< ಧರ್ಮೋಪದೇಶಕಾಂಡ 32 >

1 ಆಕಾಶವೇ, ಕಿವಿಗೊಡು. ನಾನು ಮಾತನಾಡುತ್ತೇನೆ. ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಕೇಳು.
הַאֲזִינוּ הַשָּׁמַיִם וַאֲדַבֵּרָה וְתִשְׁמַע הָאָרֶץ אִמְרֵי־פִֽי׃
2 ನನ್ನ ಬೋಧನೆ ಮಳೆಯಂತೆ ಸುರಿಯುವುದು. ನನ್ನ ಮಾತು ಮಂಜಿನಂತೆಯೂ, ಹುಲ್ಲಿನ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವುದು.
יַעֲרֹף כַּמָּטָר לִקְחִי תִּזַּל כַּטַּל אִמְרָתִי כִּשְׂעִירִם עֲלֵי־דֶשֶׁא וְכִרְבִיבִים עֲלֵי־עֵֽשֶׂב׃
3 ಏಕೆಂದರೆ ಯೆಹೋವ ದೇವರ ಹೆಸರನ್ನು ನಾನು ಸಾರುತ್ತೇನೆ. ನಮ್ಮ ದೇವರಿಗೆ ಮಹತ್ವವನ್ನು ಕೊಡಿರಿ.
כִּי שֵׁם יְהֹוָה אֶקְרָא הָבוּ גֹדֶל לֵאלֹהֵֽינוּ׃
4 ದೇವರು ಸಂರಕ್ಷಿಸುವ ಬಂಡೆ. ದೇವರ ಕಾರ್ಯವು ಸಂಪೂರ್ಣವಾದದ್ದು. ಅವರ ಮಾರ್ಗಗಳೆಲ್ಲಾ ನ್ಯಾಯವಾಗಿವೆ. ಅವರು ಯಾವ ತಪ್ಪನ್ನೂ ಮಾಡದ ನಂಬಿಗಸ್ತ ದೇವರು, ನೀತಿವಂತರೂ ಯಥಾರ್ಥರೂ ಆದ ದೇವರು.
הַצּוּר תָּמִים פׇּֽעֳלוֹ כִּי כׇל־דְּרָכָיו מִשְׁפָּט אֵל אֱמוּנָה וְאֵין עָוֶל צַדִּיק וְיָשָׁר הֽוּא׃
5 ಇಸ್ರಾಯೇಲರು ತಮ್ಮನ್ನು ಕೆಡಿಸಿಕೊಂಡರು. ದೇವರ ಮಕ್ಕಳಿಗೆ ತಕ್ಕಂತೆ ನಡೆಯದವರು. ಅವರು ಮೂರ್ಖರಾದ ವಕ್ರ ಸಂತತಿ.
שִׁחֵת לוֹ לֹא בָּנָיו מוּמָם דּוֹר עִקֵּשׁ וּפְתַלְתֹּֽל׃
6 ಯೆಹೋವ ದೇವರಿಗೆ ಪ್ರತಿಯಾಗಿ ಹೀಗೆ ವರ್ತಿಸುವುದು ಸರಿಯೋ? ಜ್ಞಾನವಿಲ್ಲದ ಬುದ್ಧಿಹೀನ ಜನರೇ, ದೇವರು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೋ? ನಿಮ್ಮನ್ನು ಸೃಷ್ಟಿಸಿ ಸ್ಥಿರಪಡಿಸಿದ್ದು ದೇವರಲ್ಲವೋ?
הַ לְיְהֹוָה תִּגְמְלוּ־זֹאת עַם נָבָל וְלֹא חָכָם הֲלוֹא־הוּא אָבִיךָ קָּנֶךָ הוּא עָשְׂךָ וַֽיְכֹנְנֶֽךָ׃
7 ಪೂರ್ವದ ದಿವಸಗಳನ್ನು ಜ್ಞಾಪಕಮಾಡಿಕೊಳ್ಳಿರಿ. ತಲತಲಾಂತರಗಳ ವರುಷಗಳನ್ನು ಗ್ರಹಿಸಿಕೊಳ್ಳಿರಿ. ನಿಮ್ಮ ತಂದೆಯನ್ನು ಕೇಳಿದರೆ, ಅವರು ನಿಮಗೆ ತಿಳಿಸುವರು. ನಿಮ್ಮ ಹಿರಿಯರನ್ನು ಕೇಳಿದರೆ, ಅವರು ನಿಮಗೆ ಹೇಳುವರು.
זְכֹר יְמוֹת עוֹלָם בִּינוּ שְׁנוֹת דֹּר־וָדֹר שְׁאַל אָבִיךָ וְיַגֵּדְךָ זְקֵנֶיךָ וְיֹאמְרוּ לָֽךְ׃
8 ಮಹೋನ್ನತ ದೇವರು ಜನಾಂಗಗಳಿಗೆ ಸ್ಥಳವನ್ನು ಕೊಡುವಾಗಲೂ, ಅವರು ಮಾನವರನ್ನು ವಿಂಗಡಿಸುವಾಗಲೂ, ಇಸ್ರಾಯೇಲರ ಲೆಕ್ಕದ ಪ್ರಕಾರ ಜನರ ಮೇರೆಗಳನ್ನು ಗುರುತಿಸಿಕೊಂಡರು.
בְּהַנְחֵל עֶלְיוֹן גּוֹיִם בְּהַפְרִידוֹ בְּנֵי אָדָם יַצֵּב גְּבֻלֹת עַמִּים לְמִסְפַּר בְּנֵי יִשְׂרָאֵֽל׃
9 ಏಕೆಂದರೆ ಯೆಹೋವ ದೇವರ ಪಾಲು ಅವರ ಜನರೇ ಆಗಿರುತ್ತಾರೆ. ಯಾಕೋಬ್ಯರೇ ದೇವರ ಸೊತ್ತಿನ ಪಾಲು.
כִּי חֵלֶק יְהֹוָה עַמּוֹ יַעֲקֹב חֶבֶל נַחֲלָתֽוֹ׃
10 ದೇವರು ಬರಿದಾದ ಮರುಭೂಮಿಯಲ್ಲಿ ಇಸ್ರಾಯೇಲರನ್ನು ಕಂಡು ನಡೆಸಿದರು. ದೇವರು ಇಸ್ರಾಯೇಲರನ್ನು ರಕ್ಷಿಸಿ, ಉಪದೇಶಿಸಿ, ತಮ್ಮ ಕಣ್ಣುಗುಡ್ಡೆಯಂತೆ ಕಾಪಾಡಿದರು.
יִמְצָאֵהוּ בְּאֶרֶץ מִדְבָּר וּבְתֹהוּ יְלֵל יְשִׁמֹן יְסֹבְבֶנְהוּ יְבוֹנְנֵהוּ יִצְּרֶנְהוּ כְּאִישׁוֹן עֵינֽוֹ׃
11 ಹದ್ದು ತನ್ನ ಗೂಡಿನಿಂದ ಮರಿಗಳನ್ನು ಹೊರಡಿಸಿ, ಅವುಗಳ ಮೇಲೆ ರೆಕ್ಕೆಯನ್ನಾಡಿಸಿ, ತನ್ನ ರೆಕ್ಕೆಗಳನ್ನು ಚಾಚಿ, ಅವುಗಳನ್ನು ತೆಗೆದುಕೊಂಡು ರೆಕ್ಕೆಯ ಮೇಲೆ ಎತ್ತಿಕೊಳ್ಳುವಂತೆ,
כְּנֶשֶׁר יָעִיר קִנּוֹ עַל־גּוֹזָלָיו יְרַחֵף יִפְרֹשׂ כְּנָפָיו יִקָּחֵהוּ יִשָּׂאֵהוּ עַל־אֶבְרָתֽוֹ׃
12 ಯೆಹೋವ ದೇವರು ಮಾತ್ರವೇ ಇಸ್ರಾಯೇಲರನ್ನು ನಡೆಸಿಕೊಂಡು ಬಂದರು. ಅನ್ಯದೇವರು ಯಾರೂ ಇಸ್ರಾಯೇಲರ ಸಂಗಡ ಇರಲಿಲ್ಲ.
יְהֹוָה בָּדָד יַנְחֶנּוּ וְאֵין עִמּוֹ אֵל נֵכָֽר׃
13 ದೇವರು ಅವರನ್ನು ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ, ಅವರಿಗೆ ವ್ಯವಸಾಯ ವೃದ್ಧಿಯನ್ನುಂಟುಮಾಡಿ, ಬಂಡೆಯಿಂದ ಜೇನೂ, ಗಿರಿಯಿಂದ ಎಣ್ಣೆಯೂ ದೊರೆಯುವಂತೆ ಮಾಡಿದರು.
יַרְכִּבֵהוּ עַל־[בָּמֳתֵי] (במותי) אָרֶץ וַיֹּאכַל תְּנוּבֹת שָׂדָי וַיֵּנִקֵהֽוּ דְבַשׁ מִסֶּלַע וְשֶׁמֶן מֵחַלְמִישׁ צֽוּר׃
14 ಹಸುಗಳ ಕೆನೆಯನ್ನೂ, ಕುರಿಗಳ ಹಾಲನ್ನೂ, ಕುರಿಮರಿಗಳ ಕೊಬ್ಬಿನ ಸಂಗಡ ಬಾಷಾನಿನ ಟಗರುಗಳನ್ನೂ ಹೋತಗಳನ್ನೂ ಉತ್ತಮವಾದ ಗೋಧಿಯನ್ನು ಕೊಟ್ಟರು. ನೀನು ರಕ್ತಗೆಂಪಾದ ದ್ರಾಕ್ಷಾರಸವನ್ನು ಕುಡಿದೆ.
חֶמְאַת בָּקָר וַחֲלֵב צֹאן עִם־חֵלֶב כָּרִים וְאֵילִים בְּנֵֽי־בָשָׁן וְעַתּוּדִים עִם־חֵלֶב כִּלְיוֹת חִטָּה וְדַם־עֵנָב תִּשְׁתֶּה־חָֽמֶר׃
15 ಯೆಶುರೂನು ಎಂಬ ಇಸ್ರಾಯೇಲರು ಕೊಬ್ಬಿ ಹೋದರು. ಅವರು ಹೊಟ್ಟೆ ತುಂಬ ಚೆನ್ನಾಗಿ ತಿಂದು ದಪ್ಪವಾದರು. ಅವರು ತಮ್ಮನ್ನು ಸೃಷ್ಟಿಮಾಡಿದ ದೇವರನ್ನು ಬಿಟ್ಟು, ತಮ್ಮ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದರು.
וַיִּשְׁמַן יְשֻׁרוּן וַיִּבְעָט שָׁמַנְתָּ עָבִיתָ כָּשִׂיתָ וַיִּטֹּשׁ אֱלוֹהַּ עָשָׂהוּ וַיְנַבֵּל צוּר יְשֻׁעָתֽוֹ׃
16 ಅನ್ಯದೇವತೆಗಳಿಂದ ದೇವರಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ದೇವರಿಗೆ ಕೋಪವನ್ನು ಎಬ್ಬಿಸಿದರು.
יַקְנִאֻהוּ בְּזָרִים בְּתוֹעֵבֹת יַכְעִיסֻֽהוּ׃
17 ದೇವರಿಗೆ ಅಲ್ಲ, ದೆವ್ವಗಳಿಗೆ, ಅವರು ಮುಂಚಿತವಾಗಿ ಅರಿಯದ ದೇವರುಗಳಿಗೆ, ಸಮೀಪದಲ್ಲಿ ಹೊಸದಾಗಿ ತೋರಿ ಬಂದ ದೇವರುಗಳಿಗೆ, ಅಂದರೆ, ಅವರ ಪಿತೃಗಳು ಭಜಿಸದವುಗಳಿಗೆ ಬಲಿ ಅರ್ಪಿಸಿದರು.
יִזְבְּחוּ לַשֵּׁדִים לֹא אֱלֹהַּ אֱלֹהִים לֹא יְדָעוּם חֲדָשִׁים מִקָּרֹב בָּאוּ לֹא שְׂעָרוּם אֲבֹתֵיכֶֽם׃
18 ನಿಮ್ಮನ್ನು ಹುಟ್ಟಿಸಿದ ರಕ್ಷಣಾಬಂಡೆಯನ್ನು ನೆನಸದೆ, ನಿಮ್ಮನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿರಿ.
צוּר יְלָדְךָ תֶּשִׁ י וַתִּשְׁכַּח אֵל מְחֹלְלֶֽךָ׃
19 ಯೆಹೋವ ದೇವರು ಅದನ್ನು ನೋಡಿ ಬೇಸರದಿಂದ ತಮ್ಮ ಪುತ್ರಪುತ್ರಿಯರನ್ನು ದಂಡಿಸಿದರು.
וַיַּרְא יְהֹוָה וַיִּנְאָץ מִכַּעַס בָּנָיו וּבְנֹתָֽיו׃
20 ದೇವರು, “ನನ್ನ ಮುಖವನ್ನು ಅವರಿಗೆ ಮರೆಮಾಡುವೆನು, ಅವರ ಅಂತ್ಯವು ಏನೆಂದು ನೋಡುವೆನು. ಅವರು ಮೂರ್ಖ ಸಂತತಿಯೇ. ನಂಬಿಕೆಯಿಲ್ಲದ ಮಕ್ಕಳೇ.
וַיֹּאמֶר אַסְתִּירָה פָנַי מֵהֶם אֶרְאֶה מָה אַחֲרִיתָם כִּי דוֹר תַּהְפֻּכֹת הֵמָּה בָּנִים לֹא־אֵמֻן בָּֽם׃
21 ದೇವರಲ್ಲದವುಗಳಿಂದ ಅವರು ನನಗೆ ರೋಷ ಹುಟ್ಟಿಸಿದರು. ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪವನ್ನು ಎಬ್ಬಿಸಿದರು. ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.
הֵם קִנְאוּנִי בְלֹא־אֵל כִּעֲסוּנִי בְּהַבְלֵיהֶם וַֽאֲנִי אַקְנִיאֵם בְּלֹא־עָם בְּגוֹי נָבָל אַכְעִיסֵֽם׃
22 ಏಕೆಂದರೆ ನನ್ನ ರೋಷ ಬೆಂಕಿಯಂತಿದೆ, ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ, ಅದರ ಫಲವನ್ನೂ ತಿಂದು ಬಿಟ್ಟು, ಬೆಟ್ಟಗಳ ಅಸ್ತಿವಾರವನ್ನು ದಹಿಸುವುದು. (Sheol h7585)
כִּי־אֵשׁ קָדְחָה בְאַפִּי וַתִּיקַד עַד־שְׁאוֹל תַּחְתִּית וַתֹּאכַל אֶרֶץ וִֽיבֻלָהּ וַתְּלַהֵט מוֹסְדֵי הָרִֽים׃ (Sheol h7585)
23 “ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿಡುವೆನು. ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು.
אַסְפֶּה עָלֵימוֹ רָעוֹת חִצַּי אֲכַלֶּה־בָּֽם׃
24 ಅವರು ಹಸಿವೆಯಿಂದ ಬಳಲಿ ಹೋಗುವರು, ಜ್ವಾಲೆಯಿಂದಲೂ ಕಠಿಣ ವ್ಯಾಧಿಯಿಂದಲೂ ಬೀಳುವರು. ಕಾಡುಮೃಗಗಳನ್ನೂ ಧೂಳಿನಲ್ಲಿರುವ ವಿಷಸರ್ಪಗಳನ್ನೂ ಅವರಿಗೆ ವಿರೋಧವಾಗಿ ಕಳುಹಿಸುವೆನು.
מְזֵי רָעָב וּלְחֻמֵי רֶשֶׁף וְקֶטֶב מְרִירִי וְשֶׁן־בְּהֵמֹת אֲשַׁלַּח־בָּם עִם־חֲמַת זֹחֲלֵי עָפָֽר׃
25 ಮನೆಯ ಹೊರಗೆ ಖಡ್ಗವೂ ಒಳಗೆ ಭಯವೂ ಇವರಲ್ಲಿರುವುವು. ಪ್ರಾಯಸ್ಥರೂ ಕನ್ನಿಕೆಯರೂ ನರೆಕೂದಲಿನವರೂ ಹಾಲು ಕುಡಿಯುವ ಕೂಸುಗಳೂ ಖಡ್ಗಗಳಿಗೆ ಸಂಹಾರವಾಗುವರು.
מִחוּץ תְּשַׁכֶּל־חֶרֶב וּמֵחֲדָרִים אֵימָה גַּם־בָּחוּר גַּם־בְּתוּלָה יוֹנֵק עִם־אִישׁ שֵׂיבָֽה׃
26 ನಾನು ಅವರನ್ನು ಚದರಿಸಿಬಿಡುವೆನು. ಅವರ ನೆನಪೇ ಮನುಷ್ಯರಲ್ಲಿ ಇರದ ಹಾಗೆ ಮಾಡುತ್ತಿದ್ದೆನು.
אָמַרְתִּי אַפְאֵיהֶם אַשְׁבִּיתָה מֵאֱנוֹשׁ זִכְרָֽם׃
27 ಆದರೆ ಅವರ ವಿರೋಧಿಗಳು ತಪ್ಪಾದ ಭಾವನೆ ಮಾಡಿಕೊಂಡು, ‘ಯೆಹೋವ ದೇವರು ಇವುಗಳನ್ನೆಲ್ಲಾ ಮಾಡಲಿಲ್ಲ, ನಾವೇ ನಮ್ಮ ಕೈಯಿಂದ ಜಯಿಸಿದೆವೆಂದುಕೊಳ್ಳುವರು,’ ಆದ್ದರಿಂದ ನಾನು ಹಿಂತಗೆದುಕೊಂಡೆನು.”
לוּלֵי כַּעַס אוֹיֵב אָגוּר פֶּֽן־יְנַכְּרוּ צָרֵימוֹ פֶּן־יֹֽאמְרוּ יָדֵנוּ רָמָה וְלֹא יְהֹוָה פָּעַל כׇּל־זֹֽאת׃
28 ಏಕೆಂದರೆ ಇಸ್ರಾಯೇಲರು ಆಲೋಚನೆ ಇಲ್ಲದ ಜನಾಂಗವೇ. ಅವರಲ್ಲಿ ವಿವೇಕವಿಲ್ಲ.
כִּי־גוֹי אֹבַד עֵצוֹת הֵמָּה וְאֵין בָּהֶם תְּבוּנָֽה׃
29 ಅವರಿಗೆ ಜ್ಞಾನವಿದ್ದಿದ್ದರೆ ಈ ವಿಷಯಗಳನ್ನೆಲ್ಲಾ ಗ್ರಹಿಸುತ್ತಿದ್ದರು, ತಮ್ಮ ಕಡೆಕಾಲದಲ್ಲಿ ದುರವಸ್ಥೆ ಪ್ರಾಪ್ತವಾಗುವದೆಂದು ತಿಳಿದುಕೊಳ್ಳುತ್ತಿದ್ದರು.
לוּ חָכְמוּ יַשְׂכִּילוּ זֹאת יָבִינוּ לְאַחֲרִיתָֽם׃
30 ಇಸ್ರಾಯೇಲ್ ರಕ್ಷಣಾಬಂಡೆ ಅವರನ್ನು ಮಾರಿ, ಯೆಹೋವ ದೇವರು ಅವರನ್ನು ಕೈಬಿಟ್ಟ ಹೊರತು, ಒಬ್ಬನು ಹೇಗೆ ಸಾವಿರ ಮಂದಿಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
אֵיכָה יִרְדֹּף אֶחָד אֶלֶף וּשְׁנַיִם יָנִיסוּ רְבָבָה אִם־לֹא כִּֽי־צוּרָם מְכָרָם וַֽיהֹוָה הִסְגִּירָֽם׃
31 ಏಕೆಂದರೆ ನಮ್ಮ ರಕ್ಷಣಾಬಂಡೆಯ ಹಾಗೆ ಅವರ ಬಂಡೆ ಅಲ್ಲ. ಇದಕ್ಕೆ ನಮ್ಮ ಶತ್ರುಗಳೇ ಸಾಕ್ಷಿ.
כִּי לֹא כְצוּרֵנוּ צוּרָם וְאֹיְבֵינוּ פְּלִילִֽים׃
32 ಏಕೆಂದರೆ ಸೊದೋಮಿನ ದ್ರಾಕ್ಷಿಗಿಡದಿಂದಲೂ, ಗೊಮೋರದ ತೋಟದೊಳಗಿಂದಲೂ ಅವರ ದ್ರಾಕ್ಷಿಗಿಡ ಉಂಟಾಯಿತು. ಅವರ ಹಣ್ಣುಗಳು, ವಿಷದ ಹಣ್ಣುಗಳು, ಆ ಹಣ್ಣುಗಳ ಗೊಂಚಲು ಕಹಿಯಾಗಿವೆ.
כִּֽי־מִגֶּפֶן סְדֹם גַּפְנָם וּמִשַּׁדְמֹת עֲמֹרָה עֲנָבֵמוֹ עִנְּבֵי־רוֹשׁ אַשְׁכְּלֹת מְרֹרֹת לָֽמוֹ׃
33 ಅವರ ದ್ರಾಕ್ಷಾರಸವು ಸರ್ಪಗಳ ವಿಷವೂ, ಹಾವುಗಳ ಕ್ರೂರ ವಿಷವೂ ಆಗಿದೆ.
חֲמַת תַּנִּינִם יֵינָם וְרֹאשׁ פְּתָנִים אַכְזָֽר׃
34 “ನಾನು ಇದನ್ನು ನನ್ನ ಉಗ್ರಾಣಗಳಲ್ಲಿ ಸಂಗ್ರಹಿಸಿದ್ದಲ್ಲವೋ? ಇದನ್ನು ನಾನು ಮುದ್ರಿಸಿದ್ದಲ್ಲವೋ?
הֲלֹא־הוּא כָּמֻס עִמָּדִי חָתוּם בְּאוֹצְרֹתָֽי׃
35 ಮುಯ್ಯಿಗೆ ಮುಯ್ಯಿ ತೀರಿಸುವುದೂ, ಪ್ರತಿಫಲ ಕೊಡುವುದೂ ನನ್ನದೇ. ತಕ್ಕ ಕಾಲದಲ್ಲಿ ಅವರ ಕಾಲು ಜಾರುವುದು. ಅವರ ವಿನಾಶದ ದಿವಸ ಸಮೀಪವಾಗಿದೆ. ಅವರಿಗೆ ಸಿದ್ಧವಾದ ದುರ್ಗತಿಯ ಕಾಲ ಬೇಗ ಬರುತ್ತವೆ.”
לִי נָקָם וְשִׁלֵּם לְעֵת תָּמוּט רַגְלָם כִּי קָרוֹב יוֹם אֵידָם וְחָשׁ עֲתִדֹת לָֽמוֹ׃
36 ಏಕೆಂದರೆ ಯೆಹೋವ ದೇವರು ತಮ್ಮ ಜನರಿಗೆ ನ್ಯಾಯತೀರಿಸುವರು. ದೇವರು ತಮ್ಮ ಸೇವಕರ ಬಲ ಹೋಯಿತೆಂದೂ, ಗುಲಾಮರಾಗಲಿ, ಸ್ವತಂತ್ರರಾಗಲಿ ಉಳಿಯಲಿಲ್ಲವೆಂದೂ ನೋಡಿದಾಗ, ತಮ್ಮ ಸೇವಕರಿಗೋಸ್ಕರ ಕರುಣಿಸುವರು.
כִּֽי־יָדִין יְהֹוָה עַמּוֹ וְעַל־עֲבָדָיו יִתְנֶחָם כִּי יִרְאֶה כִּֽי־אָזְלַת יָד וְאֶפֶס עָצוּר וְעָזֽוּב׃
37 ಆಗ ಯೆಹೋವ ದೇವರು ಹೀಗನ್ನುವರು: “ಅವರ ದೇವರುಗಳು ಎಲ್ಲಿ? ಅವರು ನಂಬಿಕೊಂಡಂಥ,
וְאָמַר אֵי אֱלֹהֵימוֹ צוּר חָסָיוּ בֽוֹ׃
38 ಅವರ ಬಲಿಗಳ ಕೊಬ್ಬನ್ನು ತಿಂದಂಥ, ಅವರ ಪಾನದ ಅರ್ಪಣೆಗಳ ದ್ರಾಕ್ಷಾರಸ ಕುಡಿದಂಥ ದೇವರುಗಳು ಎಲ್ಲಿ? ಈಗ ಆ ದೇವರುಗಳು ಎದ್ದು ನಿಮಗೆ ಸಹಾಯ ಮಾಡಲಿ, ನಿಮಗೋಸ್ಕರ ಕಾವಲಾಗಲಿ.
אֲשֶׁר חֵלֶב זְבָחֵימוֹ יֹאכֵלוּ יִשְׁתּוּ יֵין נְסִיכָם יָקוּמוּ וְיַעְזְרֻכֶם יְהִי עֲלֵיכֶם סִתְרָֽה׃
39 “ನಾನು ಇರುವಾತನೇ ಆಗಿದ್ದೇನೆ! ನನ್ನ ಹಾಗೆ ಬೇರೆ ದೇವರು ಇಲ್ಲವೆಂದು ಈಗ ನೋಡಿರಿ. ನಾನೇ ಸಾಯಿಸುತ್ತೇನೆ, ಬದುಕಿಸುತ್ತೇನೆ, ಗಾಯಮಾಡುತ್ತೇನೆ, ನಾನೇ ಗುಣಪಡಿಸುತ್ತೇನೆ. ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.
רְאוּ ׀ עַתָּה כִּי אֲנִי אֲנִי הוּא וְאֵין אֱלֹהִים עִמָּדִי אֲנִי אָמִית וַאֲחַיֶּה מָחַצְתִּי וַאֲנִי אֶרְפָּא וְאֵין מִיָּדִי מַצִּֽיל׃
40 ಆಕಾಶದ ಕಡೆ ನನ್ನ ಕೈಯೆತ್ತಿ, ನಾನು ನಿತ್ಯವಾಗಿ ಬದುಕುವಾತನು ಎಂದು ಹೇಳುತ್ತೇನೆ.
כִּֽי־אֶשָּׂא אֶל־שָׁמַיִם יָדִי וְאָמַרְתִּי חַי אָנֹכִי לְעֹלָֽם׃
41 ನಾನು ಮಿಂಚುವ ಖಡ್ಗವನ್ನು ಹದಮಾಡಿ, ನನ್ನ ಕೈ ನ್ಯಾಯವನ್ನು ಹಿಡಿದುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ನನ್ನನ್ನು ದ್ವೇಷಿಸುವವರಿಗೆ ಮುಯ್ಯಿತೀರಿಸುವೆನು.
אִם־שַׁנּוֹתִי בְּרַק חַרְבִּי וְתֹאחֵז בְּמִשְׁפָּט יָדִי אָשִׁיב נָקָם לְצָרָי וְלִמְשַׂנְאַי אֲשַׁלֵּֽם׃
42 ಸತ್ತವರ ಮತ್ತು ಸೆರೆಯಾದವರ ರಕ್ತದಿಂದಲೂ, ಶತ್ರುವಿಗೆ ಮಾಡಿದ ಪ್ರತೀಕಾರದಿಂದಲೂ ನನ್ನ ಬಾಣಗಳು ಅಮಲೇರುವುದು. ನನ್ನ ಖಡ್ಗವು ಮಾಂಸವನ್ನು ಭಕ್ಷಿಸುವುದು. ಹೀಗೆ ಶತ್ರುಗಳ ನಾಯಕರ ತಲೆ ಬೀಳುವುದು.”
אַשְׁכִּיר חִצַּי מִדָּם וְחַרְבִּי תֹּאכַל בָּשָׂר מִדַּם חָלָל וְשִׁבְיָה מֵרֹאשׁ פַּרְעוֹת אוֹיֵֽב׃
43 ಎಲ್ಲಾ ಜನಾಂಗಗಳೇ, ದೇವಜನರ ಸಂಗಡ ಹರ್ಷಿಸಿರಿ. ಏಕೆಂದರೆ ದೇವರು ತಮ್ಮ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುವರು. ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ತಮ್ಮ ದೇಶಕ್ಕೋಸ್ಕರವೂ, ತಮ್ಮ ಜನರಿಗೋಸ್ಕರವೂ ದೋಷಪರಿಹಾರ ಮಾಡುವರು.
הַרְנִינוּ גוֹיִם עַמּוֹ כִּי דַם־עֲבָדָיו יִקּוֹם וְנָקָם יָשִׁיב לְצָרָיו וְכִפֶּר אַדְמָתוֹ עַמּֽוֹ׃
44 ಆಗ ಮೋಶೆಯು ನೂನನ ಮಗನಾದ ಹೋಶೇಯನ ಸಂಗಡ ಬಂದು, ಈ ಹಾಡಿನ ಮಾತುಗಳನ್ನೆಲ್ಲಾ ಜನರು ಕೇಳುವ ಹಾಗೆ ಹೇಳಿದನು.
וַיָּבֹא מֹשֶׁה וַיְדַבֵּר אֶת־כׇּל־דִּבְרֵי הַשִּׁירָֽה־הַזֹּאת בְּאׇזְנֵי הָעָם הוּא וְהוֹשֵׁעַ בִּן־נֽוּן׃
45 ಮೋಶೆಯು ಈ ಮಾತುಗಳನ್ನೆಲ್ಲಾ ಸಮಸ್ತ ಇಸ್ರಾಯೇಲಿಗೆ ಹೇಳಿ ತೀರಿಸಿದ ತರುವಾಯ ಅವನು ಅವರಿಗೆ,
וַיְכַל מֹשֶׁה לְדַבֵּר אֶת־כׇּל־הַדְּבָרִים הָאֵלֶּה אֶל־כׇּל־יִשְׂרָאֵֽל׃
46 “ನಾನು ಈ ಹೊತ್ತು ನಿಮಗೆ ಸಾಕ್ಷಿಯಾಗಿ ಹೇಳುವ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ. ಈ ನಿಯಮದ ಮಾತುಗಳನ್ನು ಅನುಸರಿಸಬೇಕೆಂದು ನೀವು ನಿಮ್ಮ ಮಕ್ಕಳಿಗೆ ಆಜ್ಞಾಪಿಸಿರಿ.
וַיֹּאמֶר אֲלֵהֶם שִׂימוּ לְבַבְכֶם לְכׇל־הַדְּבָרִים אֲשֶׁר אָנֹכִי מֵעִיד בָּכֶם הַיּוֹם אֲשֶׁר תְּצַוֻּם אֶת־בְּנֵיכֶם לִשְׁמֹר לַעֲשׂוֹת אֶת־כׇּל־דִּבְרֵי הַתּוֹרָה הַזֹּֽאת׃
47 ಏಕೆಂದರೆ ಇದು ನಿಮಗೆ ಕೇವಲ ವ್ಯರ್ಥವಾದದ್ದಲ್ಲ. ಇದು ನಿಮಗೆ ಜೀವವೇ. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ಇದರಿಂದಲೇ ನಿಮ್ಮ ದಿವಸಗಳನ್ನು ಹೆಚ್ಚಿಸಿಕೊಳ್ಳುವಿರಿ,” ಎಂದು ಹೇಳಿದನು.
כִּי לֹֽא־דָבָר רֵק הוּא מִכֶּם כִּי־הוּא חַיֵּיכֶם וּבַדָּבָר הַזֶּה תַּאֲרִיכוּ יָמִים עַל־הָאֲדָמָה אֲשֶׁר אַתֶּם עֹבְרִים אֶת־הַיַּרְדֵּן שָׁמָּה לְרִשְׁתָּֽהּ׃
48 ಆ ದಿವಸವೇ ಯೆಹೋವ ದೇವರು ಮೋಶೆಗೆ,
וַיְדַבֵּר יְהֹוָה אֶל־מֹשֶׁה בְּעֶצֶם הַיּוֹם הַזֶּה לֵאמֹֽר׃
49 “ನೀನು ಈ ಅಬಾರೀಮ್ ಬೆಟ್ಟದ ಮೇಲೆ ಅಂದರೆ, ಮೋವಾಬ್ ದೇಶದಲ್ಲಿ ಯೆರಿಕೋವಿಗೆ ಎದುರಾಗಿ ಇರುವ ನೆಬೋ ಪರ್ವತದ ಮೇಲೆ ಏರಿ ಹೋಗು. ನಾನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವ ಕಾನಾನ್ ದೇಶವನ್ನು ನೋಡು.
עֲלֵה אֶל־הַר הָעֲבָרִים הַזֶּה הַר־נְבוֹ אֲשֶׁר בְּאֶרֶץ מוֹאָב אֲשֶׁר עַל־פְּנֵי יְרֵחוֹ וּרְאֵה אֶת־אֶרֶץ כְּנַעַן אֲשֶׁר אֲנִי נֹתֵן לִבְנֵי יִשְׂרָאֵל לַאֲחֻזָּֽה׃
50 ನಿನ್ನ ಸಹೋದರನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತು, ತನ್ನ ಜನರ ಬಳಿಗೆ ಸೇರಿದ ಹಾಗೆ, ನೀನು ಏರಿಹೋಗುವ ಬೆಟ್ಟದಲ್ಲಿ ಸತ್ತು, ನಿನ್ನ ಜನರ ಬಳಿಗೆ ಸೇರಬೇಕು.
וּמֻת בָּהָר אֲשֶׁר אַתָּה עֹלֶה שָׁמָּה וְהֵאָסֵף אֶל־עַמֶּיךָ כַּֽאֲשֶׁר־מֵת אַהֲרֹן אָחִיךָ בְּהֹר הָהָר וַיֵּאָסֶף אֶל־עַמָּֽיו׃
51 ನೀವಿಬ್ಬರೂ ಚಿನ್ ಮರುಭೂಮಿಯಲ್ಲಿ ಕಾದೇಶಿನ ಮೆರೀಬಾದ ನೀರಿನ ಬಳಿಯಲ್ಲಿ ನನ್ನನ್ನು ಇಸ್ರಾಯೇಲರ ಮುಂದೆ ನಂಬದೆ, ನನ್ನ ಪವಿತ್ರತೆಯನ್ನು ಇಸ್ರಾಯೇಲರ ನಡುವೆ ಕಾಪಾಡದೆ ನಂಬದೆ ಹೋದಿರಿ.
עַל אֲשֶׁר מְעַלְתֶּם בִּי בְּתוֹךְ בְּנֵי יִשְׂרָאֵל בְּמֵֽי־מְרִיבַת קָדֵשׁ מִדְבַּר־צִן עַל אֲשֶׁר לֹֽא־קִדַּשְׁתֶּם אוֹתִי בְּתוֹךְ בְּנֵי יִשְׂרָאֵֽל׃
52 ಆದುದರಿಂದ, ನೀನು ಆ ದೇಶವನ್ನು ದೂರದಿಂದ ನೋಡುವೆ, ಆದರೆ ನಾನು ಇಸ್ರಾಯೇಲರಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವುದಿಲ್ಲ,” ಎಂದು ಹೇಳಿದರು.
כִּי מִנֶּגֶד תִּרְאֶה אֶת־הָאָרֶץ וְשָׁמָּה לֹא תָבוֹא אֶל־הָאָרֶץ אֲשֶׁר־אֲנִי נֹתֵן לִבְנֵי יִשְׂרָאֵֽל׃

< ಧರ್ಮೋಪದೇಶಕಾಂಡ 32 >