< ಯೆಹೆಜ್ಕೇಲನು 27 >
1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
ಯೆಹೋವ ದೇವರ ವಾಕ್ಯವು ನನಗೆ ಬಂದಿತು,
2 “ಮನುಷ್ಯಪುತ್ರನೇ, ಈಗ ಟೈರಿನ ಬಗ್ಗೆ ನೀನು ಗೋಳಾಟವನ್ನೆತ್ತು;
“ಮನುಷ್ಯಪುತ್ರನೇ, ಈಗ ಟೈರಿನ ಬಗ್ಗೆ ನೀನು ಗೋಳಾಟವನ್ನೆತ್ತು;
3 ಟೈರಿಗೆ ಹೇಳು, ಸಮುದ್ರದ ಪ್ರವೇಶದಲ್ಲಿ ವಾಸಿಸುವವಳೇ, ಬಹು ದ್ವೀಪಗಳ ಜನರ ನಡುವೆ ವ್ಯಾಪಾರವನ್ನು ನಡೆಸುವವಳೇ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, “‘ಟೈರ್ ನಗರಿಯೇ, “ನಾನು ಪೂರ್ಣ ಸೌಂದರ್ಯವತಿ,” ಎಂದು ನೀನು ಅಂದುಕೊಂಡಿದ್ದೀಯಲ್ಲಾ!
ಟೈರಿಗೆ ಹೇಳು, ಸಮುದ್ರದ ಪ್ರವೇಶದಲ್ಲಿ ವಾಸಿಸುವವಳೇ, ಬಹು ದ್ವೀಪಗಳ ಜನರ ನಡುವೆ ವ್ಯಾಪಾರವನ್ನು ನಡೆಸುವವಳೇ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, “‘ಟೈರ್ ನಗರಿಯೇ, “ನಾನು ಪೂರ್ಣ ಸೌಂದರ್ಯವತಿ,” ಎಂದು ನೀನು ಅಂದುಕೊಂಡಿದ್ದೀಯಲ್ಲಾ!
4 ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ. ನಿನ್ನನ್ನು ಕಟ್ಟಿದವರು ನಿನ್ನನ್ನು ಸರ್ವಾಂಗ ಸುಂದರಿಯನ್ನಾಗಿಸಿದ್ದಾರೆ.
ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ. ನಿನ್ನನ್ನು ಕಟ್ಟಿದವರು ನಿನ್ನನ್ನು ಸರ್ವಾಂಗ ಸುಂದರಿಯನ್ನಾಗಿಸಿದ್ದಾರೆ.
5 ಸೆನೀರಿನ ತುರಾಯಿ ಮರಗಳಿಂದ ನಿನ್ನ ಹಡಗಿನ ಹಲಗೆಗಳನ್ನೆಲ್ಲಾ ಕಟ್ಟಿದ್ದಾರೆ. ನಿನಗೆ ಸ್ತಂಭಗಳನ್ನು ಮಾಡುವುದಕ್ಕೆ ಲೆಬನೋನಿನಿಂದ ದೇವದಾರುಗಳನ್ನು ತಂದಿದ್ದಾರೆ.
ಸೆನೀರಿನ ತುರಾಯಿ ಮರಗಳಿಂದ ನಿನ್ನ ಹಡಗಿನ ಹಲಗೆಗಳನ್ನೆಲ್ಲಾ ಕಟ್ಟಿದ್ದಾರೆ. ನಿನಗೆ ಸ್ತಂಭಗಳನ್ನು ಮಾಡುವುದಕ್ಕೆ ಲೆಬನೋನಿನಿಂದ ದೇವದಾರುಗಳನ್ನು ತಂದಿದ್ದಾರೆ.
6 ನಿನ್ನ ಹುಟ್ಟುಗೋಲನ್ನು ಬಾಷಾನಿನ ಅಲ್ಲೋನ್ ವೃಕ್ಷದಿಂದ ಮಾಡಿದ್ದಾರೆ, ಕಿತ್ತೀಮ್ ದ್ವೀಪಗಳಿಂದ ತಂದ ಹಲಗೆಗಳಿಂದ ನಿನ್ನ ಹಡಗಿನ ಮೇಲ್ಮಾಳಿಗೆಯನ್ನು ಕಟ್ಟಿ, ಅದನ್ನು ದಂತದಿಂದ ಶೃಂಗರಿಸಿದ್ದಾರೆ.
ನಿನ್ನ ಹುಟ್ಟುಗೋಲನ್ನು ಬಾಷಾನಿನ ಅಲ್ಲೋನ್ ವೃಕ್ಷದಿಂದ ಮಾಡಿದ್ದಾರೆ, ಕಿತ್ತೀಮ್ ದ್ವೀಪಗಳಿಂದ ತಂದ ಹಲಗೆಗಳಿಂದ ನಿನ್ನ ಹಡಗಿನ ಮೇಲ್ಮಾಳಿಗೆಯನ್ನು ಕಟ್ಟಿ, ಅದನ್ನು ದಂತದಿಂದ ಶೃಂಗರಿಸಿದ್ದಾರೆ.
7 ಈಜಿಪ್ಟಿನ ಕಸೂತಿಯ ನಾರುಮಡಿಯಿಂದ ನಿನ್ನ ಪಟವನ್ನು ಮಾಡಿದರು ಮತ್ತು ಅದು ನಿನ್ನ ಧ್ವಜವಾಗಿತ್ತು. ನಿಮ್ಮ ಮೇಲ್ಕಟ್ಟುಗಳು ಎಲೀಷ ಕರಾವಳಿಯಿಂದ ನೀಲಿ ಮತ್ತು ನೇರಳೆ ಬಣ್ಣದ್ದಾಗಿದ್ದವು.
ಈಜಿಪ್ಟಿನ ಕಸೂತಿಯ ನಾರುಮಡಿಯಿಂದ ನಿನ್ನ ಪಟವನ್ನು ಮಾಡಿದರು ಮತ್ತು ಅದು ನಿನ್ನ ಧ್ವಜವಾಗಿತ್ತು. ನಿಮ್ಮ ಮೇಲ್ಕಟ್ಟುಗಳು ಎಲೀಷ ಕರಾವಳಿಯಿಂದ ನೀಲಿ ಮತ್ತು ನೇರಳೆ ಬಣ್ಣದ್ದಾಗಿದ್ದವು.
8 ಸೀದೋನಿನ ಮತ್ತು ಅರ್ವಾದಿನ ನಿವಾಸಿಗಳು ನಿನಗೆ ಹುಟ್ಟು ಹಾಕುವವರಾಗಿದ್ದಾರೆ. ಟೈರ್ ನಗರಿಯೇ, ನಿನ್ನಲ್ಲಿನ ವಿವೇಕಿಗಳೇ ನಿನ್ನ ನಾವಿಕರು.
ಸೀದೋನಿನ ಮತ್ತು ಅರ್ವಾದಿನ ನಿವಾಸಿಗಳು ನಿನಗೆ ಹುಟ್ಟು ಹಾಕುವವರಾಗಿದ್ದಾರೆ. ಟೈರ್ ನಗರಿಯೇ, ನಿನ್ನಲ್ಲಿನ ವಿವೇಕಿಗಳೇ ನಿನ್ನ ನಾವಿಕರು.
9 ಗೆಬಾಲಿನ ಹಿರಿಯರೂ ಅದರ ಜ್ಞಾನಿಗಳೂ ನಿನ್ನ ಬಿರುಕುಗಳನ್ನು ಮುಚ್ಚುವವರಾಗಿ ನಿನ್ನಲ್ಲಿದ್ದಾರೆ. ಸಮುದ್ರದ ಸಕಲ ನಾವೆಗಳೂ ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು ನಿನಗೆ ಸರಕುಗಳನ್ನು ತಂದೊಪ್ಪಿಸುತ್ತಿದ್ದವು.
ಗೆಬಾಲಿನ ಹಿರಿಯರೂ ಅದರ ಜ್ಞಾನಿಗಳೂ ನಿನ್ನ ಬಿರುಕುಗಳನ್ನು ಮುಚ್ಚುವವರಾಗಿ ನಿನ್ನಲ್ಲಿದ್ದಾರೆ. ಸಮುದ್ರದ ಸಕಲ ನಾವೆಗಳೂ ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು ನಿನಗೆ ಸರಕುಗಳನ್ನು ತಂದೊಪ್ಪಿಸುತ್ತಿದ್ದವು.
10 “‘ಪಾರಸಿಯರೂ ಲೂದ್ಯರೂ ಹಾಗೂ ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು. ಗುರಾಣಿಯನ್ನೂ ಶಿರಸ್ತ್ರಾಣವನ್ನೂ ನಿನ್ನ ಗೋಡೆಯಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು.
“‘ಪಾರಸಿಯರೂ ಲೂದ್ಯರೂ ಹಾಗೂ ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು. ಗುರಾಣಿಯನ್ನೂ ಶಿರಸ್ತ್ರಾಣವನ್ನೂ ನಿನ್ನ ಗೋಡೆಯಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು.
11 ಅರ್ವಾದಿನವರು ಮತ್ತು ಹೆಲೆಕರು ನಿನ್ನ ದಂಡಿನ ಸಂಗಡ ನಿನ್ನ ಗೋಡೆಗಳ ಸುತ್ತಲೂ ಇದ್ದರು. ಗಮ್ಮಾದ್ಯರು ನಿನ್ನ ಗೋಪುರಗಳಲ್ಲಿ ಕಾವಲಾಗಿದ್ದರು. ತಮ್ಮ ಖೇಡ್ಯಗಳನ್ನು ಸುತ್ತಮುತ್ತಲೂ ನಿನ್ನ ಗೋಡೆಗಳ ಮೇಲೆ ನೇತುಹಾಕಿ ಇವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.
ಅರ್ವಾದಿನವರು ಮತ್ತು ಹೆಲೆಕರು ನಿನ್ನ ದಂಡಿನ ಸಂಗಡ ನಿನ್ನ ಗೋಡೆಗಳ ಸುತ್ತಲೂ ಇದ್ದರು. ಗಮ್ಮಾದ್ಯರು ನಿನ್ನ ಗೋಪುರಗಳಲ್ಲಿ ಕಾವಲಾಗಿದ್ದರು. ತಮ್ಮ ಖೇಡ್ಯಗಳನ್ನು ಸುತ್ತಮುತ್ತಲೂ ನಿನ್ನ ಗೋಡೆಗಳ ಮೇಲೆ ನೇತುಹಾಕಿ ಇವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.
12 “‘ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಆದ್ದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಹಾಗೂ ಸೀಸಗಳನ್ನು ನಿನಗೆ ಒದಗಿಸುತ್ತಿದ್ದರು.
“‘ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಆದ್ದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಹಾಗೂ ಸೀಸಗಳನ್ನು ನಿನಗೆ ಒದಗಿಸುತ್ತಿದ್ದರು.
13 “‘ಯಾವಾನ್, ತೂಬಲ್, ಮೆಷೆಕ್ ಇವರು ನಿನ್ನ ವರ್ತಕರಾಗಿದ್ದರು. ನರಪ್ರಾಣಿಗಳನ್ನೂ ಕಂಚಿನ ಪಾತ್ರೆಗಳನ್ನೂ ನಿನ್ನ ಬಜಾರಿನಲ್ಲಿ ಮಾರಾಟಕ್ಕಿಟ್ಟರು.
“‘ಯಾವಾನ್, ತೂಬಲ್, ಮೆಷೆಕ್ ಇವರು ನಿನ್ನ ವರ್ತಕರಾಗಿದ್ದರು. ನರಪ್ರಾಣಿಗಳನ್ನೂ ಕಂಚಿನ ಪಾತ್ರೆಗಳನ್ನೂ ನಿನ್ನ ಬಜಾರಿನಲ್ಲಿ ಮಾರಾಟಕ್ಕಿಟ್ಟರು.
14 “‘ತೋಗರ್ಮದ ಮನೆತನದವರು ಕುದುರೆಗಳಿಂದಲೂ ಕುದುರೆ ಸವಾರಿಗಳಿಂದಲೂ ಹೇಸರಗತ್ತೆಗಳಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.
“‘ತೋಗರ್ಮದ ಮನೆತನದವರು ಕುದುರೆಗಳಿಂದಲೂ ಕುದುರೆ ಸವಾರಿಗಳಿಂದಲೂ ಹೇಸರಗತ್ತೆಗಳಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.
15 “‘ದೆದಾನಿನವರು ನಿನ್ನ ವರ್ತಕರಾಗಿದ್ದರು; ಅನೇಕ ದ್ವೀಪಗಳು ನಿನ್ನ ಕೈಕೆಳಗೆ ವ್ಯಾಪಾರವನ್ನು ನಡೆಸಿದವು; ಅವರು ದಂತದ ಕೊಂಬುಗಳನ್ನೂ ಕರೀ ಮರಗಳನ್ನೂ ನಿನಗೆ ಕಾಣಿಕೆಯಾಗಿ ತರುತ್ತಿದ್ದರು.
“‘ದೆದಾನಿನವರು ನಿನ್ನ ವರ್ತಕರಾಗಿದ್ದರು; ಅನೇಕ ದ್ವೀಪಗಳು ನಿನ್ನ ಕೈಕೆಳಗೆ ವ್ಯಾಪಾರವನ್ನು ನಡೆಸಿದವು; ಅವರು ದಂತದ ಕೊಂಬುಗಳನ್ನೂ ಕರೀ ಮರಗಳನ್ನೂ ನಿನಗೆ ಕಾಣಿಕೆಯಾಗಿ ತರುತ್ತಿದ್ದರು.
16 “‘ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದುದರಿಂದ ಅರಾಮ್ಯರು ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಳು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.
“‘ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದುದರಿಂದ ಅರಾಮ್ಯರು ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಳು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.
17 “‘ಯೆಹೂದವೂ ಇಸ್ರಾಯೇಲ್ ದೇಶವೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ ಮಿಠಾಯಿ, ಜೇನು, ಎಣ್ಣೆ ಮತ್ತು ಸುಗಂಧ ತೈಲದಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡೆಸಿದರು.
“‘ಯೆಹೂದವೂ ಇಸ್ರಾಯೇಲ್ ದೇಶವೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ ಮಿಠಾಯಿ, ಜೇನು, ಎಣ್ಣೆ ಮತ್ತು ಸುಗಂಧ ತೈಲದಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡೆಸಿದರು.
18 “‘ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದುದರಿಂದಲೂ ಅಪರಿಮಿತವಾದ ಬಗೆಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದುದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರಮಾಡಿ, ಹೆಲ್ಬೋನಿನ ದ್ರಾಕ್ಷಾರಸವನ್ನು ಹಾಗೂ ಚಾಹರಿನ ಉಣ್ಣೆಯನ್ನು ನಿನ್ನಲ್ಲಿ ತುಂಬಿಸುತ್ತಿದ್ದರು.
“‘ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದುದರಿಂದಲೂ ಅಪರಿಮಿತವಾದ ಬಗೆಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದುದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರಮಾಡಿ, ಹೆಲ್ಬೋನಿನ ದ್ರಾಕ್ಷಾರಸವನ್ನು ಹಾಗೂ ಚಾಹರಿನ ಉಣ್ಣೆಯನ್ನು ನಿನ್ನಲ್ಲಿ ತುಂಬಿಸುತ್ತಿದ್ದರು.
19 ವೆದಾನ್ ಮತ್ತು ಯಾವಾನ್ ಊರುಗಳು ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ, ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಬಜಾರಿನಲ್ಲಿ ಇದ್ದವು.
ವೆದಾನ್ ಮತ್ತು ಯಾವಾನ್ ಊರುಗಳು ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ, ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಬಜಾರಿನಲ್ಲಿ ಇದ್ದವು.
20 “‘ದೆದಾನ್ ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು.
“‘ದೆದಾನ್ ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು.
21 “‘ಅರೇಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ಗ್ರಾಹಕರಾಗಿದ್ದರು. ಕುರಿಮರಿಗಳಿಂದಲೂ ಹೋತಗಳಿಂದಲೂ ನಿನ್ನೊಡನೆ ವ್ಯಾಪಾರಮಾಡಿದರು.
“‘ಅರೇಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ಗ್ರಾಹಕರಾಗಿದ್ದರು. ಕುರಿಮರಿಗಳಿಂದಲೂ ಹೋತಗಳಿಂದಲೂ ನಿನ್ನೊಡನೆ ವ್ಯಾಪಾರಮಾಡಿದರು.
22 “‘ಶೆಬದವರು, ರಾಮದವರು ನಿನ್ನ ಕಡೆಯ ವರ್ತಕರಾಗಿ ಎಲ್ಲಾ ಶ್ರೇಷ್ಠವಾದ ಸುಗಂಧ ದ್ರವ್ಯದಿಂದಲೂ ಎಲ್ಲಾ ಬೆಲೆಯುಳ್ಳ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.
“‘ಶೆಬದವರು, ರಾಮದವರು ನಿನ್ನ ಕಡೆಯ ವರ್ತಕರಾಗಿ ಎಲ್ಲಾ ಶ್ರೇಷ್ಠವಾದ ಸುಗಂಧ ದ್ರವ್ಯದಿಂದಲೂ ಎಲ್ಲಾ ಬೆಲೆಯುಳ್ಳ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.
23 “‘ಹಾರಾನ್, ಕನ್ನೆ, ಏದೆನ್, ಶೆಬ, ಅಸ್ಸೀರಿಯ ಮತ್ತು ಕಿಲ್ಮದ್ ನಿನ್ನ ವ್ಯಾಪಾರಿಗಳಾಗಿದ್ದರು.
“‘ಹಾರಾನ್, ಕನ್ನೆ, ಏದೆನ್, ಶೆಬ, ಅಸ್ಸೀರಿಯ ಮತ್ತು ಕಿಲ್ಮದ್ ನಿನ್ನ ವ್ಯಾಪಾರಿಗಳಾಗಿದ್ದರು.
24 ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಎಂದರೆ ಸುಂದರವಾದ ಬಟ್ಟೆಗಳು, ನೀಲಿಬಟ್ಟೆಗಳು, ಕಸೂತಿಯ ಕೆಲಸ ಮತ್ತು ಹಗ್ಗಗಳಿಂದ ಬಲವಾಗಿ ಬಿಗಿದ ಬಣ್ಣಬಣ್ಣದ ವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಕಳುಹಿಸುತ್ತಿದ್ದರು.
ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಎಂದರೆ ಸುಂದರವಾದ ಬಟ್ಟೆಗಳು, ನೀಲಿಬಟ್ಟೆಗಳು, ಕಸೂತಿಯ ಕೆಲಸ ಮತ್ತು ಹಗ್ಗಗಳಿಂದ ಬಲವಾಗಿ ಬಿಗಿದ ಬಣ್ಣಬಣ್ಣದ ವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಕಳುಹಿಸುತ್ತಿದ್ದರು.
25 “‘ತಾರ್ಷೀಷಿನ ಹಡಗುಗಳು ನಿನ್ನ ಮಾರುಕಟ್ಟೆಗೆ ಸರಕುಗಳನ್ನು ತರುತ್ತಿದ್ದವು. ಹೀಗೆ ನೀನು ತುಂಬಿದ್ದೀ ಮತ್ತು ಸಮುದ್ರಗಳ ಮಧ್ಯದಲ್ಲಿ ಬಹಳ ಘನವುಳ್ಳವಳಾದೆ.
“‘ತಾರ್ಷೀಷಿನ ಹಡಗುಗಳು ನಿನ್ನ ಮಾರುಕಟ್ಟೆಗೆ ಸರಕುಗಳನ್ನು ತರುತ್ತಿದ್ದವು. ಹೀಗೆ ನೀನು ತುಂಬಿದ್ದೀ ಮತ್ತು ಸಮುದ್ರಗಳ ಮಧ್ಯದಲ್ಲಿ ಬಹಳ ಘನವುಳ್ಳವಳಾದೆ.
26 ಹುಟ್ಟು ಹಾಕುವವರು ನಿನ್ನನ್ನು ಸಿಕ್ಕಿಸಿದ್ದಾರೆ. ಪೂರ್ವದಿಕ್ಕಿನ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ.
ಹುಟ್ಟು ಹಾಕುವವರು ನಿನ್ನನ್ನು ಸಿಕ್ಕಿಸಿದ್ದಾರೆ. ಪೂರ್ವದಿಕ್ಕಿನ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ.
27 ನಿನ್ನ ಆಸ್ತಿಪಾಸ್ತಿಗಳೂ ಸರಕುಗಳೂ ನಿನ್ನ ನಾವಿಕರೂ ನಿನ್ನ ಅಂಬಿಗರೂ ನಿನ್ನ ಒಡಕುಗಳನ್ನು ಮುಚ್ಚುವವರೂ ನಿನ್ನ ವ್ಯಾಪಾರಿಗಳೂ ನಿನ್ನಲ್ಲಿನ ಸಮಸ್ತ ಸೈನಿಕರೂ ಅಂತೂ ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶದ ದಿನದಲ್ಲಿ ಸಮುದ್ರದೊಳಗೆ ನಿನ್ನೊಂದಿಗೆ ಮುಳುಗಿ ಹೋಗುವರು.
ನಿನ್ನ ಆಸ್ತಿಪಾಸ್ತಿಗಳೂ ಸರಕುಗಳೂ ನಿನ್ನ ನಾವಿಕರೂ ನಿನ್ನ ಅಂಬಿಗರೂ ನಿನ್ನ ಒಡಕುಗಳನ್ನು ಮುಚ್ಚುವವರೂ ನಿನ್ನ ವ್ಯಾಪಾರಿಗಳೂ ನಿನ್ನಲ್ಲಿನ ಸಮಸ್ತ ಸೈನಿಕರೂ ಅಂತೂ ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶದ ದಿನದಲ್ಲಿ ಸಮುದ್ರದೊಳಗೆ ನಿನ್ನೊಂದಿಗೆ ಮುಳುಗಿ ಹೋಗುವರು.
28 ನಿನ್ನ ನಾವಿಕರ ಕೂಗಾಟಕ್ಕೆ, ಸಮುದ್ರತೀರದ ಪ್ರದೇಶಗಳು ನಡುಗುವುವು.
ನಿನ್ನ ನಾವಿಕರ ಕೂಗಾಟಕ್ಕೆ, ಸಮುದ್ರತೀರದ ಪ್ರದೇಶಗಳು ನಡುಗುವುವು.
29 ಹುಟ್ಟುಹಾಕುವ ಅಂಬಿಗರೆಲ್ಲರೂ ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು,
ಹುಟ್ಟುಹಾಕುವ ಅಂಬಿಗರೆಲ್ಲರೂ ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು,
30 ನಿನ್ನ ನಿಮಿತ್ತ ಧ್ವನಿಗೈದು ದುಃಖದಿಂದ, ತಲೆಗೆ ಧೂಳೆರಚಿಕೊಂಡು, ಬೂದಿಯಲ್ಲಿ ಹೊರಳಾಡಿ,
ನಿನ್ನ ನಿಮಿತ್ತ ಧ್ವನಿಗೈದು ದುಃಖದಿಂದ, ತಲೆಗೆ ಧೂಳೆರಚಿಕೊಂಡು, ಬೂದಿಯಲ್ಲಿ ಹೊರಳಾಡಿ,
31 ನಿನಗಾಗಿ ತಲೆ ಬೋಳಿಸಿಕೊಂಡು ಗೋಣಿಚೀಲವನ್ನು ಸುತ್ತಿಕೊಂಡು ಮನೋವ್ಯಥೆಯಿಂದ ಗೋಳಾಡಿ ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.
ನಿನಗಾಗಿ ತಲೆ ಬೋಳಿಸಿಕೊಂಡು ಗೋಣಿಚೀಲವನ್ನು ಸುತ್ತಿಕೊಂಡು ಮನೋವ್ಯಥೆಯಿಂದ ಗೋಳಾಡಿ ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.
32 ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕಗೀತೆಯನ್ನೆತ್ತಿ ಹೀಗೆ ಪ್ರಲಾಪಿಸುವರು; “ಸಮುದ್ರದ ನಡುವೆ ಹಾಳಾಗಿರುವ ಟೈರ್‌ನಂಥ ಪಟ್ಟಣ ಯಾವುದು?”
ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕಗೀತೆಯನ್ನೆತ್ತಿ ಹೀಗೆ ಪ್ರಲಾಪಿಸುವರು; “ಸಮುದ್ರದ ನಡುವೆ ಹಾಳಾಗಿರುವ ಟೈರ್‌ನಂಥ ಪಟ್ಟಣ ಯಾವುದು?”
33 ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ. ನಿನ್ನ ಅಪಾರವಾದ ಐಶ್ವರ್ಯದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದೆ.
ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ. ನಿನ್ನ ಅಪಾರವಾದ ಐಶ್ವರ್ಯದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದೆ.
34 ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಆಗಾಧಜಲದಲ್ಲಿ ಮುಳುಗಿ ಹೋದರು.
ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಆಗಾಧಜಲದಲ್ಲಿ ಮುಳುಗಿ ಹೋದರು.
35 ದ್ವೀಪದ ನಿವಾಸಿಗಳೆಲ್ಲಾ ನಿನ್ನ ಸ್ಥಿತಿಗೆ ಭಯಭೀತರಾಗಿದ್ದಾರೆ. ಅವರ ಅರಸರು ಬಹಳವಾಗಿ ಭಯಪಟ್ಟಿದ್ದಾರೆ. ರಾಜರು ನಡುಗಿ ಭೀತಿಗೊಂಡರು.
ದ್ವೀಪದ ನಿವಾಸಿಗಳೆಲ್ಲಾ ನಿನ್ನ ಸ್ಥಿತಿಗೆ ಭಯಭೀತರಾಗಿದ್ದಾರೆ. ಅವರ ಅರಸರು ಬಹಳವಾಗಿ ಭಯಪಟ್ಟಿದ್ದಾರೆ. ರಾಜರು ನಡುಗಿ ಭೀತಿಗೊಂಡರು.
36 ಜನಾಂಗಗಳ ವರ್ತಕರು ನಿನ್ನನ್ನು ನೋಡಿ ಸೀಳಿಹಾಕುತ್ತಾರೆ. ನೀನು ಸಂಪೂರ್ಣ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.’”
ಜನಾಂಗಗಳ ವರ್ತಕರು ನಿನ್ನನ್ನು ನೋಡಿ ಸೀಳಿಹಾಕುತ್ತಾರೆ. ನೀನು ಸಂಪೂರ್ಣ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.’”