< ಅಪೊಸ್ತಲರ ಕೃತ್ಯಗಳ 23 >

1 ಪೌಲನು ನ್ಯಾಯಸಭೆಯ ಸದಸ್ಯರನ್ನು ದಿಟ್ಟಿಸಿ ನೋಡಿ, “ನನ್ನ ಸಹೋದರರೇ, ಇಂದಿನವರೆಗೂ ಒಳ್ಳೆಯ ಮನಸ್ಸಾಕ್ಷಿಯಿಂದ ನಾನು ದೇವರ ಮುಂದೆ ನಡೆದುಕೊಂಡಿದ್ದೇನೆ,” ಎಂದನು.
Da så Paulus fast på Rådet og sagde: "I Mænd, Brødre! jeg har med al god Samvittighed vandret for Gud indtil denne Dag."
2 ಅದಕ್ಕೆ ಮಹಾಯಾಜಕ ಅನನೀಯನು ಪೌಲನ ಬಳಿ ನಿಂತಿದ್ದವರಿಗೆ ಅವನ ಬಾಯಮೇಲೆ ಹೊಡೆಯಬೇಕೆಂದು ಆಜ್ಞಾಪಿಸಿದನು.
Men Ypperstepræsten Ananias befalede dem, som stode hos ham, at slå ham på Munden.
3 ಆಗ ಪೌಲನು ಅವನಿಗೆ, “ಸುಣ್ಣ ಬಳಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವರು. ಮೋಶೆಯ ನಿಯಮದ ಪ್ರಕಾರ ನನ್ನ ನ್ಯಾಯವಿಚಾರಣೆ ಮಾಡಲು ನೀನು ಕುಳಿತುಕೊಂಡು, ನಿಯಮಕ್ಕೆ ವಿರುದ್ಧವಾಗಿ ನನ್ನನ್ನು ಹೊಡೆಯಬೇಕೆಂದು ಆಜ್ಞಾಪಿಸುತ್ತೀಯೋ?” ಎಂದನು.
Da sagde Paulus til ham: "Gud skal slå dig, du kalkede Væg! Og du sidder for at dømme mig efter Loven, og tvært imod Loven befaler du, at jeg skal slås."
4 ಪೌಲನ ಹತ್ತಿರ ನಿಂತಿದ್ದವರು, “ದೇವರು ನೇಮಿಸಿದ ಮಹಾಯಾಜಕನನ್ನು ನಿಂದಿಸುತ್ತಿದ್ದೀಯಾ?” ಎಂದು ಹೇಳಲು,
Men de, som stode hos, sagde: "Udskælder du Guds Ypperstepræst?"
5 “ಸಹೋದರರೇ, ಮಹಾಯಾಜಕನೆಂದು ನನಗೆ ತಿಳಿಯಲಿಲ್ಲ. ಏಕೆಂದರೆ, ‘ನಿನ್ನ ಜನರ ಅಧಿಪತಿಯ ಕುರಿತಾಗಿ ಕೆಟ್ಟದ್ದನ್ನು ಮಾತನಾಡಬಾರದು’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದು ಪೌಲನು ಹೇಳಿದನು.
Og Paulus sagde: "Brødre! jeg vidste ikke, at han er Ypperstepræst; thi der er skrevet: En Fyrste i dit Folk må du ikke tale ondt imod."
6 ಅಲ್ಲಿ ಸಭೆ ಸೇರಿದ್ದವರಲ್ಲಿ ಕೆಲವರು ಸದ್ದುಕಾಯರು, ಇನ್ನು ಕೆಲವರು ಫರಿಸಾಯರು ಎಂಬುದನ್ನು ಪೌಲನು ತಿಳಿದುಕೊಂಡು ನ್ಯಾಯಸಭೆಯಲ್ಲಿ, “ನನ್ನ ಸಹೋದರರೇ, ನಾನು ಫರಿಸಾಯನು, ಫರಿಸಾಯನ ಮಗನು. ಸತ್ತವರ ಪುನರುತ್ಥಾನದ ನಿರೀಕ್ಷೆಯ ವಿಷಯದಲ್ಲಿ ನಾನು ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ,” ಎಂದು ಕೂಗಿ ಹೇಳಿದನು.
Men da Paulus vidste, at den ene Del bestod af Saddukæere, men den anden af Farisæere, råbte han i Rådet: "I Mænd, Brødre! jeg er en Farisæer, Søn af Farisæere, for Håb og for dødes Opstandelse er det, jeg dømmes."
7 ಪೌಲನು ಹಾಗೆ ಹೇಳಿದಾಗ ಫರಿಸಾಯರ ಮತ್ತು ಸದ್ದುಕಾಯರ ನಡುವೆ ಭೇದ ಉಂಟಾಯಿತು. ಇದರಿಂದ ಸಮೂಹವು ವಿಭಾಗವಾಯಿತು.
Men da han udtalte dette, opkom der Splid imellem Farisæerne og Saddukæerne, og Mængden blev uenig.
8 ಏಕೆಂದರೆ ಸದ್ದುಕಾಯರು ಪುನರುತ್ಥಾನ ಇಲ್ಲವೆಂದೂ ದೇವದೂತರಾಗಲಿ, ಆತ್ಮಗಳಾಗಲಿ ಇಲ್ಲವೆಂದೂ ಹೇಳುತ್ತಿದ್ದರು. ಫರಿಸಾಯರು ಇವೆರಡನ್ನೂ ಒಪ್ಪಿಕೊಳ್ಳುತ್ತಿದ್ದರು.
Thi Saddukæerne sige, at der ingen Opstandelse er, ej heller nogen Engel eller Ånd; men Farisæerne hævde begge Dele.
9 ಆಗ ದೊಡ್ಡ ಗಲಭೆಯೇ ಉಂಟಾಯಿತು. ಫರಿಸಾಯರ ಪಕ್ಷದ ನಿಯಮ ಬೋಧಕರಲ್ಲಿ ಕೆಲವರು ಎದ್ದು, “ನಾವು ಈ ಮನುಷ್ಯನಲ್ಲಿ ಯಾವುದೇ ತಪ್ಪನ್ನು ಕಾಣುವುದಿಲ್ಲ. ಆತ್ಮವಾಗಲಿ, ದೇವದೂತನಾಗಲಿ ಇವನೊಂದಿಗೆ ಮಾತನಾಡಿರಬಹುದು,” ಎಂದು ವಾದಿಸಿದರು.
Men der opstod en stærk Råben; og nogle af de skriftkloge af Farisæernes Parti stode op, strede heftigt og sagde: "Vi finde intet ondt hos dette Menneske; men hvad om en Ånd eller en Engel har talt til ham!"
10 ಜನಸಮೂಹವು ಪೌಲನನ್ನು ಎಳೆದು ತುಂಡುತುಂಡಾಗಿ ಮಾಡುವರೇನೋ ಎಂದು ಸಹಸ್ರಾಧಿಪತಿಗೆ ಬಹಳ ಭಯವಾಯಿತು. ಸೈನಿಕರ ಗುಂಪುಗಳು ಕೆಳಗಿಳಿದು ಹೋಗಿ ಬಲಪ್ರಯೋಗದಿಂದ ಪೌಲನನ್ನು ಎತ್ತಿಕೊಂಡು ಸೈನಿಕ ಪಾಳ್ಯದೊಳಗೆ ಬರಬೇಕೆಂದು ಅವನು ಸೈನಿಕರಿಗೆ ಆಜ್ಞಾಪಿಸಿದನು.
Men da der blev stærk Splid frygtede Krigsøversten, at Paulus skulde blive sønderslidt af dem, og befalede Krigsfolket at gå ned og rive ham ud fra dem og føre ham ind i Borgen.
11 ಮರುದಿನ ರಾತ್ರಿ ಕರ್ತ ಯೇಸು ಪೌಲನ ಬಳಿಯಲ್ಲಿ ನಿಂತುಕೊಂಡು, “ಧೈರ್ಯದಿಂದಿರು! ನೀನು ಯೆರೂಸಲೇಮಿನಲ್ಲಿ ನನ್ನ ವಿಷಯದಲ್ಲಿ ಸಾಕ್ಷಿ ಕೊಟ್ಟಂತೆಯೇ ರೋಮಿನಲ್ಲಿಯೂ ಸಾಕ್ಷಿಕೊಡತಕ್ಕದ್ದು,” ಎಂದರು.
Men Natten derefter stod Herren for ham og sagde: "Vær frimodig, thi ligesom du har vidnet om mig i Jerusalem, således skal du også vidne i Rom."
12 ಮರುದಿನ ಯೆಹೂದ್ಯರು ರಹಸ್ಯವಾಗಿ ಕೂಡಿಬಂದು, ಪೌಲನನ್ನು ತಾವು ಕೊಲ್ಲುವವರೆಗೆ ಅನ್ನಪಾನ ಸ್ವೀಕರಿಸುವುದಿಲ್ಲವೆಂದು ಶಪಥಮಾಡಿಕೊಂಡರು.
Men da det var blevet Dag, sloge Jøderne sig sammen og forpligtede sig under Forbandelser til hverken at spise eller drikke, førend de havde slået Paulus ihjel.
13 ಈ ಒಳಸಂಚಿನಲ್ಲಿ ನಾಲ್ವತ್ತಕ್ಕಿಂತಲೂ ಹೆಚ್ಚು ಜನ ಪುರುಷರಿದ್ದರು.
Og de, som havde indgået denne Sammensværgelse, vare flere end fyrretyve i Tal.
14 ಅವರು ಮುಖ್ಯಯಾಜಕರ ಹಾಗೂ ಹಿರಿಯರ ಬಳಿಗೆ ಹೋಗಿ, “ಪೌಲನನ್ನು ಕೊಲ್ಲುವವರೆಗೆ ನಾವು ಊಟಮಾಡುವುದಿಲ್ಲ ಎಂದು ಗಂಭೀರ ಶಪಥಮಾಡಿದ್ದೇವೆ.
Disse gik da til Ypperstepræsterne og de Ældste og sagde: "Vi have under Forbandelser forpligtet os til ikke at smage noget, førend vi have slået Paulus ihjel.
15 ಆದ್ದರಿಂದ ಈಗ ವಿಚಾರಣೆಯ ಬಗ್ಗೆ ಹೆಚ್ಚಿನ ನಿರ್ದಿಷ್ಟವಾದ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂಬ ನೆಪದಿಂದ ಪೌಲನನ್ನು ನಿಮ್ಮ ಮುಂದೆ ತರುವಂತೆ ನೀವೂ ನ್ಯಾಯಸಭೆಯೂ ಸಹಸ್ರಾಧಿಪತಿಯನ್ನು ಬೇಡಿಕೊಳ್ಳಿರಿ. ಇಲ್ಲಿಗೆ ಬರುವ ಮೊದಲೇ ಪೌಲನನ್ನು ನಾವು ಕೊಂದುಬಿಡುತ್ತೇವೆ,” ಎಂದರು.
Så giver nu I tillige med Rådet Krigsøversten Meddelelse, for at han må føre ham ned til eder, som om I ville undersøge hans Sag nøjere; men vi ere rede til at slå ham ihjel, førend han kommer derhen."
16 ಈ ಒಳಸಂಚು ಪೌಲನ ಸಹೋದರಿಯ ಮಗನಿಗೆ ತಿಳಿಯಲು ಅವನು ಸೈನಿಕ ಪಾಳ್ಯದೊಳಗೆ ಹೋಗಿ ಪೌಲನಿಗೆ ತಿಳಿಸಿದನು.
Men Paulus's Søstersøn, som havde hørt om dette Anslag, kom og gik ind i Borgen og fortalte Paulus det.
17 ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು, “ಈ ಯುವಕನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿರಿ. ಏಕೆಂದರೆ ಇವನಿಗೆ ತಿಳಿಸಲು ಏನೋ ವಿಷಯವಿದೆಯಂತೆ,” ಎಂದನು.
Men Paulus kaldte en af Høvedsmændene til sig og sagde: "Før denne unge Mand hen til Krigsøversten; thi han har noget at melde ham."
18 ಅದರಂತೆ ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ, “ನಿಮಗೆ ತಿಳಿಸತಕ್ಕ ವಿಷಯವಿದೆಯೆಂದು ಸೆರೆಯವನಾದ ಪೌಲನು ನನ್ನನ್ನು ಕರೆದು ಈ ಯುವಕನನ್ನು ನಿಮ್ಮ ಬಳಿ ತರುವಂತೆ ಬೇಡಿಕೊಂಡಿದ್ದಾನೆ,” ಎಂದನು.
Da tog han ham og førte ham til Krigsøversten og siger: "Den fangne Paulus kaldte mig og bad mig føre denne unge Mand til dig, da han har noget at tale med dig om."
19 ಸಹಸ್ರಾಧಿಪತಿಯು ಯುವಕನ ಕೈಹಿಡಿದು ಏಕಾಂತವಾಗಿ ಪಕ್ಕಕ್ಕೆ ಕರೆದು, “ನೀನು ನನಗೆ ಹೇಳಬೇಕಾದದ್ದು ಏನು?” ಎಂದನು.
Men Krigsøversten tog ham ved Hånden, gik hen til en Side og spurgte: "Hvad er det, som du har at melde mig?"
20 ಆ ಯುವಕನು, “ಪೌಲನ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಪಡೆಯುವ ಅಪೇಕ್ಷೆಯ ನೆಪದಲ್ಲಿ ಅವನನ್ನು ನ್ಯಾಯಸಭೆಯ ಮುಂದೆ ಕರೆತರುವಂತೆ ನಿಮ್ಮನ್ನು ಕೇಳಿಕೊಳ್ಳಲು ಯೆಹೂದ್ಯರು ತೀರ್ಮಾನಿಸಿಕೊಂಡಿದ್ದಾರೆ.
Men han sagde: "Jøderne have aftalt at bede dig om at lade Paulus føre ned for Rådet i Morgen under Foregivende af at ville have nøjere Underretning om ham.
21 ನೀವು ಅವರ ಮಾತಿಗೆ ಒಪ್ಪಿಕೊಳ್ಳಬೇಡಿ, ಏಕೆಂದರೆ ನಾಲ್ವತ್ತಕ್ಕಿಂತಲೂ ಹೆಚ್ಚು ಜನರು ಅವನಿಗಾಗಿ ಹೊಂಚುಹಾಕಿದ್ದಾರೆ. ಅವನನ್ನು ಕೊಲ್ಲುವವರೆಗೆ ಊಟಮಾಡುವುದಿಲ್ಲ, ಪಾನ ಮಾಡುವುದಿಲ್ಲ, ಎಂದು ಅವರು ಶಪಥ ಮಾಡಿದ್ದಾರೆ. ಅವರ ಬೇಡಿಕೆಗೆ ನಿಮ್ಮ ಒಪ್ಪಿಗೆಯನ್ನೇ ಈಗ ಅವರು ಎದುರುನೋಡುತ್ತಾ ಇದ್ದಾರೆ,” ಎಂದು ಹೇಳಿದನು.
Lad du dig nu ikke overtale af dem; thi mere end fyrretyve Mænd af dem lure på ham, og de have under Forbandelser forpligtet sig til hverken at spise eller at drikke, førend de have slået ham ihjel; og nu ere de rede og vente på dit Tilsagn."
22 “ಈ ವಿಷಯವನ್ನು ನನಗೆ ವರದಿ ಮಾಡಿದ್ದನ್ನು ಯಾರಿಗೂ ಹೇಳಬೇಡ,” ಎಂದು ಆ ಯುವಕನಿಗೆ ಎಚ್ಚರಿಕೆಯನ್ನು ನೀಡಿ ಅವನನ್ನು ಸಹಸ್ರಾಧಿಪತಿ ಕಳುಹಿಸಿಕೊಟ್ಟನು.
Da lod Krigsøversten det unge Menneske fare og bød ham: "Du skal ingen sige, at du har givet mig dette til Kende."
23 ಆಮೇಲೆ ಸಹಸ್ರಾಧಿಪತಿಯು ತನ್ನ ಇಬ್ಬರು ಶತಾಧಿಪತಿಗಳನ್ನು ಕರೆದು, “ಈ ರಾತ್ರಿ ಒಂಬತ್ತು ಗಂಟೆಗೆ ಕೈಸರೈಯಕ್ಕೆ ಹೋಗಲು ಇನ್ನೂರು ಜನ ಸೈನಿಕರನ್ನೂ ಎಪ್ಪತ್ತು ಕುದುರೆ ಸವಾರರನ್ನೂ ಇನ್ನೂರು ಜನ ಭರ್ಜಿಧರಿಸಿದವರನ್ನೂ ಸಿದ್ಧಗೊಳಿಸಿರಿ.
Og han kaldte et Par af Høvedsmændene til sig og sagde: "Gører to Hundrede Stridsmænd rede til at drage til Kæsarea og halvfjerdsindstyve Ryttere og to Hundrede Spydkastere fra den tredje Time i Nat; "
24 ಕುದುರೆಗಳನ್ನು ಸಿದ್ಧಮಾಡಿ ಪೌಲನನ್ನು ಹತ್ತಿಸಿ ಅವನು ಸುರಕ್ಷಿತವಾಗಿ ರಾಜ್ಯಪಾಲ ಫೇಲಿಕ್ಸನ ಬಳಿಗೆ ತಲುಪುವಂತೆ ವ್ಯವಸ್ಥೆಮಾಡಿರಿ,” ಎಂದು ಆಜ್ಞಾಪಿಸಿದನು.
og at de skulde bringe Lastdyr for at kunne lade Paulus ride og føre ham sikkert til Landshøvdingen Feliks.
25 ಅವರಿಗೆ ಒಂದು ಪತ್ರವನ್ನು ಹೀಗೆ ಬರೆದುಕೊಟ್ಟನು:
Og han skrev et Brev af følgende Indhold:
26 ಮಹಾಪ್ರಭುಗಳಾದ ರಾಜ್ಯಪಾಲ ಫೇಲಿಕ್ಸ್, ಅವರಿಗೆ ಕ್ಲೌದ್ಯ ಲೂಸ್ಯನು, ಮಾಡುವ ವಂದನೆಗಳು.
"Klaudius Lysias hilser den mægtigste Landshøvding Feliks.
27 ಈ ಪೌಲನನ್ನು ಯೆಹೂದ್ಯರು ಬಂಧಿಸಿ, ಇವನನ್ನು ಕೊಲ್ಲಬೇಕೆಂದಿದ್ದರು. ಆದರೆ ನಾನು ಸೈನಿಕರೊಂದಿಗೆ ಹೋಗಿ ಇವನನ್ನು ಬಿಡಿಸಿದೆನು. ಇವನು ರೋಮ್ ಪೌರ ಎಂದು ನನಗೆ ಗೊತ್ತಾಯಿತು.
Denne Mand havde Jøderne grebet og vilde have slået ham ihjel; men jeg kom til med Krigsfolket og udfriede ham, da jeg erfarede, at han var en Romer.
28 ಅವರು ಏಕೆ ಪೌಲನ ಮೇಲೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅಪೇಕ್ಷಿಸಿ ಇವನನ್ನು ಅವರ ನ್ಯಾಯಸಭೆಯ ಮುಂದೆ ಕರೆದುಕೊಂಡು ಹೋದೆನು.
Og da jeg vilde vide Årsagen, hvorfor de anklagede ham, førte jeg ham ned for deres Råd
29 ಇವನ ಮೇಲಿನ ದೋಷಾರೋಪಣೆ ಅವರ ನಿಯಮದ ಪ್ರಶ್ನೆಗಳಿಗೆ ಸಂಬಂಧಪಟ್ಟದ್ದು. ಇವನಲ್ಲಿ ಮರಣದಂಡನೆಗಾಗಲಿ, ಸೆರೆಮನೆಗಾಗಲಿ ಯೋಗ್ಯವಾದ ಯಾವ ಅಪರಾಧಗಳೂ ಇಲ್ಲವೆಂದು ನಾನು ಕಂಡುಕೊಂಡಿದ್ದೇನೆ.
og fandt ham anklaget i Anledning af nogle Stridsspørgsmål i deres Lov, men uden nogen Beskyldning, som fortjente Død eller Fængsel.
30 ಆದರೂ ಪೌಲನ ವಿರೋಧವಾಗಿ ಒಂದು ಒಳಸಂಚು ನಡೆದಿದೆ ಎಂದು ನನಗೆ ರಹಸ್ಯ ಸುದ್ದಿ ಬಂದದ್ದರಿಂದ, ಕೂಡಲೇ ಇವನನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ಇವನಿಗೆ ವಿರೋಧವಾದ ಆರೋಪಣೆಯನ್ನು ನಿಮಗೆ ಸಲ್ಲಿಸಬೇಕೆಂದು ಇವನ ವಿರೋಧಿಗಳಿಗೆ ಅಪ್ಪಣೆ ಕೊಟ್ಟಿದ್ದೇನೆ.
Men da jeg har fået Underretning om, at der skulde være et hemmeligt Anslag af Jøderne imod Manden, har jeg straks sendt ham til dig efter også at have befalet Anklagerne at fremføre for dig, hvad de have imod ham."
31 ಸೈನಿಕರು ಈ ಆಜ್ಞೆಯಂತೆ, ರಾತ್ರಿಯಲ್ಲಿ ಪೌಲನನ್ನು ತಮ್ಮೊಂದಿಗೆ ಕರೆದುಕೊಂಡು ಅಂತಿಪತ್ರಿ ಎಂಬ ಊರಿನವರೆಗೆ ಹೋದರು.
Da toge Stridsmændene Paulus, som det var dem befalet, og førte ham om Natten til Antipatris.
32 ಮರುದಿನ ಪೌಲನೊಂದಿಗೆ ಮುಂದೆ ಹೋಗಲು ಕುದುರೆಸವಾರರನ್ನು ಬಿಟ್ಟು, ಸೈನಿಕರು ಅವರ ಪಾಳ್ಯಕ್ಕೆ ಹಿಂದಿರುಗಿದರು.
Men næste Dag lode de Rytterne drage videre med ham og vendte selv tilbage til Borgen.
33 ಅವರು ಕೈಸರೈಯವನ್ನು ತಲುಪಿ ರಾಜ್ಯಪಾಲನಿಗೆ ಪತ್ರವನ್ನು ಕೊಟ್ಟು ಪೌಲನನ್ನು ಅವನಿಗೆ ಒಪ್ಪಿಸಿದರು.
Da hine nu kom til Kæsarea og havde overgivet Landshøvdingen Brevet, fremstillede de også Paulus for ham.
34 ರಾಜ್ಯಪಾಲನು ಪತ್ರವನ್ನು ಓದಿ, ಪೌಲನು ಯಾವ ಪ್ರಾಂತದವನೆಂದು ಪ್ರಶ್ನಿಸಿ, ಅವನು ಕಿಲಿಕ್ಯದವನೆಂದು ತಿಳಿದುಕೊಂಡು,
Men da han havde læst Brevet og spurgt, fra hvilken Provins han var, og havde erfaret, at han var fra Kilikien, sagde han:
35 “ನಿನ್ನ ಮೇಲೆ ಆರೋಪ ಹೊರಿಸಿದವರು ಇಲ್ಲಿಗೆ ಬಂದು ತಲುಪಿದ ತರುವಾಯ ನಿನ್ನ ವಿಚಾರಣೆ ಮಾಡುತ್ತೇನೆ,” ಎಂದು ಹೇಳಿ, ಪೌಲನನ್ನು ಹೆರೋದನ ಅರಮನೆಯಲ್ಲಿ ಕಾವಲಲ್ಲಿಡಬೇಕೆಂದು ಆಜ್ಞಾಪಿಸಿದನು.
"Jeg vil forhøre dig, når også dine Anklagere komme til Stede." Og han bød, at han skulde holdes bevogtet i Herodes's Borg.

< ಅಪೊಸ್ತಲರ ಕೃತ್ಯಗಳ 23 >