< ಧರ್ಮೋಪದೇಶಕಾಂಡ 14 >
1 ನೀವು ನಿಮ್ಮ ದೇವರಾದ ಯೆಹೋವ ದೇವರ ಮಕ್ಕಳು. ನೀವು ಸತ್ತವರಿಗೋಸ್ಕರ ಗಾಯಮಾಡಿಕೊಳ್ಳಬಾರದು. ಮುಂದಲೆಯನ್ನು ಬೋಳಿಸಿಕೊಳ್ಳಬಾರದು.
၁သင်တို့သည် သင်တို့ဘုရားသခင် ထာဝရဘုရား ၏ သားဖြစ်ကြ၏။ သေသောသူအတွက် အသားကို မခုတ်မရှရ။ မျက်မှောင်ကြားမှာ အမွေးကို မရိတ်ရ။
2 ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರೇ, ಯೆಹೋವ ದೇವರು ಭೂಮಿಯ ಮೇಲಿರುವ ಎಲ್ಲಾ ಜನರೊಳಗಿಂದ ನಿಮ್ಮನ್ನೇ ತಮ್ಮ ಅಮೂಲ್ಯವಾದ ಆಸ್ತಿಯಾಗಿ ಆಯ್ದುಕೊಂಡಿದ್ದಾರೆ.
၂သင်တို့သည် သင်တို့၏ ဘုရားသခင် ထာဝရ ဘုရားအဘို့၊ သန့်ရှင်းသောလူမျိုး ဖြစ်ကြ၏။ ထာဝရ ဘုရားသည် မြေကြီးပေါ်မှာရှိသမျှသော လူမျိုးထက်၊ ကိုယ်တော် ပိုင်ထိုက်သော အမျိုးဖြစ်စေခြင်းငှာ သင်တို့ကို ရွေးချယ်တော်မူပြီ။
3 ಅಸಹ್ಯವಾದ ಯಾವುದನ್ನಾದರೂ ತಿನ್ನಬಾರದು.
၃စက်ဆုပ်ရွံ့ရှာဘွယ်သော အရာကို သင်တို့ မစားရ။
4 ನೀವು ತಿನ್ನಬಹುದಾದ ಪ್ರಾಣಿಗಳು ಯಾವವಂದರೆ: ಎತ್ತು, ಕುರಿ, ಮೇಕೆ,
၄စားရသော တိရစ္ဆာန်ဟူမူကား၊ နွား၊ သိုး၊ ဆိတ်၊
5 ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ, ಕೊಂಡಗುರಿ ಇವುಗಳೇ.
၅သမင်၊ ဒရယ်၊ ဆတ်၊ ဂျီ၊ ဒိရှုန်၊ စိုင်၊ ဇမေရ အစရှိသော၊
6 ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ, ಅದು ಮೆಲುಕು ಹಾಕುವಂಥಾದ್ದಾದರೆ ಅದರ ಮಾಂಸವನ್ನು ತಿನ್ನಬಹುದು.
၆ခွါကွဲပြား၍ စားမြုံ့ပြန်သော သားများကို စားရသောအခွင့်ရှိ၏။
7 ಆದರೆ ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ, ಒಂಟೆ, ಮೊಲ, ಬೆಟ್ಟದ ಮೊಲ ಇವು ಮೆಲುಕು ಹಾಕುವಂಥವುಗಳಾದರೂ, ಸೀಳುಗೊರಸು ಇಲ್ಲವಾದದ್ದರಿಂದ ಅವು ನಿಮಗೆ ಅಶುದ್ಧ.
၇သို့သော်လည်း စားမြုံ့ပြန်သောသား၊ ခွာကွဲပြား သော သားတို့တွင် မစားရသော သားဟူမူကား၊ ကုလား အုပ်၊ အာရနဘက်၊ ရှာဖန်တို့သည် စားမြုံ့ပြန်သော်လည်း၊ ခွာမကွဲပြားသောကြောင့် သင်တို့၌ မစင်ကြယ်။
8 ಹಂದಿಯನ್ನು ತಿನ್ನಬಾರದು. ಏಕೆಂದರೆ ಅದು ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲ. ಅದು ನಿಮಗೆ ಅಶುದ್ಧವೇ. ಅವುಗಳ ಮಾಂಸವನ್ನು ನೀವು ತಿನ್ನಬಾರದು, ಅವುಗಳ ಹೆಣವನ್ನು ಮುಟ್ಟಬಾರದು.
၈ဝက်သည် ခွာကွဲပြားသော်လည်း၊ စားမြုံ့မပြန် သောကြောင့် သင်တို့၌ မစင်ကြယ်။ အသားကို မစားရ။ အသေကောင်ကိုလည်း မထိရ။
9 ನೀರಿನಲ್ಲಿ ಬಾಳುವ ಎಲ್ಲವುಗಳಲ್ಲಿ ಅಂದರೆ ನೀವು ಈಜು ರೆಕ್ಕೆಗಳುಳ್ಳ ಮತ್ತು ಪೊರೆ ಇರುವವುಗಳನ್ನು ತಿನ್ನಬಹುದು.
၉ရေ၌နေသော တိရစ္ဆာန်တကာတို့တွင် အယပ် နှင့် အကြေးရှိသော တိရစ္ဆာန်ကိုသာ စားရ၏။
10 ಆದರೆ ರೆಕ್ಕಗಳೂ ಪೊರೆಗಳೂ ಇಲ್ಲದವುಗಳನ್ನೆಲ್ಲಾ ತಿನ್ನಬಾರದು. ಅವು ನಿಮಗೆ ಅಶುದ್ಧ.
၁၀အယပ်နှင့် အကြေးမရှိသော တိရစ္ဆာန်ကို မစားရ။ သင်တို့၌ မစင်ကြယ်။
11 ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು.
၁၁စင်ကြယ်သော ငှက်အမျိုးမျိုးကို စားရသော အခွင့်ရှိ၏။
12 ಪಕ್ಷಿ ಜಾತಿಯಲ್ಲಿ ನೀವು ತಿನ್ನಬಾರದವುಗಳು ಯಾವುವೆಂದರೆ: ಗರುಡ, ಬೆಟ್ಟದಹದ್ದು, ಕಪ್ಪು ರಣಹದ್ದು,
၁၂မစားရသော ငှက်ဟူမူကား၊ ရွှေလင်းတ၊ ပင်လယ်လင်းတ၊ လင်းယုန်၊
13 ಗಿಡುಗ, ಹಕ್ಕಿಸಾಲೆ, ಸಕಲವಿಧವಾದ ಹದ್ದು,
၁၃ဒါဟ၊ စွန်၊ လင်းတကြမ်းမျိုး၊
15 ಉಷ್ಟ್ರಪಕ್ಷಿ, ಉಲೂಕ, ಚೀರು ಗೂಬೆ, ಕಡಲ ಹಕ್ಕಿ, ಸಕಲವಿಧವಾದ ಡೇಗೆ,
၁၅ကျီးမျိုးရှိသမျှ၊ ကုလားအုပ်ငှက်၊ ငှက်ဆိုး၊ ဥဗျိုင်း၊ သိမ်းမျိုး၊
16 ಸಣ್ಣ ಗೂಬೆ, ದೊಡ್ಡ ಗೂಬೆ, ಬಿಳಿಗೂಬೆ,
၁၆ဇိကွက်၊ ဣဗိတ်၊ ငှက်ကျား၊
17 ಮರಳುಗಾಡು ಗೂಬೆ, ರಣಹದ್ದು, ನೀರು ಕೋಳಿ,
၁၇ဝံပို၊ ဝံလို၊ ကြိုးကြာ၊
18 ಕೊಕ್ಕರೆ, ನೀರುಕಾಗೆ, ಸಕಲವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ.
၁၈တောငန်း၊ ဒုံးစပ်မျိုး၊ ဒုံးကုလား၊ လင်းနို့မှစ၍၊
19 ಇದಲ್ಲದೆ ಹಾರುವ ಎಲ್ಲಾ ಕ್ರಿಮಿಕೀಟಗಳು ನಿಮಗೆ ಅಶುದ್ಧವೇ. ಅವುಗಳನ್ನು ತಿನ್ನಬಾರದು.
၁၉အတောင်ရှိလျက် တွားတတ်သော တိရစ္ဆာန် ရှိသမျှတို့သည် သင်တို့၌ မစင်ကြယ်သည်ဖြစ်၍ အသား ကို မစားရ။
20 ಶುದ್ಧವಾದ ಎಲ್ಲಾ ರೆಕ್ಕೆ ಉಳ್ಳ ಪಕ್ಷಿಗಳನ್ನು ತಿನ್ನಬಹುದು.
၂၀စင်ကြယ်သော ငှက်အမျိုးမျိုးကို စားရသော အခွင့်ရှိ၏။
21 ತಾನೇ ಸತ್ತ ಯಾವುದನ್ನೂ ತಿನ್ನಬಾರದು. ನಿಮ್ಮ ಊರಲ್ಲಿರುವ ಅನ್ಯನಿಗೆ ತಿನ್ನಲು ಕೊಡಬಹುದು ಇಲ್ಲವೆ ಪರದೇಶದವನಿಗೆ ಮಾರಬಹುದು. ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರೇ. ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಕುದಿಸಬಾರದು.
၂၁အလိုလိုသေသောအကောင်ကို မစားရ။ သင်တို့ ၌ တည်းခိုသော တပါးအမျိုးသားစားစရာဘို့ ပေးရမည်။ သို့မဟုတ် တကျွန်း တနိုင်ငံသားတို့အား ရောင်းရမည်။ သင်တို့သည် သင်တို့၏ဘုရားသခင် ထာဝရဘုရားအဘို့ သန့်ရှင်းသော လူမျိုးဖြစ်ကြ၏။ ဆိတ်သငယ်ကို အမိ နို့ရည်နှင့် မပြုတ်မချက်ရ။
22 ನೀವು ಬಿತ್ತುವ ಹೊಲದಲ್ಲಿ ವರ್ಷ ವರ್ಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು.
၂၂လယ်ယာ၌ တနှစ်တနှစ်တွင် သိမ်းရသော အသီးအနှံဆယ်ဘို့တဘို့ကို အမှန်ခွဲထားရမည်။
23 ನಿಮ್ಮ ಧಾನ್ಯ, ಹೊಸ ದ್ರಾಕ್ಷಾರಸ, ಓಲಿವ್ ಎಣ್ಣೆಗಳ ದಶಮಾಂಶವನ್ನೂ ನಿಮ್ಮ ದನಕುರಿಗಳಲ್ಲಿ ಚೊಚ್ಚಲುಗಳನ್ನೂ ನಿಮ್ಮ ದೇವರಾದ ಯೆಹೋವ ದೇವರ ಮುಂದೆ ತಮ್ಮ ಹೆಸರನ್ನು ಸ್ಥಾಪಿಸಿಕೊಳ್ಳುವುದಕ್ಕೆ ದೇವರೇ ಆಯ್ದುಕೊಂಡ ಸ್ಥಳದಲ್ಲಿ ತಿನ್ನಬೇಕು. ಇದರಿಂದ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಎಂದೆಂದಿಗೂ ಭಯಭಕ್ತಿಯುಳ್ಳವರಾಗಿ ಇರುವುದನ್ನು ಕಲಿಯುವಿರಿ.
၂၃သင်တို့၏ ဘုရားသခင် ထာဝရဘုရားသည်၊ နာမတော်ကို တည်စေဘို့ရာ ရွေးကောက်တော်မူသော အရပ်၌ စပါး၊ စပျစ်ရည်၊ ဆီမှစ၍၊ သိုး၊ နွားတွင် အဦးဘွားသော သားငယ်ဆယ်ဘို့တဘို့ကို ရှေ့တော်မှာ စားရကြမည်။ ထိုသို့ပြုလျှင်၊ သင်တို့၏ ဘုရားသခင် ထာဝရဘုရားကို အစဉ်ကြောက်ရွံ့ရမည်အကြောင်း၊ သင်ရကြလိမ့်မည်။
24 ನೀವು ಕಾಣಿಕೆಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಿಮಗೆ ದಾರಿ ದೂರವಾಗಿದ್ದರೆ, ಅಥವಾ ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಂಡ ಸ್ಥಳವು ನಿಮಗೆ ದೂರವಾಗಿದ್ದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಆಶೀರ್ವದಿಸಿದ ಕಾಲದಲ್ಲಿ,
၂၄သင်တို့၏ ဘုရားသခင် ထာဝရဘုရား ကောင်းကြီးပေးတော်မူသောအခါ၊ နာမတော်ကို တည်စေ ဘို့ရာ ရွေးကောက်တော်မူသော အရပ်သည် ဝေးလွန်း၍ ခရီးရှည်လျားသဖြင့်၊ ဥစ္စာဆယ်ဘို့တဘို့ကို ဆောင်၍ မသွားနိုင်လျှင်၊
25 ಅವುಗಳನ್ನು ಮಾರಿ ಹಣವನ್ನಾಗಿ ಮಾರ್ಪಡಿಸಿ, ಆ ಹಣವನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು, ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಹೋಗಿರಿ.
၂၅ထိုဥစ္စာကို ရောင်းပြီးမှ၊ ငွေကိုကိုင်လျက်၊ သင်တို့၏ဘုရားသခင် ထာဝရဘုရား ရွေးကောက်တော်မူ သော အရပ်သို့သွား၍၊
26 ಅಲ್ಲಿ ನಿಮ್ಮ ಇಷ್ಟಾನುಸಾರ ದನ, ಕುರಿ, ದ್ರಾಕ್ಷಾರಸ, ಮದ್ಯ, ಮೊದಲಾದವುಗಳನ್ನು ಹಣದಿಂದ ಕೊಂಡುಕೊಂಡು ನೀವೂ, ನಿಮ್ಮ ಮನೆಯವರೂ, ನಿಮ್ಮ ಊರಿನ ಲೇವಿಯರೂ ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಊಟಮಾಡಿ, ಸಂತೋಷವಾಗಿರಬೇಕು.
၂၆စားချင်သော စိတ်အလိုရှိသည်အတိုင်း၊ နွား၊ သိုး၊ စပျစ်ရည်၊ သေရည်အစရှိသော စားချင်သမျှကို ဝယ်၍၊ သင်တို့၏ ဘုရားသခင် ထာဝရဘုရားရှေ့တော် မှာ၊ အိမ်သူအိမ်သားများနှင့်တကွ စားသောက်လျက်၊ ရွှင်လန်းခြင်းကို ပြုရကြမည်။
27 ನಿಮ್ಮ ಊರುಗಳಲ್ಲಿರುವ ಲೇವಿಯರನ್ನು ಕೈಬಿಡಬಾರದು. ಏಕೆಂದರೆ ಅವರಿಗೆ ನಿಮ್ಮ ಸಂಗಡ ಪಾಲೂ, ಸೊತ್ತೂ ಇಲ್ಲ.
၂၇သို့ရာတွင်၊ သင်တို့၌တည်းခိုသော လေဝိသား ဟူမူကား၊ သင်တို့နှင့်ရော၍၊ အဘို့မရှိ၊ အမွေကို မခံရ သောကြောင့်၊ သူ့ကို မစွန့်မပစ်ရဘဲ၊
28 ಪ್ರತಿ ಮೂರು ವರ್ಷಗಳ ಅಂತ್ಯದಲ್ಲಿ ಆಯಾ ವರ್ಷದಲ್ಲಿ ನಿಮಗೆ ಸಿಕ್ಕಿದ ಹುಟ್ಟುವಳಿಯ ದಶಮಭಾಗವನ್ನೆಲ್ಲಾ ಹೊರಗೆ ತಂದು ನಿಮ್ಮ ಊರಲ್ಲಿಯೇ ಕೂಡಿಸಬೇಕು.
၂၈တတိယနှစ်တွင် သိမ်းသောအသီးအနှံ ဆယ်ဘို့တဘို့ ရှိသမျှကို ထုတ်၍ မြို့ထဲမှာ သိုထားရမည်။
29 ಆಗ ನಿಮ್ಮ ಸಂಗಡ ಪಾಲನ್ನೂ, ಸೊತ್ತನ್ನೂ ಹೊಂದದ ಲೇವಿಯರೂ, ನಿಮ್ಮ ಊರಲ್ಲಿರುವ ಅನ್ಯದೇಶದವರೂ, ದಿಕ್ಕಿಲ್ಲದವರೂ, ವಿಧವೆಯರೂ ಬಂದು ತಿಂದು ತೃಪ್ತರಾಗಲಿ. ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನೂ, ನೀವು ಮಾಡುವ ಎಲ್ಲಾ ಪ್ರಯತ್ನಗಳನ್ನೂ ಆಶೀರ್ವದಿಸುವರು.
၂၉သင်တို့နှင့်ရော၍ အဘို့မရှိ၊ အမွေကို မခံရသော လေဝိသား၊ သင်တို့နေရာအရပ်၌ ရှိသော တပါးအမျိုး သား၊ မိဘမရှိသော သူငယ်၊ မုတ်ဆိုးမများတို့သည် လာ၍ ဝစွာစားရကြမည်။ သို့ဖြစ်လျှင် သင်တို့၏ ဘုရားသခင် ထာဝရဘုရားသည်၊ သင်တို့ပြုလေရာရာ၌ ကောင်းကြီး ပေးတော်မူမည်။