< ಅಪೊಸ್ತಲರ ಕೃತ್ಯಗಳ 13 >

1 ಅಂತಿಯೋಕ್ಯದ ಸಭೆಯಲ್ಲಿ, ಪ್ರವಾದಿಗಳೂ ಬೋಧಕರೂ ಇದ್ದರು. ಅವರು ಯಾರೆಂದರೆ ಬಾರ್ನಬನು, ನೀಗರ ಎಂದು ಕರೆಯಲಾಗುತ್ತಿದ್ದ ಸಿಮೆಯೋನ, ಕುರೇನೆದ ಲೂಕ್ಯ, ಚತುರಾಧಿಪತಿ ಹೆರೋದನೊಂದಿಗೆ ಬೆಳೆದ ಮೆನಹೇನ ಮತ್ತು ಸೌಲ ಮುಂತಾದವರೇ.
В Антиохии, в тамошней церкви, были некоторые пророки и учители: Варнава, и Симеон, называемый Нигер, и Луций Киринеянин, и Манаил, совоспитанник Ирода четвертовластника, и Савл.
2 ಇವರೆಲ್ಲರೂ ಕರ್ತದೇವರನ್ನು ಆರಾಧಿಸಿ, ಉಪವಾಸಮಾಡುತ್ತಿದ್ದರು. ಆಗ ಪವಿತ್ರಾತ್ಮ ದೇವರು, “ಬಾರ್ನಬನನ್ನೂ ಸೌಲನನ್ನೂ ನಾನು ಕರೆದಿರುವ ಕಾರ್ಯಕ್ಕಾಗಿ ಅವರನ್ನು ನನಗಾಗಿ ಪ್ರತ್ಯೇಕಿಸಿರಿ,” ಎಂದರು.
Когда они служили Господу и постились, Дух Святый сказал: отделите Мне Варнаву и Савла на дело, к которому Я призвал их.
3 ಆಗ ಅವರು ಉಪವಾಸವಿದ್ದು ಪ್ರಾರ್ಥನೆಮಾಡಿ, ಅವರಿಬ್ಬರ ಮೇಲೆ ಕೈಗಳನ್ನಿಟ್ಟು ಕಳುಹಿಸಿಬಿಟ್ಟರು.
Тогда они, совершив пост и молитву и возложив на них руки, отпустили их.
4 ಪವಿತ್ರಾತ್ಮ ದೇವರಿಂದ ಕಳುಹಿಸಲಾದ ಅವರಿಬ್ಬರೂ ಸೆಲ್ಯೂಕ್ಯಕ್ಕೆ ಹೋಗಿ ಅಲ್ಲಿಂದ ನೌಕೆಯಲ್ಲಿ ಪ್ರಯಾಣಮಾಡಿ ಸೈಪ್ರಸಿಗೆ ತಲುಪಿದರು.
Сии, быв посланы Духом Святым, пришли в Селевкию, а оттуда отплыли в Кипр;
5 ಸಲಮೀಸಿಗೆ ಬಂದು, ಅಲ್ಲಿಯ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೋಹಾನನು ಸಹ ಅವರೊಂದಿಗಿದ್ದು ಅವರಿಗೆ ಸಹಾಯಕನಾಗಿದ್ದನು.
и, быв в Саламине, проповедывали слово Божие в синагогах Иудейских; имели же при себе и Иоанна для служения.
6 ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣಮಾಡಿ ಪಾಫೋಸ್ ಎಂಬಲ್ಲಿಗೆ ಬಂದರು. ಅಲ್ಲಿ ಮಂತ್ರವಾದಿಯೂ ಸುಳ್ಳುಪ್ರವಾದಿಯೂ ಆಗಿದ್ದ “ಬಾರ್ ಯೇಸು” ಎಂಬ ಹೆಸರಿನ ಒಬ್ಬ ಯೆಹೂದ್ಯನನ್ನು ಕಂಡರು.
Пройдя весь остров до Пафа, нашли они некоторого волхва, лжепророка, Иудеянина, именем Вариисуса,
7 ಅವನು ರಾಜ್ಯಪಾಲ ಸೆರ್ಗ್ಯಪೌಲನ ಜೊತೆಗಿದ್ದನು. ಈ ರಾಜ್ಯಪಾಲನು ಬುದ್ಧಿವಂತನಾಗಿದ್ದನು. ಇವನು ದೇವರ ವಾಕ್ಯವನ್ನು ಕೇಳುವ ಉದ್ದೇಶದಿಂದ ಬಾರ್ನಬ ಮತ್ತು ಸೌಲರನ್ನು ಕರೆಕಳುಹಿಸಿದನು.
который находился с проконсулом Сергием Павлом, мужем разумным. Сей, призвав Варнаву и Савла, пожелал услышать слово Божие.
8 ಆದರೆ ಮಂತ್ರವಾದಿಯಾದ ಎಲುಮನು ಅವರನ್ನು ವಿರೋಧಿಸಿ ರಾಜ್ಯಪಾಲನು ವಿಶ್ವಾಸಿಯಾಗದಂತೆ ಅಡ್ಡಿಮಾಡಲು ಪ್ರಯತ್ನಿಸಿದನು. ಎಲುಮ ಎಂಬ ಹೆಸರಿಗೆ ಮಂತ್ರವಾದಿ ಎಂಬುದೇ ಅರ್ಥ.
А Елима волхв ибо то значит имя его противился им, стараясь отвратить проконсула от веры.
9 ಆಗ ಪೌಲನೆಂದೂ ಕರೆಯಲಾಗುತ್ತಿದ್ದ ಸೌಲನು, ಪವಿತ್ರಾತ್ಮಭರಿತನಾಗಿ, ಎಲುಮನನ್ನು ನೇರವಾಗಿ ದೃಷ್ಟಿಸಿ,
Но Савл, он же и Павел, исполнившись Духа Святаго и устремив на него взор,
10 “ಎಲೈ ಸೈತಾನನ ಮಗನೇ, ನೀತಿಗೆಲ್ಲಾ ವೈರಿಯೇ, ನಿನ್ನಲ್ಲಿ ಎಲ್ಲಾ ತರದ ಮೋಸವೂ ಕುತಂತ್ರವೂ ತುಂಬಿವೆ. ಕರ್ತದೇವರ ಸನ್ಮಾರ್ಗಗಳಿಗೆ ಅಡ್ಡಿಯಾಗುವುದನ್ನು ನೀನೆಂದೂ ನಿಲ್ಲಿಸುವುದಿಲ್ಲವೋ?
сказал: о, исполненный всякого коварства и всякого злодейства, сын диавола, враг всякой правды! перестанешь ли ты совращать с прямых путей Господних?
11 ಇಗೋ ಕರ್ತದೇವರ ಹಸ್ತ ನಿನಗೆ ವಿರೋಧವಾಗಿದೆ. ಈಗ ನೀನು ಕುರುಡನಾಗಿ, ಸ್ವಲ್ಪ ಕಾಲ ಸೂರ್ಯನ ಬೆಳಕನ್ನು ಕಾಣದೇ ಹೋಗುವೆ,” ಎಂದನು. ತಕ್ಷಣವೇ ಅವನ ಮೇಲೆ ಮಂಜು ಮುಸುಕಿ ಕತ್ತಲೆ ಆವರಿಸಿತು. ಅವನು ತಡವರಿಸುತ್ತಾ ತನ್ನನ್ನು ಯಾರಾದರೂ ಕೈಹಿಡಿದು ನಡೆಸುವರೋ ಎಂದು ಹುಡುಕಾಡಿದನು.
И ныне вот, рука Господня на тебя: ты будешь слеп и не увидишь солнца до времени. И вдруг напал на него мрак и тьма, и он, обращаясь туда и сюда, искал вожатого.
12 ಸಂಭವಿಸಿದ್ದೆಲ್ಲವನ್ನೂ ರಾಜ್ಯಪಾಲನು ಕಂಡು, ಕರ್ತ ಯೇಸುವಿನ ವಿಷಯವಾಗಿದ್ದ ಬೋಧನೆಯ ಬಗ್ಗೆ ಆಶ್ಚರ್ಯಪಟ್ಟು ವಿಶ್ವಾಸವನ್ನಿಟ್ಟನು.
Тогда проконсул, увидев происшедшее, уверовал, дивясь учению Господню.
13 ಪಾಫೋಸಿನಿಂದ, ಪೌಲ ಮತ್ತು ಅವನ ಸಂಗಡಿಗರು ಪಂಫುಲ್ಯಕ್ಕೆ ಸೇರಿದ ಪೆರ್ಗೆ ಎಂಬಲ್ಲಿಗೆ ನೌಕೆಯಲ್ಲಿ ಪ್ರಯಾಣಮಾಡಿದರು, ಅಲ್ಲಿ ಯೋಹಾನನು ಅವರನ್ನು ಬಿಟ್ಟು ಯೆರೂಸಲೇಮಿಗೆ ಹಿಂತಿರುಗಿ ಹೋದನು.
Отплыв из Пафа, Павел и бывшие при нем прибыли в Пергию, в Памфилии. Но Иоанн, отделившись от них, возвратился в Иерусалим.
14 ಉಳಿದವರು ಪೆರ್ಗೆದಿಂದ ಪಿಸಿದ್ಯದ ಅಂತಿಯೋಕ್ಯಕ್ಕೆ ಹೋದರು. ಸಬ್ಬತ್ ದಿನ ಅವರು ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು.
Они же, проходя от Пергии, прибыли в Антиохию Писидийскую и, войдя в синагогу в день субботний, сели.
15 ನಿಯಮ ಮತ್ತು ಪ್ರವಾದಿಗಳ ಗ್ರಂಥವು ಪಾರಾಯಣವಾದ ತರುವಾಯ, ಸಭಾಮಂದಿರದ ಅಧಿಕಾರಿಗಳು ಅವರಿಗೆ, “ಸಹೋದರರೇ, ಜನರಿಗೆ ಪ್ರೋತ್ಸಾಹ ಕೊಡುವ ಸಂದೇಶ ನಿಮ್ಮಲ್ಲಿದ್ದರೆ, ಮಾತನಾಡಿರಿ,” ಎಂದು ಕೇಳಿಕೊಂಡರು.
После чтения закона и пророков начальники синагоги послали сказать им: мужи братия! если у вас есть слово наставления к народу, говорите.
16 ಪೌಲನು ಎದ್ದು ನಿಂತು, ಕೈಸನ್ನೆ ಮಾಡಿ ಹೀಗೆ ಹೇಳಿದನು: “ಇಸ್ರಾಯೇಲ್ ಜನರೇ, ದೇವರಲ್ಲಿ ಭಯಭಕ್ತಿಯುಳ್ಳವರೇ, ಕೇಳಿರಿ!
Павел, встав и дав знак рукою, сказал: мужи Израильтяне и боящиеся Бога! послушайте.
17 ಈ ಇಸ್ರಾಯೇಲ್ ಜನರ ದೇವರು ನಮ್ಮ ಪಿತೃಗಳನ್ನು ಆಯ್ದುಕೊಂಡರು; ಈಜಿಪ್ಟಿನಲ್ಲಿ ನಮ್ಮ ಜನರು ವಾಸಿಸುತ್ತಿದ್ದಾಗ; ಅವರನ್ನು ಪ್ರಬಲರನ್ನಾಗಿ ಮಾಡಿ ತಮ್ಮ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಅವರನ್ನು ಬಿಡಿಸಿ ಕರೆತಂದರು;
Бог народа сего избрал отцов наших, и возвысил сей народ во время пребывания в земле Египетской, и мышцею вознесенною вывел их из нее,
18 ಅರಣ್ಯದಲ್ಲಿ ಸುಮಾರು ನಲವತ್ತು ವರ್ಷ ಅವರ ನಡತೆಯನ್ನು ಸಹಿಸಿಕೊಂಡರು.
и около сорока лет времени питал их в пустыне.
19 ಕಾನಾನ್ ದೇಶದಲ್ಲಿದ್ದ ಏಳು ರಾಜ್ಯಗಳನ್ನು ಜಯಿಸಿ, ಅವರ ದೇಶವನ್ನು ತಮ್ಮ ಜನರಿಗೆ ಬಾಧ್ಯವಾಗಿ ದಯಪಾಲಿಸಿದರು.
И, истребив семь народов в земле Ханаанской, разделил им в наследие землю их.
20 ಇದಕ್ಕೆ ನಾನೂರ ಐವತ್ತು ವರ್ಷಗಳ ಕಾಲ ಹಿಡಿಯಿತು. “ಇದಾದನಂತರ, ದೇವರು ಅವರಿಗೆ ಪ್ರವಾದಿ ಸಮುಯೇಲನ ಸಮಯದವರೆಗೆ ನ್ಯಾಯಸ್ಥಾಪಕರನ್ನು ದಯಪಾಲಿಸಿದರು.
И после сего, около четырехсот пятидесяти лет, давал им судей до пророка Самуила.
21 ಅನಂತರ ಜನರು ಒಬ್ಬ ಅರಸನು ತಮಗೆ ಬೇಕೆಂದು ಕೇಳಿಕೊಳ್ಳಲು, ದೇವರು ಬೆನ್ಯಾಮೀನ್ ಗೋತ್ರದ ಕೀಷನ ಮಗ ಸೌಲನನ್ನು ಅವರಿಗೆ ಕೊಟ್ಟರು. ಇವನು ನಲವತ್ತು ವರ್ಷ ಆಳ್ವಿಕೆ ಮಾಡಿದನು.
Потом просили они царя, и Бог дал им Саула, сына Кисова, мужа из колена Вениаминова. Так прошло лет сорок.
22 ದೇವರು ಸೌಲನನ್ನು ಅರಸುತನದಿಂದ ತೆಗೆದುಹಾಕಿ, ದೇವರು ದಾವೀದನನ್ನು ಅವರ ಅರಸನನ್ನಾಗಿ ಎಬ್ಬಿಸಿದರು. ಇವನನ್ನು ಕುರಿತು, ‘ಇಷಯನ ಮಗ ದಾವೀದನು ನನಗೆ ಸಿಕ್ಕಿದನು. ನನ್ನ ಹೃದಯಕ್ಕೆ ತಕ್ಕಂಥ ಮನುಷ್ಯನು; ಇವನು ನಾನು ಅಪೇಕ್ಷಿಸುವುದೆಲ್ಲವನ್ನೂ ಮಾಡುವನು,’ ಎಂದು ದೇವರು ತಾವೇ ಸಾಕ್ಷಿಕೊಟ್ಟರು.
Отринув его, поставил им царем Давида, о котором и сказал, свидетельствуя: нашел Я мужа по сердцу Моему, Давида, сына Иессеева, который исполнит все хотения Мои.
23 “ಈ ದಾವೀದನ ಸಂತತಿಯಲ್ಲಿಯೇ ದೇವರು ಇಸ್ರಾಯೇಲಿಗೆ ತನ್ನ ವಾಗ್ದಾನದಂತೆ ರಕ್ಷಕ ಯೇಸುವನ್ನು ತಂದರು.
Из его-то потомства Бог по обетованию воздвиг Израилю Спасителя Иисуса.
24 ಯೇಸು ಬರುವ ಮೊದಲು, ಸ್ನಾನಿಕ ಯೋಹಾನನು ಎಲ್ಲಾ ಇಸ್ರಾಯೇಲರಿಗೆ ಪಶ್ಚಾತ್ತಾಪ ಮತ್ತು ದೀಕ್ಷಾಸ್ನಾನದ ಬಗ್ಗೆ ಸಾರಿದನು.
Перед самым явлением Его Иоанн проповедывал крещение покаяния всему народу Израильскому.
25 ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ, ‘ನನ್ನನ್ನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ಅವರು ನಾನಲ್ಲ, ಇಗೋ, ಅವರು ನನ್ನ ನಂತರ ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.
При окончании же поприща своего Иоанн говорил: за кого почитаете вы меня? я не тот; но вот, идет за мною, у Которого я недостоин развязать обувь на ногах.
26 “ಅಬ್ರಹಾಮನ ವಂಶದವರಾದ ಸಹೋದರರೇ, ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ರಕ್ಷಣೆಯ ಸಂದೇಶ ಕಳುಹಿಸಿರುವುದು ನಮಗಾಗಿಯೇ.
Мужи братия, дети рода Авраамова и боящиеся Бога между вами! вам послано слово спасения сего.
27 ಯೆರೂಸಲೇಮಿನಲ್ಲಿ ವಾಸವಾಗಿರುವವರೂ ಅವರ ಅಧಿಕಾರಿಗಳೂ ಯೇಸುವನ್ನು ಯಾರೆಂದು ಗುರುತಿಸಿಲಿಲ್ಲ. ಆದರೂ ಅವರು ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ವಾಕ್ಯಗಳನ್ನೂ ಗ್ರಹಿಸಲಿಲ್ಲ. ಅವರು ಯೇಸುವನ್ನು ಅಪರಾಧಿಯೆಂದು ತೀರ್ಪು ಮಾಡಿ, ಪ್ರವಾದಿಗಳ ವಾಕ್ಯಗಳನ್ನು ನೆರವೇರಿಸಿದರು.
Ибо жители Иерусалима и начальники их, не узнав Его и осудив, исполнили слова пророческие, читаемые каждую субботу,
28 ಮರಣದಂಡನೆ ವಿಧಿಸಲು ಯಾವುದೇ ಕಾರಣ ಸಿಗದಿದ್ದರೂ ಯೇಸುವನ್ನು ಕೊಲ್ಲಬೇಕೆಂದು ಪಿಲಾತನನ್ನು ಕೇಳಿಕೊಂಡರು.
и, не найдя в Нем никакой вины, достойной смерти, просили Пилата убить Его.
29 ಪವಿತ್ರ ವೇದದಲ್ಲಿ ಯೇಸುವನ್ನು ಕುರಿತು ಬರೆದಿರುವ ಪ್ರಕಾರ ನೆರವೇರಿದ ನಂತರ, ಅವರನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಯಲ್ಲಿಟ್ಟರು.
Когда же исполнили все написанное о Нем, то, сняв с древа, положили Его во гроб.
30 ಆದರೆ ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದರು.
Но Бог воскресил Его из мертвых.
31 ಯೇಸುವಿನೊಡನೆ ಗಲಿಲಾಯದಿಂದ ಯೆರೂಸಲೇಮಿನವರೆಗೆ ಮುಂಚೆ ಬಂದಿದ್ದವರಿಗೆ ಯೇಸು ಅನೇಕ ದಿನಗಳವರೆಗೆ ಕಾಣಿಸಿಕೊಂಡರು. ಈಗ ಅವರೇ ನಮ್ಮ ಜನರಿಗೆ ಯೇಸುವಿನ ಸಾಕ್ಷಿಗಳಾಗಿದ್ದಾರೆ.
Он впродолжение многих дней являлся тем, которые вышли с Ним из Галилеи в Иерусалим и которые ныне суть свидетели Его перед народом.
32 “ನಾವು ನಿಮಗೆ, ದೇವರು ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ್ದನ್ನು ಶುಭವರ್ತಮಾನವನ್ನಾಗಿ ಹೇಳುತ್ತಿದ್ದೇವೆ.
И мы благовествуем вам, что обетование, данное отцам, Бог исполнил нам, детям их, воскресив Иисуса,
33 ದೇವರು ಯೇಸುವನ್ನು ಎಬ್ಬಿಸುವುದರ ಮೂಲಕ ಅವರ ಸಂತತಿಯಾದ ನಮಗಿಂದು ಆ ವಾಗ್ದಾನವನ್ನು ನೆರವೇರಿಸಿದ್ದಾರೆ; ಮಾತ್ರವಲ್ಲದೆ ಎರಡನೆಯ ಕೀರ್ತನೆಯಲ್ಲಿ ಹೀಗೆ ಬರೆಯಲಾಗಿದೆ: “‘ನೀನು ನನ್ನ ಪುತ್ರನು, ಇಂದು ನಾನು ನಿನ್ನ ತಂದೆಯಾಗಿದ್ದೇನೆ.’
как и во втором псалме написано: Ты Сын Мой; Я ныне родил Тебя.
34 ಹೀಗೆ ಯೇಸುವನ್ನು ಸಮಾಧಿಯಲ್ಲಿ ಕೊಳೆಯಲು ಬಿಡದೇ ದೇವರು ಅವರನ್ನು ಜೀವಂತವಾಗಿ ಎಬ್ಬಿಸಿದ ಸತ್ಯವು ಈ ಮಾತುಗಳಲ್ಲಿ ಬಂದಿದೆ: “‘ನಾನು ದಾವೀದನಿಗೆ ವಾಗ್ದಾನ ಮಾಡಿದ ಪವಿತ್ರ ಹಾಗೂ ನಿಶ್ಚಯವಾದ ಆಶೀರ್ವಾದಗಳನ್ನು ನಿಮಗೆ ಕೊಡುವೆನು’
А что воскресил Его из мертвых, так что Он уже не обратится в тление, о сем сказал так: Я дам вам милости, обещанные Давиду, верно.
35 ಇನ್ನೊಂದು ಕೀರ್ತನೆಯಲ್ಲಿ ಹೀಗೆ ಹೇಳಿದ್ದಾರೆ: “‘ನಿಮ್ಮ ಪರಿಶುದ್ಧ ವ್ಯಕ್ತಿಯನ್ನು ಕೊಳೆಯುವಂತೆ ಬಿಡುವುದೇ ಇಲ್ಲ.’
Посему и в другом месте говорит: не дашь Святому Твоему увидеть тление.
36 “ದಾವೀದನು ತನ್ನ ಜೀವಮಾನದಲ್ಲಿ ದೇವರ ಉದ್ದೇಶಕ್ಕೆ ಅನುಗುಣವಾಗಿ ಸೇವೆಮಾಡಿ ಮರಣಹೊಂದಿದನು. ಅವನ ಪಿತೃಗಳೊಂದಿಗೆ ಅವನನ್ನು ಸೇರಿಸಿದರು. ಅವನ ದೇಹ ಕೊಳೆತುಹೋಯಿತು.
Давид, в свое время послужив изволению Божию, почил, и приложился к отцам своим, и увидел тление;
37 ಆದರೆ ದೇವರು ಮರಣದಿಂದ ಎಬ್ಬಿಸಿದ ಈ ಯೇಸು ಕೊಳೆಯುವ ಅವಸ್ಥೆಯನ್ನು ಕಾಣಲಿಲ್ಲ.
а Тот, Которого Бог воскресил, не увидел тления.
38 “ಆದ್ದರಿಂದ, ನನ್ನ ಸಹೋದರರೇ, ಯೇಸುವಿನ ಮೂಲಕವೇ ಪಾಪಕ್ಷಮಾಪಣೆ ಸಾಧ್ಯವೆಂದು ನಿಮಗೆ ಸಾರಲಾಗುತ್ತಿದೆಯೆಂದು ನೀವು ತಿಳಿಯಬೇಕೆಂಬುದೇ ನನ್ನ ಅಪೇಕ್ಷೆ.
Итак, да будет известно вам, мужи братия, что ради Него возвещается вам прощение грехов;
39 ಮೋಶೆಯ ನಿಯಮದ ಮೂಲಕವಾಗಿ ನೀತಿವಂತರೆಂದು ನಿರ್ಣಯಿಸಲಾಗದ ಎಲ್ಲಾ ಪಾಪಗಳಿಂದ ಬಿಡುಗಡೆಯಾಗಿ, ಯೇಸುವನ್ನು ನಂಬುವ ಪ್ರತಿಯೊಬ್ಬರೂ ಯೇಸುವಿನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರಾಗುವರು.
и во всем, в чем вы не могли оправдаться законом Моисеевым, оправдывается Им всякий верующий.
40 ಆದ್ದರಿಂದ ಪ್ರವಾದಿಗಳು ಹೇಳಿದ ಮಾತುಗಳು ನಿಮ್ಮಲ್ಲಿ ನಡೆಯದಂತೆ ಜಾಗರೂಕರಾಗಿರಿ:
Берегитесь же, чтобы не пришло на вас сказанное у пророков:
41 “‘ತಿರಸ್ಕಾರ ಮಾಡುವವರೇ, ಗಮನಿಸಿರಿ, ಆಶ್ಚರ್ಯಪಟ್ಟು, ಚದುರಿ ಹೋಗಿರಿ, ನಿಮ್ಮ ಜೀವಮಾನ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡಲಿದ್ದೇನೆ ಆ ಕಾರ್ಯವನ್ನು ಯಾರಾದರೂ ವಿವರಿಸಿ ಹೇಳಿದರೂ ನೀವದನ್ನು ಎಂದಿಗೂ ನಂಬುವುದೇ ಇಲ್ಲ,’” ಎಂದು ಹೇಳಿದನು.
смотрите, презрители, подивитесь и исчезните; ибо Я делаю делово дни ваши, дело, которому не поверили бы вы, если бы кто рассказывал вам.
42 ಪೌಲ ಬಾರ್ನಬರು ಸಭಾಮಂದಿರವನ್ನು ಬಿಟ್ಟು ಹೊರಡುವಾಗ, “ಬರುವ ಸಬ್ಬತ್ ದಿನವೂ ಬಂದು ಇದೇ ವಿಷಯಗಳನ್ನು ಕುರಿತು ಮಾತನಾಡಿರಿ,” ಎಂದು ಜನರು ಅವರನ್ನು ಕೇಳಿಕೊಂಡರು.
При выходе их из Иудейской синагоги язычники просили их говорить о том же в следующую субботу.
43 ಸಭೆಯು ಮುಗಿದ ತರುವಾಯ ಅನೇಕ ಯೆಹೂದ್ಯರೂ ದೇವಭಕ್ತಿವುಳ್ಳ ಯೆಹೂದಿ ಮಾರ್ಗದ ವಿಶ್ವಾಸಿಗಳು ಪೌಲ ಬಾರ್ನಬರನ್ನು ಹಿಂಬಾಲಿಸಿದರು. ಪೌಲ ಬಾರ್ನಬರು ತಮ್ಮೊಂದಿಗೆ ಬಂದವರ ಜೊತೆ ಮಾತನಾಡಿ ದೇವರ ಕೃಪೆಯಲ್ಲಿ ಮುಂದುವರಿಯಲು ಅವರನ್ನು ಒಡಂಬಡಿಸಿದರು.
Когда же собрание было распущено, то многие Иудеи и чтители Бога, обращенные из язычников, последовали за Павлом и Варнавою, которые, беседуя с ними, убеждали их пребывать в благодати Божией.
44 ಮುಂದಿನ ಸಬ್ಬತ್ ದಿನ ಕರ್ತದೇವರ ವಾಕ್ಯ ಕೇಳಲು ನಗರದ ಜನರೆಲ್ಲರೂ ಹೆಚ್ಚಾಗಿ ಕೂಡಿಬಂದರು.
В следующую субботу почти весь город собрался слушать слово Божие.
45 ಜನಸಮೂಹಗಳನ್ನು ಯೆಹೂದ್ಯರು ಕಂಡಾಗ ಅಸೂಯೆಗೊಂಡು ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು.
Но Иудеи, увидев народ, исполнились зависти и, противореча и злословя, сопротивлялись тому, что говорил Павел.
46 ಆಗ ಪೌಲ, ಬಾರ್ನಬರು ಧೈರ್ಯದಿಂದ ಅವರಿಗೆ ಉತ್ತರಕೊಟ್ಟರು: “ದೇವರ ವಾಕ್ಯವನ್ನು ನಾವು ಮೊದಲು ನಿಮಗೆ ಹೇಳುವುದು ಅವಶ್ಯವಾಗಿತ್ತು. ಆದರೆ ನೀವು ಅದನ್ನು ತಳ್ಳಿಬಿಟ್ಟಿದ್ದರಿಂದಲೂ ನಿತ್ಯಜೀವಕ್ಕೆ ನೀವು ಅಯೋಗ್ಯರೆಂದು ತೀರ್ಮಾನಿಸಿಕೊಂಡಿದ್ದೀರಿ. ಆದುದರಿಂದ ಇಗೋ, ನಾವೀಗ ಯೆಹೂದ್ಯರಲ್ಲದ ಜನರ ಬಳಿಗೆ ಹೋಗುತ್ತೇವೆ. (aiōnios g166)
Тогда Павел и Варнава с дерзновением сказали: вам первым надлежало быть проповедану слову Божию, но как вы отвергаете его и сами себя делаете недостойными вечной жизни, то вот, мы обращаемся к язычникам. (aiōnios g166)
47 ಕರ್ತದೇವರು ನಮಗೆ ಆಜ್ಞಾಪಿಸಿದ್ದು ಇಂತಿದೆ: “‘ಭೂಲೋಕದ ಕಟ್ಟಕಡೆಯವರೆಗೆ ನೀನು ರಕ್ಷಣೆಯನ್ನು ತರುವಂತೆ ನಾನು ಯೆಹೂದ್ಯರಲ್ಲದವರಿಗೆ ನಿನ್ನನ್ನು ಬೆಳಕನ್ನಾಗಿ ನೇಮಿಸಿರುವೆನು.’”
Ибо так заповедал нам Господь: Я положил Тебя во свет язычникам, чтобы Ты был во спасение до края земли.
48 ಯೆಹೂದ್ಯರಲ್ಲದವರು ಇದನ್ನು ಕೇಳಿದಾಗ, ಬಹಳ ಹರ್ಷಗೊಂಡು ಕರ್ತದೇವರ ವಾಕ್ಯವನ್ನು ಘನಪಡಿಸಿದರು. ನಿತ್ಯಜೀವಕ್ಕೆ ನೇಮಕರಾದ ಎಲ್ಲರೂ ವಿಶ್ವಾಸವನ್ನಿಟ್ಟರು. (aiōnios g166)
Язычники, слыша это, радовались и прославляли слово Господне, и уверовали все, которые были предуставлены к вечной жизни. (aiōnios g166)
49 ಆ ಪ್ರದೇಶದಲ್ಲೆಲ್ಲಾ ಕರ್ತದೇವರ ವಾಕ್ಯವು ಪ್ರಸಾರವಾಗುತ್ತಾ ಬಂತು.
И слово Господне распространялось по всей стране.
50 ಆದರೆ ಯೆಹೂದ್ಯರು, ಆರಾಧಕರಾಗಿದ್ದ ಮಾನ್ಯರಾದ ಸ್ತ್ರೀಯರನ್ನೂ ನಗರದ ಗಣ್ಯ ನಾಯಕರನ್ನೂ ಪ್ರೇರೇಪಿಸಿ, ಪೌಲ, ಬಾರ್ನಬರ ಮೇಲೆ ಹಿಂಸೆಯನ್ನು ಎಬ್ಬಿಸಿ ತಮ್ಮ ಪ್ರದೇಶದಿಂದ ಹೊರಗೋಡಿಸಿದರು.
Но Иудеи, подстрекнув набожных и почетных женщин и первых в городе людей, воздвигли гонение на Павла и Варнаву и изгнали их из своих пределов.
51 ಆಗ ಅವರಿಗೆ ವಿರೋಧವಾಗಿ ಪೌಲ, ಬಾರ್ನಬರು ತಮ್ಮ ಪಾದದ ಧೂಳನ್ನು ಝಾಡಿಸಿ ಇಕೋನ್ಯಕ್ಕೆ ಹೊರಟು ಹೋದರು.
Они же, отрясши на них прах от ног своих, пошли в Иконию.
52 ಶಿಷ್ಯರು ಬಹಳ ಸಂತೋಷದಿಂದಲೂ ಪವಿತ್ರಾತ್ಮ ದೇವರಿಂದಲೂ ತುಂಬಿದವರಾದರು.
А ученики исполнялись радости и Духа Святаго.

< ಅಪೊಸ್ತಲರ ಕೃತ್ಯಗಳ 13 >