< ಧರ್ಮೋಪದೇಶಕಾಂಡ 31 >
1 ಆಗ ಮೋಶೆ ಹೋಗಿ ಇಸ್ರಾಯೇಲರಿಗೆಲ್ಲಾ ಈ ಮಾತುಗಳನ್ನು ಹೇಳಿದನು:
And Moses goeth and speaketh these words unto all Israel,
2 “ನಾನು ಈ ಹೊತ್ತು ನೂರ ಇಪ್ಪತ್ತು ವರ್ಷದವನಾಗಿದ್ದೇನೆ. ಇನ್ನು ಮುಂದೆ ನಿಮ್ಮನ್ನು ಮುನ್ನಡೆಸಲು ನನಗೆ ಸಾಧ್ಯವಾಗುತ್ತಿಲ್ಲ. ಇದಲ್ಲದೆ ಯೆಹೋವ ದೇವರು ನನಗೆ, ‘ನೀನು ಈ ಯೊರ್ದನನ್ನು ದಾಟುವುದಿಲ್ಲ,’ ಎಂದು ಹೇಳಿದ್ದಾರೆ.
and he saith unto them, 'A son of a hundred and twenty years [am] I to-day; I am not able any more to go out and to come in, and Jehovah hath said unto me, Thou dost not pass over this Jordan,
3 ನಿಮ್ಮ ದೇವರಾದ ಯೆಹೋವ ದೇವರು ತಾವೇ ನಿಮ್ಮ ಮುಂದೆ ಹೋಗುವರು. ಅವರು ಆ ಜನಾಂಗಗಳನ್ನು ನಿಮ್ಮ ಮುಂದೆ ಸೋಲಿಸುವರು. ನೀವು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವಿರಿ. ಯೆಹೋವ ದೇವರು ಹೇಳಿದ ಪ್ರಕಾರ ಯೆಹೋಶುವನು ನಿಮ್ಮ ಮುಂದೆ ಹೋಗುವನು.
'Jehovah thy God He is passing over before thee, He doth destroy these nations from before thee, and thou hast possessed them; Joshua — he is passing over before thee as Jehovah hath spoken,
4 ಯೆಹೋವ ದೇವರು ಅಮೋರಿಯರ ಅರಸನಾದ ಸೀಹೋನನಿಗೂ, ಓಗನಿಗೂ, ಅವರ ದೇಶಕ್ಕೂ ಮಾಡಿದ ಪ್ರಕಾರ ಆ ಜನಾಂಗಗಳನ್ನು ದಂಡಿಸುವರು.
and Jehovah hath done to them as he hath done to Sihon and to Og, kings of the Amorite, and to their land, whom He destroyed.
5 ಯೆಹೋವ ದೇವರು ಅವರನ್ನು ನಿಮಗೆ ಒಪ್ಪಿಸಿಕೊಡುವಾಗ, ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಅವರಿಗೆ ಮಾಡಬೇಕು.
And Jehovah hath given them before your face, and ye have done to them according to all the command which I have commanded you;
6 ಶಕ್ತಿಶಾಲಿಗಳಾಗಿರಿ, ಧೈರ್ಯವಾಗಿರಿ, ಭಯಪಡಬೇಡಿರಿ, ಅವರಿಗೆ ಹೆದರಬೇಡಿರಿ. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ತಾವೇ ನಿಮ್ಮ ಮುಂದೆ ಹೋಗುತ್ತಾರೆ. ಅವರು ನಿಮ್ಮನ್ನು ಕೈಬಿಡುವುದಿಲ್ಲ, ತೊರೆಯುವುದೂ ಇಲ್ಲ.”
be strong and courageous, fear not, nor be terrified because of them, for Jehovah thy God [is] He who is going with thee; He doth not fail thee nor forsake thee.'
7 ಆಗ ಮೋಶೆಯು ಯೆಹೋಶುವನನ್ನು ಕರೆದು, ಸಮಸ್ತ ಇಸ್ರಾಯೇಲಿನ ಮುಂದೆ ಅವನಿಗೆ, “ಶಕ್ತಿಶಾಲಿಯಾಗಿರು, ಧೈರ್ಯವಾಗಿರು. ಏಕೆಂದರೆ ನೀನು ಈ ಜನರ ಸಂಗಡ ಹೋಗಿ ಯೆಹೋವ ದೇವರು ಅವರ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶದಲ್ಲಿ ಸೇರಿಸಬೇಕು. ನೀನು ಅವರಿಗೆ ಅದನ್ನು ಸೊತ್ತಾಗಿ ಹಂಚಿಕೊಡಬೇಕು.
And Moses calleth for Joshua, and saith unto him before the eyes of all Israel, 'Be strong and courageous, for thou — thou dost go in with this people unto the land which Jehovah hath sworn to their fathers to give to them, and thou — thou dost cause them to inherit it;
8 ಯೆಹೋವ ದೇವರು ತಾವೇ ನಿನ್ನ ಮುಂದೆ ಹೋಗುತ್ತಾರೆ. ಅವರು ನಿನ್ನ ಸಂಗಡ ಇರುವರು, ಅವರು ನಿನ್ನನ್ನು ತೊರೆಯುವುದಿಲ್ಲ, ಮರೆತುಬಿಡುವುದಿಲ್ಲ. ನೀನು ಭಯಪಡಬೇಡ, ಅಂಜಿಕೊಳ್ಳಬೇಡ,” ಎಂದು ಹೇಳಿದನು.
and Jehovah [is] He who is going before thee, He himself is with thee; He doth not fail thee nor forsake thee; fear not, nor be affrighted.'
9 ಇದಲ್ಲದೆ ಮೋಶೆಯು ಈ ನಿಯಮವನ್ನು ಬರೆದು, ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವಂಥ ಲೇವಿಯ ಪುತ್ರರಾದ ಯಾಜಕರಿಗೂ, ಇಸ್ರಾಯೇಲಿನ ಎಲ್ಲಾ ಹಿರಿಯರಿಗೂ ಒಪ್ಪಿಸಿದನು.
And Moses writeth this law, and giveth it unto the priests (sons of Levi, those bearing the ark of the covenant of Jehovah), and unto all the elders of Israel,
10 ಅನಂತರ ಮೋಶೆಯು ಅವರಿಗೆ, “ಪ್ರತಿ ಏಳು ವರ್ಷ ಕೊನೆಯಲ್ಲಿರುವ ಬಿಡುಗಡೆಯ ಪರಿಶುದ್ಧವಾದ ವರ್ಷದಲ್ಲಿ ಅಂದರೆ, ಗುಡಾರಗಳ ಹಬ್ಬದಲ್ಲಿ
and Moses commandeth them, saying, 'At the end of seven years, in the appointed time, the year of release, in the feast of booths,
11 ಇಸ್ರಾಯೇಲಿನವರೆಲ್ಲರು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ, ಅವರು ಆಯ್ದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ನೀವು ಈ ನಿಯಮವನ್ನು ಇಸ್ರಾಯೇಲಿನವರೆಲ್ಲರ ಮುಂದೆ ಜನರು ಕೇಳುವ ಹಾಗೆ ಓದಬೇಕು.
in the coming in of all Israel to see the face of Jehovah in the place which He chooseth, thou dost proclaim this law before all Israel, in their ears.
12 ಜನರನ್ನು ಅಂದರೆ, ಪುರುಷರನ್ನೂ ಸ್ತ್ರೀಯರನ್ನೂ ಮಕ್ಕಳನ್ನೂ ನಿಮ್ಮ ಊರುಗಳಲ್ಲಿರುವ ಪರದೇಶಿಯರನ್ನೂ ಕೂಡಿಸಬೇಕು. ಅವರು ಕೇಳಿ ಕಲಿತು, ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಈ ನಿಯಮದ ವಾಕ್ಯಗಳನ್ನೆಲ್ಲಾ ಕೈಗೊಂಡು ನಡೆಯುವ ಹಾಗೆ, ಅವರೆಲ್ಲರನ್ನು ಒಂದು ಕಡೆ ಕೂಡಿಸಬೇಕು.
'Assemble the people, the men, and the women, and the infants, and thy sojourner who [is] within thy gates, so that they hear, and so that they learn, and have feared Jehovah your God, and observed to do all the words of this law;
13 ದೇವರ ಈ ನಿಯಮವನ್ನು ತಿಳಿಯದಿರುವ ಅವರ ಮಕ್ಕಳು ಸಹ ಕೇಳಿ, ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ಬದುಕುವ ದಿವಸಗಳೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡುವುದಕ್ಕೆ ಕಲಿತುಕೊಳ್ಳಿರಿ, ಎಂದು ಅವರಿಗೆ ಆಜ್ಞಾಪಿಸಿ ಹೇಳಬೇಕು,” ಎಂದನು.
and their sons, who have not known, do hear, and have learned to fear Jehovah your God all the days which ye are living on the ground whither ye are passing over the Jordan to possess it.'
14 ಇದಲ್ಲದೆ ಯೆಹೋವ ದೇವರು ಮೋಶೆಗೆ, “ಇಗೋ, ನೀನು ಸಾಯುವ ದಿನಗಳು ಸಮೀಪವಾದವು. ಯೆಹೋಶುವನನ್ನು ಕರೆದು ನೀವು ದೇವದರ್ಶನ ಗುಡಾರದಲ್ಲಿ ನಿಂತುಕೊಳ್ಳಿರಿ. ಆಗ ಅವನಿಗೆ ಅಧಿಕಾರ ಕೊಡುವೆನು,” ಎಂದರು. ಆ ಪ್ರಕಾರವೆ ಮೋಶೆಯೂ, ಯೆಹೋಶುವನೂ ಹೋಗಿ ದೇವದರ್ಶನ ಗುಡಾರದಲ್ಲಿ ನಿಂತುಕೊಂಡರು.
And Jehovah saith unto Moses, 'Lo, thy days have drawn near to die; call Joshua, and station yourselves in the tent of meeting, and I charge him;' and Moses goeth — Joshua also — and they station themselves in the tent of meeting,
15 ಆಗ ಯೆಹೋವ ದೇವರು ಗುಡಾರದೊಳಗೆ ಮೇಘ ಸ್ತಂಭದಲ್ಲಿ ಕಾಣಿಸಿಕೊಂಡರು. ಆ ಮೇಘಸ್ತಂಭವು ಗುಡಾರದ ಬಾಗಿಲಿನ ಮೇಲೆ ನಿಂತಿತು.
and Jehovah is seen in the tent, in a pillar of a cloud; and the pillar of the cloud standeth at the opening of the tent.
16 ಆಗ ಯೆಹೋವ ದೇವರು ಮೋಶೆಗೆ, “ನೀನು ಮೃತನಾಗಿ, ನಿನ್ನ ಪಿತೃಗಳ ಸಂಗಡ ಸೇರುವಿ. ಈ ಜನರು ದೇವದ್ರೋಹಿಗಳಾಗಿ, ಅವರು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಪೂಜೆ ಮಾಡಿ, ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿದ ಒಡಂಬಡಿಕೆಯನ್ನು ಮೀರುವರು.
And Jehovah saith unto Moses, 'Lo, thou art lying down with thy fathers, and this people hath risen, and gone a-whoring after the gods of the stranger of the land into the midst of which it hath entered, and forsaken Me, and broken My covenant which I made with it;
17 ಆ ದಿವಸದಲ್ಲಿ ನಾನು ಅವರ ಮೇಲೆ ಕೋಪಗೊಂಡು ಅವರನ್ನು ಬಿಟ್ಟುಬಿಟ್ಟು, ನನ್ನ ಮುಖವನ್ನು ಅವರಿಗೆ ಮರೆಮಾಡುವೆನು. ವಿರೋಧಿಗಳು ಅವರನ್ನು ನುಂಗಿಬಿಡುವರು. ಬಹಳ ಕೇಡುಗಳೂ, ಇಕ್ಕಟ್ಟುಗಳೂ ಅವರಿಗೆ ಸಂಭವಿಸುವುದು. ಆ ದಿವಸದಲ್ಲಿ ಅವರು, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ನಮಗೆ ಕೇಡುಗಳು,’ ಎಂದು ಹೇಳುವರು.
and Mine anger hath burned against it in that day, and I have forsaken them, and hidden My face from them, and it hath been for consumption, and many evils and distresses have found it, and it hath said in that day, Is it not because that my God is not in my midst — these evils have found me?
18 ಅವರು ಮಾಡಿದ ಎಲ್ಲಾ ದುಷ್ಕೃತ್ಯದ ನಿಮಿತ್ತವೂ, ಅನ್ಯದೇವರುಗಳ ಕಡೆಗೆ ತಿರುಗಿದ್ದರಿಂದಲೂ ನಾನು ಆ ದಿವಸದಲ್ಲಿ ನನ್ನ ಮುಖವನ್ನು ಖಂಡಿತ ಮರೆಮಾಡುವೆನು.
and I certainly hide My face in that day for all the evil which it hath done, for it hath turned unto other gods.
19 “ಹೀಗಿರುವುದರಿಂದ ಈಗ ಈ ಹಾಡನ್ನು ಬರೆದುಕೊಳ್ಳಿರಿ. ಇಸ್ರಾಯೇಲರಲ್ಲಿ ಈ ಹಾಡು ನನಗೆ ಸಾಕ್ಷಿಯಾಗಿರುವ ಹಾಗೆ ಅದನ್ನು ಅವರಿಗೆ ಬಾಯಿಪಾಠ ಮಾಡಿಸು.
'And now, write for you this song, and teach it the sons of Israel; put it in their mouths, so that this song is to Me for a witness against the sons of Israel,
20 ನಾನು ಅವರ ಪಿತೃಗಳಿಗೆ ಪ್ರಮಾಣ ಮಾಡಿದಂಥ, ಹಾಲೂ ಜೇನೂ ಹರಿಯುವಂಥ ದೇಶಕ್ಕೆ ಅವರನ್ನು ತರಲಾಗಿ, ಅವರು ತಿಂದು ತೃಪ್ತರಾಗಿ ಕೊಬ್ಬಿದವರಾದಾಗ, ಅವರು ಅನ್ಯದೇವರುಗಳ ಕಡೆಗೆ ತಿರುಗಿಕೊಂಡು, ಅವುಗಳನ್ನು ಪೂಜಿಸಿ, ನನಗೆ ಕೋಪವನ್ನೆಬ್ಬಿಸಿ, ನನ್ನ ಒಡಂಬಡಿಕೆಯನ್ನು ಮೀರುವರು.
and I bring them in unto the ground which I have sworn to their fathers — flowing with milk and honey, and they have eaten, and been satisfied, and been fat, and have turned unto other gods, and they have served them, and despised Me, and broken My covenant.
21 ಬಹಳ ಕೇಡುಗಳೂ ವಿಪತ್ತುಗಳೂ ಅವರಿಗೆ ಸಂಭವಿಸುವಾಗ, ಈ ಹಾಡು ಅವರಿಗೆ ವಿರೋಧ ಸಾಕ್ಷಿಯಾಗಿ ಉತ್ತರಕೊಡುವುದು. ಏಕೆಂದರೆ ಅದು ಅವರ ಸಂತತಿಯ ಬಾಯಿಯಲ್ಲಿಂದ ಮರೆತು ಹೋಗುವುದಿಲ್ಲ. ನಾನು ಪ್ರಮಾಣ ಮಾಡಿದ ದೇಶದಲ್ಲಿ ಅವರನ್ನು ತರುವುದಕ್ಕಿಂತ ಮುಂಚೆ ಅವರು ಈ ಹೊತ್ತು ಮಾಡುವ ದುರಾಲೋಚನೆಗಳನ್ನು ನಾನು ಬಲ್ಲೆನು.”
'And it hath been, when many evils and distresses do meet it, that this song hath testified to its face for a witness; for it is not forgotten out of the mouth of its seed, for I have known its imagining which it is doing to-day, before I bring them in unto the land of which I have sworn.'
22 ಆದ್ದರಿಂದ ಮೋಶೆ ಅದೇ ದಿವಸದಲ್ಲಿ ಈ ಹಾಡನ್ನು ಬರೆದು ಇಸ್ರಾಯೇಲರಿಗೆ ಕಲಿಸಿದನು.
And Moses writeth this song on that day, and doth teach it the sons of Israel,
23 ಅವನು ನೂನನ ಮಗನಾದ ಯೆಹೋಶುವನಿಗೆ ಆಜ್ಞಾಪಿಸಿ, “ಶೂರನಾಗಿರು, ಧೈರ್ಯವಾಗಿರು, ಏಕೆಂದರೆ ನೀನು ಇಸ್ರಾಯೇಲರನ್ನು ನಾನು ಅವರಿಗೆ ಪ್ರಮಾಣ ಮಾಡಿದ ದೇಶಕ್ಕೆ ತರುವೆ, ನಾನು ನಿನ್ನ ಸಂಗಡ ಇರುವೆನು,” ಎಂದು ಹೇಳಿದನು.
and He commandeth Joshua son of Nun, and saith, 'Be strong and courageous, for thou dost bring in the sons of Israel unto the land which I have sworn to them, and I — I am with thee.'
24 ಇದಲ್ಲದೆ ಮೋಶೆ ಈ ನಿಯಮದ ವಾಕ್ಯಗಳನ್ನು ಗ್ರಂಥದಲ್ಲಿ ಬರೆದು ತೀರಿಸಿದಾಗ,
And it cometh to pass, when Moses finisheth to write the words of this law on a book till their completion,
25 ಮೋಶೆ ಯೆಹೋವ ದೇವರು ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಿಗೆ,
that Moses commandeth the Levites bearing the ark of the covenant of Jehovah, saying,
26 “ದೇವರ ನಿಯಮದ ಈ ಗ್ರಂಥವನ್ನು ತೆಗೆದುಕೊಂಡು ನಿಮ್ಮ ದೇವರಾದ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿ ಇಡಿರಿ. ಅದು ನಿಮಗೆ ವಿರೋಧವಾದ ಸಾಕ್ಷಿಯಾಗಿ ಅಲ್ಲಿ ಇರಲಿ.
'Take this Book of the Law, and thou hast set it on the side of the ark of the covenant of Jehovah your God, and it hath been there against thee for a witness;
27 ಏಕೆಂದರೆ ನಿಮ್ಮ ದ್ರೋಹವನ್ನೂ, ನಿಮ್ಮ ಹಟಮಾರಿತನವನ್ನೂ ನಾನು ಬಲ್ಲೆನು. ಈ ಹೊತ್ತು ನಾನು ಇನ್ನೂ ನಿಮ್ಮ ಸಂಗಡ ಬದುಕಿರುವಾಗಲೇ ಯೆಹೋವ ದೇವರಿಗೆ ದ್ರೋಹ ಮಾಡಿದವರಾದಿರಿ. ನಾನು ಸತ್ತಮೇಲೆ ಇನ್ನೇನಾಗುವುದು?
for I — I have known thy rebellion, and thy stiff neck; lo, in my being yet alive with you to-day, rebellious ye have been with Jehovah, and also surely after my death.
28 ನಿಮ್ಮ ಗೋತ್ರಗಳ ಎಲ್ಲಾ ಹಿರಿಯರನ್ನೂ, ನಿಮ್ಮ ಅಧಿಕಾರಿಗಳನ್ನೂ ನನ್ನ ಬಳಿಗೆ ಸೇರಿಸಿರಿ. ಆಗ ಈ ಮಾತುಗಳನ್ನು ಅವರು ಕೇಳುವ ಹಾಗೆ ಆಕಾಶವನ್ನೂ, ಭೂಮಿಯನ್ನೂ ಸಾಕ್ಷಿಗೆ ಕರೆಯುವೆನು.
'Assemble unto me all the elders of your tribes, and your authorities, and I speak in their ears these words, and cause to testify against them the heavens and the earth,
29 ಏಕೆಂದರೆ ನಾನು ಸತ್ತಮೇಲೆ ನೀವು ಪೂರ್ಣವಾಗಿ ನಿಮ್ಮನ್ನು ನೀವೇ ಕೆಡಿಸಿಕೊಂಡು, ನಾನು ನಿಮಗೆ ಆಜ್ಞಾಪಿಸಿದ ಮಾರ್ಗದಿಂದ ತೊಲಗಿ ಹೋಗುವಿರೆಂದು ನಾನು ಬಲ್ಲೆನು. ನೀವು ಯೆಹೋವ ದೇವರ ಮುಂದೆ ಕೆಟ್ಟದ್ದನ್ನು ಮಾಡಿ, ನಿಮ್ಮ ಕ್ರಿಯೆಗಳಿಂದ ಅವರಿಗೆ ಕೋಪವನ್ನೆಬ್ಬಿಸುವದರಿಂದ ನಿಮಗೆ ಕೇಡು ಸಂಭವಿಸುವುದು,” ಎಂದು ಹೇಳಿದನು.
for I have known that after my death ye do very corruptly, and have turned aside out of the way which I commanded you, and evil hath met you in the latter end of the days, because ye do the evil thing in the eyes of Jehovah, to make Him angry with the work of your hands.'
30 ಆಗ ಮೋಶೆ ಇಸ್ರಾಯೇಲ್ ಸಮೂಹಕ್ಕೆ ಕೇಳುವ ಹಾಗೆ ಈ ಹಾಡಿನ ಮಾತುಗಳನ್ನು ಪ್ರಾರಂಭದಿಂದ ಕೊನೆಯವರೆಗೆ ಹೇಳಿದನು.
And Moses speaketh in the ears of all the assembly of Israel the words of this song, till their completion: —