< ವಿಮೋಚನಕಾಂಡ 26 >
1 “ಗುಡಾರವನ್ನು ಹತ್ತು ಪರದೆಗಳಿಂದ ಮಾಡಿ, ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ಕೌಶಲ್ಯದ ಕೆಲಸದಿಂದಲೂ ಮಾಡಿದ ಕೆರೂಬಿಗಳುಳ್ಳವುಗಳಾಗಿಯೂ ಇರಬೇಕು.
汝また幕屋のために十の幕を造るべしその幕は即ち麻の撚絲靑紫および紅の絲をもて之を造り精巧にケルビムをその上に織出すべし
2 ಎಲ್ಲಾ ಪರದೆಗಳೂ ಒಂದೇ ಅಳತೆಯವುಗಳಾಗಿರಬೇಕು. ಪ್ರತಿಯೊಂದು ಪರದೆಯು ಸುಮಾರು ಹದಿಮೂರು ಮೀಟರ್ ಉದ್ದ ಮತ್ತು ಎರಡು ಮೀಟರ್ ಅಗಲವಿರಬೇಕು.
一の幕の長は二十八キユビト一の幕の濶は四キユビトなるべし幕は皆その寸尺を同うすべし
3 ಐದು ಪರದೆಗಳನ್ನು ಒಂದಕ್ಕೊಂದು ಜೋಡಿಸಬೇಕು ಮತ್ತು ಇನ್ನುಳಿದ ಐದು ಪರದೆಗಳನ್ನೂ ಒಂದಕ್ಕೊಂದು ಜೋಡಿಸಬೇಕು.
その幕五箇を互に連ねあはせ又その他の幕五箇をも互に連ねあはすべし
4 ಕೊನೆಯ ಪರದೆಯ ಅಂಚಿನ ಒಂದು ಜೋಡಣೆಯ ಸ್ಥಳದಲ್ಲಿ ನೀಲಿ ದಾರಿನ ಕುಣಿಕೆಗಳನ್ನು ಮಾಡಿ, ಎರಡನೆಯ ಜೋಡಣೆಯ ಕಟ್ಟಕಡೆಯ ಪರದೆಯ ಅಂಚಿನಲ್ಲಿಯೂ ಅದೇ ಪ್ರಕಾರ ಮಾಡಬೇಕು.
而してその一聯の幕の邊においてその聯絡處の端に靑色の襟を付べし又他の一聯の幕の聯絡處の邊にも斯なすべし
5 ಒಂದು ಪರದೆಯನ್ನು ಜೋಡಿಸುವ ಸ್ಥಳದಲ್ಲಿ ಇರುವ ಇನ್ನೊಂದು ಪರದೆಯ ಕೊನೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು. ಆ ಕುಣಿಕೆಗಳು ಒಂದಕ್ಕೊಂದು ಎದುರುಬದುರಾಗಿ ಹಿಡಿದುಕೊಳ್ಳುವವುಗಳಾಗಿರಬೇಕು.
汝一聯の幕に襟五十をつけ又他の一聯の幕の聯絡處の邊にも襟五十をつけ斯その襟をして彼と此と相對せしむべし
6 ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ, ಅವುಗಳಿಂದ ಪರದೆಗಳನ್ನು ಒಂದಕ್ಕೊಂದು ಜೋಡಿಸಬೇಕು. ಹೀಗೆ ಅದು ಒಂದೇ ಗುಡಾರವಾಗಬೇಕು.
而して金の鐶五十を造りその鐶をもて幕を連ねあはせて一の幕屋となすべし
7 “ಇದಲ್ಲದೆ ನೀನು ಗುಡಾರದ ಮೇಲೆ ಹೊದಿಸುವುದಕ್ಕಾಗಿ ಮೇಕೆಯ ಕೂದಲಿನಿಂದ ಹನ್ನೊಂದು ಪರದೆಗಳನ್ನು ಮಾಡಬೇಕು.
汝また山羊の毛をもて幕をつくりて幕屋の上の蓋となすべし即ち幕十一をつくるべし
8 ಒಂದೊಂದು ಪರದೆಯು ಸುಮಾರು ಹದಿಮೂರುವರೆ ಮೀಟರ್ ಉದ್ದ ಮತ್ತು ಒಂದುವರೆ ಮೀಟರ್ ಅಗಲ ಇರಬೇಕು. ಹನ್ನೊಂದು ಪರದೆಗಳೂ ಒಂದೇ ಅಳತೆಯಾಗಿರಬೇಕು.
その一箇の幕の長は三十キユビトその一箇の幕の濶は四キユビトなるべし即ちその十一の幕は寸尺を一にすべし
9 ಐದು ಪರದೆಗಳನ್ನು ಒಂದಾಗಿ ಜೋಡಿಸಿ ಇನ್ನುಳಿದ ಆರು ಪರದೆಗಳನ್ನು ಒಂದಾಗಿ ಜೋಡಿಸಿ, ಆರನೆಯ ಪರದೆಯನ್ನು ಗುಡಾರದ ಮುಂಭಾಗದಲ್ಲಿ ಮಡಿಸಿ ತೂಗಾಡಬಿಡಬೇಕು.
而してその幕五を一に聯ねまたその幕六を一に聯ねその第六の幕を幕屋の前に摺むべし
10 ಜೋಡಿಸುವಾಗ ಕೊನೆಯ ಒಂದು ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು, ಜೋಡಣೆಯಲ್ಲಿರುವ ಕೊನೆಯ ಎರಡನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು.
又その一聯の幕の邊すなはちその聯絡處の端に襟五十を付け又他の一聯の幕の聯絡處にも襟五十を付べし
11 ಇದಲ್ಲದೆ ಕಂಚಿನ ಐವತ್ತು ಕೊಂಡಿಗಳನ್ನು ಮಾಡಿ, ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ, ಒಂದೇ ಡೇರೆ ಆಗುವಂತೆ ಜೋಡಿಸಬೇಕು.
而して銅の鐶五十を作りその鐶を襟にかけてその幕を聯ねあはせて一となすべし
12 ಗುಡಾರದ ಪರದೆಗಳನ್ನು ಮಿಕ್ಕಿದ ತೂಗಾಡುವಂಥದ್ದು ಎಂದರೆ ಉಳಿದ ಅರ್ಧ ಪರದೆಯು ಗುಡಾರದ ಹಿಂಭಾಗದಲ್ಲಿ ತೂಗಾಡಲಿ.
その天幕の幕の餘れる遺餘すなはちその餘れる半幕をば幕屋の後に垂しむべし
13 ಗುಡಾರದ ಪರದೆಗಳ ಉದ್ದದಲ್ಲಿ ಈಚೆ ಆಚೆ ಮಿಕ್ಕಿದ ಮೊಳವು ಗುಡಾರದ ಈಚೆ ಆಚೆಯಲ್ಲಿ ಅದನ್ನು ಮುಚ್ಚುವುದಕ್ಕಾಗಿ ತೂಗಾಡಲಿ.
天幕の幕の餘れる者は此旁に一キユビト彼旁に一キユビトあり之を幕屋の兩旁此方彼方に垂てこれを蓋ふべし
14 ಗುಡಾರದ ಮೇಲ್ಹೊದಿಕೆಯನ್ನು ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದಿಂದ ಮಾಡಬೇಕು, ಅದರ ಮೇಲೆ ಕಡಲುಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಬೇಕು.
汝赤く染たる牡山羊の皮をもて幕屋の蓋をつくりその上に貛の皮の蓋をほどこすべし
15 “ಗುಡಾರಕ್ಕೆ ಜಾಲಿ ಮರದಿಂದ ಚೌಕಟ್ಟುಗಳನ್ನು ಮಾಡಬೇಕು.
汝合歓木をもて幕屋のために竪板を造るべし
16 ಒಂದೊಂದು ಚೌಕಟ್ಟಿನ ಉದ್ದವು ಸುಮಾರು ನಾಲ್ಕುವರೆ ಮೀಟರ್ ಮತ್ತು ಅಗಲ ಅರವತ್ತೆಂಟು ಸೆಂಟಿಮೀಟರ್ ಇರಬೇಕು.
一枚の板の長は十キユビト一枚の板の濶は一キユビト半なるべし
17 ಒಂದು ಚೌಕಟ್ಟಿಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಬೇಕು. ಅದೇ ಪ್ರಕಾರ ಗುಡಾರದ ಎಲ್ಲಾ ಚೌಕಟ್ಟುಗಳಿಗೆ ಮಾಡಬೇಕು.
板ごとに二の榫をつくりて彼と此と交指しめよ幕屋の板には皆斯のごとく爲べし
18 ಗುಡಾರದ ದಕ್ಷಿಣ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಬೇಕು.
汝幕屋のために板を造るべし即ち南向の方のために板二十枚を作るべし
19 ಇಪ್ಪತ್ತು ಚೌಕಟ್ಟುಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಬೇಕು ಮತ್ತು ಒಂದೊಂದು ಚೌಕಟ್ಟಿನ ಕೆಳಗೆ ಅದರ ಎರಡು ಪಟ್ಟಿಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಬೇಕು.
而してその二十枚の板の下に銀の座四十を造るべし即ち此板の下にもその二の榫のために二の座あらしめ彼板の下にもその二の榫のために二の座あらしむべし
20 ಹಾಗೆಯೇ ಗುಡಾರದ ಉತ್ತರ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನೂ,
幕屋の他の方すなはちその北の方のためにも板二十枚を作るべし
21 ಮತ್ತು ಒಂದೊಂದು ಚೌಕಟ್ಟಿನ ಕೆಳಗೆ ಎರಡೆರಡು ಗದ್ದಿಗೇ ಕಲ್ಲುಗಳಂತೆ ನಲವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನೂ,
而してこれに銀の座四十を作り此板の下にも二の座彼板の下にも二の座あらしむべし
22 ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದ ಕಡೆಗೆ ಆರು ಚೌಕಟ್ಟುಗಳನ್ನು ಮಾಡಬೇಕು.
幕屋の後すなはちその西の方のために板六枚を造るべし
23 ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಬೇಕು.
又幕屋の後の兩の隅のために板二枚を造るべし
24 ಈ ಮೂಲೆಗಳನ್ನು ಅಡಿಯಲ್ಲಿ ಜೋಡಿಸಿರಬೇಕು. ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರಬೇಕು. ಇದೇ ರೀತಿಯಲ್ಲಿ ಅವು ಎರಡು ಮೂಲೆಗಳಲ್ಲಿ ಎರಡಕ್ಕೂ ಇರಬೇಕು.
その二枚は下にて相合せしめその頂まで一に連ならしむべし一箇の鐶に於て然りその二枚ともに是の如くなるべし其等は二の隅のために設くる者なり
25 ಹೀಗೆ ಅವು ಎಂಟು ಚೌಕಟ್ಟುಗಳೂ ಒಂದೊಂದು ಚೌಕಟ್ಟಿನ ಕೆಳಗೆ ಎರಡೆರಡು ಕೂರುಗದ್ದಿಗೇ ಕಲ್ಲುಗಳೂ ಇರುವುದರಿಂದ ಅವುಗಳಿಗೆ ಹದಿನಾರು ಬೆಳ್ಳಿಯ ಕೂರುಗದ್ದಿಗೇ ಕಲ್ಲುಗಳೂ ಇರಬೇಕು.
その板は合て八枚その銀の座は十六座此板にも二の座彼板にも二の座あらしむべし
26 “ಜಾಲಿ ಮರದಿಂದ ಅಗುಳಿಗಳನ್ನು ಮಾಡಬೇಕು. ಗುಡಾರದ ಒಂದು ಕಡೆಯ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು,
汝合歓木をもて横木を作り幕屋の此方の板のために五本を設くべし
27 ಗುಡಾರದ ಇನ್ನೊಂದು ಭಾಗದ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು, ಅದರ ಹಿಂದುಗಡೆಯ ಅಂದರೆ ಪಶ್ಚಿಮ ಭಾಗದಲ್ಲಿರುವ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು ಮಾಡಬೇಕು.
また幕屋の彼方の板のために横木五本を設け幕屋の後すなはちその西の方の板のために横木五本を設くべし
28 ಮಧ್ಯದ ಅಗುಳಿಯು ಚೌಕಟ್ಟುಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಮುಟ್ಟಿರಬೇಕು.
板の眞中にある中間の横木をば端より端まで通らしむべし
29 ಆ ಚೌಕಟ್ಟುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳಿಗೆ ಬಂಗಾರದಿಂದ ಬಳೆಗಳನ್ನು ಮಾಡಬೇಕು. ಅಗುಳಿಗಳನ್ನು ಬಂಗಾರದಿಂದ ಹೊದಿಸಬೇಕು.
而してその板に金を着せ金をもて之がために鐶を作りて横木をこれに貫き又その横木に金を着すべし
30 “ಹೀಗೆ ಬೆಟ್ಟದ ಮೇಲೆ ನಾನು ನಿನಗೆ ತೋರಿಸಿದ ಕ್ರಮದ ಪ್ರಕಾರ ಗುಡಾರವನ್ನು ನಿಲ್ಲಿಸಬೇಕು.
汝山にて示されしところのその模範にしたがひて幕屋を建べし
31 “ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಬೇಕು. ಅದರ ಮೇಲೆ ಕೌಶಲ್ಯದಿಂದ ಕಸೂತಿಹಾಕಿ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು.
汝また靑紫紅の線および麻の撚絲をもて幕を作り巧にケルビムをその上に織いだすべし
32 ಜಾಲಿ ಮರದ ನಾಲ್ಕು ಸ್ತಂಭಗಳನ್ನು ಮಾಡಿ, ಬಂಗಾರ ತಗಡುಗಳಿಂದ ಅವುಗಳನ್ನು ಹೊದಿಸಿದರು. ಅವುಗಳಿಗೆ ಬಂಗಾರದ ಕೊಂಡಿಗಳನ್ನು ಮಾಡಿ, ಬೆಳ್ಳಿಯ ನಾಲ್ಕು ಗದ್ದಿಗೇ ಕಲ್ಲುಗಳ ಮೇಲೆ ಊರಿಕೊಂಡಿರುವ ಜಾಲಿ ಮರದ ಸ್ತಂಭಗಳಲ್ಲಿ ಅದನ್ನು ತೂಗು ಹಾಕಬೇಕು.
而して金を着たる四本の合歓木の柱の上に之を掛べしその鈎は金にしその柱は四の銀の座の上に置べし
33 ಆ ಪರದೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ, ಪರದೆಯೊಳಗೆ ಒಡಂಬಡಿಕೆಯ ಮಂಜೂಷವನ್ನು ತರಬೇಕು. ಪರಿಶುದ್ಧ ಸ್ಥಳಕ್ಕೂ ಮಹಾಪರಿಶುದ್ಧ ಸ್ಥಳಕ್ಕೂ ಮಧ್ಯದಲ್ಲಿ ಆ ಪರದೆಯನ್ನು ವಿಂಗಡಿಸಬೇಕು.
汝その幕を鐶の下に掛け其處にその幕の中に律法の櫃を蔵むべしその幕すなはち汝らのために聖所と至聖所を分たん
34 ಮಹಾಪರಿಶುದ್ಧ ಸ್ಥಳದಲ್ಲಿ ಒಡಂಬಡಿಕೆಯ ಮಂಜೂಷದ ಮೇಲೆ ಕರುಣಾಸನವನ್ನು ಇಡಬೇಕು.
汝至聖所にある律法の櫃の上に贖罪所を置べし
35 ಇದಲ್ಲದೆ ಗುಡಾರದ ಉತ್ತರ ಕಡೆಯಲ್ಲಿ ಪರದೆಯ ಹೊರಗೆ ಮೇಜನ್ನು ಇಡಬೇಕು ಮತ್ತು ದೀಪಸ್ತಂಭವನ್ನು ಅದರ ಎದುರಾಗಿ ದಕ್ಷಿಣದ ದಿಕ್ಕಿನಲ್ಲಿ ಇಡಬೇಕು.
而してその幕の外に案を置ゑ幕屋の南の方に燈臺を置て案に對はしむべし案は北の方に置べし
36 “ಗುಡಾರದ ಬಾಗಿಲಿಗೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರುಗಳಿಂದ ಹೊಸೆದು ಕಸೂತಿ ಕೆಲಸಮಾಡಿದ ಪರದೆಯನ್ನು ಮಾಡಬೇಕು.
又靑紫紅の線および麻の撚絲をもて幔を織なして幕屋の入口に掛べし
37 ಆ ಪರದೆಗೆ ಜಾಲಿ ಮರದ ಐದು ಕಂಬಗಳನ್ನು ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಐದು ಗದ್ದಿಗೇ ಕಲ್ಲುಗಳನ್ನು ಕಂಚಿನಿಂದ ಎರಕಹೊಯಿಸಬೇಕು.
又その幔のために合歓木をもて柱五本を造りてこれに金を着せその鈎を金にすべし又その柱のために銅をもて五箇の座を鋳べし