< ಎಫೆಸದವರಿಗೆ ಬರೆದ ಪತ್ರಿಕೆ 4 >
1 ಆದ್ದರಿಂದ ನೀವು ಸ್ವೀಕರಿಸಿದ ನಿಮ್ಮ ಕರೆಯುವಿಕೆಗೆ ಯೋಗ್ಯರಾಗಿ ಬಾಳಬೇಕೆಂದು ಕರ್ತನ ಸೆರೆಯಾಳಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ.
I therefore, the prisoner in the Lord, call on you to walk worthily of the calling in which ye were called,
2 ನೀವು ಸಂಪೂರ್ಣ ದೀನತ್ವದಿಂದಲೂ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ.
with all humility and meekness, with longsuffering, forbearing each other in love.
3 ಸಮಾಧಾನದ ಬಂಧನದಲ್ಲಿದ್ದವರಾಗಿ, ಪವಿತ್ರಾತ್ಮ ದೇವರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ.
Endeavoring to keep the unity of the Spirit in the bond of peace,
4 ಒಂದೇ ನಿರೀಕ್ಷೆಗೆ ನೀವು ಕರೆಹೊಂದಿದಂತೆಯೇ ದೇಹವು ಒಂದೇ, ಪವಿತ್ರಾತ್ಮರು ಒಬ್ಬರೇ,
one body, and one Spirit. Just as also ye were called in one hope of your calling,
5 ಕರ್ತ ಆಗಿರುವವರು ಒಬ್ಬರೇ, ಒಂದೇ ವಿಶ್ವಾಸ, ದೀಕ್ಷಾಸ್ನಾನವೂ ಒಂದೇ,
one Lord, one faith, one immersion,
6 ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬರೇ; ಅವರೇ ಎಲ್ಲರ ಮೇಲಿರುವರೂ ಎಲ್ಲರ ಮೂಲಕ ಕಾರ್ಯನಡಿಸುವವರೂ ಎಲ್ಲರಲ್ಲಿ ವಾಸಿಸುವವರೂ ಆಗಿದ್ದಾರೆ.
one God and Father of all. He is over all, and through all, and in us all.
7 ನಮ್ಮಲ್ಲಿ ಪ್ರತಿಯೊಬ್ಬನಿಗೂ ಕ್ರಿಸ್ತ ಯೇಸುವು ನೀಡಿದ ಅಳತೆಗೆ ಅನುಸಾರವಾಗಿ ವರವನ್ನು ಕೊಡಲಾಗಿದೆ.
But the grace was given to each of us, according to the measure of the gift of the Christ.
8 ಆದ್ದರಿಂದ ಪವಿತ್ರ ವೇದದಲ್ಲಿ ಹೀಗೆ ಹೇಳಲಾಗಿದೆ: “ಅವರು ಉನ್ನತಸ್ಥಾನಕ್ಕೆ ಏರಿಹೋದಾಗ, ಸೆರೆಯಾಳಾಗಿದ್ದ ಅನೇಕರನ್ನು ಕೊಂಡೊಯ್ದು ತಮ್ಮ ಜನರಿಗೆ ವರದಾನಗಳನ್ನು ಕೊಟ್ಟರು!”
Therefore he says, Having ascended on high, he led captivity captive, and gave gifts to men.
9 “ಅವರು ಏರಿ ಹೋದರೆಂದು,” ಹೇಳಿದ್ದರ ಅರ್ಥವೇನು? ಭೂಮಿಯ ಭೂಗರ್ಭಕ್ಕೂ ಇಳಿದಿದ್ದರು ಎಂದೂ ಹೇಳಿದ ಹಾಗಾಯಿತಲ್ಲವೇ?
And what is the ascended, except that he also first descended into the lower parts of the earth?
10 ಇಳಿದು ಬಂದ ಅವರೇ ಮೇಲಣ ಎಲ್ಲಾ ಆಕಾಶಗಳಿಗಿಂತ ಉನ್ನತವಾಗಿ ಏರಿಹೋಗಿ, ಇಡೀ ವಿಶ್ವವನ್ನೇ ತುಂಬಿಕೊಳ್ಳುವುದಕ್ಕಾಗಿ ಮೇಲೆ ಏರಿ ಹೋಗಿದ್ದಾರೆ.
He who descended is also the same man who ascended high above all the heavens, so that he might fill all things.
11 ಕ್ರಿಸ್ತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಕೆಲವರನ್ನು ಉಪದೇಶಿಗಳನ್ನಾಗಿಯೂ ಸಭೆಗೆ ಕೊಟ್ಟರು.
And indeed he gave the apostles, and the prophets, and the evangelists, and the shepherds and teachers
12 ಕ್ರಿಸ್ತನ ದೇಹವನ್ನು ಕಟ್ಟುವುದಕ್ಕಾಗಿಯೂ ದೇವಜನರನ್ನು ಸೇವಾ ಕೆಲಸಕ್ಕಾಗಿ ಪರಿಣಿತರನ್ನಾಗಿ ಮಾಡುವುದಕ್ಕಾಗಿಯೂ ಕ್ರಿಸ್ತನು ಅವರನ್ನು ಕೊಟ್ಟ ಉದ್ದೇಶವಾಗಿತ್ತು.
for the perfecting of the sanctified, for the work of ministry, for edification of the body of the Christ.
13 ನಾವೆಲ್ಲರೂ ಕ್ರಿಸ್ತನ ಪರಿಪೂರ್ಣತೆಯ ಬೆಳವಣಿಗೆಯಲ್ಲಿ ವಿಶ್ವಾಸದಲ್ಲಿಯೂ ದೇವಪುತ್ರನ ತಿಳುವಳಿಕೆಯಲ್ಲಿ ಒಂದು ಮನಸ್ಸುಳ್ಳವರಾಗಿ ಪರಿಪಕ್ವತೆಯನ್ನು ಹೊಂದುವುದೇ ಆ ಉದ್ದೇಶವಾಗಿತ್ತು.
Until we all attain to the unity of the faith, and of the knowledge of the Son of God, to a perfect man, to a standard of stature of the fullness of the Christ.
14 ಆಗ, ನಾವು ಚಿಕ್ಕಮಕ್ಕಳಂತೆ ಇರುವುದಿಲ್ಲ: ಮನುಷ್ಯರ ವಿವಿಧ ಬೋಧನೆಗಳಿಂದ ಗಾಳಿಯಿಂದ ತೂರಾಡಿಕೊಳ್ಳುವಂತಾಗುವುದಿಲ್ಲ. ಮನುಷ್ಯರ ಕುಯುಕ್ತಿಗೆ, ತಂತ್ರಕ್ಕೆ, ಒಳಸಂಚಿಗೆ ಒಳಗಾಗುವುದಿಲ್ಲ. ಅವರ ಪ್ರತಿಯೊಂದು ಬೋಧನೆಯ ಗಾಳಿಯಿಂದಲೂ ತೂರಾಡಿಕೊಂಡು ಅತ್ತಿತ್ತ ಅಲೆದಾಡುವ ಚಿಕ್ಕಮಕ್ಕಳಂತೆ ಇರಬಾರದು.
So that we may no longer be childish, tossed about and carried about by every wind of doctrine by the trickery of men in craftiness with the methodology of error.
15 ಆದರೆ ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ, ನಾವು ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ದೇಹದ ಪರಿಪಕ್ವತೆಯೆಡೆಗೆ ಅವರ ಶಿರಸತ್ವದಲ್ಲಿ ಬೆಳೆಯೋಣ.
But being truthful in love, we may cause all things to grow for him who is the head-the Christ-
16 ಹೀಗೆ ದೇಹವೆಲ್ಲಾ ಕ್ರಿಸ್ತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಣೆಹೊಂದಿ, ಪ್ರತಿ ಅಂಗವೂ ತನ್ನ ಕೆಲಸವನ್ನು ಸೂಕ್ತವಾಗಿ ಮಾಡುವಂತೆ ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿ ಹೊಂದುತ್ತದೆ.
from whom the whole body, joined together and united together through every connection of the supply, according to the working of each one part within a standard, makes the growth of the body for the construction of itself by love.
17 ಆದ್ದರಿಂದ, ಯೆಹೂದ್ಯರಲ್ಲದವರು ವ್ಯರ್ಥ ಆಲೋಚನೆಯುಳ್ಳವರಾಗಿ ಬಾಳುವ ರೀತಿಯಲ್ಲಿ ನೀವು ಇನ್ನು ಮೇಲೆ ಬಾಳದಂತೆ, ಕರ್ತನಲ್ಲಿ ನಾನು ನಿಮಗೆ ಸಾಕ್ಷಿಕೊಟ್ಟು ಹೇಳುತ್ತೇನೆ.
This I say therefore, and solemnly declare in the Lord, for you to walk no longer as also the other Gentiles walk, in the vanity of their mind,
18 ಅವರು ತಮ್ಮ ಹೃದಯ ಕಠಿಣತ್ವದ ಅಜ್ಞಾನದಿಂದ ತಮ್ಮ ಕತ್ತಲು ಕವಿದ ತಿಳುವಳಿಕೆಯಲ್ಲಿ, ದೇವರ ಜೀವದಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡವರಾಗಿದ್ದಾರೆ.
darkened in their understanding, alienated from the life of God through the ignorance that is in them, because of the callousness of their heart.
19 ಅವರು ಸರ್ವ ಸೂಕ್ಷ್ಮತೆಯನ್ನು ಕಳೆದುಕೊಂಡು, ತಮ್ಮನ್ನು ಕಾಮುಕತನಕ್ಕೆ ಒಪ್ಪಿಸಿಕೊಟ್ಟು, ಎಲ್ಲಾ ಅಶುದ್ಧತ್ವವನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.
Who, having become callous, gave themselves over to licentiousness for the work of all uncleanness in greed.
20 ನೀವಾದರೋ ಕ್ರಿಸ್ತನನ್ನು ಆ ರೀತಿಯಾಗಿ ಅರಿತುಕೊಳ್ಳಲಿಲ್ಲ.
But ye did not so learn the Christ,
21 ನೀವು ಕ್ರಿಸ್ತನ ಬಗ್ಗೆ ಕೇಳಿ ಬೋಧನೆಯನ್ನು ಪಡೆದಾಗ, ಅದು ಯೇಸುವಿನಲ್ಲಿರುವ ಸತ್ಯಕ್ಕೆ ಅನುಸಾರವಾಗಿತ್ತು.
if indeed ye heard him, and were taught in him, as truth is in Jesus,
22 ನಿಮಗೆ ಉಪದೇಶಿಸಿದಂತೆ, ನೀವು ನಿಮ್ಮ ಹಿಂದಿನ ನಡತೆಯ ಪ್ರಕಾರ ಮೋಸಕರವಾದ ಆಶೆಗಳ ಅನುಸಾರವಾಗಿರುವ ಹಳೆಯ ಸ್ವಭಾವವನ್ನು ತೆಗೆದುಹಾಕಬೇಕು.
for you to put off the old man according to your former conduct, the man who is corrupt according to the desires of deceitfulness,
23 ಹೀಗೆ ನೀವು ನಿಮ್ಮ ಮನೋಭಾವನೆಯನ್ನು ನವೀಕರಿಸಿಕೊಂಡು;
and to be renewed in the spirit of your mind,
24 ಸತ್ಯವಾದ ನೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ದೇವರ ಹೋಲಿಕೆಯ ಪ್ರಕಾರವಾಗಿರಲು ಸೃಷ್ಟಿಸಲಾದ ಹೊಸ ಸ್ವಭಾವವನ್ನು ಧರಿಸಿಕೊಳ್ಳಿರಿ.
and to put on the new man according to God, the man who was created in righteousness and piety of the truth.
25 ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ. ಏಕೆಂದರೆ ನಾವೆಲ್ಲರೂ ಒಂದೇ ದೇಹದ ಅಂಗಗಳು.
Therefore having put off falsehood, let each man speak truth with his neighbor, because we are body-parts of each other.
26 “ಕೋಪ ಮಾಡಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಕೋಪವು ಇಳಿಯಲಿ.
Be ye angry, and sin not. Let not the sun go down upon your wrath,
27 ಹೀಗೆ ನೀವು ಸೈತಾನನಿಗೆ ಅವಕಾಶಕೊಡಬೇಡಿರಿ.
neither give a place to the devil.
28 ಕಳ್ಳತನ ಮಾಡುವವನು ಇನ್ನು ಮೇಲೆ ಕಳ್ಳತನ ಮಾಡದೆ, ಕೈಯಿಂದ ಯಾವುದಾದರೊಂದು ಒಳ್ಳೆಯ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವನಿಗೆ ಕೊಡುವುದಕ್ಕೆ ಅವನಿಂದಾಗುವುದು.
Let the man who steals steal no more, but rather let him labor, working with his hands the good, so that he may have to give to him who has need.
29 ನಿಮ್ಮ ಬಾಯೊಳಗಿಂದ ಯಾವ ಕೆಟ್ಟಮಾತೂ ಹೊರಡದಿರಲಿ. ಕೇಳುವವರಿಗೆ ಆತ್ಮಿಕ ಹಿತವನ್ನುಂಟು ಮಾಡಿ, ಇತರರಿಗೆ ಅವಶ್ಯವಿರುವ ಮಾತುಗಳನ್ನು ಮಾತ್ರ ಆಡಿರಿ.
Let no corrupt speech go out of your mouth, rather if there is any good word for edification of a need, so that it may give grace to those who hear.
30 ದೇವರ ಪವಿತ್ರಾತ್ಮರನ್ನು ದುಃಖ ಪಡಿಸಬೇಡಿರಿ. ಆ ಆತ್ಮನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.
And do not grieve the Holy Spirit of God, in which ye are sealed for a day of redemption.
31 ಎಲ್ಲಾ ಕಹಿತನ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಎಲ್ಲಾ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.
Let all bitterness, and wrath, and anger, and clamor, and reviling be taken away from you, with all evil.
32 ನೀವು ದಯೆಯುಳ್ಳವರೂ ಮೃದು ಹೃದಯುಳ್ಳವರೂ ಆಗಿದ್ದು, ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಸಹ ಒಬ್ಬರೊನ್ನಬ್ಬರನ್ನು ಕ್ಷಮಿಸಿರಿ.
And become good toward each other, compassionate, forgiving each other, even as also God in Christ forgave us.