< ವಿಮೋಚನಕಾಂಡ 21 >

1 “ಈಗ ಅವರ ಮುಂದೆ ನೀನು ಇಡತಕ್ಕ ನ್ಯಾಯವಿಧಿಗಳು ಇವೇ.
وَهَذِهِ هِي الأَحْكَامُ الَّتِي تَضَعُهَا أَمَامَهُمْ:١
2 “ನೀನು ಹಿಬ್ರಿಯ ದಾಸನನ್ನು ಕೊಂಡುಕೊಂಡರೆ, ಅವನು ಆರು ವರ್ಷ ನಿನಗೆ ಸೇವೆಮಾಡಬೇಕು. ಏಳನೆಯ ವರ್ಷದಲ್ಲಿ ಅವನು ಏನೂ ಕೊಡದೆ ಬಿಡುಗಡೆಯಾಗಿ ಹೋಗಲಿ.
إنِ اشْتَرَيْتَ عَبْداً عِبْرَانِيًّا فَلْيَخْدُمْكَ سِتَّ سَنَوَاتٍ، وَفِي السَّنَةِ السَّابِعَةِ تُطْلِقُهُ حُرّاً مَجَّاناً٢
3 ಅವನು ಒಬ್ಬನಾಗಿ ಬಂದಿದ್ದರೆ, ಒಬ್ಬನಾಗಿಯೇ ಹೋಗಬೇಕು. ಅವನು ಮದುವೆಯಾದವನಾಗಿದ್ದರೆ, ಅವನ ಹೆಂಡತಿಯು ಅವನ ಸಂಗಡ ಹೋಗಬೇಕು.
وَإذَا اشْتَرَيْتَهُ وَهُوَ أَعْزَبُ يُطْلَقُ وَحْدَهُ. وَإِنِ اشْتَرَيْتَهُ وَهُوَ بَعْلُ امْرَأَةٍ، تُطْلَقُ زَوْجَتُهُ مَعَهُ.٣
4 ಅವನ ಯಜಮಾನನು ಅವನಿಗೆ ಮದುವೆಮಾಡಿಸಿ ಆ ಹೆಂಡತಿಗೆ ಗಂಡು ಇಲ್ಲವೆ ಹೆಣ್ಣುಮಕ್ಕಳು ಹುಟ್ಟಿದ್ದರೆ, ಆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನ ಸೊತ್ತಾಗುವರು. ಅವನು ಒಬ್ಬನಾಗಿಯೇ ಹೋಗಬೇಕು.
وَإِنْ وَهَبَهُ مَوْلاهُ زَوْجَةً وَأَنْجَبَتْ لَهُ بَنِينَ وَبَنَاتٍ، فَإِنَّ زَوْجَتَهُ وَأَوْلادَهَا يَكُونُونَ مِلْكاً لِسَيِّدِهِ، وَهُوَ يُطْلَقُ وَحْدَهُ حُرّاً.٤
5 “ಆದರೆ ದಾಸನು, ‘ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿಯನ್ನೂ ನನ್ನ ಮಕ್ಕಳನ್ನೂ ಪ್ರೀತಿಮಾಡುತ್ತೇನೆ. ಆದ್ದರಿಂದ ನಾನು ಬಿಡುಗಡೆಯಾಗಿ ಹೋಗುವುದಕ್ಕೆ ಮನಸ್ಸಿಲ್ಲ,’ ಎಂದು ಸ್ವಷ್ಟವಾಗಿ ಹೇಳಿದರೆ,
لَكِنْ إِنْ قَالَ الْعَبْدُ: «أُحِبُّ مَوْلايَ وَزَوْجَتِي وَأَوْلادِي، وَلا أُرِيدُ أَنْ أَخْرُجَ حُرّاً.٥
6 ಅವನ ಯಜಮಾನನು ಅವನನ್ನು ನ್ಯಾಯಾಧೀಶರ ಬಳಿಗೆ ಕರಕೊಂಡು ಬಂದು, ಬಾಗಿಲಿನ ಬಳಿಗಾದರೂ ಅದರ ಕಂಬದ ಬಳಿಗಾದರೂ ಬರಮಾಡಿ, ಅವನ ಯಜಮಾನನು ಅವನ ಕಿವಿಯನ್ನು ದಬ್ಬಳದಿಂದ ಚುಚ್ಚಬೇಕು. ಆಗ ಅವನು ಸದಾಕಾಲಕ್ಕೂ ಅವನ ದಾಸನಾಗಿರಬೇಕು.
يَأْخُذُهُ سَيِّدُهُ إِلَى قُضَاةِ الْمَدِينَةِ، ثُمَّ يُقِيمُهُ لِصْقَ الْبَابِ أَوْ قَائِمَتِهِ، وَيَثْقُبُ أُذُنَهُ بِمِخْرَزٍ، فَيُصْبِحُ خَادِماً لَهُ مَدَى الْحَيَاةِ.٦
7 “ಒಬ್ಬನು ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ, ದಾಸರು ಹೋಗುವಂತೆ ಆಕೆಯು ಹೋಗಿಬಿಡಬಾರದು.
وَلَكِنْ إِذَا بَاعَ رَجُلٌ ابْنَتَهُ كَأَمَةٍ، فَإِنَّهَا لَا تُطْلَقُ حُرَّةً كَمَا يُطْلَقُ الْعَبْدُ.٧
8 ಅವಳನ್ನು ನಿಶ್ಚಯಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಅವಳು ಮೆಚ್ಚಿಕೆಯಾಗದೆ ಹೋದರೆ, ಆಗ ಅವಳು ಬಿಡುಗಡೆಯಾಗುವಂತೆ ಮಾಡಲಿ. ಅವನು ಅವಳನ್ನು ವಂಚಿಸಿದ್ದರಿಂದ ಯೆಹೂದ್ಯರಲ್ಲದವರಿಗೆ ಅವಳನ್ನು ಮಾರುವುದಕ್ಕೆ ಅವನಿಗೆ ಅಧಿಕಾರವಿಲ್ಲ.
فَإِذَا لَمْ تَرُقْ لِمَوْلاهَا الَّذِي خَطَبَهَا لِنَفْسِهِ، يَسْمَحُ بِافْتِدَائِهَا، وَلا يَحِقُّ لَهُ أَنْ يَبِيعَهَا لِقَوْمٍ أَجَانِبَ لأَنَّهُ غَدَرَ بِها فَلَمْ يَتَزَوَّجْهَا٨
9 ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯ ಮಾಡಿದರೆ, ಹೆಣ್ಣು ಮಕ್ಕಳ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕು.
وَإِنْ خَطَبَهَا لاِبْنِهِ فَإِنَّهُ يُعَامِلُهَا كَابْنَةٍ لَهُ.٩
10 ಒಂದು ವೇಳೆ ಅವನು ಇನ್ನೊಬ್ಬಳನ್ನು ಮದುವೆಯಾದರೆ, ಮೊದಲನೆಯವಳಿಗೆ ಅನ್ನ, ವಸ್ತ್ರ, ದಾಂಪತ್ಯದ ಹಕ್ಕನ್ನು ಕಡಿಮೆ ಮಾಡಬಾರದು.
أَمَّا إِذَا أَعْجَبَتْهُ وَتَزَوَّجَهَا، ثُمَّ عَادَ فَتَزَوَّجَ مِنْ أُخْرَى، فَإِنَّهُ لَا يُنَقِّصُ شَيْئاً مِنْ طَعَامِهَا وَكُسْوَتِهَا وَمُعَاشَرَتِهَا،١٠
11 ಈ ಮೂರನ್ನು ಅವಳಿಗೆ ಮಾಡದೆ ಹೋದರೆ, ಅವಳು ಏನೂ ಕ್ರಯ ಕೊಡದೆ, ಸ್ವತಂತ್ರಳಾಗಿ ಹೋಗಿಬಿಡಬಹುದು.
فَإِذَا قَصَّرَ فِي وَاحِدٍ مِنْ هَذِهِ الأَشْيَاءِ الثَّلاثَةِ، عَلَيْهِ أَنْ يُطْلِقَهَا حُرَّةً مَجَّاناً.١١
12 “ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು.
مَنْ ضَرَبَ إنْسَاناً وَقَتَلَهُ، فَالضَّارِبُ حَتْماً يَمُوتُ.١٢
13 ಆದರೆ ಕೊಲ್ಲಬೇಕೆಂಬ ಯೋಚನೆ ಇಲ್ಲದೆ ದೇವರು ಅನುಮತಿಸಿದ್ದರಿಂದ ಕೊಲೆಯಾದರೆ, ಕೊಂದವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಾನು ನೇಮಿಸುವೆನು.
وَلَكِنْ إِنْ لَمْ يَتَعَمَّدِ الضَّارِبُ ذَلِكَ، بَلْ حَدَثَ الأَمْرُ بِقَضَاءِ اللهِ فَإِنِّي سَأُعَيِّنُ لَهُ مَكَاناً يَلْجَأُ إِلَيْهِ.١٣
14 ಆದರೆ ಒಬ್ಬನು ಮತ್ತೊಬ್ಬನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸದಿಂದ ಕೊಂದರೆ, ಅವನು ಸಾಯುವಂತೆ ನೀನು ಅವನನ್ನು ನನ್ನ ಬಲಿಪೀಠದಿಂದ ದೂರ ತೆಗೆದುಕೊಂಡುಹೋಗಿ ಕೊಂದುಹಾಕಬೇಕು.
وَلَكِنْ إِذَا تَآمَرَ أَحَدٌ عَلَى آخَرَ وَتَعَمَّدَ قَتْلَهُ، فَسُقْهُ لِلْمَوْتِ حَتَّى وَلَوِ احْتَمَى بِمَذْبَحِي١٤
15 “ತಂದೆತಾಯಿಗಳನ್ನು ಹೊಡೆಯುವವನು ಖಂಡಿತವಾಗಿ ಮರಣದಂಡನೆ ಹೊಂದಬೇಕು.
كُلُّ مَنْ يَضْرِبْ أَبَاهُ أَوْ أُمَّهُ، يُقْتَلْ.١٥
16 “ಒಬ್ಬನು ಮತ್ತೊಬ್ಬನನ್ನು ಅಪಹರಿಸಿಕೊಂಡು ಹೋಗಿ ಮಾರಿದರೆ, ಇಲ್ಲವೆ ಅವನು ಬಂಧನಕ್ಕೊಳಗಾದಾಗ ಅಪಹರಿಸಲಾದವನು ಅವನೊಂದಿಗಿದ್ದರೆ, ಅವನನ್ನು ಮರಣದಂಡನೆಗೆ ಗುರಿಮಾಡಬೇಕು.
مَنْ يَخْطِفْ إِنْسَاناً وَيَبِعْهُ أَوْ يَسْتَرِقَّهُ عِنْدَهُ حَتْماً يَمُتْ.١٦
17 “ತಂದೆಗಾದರೂ ತಾಯಿಗಾದರೂ ಶಾಪಕೊಟ್ಟವನು ಖಂಡಿತವಾಗಿ ಸಾಯಬೇಕು.
مَنْ يَشْتِمْ أَبَاهُ أَوْ أُمَّهُ يُقْتَلْ.١٧
18 “ಇಬ್ಬರು ಜಗಳವಾಡುವಾಗ ಒಬ್ಬನು ಮತ್ತೊಬ್ಬನನ್ನು ಕಲ್ಲಿನಿಂದಾಗಲಿ, ಮುಷ್ಟಿಯಿಂದಾಗಲಿ ಹೊಡೆದದ್ದರಿಂದ ಅವನು ಸಾಯದೆ ಗಾಯಗೊಂಡು, ಹಾಸಿಗೆ ಹಿಡಿದು, ಕ್ರಮೇಣ
إِذَا تَعَارَكَ رَجُلانِ فَضَرَبَ أَحَدُهُمَا الآخَرَ بِحَجَرٍ أَوْ لَكَمَهُ مِنْ غَيْرِ أَنْ يُمِيتَهُ بَلْ أَلْزَمَهُ الْفِرَاشَ،١٨
19 ಅವನು ಎದ್ದು ಕೋಲೂರಿಕೊಂಡು ತಿರುಗಾಡುವುದಾದರೆ, ಅವನನ್ನು ಹೊಡೆದವನು ಅಪರಾಧವಿಲ್ಲದೆ ಹೋಗಬೇಕು. ಪೆಟ್ಟು ತಿಂದವನು ಗುಣಹೊಂದುವವರೆಗೆ ಆಗುವ ಖರ್ಚನ್ನು ಹೊಡೆದವನು ಕೊಡಬೇಕು ಮತ್ತು ಅವನನ್ನು ಪೂರ್ಣ ಸ್ವಸ್ಥನಾಗುವಂತೆ ಮಾಡಬೇಕು.
ثُمَّ قَامَ مُتَمَشِّياً مُتَوَكِّئاً عَلَى عُكَّازِهِ، يُبَرَّأُ الضَّارِبُ، إلّا أَنَّ عَلَيْهِ أَنْ يَدْفَعَ لِلْمَضْرُوبِ تَعْوِيضاً عَنْ مُدَّةِ تَعَطُّلِهِ، وَيَتَحَمَّلَ نَفَقَاتِ عِلاجِهِ.١٩
20 “ಒಬ್ಬನು ದಾಸನನ್ನಾಗಲಿ, ದಾಸಿಯನ್ನಾಗಲಿ ಸಾಯುವಂತೆ ಕೋಲಿನಿಂದ ಹೊಡೆದಾಗ, ಹೊಡೆದವನಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು.
إنْ ضَرَبَ أَحَدٌ عَبْدَهُ أَوْ أَمَتَهُ بِالْعَصَا ضَرْباً أَفْضَى إِلَى الْمَوْتِ، يُعَاقَبُ.٢٠
21 ದಾಸದಾಸಿಯರು ಒಂದೆರಡು ದಿನಗಳ ನಂತರ ಉಳಿದರೆ ಶಿಕ್ಷೆಯಾಗಬಾರದು. ಏಕೆಂದರೆ ಅವರು ಅವನ ಸೊತ್ತು.
لَكِنْ إِنْ بَقِيَ حَيًّا يَوْماً أَوْ يَوْمَيْنِ، لَا يُعَاقَبُ الضَّارِبُ، لأَنَّ العَبْدَ مِلْكُهُ.٢١
22 “ಜನರು ಜಗಳವಾಡುವಾಗ ಗರ್ಭಿಣಿಯಾದ ಸ್ತ್ರೀಗೆ ಏಟು ತಗಲಿ ಗರ್ಭಸ್ರಾವವಾದರೆ, ಆ ಸ್ತ್ರೀಯ ಗಂಡನು ಕೇಳಿದಷ್ಟು ಮತ್ತು ನ್ಯಾಯಾಲಯವು ವಿಧಿಸುವಷ್ಟು ದಂಡವನ್ನು ಹೊಡೆದವನು ಕೊಡಬೇಕು.
إِنْ تَضَارَبَ رِجَالٌ وَصَدَمُوا امْرَأَةً حَامِلاً فَأَجْهَضَتْ مِنْ غَيْرِ أَنْ تَتَأَذَّى، يَدْفَعُ الصَّادِمُ غَرَامَةً بِمُقْتَضَى مَا يُطَالِبُ بِهِ الزَّوْجُ وَوَفْقاً لِقَرَارِ الْقُضَاةِ.٢٢
23 ಬೇರೆ ಹಾನಿಯಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರಾಣವನ್ನು, ಕಣ್ಣಿಗೆ ಕಣ್ಣನ್ನು,
أَمَّا إِذَا تَأَذَّتِ الْمَرْأَةُ، تَأْخُذُ نَفْساً بِنَفْسٍ،٢٣
24 ಹಲ್ಲಿಗೆ ಹಲ್ಲು, ಕೈಗೆ ಕೈಯನ್ನು, ಕಾಲಿಗೆ ಕಾಲನ್ನು,
وَعَيْناً بِعَيْنٍ، وَسِنّاً بِسِنٍّ، وَيَداً بِيَدٍ، وَرِجْلاً بِرِجْلٍ،٢٤
25 ಸುಟ್ಟ ಗಾಯಕ್ಕೆ ಸುಟ್ಟಗಾಯವನ್ನು, ಕಡಿದ ಗಾಯಕ್ಕೆ ಕಡಿದ ಗಾಯವನ್ನು, ಹೊಡೆದ ಗಾಯಕ್ಕೆ ಹೊಡೆದು ಗಾಯವನ್ನು ನೀನು ಮಾಡಬೇಕು.
وَكَيًّا بِكَيٍّ، وَجُرْحاً بِجُرْحٍ، وَرَضّاً بِرَضٍّ.٢٥
26 “ಒಬ್ಬನು ದಾಸನ ಕಣ್ಣನ್ನು ಇಲ್ಲವೆ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ, ಆ ಕಣ್ಣಿಗೋಸ್ಕರ ಅವರನ್ನು ಅವನು ಬಿಡುಗಡೆ ಮಾಡಿ ಕಳುಹಿಸಲಿ.
وَإذَا ضَرَبَ أَحَدٌ عَبْدَهُ أَوْ أَمَتَهُ، فَأَتْلَفَ عَيْنَهُ، فَإِنَّهُ يُطْلِقُهُ حُرّاً تَعْوِيضاً لَهُ عَنْ عَيْنِهِ٢٦
27 ಒಬ್ಬನು ದಾಸನ ಹಲ್ಲನ್ನು, ಇಲ್ಲವೆ ದಾಸಿಯ ಹಲ್ಲನ್ನು ಉದುರಿಸಿದರೆ, ಹಲ್ಲಿಗೋಸ್ಕರ ಅವರನ್ನು ಬಿಡುಗಡೆ ಮಾಡಿ ಕಳುಹಿಸಲಿ.
وَإذَا ضَرَبَ أَحَدٌ عَبْدَهُ أَوْ أَمَتَهُ، فَأَسْقَطَ سِنَّهُ، فَإِنَّهُ يُطْلِقُهُ حُرّاً تَعْوِيضاً عَنْ سِنِّهِ.٢٧
28 “ಯಾವುದಾದರೂ ಒಂದು ಎತ್ತು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಹಾಯ್ದು ಕೊಂದರೆ, ಆ ಎತ್ತನ್ನು ಖಂಡಿತವಾಗಿ ಕಲ್ಲೆಸೆದು ಕೊಲ್ಲಬೇಕು. ಅದರ ಮಾಂಸವನ್ನು ತಿನ್ನಬಾರದು. ಆ ಎತ್ತಿನ ಯಜಮಾನನು ನಿರಪರಾಧಿ.
إِذَا نَطَحَ ثَوْرٌ رَجُلاً أَوِ امْرَأَةً فَمَاتَ، يُرْجَمُ الثَّوْرُ حَتَّى الْمَوْتِ وَلا تَأْكُلُونَ لَحْمَهُ، وَيَكُونُ صَاحِبُ الثَّوْرِ بَرِيئاً.٢٨
29 ಆದರೆ ಆ ಎತ್ತು ಮೊದಲಿನಿಂದ ಹಾಯುವಂಥದ್ದೆಂದು ಯಜಮಾನನಿಗೆ ತಿಳಿದಿದ್ದರೂ ಅವನು ಅದನ್ನು ಕಟ್ಟಿಹಾಕದೆ ಇದ್ದುದರಿಂದ ಅದು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಕೊಂದುಹಾಕಿದರೆ, ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು. ಆದರೆ ಯಜಮಾನನೂ ಮರಣದಂಡನೆಗೆ ಗುರಿಯಾಗುವನು.
أَمَّا إِنْ كَانَ الثَّوْرُ نَطَّاحاً مِنْ قَبْلُ، وَسَبَقَ إِنْذَارُ صَاحِبِهِ، فَلَمْ يَكْبَحْهُ، فَقَتَلَ رَجُلاً أَوِ امْرَأَةً، يُرْجَمُ الثَّوْرُ، وَيُقْتَلُ صَاحِبُهُ.٢٩
30 ಒಂದು ವೇಳೆ ಅವನಿಗೆ ಪ್ರಾಯಶ್ಚಿತ್ತವನ್ನು ನೇಮಿಸಿದರೆ, ಅವನು ತನಗೆ ನೇಮಿಸಿದ್ದನ್ನೆಲ್ಲಾ ತನ್ನ ಪ್ರಾಣವಿಮೋಚನೆಗಾಗಿ ಕೊಡಲಿ.
إلّا إِذَا طُولِبَ بِدَفْعِ الدِّيَّةِ، فَيَدْفَعُ آنَئِذٍ فِدَاءَ نَفْسِهِ مَا هُوَ مَتَوَجِّبٌ عَلَيْهِ.٣٠
31 ಅದು ಮಗನನ್ನು ಹಾಯ್ದಿದ್ದರೂ, ಮಗಳನ್ನು ಹಾಯ್ದಿದ್ದರೂ ಈ ನ್ಯಾಯತೀರ್ಪಿನ ಪ್ರಕಾರ ಅದರ ಯಜಮಾನನಿಗೆ ಮಾಡಬೇಕು.
وَإذَا نَطَحَ ابْناً أَوِ ابْنَةً، يُنَفَّذُ فِيهِ هَذَا الْحُكْمُ.٣١
32 ದಾಸನನ್ನಾದರೂ, ದಾಸಿಯನ್ನಾದರೂ ಎತ್ತು ಹಾಯ್ದರೆ, ದಾಸನ, ದಾಸಿಯ ಯಜಮಾನನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕು ಮತ್ತು ಎತ್ತನ್ನು ಕಲ್ಲೆಸೆದು ಕೊಲ್ಲಬೇಕು.
وَإذَا نَطَحَ الثَّوْرُ عَبْداً أَوْ أَمَةً، فَإِنَّ صَاحِبَهُ يَدْفَعُ ثَلاثِينَ قِطْعَةَ فِضَّةٍ تَعْوِيضاً لِمَوْلاهُ، وَيُرْجَمُ الثَّوْرُ.٣٢
33 “ಗುಂಡಿಯನ್ನು ಅಗೆದವನು ಅದನ್ನು ಮುಚ್ಚದೆ ಇದ್ದುದರಿಂದ ಎತ್ತಾದರೂ ಕತ್ತೆಯಾದರೂ ಆ ಗುಂಡಿಯಲ್ಲಿ ಬಿದ್ದು ಸತ್ತರೆ,
إنْ كَشَفَ إِنْسَانٌ غِطَاءَ بِئْرِهِ، أَوْ حَفَرَ بِئْراً وَتَرَكَهَا مِنْ غَيْرِ غِطَاءٍ، فَوَقَعَ فِيهَا ثَوْرٌ أَوْ حِمَارٌ،٣٣
34 ಗುಂಡಿಯನ್ನು ಅಗೆದವನು ಈಡು ಕೊಡಬೇಕು. ಅವುಗಳ ಯಜಮಾನನಿಗೆ ಕ್ರಯ ನೀಡಬೇಕು. ಆದರೆ ಸತ್ತ ಪಶು ಅವನದಾಗಬೇಕು.
يَقُومُ صَاحِبُ الْبِئْرِ بِدَفْعِ تَعْوِيضٍ عَنِ الْخَسَارَةِ تُضَاهِي ثَمَنَهُ، وَيَكُونُ الْمَيْتُ لَهُ.٣٤
35 “ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾಯ್ದು ಕೊಂದರೆ, ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನೂ, ಸತ್ತ ಎತ್ತನ್ನೂ ಸರಿಯಾಗಿ ಇಬ್ಬರೂ ಪಾಲುಮಾಡಿಕೊಳ್ಳಬೇಕು.
وَإذَا نَطَحَ ثَوْرُ إِنْسَانٍ ثَوْرَ صَاحِبٍ لَهُ فَمَاتَ الثَّوْرُ، فَإِنَّهُمَا يَبِيعَانِ الثَّوْرَ الْحَيَّ وَيَقْتَسِمَانِ ثَمَنَهُ، وَكَذَلِكَ يَقْتَسِمَانِ الثَّوْرَ الْمَيْتَ.٣٥
36 ಇಲ್ಲವೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ತಿಳಿದಿದ್ದರೂ, ಅದರ ಯಜಮಾನನು ಅದನ್ನು ಕಟ್ಟಿಹಾಕದೆ ಹೋಗಿದ್ದರೆ, ಎತ್ತಿಗೆ ಎತ್ತನ್ನು ಖಂಡಿತವಾಗಿ ಬದಲುಕೊಡಬೇಕು. ಆದರೆ ಸತ್ತ ಪಶುವನ್ನು ಅವನು ತೆಗೆದುಕೊಳ್ಳಬಹುದು.
وَأَمَّا إِذَا كَانَ مَعْرُوفاً مِنْ قَبْلُ، أَنَّ الثَّوْرَ نَطَّاحٌ وَلَمْ يَكْبَحْهُ صَاحِبُهُ، فَإِنَّهُ يُعَوِّضُ ثَوْراً بِثَوْرٍ، وَيَكُونُ الثَّوْرُ الْمَيْتُ لَهُ.٣٦

< ವಿಮೋಚನಕಾಂಡ 21 >