< ಪ್ರಸಂಗಿ 1 >
1 ದಾವೀದನ ಮಗನೂ ಯೆರೂಸಲೇಮಿನ ಅರಸನೂ ಆದ ಪ್ರಸಂಗಿಯ ಮಾತುಗಳು:
達味之子耶路撒冷的君王「訓道者」的語錄:
2 “ವ್ಯರ್ಥಗಳಲ್ಲಿ ವ್ಯರ್ಥ! ವ್ಯರ್ಥಗಳಲ್ಲಿ ವ್ಯರ್ಥ!” ಎಂದು ಪ್ರಸಂಗಿ ಹೇಳುತ್ತಾನೆ. “ಸಮಸ್ತವೂ ವ್ಯರ್ಥ! ಎಲ್ಲವೂ ವ್ಯರ್ಥ.”
虛而又虛,訓道者說:虛而又虛,萬事皆虛。
3 ಸೂರ್ಯನ ಕೆಳಗೆ ಮನುಷ್ಯನು ಪಡುವ ಎಲ್ಲಾ ಪ್ರಯಾಸಗಳಿಂದ ಅವನಿಗೆ ಲಾಭವೇನು?
人在太陽下辛勤勞作,為人究有何益﹖
4 ಸಂತತಿಗಳು ಬರುತ್ತವೆ, ಸಂತತಿಗಳು ಹೋಗುತ್ತವೆ; ಆದರೆ ಭೂಮಿಯು ಶಾಶ್ವತವಾಗಿ ಉಳಿಯುತ್ತದೆ.
一代過去,一代又來,大地仍然常在。
5 ಸೂರ್ಯನು ಉದಯಿಸುತ್ತಾನೆ, ಸೂರ್ಯನು ಮುಳುಗುತ್ತಾನೆ. ತಾನು ಉದಯಿಸುವ ಸ್ಥಳಕ್ಕೆ ಆತುರದಿಂದ ಹಿಂದಿರುಗುತ್ತಾನೆ.
太陽升起,太陽落下,匆匆趕回原處,從新再升。
6 ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ. ಉತ್ತರದ ಕಡೆಗೆ ತಿರುಗುತ್ತದೆ. ಸುತ್ತುತ್ತಾ, ಸುತ್ತುತ್ತಾ ಹೋಗುತ್ತದೆ. ಆ ಗಾಳಿಯು ತನ್ನ ಸುತ್ತಳತೆಗಳ ಪ್ರಕಾರ ಹಿಂದಿರುಗುತ್ತದೆ.
風吹向南,又轉向北,旋轉不息,循環周行。
7 ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತವೆ. ಆದರೂ ಸಮುದ್ರವು ತುಂಬುವುದಿಲ್ಲ. ನದಿಗಳು ಎಲ್ಲಿಂದ ಬಂದಿವೆಯೋ, ಆ ಸ್ಥಳಕ್ಕೆ ಅವು ಹಿಂದಿರುಗುತ್ತವೆ.
江河流入大海,大海總不滿溢;江河仍向所往之處,川流不息。
8 ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿವೆ. ಇದನ್ನು ಮನುಷ್ಯನು ವಿವರಿಸಲಾರನು. ನೋಡುವುದರಿಂದ ಕಣ್ಣು ತೃಪ್ತಿಗೊಳ್ಳದು, ಕೇಳುವುದರಿಂದ ಕಿವಿಯು ದಣಿಯದು.
萬事皆辛勞,無人能盡言:眼看,看不夠;耳聽,聽不飽。
9 ಇದ್ದದ್ದೇ ಇರುವುದು, ನಡೆದದ್ದೇ ನಡೆಯುವುದು. ಸೂರ್ಯನ ಕೆಳಗೆ ಹೊಸದಾದದ್ದು ಯಾವದೂ ಇಲ್ಲ.
往昔所有的,將來會再有;昔日所行的,將來會再行;太陽之下決無新事。
10 “ನೋಡು, ಇದು ಹೊಸದು,” ಎಂದು ಯಾವ ವಿಷಯವಾಗಿ ಹೇಳಬಹುದೋ? ಅದು ನಮಗಿಂತ ಮುಂಚೆ ಇದ್ದದ್ದು, ಪುರಾತನ ಕಾಲದಿಂದ ಇದ್ದದ್ದೇ.
若有人指著某事說:「看,這是新事。」豈不知在我們以前早就有過。
11 ಹಿಂದಿನ ಕಾಲದ ಜನರ ಜ್ಞಾಪಕವು ಈಗಿನವರಿಗಿಲ್ಲ. ಮುಂದಿನ ಕಾಲದಲ್ಲಿ ಬರುವವರ ಜ್ಞಾಪಕವು ಅವುಗಳ ಮುಂದಿನ ಕಾಲದ ಜನರಿಗೆ ಇರುವುದಿಲ್ಲ.
只是對往者,沒有人去追憶;同樣,對來者,也不會為後輩所記念。
12 ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲರ ಮೇಲೆ ಅರಸನಾಗಿದ್ದೆ.
我訓道者,曾在耶路撒冷作過以色列的君王。
13 ಆಕಾಶದ ಕೆಳಗೆ ನಡೆಯುವ ಕೆಲಸಗಳನ್ನೆಲ್ಲಾ ಜ್ಞಾನದಿಂದ ವಿಚಾರಿಸಿ, ವಿಮರ್ಶಿಸುವುದಕ್ಕೆ ನಾನು ನನ್ನ ಮನಸ್ಸು ಮಾಡಿದೆ. ದೇವರು ಮಾನವರ ಮೇಲೆ ಈ ಕಷ್ಟಕರವಾದ ಪ್ರಯಾಸವನ್ನು ಹೊರಿಸಿದ್ದಾರೆ.
我曾專心用智慧考查研究過天下所發生的一切;--這實在是天主賜與人類的一項艱辛的工作。
14 ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ. ಗಾಳಿಯನ್ನು ಹಿಂದಟ್ಟುವಂತೆ ಎಲ್ಲವೂ ವ್ಯರ್ಥ.
我觀察了在太陽下所發生的一切:看,都是空虛,都是追風。
15 ವಕ್ರವಾದದ್ದನ್ನು ಸರಿಮಾಡುವುದಕ್ಕೆ ಆಗುವುದಿಲ್ಲ. ಇಲ್ಲದ್ದನ್ನು ಲೆಕ್ಕಿಸುವುದು ಅಸಾಧ್ಯ.
彎曲的,不能使之正直,虧缺的,實在不可勝數。
16 ನನ್ನಷ್ಟಕ್ಕೆ ನಾನೇ ಹೀಗೆಂದುಕೊಂಡೆನು, “ನೋಡು, ಯೆರೂಸಲೇಮಿನಲ್ಲಿ ನನಗಿಂತ ಮೊದಲು ಆಳಿದವರಿಗಿಂತ ನಾನು ಹೆಚ್ಚು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ಹಾಗೂ ತಿಳುವಳಿಕೆಯ ಅನುಭವ ನನಗಿದೆ.”
我心裏自語說:「看,我獲得了又大又多的智慧,勝過了所有在我以前住在耶路撒冷的人,我的心獲得了許多智慧和學問。」
17 ಆಗ ಜ್ಞಾನವನ್ನೂ ಮನಗುಂದುವಿಕೆಯನ್ನೂ ಬುದ್ಧಿಹೀನತೆಯನ್ನೂ ತಿಳಿದುಕೊಳ್ಳುವಂತೆ ನಾನು ಮನಸ್ಸಿಟ್ಟೆನು, ಅದರ ಜೊತೆಗೆ ಇದು ಸಹ ಗಾಳಿಯನ್ನು ಬೆನ್ನಟ್ಟಿದಂತೆ, ಎಂದು ನಾನು ಅರಿತುಕೊಂಡೆನು.
我再專心研究智慧和學問,愚昧和狂妄,我纔發覺:連這項工作也是追風。
18 ಏಕೆಂದರೆ ಬಹು ಜ್ಞಾನವಿದ್ದಲ್ಲಿ ಬಹು ಸಂಕಟ, ಹೆಚ್ಚು ತಿಳುವಳಿಕೆ ಇದ್ದಲ್ಲಿ ಹೆಚ್ಚು ವ್ಯಥೆ ಇದೆ.
因為,智慧愈多,煩惱愈多;學問越廣,憂慮越深。