< ವಿಮೋಚನಕಾಂಡ 11 >

1 ಯೆಹೋವ ದೇವರು ಮೋಶೆಗೆ, “ಇನ್ನು ಒಂದೇ ಉಪದ್ರವವನ್ನು ಫರೋಹನ ಮೇಲೆಯೂ, ಈಜಿಪ್ಟ್ ಮೇಲೆಯೂ ಬರಮಾಡುವೆನು. ಆಮೇಲೆ ಅವನು ಇಲ್ಲಿಂದ ಕಳುಹಿಸುವನು. ಇಲ್ಲಿಂದ ನಿಮ್ಮನ್ನು ನಿಶ್ಚಯವಾಗಿ ಬಲವಂತದಿಂದ ಎಲ್ಲರನ್ನೂ ಕಳುಹಿಸಿಬಿಡುವನು.
याहवेह ने मोशेह से कहा, “फ़रोह तथा मिस्र पर मैं एक और कष्ट भेजूंगा. इसके बाद वह तुम्हें यहां से जाने देगा; और वह ज़रूर तुम्हें यहां से निकालेगा.
2 ಆದ್ದರಿಂದ ಸ್ತ್ರೀಪುರುಷರೆಲ್ಲರು ತನ್ನ ನೆರೆಯವನಿಂದಲೂ ಬೆಳ್ಳಿಬಂಗಾರ ಒಡವೆಗಳನ್ನು ಕೇಳಿಕೊಳ್ಳಬೇಕೆಂದು ಇಸ್ರಾಯೇಲರಿಗೆ ಹೇಳು,” ಎಂದು ಹೇಳಿದರು.
इस्राएलियों से यह कहो कि प्रत्येक पुरुष एवं स्त्री अपने-अपने पड़ोसी से सोना एवं चांदी मांग ले.”
3 ಇದಲ್ಲದೆ ಯೆಹೋವ ದೇವರು ಈಜಿಪ್ಟಿನವರ ದೃಷ್ಟಿಯಲ್ಲಿ ಜನರಿಗೆ ದಯೆ ದೊರಕುವಂತೆ ಮಾಡಿದರು. ಇದಲ್ಲದೆ ಮೋಶೆಯು ಈಜಿಪ್ಟ್ ದೇಶದಲ್ಲಿಯೂ ಫರೋಹನ ಅಧಿಕಾರಿಗಳ ದೃಷ್ಟಿಯಲ್ಲಿಯೂ ಜನರ ದೃಷ್ಟಿಯಲ್ಲಿಯೂ ಬಹಳ ಗೌರವ ಹೊಂದಿದನು.
याहवेह ही ने मिस्रियों को इस्राएलियों के प्रति दयालु बना दिया. इसके अलावा मोशेह भी मिस्र देश में फ़रोह के सेवकों तथा मिस्री लोगों में महान बने थे.
4 ಆಗ ಮೋಶೆಯು ಫರೋಹನಿಗೆ, “ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಸುಮಾರು ಮಧ್ಯರಾತ್ರಿಯಲ್ಲಿ ನಾನು ಈಜಿಪ್ಟಿನ ಮಧ್ಯದಲ್ಲಿ ಹಾದು ಹೋಗುವೆನು.
मोशेह ने कहा, “याहवेह का संदेश है, ‘आधी रात को मैं मिस्र देश के बीच में से निकल जाऊंगा.
5 ಆಗ ಈಜಿಪ್ಟ್ ದೇಶದ ಚೊಚ್ಚಲ ಮಕ್ಕಳು ಅಂದರೆ, ಸಿಂಹಾಸನದ ಮೇಲೆ ಕೂತಿರುವ ಫರೋಹನ ಚೊಚ್ಚಲ ಮಗನು ಮೊದಲುಗೊಂಡು ಬೀಸುವ ಕಲ್ಲನ್ನು ಹಿಡಿದಿರುವ ದಾಸಿಯ ಚೊಚ್ಚಲ ಮಗನವರೆಗೆ ಮತ್ತು ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವೂ ಸಾಯುವುವು.
और मिस्र देश के हर पहले बेटे की मृत्यु हो जाएगी. फ़रोह के पहले बेटे से लेकर चक्की पीसने वाली का पहला बेटा और सब पशुओं का भी पहिलौठा मर जाएगा.
6 ಈಜಿಪ್ಟ್ ದೇಶದಲ್ಲೆಲ್ಲಾ ದೊಡ್ಡ ಗೋಳಾಟವಿರುವುದು. ಅಂಥಾ ಗೋಳಾಟವು ಹಿಂದೆಯೂ ಇರಲಿಲ್ಲ, ಇನ್ನು ಮುಂದೆಯೂ ಇರುವುದಿಲ್ಲ.
तब पूरे देश में दुःख का माहौल होगा; ऐसा न तो कभी इससे पहले हुआ, न ऐसा फिर कभी होगा.
7 ಆದರೆ ಯೆಹೋವ ದೇವರು ಈಜಿಪ್ಟಿನವರಿಗೂ, ಇಸ್ರಾಯೇಲರಿಗೂ ಮಧ್ಯದಲ್ಲಿಟ್ಟಿರುವ ವ್ಯತ್ಯಾಸವನ್ನು ನೀವು ತಿಳುಕೊಳ್ಳುವಂತೆ, ಇಸ್ರಾಯೇಲಿನವರ ವಿರುದ್ಧ ಇಲ್ಲವೆ ಪ್ರಾಣಿಗಳ ವಿರುದ್ಧ ಒಂದು ನಾಯಿ ಸಹ ಬೊಗಳುವುದಿಲ್ಲ.’
पर इस्राएली मनुष्यों पर और उनके किसी पशु पर कोई कुत्ता न भौंकेगा ताकि यह समझ आ जाये कि यह याहवेह ही हैं जिन्होंने इस्राएलियों तथा मिस्रियों के बीच अंतर रखा है.’
8 ಆಗ ನಿನ್ನ ದಾಸರಾದ ಇವರೆಲ್ಲರೂ ನನ್ನ ಬಳಿಗೆ ಬಂದು, ನನಗೆ ಅಡ್ಡಬಿದ್ದು, ನನಗೆ ನೀನೂ, ನಿನ್ನನ್ನು ಹಿಂಬಾಲಿಸುವ ಜನರೆಲ್ಲರೂ, ‘ಹೊರಗೆ ಹೋಗಿರಿ,’ ಎಂದು ಹೇಳುವರು. ತರುವಾಯ ನಾನು ಹೊರಗೆ ಹೋಗುವೆನು,” ಎಂದು ಹೇಳಿ ಮೋಶೆಯು ಕೋಪಾವೇಶವುಳ್ಳವನಾಗಿ ಫರೋಹನ ಬಳಿಯಿಂದ ಹೊರಟುಹೋದನು.
तुम्हारे ये सभी सेवक मेरे पास आकर मुझे प्रणाम करेंगे और कहेंगे, आप चले जाइए और अपने सब लोगों को भी अपने साथ ले जाइए!” यह कहते हुए मोशेह बहुत गुस्से में फ़रोह के पास से निकल गए.
9 ಆದರೆ ಯೆಹೋವ ದೇವರು ಮೋಶೆಗೆ, “ನನ್ನ ಅದ್ಭುತಗಳು ಈಜಿಪ್ಟ್ ದೇಶದಲ್ಲಿ ಹೆಚ್ಚಾಗುವಂತೆ ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ,” ಎಂದರು.
इसके बाद याहवेह ने मोशेह से कहा, “फ़रोह तो अब भी तुम्हारी न सुनेगा, क्योंकि मैं मिस्र देश में और अद्भुत काम दिखाना चाहता हूं.”
10 ಈ ಅದ್ಭುತಗಳನ್ನೆಲ್ಲಾ ಮೋಶೆ ಆರೋನರು ಫರೋಹನ ಮುಂದೆ ಮಾಡಿದರು. ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ, ಅವನು ಇಸ್ರಾಯೇಲರನ್ನು ತನ್ನ ದೇಶದೊಳಗಿಂದ ಕಳುಹಿಸಲಿಲ್ಲ.
मोशेह तथा अहरोन ने सभी चमत्कार फ़रोह को दिखाए. फिर भी याहवेह ने फ़रोह का मन कठोर बनाए रखा, और फ़रोह इस्राएलियों को मिस्र देश से निकलने के लिए रोकता रहा.

< ವಿಮೋಚನಕಾಂಡ 11 >