< ಅಪೊಸ್ತಲರ ಕೃತ್ಯಗಳ 22 >

1 “ಸಹೋದರರೇ, ತಂದೆಗಳೇ, ಈಗ ನಾನು ನಿಮಗೆ ಮಾಡುವ ಪ್ರತಿವಾದಕ್ಕೆ ಕಿವಿಗೊಡಿರಿ,” ಎಂದು ಪ್ರಾರಂಭಿಸಿದನು.
“诸位父兄请听,我现在对你们分诉。”
2 ಅವನು ತಮ್ಮೊಂದಿಗೆ ಹೀಬ್ರೂ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿದಾಗ ಅವರು ಮತ್ತಷ್ಟು ನಿಶ್ಶಬ್ದರಾದರು. ಆಗ ಪೌಲನು:
众人听他说的是希伯来话,就更加安静了。
3 “ನಾನು ಕಿಲಿಕ್ಯದ ತಾರ್ಸದಲ್ಲಿ ಜನಿಸಿದ ಯೆಹೂದ್ಯನು, ಈ ಪಟ್ಟಣದಲ್ಲಿಯೇ ಬೆಳೆದವನು, ಗಮಲಿಯೇಲನ ಪಾದ ಸನ್ನಿಧಿಯಲ್ಲಿ ನಮ್ಮ ಪಿತೃಗಳ ನಿಯಮವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದೆ. ದೇವರ ವಿಷಯದಲ್ಲಿ, ಇಂದು ನೀವೆಲ್ಲರೂ ಇರುವಂತೆಯೇ ನಾನೂ ಆಸಕ್ತಿವುಳ್ಳವನಾಗಿದ್ದೆನು.
保罗说:“我原是犹太人,生在基利家的大数,长在这城里,在迦玛列门下,按着我们祖宗严紧的律法受教,热心事奉 神,像你们众人今日一样。
4 ಈ ಮಾರ್ಗದವರನ್ನು ಸಾಯುವಷ್ಟು ಹಿಂಸಿಸಿದೆನು. ಸ್ತ್ರೀಪುರುಷರೆನ್ನದೆ ಅವರನ್ನು ಬಂಧಿಸಿ ಅವರನ್ನು ಸೆರೆಮನೆಗೆ ಹಾಕಿಸುತ್ತಿದ್ದೆನು,
我也曾逼迫奉这道的人,直到死地,无论男女都锁拿下监。
5 ಮಹಾಯಾಜಕನೂ ಹಿರಿಸಭೆಯವರೆಲ್ಲರೂ ಇದಕ್ಕೆ ಸಾಕ್ಷಿ. ಅವರಿಂದಲೇ ದಮಸ್ಕದಲ್ಲಿದ್ದ ಸಹೋದರರಿಗೆ ಪತ್ರಗಳನ್ನು ತೆಗೆದುಕೊಂಡು, ಅಲ್ಲಿಗೆ ಹೋದವರನ್ನೂ ದಂಡಿಸುವುದಕ್ಕಾಗಿಯೂ ಸೆರೆಹಿಡಿದು ಯೆರೂಸಲೇಮಿಗೆ ತರುವುದಕ್ಕಾಗಿಯೂ ದಮಸ್ಕಕ್ಕೆ ಪ್ರಯಾಣಮಾಡಿದೆನು.
这是大祭司和众长老都可以给我作见证的。我又领了他们达与弟兄的书信,往大马士革去,要把在那里奉这道的人锁拿,带到耶路撒冷受刑。”
6 “ಸುಮಾರು ಮಧ್ಯಾಹ್ನದ ಸಮಯಕ್ಕೆ ನಾನು ದಮಸ್ಕದ ಹತ್ತಿರದಲ್ಲಿದ್ದೆನು. ಇದ್ದಕ್ಕಿದ್ದಂತೆ ಆಕಾಶದಿಂದ ಮಹಾ ಬೆಳಕು ನನ್ನ ಸುತ್ತಲೂ ಹೊಳೆಯಿತು.
“我将到大马士革,正走的时候,约在晌午,忽然从天上发大光,四面照着我。
7 ನಾನು ನೆಲದ ಮೇಲೆ ಬಿದ್ದೆನು. ಆಗ, ‘ಸೌಲನೇ, ಸೌಲನೇ, ಏಕೆ ನನ್ನನ್ನು ಹಿಂಸೆಪಡಿಸುತ್ತೀ?’ ಎಂದು ಒಂದು ಸ್ವರವು ನನಗೆ ಹೇಳುವುದನ್ನು ಕೇಳಿಸಿಕೊಂಡೆನು.
我就仆倒在地,听见有声音对我说:‘扫罗!扫罗!你为什么逼迫我?’
8 “ನಾನು, ‘ಸ್ವಾಮಿ, ತಾವು ಯಾರು?’ ಎಂದು ಕೇಳಲು, “‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದು ಅವರು ನನಗೆ ಹೇಳಿದರು.
我回答说:‘主啊,你是谁?’他说:‘我就是你所逼迫的拿撒勒人耶稣。’
9 ನನ್ನ ಜೊತೆಯಲ್ಲಿದ್ದವರು ಬೆಳಕನ್ನು ಕಂಡರು. ಆದರೆ ನನ್ನ ಕೂಡ ಮಾತನಾಡುತ್ತಿದ್ದ ಸ್ವರವು ಅವರಿಗೆ ಕೇಳಿಸಲಿಲ್ಲ.
与我同行的人看见了那光,却没有听明那位对我说话的声音。
10 “ಆಗ ನಾನು, ‘ಸ್ವಾಮಿ, ನಾನೇನು ಮಾಡಬೇಕು?’ ಎಂದು ಕೇಳಲು, “‘ಎದ್ದೇಳು, ದಮಸ್ಕದೊಳಗೆ ಹೋಗು, ನೀನು ಏನೇನು ಮಾಡಬೇಕಾಗಿದೆಯೋ ಅದೆಲ್ಲವನ್ನು ನಿನಗೆ ಅಲ್ಲಿ ಹೇಳಲಾಗುವುದು,’ ಎಂದು ಕರ್ತ ಯೇಸು ನನಗೆ ಹೇಳಿದರು.
我说:‘主啊,我当做什么?’主说:‘起来,进大马士革去,在那里,要将所派你做的一切事告诉你。’
11 ಆ ಬೆಳಕಿನ ಉಜ್ವಲ ಪ್ರಕಾಶದ ನಿಮಿತ್ತ ನನ್ನ ಕಣ್ಣು ಕುರುಡಾಗಿದ್ದರಿಂದ ನನ್ನ ಜೊತೆಯಲ್ಲಿದ್ದವರು ನನ್ನ ಕೈಹಿಡಿದು ದಮಸ್ಕದೊಳಗೆ ನಡೆಸಿಕೊಂಡು ಹೋದರು.
我因那光的荣耀不能看见,同行的人就拉着我手进了大马士革。
12 “ಅನನೀಯ ಎಂಬ ಹೆಸರಿನವನೊಬ್ಬನು ನನ್ನ ಬಳಿ ಬಂದನು. ಅವನು ಮೋಶೆಯ ನಿಯಮಕ್ಕನುಗುಣವಾಗಿ ಭಕ್ತಿವಂತನೂ ಆ ಸ್ಥಳದ ಯೆಹೂದ್ಯರೆಲ್ಲರಿಂದ ಸಾಕ್ಷಿಹೊಂದಿದವನೂ ಆಗಿದ್ದನು.
那里有一个人,名叫亚拿尼亚,按着律法是虔诚人,为一切住在那里的犹太人所称赞。
13 ಅವನು ನನ್ನ ಬಳಿ ನಿಂತುಕೊಂಡು, ‘ಸಹೋದರ ಸೌಲನೇ, ನೀನು ದೃಷ್ಟಿಯನ್ನು ಪಡೆದುಕೋ,’ ಎಂದನು. ಆ ಗಳಿಗೆಯಲ್ಲಿಯೇ ನಾನು ದೃಷ್ಟಿಯನ್ನು ಪಡೆದು ಅವನನ್ನು ಕಂಡೆನು.
他来见我,站在旁边,对我说:‘兄弟扫罗,你可以看见。’我当时往上一看,就看见了他。
14 “ಆಗ ಅವನು, ‘ನಮ್ಮ ಪಿತೃಗಳ ದೇವರು ತಮ್ಮ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕಾಗಿಯೂ ನೀತಿವಂತ ಆಗಿರುವ ಒಬ್ಬರನ್ನು ಕಾಣುವುದಕ್ಕಾಗಿಯೂ ಅವರ ಬಾಯಿಂದ ಒಂದು ಮಾತನ್ನು ಕೇಳುವುದಕ್ಕಾಗಿಯೂ ನಿನ್ನನ್ನು ಮುಂದಾಗಿಯೇ ನೇಮಿಸಿದ್ದಾರೆ.
他又说:‘我们祖宗的 神拣选了你,叫你明白他的旨意,又得见那义者,听他口中所出的声音。
15 ಏಕೆಂದರೆ ನೀನು ಕಂಡದ್ದಕ್ಕೂ ಕೇಳಿದ್ದಕ್ಕೂ ಎಲ್ಲಾ ಜನರಿಗೆ ಅವರ ಸಾಕ್ಷಿಯಾಗಿರುವೆ.
因为你要将所看见的,所听见的,对着万人为他作见证。
16 ಈಗ ನೀನು ತಡಮಾಡುವುದೇಕೆ? ಎದ್ದೇಳು, ಅವರ ಹೆಸರನ್ನು ಕರೆದು, ದೀಕ್ಷಾಸ್ನಾನವನ್ನು ಹೊಂದಿ ನಿನ್ನ ಪಾಪಗಳನ್ನು ತೊಳೆದುಕೋ,’ ಎಂದನು.
现在你为什么耽延呢?起来,求告他的名受洗,洗去你的罪。’”
17 “ನಾನು ಯೆರೂಸಲೇಮಿಗೆ ಹಿಂದಿರುಗಿ ಬಂದು ದೇವಾಲಯದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಆತ್ಮಪರವಶನಾದೆನು.
“后来,我回到耶路撒冷,在殿里祷告的时候,魂游象外,
18 ಆಗ ಕರ್ತ ಯೇಸು ನನ್ನೊಂದಿಗೆ ಮಾತನಾಡುತ್ತಿರುವುದನ್ನು ಕಂಡೆನು. ಅವರು, ‘ತಡಮಾಡದೆ! ತಕ್ಷಣವೇ ಯೆರೂಸಲೇಮನ್ನು ಬಿಟ್ಟು ಹೊರಟು ಹೋಗು, ಏಕೆಂದರೆ ನೀನು ನನ್ನನ್ನು ಕುರಿತು ಹೇಳುವ ಸಾಕ್ಷಿಯನ್ನು ಅವರು ಸ್ವೀಕರಿಸುವುದಿಲ್ಲ,’ ಎಂದರು.
看见主向我说:‘你赶紧地离开耶路撒冷,不可迟延;因你为我作的见证,这里的人必不领受。’
19 “ಅದಕ್ಕೆ ನಾನು, ‘ಸ್ವಾಮಿ, ಎಲ್ಲಾ ಸಭಾಮಂದಿರಗಳಲ್ಲಿಯೂ ನಿಮ್ಮಲ್ಲಿ ನಂಬಿಕೆಯಿಟ್ಟವರನ್ನು ಬಂಧಿಸಿ, ಹೊಡೆದು ಸೆರೆಮನೆಗೆ ಹಾಕಿಸುತ್ತಿದ್ದೇನೆಂದು ಈ ಜನರು ಬಲ್ಲರು.
我就说:‘主啊,他们知道我从前把信你的人收在监里,又在各会堂里鞭打他们。
20 ನಿಮ್ಮ ಸಾಕ್ಷಿಯಾದ ಸ್ತೆಫನನ ರಕ್ತ ಸುರಿಸಿದಾಗ ಅದಕ್ಕೆ ನಾನೂ ಸಮ್ಮತಿ ಕೊಟ್ಟು ಅವನನ್ನು ಕೊಲ್ಲುವವರ ಬಟ್ಟೆಗಳನ್ನು ಕಾಯುತ್ತಾ ನಿಂತಿದ್ದೆನು,’ ಎಂದೆನು.
并且你的见证人司提反被害流血的时候,我也站在旁边欢喜;又看守害死他之人的衣裳。’
21 “ಆಗ ಕರ್ತ ಯೇಸುವು, ‘ಹೋಗು, ನಾನು ಯೆಹೂದ್ಯರಲ್ಲದವರ ಬಳಿಗೆ ನಿನ್ನನ್ನು ದೂರಪ್ರದೇಶಗಳಿಗೆ ಕಳುಹಿಸುವೆನು,’ ಎಂದು ನನಗೆ ಹೇಳಿದರು.”
主向我说:‘你去吧!我要差你远远地往外邦人那里去。’”
22 ಇದನ್ನು ಹೇಳುವವರೆಗೆ ಜನರು ಪೌಲನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಅನಂತರ ಅವರು ತಮ್ಮ ಸ್ವರವೆತ್ತಿ, “ಇಂಥವನನ್ನು ಭೂಲೋಕದಿಂದ ತೊಲಗಿಸಿರಿ! ಇವನು ಜೀವಿಸುವುದಕ್ಕೆ ಯೋಗ್ಯನಲ್ಲ!” ಎಂದು ಕೂಗಿದರು.
众人听他说到这句话,就高声说:“这样的人,从世上除掉他吧!他是不当活着的。”
23 ಅವರು ಅರಚುತ್ತ ತಮ್ಮ ಮೇಲಂಗಿಗಳನ್ನು ಹರಿಯುತ್ತ ಗಾಳಿಯಲ್ಲಿ ಮಣ್ಣು ತೂರುತ್ತಿರಲು,
众人喧嚷,摔掉衣裳,把尘土向空中扬起来。
24 ಸಹಸ್ರಾಧಿಪತಿಯು ಪೌಲನನ್ನು ಸೈನಿಕರ ಪಾಳ್ಯದೊಳಗೆ ಒಯ್ಯಬೇಕೆಂದು, ಅವನನ್ನು ಕೊರಡೆಗಳಿಂದ ಹೊಡೆದು ಯಾವ ಅಪರಾಧಕ್ಕಾಗಿ ಜನರು ಅವನಿಗೆ ವಿರೋಧವಾಗಿ ಅರಚುತ್ತಿದ್ದರು ಎಂಬುದನ್ನು ಅವನಿಂದ ವಿಚಾರಿಸಬೇಕೆಂದು ಆಜ್ಞಾಪಿಸಿದನು.
千夫长就吩咐将保罗带进营楼去,叫人用鞭子拷问他,要知道他们向他这样喧嚷是为什么缘故。
25 ಆದರೆ ಅವರು ಅವನನ್ನು ಹೊಡೆಯುವುದಕ್ಕೆ ಬಾರುಕೋಲನ್ನು ಚಾಚಿದಾಗ ಪೌಲನು ಅಲ್ಲಿ ನಿಂತಿದ್ದ ಶತಾಧಿಪತಿಗೆ, “ಅಪರಾಧಿಯೆಂದು ಸಿದ್ಧವಾಗುವ ಮೊದಲೇ ರೋಮ್ ಪೌರನನ್ನು ಕೊರಡೆಗಳಿಂದ ಹೊಡೆಯುವುದು ನ್ಯಾಯವಾದದ್ದೋ?” ಎಂದು ಕೇಳಿದನು.
刚用皮条捆上,保罗对旁边站着的百夫长说:“人是罗马人,又没有定罪,你们就鞭打他,有这个例吗?”
26 ಶತಾಧಿಪತಿ ಈ ಮಾತುಗಳನ್ನು ಕೇಳಿದಾಗ, ಸಹಸ್ರಾಧಿಪತಿಯ ಬಳಿಗೆ ಹೋಗಿ ಇದನ್ನು ವರದಿ ಮಾಡಿ, “ಇವನು ರೋಮ್ ಪೌರನು. ಈಗ ನೀನೇನು ಮಾಡಬೇಕೆಂದಿದ್ದೀ?” ಎಂದು ಅವನನ್ನು ಪ್ರಶ್ನಿಸಿದನು.
百夫长听见这话,就去见千夫长,告诉他说:“你要做什么?这人是罗马人。”
27 ಸಹಸ್ರಾಧಿಪತಿಯು ಪೌಲನ ಬಳಿಗೆ ಹೋಗಿ, “ನೀನು ರೋಮ್ ಪೌರನೋ, ಹೇಳು?” ಎಂದು ಕೇಳಿದ್ದಕ್ಕೆ, ಅವನು, “ಹೌದು,” ಎಂದನು.
千夫长就来问保罗说:“你告诉我,你是罗马人吗?”保罗说:“是。”
28 “ನಾನು ಈ ಪೌರತ್ವ ಪಡೆಯಬೇಕಾದರೆ ಅದಕ್ಕೆ ನಾನು ಬಹಳ ಹಣ ಕೊಡಬೇಕಾಯಿತು,” ಎಂದು ಸಹಸ್ರಾಧಿಪತಿಯು ಹೇಳಲು, ಪೌಲನು, “ಆದರೆ ನಾನು ಹುಟ್ಟಿದ ದಿನದಿಂದಲೇ ರೋಮಿನ ಪೌರನಾಗಿದ್ದೇನೆ,” ಎಂದನು.
千夫长说:“我用许多银子才入了罗马的民籍。”保罗说:“我生来就是。”
29 ಪೌಲನನ್ನು ಪ್ರಶ್ನಿಸಲು ಬಂದವರು ತಕ್ಷಣವೇ ಬಿಟ್ಟುಹೋದರು. ಮಾತ್ರವಲ್ಲದೆ ಪೌಲನು ರೋಮ್ ಪೌರನೆಂದು ಗ್ರಹಿಸಿದ ಅವನನ್ನು ಬೇಡಿಗಳಿಂದ ಬಂಧಿಸಿದ್ದರಿಂದ ಸಹಸ್ರಾಧಿಪತಿಯೂ ಭಯಪಟ್ಟನು.
于是那些要拷问保罗的人就离开他去了。千夫长既知道他是罗马人,又因为捆绑了他,也害怕了。
30 ಯೆಹೂದ್ಯರು ಪೌಲನ ವಿರುದ್ಧ ಏಕೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂಬುದಕ್ಕೆ ನಿಜಸಂಗತಿಯನ್ನು ಕಂಡುಹಿಡಿಯಲು ಸಹಸ್ರಾಧಿಪತಿಯು ಅಪೇಕ್ಷೆಪಟ್ಟನು. ಮರುದಿನ ಪೌಲನನ್ನು ಬಿಡುಗಡೆ ಮಾಡಿ, ಮುಖ್ಯಯಾಜಕರೂ ನ್ಯಾಯಸಭೆಯೂ ಕೂಡಿಬರಬೇಕೆಂದು ಅಪ್ಪಣೆಮಾಡಿದನು. ಆಮೇಲೆ ಪೌಲನನ್ನು ತಂದು ಅವರ ಎದುರಿನಲ್ಲಿ ನಿಲ್ಲಿಸಿದರು.
第二天,千夫长为要知道犹太人控告保罗的实情,便解开他,吩咐祭司长和全公会的人都聚集,将保罗带下来,叫他站在他们面前。

< ಅಪೊಸ್ತಲರ ಕೃತ್ಯಗಳ 22 >