< ಯೆಹೆಜ್ಕೇಲನು 12 >
1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
Then the word of the LORD came to me, saying,
2 “ಮನುಷ್ಯಪುತ್ರನೇ, ನೀನು ತಿರುಗಿಬೀಳುವ ಮನೆತನದವರ ಮಧ್ಯದಲ್ಲಿ ವಾಸಿಸುತ್ತಿರುವ, ಅವರಿಗೆ ನೋಡುವುದಕ್ಕೆ ಕಣ್ಣುಗಳುಂಟು, ಆದರೆ ನೋಡುವುದಿಲ್ಲ; ಕೇಳುವುದಕ್ಕೆ ಕಿವಿಗಳುಂಟು, ಕೇಳುವುದಿಲ್ಲ. ಅವರು ತಿರುಗಿಬೀಳುವ ಮನೆತನದವರು.
“Son of man, you are living in a rebellious house. They have eyes to see but do not see, and ears to hear but do not hear, for they are a rebellious house.
3 “ಆದ್ದರಿಂದ ಮನುಷ್ಯಪುತ್ರನೇ, ನೀನು ಸಲಕರಣೆಗಳನ್ನು ಸಿದ್ಧಮಾಡಿ, ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿಹೋಗು, ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು. ಅವರು ದ್ರೋಹಿಗಳಾದವರ ಮನೆತನದವರಾದರೂ, ಒಂದು ವೇಳೆ ಅರ್ಥಮಾಡಿಕೊಳ್ಳಬಹುದು.
Therefore, son of man, pack your bags for exile. In broad daylight, set out from your place and go to another as they watch. Perhaps they will understand, though they are a rebellious house.
4 ನಿನ್ನ ಸಲಕರಣೆಗಳನ್ನು ತೆಗೆದುಕೊಂಡು ಹೋಗಲು ಅವುಗಳನ್ನು ಹಗಲಿನಲ್ಲಿ ಅವರ ಕಣ್ಣುಗಳ ಮುಂದೆ ಹೊರಗೆ ತರಬೇಕು. ಸಂಜೆಯಲ್ಲಿ ಸೆರೆಗೆ ಹೋಗುವವರ ಹಾಗೆ
Bring out your baggage for exile by day, as they watch. Then in the evening, as they watch, go out like those who go into exile.
5 ನೀನು ಅವರ ಕಣ್ಣುಗಳ ಮುಂದೆಯೇ ಗೋಡೆಯನ್ನು ಕೊರೆದು, ಅಲ್ಲಿಂದ ನಿನ್ನ ಸಲಕರಣೆಗಳನ್ನು ಹೊತ್ತುಕೊಂಡು ಹೊರಗೆ ಹೊರಟು ಹೋಗು.
As they watch, dig through the wall and carry your belongings out through it.
6 ಅವರ ಕಣ್ಣುಗಳ ಮುಂದೆ ಸಲಕರಣೆಗಳನ್ನು ಹೆಗಲಿನ ಮೇಲೆ ಹೊತ್ತುಕೊಂಡು ಮುಸ್ಸಂಜೆಯಲ್ಲಿ ಹೋಗಬೇಕು; ನೆಲವನ್ನು ನೋಡದ ಹಾಗೆ ನಿನ್ನ ಮುಖವನ್ನು ಮುಚ್ಚಿಕೊಳ್ಳಬೇಕು. ನಾನು ನಿನ್ನನ್ನು ಇಸ್ರಾಯೇಲಿನ ಮನೆತನದಲ್ಲಿರುವವರಿಗೆ ಗುರುತನ್ನಾಗಿ ಇಟ್ಟಿದ್ದೇನೆ.”
And as they watch, lift your bags to your shoulder and take them out at dusk; cover your face so that you cannot see the land. For I have made you a sign to the house of Israel.”
7 ನಾನು ಆಜ್ಞೆಯನ್ನು ಹೊಂದಿದ ಪ್ರಕಾರ ಮಾಡಿದೆನು. ನನ್ನ ಸರಕುಗಳನ್ನು ಹಗಲಿನಲ್ಲಿಯೇ ಹೊರಗೆ ತಂದೆನು. ಸಂಜೆಯಲ್ಲಿ ನನ್ನ ಕೈಯಿಂದಲೇ ಗೋಡೆಯನ್ನು ಕೊರೆದೆನು. ಅದನ್ನು ನಾನು ಮುಸ್ಸಂಜೆಯಲ್ಲಿ ಹೊರಗೆ ತಂದು, ಅವರ ಕಣ್ಣುಗಳ ಮುಂದೆ ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದೆನು.
So I did as I was commanded. I brought out my bags for exile by day, and in the evening I dug through the wall by hand. I took my belongings out at dusk, carrying them on my shoulder as they watched.
8 ಬೆಳಗಿನ ಜಾವದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
And in the morning the word of the LORD came to me, saying,
9 “ಮನುಷ್ಯಪುತ್ರನೇ, ದ್ರೋಹಿ ವಂಶದವರಾದ ಇಸ್ರಾಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೇ?
“Son of man, hasn’t the rebellious house of Israel asked you, ‘What are you doing?’
10 “ಅವರಿಗೆ ನೀನು ಹೀಗೆ ಹೇಳಬೇಕೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ: ಈ ಪ್ರವಾದನೆಯು ಯೆರೂಸಲೇಮಿನಲ್ಲಿರುವ ಪ್ರಭುವನ್ನೂ, ಅದರಲ್ಲಿರುವ ಸಮಸ್ತ ಇಸ್ರಾಯೇಲಿನ ಮನೆತನದವರನ್ನೂ ಕುರಿತದ್ದಾಗಿದೆ.
Tell them that this is what the Lord GOD says: ‘This burden concerns the prince in Jerusalem and all the house of Israel who are there.’
11 ಅವರಿಗೆ ಹೀಗೆ ಹೇಳು, ‘ನಾನು ನಿಮಗೆ ಗುರುತಾಗಿದ್ದೇನೆ.’ “ನಾನು ಮಾಡಿದ ಹಾಗೆ ಅವರಿಗೆ ಮಾಡಲಾಗುವುದು. ಅವರು ಗುಲಾಮರಾಗಿ ಸೆರೆಗೆ ಹೋಗುವರು.
You are to say, ‘I am a sign to you.’ Just as it happened here, so will it be done to them; they will go into exile as captives.
12 “ಅವರ ಮಧ್ಯದಲ್ಲಿರುವ ರಾಜಪುತ್ರನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಮುಸ್ಸಂಜೆಯಲ್ಲಿ ಹೊರಟು ಹೋಗುವನು. ಅವರು ಗೋಡೆಯನ್ನು ಕೊರೆದು, ಆ ಕಿಂಡಿಯ ಮೂಲಕ ತಮ್ಮ ಸಲಕರಣೆಗಳನ್ನು ಹೊರಗೆ ಸಾಗಿಸುವರು. ಅವನು ತನ್ನ ಕಣ್ಣುಗಳಿಂದ ನೆಲವನ್ನು ನೋಡದ ಹಾಗೆ ಮುಖವನ್ನು ಮುಚ್ಚಿಕೊಳ್ಳುವನು.
And at dusk the prince among them will lift his bags to his shoulder and go out. They will dig through the wall to bring him out. He will cover his face so he cannot see the land.
13 ನನ್ನ ಬಲೆಯನ್ನೂ ಸಹ ನಾನು ಅವನ ಮೇಲೆ ಹರಡುವೆನು. ಅವನು ನನ್ನ ಉರುಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಕಸ್ದೀಯರ ನಾಡಾದ ಬಾಬಿಲೋನಿಗೆ ಒಯ್ಯುವೆನು. ಆದರೆ ಅವನು ಅದನ್ನು ನೋಡದೆ ಅಲ್ಲಿಯೇ ಸಾಯುವನು.
But I will spread My net over him, and he will be caught in My snare. I will bring him to Babylon, the land of the Chaldeans; yet he will not see it, and there he will die.
14 ಅವನ ಸುತ್ತಲೂ ಅವನಿಗೆ ಸಹಾಯ ಮಾಡುವವರೆಲ್ಲರನ್ನೂ, ಅವನ ಎಲ್ಲಾ ಸೈನ್ಯಗಳನ್ನೂ, ಎಲ್ಲಾ ದಿಕ್ಕುಗಳಿಗೆ ಚದರಿಸಿ, ಅವರ ಹಿಂದೆ ಖಡ್ಗವನ್ನು ಬೀಸುವೆನು.
And I will scatter to every wind all the attendants around him and all his troops, and I will draw a sword to chase after them.
15 “ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿ, ದೇಶಗಳ ಮೇಲೆ ಚೆಲ್ಲಾಪಿಲ್ಲಿಮಾಡುವಾಗ, ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವರು.
And they will know that I am the LORD, when I disperse them among the nations and scatter them throughout the countries.
16 ಆದರೆ ಅವರು ಎಲ್ಲಿ ಹೋಗುವರೋ, ಆ ಜನಾಂಗಗಳೊಳಗೆ ಅವರ ಹೇಯ ಕಾರ್ಯಗಳನ್ನು ಇವರು ತಿಳಿದುಕೊಳ್ಳುವಂತೆ ಅವರಲ್ಲಿ ಕೆಲವರನ್ನು ಖಡ್ಗದಿಂದಲೂ ಬರಗಾಲದಿಂದಲೂ ವ್ಯಾಧಿಯಿಂದಲೂ ಉಳಿಸುವೆನು. ಆಗ ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವರು.”
But I will spare a few of them from sword and famine and plague, so that in the nations to which they go, they can recount all their abominations. Then they will know that I am the LORD.”
17 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
Moreover, the word of the LORD came to me, saying,
18 “ಮನುಷ್ಯಪುತ್ರನೇ, ಆಹಾರವನ್ನು ನಡುಗುತ್ತಾ ಊಟಮಾಡು ಮತ್ತು ನೀರನ್ನು ನಡುಗುವಿಕೆಯಿಂದಲೂ, ಎಚ್ಚರಿಕೆಯಿಂದಲೂ ಕುಡಿ.
“Son of man, eat your bread with trembling, and drink your water with quivering and anxiety.
19 ನಿನ್ನ ದೇಶದ ಜನರಿಗೆ ಹೀಗೆ ಹೇಳು, ‘ಯೆರೂಸಲೇಮಿನ ನಿವಾಸಿಗಳಿಗೆ ಮತ್ತು ಇಸ್ರಾಯೇಲರ ದೇಶಕ್ಕೆ ಸಾರ್ವಭೌಮ ಯೆಹೋವ ದೇವರು ಹೇಳಿದ್ದೇನೆಂದರೆ, ಅವರು ತಮ್ಮ ರೊಟ್ಟಿಯನ್ನು ಎಚ್ಚರಿಕೆಯಿಂದಲೇ ತಿನ್ನುವರು, ನೀರನ್ನು ಅಂಜಿಕೆಯಿಂದಲೇ ಕುಡಿಯುವರು. ಅದರಲ್ಲಿ ವಾಸವಾಗಿರುವವರೆಲ್ಲರ ಹಿಂಸಾಚಾರದಿಂದ ಅವರ ದೇಶವು ಸೊತ್ತನ್ನೆಲ್ಲಾ ಕಳೆದುಕೊಂಡು ಹಾಳಾಗುವುದು.
Then tell the people of the land that this is what the Lord GOD says about those living in Jerusalem and in the land of Israel: ‘They will eat their bread with anxiety and drink their water in dread, for their land will be stripped of everything in it because of the violence of all who dwell in it.
20 ನಿವಾಸಿಗಳುಳ್ಳ ಪಟ್ಟಣಗಳು ಹಾಳಾಗುವುವು. ದೇಶವು ನಿರ್ಜನವಾಗುವುದು. ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.’”
The inhabited cities will be laid waste, and the land will become desolate. Then you will know that I am the LORD.’”
21 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
Again the word of the LORD came to me, saying,
22 “ಮನುಷ್ಯಪುತ್ರನೇ, ‘ದಿನಗಳು ಬಹಳವಾಗುತ್ತಿವೆ. ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂದು ಇಸ್ರಾಯೇಲ್ ದೇಶದಲ್ಲಿ ಹೇಳಿಕೊಳ್ಳುವ ಈ ಗಾದೆ ಏನು’?
“Son of man, what is this proverb that you have in the land of Israel: ‘The days go by, and every vision fails’?
23 ಆದ್ದರಿಂದ ಅವರಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನಾನು ಈ ಗಾದೆಯನ್ನು ನಿಲ್ಲಿಸುತ್ತೇನೆ. ಅದನ್ನು ಇನ್ನು ಮೇಲೆ ಇಸ್ರಾಯೇಲಿನಲ್ಲಿ ಗಾದೆಯಂತೆ ಉಪಯೋಗಿಸುವುದಿಲ್ಲ. ದಿನಗಳು ಹತ್ತಿರವಾಗಿವೆ. ಪ್ರತಿದರ್ಶನವು ನೆರವೇರಲಿದೆ’ ಎಂದು ಅವರಿಗೆ ಹೇಳು.
Therefore tell them that this is what the Lord GOD says: ‘I will put an end to this proverb, and in Israel they will no longer recite it.’ But say to them: ‘The days are at hand when every vision will be fulfilled.
24 ‘ಇಸ್ರಾಯೇಲಿನ ಮನೆತನದವರೊಳಗೆ ಇನ್ನು ಮೇಲೆ ಯಾವ ಸುಳ್ಳು ದರ್ಶನವೂ, ಮೋಸದ ಶಕುನವೂ ಇರುವುದಿಲ್ಲ.
For there will be no more false visions or flattering divinations within the house of Israel,
25 ನಾನೇ ಯೆಹೋವ ದೇವರು, ನಾನೇ ಮಾತನಾಡುತ್ತೇನೆ. ನಾನು ಆಡುವ ಮಾತು ನೆರವೇರುವುದು; ಅದು ಇನ್ನು ನಿಧಾನವಾಗುವುದಿಲ್ಲ. ದ್ರೋಹಿಗಳಾದ ಮನೆತನದವರೇ, ನಿಮ್ಮ ದಿವಸಗಳಲ್ಲಿ ನಾನು ನುಡಿದದ್ದನ್ನು ನಡೆಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’”
because I, the LORD, will speak whatever word I speak, and it will be fulfilled without delay. For in your days, O rebellious house, I will speak a message and bring it to pass, declares the Lord GOD.’”
26 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
Furthermore, the word of the LORD came to me, saying,
27 “ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು, ‘ಇವನಿಗಾದ ದರ್ಶನವು ಬಹುದೂರ ಕಾಲಕ್ಕೆ ಸಂಬಂಧಿಸಿದ್ದು, ದೂರ ಕಾಲವನ್ನು ಕುರಿತು ಪ್ರವಾದಿಸುತ್ತಾನೆ,’ ಎಂದು ಹೇಳುತ್ತಾರೆ.”
“Son of man, take note that the house of Israel is saying, ‘The vision that he sees is for many years from now; he prophesies about the distant future.’
28 “ಆದ್ದರಿಂದ ಅವರಿಗೆ ಹೀಗೆ ಹೇಳು: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ, ನನ್ನ ಯಾವುದೇ ಮಾತು ಇನ್ನು ತಡವಾಗದು. ನಾನು ಹೇಳಿದ್ದೆಲ್ಲವನ್ನು ನೆರವೇರುವುದೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’”
Therefore tell them that this is what the Lord GOD says: ‘None of My words will be delayed any longer. The message I speak will be fulfilled, declares the Lord GOD.’”