< ಕೊಲೊಸ್ಸೆಯರಿಗೆ ಬರೆದ ಪತ್ರಿಕೆ 4 >

1 ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನಿದ್ದಾನೆಂದು ತಿಳಿದು ನಿಮ್ಮ ದಾಸರಿಗೆ ನ್ಯಾಯವಾದದ್ದನ್ನೂ, ಯೋಗ್ಯವಾದದ್ದನ್ನೂ ಕೊಡಿರಿ.
Ri ix, ri ix ajchoqꞌe chak, chiya ri qas taqal chike ri iꞌwajchakibꞌ, qas tzꞌaqat chibꞌana che, naꞌtaj chiꞌwe chi kꞌo jun iwajaw pa ri kaj.
2 ಎಚ್ಚರವಾಗಿದ್ದು ಕೃತಜ್ಞತೆ ಉಳ್ಳವರಾಗಿ ಪ್ರಾರ್ಥನೆಯಲ್ಲಿ ನಿರತರಾಗಿರಿ.
Are chiwilij ubꞌanik chꞌawem, chixjeqel chupam rukꞌ tyoxinik.
3 ನಾವು ಕ್ರಿಸ್ತ ಯೇಸುವಿನ ರಹಸ್ಯವನ್ನು ಮಾತನಾಡುವಂತೆ ದೇವರು ನಮ್ಮ ಸಂದೇಶಕ್ಕೆ ಬಾಗಿಲನ್ನು ತೆರೆಯುವಂತೆ ನಮಗೋಸ್ಕರವೂ ಪ್ರಾರ್ಥಿಸಿರಿ. ಈ ಸೇವೆಗಾಗಿಯೇ ನಾನು ಸೆರೆಯಲ್ಲಿದ್ದೇನಲ್ಲಾ.
Chibꞌana xuqujeꞌ chꞌawem pa qawiꞌ rech kujaq ri Dios kꞌi kꞌolibꞌal rech kaqatzijoj ri utzij, ri rumal utzijoxik in tzꞌapil pa cheꞌ.
4 ಆದಕಾರಣ ನಾನು ಆ ರಹಸ್ಯವನ್ನು ಮಾಡಬಯಸುವ ರೀತಿಯಲ್ಲಿ ಸ್ಪಷ್ಟವಾಗಿ ಸಾರುವಂತೆಯೂ ಬೇಡಿಕೊಳ್ಳಿರಿ.
Chibꞌana chꞌawem rech qas kꞌyaqal kinbꞌan chutzijoxik, jacha ri kajawatajik.
5 ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಮಾಡಿಕೊಂಡು ಹೊರಗಿನವರೊಂದಿಗೆ ಜಾಣತನದಿಂದ ನಡೆದುಕೊಳ್ಳಿರಿ.
Rukꞌ etaꞌmabꞌal chixnoꞌjin kukꞌ ri winaq ri man e kojonelabꞌ taj che ri Cristo, qas utz chibꞌana chukojik ri qꞌotaj.
6 ನಿಮ್ಮ ಸಂಭಾಷಣೆ ಯಾವಾಗಲೂ ಪೂರ್ಣ ಕೃಪೆಯುಳ್ಳದ್ದೂ, ಉಪ್ಪಿನಿಂದ ಹದವುಳ್ಳದ್ದೂ ಆಗಿರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.
Qas utz chibꞌana che ri itzijonem xuqujeꞌ qas kꞌo rumal chixtzijonoq. Rech iwetaꞌm jas kibꞌan chutzalixik uwach ri kitzij ri winaq chi kijujunal.
7 ಪ್ರಿಯ ಸಹೋದರನೂ ನಂಬಿಗಸ್ತ ಸೇವಕನೂ ಮತ್ತು ಕರ್ತ ಯೇಸುವಿನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯವನ್ನೆಲ್ಲಾ ನಿಮಗೆ ತಿಳಿಸುವನು.
Ri loqꞌalaj qachalal Tíquico, sukꞌ patanijel xuqujeꞌ tobꞌanel pa ri Ajawxel, kutzijoj wa chiꞌwe qas jas je nubꞌanom.
8 ನೀವು ನಮ್ಮ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವಂತೆಯೂ, ಅವನು ನಿಮ್ಮ ಹೃದಯಗಳನ್ನು ಉತ್ತೇಜಿಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
Kintaq bꞌik iwukꞌ rech kito qas jeꞌ ri qabꞌanom jeriꞌ kikꞌamawaꞌj ichuqꞌabꞌ.
9 ನಿಮ್ಮಲ್ಲಿ ಒಬ್ಬನಾಗಿರುವ ನಂಬಿಗಸ್ತನೂ, ಪ್ರಿಯ ಸಹೋದರನೂ ಆದ ಓನೇಸಿಮನ ಜೊತೆಯಲ್ಲಿ ಅವನನ್ನು ನಾನು ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.
Keꞌ xuqujeꞌ ri Onésimo rukꞌ. Areꞌ jun iwachiꞌl ix. Kuꞌtzijoj waꞌ chiꞌwe jas ri tajin kakꞌulmataj waral.
10 ನನ್ನ ಜೊತೆ ಸೆರೆಯಾಳಾದ ಅರಿಸ್ತಾರ್ಕ, ಬಾರ್ನಬನ ಸಹೋದರಿಯ ಮಗನಾದ ಮಾರ್ಕನು ನಿಮಗೆ ವಂದನೆ ಹೇಳುತ್ತಾರೆ. ಮಾರ್ಕನ ವಿಷಯದಲ್ಲಿ ನೀವು ಮಾರ್ಗದರ್ಶನ ಹೊಂದಿದ್ದೀರಲ್ಲಾ, ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ.
Ri Aristarco ri wachiꞌl uj kꞌo pa cheꞌ kutaq rutzil iwach, xuqujeꞌ ri Marcos ri uprimo ri Bernabé. Are kꞌu we kixuꞌsolij ri Marcos, utz chibꞌana che ukꞌamawaꞌxik jetaq ri itaqkil yaꞌtalik.
11 ಯೂಸ್ತನೆನಿಸಿಕೊಳ್ಳುವ ಯೇಸುವೂ ನಿಮ್ಮನ್ನು ವಂದಿಸುತ್ತಾನೆ. ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸದವರಾಗಿದ್ದವರಲ್ಲಿ ಇವರು ಮಾತ್ರವೇ ಯೆಹೂದ್ಯರು. ಇವರು ನನಗೆ ತುಂಬಾ ಆದರಣೆಯಾಗಿದ್ದರು.
Kutaq xuqujeꞌ rutzil iwach ri Jesús, ri kabꞌix Sukꞌ che, xaq xwi we oꞌxibꞌ winaq riꞌ aꞌj Israel ketobꞌan wukꞌ chuqꞌalajisaxik ri ajawarem rech ri Dios, kiyoꞌm kꞌu kꞌulibꞌal kuꞌx chwe.
12 ನಿಮ್ಮಲ್ಲಿ ಒಬ್ಬನೂ ಕ್ರಿಸ್ತ ಯೇಸುವಿನ ದಾಸನೂ ಆಗಿರುವ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ. ನೀವು ದೇವರ ಚಿತ್ತದ ಬಗ್ಗೆ ಪರಿಪಕ್ವರಾಗಿ, ಪೂರ್ಣ ನಿಶ್ಚಯವುಳ್ಳವರಾಗಿ ನಿಂತು, ಎಲ್ಲಾ ವಿಷಯಗಳಲ್ಲಿ ನಿಮಗೋಸ್ಕರ ಆಸಕ್ತಿಯಿಂದ ಪ್ರಾರ್ಥನೆಗಳಲ್ಲಿ ಯಾವಾಗಲೂ ಹೋರಾಡುತ್ತಾನೆ.
Kutaq xuqujeꞌ rutzil iwach ri Epafras, jun iwachiꞌl. We patanil rech ri Jesucristo riꞌ, tajin kubꞌan uchuqꞌabꞌ kubꞌan chꞌawem piꞌwiꞌ, rech qas kuchap ikꞌuꞌx, kibꞌan ri rayibꞌal ukꞌuꞌx ri Dios.
13 ನಿಮಗಾಗಿಯೂ ಲವೊದಿಕೀಯ ಹಾಗೂ ಹಿರಿಯಾಪೊಲಿಯ ಜನರಿಗಾಗಿಯೂ ಅವನು ಬಹಳ ಪ್ರಯಾಸಪಡುತ್ತಿದ್ದಾನೆಂದು ಎಪಫ್ರನ ವಿಷಯವಾಗಿ ನಾನು ಸಾಕ್ಷಿ ಹೇಳುತ್ತೇನೆ.
Qas wilom chi areꞌ kok il rumal iwe, xuqujeꞌ kumal ke ri keꞌl pa ri tinimit Laodicea xuqujeꞌ kumal ri e kꞌo pa tinimit Hierápolis.
14 ಪ್ರಿಯ ವೈದ್ಯನಾದ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ.
Kutaq xuqujeꞌ rutzil iwach ri Lucas, ri loqꞌalaj kunanel, xuqujeꞌ ri Demas.
15 ಲವೊದಿಕೀಯದಲ್ಲಿರುವ ಸಹೋದರರಿಗೂ ನುಂಫಳಿಗೂ ಆಕೆಯ ಮನೆಯಲ್ಲಿರುವ ಸಭೆಗೂ ವಂದನೆಗಳನ್ನು ಹೇಳಿರಿ.
Chitaqa rutzil kiwach ri alaxik ri e kꞌo pa ri tinimit Laodicea, xuqujeꞌ che ri Ninfas, xuqujeꞌ chike ri komontyox ri kꞌo cho rachoch.
16 ಈ ಪತ್ರವನ್ನು ನಿಮ್ಮ ಮಧ್ಯದಲ್ಲಿ ಓದಿದ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಓದಿ ಹೇಳುವ ವ್ಯವಸ್ಥೆಮಾಡಿರಿ. ಹಾಗೆಯೇ ಲವೊದಿಕೀಯದಿಂದ ಬರುವ ಪತ್ರವನ್ನು ನೀವೂ ಓದಿಕೊಳ್ಳಿರಿ.
Are kasikꞌitaj uwach we wuj riꞌ pa ijolom, sikꞌix xuqujeꞌ pa ri komontyox je laꞌ pa ri tinimit Laodicea, xuqujeꞌ chisikꞌij ix ri wuj ri taqtal bꞌik che ri komontyox riꞌ.
17 ಅರ್ಖಿಪ್ಪನಿಗೆ, “ನೀನು ಕರ್ತ ಯೇಸುವಿನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವುದಕ್ಕೆ ಎಚ್ಚರವಾಗಿರಬೇಕು!” ಎಂದು ಹೇಳಿರಿ.
Chibꞌij che ri Arquipo are chubꞌana ri upatan ri xukꞌamawaꞌj che ri Ajawxel, are rilij ubꞌanik.
18 ಇದು ಪೌಲನಾದ ನಾನೇ ನನ್ನ ಕೈಯಿಂದ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ.
In in Pablo kintzꞌibꞌaj rukꞌ ri nuqꞌabꞌ xuqujeꞌ rukꞌ ri nutzꞌibꞌ. Naꞌtaj chiꞌwe chi in tzꞌapal pa cheꞌ. Are ri utoqꞌobꞌ ri Ajawxel kakanaj kan iwukꞌ.

< ಕೊಲೊಸ್ಸೆಯರಿಗೆ ಬರೆದ ಪತ್ರಿಕೆ 4 >