< ಅಪೊಸ್ತಲರ ಕೃತ್ಯಗಳ 21 >

1 ನಾವು ಅವರನ್ನು ಅಗಲಿದ ನಂತರ, ಸಮುದ್ರ ಮಾರ್ಗವಾಗಿ ಪ್ರಯಾಣಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ಎಂಬಲ್ಲಿಗೆ ಹೋಗಿ ಅಲ್ಲಿಂದ ಪತರಕ್ಕೆ ಬಂದೆವು.
Yɛne Efeso asafo mpanimfoɔ no dii ntetemu no, yɛsii mu nam nsuo ani tee kɔɔ Ko. Adeɛ kyeeɛ no, yɛkɔduruu Rodo na yɛfirii hɔ kɔɔ Patara.
2 ಅಲ್ಲಿ ಫೊಯಿನಿಕೆಗೆ ಹೋಗುವ ನೌಕೆಯನ್ನು ಕಂಡು, ಅದನ್ನೇರಿ ಪ್ರಯಾಣ ಮುಂದುವರಿಸಿದೆವು.
Yɛnyaa ɛhyɛn bi a ɛrekɔ Foinike kɔtenaa mu kɔeɛ.
3 ಸೈಪ್ರಸ್ ಹತ್ತಿರ ಬಂದು ಅದರ ದಕ್ಷಿಣಕ್ಕೆ ಪ್ರಯಾಣಮಾಡಿ ಸಿರಿಯಕ್ಕೆ ಹೋದೆವು. ನಮ್ಮ ನೌಕೆಯಲ್ಲಿದ್ದ ಸರಕುಗಳನ್ನು ಇಳಿಸಬೇಕಾಗಿದ್ದ ಟೈರ್ ಎಂಬಲ್ಲಿ ಬಂದು ಇಳಿದೆವು.
Yɛduruu baabi a yɛn ani tua Kipro no, yɛtwaa ho wɔ benkum fam kɔɔ Siria. Yɛsii fam wɔ Tiro, ɛfiri sɛ, na ɛhɔ na wɔrekɔyi ɛhyɛn no mu nneɛma.
4 ಅಲ್ಲಿ ಶಿಷ್ಯರನ್ನು ಹುಡುಕಿ, ಕಂಡು ಅವರೊಂದಿಗೆ ಏಳು ದಿನ ಇದ್ದೆವು. ಪೌಲನು ಯೆರೂಸಲೇಮಿಗೆ ಹೋಗಬಾರದೆಂದು ಅವರು ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದರು.
Yɛhunuu asuafoɔ bi wɔ hɔ tenaa wɔn nkyɛn dii nnawɔtwe. Asuafoɔ no nam Honhom Kronkron adiyie so bɔɔ Paulo kɔkɔ sɛ ɔnnkɔ Yerusalem.
5 ಆದರೆ ನಮ್ಮ ಸಮಯ ಮುಗಿದಾಗ, ನಮ್ಮ ಪ್ರಯಾಣವನ್ನು ಮುಂದುವರಿಸಬೇಕೆಂದಿದ್ದೆವು. ಶಿಷ್ಯರೆಲ್ಲರೂ ಅವರ ಮಡದಿ ಮಕ್ಕಳೂ ಪಟ್ಟಣದ ಹೊರಗಿನವರೆಗೆ ನಮ್ಮೊಂದಿಗೆ ಬಂದರು. ಸಮುದ್ರ ತೀರದಲ್ಲಿ ನಾವು ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.
Nanso, ɛberɛ duruu sɛ ɛsɛ sɛ yɛfiri hɔ no, yɛgyaa wɔn hɔ kɔeɛ. Asuafoɔ no nyinaa ne wɔn yerenom ne wɔn mma kɔgyaa yɛn kwan kɔduruu mpoano. Yɛduruu hɔ no, yɛn nyinaa buu nkotodwe bɔɔ mpaeɛ.
6 ಪರಸ್ಪರ ಬೀಳ್ಕೊಡುಗೆಯಾದ ನಂತರ, ನಾವು ನೌಕೆಯನ್ನೇರಿದೆವು. ಅವರು ತಮ್ಮ ಮನೆಗೆ ಹೊರಟು ಹೋದರು.
Afei, yɛkrakraa yɛn ho yɛn ho wieeɛ no, yɛkɔtenaa ɛhyɛn no mu maa wɔn nso sane kɔɔ efie.
7 ಟೈರ್ ಪಟ್ಟಣದಿಂದ ನಮ್ಮ ಪ್ರಯಾಣ ಮುಂದುವರಿಸಿ ಪ್ತೊಲೆಮಾಯ ಎಂಬಲ್ಲಿಗೆ ಬಂದಿಳಿದೆವು. ಅಲ್ಲಿಯ ಸಹೋದರರನ್ನು ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು.
Yɛfiri Tiro no, yɛtoaa yɛn akwantuo no so faa nsuo ani kɔduruu Ptolemai. Yɛduruu hɔ no, yɛkɔkyeaa asuafoɔ a wɔwɔ hɔ no dii wɔn nkyɛn da koro.
8 ಮರುದಿನ ಹೊರಟು ಕೈಸರೈಯ ಪಟ್ಟಣವನ್ನು ತಲುಪಿದೆವು. ಅಲ್ಲಿ ಏಳು ಜನರಲ್ಲಿ ಒಬ್ಬನಾದ, ಫಿಲಿಪ್ಪನೆಂಬ ಸುವಾರ್ತಿಕನ ಮನೆಯಲ್ಲಿ ತಂಗಿದೆವು.
Adeɛ kyeeɛ no, yɛfirii hɔ kɔɔ Kaesarea. Yɛduruu hɔ no, yɛkɔɔ ɔsɛmpakafoɔ Filipo a na ɔka mmarima baason a wɔyii wɔn wɔ Yerusalem no ho no fie kɔtenaa ne nkyɛn.
9 ಅವನಿಗೆ ಅವಿವಾಹಿತರಾದ ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದರು. ಅವರು ಪ್ರವಾದಿಸುವವರಾಗಿದ್ದರು.
Na Filipo wɔ mma mmaabunu baanan bi a na wɔhyɛ nkɔm.
10 ನಾವು ಅಲ್ಲಿ ಕೆಲವು ದಿನ ಇದ್ದ ತರುವಾಯ, ಅಗಬ ಎಂಬ ಹೆಸರಿನ ಪ್ರವಾದಿ ಯೂದಾಯದಿಂದ ಬಂದನು.
Yɛtenaa hɔ kyɛɛ kakra no, odiyifoɔ bi a wɔfrɛ no Agabo firi Yudea baa hɔ.
11 ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ತನ್ನ ಕೈಕಾಲುಗಳಿಗೆ ಅದನ್ನು ಕಟ್ಟಿಕೊಂಡು, “ಪವಿತ್ರಾತ್ಮರು ಇಂತೆನ್ನುತ್ತಾರೆ, ‘ಈ ನಡುಪಟ್ಟಿ ಯಾರದೋ ಆ ಮನುಷ್ಯನನ್ನು ಯೆರೂಸಲೇಮಿನ ಯೆಹೂದ್ಯರು ಈ ರೀತಿಯಲ್ಲಿ ಬಂಧಿಸಿ, ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು,’” ಎಂದನು.
Ɔbaa faako a yɛwɔ no, ɔfaa Paulo abɔsoɔ de kyekyeree ne nan ne ne nsa kaa sɛ, “Asɛm a Honhom Kronkron ka ni, ‘Sɛdeɛ Yudafoɔ a wɔwɔ Yerusalem no bɛkyekyere onipa a abɔsoɔ yi yɛ ne dea no na wɔde no ahyɛ amanamanmufoɔ no nsa ni!’”
12 ಇದನ್ನು ನಾವು ಕೇಳಿದಾಗ, ನಾವೂ ಅಲ್ಲಿಯ ಜನರೂ ಯೆರೂಸಲೇಮಿಗೆ ಹೋಗಬಾರದೆಂದು ಪೌಲನನ್ನು ಬೇಡಿಕೊಂಡೆವು.
Yɛtee saa asɛm yi no, yɛne wɔn a na yɛne wɔn wɔ hɔ no nyinaa srɛɛ Paulo sɛ ɔnnkɔ Yerusalem.
13 ಆಗ ಪೌಲನು, “ನೀವೇಕೆ ಅತ್ತು ನನ್ನ ಹೃದಯ ಒಡೆಯುತ್ತೀರಿ? ಬಂಧಿತನಾಗಲಷ್ಟೇ ಅಲ್ಲ, ನಮ್ಮ ಕರ್ತ ಯೇಸುವಿನ ಹೆಸರಿನ ನಿಮಿತ್ತ ಯೆರೂಸಲೇಮಿನಲ್ಲಿ ನಾನು ಸಾಯಲಿಕ್ಕೂ ಸಿದ್ಧನಾಗಿದ್ದೇನೆ,” ಎಂದನು.
Nanso, ɔka kyerɛɛ wɔn sɛ, “Osu a moresu de hyɛ me awerɛhoɔ yi ase ne sɛn? Me de masiesie me ho sɛ ɛnyɛ kyekyere a wɔbɛkyekyere me wɔ Yerusalem no na mesuro, na sɛ ɛtwa sɛ mewu mema Awurade Yesu a, mɛwu.”
14 ಪೌಲನು ಸಮ್ಮತಿಸದೆ ಇದ್ದ ಕಾರಣ, “ಕರ್ತ ಯೇಸುವಿನ ಚಿತ್ತ ನೆರವೇರಲಿ,” ಎಂದು ಹೇಳಿ ನಾವು ಸುಮ್ಮನಾದೆವು.
Yɛkaeɛ kaeɛ a wampene no, yɛgyae kaa sɛ, “Deɛ Awurade pɛ na ɛnyɛ.”
15 ಇದಾದನಂತರ ನಾವು ಸಿದ್ಧರಾಗಿ ಯೆರೂಸಲೇಮಿಗೆ ಹೋದೆವು.
Nna bi akyi no, yɛboaboaa yɛn ho firii hɔ kɔɔ Yerusalem.
16 ಕೈಸರೈಯದಿಂದ ಕೆಲವು ಶಿಷ್ಯರು ನಮ್ಮೊಂದಿಗೆ ಬಂದು, ಮ್ನಾಸೋನ ಎಂಬುವನ ಮನೆಗೆ ನಾವು ಇಳಿದುಕೊಳ್ಳುವಂತೆ ಕರೆದುಕೊಂಡು ಹೋದರು. ಅವನು ಸೈಪ್ರಸ್ ದಿಂದ ಬಂದ ಪ್ರಥಮ ಶಿಷ್ಯರಲ್ಲಿ ಒಬ್ಬನಾಗಿದ್ದನು.
Kaesarea asuafoɔ no bi ne yɛn kɔeɛ. Yɛduruu hɔ no, yɛkɔsoɛɛ Mnason a ɔfiri Kipro a ɔgyee Yesu Kristo diiɛ akyɛre no fie.
17 ನಾವು ಯೆರೂಸಲೇಮನ್ನು ತಲುಪಿದಾಗ, ಸಹೋದರರು ನಮ್ಮನ್ನು ಸಂತೋಷದಿಂದ ಸ್ವೀಕರಿಸಿದರು.
Yɛduruu Yerusalem no, asuafoɔ a wɔwɔ hɔ no nyinaa gyee yɛn fɛw so.
18 ಮರುದಿನ ನಾವೆಲ್ಲರೂ ಪೌಲನೊಂದಿಗೆ ಯಾಕೋಬನನ್ನು ನೋಡಲು ಹೋದೆವು. ಅಲ್ಲಿ ಎಲ್ಲಾ ಸಭೆಹಿರಿಯರೂ ಇದ್ದರು.
Adeɛ kyeeɛ no, Paulo ne yɛn kɔkyeaa Yakobo ne Yerusalem asafo no mu mpanimfoɔ.
19 ಪೌಲನು ಅವರನ್ನು ವಂದಿಸಿ, ತನ್ನ ಸೇವೆಯ ಮೂಲಕ ದೇವರು ಯೆಹೂದ್ಯರಲ್ಲದವರ ಮಧ್ಯದಲ್ಲಿ ಮಾಡಿದ ಕಾರ್ಯಗಳನ್ನು ವಿವರಿಸಿದನು.
Nkyea no akyi no, Paulo kaa biribiara a Onyankopɔn nam ne som no so ayɛ wɔ amanamanmufoɔ no mu no kyerɛɛ wɔn.
20 ಅವರು ಅದನ್ನು ಕೇಳಿ, ದೇವರನ್ನು ಕೊಂಡಾಡಿದರು. ಅನಂತರ ಪೌಲನಿಗೆ, “ಸಹೋದರನೇ, ಸಾವಿರಾರು ಜನ ಯೆಹೂದ್ಯರು ನಂಬಿರುವುದನ್ನು ಕಾಣುತ್ತೀಯಲ್ಲಾ, ಅವರೆಲ್ಲರೂ ಮೋಶೆಯ ನಿಯಮದ ಅಭಿಮಾನಿಗಳಾಗಿದ್ದರು.
Wɔtiee Paulo amanneɛbɔ no wieeɛ no, wɔhyɛɛ Onyankopɔn animuonyam. Afei, wɔka kyerɛɛ no sɛ, “Onua, wʼankasa wodi adanseɛ sɛ Yudafoɔ mpempem na na wɔabɛyɛ asuafoɔ a wɔn nyinaa nso di yɛn mmara no so.
21 ನೀನು ಯೆಹೂದ್ಯರಲ್ಲದವರ ಮಧ್ಯದಲ್ಲಿ ವಾಸಿಸುತ್ತಿರುವ ಯೆಹೂದ್ಯರಿಗೆ, ‘ನೀವು ಮೋಶೆಯ ನಿಯಮವನ್ನು ಅನುಸರಿಸಬೇಡಿರಿ, ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬೇಡಿರಿ, ನಿಮ್ಮ ಆಚಾರಗಳನ್ನು ಅನುಸರಿಸಬೇಡಿರಿ,’ ಎಂದು ಬೋಧಿಸುವುದಾಗಿ ನಿನ್ನ ವಿಷಯದಲ್ಲಿ ಅವರಿಗೆ ತಿಳಿದು ಬಂದಿದೆ.
Saa nnipa yi ate sɛ wotia Mose mmara no ne Yudafoɔ amanneɛ; ɛne sɛ, wokyerɛkyerɛ Yudafoɔ a wɔte amanamanmufoɔ no mu sɛ wɔnntwa wɔn mma twetia na wɔnnni yɛn amanneɛ nso so.
22 ಹೀಗಿರುವಲ್ಲಿ ನಾವೇನು ಮಾಡೋಣ? ನೀನು ಇಲ್ಲಿಗೆ ಬಂದಿರುವ ವಿಷಯವೂ ಅವರಿಗೆ ಗೊತ್ತಾಗುವುದು.
Deɛ ɛbɛyɛ biara, wɔbɛte sɛ woaba ha. Enti, afei yɛbɛyɛ no ɛdeɛn?
23 ಆದ್ದರಿಂದ ನಾವು ನಿನಗೆ ಹೇಳುವಂತೆ ಮಾಡು, ಹರಕೆ ಹೊತ್ತ ನಾಲ್ವರು ನಮ್ಮಲ್ಲಿ ಇದ್ದಾರೆ.
Yɛ deɛ yɛrebɛka akyerɛ wo yi. Mmarima baanan bi wɔ yɛn nkyɛn ha a, wɔresiesie wɔn ho ama amanneɛ ho bɔhyɛ.
24 ನೀನು ಇವರನ್ನು ಕರೆದುಕೊಂಡು ಹೋಗಿ, ಅವರೊಂದಿಗೆ ನಿನ್ನನ್ನು ಶುದ್ಧಿಮಾಡಿಕೊಂಡು, ಅವರು ತಮ್ಮ ಕ್ಷೌರ ಮಾಡಿಸಿಕೊಳ್ಳುವ ಖರ್ಚನ್ನು ನೀನೇ ಪೂರೈಸು. ಆಗ ನಿನ್ನ ವಿಷಯದಲ್ಲಿ ಕೇಳಿರುವ ಸಂಗತಿಗಳು ನಿಜವಲ್ಲ ಮತ್ತು ನೀನು ಮೋಶೆಯ ನಿಯಮಕ್ಕನುಸಾರವಾಗಿ ನಡೆದುಕೊಳ್ಳುತ್ತೀ ಎಂದು ಎಲ್ಲರಿಗೂ ತಿಳಿದುಬರುವುದು.
Wo ne wɔn nkɔ na monkɔdwira mo ho na tua ho ka ma wɔn sɛdeɛ ɛbɛyɛ a, wɔbɛtumi atwitwa wɔn tirinwi. Yei bɛma obiara ahunu sɛ nsɛm a wɔte faa wo ho no mu biara nyɛ nokorɛ, ɛfiri sɛ, wʼankasa mpo, wodi Mose mmara no so.
25 ಯೆಹೂದ್ಯರಲ್ಲದವರಿಂದ ಬಂದ ವಿಶ್ವಾಸಿಗಳಿಗಾದರೋ, ಅವರು ದೇವರಲ್ಲದವುಗಳಿಗೆ ಅರ್ಪಿತವಾದ ಮಲಿನ ಆಹಾರದಿಂದಲೂ ರಕ್ತದಿಂದಲೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ಅನೈತಿಕತೆಯಿಂದಲೂ ದೂರವಿರಬೇಕೆಂದು ನಾವು ಬರೆದ ನಮ್ಮ ತೀರ್ಮಾನವನ್ನು ತಿಳಿಸಿದ್ದೇವೆ,” ಎಂದರು.
Amanamanmufoɔ a wɔabɛyɛ asuafoɔ no de, yɛatwerɛ akɔma wɔn akyerɛ gyinaeɛ a yɛasi sɛ, wɔnnni aduane biara a wɔde abɔ afɔdeɛ ama abosom; wɔnnni mogya; wɔnnni aboa biara a wɔantwa ne mene ansa na ɔwuiɛ; na afei nso, wɔntwe wɔn ho mfiri adwamammɔ ho.”
26 ಮರುದಿನ ಪೌಲನು ಆ ನಾಲ್ವರೊಂದಿಗೆ ತನ್ನನ್ನು ಶುದ್ಧೀಕರಿಸಿಕೊಂಡನು. ಅನಂತರ ಶುದ್ಧಾಚಾರ ಮುಗಿಯುವ ದಿನಗಳ ಬಗ್ಗೆ ತಿಳಿಸುವುದಕ್ಕಾಗಿ ದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಅರ್ಪಣೆಯು ಆಗಬೇಕೆಂಬುದರ ಬಗ್ಗೆಯೂ ಸೂಚಿಸಿದನು.
Adeɛ kyeeɛ no, Paulo ne mmarima no kɔdwiraa wɔn ho. Ɔne wɔn kɔɔ asɔredan mu kɔkyerɛɛ da a wɔbɛwie wɔn ahodwira no ne da a wɔbɛbɔ afɔdeɛ ama wɔn mmaako mmaako.
27 ಏಳು ದಿನಗಳ ಅವಧಿ ಮುಗಿಯುತ್ತಿದ್ದಾಗ, ಏಷ್ಯಾ ಪ್ರಾಂತದ ಕೆಲವು ಯೆಹೂದ್ಯ ಜನರು ದೇವಾಲಯದಲ್ಲಿ ಪೌಲನನ್ನು ಕಂಡರು. ಅವರು ಇಡೀ ಜನಸಮೂಹವನ್ನು ಉದ್ರೇಕಿಸಿ ಪೌಲನನ್ನು ಹಿಡಿದರು.
Nnanson no reyɛ atwam no, Yudafoɔ bi a wɔfiri Asia hunuu Paulo wɔ asɔredan mu hɔ, hwanyanee nnipa a wɔwɔ hɔ no nyinaa maa wɔkyeree Paulo.
28 “ಇಸ್ರಾಯೇಲರೇ, ನಮಗೆ ಸಹಾಯಮಾಡಿರಿ! ನಮ್ಮ ಜನರಿಗೂ ನಮ್ಮ ನಿಯಮಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲಾ ಜನರಿಗೆ ಬೋಧಿಸುತ್ತಿರುವ ಮನುಷ್ಯನು ಇವನೇ. ಅಷ್ಟೇ ಅಲ್ಲ, ಗ್ರೀಕರನ್ನು ದೇವಾಲಯದೊಳಗೆ ಕರೆದುಕೊಂಡು ಬಂದು ಈ ಪವಿತ್ರ ಸ್ಥಳವನ್ನು ಭ್ರಷ್ಟಗೊಳಿಸಿದ್ದಾನೆ,” ಎಂದು ಕೂಗಿ ಹೇಳಿದರು.
Wɔteateaam sɛ, “Israel mmarima, monsɔre mmɛboa yɛn! Yei ne ɔbarima a baabiara a ɔbɛkɔ no ɔnam ne nkyerɛkyerɛ so tia Israelfoɔ, Mose mmara ne asɔredan yi. Mpo ɔde amanamanmufoɔ bi aba ha de agu Kronkronbea ha ho fi.”
29 ಅವರು ಮೊದಲು ಪಟ್ಟಣದಲ್ಲಿ ಪೌಲನೊಂದಿಗೆ ಎಫೆಸದ ತ್ರೊಫಿಮ ಎಂಬವನು ಇದ್ದುದನ್ನು ಕಂಡಿದ್ದರಿಂದ, ಪೌಲನು ಈಗ ಅವನನ್ನು ದೇವಾಲಯದೊಳಗೆ ಕರೆದುಕೊಂಡು ಬಂದಿರಬಹುದೆಂದು ಅವರು ಭಾವಿಸಿದರು.
Deɛ ɛma wɔkaa saa asɛm yi ne sɛ, na wɔahunu Paulo ne Efesoni Trofimo wɔ kurom hɔ, enti na wɔsusu sɛ Paulo de no akɔ asɔredan mu hɔ.
30 ಇಡೀ ಪಟ್ಟಣದಲ್ಲೇ ಕೋಲಾಹಲವೆದ್ದಿತು. ಜನರು ಎಲ್ಲಾ ದಿಕ್ಕುಗಳಿಂದ ಓಡೋಡುತ್ತಾ ಬಂದು. ಪೌಲನನ್ನು ಹಿಡಿದುಕೊಂಡು ದೇವಾಲಯದೊಳಗಿಂದ ಹೊರಗೆಳೆದುಕೊಂಡು ಹೋದರು. ಕೂಡಲೇ ದ್ವಾರಗಳನ್ನು ಮುಚ್ಚಿಬಿಟ್ಟರು.
Wɔtee saa asɛm yi no, kuro mu no nyinaa bɔɔ twi, kɔkyeree Paulo, twee no firii asɔredan no mu hɔ. Ɛhɔ ara, wɔtotoo asɔredan no apono no nyinaa mu.
31 ಅವರು ಪೌಲನನ್ನು ಕೊಲ್ಲುವುದಕ್ಕೆ ಪ್ರಯತ್ನಿಸುತ್ತಿದ್ದಾಗ, ಯೆರೂಸಲೇಮ ಪಟ್ಟಣದಲ್ಲೆಲ್ಲಾ ಗೊಂದಲವೆದ್ದಿದೆ ಎಂಬ ಸುದ್ದಿ ಅಲ್ಲಿದ್ದ ರೋಮ್ ಸಹಸ್ರಾಧಿಪತಿಗೆ ತಲುಪಿತು.
Ɛberɛ a ɛdɔm no pɛɛ sɛ wɔkum Paulo no, obi kɔka kyerɛɛ Roma asraafoɔ apem so safohene no sɛ, basabasa asi Yerusalem.
32 ಅವನು ತಕ್ಷಣವೇ ಸೈನಿಕರನ್ನೂ ಶತಾಧಿಪತಿಗಳನ್ನೂ ಕರೆದುಕೊಂಡು ಜನಸಮೂಹದ ಬಳಿಗೆ ಓಡಿಬಂದನು. ಅವರು ಸಹಸ್ರಾಧಿಪತಿಯನ್ನೂ ಅವನ ಸೈನಿಕರನ್ನೂ ಕಂಡಾಗ ಪೌಲನನ್ನು ಹೊಡೆಯುವುದನ್ನು ನಿಲ್ಲಿಸಿದರು.
Amonom hɔ ara, ɔsafohene no ne asraafoɔ mpanin bi ne asraafoɔ bi de ahoɔherɛ kɔɔ baabi a dɔm no ahyia no. Ɛberɛ a nnipa no hunuu no ne asraafoɔ no no, wɔgyaee Paulo hweɛ.
33 ಸಹಸ್ರಾಧಿಪತಿ ಅಲ್ಲಿಗೆ ಬಂದು ಪೌಲನನ್ನು ಬಂಧಿಸಿ, ಅವನನ್ನು ಎರಡು ಸರಪಣಿಗಳಿಂದ ಕಟ್ಟಬೇಕೆಂದು ಆಜ್ಞಾಪಿಸಿದನು. ಅನಂತರ “ಇವನು ಯಾರು? ಇವನು ಮಾಡಿದ್ದೇನು?” ಎಂದು ವಿಚಾರಿಸಿದನು.
Ɔsafohene no kɔsɔɔ Paulo mu, kyerɛɛ sɛ wɔmfa nkɔnsɔnkɔnsɔn mmienu ngu no. Afei, ɔbisaa sɛ, “Hwan ne saa ɔbarima yi? Bɔne bɛn na wayɛ?”
34 ಜನಸಮೂಹದಲ್ಲಿದ್ದ ಇತರರು ವಿವಿಧ ರೀತಿಯಿಂದ ಕೂಗುತ್ತಿರಲು ಗಲಭೆಯ ನಿಮಿತ್ತ ಸಹಸ್ರಾಧಿಪತಿಗೆ ಸತ್ಯಾಂಶ ತಿಳಿಯಲಾಗಲಿಲ್ಲ. ಆದ್ದರಿಂದ ಪೌಲನನ್ನು ಸೈನಿಕ ಪಾಳ್ಯದೊಳಗೆ ತೆಗೆದುಕೊಂಡು ಹೋಗಲು ಆಜ್ಞಾಪಿಸಿದನು.
Nnipa no ano antumi ankɔ bɛnkorɔ; ebinom ka sei a, na afoforɔ nso aka sei. Saa basabasa yi amma ɔsafohene no antumi anhunu asɛm pɔtee a asi. Ɛno enti, ɔhyɛɛ nʼasraafoɔ no sɛ wɔmfa Paulo nkɔ aban mu.
35 ಪೌಲನನ್ನು ಮೆಟ್ಟಲುಗಳವರೆಗೆ ತೆಗೆದುಕೊಂಡು ಹೋದಾಗ ಜನರ ರೋಷ ಇನ್ನೂ ಬಲವಾದುದ್ದರಿಂದ ಸೈನಿಕರು ಅವನನ್ನು ಹೊತ್ತುಕೊಂಡು ಹೋಗಬೇಕಾಯಿತು.
Wɔde Paulo duruu atwedeɛ no ano no, ɛdɔm no bɔ toaa no enti asraafoɔ no tam no kɔeɛ.
36 ಏಕೆಂದರೆ ಮುನ್ನುಗ್ಗುತ್ತಿದ್ದ ಜನರ ಗುಂಪು, “ಅವನನ್ನು ಕೊಲ್ಲಿರಿ!” ಎಂದು ಆರ್ಭಟಿಸುತ್ತಿತ್ತು.
Ɛdɔm no tu dii wɔn akyi teateaam sɛ, “Monkum no!”
37 ಸೈನಿಕರು ಪೌಲನನ್ನು ಅವರ ಪಾಳ್ಯದೊಳಗೆ ಒಯ್ಯುತ್ತಿದ್ದಾಗ, ಅವನು ಸಹಸ್ರಾಧಿಪತಿಗೆ, “ನಾನು ನಿನ್ನೊಡನೆ ಸ್ವಲ್ಪ ಮಾತನಾಡುವುದಕ್ಕೆ ಅಪ್ಪಣೆಯಾದೀತೇ?” ಎಂದು ಕೇಳಲು, ಅದಕ್ಕೆ ಅವನು, “ನಿನಗೆ ಗ್ರೀಕ್ ಭಾಷೆಯೂ ಗೊತ್ತಿದೆಯೋ?”
Wɔde Paulo rekɔ aban mu no, ɔbisaa ɔsafohene no sɛ, “Mesrɛ wo, mɛtumi maka asɛm bi makyerɛ wo anaa?” Ɔsafohene no nso bisaa no sɛ, “Enti, wote Hela kasa?
38 “ಹಾಗಾದರೆ ಕೆಲವು ಸಮಯದ ಹಿಂದೆ ದಂಗೆಯೆಬ್ಬಿಸಿ ನಾಲ್ಕು ಸಾವಿರ ಉಗ್ರಗಾಮಿಗಳನ್ನು ಅರಣ್ಯಕ್ಕೆ ಕರೆದುಕೊಂಡುಹೋದ ಈಜಿಪ್ಟಿನವನು ನೀನಲ್ಲವೋ?” ಎಂದನು.
Ɛnyɛ wo ne Misraimni a da bi ɔhyɛɛ basabasayɛ ase dii mmarima awudifoɔ mpemnan anim kɔɔ ɛserɛ so no?”
39 ಅದಕ್ಕೆ ಪೌಲನು, “ನಾನೊಬ್ಬ ಯೆಹೂದ್ಯನು, ಕಿಲಿಕ್ಯದ ತಾರ್ಸದವನು, ಪ್ರಸಿದ್ಧ ಪಟ್ಟಣದ ನಾಗರಿಕನು. ದಯವಿಟ್ಟು ಜನರೊಂದಿಗೆ ಮಾತನಾಡಲು ನನಗೆ ಅವಕಾಶ ಕೊಡಬೇಕು,” ಎಂದು ಸಹಸ್ರಾಧಿಪತಿಯನ್ನು ಬೇಡಿಕೊಂಡನು.
Paulo buaa no sɛ, “Meyɛ Yudani a wɔwoo me wɔ Tarso; Kilikia kuro a agye din no mu onipa ne me. Mesrɛ wo, ma me ho ɛkwan na me ne nnipa no nkasa.”
40 ಸಹಸ್ರಾಧಿಪತಿಯ ಅಪ್ಪಣೆ ಪಡೆದುಕೊಂಡು, ಪೌಲನು ಮೆಟ್ಟಲುಗಳ ಮೇಲೆ ನಿಂತುಕೊಂಡು ಜನಸಮೂಹಕ್ಕೆ ಸುಮ್ಮನಿರುವಂತೆ ಸನ್ನೆಮಾಡಲು, ಅವರು ಬಹು ನಿಶ್ಶಬ್ದರಾದಾಗ ಅವನು ಹೀಬ್ರೂ ಭಾಷೆಯಲ್ಲಿ ಅವರಿಗೆ ಹೀಗೆಂದನು:
Ɔsafohene no maa Paulo ɛkwan ma ɔgyinaa atwedeɛ no so nyamaa nnipa no. Wɔyɛɛ komm no, Paulo kasa kyerɛɛ wɔn wɔ Arameike kasa mu sɛ:

< ಅಪೊಸ್ತಲರ ಕೃತ್ಯಗಳ 21 >