< ಧರ್ಮೋಪದೇಶಕಾಂಡ 13 >

1 ನಿಮ್ಮ ಮಧ್ಯೆ ಯಾವ ಪ್ರವಾದಿಯೇ ಆಗಲಿ, ಕನಸುಗಾರನೇ ಆಗಲಿ, ಎದ್ದು ಬಂದು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಸೂಚನೆ ಮಾಡಿ,
כִּֽי־יָק֤וּם בְּקִרְבְּךָ֙ נָבִ֔יא אֹ֖ו חֹלֵ֣ם חֲלֹ֑ום וְנָתַ֥ן אֵלֶ֛יךָ אֹ֖ות אֹ֥ו מֹופֵֽת׃
2 “ಈ ದೇವತೆಗಳನ್ನು ಅವಲಂಬಿಸಿ ಪೂಜಿಸೋಣ,” ಎಂದು ಬೋಧಿಸಬಹುದು. ಆ ಬೋಧನೆಯನ್ನು ರುಜುವಾತುಪಡಿಸಲು ಒಂದು ಅದ್ಭುತವನ್ನಾಗಲಿ, ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಸಹ ಹೇಳಬಹುದು.
וּבָ֤א הָאֹות֙ וְהַמֹּופֵ֔ת אֲשֶׁר־דִּבֶּ֥ר אֵלֶ֖יךָ לֵאמֹ֑ר נֽ͏ֵלְכָ֞ה אַחֲרֵ֨י אֱלֹהִ֧ים אֲחֵרִ֛ים אֲשֶׁ֥ר לֹֽא־יְדַעְתָּ֖ם וְנָֽעָבְדֵֽם׃
3 ಅವನು ಹೇಳಿದಂತೆಯೇ ಅದು ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನೀವು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸುತ್ತೀರೋ ಇಲ್ಲವೋ ಎಂಬುದನ್ನು ಕಂಡುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾರೆ.
לֹ֣א תִשְׁמַ֗ע אֶל־דִּבְרֵי֙ הַנָּבִ֣יא הַה֔וּא אֹ֛ו אֶל־חֹולֵ֥ם הַחֲלֹ֖ום הַה֑וּא כִּ֣י מְנַסֶּ֞ה יְהוָ֤ה אֱלֹֽהֵיכֶם֙ אֶתְכֶ֔ם לָדַ֗עַת הֲיִשְׁכֶ֤ם אֹֽהֲבִים֙ אֶת־יְהוָ֣ה אֱלֹהֵיכֶ֔ם בְּכָל־לְבַבְכֶ֖ם וּבְכָל־נַפְשְׁכֶֽם׃
4 ನಿಮ್ಮ ದೇವರಾದ ಯೆಹೋವ ದೇವರನ್ನೇ ಅನುಸರಿಸಿ, ಅವರಿಗೆ ಭಯಪಟ್ಟು, ಅವರ ಆಜ್ಞೆಗಳನ್ನು ಕಾಪಾಡಿ, ಅವರ ಮಾತನ್ನು ಕೇಳಿ, ಅವರ ಸೇವೆಮಾಡುತ್ತಾ ಅವರನ್ನೇ ಅಂಟಿಕೊಳ್ಳಬೇಕು.
אַחֲרֵ֨י יְהוָ֧ה אֱלֹהֵיכֶ֛ם תֵּלֵ֖כוּ וְאֹתֹ֣ו תִירָ֑אוּ וְאֶת־מִצְוֹתָ֤יו תִּשְׁמֹ֙רוּ֙ וּבְקֹלֹ֣ו תִשְׁמָ֔עוּ וְאֹתֹ֥ו תַעֲבֹ֖דוּ וּבֹ֥ו תִדְבָּקֽוּן׃
5 ಆ ಪ್ರವಾದಿಯನ್ನು, ಕನಸು ಕಾಣುವವನಿಗೆ ಮರಣದಂಡನೆ ವಿಧಿಸಬೇಕು. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ, ದಾಸತ್ವದಿಂದ ನಿಮ್ಮನ್ನು ವಿಮೋಚಿಸಿದ ನಿಮ್ಮ ದೇವರಾದ ಯೆಹೋವ ದೇವರಿಂದ ತಿರುಗುವಂತೆ ಮತ್ತು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ನಡೆಯಲು ಆಜ್ಞಾಪಿಸಿದ ಮಾರ್ಗದಿಂದ ನಿಮ್ಮನ್ನು ತಪ್ಪಿಸುವಂತೆ ಅವನು ಮಾತನಾಡಿದ್ದಾನೆ. ಹೀಗೆ ನೀವು ಕೆಟ್ಟದ್ದನ್ನು ನಿಮ್ಮಿಂದ ತೆಗೆದುಹಾಕಬೇಕು.
וְהַנָּבִ֣יא הַה֡וּא אֹ֣ו חֹלֵם֩ הַחֲלֹ֨ום הַה֜וּא יוּמָ֗ת כִּ֣י דִבֶּר־סָ֠רָה עַל־יְהוָ֨ה אֱלֹֽהֵיכֶ֜ם הַמֹּוצִ֥יא אֶתְכֶ֣ם ׀ מֵאֶ֣רֶץ מִצְרַ֗יִם וְהַפֹּֽדְךָ֙ מִבֵּ֣ית עֲבָדִ֔ים לְהַדִּֽיחֲךָ֙ מִן־הַדֶּ֔רֶךְ אֲשֶׁ֧ר צִוְּךָ֛ יְהוָ֥ה אֱלֹהֶ֖יךָ לָלֶ֣כֶת בָּ֑הּ וּבִֽעַרְתָּ֥ הָרָ֖ע מִקִּרְבֶּֽךָ׃
6 ನಿನ್ನ ಸಹೋದರನಾಗಲಿ, ಮಗನಾಗಲಿ, ಮಗಳಾಗಲಿ, ಪ್ರೀತಿಯ ಹೆಂಡತಿಯಾಗಲಿ, ಪ್ರಾಣ ಸ್ನೇಹಿತನಾಗಲಿ, “ನೀವೂ, ನಿಮ್ಮ ಪಿತೃಗಳೂ ತಿಳಿಯದ ಬೇರೆ ದೇವರುಗಳನ್ನು
כִּ֣י יְסִֽיתְךָ֡ אָחִ֣יךָ בֶן־אִ֠מֶּךָ אֹֽו־בִנְךָ֨ אֹֽו־בִתְּךָ֜ אֹ֣ו ׀ אֵ֣שֶׁת חֵיקֶ֗ךָ אֹ֧ו רֵֽעֲךָ֛ אֲשֶׁ֥ר כְּנַפְשְׁךָ֖ בַּסֵּ֣תֶר לֵאמֹ֑ר נֵֽלְכָ֗ה וְנַֽעַבְדָה֙ אֱלֹהִ֣ים אֲחֵרִ֔ים אֲשֶׁר֙ לֹ֣א יָדַ֔עְתָּ אַתָּ֖ה וַאֲבֹתֶֽיךָ׃
7 ನಿಮಗೆ ಸಮೀಪವಾಗಲಿ, ನಿಮಗೆ ದೂರವಾಗಲಿ ಭೂಮಿಯ ಒಂದು ಕಡೆಯಿಂದ ಅದರ ಮತ್ತೊಂದು ಕಡೆಯವರೆಗೆ ನಿಮ್ಮ ಸುತ್ತಲಿರುವ ಜನರ ದೇವರುಗಳನ್ನು ಸೇವಿಸೋಣ,” ಎಂದು ನಿಮ್ಮನ್ನು ಅಂತರಂಗದಲ್ಲಿ ಪ್ರೇರೇಪಿಸಿದರೆ,
מֵאֱלֹהֵ֣י הֽ͏ָעַמִּ֗ים אֲשֶׁר֙ סְבִיבֹ֣תֵיכֶ֔ם הַקְּרֹבִ֣ים אֵלֶ֔יךָ אֹ֖ו הָרְחֹקִ֣ים מִמֶּ֑ךָּ מִקְצֵ֥ה הָאָ֖רֶץ וְעַד־קְצֵ֥ה הָאָֽרֶץ׃
8 ನೀವು ಅವರಿಗೆ ಸಮ್ಮತಿಸಬಾರದು. ಅವರ ಮಾತನ್ನು ಕೇಳಬಾರದು. ನೀವು ಅವರನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು.
לֹא־תֹאבֶ֣ה לֹ֔ו וְלֹ֥א תִשְׁמַ֖ע אֵלָ֑יו וְלֹא־תָחֹ֤וס עֵֽינְךָ֙ עָלָ֔יו וְלֹֽא־תַחְמֹ֥ל וְלֹֽא־תְכַסֶּ֖ה עָלָֽיו׃
9 ಆ ಶಿಕ್ಷೆಯನ್ನು ನಡೆಸುವಾಗ ತಪ್ಪು ಕಂಡವನೇ ಮೊದಲು ಕಲ್ಲು ಎಸೆಯಬೇಕು, ತರುವಾಯ ಜನರೆಲ್ಲರೂ ಎಸೆಯಲಿ.
כִּ֤י הָרֹג֙ תַּֽהַרְגֶ֔נּוּ יָֽדְךָ֛ תִּֽהְיֶה־בֹּ֥ו בָרִֽאשֹׁונָ֖ה לַהֲמִיתֹ֑ו וְיַ֥ד כָּל־הָעָ֖ם בָּאַחֲרֹנָֽה׃
10 ಗುಲಾಮಗಿರಿಯಲ್ಲಿದ್ದ ನಿಮ್ಮನ್ನು ಬಿಡುಗಡೆ ಮಾಡಿ, ಈಜಿಪ್ಟ್ ದೇಶದಿಂದ ಕರೆದುತಂದ ನಿಮ್ಮ ದೇವರಾದ ಯೆಹೋವ ದೇವರ ಆಶ್ರಯದಿಂದ ಅಂಥವರು ನಿಮ್ಮನ್ನು ತಪ್ಪಿಸಬೇಕೆಂದು ಇದ್ದುದರಿಂದ, ಅಂಥವರನ್ನು ಕಲ್ಲು ಎಸೆದು ಕೊಲ್ಲಬೇಕು.
וּסְקַלְתֹּ֥ו בָאֲבָנִ֖ים וָמֵ֑ת כִּ֣י בִקֵּ֗שׁ לְהַדִּֽיחֲךָ֙ מֵעַל֙ יְהוָ֣ה אֱלֹהֶ֔יךָ הַמֹּוצִיאֲךָ֛ מֵאֶ֥רֶץ מִצְרַ֖יִם מִבֵּ֥ית עֲבָדִֽים׃
11 ಇಸ್ರಾಯೇಲರೆಲ್ಲಾ ಇದನ್ನು ಕೇಳಿ ಭಯಪಟ್ಟು, ಇನ್ನು ಮೇಲೆ ಕೆಟ್ಟದ್ದನ್ನು ಮಾಡದೆ ಇರುವರು.
וְכָל־יִשְׂרָאֵ֔ל יִשְׁמְע֖וּ וְיִֽרָא֑וּן וְלֹֽא־יֹוסִ֣פוּ לַעֲשֹׂ֗ות כַּדָּבָ֥ר הָרָ֛ע הַזֶּ֖ה בְּקִרְבֶּֽךָ׃ ס
12 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಸಮಾಡುವುದಕ್ಕೆ ಕೊಡುವ ಯಾವುದಾದರೂ ಪಟ್ಟಣದಲ್ಲಿ
כִּֽי־תִשְׁמַ֞ע בְּאַחַ֣ת עָרֶ֗יךָ אֲשֶׁר֩ יְהוָ֨ה אֱלֹהֶ֜יךָ נֹתֵ֥ן לְךָ֛ לָשֶׁ֥בֶת שָׁ֖ם לֵאמֹֽר׃
13 ದುಷ್ಟಜನರು ಎದ್ದು ತಮ್ಮ ಪಟ್ಟಣದಲ್ಲಿರುವ ಜನರನ್ನು, “ನೀವು ತಿಳಿಯದಿರುವ ಇತರ ದೇವರುಗಳನ್ನು ಪೂಜಿಸೋಣ ಬನ್ನಿರಿ,” ಎಂದು ಹೇಳಿ ದುರ್ಮಾಗಕ್ಕೆ ಎಳೆದಿದ್ದಾರೆ ಎಂಬ ಸುದ್ದಿ ನಿಮಗೆ ತಿಳಿಸಿದರೆ,
יָצְא֞וּ אֲנָשִׁ֤ים בְּנֵֽי־בְלִיַּ֙עַל֙ מִקִּרְבֶּ֔ךָ וַיַּדִּ֛יחוּ אֶת־יֹשְׁבֵ֥י עִירָ֖ם לֵאמֹ֑ר נֵלְכָ֗ה וְנַעַבְדָ֛ה אֱלֹהִ֥ים אֲחֵרִ֖ים אֲשֶׁ֥ר לֹא־יְדַעְתֶּֽם׃
14 ನೀವು ಹುಡುಕಿ ಶೋಧಿಸಿ ಚೆನ್ನಾಗಿ ವಿಚಾರಣೆ ಮಾಡಬೇಕು. ಆ ಕಾರ್ಯವು ನಿಶ್ಚಯವಾಗಿ ಸತ್ಯವಾದರೆ, ಅಂಥ ಅಸಹ್ಯವು ನಿಮ್ಮಲ್ಲಿ ನಡೆದದ್ದಾದರೆ,
וְדָרַשְׁתָּ֧ וְחָקַרְתָּ֧ וְשָׁאַלְתָּ֖ הֵיטֵ֑ב וְהִנֵּ֤ה אֱמֶת֙ נָכֹ֣ון הַדָּבָ֔ר נֶעֶשְׂתָ֛ה הַתֹּועֵבָ֥ה הַזֹּ֖את בְּקִרְבֶּֽךָ׃
15 ಆ ಊರನ್ನು ಸಂಪೂರ್ಣವಾಗಿ ನಾಶಮಾಡಬೇಕು. ಅದನ್ನೂ, ಅದರಲ್ಲಿರುವ ಎಲ್ಲದನ್ನೂ, ಅದರ ಪಶುಗಳನ್ನೂ ಸಹ ಶಪಿಸಿ ಖಡ್ಗದಿಂದ ನಿರ್ಮೂಲ ಮಾಡಬೇಕು.
הַכֵּ֣ה תַכֶּ֗ה אֶת־יֹֽשְׁבֵ֛י הָעִ֥יר הַהוּא (הַהִ֖יא) לְפִי־חָ֑רֶב הַחֲרֵ֨ם אֹתָ֧הּ וְאֶת־כָּל־אֲשֶׁר־בָּ֛הּ וְאֶת־בְּהֶמְתָּ֖הּ לְפִי־חָֽרֶב׃
16 ಇದಲ್ಲದೆ ಆ ಊರಿನ ಎಲ್ಲಾ ಸಾಮಗ್ರಿಗಳನ್ನು ಅದರ ಬೀದಿಯ ಮಧ್ಯದಲ್ಲಿ ಕೂಡಿಸಿ, ಆ ಪಟ್ಟಣವನ್ನೂ, ಅದರ ಎಲ್ಲಾ ವಸ್ತುವನ್ನೂ ಸಂಪೂರ್ಣವಾಗಿ ನಿಮ್ಮ ದೇವರಾದ ಯೆಹೋವ ದೇವರಿಗೆ ದಹನಬಲಿಯಾಗಿ ಸುಟ್ಟುಬಿಡಬೇಕು. ಅದು ಎಂದಿಗೂ ಹಾಳುದಿಬ್ಬವಾಗಿರಬೇಕು; ಇನ್ನು ಮೇಲೆ ಅದನ್ನು ಕಟ್ಟಬಾರದು; ಆ ಶಾಪಗ್ರಸ್ತ ವಸ್ತುಗಳಲ್ಲಿ ಏನನ್ನೂ ತೆಗೆದುಕೊಳ್ಳಬಾರದು.
וְאֶת־כָּל־שְׁלָלָ֗הּ תִּקְבֹּץ֮ אֶל־תֹּ֣וךְ רְחֹבָהּ֒ וְשָׂרַפְתָּ֨ בָאֵ֜שׁ אֶת־הָעִ֤יר וְאֶת־כָּל־שְׁלָלָהּ֙ כָּלִ֔יל לַיהוָ֖ה אֱלֹהֶ֑יךָ וְהָיְתָה֙ תֵּ֣ל עֹולָ֔ם לֹ֥א תִבָּנֶ֖ה עֹֽוד׃
17 ಇದಲ್ಲದೆ ನೀವು ನಿಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಕಾಪಾಡಿ,
וְלֹֽא־יִדְבַּ֧ק בְּיָדְךָ֛ מְא֖וּמָה מִן־הַחֵ֑רֶם לְמַעַן֩ יָשׁ֨וּב יְהוָ֜ה מֵחֲרֹ֣ון אַפֹּ֗ו וְנָֽתַן־לְךָ֤ רַחֲמִים֙ וְרִֽחַמְךָ֣ וְהִרְבֶּ֔ךָ כַּאֲשֶׁ֥ר נִשְׁבַּ֖ע לַאֲבֹתֶֽיךָ׃
18 ನಿಮ್ಮ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದಾಗ ಯೆಹೋವ ದೇವರು ತಮ್ಮ ಕೋಪವನ್ನು ಬಿಟ್ಟು, ತಿರುಗಿ ನಿಮಗೆ ದಯೆಯನ್ನು ತೋರಿಸಿ, ನಿಮ್ಮ ಮೇಲೆ ಕನಿಕರಪಟ್ಟು, ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವರು.
כִּ֣י תִשְׁמַ֗ע בְּקֹול֙ יְהוָ֣ה אֱלֹהֶ֔יךָ לִשְׁמֹר֙ אֶת־כָּל־מִצְוֹתָ֔יו אֲשֶׁ֛ר אָנֹכִ֥י מְצַוְּךָ֖ הַיֹּ֑ום לַעֲשֹׂות֙ הַיָּשָׁ֔ר בְּעֵינֵ֖י יְהוָ֥ה אֱלֹהֶֽיךָ׃ ס

< ಧರ್ಮೋಪದೇಶಕಾಂಡ 13 >