< ಕೊಲೊಸ್ಸೆಯರಿಗೆ ಬರೆದ ಪತ್ರಿಕೆ 3 >

1 ನೀವು ಕ್ರಿಸ್ತನೊಂದಿಗೆ ಜೀವಂತವಾಗಿ ಎದ್ದವರಾಗಿದ್ದರೆ, ಮೇಲಿರುವವುಗಳನ್ನೇ ಹುಡುಕಿರಿ. ಅಲ್ಲಿ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.
Er I da opreist med Kristus, da søk det som er der oppe, der Kristus sitter ved Guds høire hånd!
2 ಪರಲೋಕದ ಕಾರ್ಯಗಳ ಮೇಲೆಯೇ ನಿಮ್ಮ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಮನಸ್ಸಿಡಬೇಡಿರಿ.
La eders hu stå til det som er der oppe, ikke til det som er på jorden!
3 ಏಕೆಂದರೆ ನೀವು ಸತ್ತಿರುವಿರಲ್ಲಾ, ನಿಮ್ಮ ಜೀವವು ಕ್ರಿಸ್ತ ಯೇಸುವಿನೊಂದಿಗೆ ದೇವರಲ್ಲಿ ಮರೆಯಾಗಿದೆ.
I er jo død, og eders liv er skjult med Kristus i Gud;
4 ನಿಮಗೆ ಜೀವವಾಗಿರುವ ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ, ನೀವು ಸಹ ಅವರೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.
når Kristus, vårt liv, åpenbares, da skal og I åpenbares med ham i herlighet.
5 ಆದ್ದರಿಂದ ಅನೈತಿಕತೆ, ಅಶುದ್ಧತ್ವ, ಕಾಮಾಭಿಲಾಷೆ, ದುರಾಶೆ, ದೇವರಲ್ಲದವುಗಳನ್ನು ಆರಾಧಿಸುವುದಕ್ಕೆ ಸಮರಾಗಿರುವರು ಲೋಭ ಮುಂತಾದ ನಿಮ್ಮ ಲೌಕಿಕವಾದ ಸ್ವಭಾವಗಳನ್ನು ಸಾಯಿಸಿರಿ.
Så død da eders jordiske lemmer: utukt, urenhet, brynde, ond lyst og havesyke, som jo er avgudsdyrkelse;
6 ಇವುಗಳ ನಿಮಿತ್ತ ದೇವರ ಕೋಪವು ಉಂಟಾಗುತ್ತಲಿದೆ.
for disse ting kommer Guds vrede over vantroens barn;
7 ಒಮ್ಮೆ ನೀವೂ ಸಹ ಅಂಥವುಗಳನ್ನು ಅನುಸರಿಸುತ್ತಿದ್ದಾಗ ಅವುಗಳಲ್ಲಿಯೇ ಜೀವಿಸಿದಿರಿ.
iblandt dem vandret også I fordum, da I levde i disse ting;
8 ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ, ನಿಮ್ಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ.
men nu skal også I avlegge dem alle: vrede, hissighet, ondskap, spott, skammelig snakk av eders munn;
9 ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ನೀವು ಹಳೆಯ ಸ್ವಭಾವವನ್ನು ಅದರ ಕೃತ್ಯಗಳನ್ನು ಕೂಡ ತೆಗೆದು ಹಾಕಿದ್ದೀರಲ್ಲವೇ!
lyv ikke mot hverandre, I som har avklædd eder det gamle menneske med dets gjerninger
10 ಸೃಷ್ಟಿಕರ್ತನ ಸ್ವರೂಪವನ್ನು, ತಿಳುವಳಿಕೆಯಲ್ಲಿ ನವೀಕರಣ ಹೊಂದುತ್ತಿರುವ ಆ ನೂತನ ಸ್ವಭಾವವನ್ನೇ ಧರಿಸಿಕೊಂಡವರಾಗಿದ್ದೀರಲ್ಲಾ.
og iklædd eder det nye, som fornyes til kunnskap efter sin skapers billede;
11 ಯೆಹೂದ್ಯರು ಯೆಹೂದ್ಯರಲ್ಲದವರು, ಸುನ್ನತಿ ಹೊಂದಿದವರು, ಸುನ್ನತಿ ಹೊಂದದವರು, ನಾಗರಿಕ, ಅನಾಗರಿಕ, ಆಳು, ಸ್ವತಂತ್ರರು ಎಂಬ ಭೇದವಿಲ್ಲ. ಆದರೆ ಕ್ರಿಸ್ತ ಯೇಸುವೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ.
her er ikke greker og jøde, omskjærelse og forhud, barbar, skyter, træl, fri, men Kristus er alt og i alle.
12 ಆದಕಾರಣ ದೇವರಿಂದ ಆಯ್ಕೆಯಾದವರೂ ಪರಿಶುದ್ಧರೂ ಪ್ರಿಯರೂ ಆಗಿರುವ ನೀವು ಕನಿಕರ, ದಯೆ, ದೀನತ್ವ, ಸಾತ್ವಿಕತ್ವ, ದೀರ್ಘಶಾಂತಿ ಇವುಗಳನ್ನು ಧರಿಸಿಕೊಳ್ಳಿರಿ.
Iklæ eder da, som Guds utvalgte, hellige og elskede, inderlig barmhjertighet, godhet, ydmykhet, saktmodighet, langmodighet,
13 ಯಾವನಿಗಾದರೂ ಇನ್ನೊಬ್ಬನ ಮೇಲೆ ದೂರು ಇದ್ದರೂ, ಒಬ್ಬರನ್ನೊಬ್ಬರು ಸಹಿಸಿಕೊಂಡು ಕ್ಷಮಿಸಿರಿ. ಕರ್ತ ಯೇಸುವು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಒಬ್ಬರನ್ನೊಬ್ಬರು ಕ್ಷಮಿಸಿರಿ.
så I tåler hverandre og tilgir hverandre om nogen har klagemål imot nogen; som Kristus har tilgitt eder, således og I!
14 ಎಲ್ಲದಕ್ಕಿಂತ ಮಿಗಿಲಾಗಿ, ಎಲ್ಲವನ್ನೂ ಪರಿಪೂರ್ಣವಾದ ಐಕ್ಯತೆಯಲ್ಲಿ ಬಂಧಿಸುವ ಪ್ರೀತಿಯನ್ನು ಧರಿಸಿಕೊಳ್ಳಿರಿ.
Men over alt dette iklæ eder kjærligheten, som er fullkommenhetens sambånd.
15 ಕ್ರಿಸ್ತ ಯೇಸುವಿನ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ, ಆ ಸಮಾಧಾನಕ್ಕಾಗಿಯೇ ನೀವು ಸಹ ಒಂದೇ ದೇಹವಾಗಿರುವಂತೆ ಕರೆಯಲಾಗಿದ್ದೀರಿ. ನೀವು ಕೃತಜ್ಞತೆಯುಳ್ಳವರಾಗಿರಿ.
Og Kristi fred råde i eders hjerter, den som I og blev kalt til i ett legeme, og vær takknemlige!
16 ಕ್ರಿಸ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಆ ವಾಕ್ಯದಿಂದಲೇ, ನೀವು ಸಕಲ ಜ್ಞಾನದಲ್ಲಿ ಕೃತಜ್ಞತೆಯೊಂದಿಗೆ ನಿಮ್ಮ ಹೃದಯಗಳಲ್ಲಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಕರ್ತ ಯೇಸುವನ್ನು ಕೊಂಡಾಡುತ್ತಾ ಒಬ್ಬರಿಗೊಬ್ಬರು ಉಪದೇಶಿಸುತ್ತಾ, ಬುದ್ಧಿ ಹೇಳುತ್ತಾ ಇರಿ.
La Kristi ord bo rikelig hos eder, så I lærer og formaner hverandre i all visdom med salmer og lovsanger og åndelige viser og synger yndig i eders hjerter for Gud,
17 ನೀವು ಮಾತಿನಿಂದಾಗಲಿ, ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ, ಕ್ರಿಸ್ತ ಯೇಸುವಿನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
og alt som I gjør i ord eller i gjerning, gjør det alt i den Herre Jesu navn, idet I takker Gud Fader ved ham!
18 ಹೆಂಡತಿಯರೇ, ನೀವು ಕರ್ತ ಯೇಸುವಿನಲ್ಲಿ ಯೋಗ್ಯರಾಗಿರುವಂತೆ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
I hustruer! underordne eder under eders menn, som det sømmer sig i Herren!
19 ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಅವರೊಂದಿಗೆ ಕಠಿಣವಾಗಿ ವರ್ತಿಸಬೇಡಿರಿ.
I menn! elsk eders hustruer og vær ikke bitre mot dem!
20 ಮಕ್ಕಳೇ, ಎಲ್ಲಾ ವಿಧಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ. ಏಕೆಂದರೆ ಇದು ಕರ್ತ ಯೇಸುವಿಗೆ ಬಹು ಮೆಚ್ಚಿಕೆಯಾಗಿದೆ.
I barn! vær lydige mot eders foreldre i alle ting! for dette er velbehagelig i Herren.
21 ತಂದೆಯರೇ, ನಿಮ್ಮ ಮಕ್ಕಳನ್ನು ರೇಗಿಸಬೇಡಿರಿ. ಹಾಗೆ ಮಾಡಿದರೆ, ಅವರು ನಿರಾಶರಾಗುವರು.
I fedre! opegg ikke eders barn, forat de ikke skal tape motet!
22 ಸೇವಕರೇ, ಭೂಮಿಯಲ್ಲಿ ನಿಮ್ಮ ಯಜಮಾನರಾಗಿರುವವರು ನೋಡುತ್ತಿರುವಾಗ ಮಾತ್ರ ಸೇವೆ ಮಾಡುವವರಾಗದೆ, ಕರ್ತ ಯೇಸುವಿಗೆ ಭಯಪಡುವವರಾಗಿ ಸರಳ ಹೃದಯದಿಂದ ಕೆಲಸಮಾಡಿ, ಅವರಿಗೆ ವಿಧೇಯರಾಗಿರಿ.
I tjenere! vær lydige i alle ting imot eders herrer efter kjødet, ikke med øientjeneste, som de som vil tekkes mennesker, men i hjertets enfold, idet I frykter Herren!
23 ನೀವು ಏನನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ.
Det I gjør, gjør det av hjertet, som for Herren og ikke for mennesker,
24 ಕರ್ತ ಯೇಸುವಿನಿಂದ ಬಾಧ್ಯತೆಯನ್ನು ಬಹುಮಾನವಾಗಿ ಹೊಂದುವಿರೆಂದು ತಿಳಿದಿದ್ದೀರಲ್ಲಾ. ಏಕೆಂದರೆ ನೀವು ಕರ್ತ ಆಗಿರುವ ಕ್ರಿಸ್ತ ಯೇಸುವನ್ನೇ ಸೇವೆಮಾಡುವವರಾಗಿದ್ದೀರಿ.
for I vet at I skal få arven til lønn av Herren. Tjen den Herre Kristus!
25 ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ದೇವರಲ್ಲಿ ಪಕ್ಷಪಾತವಿರುವುದಿಲ್ಲ.
for den som gjør urett, skal få igjen den urett han gjorde, og det blir ikke gjort forskjell på folk.

< ಕೊಲೊಸ್ಸೆಯರಿಗೆ ಬರೆದ ಪತ್ರಿಕೆ 3 >