< ವಿಮೋಚನಕಾಂಡ 28 >
1 “ನನಗೆ ಯಾಜಕ ಸೇವೆ ಮಾಡುವುದಕ್ಕೆ ನೀನು ಇಸ್ರಾಯೇಲರಿಂದ ನಿನ್ನ ಅಣ್ಣನಾದ ಆರೋನನನ್ನೂ, ಅವನ ಮಕ್ಕಳಾದ ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್ ಎಂಬುವರನ್ನು ನಿನ್ನ ಹತ್ತಿರ ಬರಮಾಡಬೇಕು.
१परमेश्वर मोशेला म्हणाला, याजक म्हणून माझी सेवा करण्यासाठी तुझा भाऊ अहरोन व त्याचे पुत्र नादाब, अबीहू, एलाजार व इथामार यांना इस्राएल लोकांतून वेगळे होऊन तुजकडे येण्यास सांग.
2 ನಿನ್ನ ಸಹೋದರನಾದ ಆರೋನನ ಗೌರವಕ್ಕೋಸ್ಕರವೂ ಅಲಂಕಾರಕ್ಕೋಸ್ಕರವೂ ಪರಿಶುದ್ಧ ವಸ್ತ್ರಗಳನ್ನು ನೀನು ಮಾಡಿಸಬೇಕು.
२आणि गौरवासाठी व शोभेसाठी तुझा भाऊ अहरोन याच्यासाठी पवित्र वस्रे तयार कर.
3 ಇದಲ್ಲದೆ ನಾನು ಜ್ಞಾನದ ಆತ್ಮದಿಂದ ತುಂಬಿದ ವಿವೇಕದ ಹೃದಯವಿರುವವರ ಸಂಗಡ ನೀನು ಮಾತನಾಡು, ಅವರು ಆರೋನನ ವಸ್ತ್ರಗಳನ್ನು ಮಾಡಲಿ. ಅವನು ಅವುಗಳನ್ನು ಧರಿಸಿಕೊಂಡು ನನ್ನ ಯಾಜಕನಾಗುವುದಕ್ಕೆ ಪ್ರತಿಷ್ಠಿತನಾಗುವನು.
३ही वस्रे बनवणारे कारागीर ज्यांना मी ज्ञानाच्या आत्म्याने परिपूर्ण केले आहे त्या सर्वांना अहरोनाची वस्रे तयार करण्यास सांग. त्यामुळे तो माझी याजकीय सेवा करण्यासाठी पवित्र होईल.
4 ಅವರು ಮಾಡಬೇಕಾದ ವಸ್ತ್ರಗಳು ಇವು: ಎದೆಪದಕವು, ಏಫೋದ್, ನಿಲುವಂಗಿ, ಕಸೂತಿಯ ಕೆಲಸದ ಮೇಲಂಗಿ, ಮುಂಡಾಸ, ನಡುಕಟ್ಟು. ನಿನ್ನ ಸಹೋದರನಾದ ಆರೋನನೂ ಅವನ ಪುತ್ರರೂ ನನ್ನ ಯಾಜಕರಾಗಿ ಸೇವೆ ಮಾಡುವುದಕ್ಕೆ ಅವರಿಗಾಗಿ ಪರಿಶುದ್ಧ ವಸ್ತ್ರಗಳನ್ನು ಮಾಡಿಸು.
४तुझा भाऊ अहरोन व त्याचे पुत्र यांनी याजक या नात्याने माझी सेवा करावी म्हणून कारागिरांनी त्यांच्यासाठी ही पवित्र वस्त्रे ऊरपट, एफोद, झगा, चौकड्याचा अंगरखा, मंदिल व कमरबंद तयार करावीत.
5 ಅವರು ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರವನ್ನು ಮತ್ತು ನಯವಾದ ನಾರುಬಟ್ಟೆಯನ್ನು ಹೊಸೆದು ಉಪಯೋಗಿಸಬೇಕು.
५त्यांनी सोन्याची जर आणि निळ्या, जांभळ्या व किरमिजी रंगाचे सूत व तलम सणाचे कापड वापरून ही वस्रे तयार करावीत.
6 “ಏಫೋದನ್ನು ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸ ಮಾಡಬೇಕು.
६सोन्याची जर व निळ्या, जांभळ्या व किरमिजी रंगाचे सूत तसेच कातलेल्या तलम सणाचे कापड घेऊन कुशल कारागिराकडून त्यांचे एफोद तयार करून घ्यावे;
7 ಈ ಕವಚಕ್ಕೆ ಅದರ ಎರಡೂ ಕೊನೆಗಳನ್ನು ಜೋಡಿಸುವುದಕ್ಕೆ ಎರಡು ಹೆಗಲು ಪಟ್ಟಿಗಳಿರಬೇಕು.
७एफोदाच्या दोन खांदपट्ट्या जोडलेल्या असाव्यात, त्याची दोन टोके जोडावी.
8 ಅದರ ಮೇಲಿರುವ ಕಸೂತಿ ಕೆಲಸದ ಏಫೋದಿನ ನಡುಕಟ್ಟನ್ನು ಒಂದೇ ರೀತಿಯ ವಸ್ತುಗಳಿಂದ ತಯಾರಿಸಬೇಕು ಅಂದರೆ ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿದ್ದಾಗಿರಬೇಕು.
८एफोद बांधण्यासाठी त्याच्यावर कुशलतेने विणलेली एक पट्टी असते तिची बनावट त्याच्यासारखीच असून ती अखंड असावी; सोन्याच्या जरीची, व निळ्या, जांभळ्या व किरमिजी रंगाचे सुताची व कातलेल्या तलम सणाच्या कापडाची ती असावी.
9 “ನೀನು ಎರಡು ಗೋಮೇಧಿಕ ರತ್ನಗಳನ್ನು ತೆಗೆದುಕೊಂಡು ಇಸ್ರಾಯೇಲರ ಮಕ್ಕಳ ಹೆಸರುಗಳನ್ನು ಅವುಗಳ ಮೇಲೆ ಕೆತ್ತಬೇಕು.
९मग दोन गोमेद रत्ने घेऊन त्यांच्यावर इस्राएलाच्या पुत्रांची नावे त्यांच्या जन्माच्या क्रमाने कोरावी.
10 ಒಂದು ರತ್ನದ ಮೇಲೆ ಆರು ಹೆಸರುಗಳನ್ನು ಮತ್ತೊಂದು ರತ್ನದ ಮೇಲೆ ಮಿಕ್ಕ ಆರು ಹೆಸರುಗಳನ್ನು ಅವರವರ ಜನನದ ಪ್ರಕಾರ ಕೆತ್ತಬೇಕು.
१०त्यांच्या नावांपैकी सहा नावे एका रत्नावर व बाकीची सहा नावे दुसऱ्या रत्नांवर कोरावी.
11 ಶಿಲ್ಪಿಗನು ಕಲ್ಲಿನ ಮೇಲೆ ಮುದ್ರೆ ಕೆತ್ತುವ ಪ್ರಕಾರ, ಆ ಎರಡೂ ರತ್ನಗಳ ಮೇಲೆ ಇಸ್ರಾಯೇಲರ ಮಕ್ಕಳ ಹೆಸರುಗಳನ್ನು ಕೆತ್ತಿಸಿ, ಅವುಗಳನ್ನು ಬಂಗಾರದ ಜವೆಗಳಲ್ಲಿ ಹೊದಿಸಿದ್ದಾಗಿ ಮಾಡಬೇಕು.
११रत्नावर कोरीव काम करणारा कारागीर कुशलतेने एखादी मुद्रा कोरतो त्याप्रमाणे दोन्ही रत्नांवर इस्राएलाच्या बारा पुत्रांची नावे कोरावीत आणि ती सोन्याच्या जाळीदार कोंदणात बसवावीत.
12 ಆ ಎರಡು ರತ್ನಗಳನ್ನು ಏಫೋದಿನ ಹೆಗಲಿನ ಭಾಗದ ಮೇಲೆ ಇಸ್ರಾಯೇಲರ ಜ್ಞಾಪಕಾರ್ಥವಾದ ರತ್ನಗಳಾಗಿ ಇಡಬೇಕು. ಆರೋನನು ತನ್ನ ಎರಡು ಹೆಗಲುಗಳ ಮೇಲೆ ಅವರ ಹೆಸರುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಜ್ಞಾಪಕಾರ್ಥವಾಗಿ ಹೊರಬೇಕು.
१२ती दोन्ही रत्ने एफोदाच्या दोन्ही खांदपट्ट्यांवर लावावी. ती इस्राएल लोकांची स्मारकरत्ने होत, म्हणजे अहरोन त्यांची नावे परमेश्वरासमोर आपल्या दोन्ही खांद्यांवर स्मरणार्थ वागवील.
13 ನೀನು ಬಂಗಾರದ ಜವೆಗಳನ್ನು ಮಾಡಬೇಕು.
१३त्याचप्रमाणे सोन्याची जाळीदार कोंदणे करावीत.
14 ಹೊಸೆದ ಹಗ್ಗದಂತೆ ಶುದ್ಧ ಬಂಗಾರದ ಎರಡು ಸರಪಣಿಗಳನ್ನು ಹೆಣಿಗೆ ಕೆಲಸದಿಂದ ಮಾಡಿ, ಆ ಹೆಣೆದ ಸರಪಣಿಗಳ ಕೊನೆಗಳನ್ನು ಜವೆಗಳಿಗೆ ಸೇರಿಸಿಬೇಕು.
१४पीळ घातलेल्या दोरीसारख्या शुद्ध सोन्याच्या दोन साखळ्या कराव्यात व त्या पीळ घातलेल्या साखळ्या त्या कोंदणात बसवाव्या.
15 “ದೇವನಿರ್ಣಯ ಮಾಡುವ ಆತನ ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಂದರೆ ಏಫೋದಿನ ಕೆಲಸದ ಹಾಗೆಯೇ ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿಸಬೇಕು.
१५न्यायाचा ऊरपटही तयार कुशल कारागिराकडून तयार करावा. जसा एफोद तयार केला, तसाच तो करावा. तो सोन्याच्या जरीचा, आणि निळ्या, जांभळ्या व किरमिजी रंगाच्या सुताचा व कातलेल्या तलम सणाच्या कापडाचा करावा;
16 ಅದು ಗೇಣು ಉದ್ದ, ಒಂದು ಗೇಣು ಅಗಲ ಮತ್ತು ಇದು ಎರಡು ಪದರುಳ್ಳದ್ದಾಗಿ ಚಚ್ಚೌಕವಾಗಿಯೂ ಇರಬೇಕು.
१६तो चौरस व दुहेरी असावा; व त्याची लांबी व रुंदी प्रत्येकी एक वीत असावी.
17 ನಂತರ ಅದರಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಜೋಡಿಸಬೇಕು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳಿರಬೇಕು.
१७त्यामध्ये रत्ने खोचलेल्या चार रांगा असाव्या; पहिल्या रांगेत लाल, पुष्कराज व माणिक;
18 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ ಮತ್ತು ಪಚ್ಚೆಗಳಿರಬೇಕು.
१८दुसऱ्या रांगेत पाचू, इंद्रनीलमणी व हिरा;
19 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಿಕ ಮತ್ತು ಧೂಮ್ರಮಣಿಗಳಿರಬೇಕು.
१९तिसऱ्या रांगेत तृणमणी, सूर्यकांत व पद्मराग;
20 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಗೋಮೇಧಿಕ, ಸೂರ್ಯಕಾಂತ ಶಿಲೆ ಇವುಗಳನ್ನು ಬಂಗಾರದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು.
२०आणि चौथ्या रांगेत लसणा, गोमेद व यास्फे; ही सर्व रत्ने सोन्याच्या कोंदणात खोचावीत.
21 ಈ ರತ್ನಗಳು ಇಸ್ರಾಯೇಲರ ಗೋತ್ರದ ಹೆಸರುಗಳ ಪ್ರಕಾರ ಅವು ಹನ್ನೆರಡಾಗಿರಬೇಕು. ಒಂದೊಂದರ ಮೇಲೆ ಒಂದೊಂದು ಹೆಸರಿದ್ದು, ಹನ್ನೆರಡು ಗೋತ್ರಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿರಬೇಕು.
२१ऊरपटावर इस्राएलाच्या प्रत्येक पुत्राच्या नावाच्या संख्येएवढी ही रत्ने असावीत. त्यांच्या संख्येइतकी बारा नावे असावीत. मुद्रा जशी कोरतात तसे बारा वंशांपैकी एकेकाचे नाव एकेका रत्नावर कोरावे.
22 “ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ಹೆಣೆದ ಕೆಲಸವಾಗಿರುವ ಹುರಿಗಳಂತಿರುವ ಸರಪಣಿಯನ್ನು ಮಾಡಬೇಕು.
२२ऊरपटावर लावण्यासाठी दोरीसारखा पीळ घातलेल्या शुद्ध सोन्याच्या साखळ्या कराव्यात.
23 ಆ ಎದೆಪದಕದ ಮೇಲೆ ಬಂಗಾರದ ಎರಡು ಬಳೆಗಳನ್ನು ಮಾಡಿ, ಆ ಎರಡು ಬಳೆಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಹಾಕಬೇಕು.
२३ऊरपटावर सोन्याच्या दोन कड्या कराव्यात; त्या न्यायाच्या ऊरपटाच्या दोन्ही टोकांना लावाव्यात;
24 ಬಂಗಾರದಿಂದ ಹೆಣೆದ ಆ ಎರಡು ಸರಪಣಿಗಳನ್ನು ಎದೆಪದಕದ ಕೊನೆಗಳಲ್ಲಿರುವ ಎರಡು ಬಳೆಗಳಲ್ಲಿ ಸೇರಿಸಬೇಕು.
२४ऊरपटाच्या टोकांना लावलेल्या या दोन कड्यांत पीळ घातलेल्या सोन्याच्या साखळ्या घालाव्यात.
25 ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಎರಡು ಜವೆಗಳಲ್ಲಿ ಸೇರಿಸಿ, ಏಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಬೇಕು.
२५पीळ घातलेल्या दोन्ही साखळ्यांची दुसरी टोके दोन्ही कोंदणात खोचून त्या एफोदाच्या दोन्ही खांदपट्ट्यांवर पुढल्या बाजूला लावाव्यात.
26 ಅದಲ್ಲದೆ ಬಂಗಾರದ ಎರಡು ಉಂಗುರಗಳನ್ನು ಮಾಡಿ, ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿ, ಏಫೋದಿನ ಬದಿಗೆ ಒಳಗಡೆಯಲ್ಲಿ ಹಾಕಬೇಕು.
२६सोन्याच्या आणखी दोन कड्या करून न्यायाच्या ऊरपटाच्या आतल्या दोन्ही कोपऱ्यांना एफोदाच्या बाजूला लावाव्या.
27 ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ, ಏಫೋದಿನ ಮುಂಬದಿಯ ಕೆಳಗಿನ ಎರಡು ಹೆಗಲಿನ ಪಟ್ಟಿಗಳಲ್ಲಿ, ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಬೇಕು.
२७सोन्याच्या आणखी दोन कड्या करून त्या खांदपट्ट्याखालील एफोदाच्या समोर त्याच्या जोडाजवळील पट्टीवर लावाव्या.
28 ಆ ಎದೆಪದಕವನ್ನು ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವಂತೆಯೂ, ಎದೆಪದಕವು ಏಫೋದನ್ನು ಬಿಟ್ಟು ಅಲ್ಲಾಡದಂತೆಯೂ, ಅದರ ಉಂಗುರಗಳ ಮೂಲಕವಾಗಿ ಏಫೋದಿನ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಬೇಕು.
२८त्या ऊरपटाच्या कड्या एफोदाच्या कड्यांना निळ्या फितीने बांधाव्या, ह्याप्रमाणे तो कुशलतेने विणलेल्या एफोदाच्या पट्टीवर राहील, आणि ऊरपट एफोदावरून घसरणार नाही.
29 “ಹೀಗೆ ಆರೋನನು ಪರಿಶುದ್ಧ ಸ್ಥಳಕ್ಕೆ ಬರುವಾಗ ಇಸ್ರಾಯೇಲರ ಹೆಸರುಗಳನ್ನು ಯಾವಾಗಲೂ ಯೆಹೋವ ದೇವರ ಮುಂದೆ ಜ್ಞಾಪಕ ಮಾಡುವುದಕ್ಕಾಗಿ ನ್ಯಾಯದ ಎದೆಪದಕವನ್ನು ತನ್ನ ಹೃದಯದ ಮೇಲೆ ಹೊರಬೇಕು.
२९अहरोन पवित्रस्थानात प्रवेश करील तेव्हा त्याच्या ऊरपटावर म्हणजे आपल्या हृदयावर त्याने इस्राएलाच्या मुलांची नावे कोरलेली असतील, त्यामुळे परमेश्वरास इस्राएलाच्या बारा पुत्रांची सतत आठवण राहील.
30 ನಿರ್ಣಯವನ್ನು ತಿಳಿಸುವ ಎದೆಪದಕದಲ್ಲಿ ಊರೀಮ್ ಮತ್ತು ತುಮ್ಮೀಮ್‌ಗಳನ್ನು ಇಡಬೇಕು. ಆರೋನನು ಯೆಹೋವ ದೇವರ ಸನ್ನಿಧಿಗೆ ಬರುವ ಸಮಯದಲ್ಲಿ ಅವು ಅವನ ಹೃದಯದ ಮೇಲೆ ಇರಬೇಕು. ಹೀಗೆ ಆರೋನನು ಯೆಹೋವ ದೇವರ ಮುಂದೆ ಯಾವಾಗಲೂ ಇಸ್ರಾಯೇಲರ ನಿರ್ಣಯಗಳನ್ನು ತನ್ನ ಹೃದಯದ ಮೇಲೆ ಹೊರಬೇಕು.
३०ऊरपटात तू उरीम व थुम्मीम ठेव. अहरोन परमेश्वरासमोर येईल तेव्हा ते त्याच्या हृदयावर असतील. त्यामुळे इस्राएल लोकांचा न्याय करण्याचा मार्ग तो नेहमी आपल्या हृदयावर घेऊन जाईल.
31 “ಏಫೋದಿನ ನಿಲುವಂಗಿಯನ್ನೆಲ್ಲಾ ನೀಲಿ ಬಣ್ಣದ ಬಟ್ಟೆಯಿಂದ ಮಾಡಬೇಕು.
३१एफोदाबरोबर घालावयाचा झगा संपूर्ण निळ्या रंगाचा करावा;
32 ಅದರ ಮಧ್ಯದಲ್ಲಿ ಮೇಲ್ಗಡೆ ತಲೆದೂರಿಸುವುದಕ್ಕೆ ರಂದ್ರವಿರಬೇಕು. ಅದು ಹರಿಯದ ಆ ರಂದ್ರದ ಸುತ್ತಲೂ ನೇಯ್ಗೆ ಕಸೂತಿಯನ್ನು ಹಾಕಿಸಬೇಕು.
३२त्याच्या मध्यभागी डोके घालण्यासाठी एक भोक असावे आणि त्याच्या भोवती कापडाचा गोट शिवावा म्हणजे झग्याचा तो भाग फाटणार नाही.
33 ನಿಲುವಂಗಿಯ ಅಂಚಿನ ಮೇಲೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ದಾಳಿಂಬೆ ಹಣ್ಣಿನಂತೆ ಅದರ ಅಂಚಿನ ಸುತ್ತಲೂ ಮಾಡಿ, ಅವುಗಳ ಮಧ್ಯದಲ್ಲಿ ಬಂಗಾರದ ಗಂಟೆಗಳನ್ನೂ ಸುತ್ತಲೂ ಇರಿಸಬೇಕು.
३३निळ्या, जांभळ्या व किरमिजी रंगाच्या सुताच्या कापडाची डाळिंबे काढून ती त्या झग्याच्या खालच्या घेराभोवती लावावीत आणि दोन डाळिंबाच्या मधील जागेत सोन्याची घुंगरे लावावीत;
34 ಒಂದು ಗೆಜ್ಜೆ, ಒಂದು ದಾಳಿಂಬೆಯಂತಿರುವ ಚೆಂಡನ್ನು ಒಂದಾದ ಮೇಲೆ ಒಂದು ಮೇಲಂಗಿಯ ಅಂಚಿನ ಸುತ್ತಲೂ ಇರಬೇಕು.
३४त्यामुळे झग्याच्या घेराच्या खालच्या बाजूला एक डाळिंब व एक घुंगरू अशी क्रमवार ती असावीत.
35 ಇದು ಸೇವೆಗಾಗಿ ಆರೋನನ ಮೇಲೆ ಇರಬೇಕು. ಅವನು ಯೆಹೋವ ದೇವರ ಸಮ್ಮುಖದಲ್ಲಿ ಪರಿಶುದ್ಧ ಸ್ಥಳಕ್ಕೆ ಬರುತ್ತಾ ಹೋಗುತ್ತಾ ಇರುವ ಸಮಯದಲ್ಲಿ, ಅವನು ಸಾಯದಂತೆ ಅವನ ಶಬ್ದವು ಕೇಳಿಸಬೇಕು.
३५सेवा करताना अहरोनाने हा झगा घालावा; जेव्हा जेव्हा तो पवित्रस्थानात परमेश्वरासमोर जाईल किंवा तेथून बाहेर पडेल तेव्हा तेव्हा त्या घुंगरांचा आवाज ऐकू येईल; त्यामुळे तो मरावयाचा नाही.
36 “ಶುದ್ಧ ಬಂಗಾರದ ತಗಡನ್ನು ಮಾಡಿ ಮುದ್ರೆ ಕೆತ್ತುವ ಪ್ರಕಾರ, ಅದರಲ್ಲಿ ಹೀಗೆ ಕೆತ್ತಬೇಕು: ‘ಯೆಹೋವ ದೇವರಿಗೆ ಪರಿಶುದ್ಧ.’
३६शुद्ध सोन्याची एक पट्टी बनवावी आणि मुद्रा कोरतात तशी तिच्यावर परमेश्वरासाठी पवित्र ही अक्षरे कोरावीत.
37 ಅದು ಮುಂಡಾಸದ ಮುಂಭಾಗದಲ್ಲಿರುವಂತೆ ಅದನ್ನು ನೀಲಿ ದಾರಿನಿಂದ ಕಟ್ಟಬೇಕು.
३७ही सोन्याची पट्टी अहरोनाच्या मंदिलाला समोरील बाजूस निळ्या फितीने बांधावी;
38 ಇಸ್ರಾಯೇಲರು ತಮ್ಮ ಪರಿಶುದ್ಧ ದಾನಗಳನ್ನೆಲ್ಲಾ ಪರಿಶುದ್ಧ ಮಾಡುವ ಪರಿಶುದ್ಧ ಕಾರ್ಯಗಳ ದೋಷವನ್ನು ಆರೋನನು ಹೊರುವ ಹಾಗೆ ಅದು ಆರೋನನ ಹಣೆಯ ಮೇಲಿರಬೇಕು. ಯೆಹೋವ ದೇವರ ಮುಂದೆ ಅವುಗಳೆಲ್ಲಾ ಅಂಗೀಕಾರವಾಗುವ ಹಾಗೆ ಅದು ಯಾವಾಗಲೂ ಅವನ ಹಣೆಯ ಮೇಲೆ ಇರಬೇಕು.
३८ती अहरोनाच्या कपाळावर सतत असावी. ह्यासाठी की ज्या गोष्टी इस्राएल लोक परमेश्वरास पवित्र अर्पण करतील म्हणजे ज्या पवित्र भेटी त्यासंबंधीचा दोष अहरोनाने वाहावा; त्यामुळे ती दाने परमेश्वरास मान्य ठरतील.
39 “ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸದಿಂದ ಮಾಡಿದ ಮೇಲಂಗಿಯನ್ನೂ ನಯವಾದ ನಾರಿನಿಂದ ಮಾಡಿದ ಮುಂಡಾಸವನ್ನೂ ಹೆಣಿಗೆಯ ಕೆಲಸದಿಂದ ನಡುಕಟ್ಟನ್ನೂ ಮಾಡಿಸಬೇಕು.
३९चौकड्यांचा अंगरखा तलम सणाचा करावा व एक मंदिलही तलम सणाचा करावा आणि एक वेलबुट्टीदार कमरबंद करावा.
40 ಆರೋನನ ಮಕ್ಕಳಿಗೆ ತಕ್ಕ ಗೌರವ ಹಾಗೂ ಶೋಭೆ ಸಿಗುವಂತೆ ನಿಲುವಂಗಿಗಳನ್ನೂ, ನಡುಕಟ್ಟುಗಳನ್ನೂ ಹಾಗೂ ಪೇಟಗಳನ್ನೂ ಮಾಡಿಸು.
४०अहरोनाच्या पुत्रांसाठीही अंगरखे, कमरबंद व फेटे करावेत; ही वस्रे गौरवासाठी व शोभेसाठी असावी.
41 ಅವುಗಳನ್ನು ನಿನ್ನ ಸಹೋದರ ಆರೋನನ ಮತ್ತು ಅವನ ಪುತ್ರರಿಗೆ ತೊಡಿಸಿ, ಅವರನ್ನು ಅಭಿಷೇಕಿಸಿ, ಪ್ರತಿಷ್ಠೆ ಮಾಡು. ಅವರು ನನಗೆ ಯಾಜಕ ಸೇವೆ ಮಾಡುವ ಹಾಗೆ ಅವರನ್ನು ಶುದ್ಧಮಾಡು.
४१तुझा भाऊ अहरोन ह्याला व त्याच्या पुत्रांना ही वस्रे घालून, त्यांना अभिषेक करावा व त्यांच्यावर संस्कार करावा आणि त्यांना पवित्र कर म्हणजे मग याजक या नात्याने ते माझी सेवा करतील.
42 “ಅವರ ಬೆತ್ತಲೆಯನ್ನು ಮುಚ್ಚುವ ಹಾಗೆ ನಾರಿನ ಚಡ್ಡಿಗಳನ್ನು ಮಾಡಿಸು. ಅವು ಸೊಂಟದಿಂದ ತೊಡೆಯವರೆಗೆ ಇರಬೇಕು.
४२“त्यांच्यासाठी सणाच्या कापडाचे चोळणे कर म्हणजे कमरेपासून मांडीपर्यंत त्यांचे अंग झाकलेले राहील.
43 ಆರೋನನೂ ಅವನ ಪುತ್ರರೂ ದೇವದರ್ಶನದ ಗುಡಾರಕ್ಕೆ ಬರುವ ಸಮಯದಲ್ಲಿಯೂ ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಬಲಿಪೀಠದ ಸಮೀಪಕ್ಕೆ ಬರುವ ಸಮಯದಲ್ಲಿಯೂ ದೋಷವನ್ನು ಹೊತ್ತು ಸಾಯದ ಹಾಗೆ ಇವುಗಳನ್ನು ಹಾಕಿಕೊಂಡಿರಬೇಕು. “ಇದೇ ಆರೋನನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಇರಬೇಕಾದ ನಿತ್ಯವಾದ ಕಟ್ಟಳೆ.
४३आणि अहरोन व त्याचे पुत्र दर्शनमंडपामध्ये प्रवेश करतील व पवित्रस्थानात सेवा करण्यास जातील तेव्हा त्यांनी हे चोळणे घातलेले असावे; तसे न केल्यास, दोषी ठरून ते मरतील; अहरोनाला व त्यानंतर त्याच्या वंशाला हा कायमचा नियम आहे.”