಪು, ಸ್ಪಟಿಕ ಚಿನ್ನ ಈ ಅಮೂಲ್ಯವಾದವುಗಳಿಂದ ಭೂಷಿತವಾಗಿದ್ದೆ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.
তুমি ঈশ্বরের বাগান এদনে ছিলে; প্রত্যেক মূল্যবান পাথরে তুমি সজ্জিত ছিলে: পোখরাজ, পীতমণি, হীরা, বৈদূর্যমণি, গোমেদ, সূর্যকান্তমণি, নীলকান্তমণি, ফিরোজা ও পান্না। তোমার অলংকার এবং কারুকার্য সোনা দিয়ে তৈরি করা হয়েছিল; তুমি যেদিন সৃষ্টি হয়েছিলে সেইদিন এগুলি তৈরি করা হয়েছিল।
14 ನೀನು ರಕ್ಷಕ ಕೆರೂಬಿಯಾಗಿ ಅಭಿಷೇಕಹೊಂದಿದೆ. ನಾನೇ ನಿನ್ನನ್ನು ನೇಮಿಸಿದ್ದೇನೆ. ನೀನು ದೇವರ ಪರಿಶುದ್ಧ ಪರ್ವತದ ಮೇಲೆ ಇದ್ದೆ; ನೀನು ಉರಿಯುತ್ತಿರುವ ಕಲ್ಲುಗಳ ನಡುವೆ ನಡೆದೆ.
রক্ষাকারী করূব হিসেবে তোমাকে অভিষেক করা হয়েছিল, কারণ সেইভাবেই আমি তোমাকে অভিষিক্ত করেছিলাম। তুমি ঈশ্বরের পবিত্র পাহাড়ে ছিলে; তুমি অগ্নিময় পাথরের মধ্যে দিয়ে হাঁটাচলা করতে।
15 ನಿನ್ನ ಸೃಷ್ಟಿಯ ದಿನದಿಂದ ನಿನ್ನಲ್ಲಿ ಅಪರಾಧವು ಸಿಕ್ಕುವ ತನಕ ನಿನ್ನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು.
তোমার সৃষ্টির দিন থেকে তোমার চালচলনে তুমি নির্দোষ ছিলে যতক্ষণ না তোমার মধ্যে মন্দতা পাওয়া গেল।
16 ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಹಿಂಸಾಚಾರವು ತುಂಬಿ ನೀನು ಪಾಪಿಯಾದೆ; ಆದ್ದರಿಂದ ನಿನ್ನನ್ನು ಅಪವಿತ್ರನೆಂದು ದೇವರ ಪರ್ವತದೊಳಗಿನಿಂದ ನಾನು ತಳ್ಳಿಬಿಟ್ಟೆನು. ಓ ರಕ್ಷಕ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು.
তোমার অনেক ব্যবসার দরুন তুমি অত্যাচারী হয়ে উঠলে এবং পাপ করলে। সেইজন্য আমি তোমাকে লজ্জিত করে ঈশ্বরের পাহাড় থেকে বের করেছিলাম, এবং হে রক্ষাকারী করূব, আমি তোমাকে অগ্নিময় পাথরের মধ্যে থেকে তাড়িয়ে দিলাম।
17 ನೀನು ನಿನ್ನ ಸೌಂದರ್ಯದ ನಿಮಿತ್ತ ಉಬ್ಬಿದ ಮನಸ್ಸುಳ್ಳವನಾದೆ. ನಿನ್ನ ಮೆರೆತದ ನಿಮಿತ್ತ ನಿನ್ನ ಬುದ್ಧಿಯನ್ನು ಕಳೆದುಕೊಂಡೆ. ಇದರಿಂದ ನಾನು ನಿನ್ನನ್ನು ನೆಲಕ್ಕೆ ದೊಬ್ಬಿ ನೀನು ಅರಸರಿಗೆ ನೋಟವಾಗಲೆಂದೆ ಅವರ ಕಣ್ಣಮುಂದೆ ಎಸೆದೆನು.
তোমার সৌন্দর্যের কারণে তোমার হৃদয় অহংকারী হয়েছিল, এবং তোমার জাঁকজমকের জন্য তোমার জ্ঞানকে দূষিত করেছিলে। এই জন্য আমি তোমাকে মাটিতে ছুঁড়ে ফেলে দিলাম; রাজাদের সামনে আমি তোমাকে রাখলাম যেন তারা তোমাকে দেখতে পায়।
18 ನಿನ್ನ ಅಪಾರವಾದ ಪಾಪಗಳಿಂದಲೂ ಅನ್ಯಾಯವಾದ ವ್ಯಾಪಾರಗಳಿಂದಲೂ ನಿನ್ನಲ್ಲಿನ ಪವಿತ್ರಾಲಯಗಳನ್ನು ಹೊಲಸುಮಾಡಿದೆ. ಆದಕಾರಣ ನಾನು ನಿನ್ನೊಳಗಿಂದ ಬೆಂಕಿಯನ್ನು ಬರಮಾಡಿದೆನು, ಅದು ನಿನ್ನನ್ನು ನುಂಗಿಬಿಟ್ಟಿತು. ನೋಡುವವರೆಲ್ಲರ ಮುಂದೆ ನಿನ್ನನ್ನು ಬೂದಿಮಾಡುವೆನು.
তোমার অনেক পাপ ও অসৎ ব্যবসা দিয়ে তুমি নিজের উপাসনার জায়গাগুলি অপবিত্র করেছ। এই জন্য আমি তোমার মধ্যে থেকে আগুন বের করলাম আর তা তোমাকে পুড়িয়ে দিল, এবং যারা দেখছিল তাদের চোখের সামনে আমি তোমাকে মাটির উপরে ছাই করে দিলাম।
19 ನಿನ್ನನ್ನು ಅರಿತ ಜನರೆಲ್ಲರೂ ನಿನ್ನ ವಿಷಯದಲ್ಲಿ ಭಯಗೊಳ್ಳುವರು. ನೀನು ಸಂಪೂರ್ಣ ಭೀತಿಗೊಳಗಾಗಿ ಇನ್ನೆಂದಿಗೂ ಇಲ್ಲದಂತಾಗುವೆ.’”
যে সমস্ত জাতি তোমাকে জানত তারা তোমার বিষয় হতভম্ব হল; তুমি ভয়ংকরভাবে শেষ হয়ে গিয়েছ আর তুমি থাকবে না।’”
20 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
সদাপ্রভুর বাক্য আমার কাছে উপস্থিত হল,
21 “ಮನುಷ್ಯಪುತ್ರನೇ, ನೀನು ಸೀದೋನಿಗೆ ಅಭಿಮುಖವಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು.
“হে মানবসন্তান, তুমি সীদোনের দিকে মুখ রাখো; তার বিরুদ্ধে ভবিষ্যদ্বাণী করো
22 ನೀನು ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ಸೀದೋನೇ ನಾನು ನಿನಗೆ ವಿರೋಧವಾಗಿದ್ದೇನೆ. ನಿನ್ನ ಮಧ್ಯದಲ್ಲಿ ಘನವನ್ನು ಹೊಂದುವೆನು. ಆಗ ನಾನು ಅದರಲ್ಲಿ ನ್ಯಾಯಗಳನ್ನು ತೀರಿಸಿ, ಪರಿಶುದ್ಧವಾಗುವಾಗ ನಾನೇ ಯೆಹೋವ ದೇವರೆಂದು ತಿಳಿಯುವರು.
এবং বলো ‘সার্বভৌম সদাপ্রভু এই কথা বলেন, “‘হে সীদোন, আমি তোমার বিপক্ষে, এবং আমি তোমার মধ্যে মহিমান্বিত হব। তাতে তোমরা জানবে যে আমিই সদাপ্রভু, যখন আমি তোমাকে শাস্তি দেব এবং তোমার মধ্যে আমার পবিত্রতা প্রকাশ করব।
23 ನಾನು ಅದರಲ್ಲಿ ವ್ಯಾಧಿಯನ್ನೂ ಅದರ ಚೌಕಗಳಲ್ಲಿ ಸಂಹಾರವನ್ನೂ ಉಂಟುಮಾಡುವೆನು, ಖಡ್ಗವು ಸುತ್ತುಮುತ್ತಲು ಅದರ ಮೇಲೆ ಬೀಸುತ್ತಿರುವಾಗ ಪ್ರಜೆಗಳು ಅದರ ನಡುವೆ ಹತರಾಗಿ ಬೀಳುವರು, ಆಗ ನಾನೇ ಯೆಹೋವ ದೇವರು ಎಂದು ಅವರಿಗೆ ತಿಳಿದುಬರುವುದು.
আমি তোমার মধ্যে মহামারি পাঠাব এবং তোমার রাস্তায় রক্ত বহাব। চারিদিক থেকে তরোয়ালের আক্রমণের ফলে, আহত লোকেরা তার মধ্যে পতিত হবে। তখন তোমরা জানবে যে আমিই সদাপ্রভু।
24 “‘ಇಸ್ರಾಯೇಲ್ ವಂಶದವರಿಗೆ ಚುಚ್ಚುವ ಮುಳ್ಳು ಇನ್ನಿರದು, ಹೀನೈಸುವ ನೆರೆಹೊರೆಯವರೆಂಬ ಮುಳ್ಳಿನ ಬಾಧೆ ಇನ್ನಾಗದು. ನಾನೇ ಸಾರ್ವಭೌಮ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.
“‘ইস্রায়েল কুলের জন্য ব্যথা দেওয়া কোনও কাঁটাগাছ এবং সূচালো কাঁটার মতো বিদ্বেষী প্রতিবেশী আর থাকবে না। তখন তারা জানবে যে আমিই সদাপ্রভু।
25 “‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಜನಾಂಗಗಳಲ್ಲಿ ಚದರಿಹೋಗಿರುವ ಇಸ್ರಾಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ದಾಸ ಯಾಕೋಬನಿಗೆ ನಾನು ಅನುಗ್ರಹಿಸಿದ ಸ್ವಂತ ನಾಡಿನಲ್ಲಿ ವಾಸಿಸುವರು.
“‘সার্বভৌম সদাপ্রভু এই কথা বলেন, বিভিন্ন জাতির মধ্যে ছড়িয়ে পড়া ইস্রায়েলীদের আমি যখন জড়ো করব, তখন জাতিদের সামনে তাদের মধ্যে আমি নিজের পবিত্রতা প্রকাশ করব। তারা নিজেদের সেই দেশে বাস করবে, যে দেশ আমি আমার দাস যাকোবকে দিয়েছিলাম।
26 ಅವರು ನಿರ್ಭಯವಾಗಿ ಅಲ್ಲಿ ವಾಸಿಸುವರು. ಮನೆಗಳನ್ನು ಕಟ್ಟುವರು; ದ್ರಾಕ್ಷಿತೋಟಗಳನ್ನು ನೆಡುವರು. ಹೌದು, ಅವರ ಸುತ್ತಲೂ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯವಾಗಿ ವಾಸಿಸುವರು, ಆಗ ಯೆಹೋವನಾದ ನಾನೇ ಅವರ ದೇವರೆಂದು ತಿಳಿಯುವರು.’”
তারা সেখানে নিরাপদে বাস করবে এবং ঘরবাড়ি বানাবে ও আঙুর ক্ষেত করবে; তাদের বিদ্বেষী প্রতিবেশী সকল জাতিদের যখন আমি শাস্তি দেব তখন তারা নিরাপদে বাস করবে। তখন তারা জানবে যে আমিই তাদের ঈশ্বর সদাপ্রভু।’”