< ದಾನಿಯೇಲನು 9 >

1 ಅಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ ಆದ ದಾರ್ಯಾವೆಷನ ಆಳ್ವಿಕೆಯ ಪ್ರಥಮ ವರ್ಷದಲ್ಲಿ ಬಾಬಿಲೋನ್ ರಾಜ್ಯದ ಮೇಲೆ ಅಧಿಕಾರಿಯಾಗಿದ್ದಾಗ,
Медиалиқ Аһашверошниң оғли Дариусниң биринчи жилида (у калдийләрниң зиминиға падиша қилинди)
2 ದಾನಿಯೇಲನಾದ ನಾನು ಪವಿತ್ರ ಗ್ರಂಥಗಳನ್ನು ಪರೀಕ್ಷಿಸಿ, ಯೆಹೋವ ದೇವರ ಪ್ರವಾದಿ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ, ಯೆರೂಸಲೇಮ್ ಪಾಳುಬಿದ್ದಿರಬೇಕಾದ ಪೂರ್ಣ ಕಾಲಾವಧಿ ಎಪ್ಪತ್ತು ವರ್ಷಗಳೆಂದು ತಿಳಿದುಕೊಂಡೆನು.
Йәни тәхткә олтарған биринчи жили мәнки Даниял муқәддәс язмиларни оқушум билән Пәрвәрдигарниң Йәрәмия пәйғәмбәргә йәткүзгән калам-бешарити бойичә, Йерусалимниң харап болидиған җаза мәзгили йәтмиш жил екәнлигини чүшинип йәттим.
3 ಆದ್ದರಿಂದ ನಾನು ಉಪವಾಸದಿಂದ ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ಬಳಿದುಕೊಂಡು, ಪ್ರಾರ್ಥನೆಗಳಿಂದ ಮತ್ತು ವಿಜ್ಞಾಪನೆಗಳಿಂದ ಕರ್ತರಾದ ದೇವರ ಕಡೆಗೆ ನನ್ನ ಮುಖವನ್ನು ತಿರುಗಿಸಿದೆನು.
Шуниң үчүн мән Рәб Худайимға роза тутуп, бөз рәхткә йөгинип, күл-топида олтирип, униңға йелинип дуа-тилавәт қилиш билән издинишкә бәл бағлидим.
4 ನಾನು ನನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥಿಸಿ, ಅರಿಕೆಮಾಡಿದೆನು: “ಕರ್ತನೇ, ಮಹೋನ್ನತ ಮತ್ತು ಅದ್ಭುತ ದೇವರೇ, ನಿಮ್ಮನ್ನು ಪ್ರೀತಿಮಾಡಿ, ನಿಮ್ಮ ಆಜ್ಞೆಗಳನ್ನು ಕೈಗೊಂಡು ನಡೆಯುವವರಿಗೆ ಒಡಂಬಡಿಕೆಯ ಪ್ರೀತಿಯನ್ನೂ ಇಟ್ಟು ನೆರವೇರಿಸುವವರೇ,
Мән Пәрвәрдигар Худайимға дуа қилип, гуналиримизни иқрар қилип мундақ дедим: — «Аһ Рәб, и Сени Өз әмирлириңгә итаәт қилғучиларға вәдә-әһдәңдә вападар болуп, өзгәрмәс меһриңни үзлүксиз көрсәткүчи улуқ, сүрлүк Тәңрим!
5 ನಾವು ಪಾಪಮಾಡಿದ್ದೇವೆ ಮತ್ತು ಅಕ್ರಮಗಳನ್ನು ಮಾಡಿದ್ದೇವೆ. ಕೆಟ್ಟವರಾಗಿ ನಡೆದಿದ್ದೇವೆ ಮತ್ತು ತಿರುಗಿಬಿದ್ದಿದ್ದೇವೆ. ನಿಮ್ಮ ಕಟ್ಟಳೆಗಳನ್ನು ಮತ್ತು ನ್ಯಾಯಗಳನ್ನು ತೊರೆದುಬಿಟ್ಟಿದ್ದೇವೆ.
Биз гуна садир қилдуқ, қәбиһлик қилдуқ; рәзиллик билән Сениң әмир-һөкүмлириңдин ваз кечип, Саңа асийлиқ қилдуқ,
6 ನಿಮ್ಮ ಹೆಸರಿನಲ್ಲಿ ನಮ್ಮ ಅರಸರಿಗೂ, ನಮ್ಮ ರಾಜಕುಮಾರರಿಗೂ, ನಮ್ಮ ಪೂರ್ವಜರಿಗೂ ದೇಶದ ಎಲ್ಲಾ ಜನರಿಗೂ ಮಾತನಾಡಿದ ನಿಮ್ಮ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡಲಿಲ್ಲ.
Шундақла Сениң намиң билән падишалиримиз, әмирлиримиз, ата-бовилиримиз вә пүткүл зиминдики хәлиққә сөз-каламиңни йәкүзгән қуллириң болған пәйғәмбәрләргә зади қулақ салмидуқ.
7 “ಕರ್ತದೇವರೇ, ನೀವು ನೀತಿವಂತರು, ಆದರೆ ನಾವು ಈ ದಿನ ಬಹಳ ಲಜ್ಜೆಗೆಟ್ಟವರು. ಯೆಹೂದ್ಯರು ಹಾಗು ಯೆರೂಸಲೇಮಿನ ನಿವಾಸಿಗಳು ಈಗಾಗಲೇ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ಚದರಿಹೋಗಿದ್ದಾರೆ. ದೂರದ ದೇಶಗಳಿಗೂ, ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಆ ಎಲ್ಲಾ ಇಸ್ರಾಯೇಲರು ನಾಚಿಕೆಗೆ ಈಡಾಗಿದ್ದಾರೆ.
И Рәб, һәққанийәт Сәндила тепилиду, лекин Саңа асийлиқ вә вапасизлиқ қилғанлиғимиз түпәйлидин, бизгә, йәни Йәһудаларға, Йерусалимдикиләргә вә барлиқ Исраилларға, йеқинда болсун, жирақта болсун, Сән бизләрни сүргүнлүккә һайдивәткән барлиқ жутларда болсун, пәқәт бүгүнкидәк йүзимизни көтирәлмигидәк шәрмәндиликла қалди.
8 ಯೆಹೋವ ದೇವರೇ, ನಮ್ಮ ಅರಸರಿಗೂ ನಮ್ಮ ರಾಜಕುಮಾರರಿಗೂ, ನಮ್ಮ ಪೂರ್ವಜರಿಗೂ, ನಮಗೂ ನಾಚಿಕೆಯಾಗಿದೆ. ಏಕೆಂದರೆ ನಿಮಗೆ ವಿರುದ್ಧವಾಗಿ ನಾವು ಪಾಪಮಾಡಿದ್ದೇವೆ.
И Рәб, бизгә, йәни падишалиримизға, әмирлиримизгә вә ата-бовилиримизғиму йүзимизни көтирәлмигидәк шәрмәндилик қалди; чүнки биз Сениң алдиңда гуна садир қилдуқ.
9 ನಾವು ಆತನಿಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದರೂ, ನಮ್ಮ ಕರ್ತದೇವರು ಕರುಣೆಯುಳ್ಳವರೂ ಕ್ಷಮಿಸುವವರೂ ಆಗಿದ್ದಾರೆ.
И Рәб Худайимиз, биз Саңа асийлиқ қилған болсақму, Сәндин йәнила рәһимдиллик вә мәғпирәт-кәчүрүмләр тепилиду.
10 ನಾವು ನಮ್ಮ ದೇವರಾದ ಯೆಹೋವ ದೇವರಿಗೆ ವಿಧೇಯರಾಗಲಿಲ್ಲ, ಅವರು ತಮ್ಮ ಸೇವಕರಾದ ಪ್ರವಾದಿಗಳ ಮೂಲಕ ನಮಗೆ ನೀಡಿದ ನಿಯಮಗಳನ್ನು ಪಾಲಿಸಲಿಲ್ಲ.
Биз Сән Пәрвәрдигар Худайимизниң авазиға қулақ салмай, қуллириң болған пәйғәмбәрләр арқилиқ алдимизға қойған қанун-һөкүмлириңдә һеч маңмидуқ.
11 ಎಲ್ಲಾ ಇಸ್ರಾಯೇಲರು ನಿಮ್ಮ ನಿಯಮವನ್ನು ಮೀರಿ ನಿಮಗೆ ವಿಧೇಯರಾಗದೇ ತೊಲಗಿ ಹೋದರು. “ಆದ್ದರಿಂದ ಶಾಪವೂ, ದೇವರ ಸೇವಕನಾದ ಮೋಶೆಯು ನಿಯಮದಲ್ಲಿ ಬರೆದ ನ್ಯಾಯ ತೀರ್ಪುಗಳೂ ಅವರಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ, ನಮ್ಮ ಮೇಲೆ ಸುರಿಯಲಾಗಿದೆ.
Пүткүл Исраил Сениң Тәврат-қанунуңға хилаплиқ қилип, авазиңға қулақ салмай Сениңдин йүз өриди. Дәрвәқә, Сениң қулуң Мусаға чүшүрүлгән Тәврат-қанунида пүтүлгән ләнәт һәмдә униң қәсәмядидики җазалар үстимизгә яғдурулди; чүнки биз Сениң алдиңда гуна садир қилдуқ.
12 ಅವರು ನಮಗೂ, ನಮಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳಿಗೂ ವಿರೋಧವಾಗಿ ತಾವು ಹೇಳಿದ ಮಾತುಗಳನ್ನು ನೆರವೇರಿಸಿ, ನಮ್ಮ ಮೇಲೆ ದೊಡ್ಡ ವಿನಾಶ ಬರುವ ಹಾಗೆ ಮಾಡಿದ್ದಾರೆ. ಯೆರೂಸಲೇಮಿನಲ್ಲಿ ನಡೆದ ಹಾಗೆ ಇಡೀ ಆಕಾಶದ ಕೆಳಗೆ ಎಲ್ಲೂ ನಡೆಯಲಿಲ್ಲ.
Сән Өзүң бизгә вә үстимиздин һөкүмдарлиқ қилғучимизға қарита дегәнлириңгә әмәл қилип бизгә зор еғир күлпәтни кәлтүрдүң; чүнки Йерусалимда қилинған ишлар асман астидики һәр қандақ башқа жутта әзәлдин қилинған әмәс!
13 ಮೋಶೆಯ ನಿಯಮದಲ್ಲಿ ಬರೆದಿರುವ ಪ್ರಕಾರ, ಈ ಎಲ್ಲಾ ವಿನಾಶ ನಮ್ಮ ಮೇಲೆ ಬಂದಿದೆ. ಆದರೂ ನಾವು ನಮ್ಮ ಅಕ್ರಮಗಳನ್ನು ಬಿಟ್ಟು, ತಿರುಗಿಕೊಂಡು ನಿಮ್ಮ ಸತ್ಯವನ್ನು ತಿಳಿದುಕೊಳ್ಳುವಂತೆ, ನಮ್ಮ ದೇವರಾದ ಯೆಹೋವ ದೇವರ ದಯೆಯನ್ನು ಬೇಡಿಕೊಳ್ಳಲಿಲ್ಲ.
Мусаға тапиланған Тәврат-қанунида пүтүлгәндәк, бу пүтүн күлпәт бизгә чүшүрүлгән болсиму, и Пәрвәрдигар Худайимиз, лекин биз қәбиһликлиримиздин қол үзүп, һәқиқитиңни чүшинип йетидиған қилғайсән дәп техичә Сәндин илтипатиңни өтүнмидуқ.
14 ನಮ್ಮ ದೇವರಾದ ಯೆಹೋವ ದೇವರು ತಾವು ಮಾಡುವ ಎಲ್ಲದರಲ್ಲಿಯೂ ನೀತಿವಂತರಾಗಿದ್ದುದರಿಂದ, ವಿನಾಶವನ್ನು ನಮ್ಮ ಮೇಲೆ ಬರಮಾಡಲು ಯೆಹೋವ ದೇವರು ಹಿಂಜರಿಯಲಿಲ್ಲ. ಆದರೂ ನಾವು ಅವರಿಗೆ ವಿಧೇಯರಾಗಲೇ ಇಲ್ಲ.
Дәрвәқә Сән Пәрвәрдигар шу күлпәтни тәйярлап сақлап, бизниң үстимизгә чүшүрдуң; чүнки Сән Пәрвәрдигар Худайимиз, барлиқ қилған ишлириңда адил болуп кәлдиң; бирақ авазиңға қулақ салмидуқ.
15 “ಈಗ ನಮ್ಮ ಕರ್ತದೇವರೇ, ನಿಮ್ಮ ಭುಜಬಲವನ್ನು ತೋರಿಸಿ, ನಿಮ್ಮ ಜನರನ್ನು ಈಜಿಪ್ಟ್ ದೇಶದೊಳಗಿಂದ ಪಾರುಮಾಡಿ, ಈವರೆಗೂ ಪ್ರಸಿದ್ಧವಾದ ಹೆಸರು ಪಡೆದುಕೊಂಡವರೇ, ನಾವು ಪಾಪಮಾಡಿದ್ದೇವೆ, ನಾವು ಕೆಟ್ಟವರಾಗಿ ನಡೆದುಕೊಂಡಿದ್ದೇವೆ.
Әнди, Өз күчлүк қолуң билән хәлқиңни Мисирдин елип чиқтиң, шуңлашқа бүгүнкидәк Өзүңгә нам-шөһрәт тиклидиң, и Рәб Худайимиз, — биз гуна садир қилдуқ, биз рәзиллик қилдуқ!
16 ಕರ್ತದೇವರೇ, ನಿಮ್ಮ ಎಲ್ಲಾ ನೀತಿಗಳ ಪ್ರಕಾರ ನಿಮ್ಮ ಕೋಪವನ್ನು, ನಿಮ್ಮ ಉಗ್ರತ್ವವನ್ನು ನಿಮ್ಮ ಪಟ್ಟಣವಾದ ಯೆರೂಸಲೇಮಿನಿಂದಲೂ ನಿಮ್ಮ ಪರಿಶುದ್ಧ ಪರ್ವತದಿಂದಲೂ ತಿರುಗಿಸಿಬಿಡಿರಿ. ನಮ್ಮ ಪಾಪಗಳ ನಿಮಿತ್ತದಿಂದಲೂ, ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮ್ ಮತ್ತು ನಿಮ್ಮ ಜನರು ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿವೆ.
Өтүнимән, и Рәб, пүткүл һәққанийлиғиңға уйғун, Йерусалим шәһириңгә, йәни муқәддәс теғиңға болған қәһр-ғәзивиңни тохтатқайсән! Чүнки бизниң өткүзгән гуналиримиз вә ата-бовилиримизниң қилған қәбиһликлириниң вәҗидин, Йерусалим вә хәлқиң барлиқ әтраптикилиримизниң һақарәт объекти болуп қалдуқ.
17 “ಈಗ, ನಮ್ಮ ದೇವರೇ, ಈ ನಿಮ್ಮ ಸೇವಕನ ಪ್ರಾರ್ಥನೆ ಮತ್ತು ವಿಜ್ಞಾಪನೆಗಳನ್ನು ಕೇಳಿರಿ. ಕರ್ತದೇವರೇ, ಹಾಳಾಗಿರುವ ನಿಮ್ಮ ಪರಿಶುದ್ಧ ಸ್ಥಳವನ್ನು ನಿಮ್ಮ ನಿಮಿತ್ತವಾಗಿ ಅನುಗ್ರಹದಿಂದ ನೋಡಿರಿ.
Әнди и Худайимиз, қулуңниң дуа вә тәләплиригә қулақ салғайсән, Өзүң үчүн вәйран қилинған муқәддәс җайиңни җамалиңни көрситип йорутқайсән.
18 ನನ್ನ ದೇವರೇ, ನೀವು ಕಿವಿಗೊಟ್ಟು ಕೇಳಿರಿ. ನಿಮ್ಮ ಕಣ್ಣುಗಳನ್ನು ತೆರೆದು ನಮ್ಮ ನಾಶವನ್ನೂ, ನಿಮ್ಮ ಹೆಸರಿನಿಂದ ಕರೆಯಲಾಗುವ ಈ ಹಾಳಾಗಿರುವ ಪಟ್ಟಣವನ್ನೂ ನೋಡಿರಿ. ಏಕೆಂದರೆ ನಾವು ನಮ್ಮ ನೀತಿಗೋಸ್ಕರವಲ್ಲ, ನಿಮ್ಮ ಮಹಾ ಕರುಣೆಗಾಗಿಯೇ ನಮ್ಮ ವಿಜ್ಞಾಪನೆಗಳನ್ನು ನಿಮ್ಮ ಮುಂದೆ ಅರ್ಪಿಸುತ್ತೇವೆ.
И Худайим, қулақ селип аңлиғайсән! Бизниң вә Сениң намиң билән аталған шәһәрниң бешиға кәлгән күлпәтләргә нәзәр салғайсән! Бизниң Саңа илтиҗа қилғинимиз өзимизниң қандақтур һәққаний иш қилғанлиғимиздин әмәс, бәлки Сениң зор рәһимдиллиқлириңға таянғанлиғимиз сәвибидиндур.
19 ಕರ್ತದೇವರೇ ಕೇಳಿರಿ! ಕರ್ತದೇವರೇ ಕ್ಷಮಿಸಿರಿ! ಕರ್ತದೇವರೇ ಲಾಲಿಸಿರಿ ಮತ್ತು ಕಾರ್ಯವನ್ನು ಸಾಧಿಸಿರಿ! ನನ್ನ ದೇವರೇ, ನಿಮ್ಮ ನಿಮಿತ್ತವಾಗಿ ತಡಮಾಡಬೇಡಿರಿ. ಏಕೆಂದರೆ ನಿಮ್ಮ ಪಟ್ಟಣವೂ ನಿಮ್ಮ ಜನರೂ ನಿಮ್ಮ ಹೆಸರನ್ನು ಧರಿಸಿದ್ದಾರೆ.”
И Рәб, аңлиғайсән! И Рәб, кәчүргәйсән! Қулақ селип аңлап амал қилғайсән! Өзүңниң нам-шөһритиң үчүн әнди тәхир қилмиғайсән! Чүнки Сениң бу шәһириң вә бу хәлқиң Өз намиң асасида аталған еди!».
20 ನಾನು ಮಾತಾಡುತ್ತಾ, ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ, ನನ್ನ ಜನರಾದ ಇಸ್ರಾಯೇಲರ ಪಾಪವನ್ನೂ ಅರಿಕೆಮಾಡುತ್ತಾ, ನನ್ನ ದೇವರಾದ ಯೆಹೋವ ದೇವರ ಮುಂದೆ ಅವರ ಪರಿಶುದ್ಧ ಪರ್ವತಕ್ಕೋಸ್ಕರವಾಗಿ, ವಿಜ್ಞಾಪಿಸುತ್ತಿರಲಾಗಿ,
Мән дуайимни давамлаштуруп, өзүм вә хәлқим Исраилниң гуналирини иқрар қилип һәмдә Худайимниң муқәддәс теғи үчүн Пәрвәрдигар Худайимға йелинип,
21 ನಾನು ಇನ್ನೂ ಪ್ರಾರ್ಥಿಸುತ್ತಿದ್ದಾಗ, ನಾನು ಮೊದಲ ದರ್ಶನದಲ್ಲಿ ಕಂಡಿದ್ದ ಸುಮಾರು ಸಾಯಂಕಾಲದ ನೈವೇದ್ಯವನ್ನು ಅರ್ಪಿಸುವ ಹೊತ್ತಿನಲ್ಲಿ, ನನ್ನ ಬಳಿ ಗಬ್ರಿಯೇಲನು ಬೇಗನೆ ಹಾರಿ ಬಂದು,
техи дуа қиливатқинимда, дәсләптә маңа ғайипанә аламәттә көрүнгән Җәбраил дегән зат йенимға келип маңа қолини тәккүзди. Мән шу чағда толиму чарчап кәткән едим. У кәчлик қурбанлиқ сунуш вақти еди.
22 ನನಗೆ, “ದಾನಿಯೇಲನೇ, ನಿನಗೆ ವಿವೇಕವನ್ನೂ, ಬುದ್ಧಿಯನ್ನೂ ಕೊಡುವುದಕ್ಕೆ ಈಗ ನಾನು ಬಂದಿದ್ದೇನೆ.
Җәбраил маңа әқил берип мундақ деди: — «И Даниял, мән сени йорутуп, ишларни чоңқур чүшинәләйдиған қилишқа кәлдим.
23 ನೀನು ವಿಜ್ಞಾಪನೆ ಮಾಡಿದ ಕೂಡಲೇ ಉತ್ತರ ಸಿಕ್ಕಿತು. ಅದನ್ನು ನಿನಗೆ ತಿಳಿಸುವುದಕ್ಕೆ ನಾನು ಬಂದಿದ್ದೇನೆ. ಏಕೆಂದರೆ ನೀನು ಅತಿ ಪ್ರಿಯನಾಗಿರುವೆ. ಆದ್ದರಿಂದ ವಿಷಯವನ್ನು ಗ್ರಹಿಸಿಕೊಂಡು ದರ್ಶನವನ್ನು ತಿಳಿದುಕೋ.
Сән Худаға илтиҗа қилишқа башлишиң биләнла, җавап-калам берилди; сән интайин сөйүлгән адәм болғачқа, мән саңа униң җавап-каламини йәткүзгили кәлдим. Әнди бу җавап-калам үстидә пухта ойланғин, ғайипанә көрүнүшни көңүл қоюп чүшәнгин:
24 “ಅಕ್ರಮಗಳನ್ನು ಮುಗಿಸುವುದಕ್ಕೂ, ಪಾಪಗಳನ್ನು ಮುಚ್ಚುವುದಕ್ಕೂ, ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕೂ, ನಿತ್ಯವಾದ ನೀತಿಯನ್ನು ಬರಮಾಡುವುದಕ್ಕೂ, ಆ ದರ್ಶನಕ್ಕೂ, ಪ್ರವಾದಿಯ ನುಡಿಗೆ ಮುದ್ರೆಹಾಕುವುದಕ್ಕೂ, ಮಹಾಪರಿಶುದ್ಧ ಸ್ಥಳವನ್ನು ಅಭಿಷೇಕ ಮಾಡುವುದಕ್ಕೂ ನಿನ್ನ ಜನರ ಮೇಲೆಯೂ, ನಿನ್ನ ಪರಿಶುದ್ಧ ಪಟ್ಟಣದ ಮೇಲೆಯೂ ಎಪ್ಪತ್ತು ವಾರಗಳು ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ.
— «[Худа] тәрипидин «йәтмиш һәссә «йәттә вақит»» сениң хәлқиң билән муқәддәс шәһириң үстигә бекитилгән. Бу вақитлар итаәтсизликләрни тизгинләш, гуналарни түгитиш, қәбиһлик үчүн кафарәт кәлтүрүш, мәңгүлүк һәққанийлиқни үстүн орунға қоюш, бу ғайипанә аламәт билән пәйғәмбәрләрниң сөз-каламлирини әмәлгә ашуруш һәмдә муқәддәс ибадәтханидики «әң муқәддәс җай» йеңибаштин мәсиһлиниш үчүн бекитилгәндур.
25 “ಆದ್ದರಿಂದ ನೀನು ಅರಿತು ತಿಳಿಯಬೇಕಾದದ್ದು ಏನೆಂದರೆ, ಯೆರೂಸಲೇಮನ್ನು ತಿರುಗಿ ಕಟ್ಟಲು ಆಜ್ಞೆ ಹೊರಡುವ ದಿನದಿಂದ, ಆಳುವ ಒಬ್ಬ ಅಭಿಷಿಕ್ತರು ಬರುವುದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಿದ ಮೇಲೆ, ಅರವತ್ತೆರಡು ವಾರಗಳು ಇರುವುದು. ಕಷ್ಟಕಾಲದಲ್ಲಿ ಬೀದಿ ಚೌಕಗಳಿಂದಲೂ ಕೋಟೆಕೊತ್ತಲುಗಳಿಂದಲೂ ಅದು ಕಟ್ಟಲಾಗುವುದು.
Шуни билишиң вә чүшинишиң керәкки, Йерусалимни йеңибаштин әслигә кәлтүрүп бена қилиш буйруғи җакаланғандин тартип, Мәсиһ дегән әмир мәйданға чиққичә йәттә һәссә «йәттә вақит» қошулған атмиш икки һәссә «йәттә вақит» өтиду. Йерусалим шәһири йеңибаштин бена қилинип, мәйдан-кочилар вә сепил-истиһкам барлиққа кәлтүрүлиду, амма бу бисәрәмҗан күнләрдә болиду.
26 ಅರವತ್ತೆರಡು ವಾರಗಳಾದ ಮೇಲೆ ಆ ಅಭಿಷಿಕ್ತರನ್ನು ಕೊಂದುಹಾಕುವರು. ಅವರಿಗೆ ಏನೂ ಇರುವುದಿಲ್ಲ. ಆದರೆ ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ, ಪರಿಶುದ್ಧ ಸ್ಥಳವನ್ನೂ ನಾಶಮಾಡುವರು. ಪ್ರಳಯದಿಂದ ಅದು ಅಂತ್ಯವಾಗುವುದು. ಅಂತ್ಯದವರೆಗೂ ಯುದ್ಧವಾಗಿ ನಾಶ ಸಂಭವಿಸುವುದು.
Бу атмиш икки «йәттә вақит» мәзгили өткәндин кейин Мәсиһ үзүп ташлиниду, униңда һеч нәрсә қалмайду. Кәлгүсидә болидиған әмирниң хәлқи бу шәһәр билән муқәддәс ибадәтханини гумран қилиду. Бу ақивәт кәлкүндәк бесип келиду; ахириғичә җәңләр давамлишиду; у йәрдә болидиған вәйранчилиқлар бекитилгәндур.
27 ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಅರ್ಧದಲ್ಲಿ ಯಜ್ಞವನ್ನೂ, ಅರ್ಪಣೆಯನ್ನೂ ನಿಲ್ಲಿಸುವನು. ದೇವಾಲಯದಲ್ಲಿ ಹಾಳುಮಾಡುವ ಅಸಹ್ಯ ವಸ್ತುವನ್ನು ಅವನು ಸ್ಥಾಪಿಸುವನು. ಇದು ಅವನ ಮೇಲೆ ನಿರ್ಣಯವಾದದ್ದು, ಸುರಿಯುವ ತನಕ ಇರುವುದು,” ಎಂದು ಹೇಳಿದನು.
У [әмир Худаниң] хәлқиниң көп қисми билән ахирқи бир «йәттә вақит»та бир [достлуқ] әһдисни такамул қилиду, лекин бу «йәттә вақит»ниң йеримиға кәлгәндә, у [ибадәтханидики] қурбанлиқ вә ашлиқ һәдийәләрни сунушни әмәлдин қалдуриду. У чағда «вәйран қилғучи жиркиничлик номуссизлиқ» [муқәддәс ибадәтханиниң] әң егиз җайиға қоюлиду. Таки балаю-апәт, [йәни Худа] бекиткән күлпәт вәйран қилғучи кишиниң бешиға яғдурулғичә шу йәрдә туриду».

< ದಾನಿಯೇಲನು 9 >