< ಎಫೆಸದವರಿಗೆ ಬರೆದ ಪತ್ರಿಕೆ 3 >
1 ಈ ಕಾರಣದಿಂದ ಯೆಹೂದ್ಯರಲ್ಲದವರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೆಂಬ ನಾನು ಹೇಳುವುದೇನೆಂದರೆ:
અતો હેતો ર્ભિન્નજાતીયાનાં યુષ્માકં નિમિત્તં યીશુખ્રીષ્ટસ્ય બન્દી યઃ સોઽહં પૌલો બ્રવીમિ|
2 ನಿಮಗೋಸ್ಕರವಾಗಿ ನನಗೆ ಕೊಡಲಾದ ದೇವರ ಕೃಪೆಯ ಕಾರ್ಯಭಾರವನ್ನು ನೀವು ಕೇಳಿದ್ದೀರಿ,
યુષ્મદર્થમ્ ઈશ્વરેણ મહ્યં દત્તસ્ય વરસ્ય નિયમઃ કીદૃશસ્તદ્ યુષ્માભિરશ્રાવીતિ મન્યે|
3 ಅವರು ರಹಸ್ಯವನ್ನು ಪ್ರಕಟನೆಯಿಂದ ನನಗೆ ತಿಳಿಸಿದರೆಂದು ನಾನು ನಿಮಗೆ ಮೊದಲೇ ಸಂಕ್ಷೇಪವಾಗಿ ಬರೆದಿದ್ದೇನೆ.
અર્થતઃ પૂર્વ્વં મયા સંક્ષેપેણ યથા લિખિતં તથાહં પ્રકાશિતવાક્યેનેશ્વરસ્ય નિગૂઢં ભાવં જ્ઞાપિતોઽભવં|
4 ಅದನ್ನು ನೀವು ಓದಿದರೆ ಕ್ರಿಸ್ತನ ರಹಸ್ಯದ ಕುರಿತಾಗಿ ನನಗಿರುವ ಒಳನೋಟವನ್ನು ನೀವೇ ಅರ್ಥಮಾಡಿಕೊಳ್ಳುವಿರಿ.
અતો યુષ્માભિસ્તત્ પઠિત્વા ખ્રીષ્ટમધિ તસ્મિન્નિગૂઢે ભાવે મમ જ્ઞાનં કીદૃશં તદ્ ભોત્સ્યતે|
5 ಈ ರಹಸ್ಯವು ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ದೇವರಾತ್ಮರ ಮೂಲಕ ಈಗ ಪ್ರಕಟಿಸಿದಂತೆ, ಬೇರೆ ತಲೆಮಾರುಗಳಲ್ಲಿದ್ದ ಜನರಿಗೆ ತಿಳಿಸಿರಲಿಲ್ಲ.
પૂર્વ્વયુગેષુ માનવસન્તાનાસ્તં જ્ઞાપિતા નાસન્ કિન્ત્વધુના સ ભાવસ્તસ્ય પવિત્રાન્ પ્રેરિતાન્ ભવિષ્યદ્વાદિનશ્ચ પ્રત્યાત્મના પ્રકાશિતોઽભવત્;
6 ಸುವಾರ್ತೆಯ ಮೂಲಕ ಯೆಹೂದ್ಯರಲ್ಲದವರೂ ಸಹ ಇಸ್ರಾಯೇಲರೊಂದಿಗೆ ವಾರಸುದಾರರೂ ಒಂದೇ ದೇಹದ ಅವಯವಗಳೂ ಕ್ರಿಸ್ತ ಯೇಸುವಿನಲ್ಲಿ ದೇವರ ವಾಗ್ದಾನದ ಸಹಪಾಲುಗಾರರೂ ಆಗಿರಬೇಕೆಂಬುದೇ ಈ ರಹಸ್ಯ.
અર્થત ઈશ્વરસ્ય શક્તેઃ પ્રકાશાત્ તસ્યાનુગ્રહેણ યો વરો મહ્યમ્ અદાયિ તેનાહં યસ્ય સુસંવાદસ્ય પરિચારકોઽભવં,
7 ದೇವರ ಶಕ್ತಿಯ ಕ್ರಿಯೆಯಿಂದ ನನಗೆ ಕೊಡಲಾದ ಅವರ ದೇವ ಕೃಪಾದಾನಕ್ಕೆ ಅನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು.
તદ્વારા ખ્રીષ્ટેન ભિન્નજાતીયા અન્યૈઃ સાર્દ્ધમ્ એકાધિકારા એકશરીરા એકસ્યાઃ પ્રતિજ્ઞાયા અંશિનશ્ચ ભવિષ્યન્તીતિ|
8 ನಾನು ಕರ್ತನ ಜನರೆಲ್ಲರಲ್ಲಿಯೂ ಅತ್ಯಲ್ಪನಾಗಿದ್ದೇನೆ. ಹಾಗಿದ್ದರೂ, ನನಗೆ ಈ ಕೃಪೆ ಕೊಡಲಾಯಿತು: ಏಕೆಂದರೆ, ನಾನು ಕ್ರಿಸ್ತನ ಅಪರಿಮಿತವಾದ ಐಶ್ವರ್ಯವನ್ನು ಯೆಹೂದ್ಯರಲ್ಲದವರಿಗೆ ಸಾರುವಂತೆಯೂ
સર્વ્વેષાં પવિત્રલોકાનાં ક્ષુદ્રતમાય મહ્યં વરોઽયમ્ અદાયિ યદ્ ભિન્નજાતીયાનાં મધ્યે બોધાગયસ્ય ગુણનિધેઃ ખ્રીષ્ટસ્ય મઙ્ગલવાર્ત્તાં પ્રચારયામિ,
9 ಸಮಸ್ತವನ್ನೂ ಸೃಷ್ಟಿಸಿದ ದೇವರಲ್ಲಿ ಲೋಕಾದಿಯಿಂದ ಮರೆಯಾಗಿದ್ದ ಕಾರ್ಯಭಾರದ ರಹಸ್ಯವು ಏನೆಂಬುದನ್ನು ಎಲ್ಲರಿಗೂ ಸ್ಪಷ್ಟಪಡಿಸುವುದಕ್ಕಾಗಿಯೂ ಆಗಿರುತ್ತದೆ. (aiōn )
કાલાવસ્થાતઃ પૂર્વ્વસ્માચ્ચ યો નિગૂઢભાવ ઈશ્વરે ગુપ્ત આસીત્ તદીયનિયમં સર્વ્વાન્ જ્ઞાપયામિ| (aiōn )
10 ಬಹು ಪ್ರಕಾರದ ದೇವರ ಜ್ಞಾನವು ಪರಲೋಕದಲ್ಲಿ ರಾಜತ್ವಗಳಿಗೂ ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂಬುದೇ ದೇವರ ಉದ್ದೇಶ.
યત ઈશ્વરસ્ય નાનારૂપં જ્ઞાનં યત્ સામ્પ્રતં સમિત્યા સ્વર્ગે પ્રાધાન્યપરાક્રમયુક્તાનાં દૂતાનાં નિકટે પ્રકાશ્યતે તદર્થં સ યીશુના ખ્રીષ્ટેન સર્વ્વાણિ સૃષ્ટવાન્|
11 ಹೀಗೆ ದೇವರು ತಮ್ಮ ನಿತ್ಯ ಉದ್ದೇಶದ ಪ್ರಕಾರ ಇದನ್ನು ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನೆರವೇರಿಸಿದರು. (aiōn )
યતો વયં યસ્મિન્ વિશ્વસ્ય દૃઢભક્ત્યા નિર્ભયતામ્ ઈશ્વરસ્ય સમાગમે સામર્થ્યઞ્ચ
12 ಕ್ರಿಸ್ತನಲ್ಲಿಯೂ ಕ್ರಿಸ್ತನ ಮೇಲೆ ನಂಬಿಕೆಯನ್ನಿಡುವುದರ ಮೂಲಕವೂ ನಾವು ಸ್ವಾತಂತ್ರ್ಯದಿಂದಲೂ ಭರವಸೆಯಿಂದಲೂ ದೇವರನ್ನು ಸಮೀಪಿಸಲು ಈಗ ಸಾಧ್ಯ.
પ્રાપ્તવન્તસ્તમસ્માકં પ્રભું યીશું ખ્રીષ્ટમધિ સ કાલાવસ્થાયાઃ પૂર્વ્વં તં મનોરથં કૃતવાન્| (aiōn )
13 ಆದ್ದರಿಂದ, ನಿಮಗಾಗಿ ನನಗುಂಟಾದ ಸಂಕಟಗಳು ನಿಮಗೆ ಮಹಿಮೆಯಾಗಿರುವುದರಿಂದ, ನೀವು ಧೈರ್ಯಗೆಡಬಾರದೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
અતોઽહં યુષ્મન્નિમિત્તં દુઃખભોગેન ક્લાન્તિં યન્ન ગચ્છામીતિ પ્રાર્થયે યતસ્તદેવ યુષ્માકં ગૌરવં|
14 ಈ ಕಾರಣದಿಂದ, ಪರಲೋಕ ಭೂಲೋಕದಲ್ಲಿರುವ ಪ್ರತಿ ಕುಟುಂಬವೂ ಹೆಸರು ಪಡೆದಿರಲು ಕಾರಣವಾಗಿರುವ ತಂದೆಯ ಮುಂದೆ ನಾನು ಮೊಣಕಾಲೂರುತ್ತೇನೆ:
અતો હેતોઃ સ્વર્ગપૃથિવ્યોઃ સ્થિતઃ કૃત્સ્નો વંશો યસ્ય નામ્ના વિખ્યાતસ્તમ્
અસ્મત્પ્રભો ર્યીશુખ્રીષ્ટસ્ય પિતરમુદ્દિશ્યાહં જાનુની પાતયિત્વા તસ્ય પ્રભાવનિધિતો વરમિમં પ્રાર્થયે|
16 ದೇವರು ತಮ್ಮ ಮಹಿಮೆಯ ಐಶ್ವರ್ಯಕ್ಕನುಸಾರವಾಗಿ ತಮ್ಮ ಆತ್ಮನ ಮೂಲಕ ನಿಮ್ಮನ್ನು ಆಂತರ್ಯದಲ್ಲಿ ಶಕ್ತಿಯಿಂದ ಬಲಪಡಿಸಲಿ ಎಂದು ಪ್ರಾರ್ಥಿಸುತ್ತೇನೆ.
તસ્યાત્મના યુષ્માકમ્ આન્તરિકપુરુષસ્ય શક્તે ર્વૃદ્ધિઃ ક્રિયતાં|
17 ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಲಿ. ನೀವು ಪ್ರೀತಿಯಲ್ಲಿ ಬೇರೂರಿ ನೆಲೆಗೊಂಡು ನಿಂತು
ખ્રીષ્ટસ્તુ વિશ્વાસેન યુષ્માકં હૃદયેષુ નિવસતુ| પ્રેમણિ યુષ્માકં બદ્ધમૂલત્વં સુસ્થિરત્વઞ્ચ ભવતુ|
18 ದೇವರ ಪರಿಶುದ್ಧರೆಲ್ಲರೊಂದಿಗೆ ಅದರ ಅಗಲ, ಉದ್ದ, ಆಳ ಮತ್ತು ಎತ್ತರವನ್ನು ಪೂರ್ಣವಾಗಿ ಕ್ರಿಸ್ತನ ಪ್ರೀತಿಯನ್ನು ಅರಿಯುವುದಕ್ಕೆ ಶಕ್ತರಾಗಲಿ.
ઇત્થં પ્રસ્થતાયા દીર્ઘતાયા ગભીરતાયા ઉચ્ચતાયાશ્ચ બોધાય સર્વ્વૈઃ પવિત્રલોકૈઃ પ્રાપ્યં સામર્થ્યં યુષ્માભિ ર્લભ્યતાં,
19 ಮತ್ತು ತಿಳುವಳಿಕೆಗೆ ಅಪಾರವಾದ ಕ್ರಿಸ್ತನ ಪ್ರೀತಿಯನ್ನು ನೀವು ತಿಳಿದುಕೊಂಡು ದೇವರ ಸರ್ವಸಂಪೂರ್ಣತೆಯಿಂದ ತುಂಬಿದವರಾಗಲಿ ಎಂದು ಅವರನ್ನು ಬೇಡಿಕೊಳ್ಳುತ್ತೇನೆ.
જ્ઞાનાતિરિક્તં ખ્રીષ્ટસ્ય પ્રેમ જ્ઞાયતામ્ ઈશ્વરસ્ય સમ્પૂર્ણવૃદ્ધિપર્ય્યન્તં યુષ્માકં વૃદ્ધિ ર્ભવતુ ચ|
20 ನಮ್ಮಲ್ಲಿ ಕಾರ್ಯಸಾಧಿಸುವ ತಮ್ಮ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾಗಿಯೇ ಎಲ್ಲವನ್ನೂ ಮಾಡಲು ಶಕ್ತರಾದ ದೇವರಿಗೆ
અસ્માકમ્ અન્તરે યા શક્તિઃ પ્રકાશતે તયા સર્વ્વાતિરિક્તં કર્મ્મ કુર્વ્વન્ અસ્માકં પ્રાર્થનાં કલ્પનાઞ્ચાતિક્રમિતું યઃ શક્નોતિ
21 ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆ ಉಂಟಾಗಲಿ. ಆಮೆನ್. (aiōn )
ખ્રીષ્ટયીશુના સમિતે ર્મધ્યે સર્વ્વેષુ યુગેષુ તસ્ય ધન્યવાદો ભવતુ| ઇતિ| (aiōn )