< ವಿಮೋಚನಕಾಂಡ 31 >

1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ,
Nagsao ni Yahwen kenni Moises,
2 “ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲಯೇಲ್ ಎಂಬವನನ್ನು ಗುರುತಿಸಿ ನಾನು ಆರಿಸಿಕೊಂಡಿದ್ದೇನೆ.
“Kitaem, inayabak babaen iti naganna ni Bezalel, ti anak a lalaki ni Uri, nga anak ni Hur manipud iti tribu ti Juda.
3 ನಾನು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕದಿಂದಲೂ ಎಲ್ಲಾ ವಿಧವಾದ ಕೌಶಲ್ಯದಿಂದಲೂ ತುಂಬಿಸಿದ್ದೇನೆ.
Pinunnok ni Bezalel iti espirituk tapno maikkan isuna iti kinasirib, pannakaawat, ken pannakaammo, para iti amin a kita ti batido a panagdesenio,
4 ಅವನು ಚಿನ್ನ, ಬೆಳ್ಳಿ, ಕಂಚಿನಲ್ಲಿ ಕಲಾತ್ಮಕವಾದ ವಿನ್ಯಾಸಗಳ ಕೆಲಸವನ್ನು ಮಾಡುವುದಕ್ಕೂ,
a mangkorte iti balitok, pirak, ken bronse;
5 ರತ್ನಗಳಲ್ಲಿ ಕೆತ್ತನೆಯನ್ನೂ ಮರದಲ್ಲಿ ಕೆತ್ತನೆಯನ್ನೂ ಸಕಲ ವಿಧವಾದ ಕೌಶಲ್ಯದ ಕೆಲಸವನ್ನು ಬಲ್ಲವನಾಗಿರುವನು.
kasta met a mangtabas ken mangurnos kadagiti batbato ken mangkitikit iti kayo—a mangaramid kadagiti amin a kita iti batido a panagdesenio.
6 ಇಗೋ, ನಾನೇ ಅವನೊಂದಿಗೆ ದಾನನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನನ್ನು ನೇಮಿಸಿದ್ದೇನೆ. “ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವುದಕ್ಕೆ ಜಾಣರಾದವರೆಲ್ಲರ ಹೃದಯಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಜ್ಞಾನವನ್ನು ಅನುಗ್ರಹಿಸಿದ್ದೇನೆ.
Mainayon a kaduana, dinutokak ni Oholiab nga anak a lalaki ni Ahisamac, manipud iti tribu ti Dan. Inikkak iti kabaelan dagiti puso ti amin a masirib tapno maaramidda amin nga imbilinko kenka. Karaman ditoy
7 “ದೇವದರ್ಶನದ ಗುಡಾರ, ಒಡಂಬಡಿಕೆಯ ಮಂಜೂಷ, ಅದರ ಮೇಲಿರುವ ಕರುಣಾಸನ, ಗುಡಾರದ ಎಲ್ಲಾ ಉಪಕರಣಗಳು,
ti tabernakulo, ti Lakasa ti Tulag ken ti kalub a mangipakita iti pannakakalub ti basol a nakaparabaw iti Lakasa, ken amin nga alikamen ti tolda—
8 ಮೇಜು ಅದರ ಉಪಕರಣಗಳು, ಶುದ್ಧ ಬಂಗಾರದ ದೀಪಸ್ತಂಭ, ಅದರ ಎಲ್ಲಾ ಉಪಕರಣಗಳು, ಧೂಪವೇದಿ, ಬಲಿಪೀಠ,
ti lamisaan ken dagiti alikamenna, ti puro a kandelero ken dagiti alikamenna, ti altar ti insenso,
9 ದಹನಬಲಿಪೀಠದ ಎಲ್ಲಾ ಉಪಕರಣಗಳು, ಗಂಗಾಳ, ಅದರ ಕಾಲು,
ti altar para kadagiti daton a maipuor amin ken dagiti amin nga alikamenna, ken ti dakkel a palanggana ken ti batayna.
10 ಯಾಜಕನಾದ ಆರೋನನ ಕಲಾತ್ಮಕವಾಗಿ ನೇಯ್ದ ಸೇವಾವಸ್ತ್ರಗಳು, ಪರಿಶುದ್ಧ ವಸ್ತ್ರಗಳು, ಯಾಜಕನ ಕೆಲಸ ಮಾಡುವುದಕ್ಕೆ ಅವನ ಮಕ್ಕಳ ವಸ್ತ್ರಗಳು,
Mainayon pay ditoy dagiti pagan-anay a nasayaat ti pannakabelna—dagiti sagrado a pagan-anay a para kenni Aaron a padi ken kadagiti annakna a lallaki, isaganam para kaniak tapno agserbida a kas papadi.
11 ಅಭಿಷೇಕಿಸುವ ತೈಲ, ಪರಿಶುದ್ಧ ಸ್ಥಳಕ್ಕೋಸ್ಕರವಿರುವ ಪರಿಮಳ ಧೂಪ. “ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು,” ಎಂದರು.
Mainayon pay ditoy ti lana a pangkonsagrar ken ti nabanglo nga insenso a para iti nasantoan a disso. Masapul nga aramiden dagitoy a lallaki a batido a dumidesenio dagitoy amin a banbanag kas imbilinko kenka.”
12 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
Nagsao ni Yahweh kenni Moises:
13 “ನೀನು ಇಸ್ರಾಯೇಲರೊಂದಿಗೆ ಮಾತನಾಡಿ, ‘ನಿಶ್ಚಯವಾಗಿ ನೀವು ನನ್ನ ವಿಶ್ರಾಂತಿಯ ದಿನವನ್ನು ಕೈಗೊಳ್ಳಬೇಕು. ಏಕೆಂದರೆ ನಿಮ್ಮನ್ನು ಪರಿಶುದ್ಧ ಮಾಡುವ ಯೆಹೋವ ದೇವರು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ, ನಿಮಗೂ, ನಿಮ್ಮ ಸಂತತಿಯವರಿಗೂ ಗುರುತಾಗಿರುವುದು.
“Ibagam kadagiti Israelita: “Masapul a ngilinenyo ti Aldaw a Panaginana ni Yahweh, ta daytoyto ti pagilasinan iti nagbaetanyo kenni Yahweh iti amin a kaputotan dagiti tattaom tapno maammoanyo nga isuna ni Yahweh, ti nangilasin kadakayo nga agpaay kenkuana.
14 “‘ಹೀಗಿರುವುದರಿಂದ ನೀವು ಸಬ್ಬತ್ ದಿನವನ್ನು ಕೈಗೊಳ್ಳಬೇಕು. ಏಕೆಂದರೆ ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರ ಮಾಡುವ ಪ್ರತಿಯೊಬ್ಬನು ಸಾಯಲೇಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ, ಅವರನ್ನು ನಿಮ್ಮ ಜನರೊಳಗಿಂದ ತೆಗೆದುಹಾಕಬೇಕು.
Isu a masapul a ngilinenyo ti Aldaw a Panaginana, ta masapul nga ibilangyo daytoy a nasantoan, a naisagana a para kenkuana. Ti siasinoman a mangtulaw iti daytoy ket rumbeng a mapapatay. Ti siasinoman nga agtrabaho iti Aldaw a Panaginana, dayta a tao ket sigurado a maisina manipud kadagiti amin a tattaona.
15 ಆರು ದಿವಸ ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ಯೆಹೋವ ದೇವರಿಗೆ ಪರಿಶುದ್ಧವಾದ ಸಬ್ಬತ್ ದಿನ. ಆ ಸಬ್ಬತ್ ದಿನದಲ್ಲಿ ಕೆಲಸ ಮಾಡುವವರೆಲ್ಲಾ ಸಾಯಲೇಬೇಕು.
Ti panagtrabaho ket maaramid iti uneg ti innem nga aldaw, ngem iti maikapito nga aldaw ket isu ti Aldaw a Panaginana, nasantoan ken naisagana a para iti pannakaidayaw ni Yahweh. Ti siasinoman nga agtrabaho iti uray ania iti Aldaw a Panaginana ket rumbeng a mapapatay.
16 ಹೀಗಿರಲಾಗಿ ಇಸ್ರಾಯೇಲರು ತಮ್ಮ ತಲತಲಾಂತರಗಳಲ್ಲಿ ನಿತ್ಯ ಒಡಂಬಡಿಕೆಯಾಗಿ ಆಚರಿಸುವಂತೆ ಸಬ್ಬತ್ ದಿನವನ್ನು ಕೈಗೊಳ್ಳಬೇಕು.
Masapul ngarud a salimetmetan dagiti Israelita ti Aldaw a Panaginana. Masapul a ngilinenda daytoy iti amin a kaputotan dagiti tattaoda a kas maysa nga agnanayon a linteg.
17 ನನಗೂ, ಇಸ್ರಾಯೇಲರಿಗೂ ಇದೇ ಶಾಶ್ವತವಾದ ಗುರುತು. ಏಕೆಂದರೆ ಆರು ದಿವಸಗಳಲ್ಲಿ ಯೆಹೋವ ದೇವರು ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸ ನಿಲ್ಲಿಸಿ, ವಿಶ್ರಮಿಸಿಕೊಂಡರು ಎಂದು ಹೇಳು,’” ಎಂದರು.
Ti Aldaw ti Panaginana ket agnanayon a pagilasinan iti nagbaetan ni Yahweh ken dagiti Isarelita, ta iti innem nga aldaw inaramid ni Yahweh ti langit ken daga, ken iti maikapito nga aldaw naginana isuna ken nabang-aran.”'
18 ಯೆಹೋವ ದೇವರು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ, ಅವನಿಗೆ ಸಾಕ್ಷಿಯ ಎರಡು ಹಲಗೆಗಳನ್ನೂ ದೇವರು ಬೆರಳಿನಿಂದ ಬರೆದ ಕಲ್ಲಿನ ಹಲಗೆಗಳನ್ನೂ ಕೊಟ್ಟನು.
Kalpasan a nakisarita ti Dios kenni Moises idiay Bantay Sinai, intedna kenkuana ti dua a tapi a bato- ti sangapulo a bilin, naaramid babaen iti bato nga insurat iti mismo nga imana.

< ವಿಮೋಚನಕಾಂಡ 31 >