< ಅಪೊಸ್ತಲರ ಕೃತ್ಯಗಳ 12 >

1 ಆ ದಿನಗಳಲ್ಲಿ ಅರಸನಾದ ಹೆರೋದನು ದೇವರ ಸಭೆಯ ಸದಸ್ಯರನ್ನು ಹಿಂಸಿಸುವ ಉದ್ದೇಶದಿಂದ ಕೆಲವರನ್ನು ಬಂಧಿಸಿದನು.
В то время царь Ирод поднял руки на некоторых из принадлежащих к церкви, чтобы сделать им зло,
2 ಯೋಹಾನನ ಸಹೋದರ ಯಾಕೋಬನನ್ನು ಖಡ್ಗದಿಂದ ಕೊಲ್ಲಿಸಿದನು.
и убил Иакова, брата Иоаннова, мечом.
3 ಇದರಿಂದ ಯೆಹೂದ್ಯರಿಗೆ ಮೆಚ್ಚಿಕೆಯಾಯಿತೆಂದು ತಿಳಿದಾಗ, ಅವನು ಪೇತ್ರನನ್ನು ಬಂಧಿಸಿದನು. ಇದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಸಮಯದಲ್ಲಿ ನಡೆಯಿತು.
Видя же, что это приятно Иудеям, вслед за тем взял и Петра, - тогда были дни опресноков, -
4 ಪೇತ್ರನನ್ನು ಬಂಧಿಸಿದ ನಂತರ ಅವನನ್ನು ಸೆರೆಮನೆಯಲ್ಲಿ ಹಾಕಿದನು. ಪೇತ್ರನನ್ನು ಕಾಯಲು ನಾಲ್ಕು ದಳಗಳನ್ನು ನೇಮಿಸಿದನು. ಒಂದೊಂದು ದಳದಲ್ಲಿಯೂ ನಾಲ್ಕು ಸಿಪಾಯಿಗಳಿದ್ದರು. ಪಸ್ಕಹಬ್ಬ ಮುಗಿದ ತರುವಾಯ ಪೇತ್ರನನ್ನು ಬಹಿರಂಗ ವಿಚಾರಣೆಗೆ ತರಬೇಕೆಂದು ಉದ್ದೇಶಿಸಿದ್ದನು.
и, задержав его, посадил в темницу, и приказал четырем четверицам воинов стеречь его, намереваясь после Пасхи вывести его к народу.
5 ಹೀಗೆ ಪೇತ್ರನು ಸೆರೆಮನೆಯಲ್ಲಿ ಬಂಧಿಸಲಾಗಿದ್ದಾಗ, ದೇವರ ಸಭೆಯು ಅವನಿಗೋಸ್ಕರವಾಗಿ ಆಸಕ್ತಿಯಿಂದ ದೇವರಿಗೆ ಪ್ರಾರ್ಥಿಸುತ್ತಿತ್ತು.
Итак Петра стерегли в темнице, между тем церковь прилежно молилась о нем Богу.
6 ಹೆರೋದನು ಅವನನ್ನು ವಿಚಾರಣೆಗೆ ತರಲಿಕ್ಕಿದ್ದ ದಿನದ ಹಿಂದಿನ ರಾತ್ರಿ ಪೇತ್ರನು ಸರಪಣಿಗಳಿಂದ ಬಂಧಿಸಲಾಗಿ ಇಬ್ಬರು ಸಿಪಾಯಿಗಳ ಮಧ್ಯೆ ನಿದ್ರಿಸುತ್ತಿದ್ದನು. ಕಾವಲುಗಾರರು ದ್ವಾರದ ಬಳಿಯಲ್ಲಿ ಕಾಯುತ್ತಿದ್ದರು.
Когда же Ирод хотел вывести его, в ту ночь Петр спал между двумя воинами, скованный двумя цепями, и стражи у дверей стерегли темницу.
7 ಫಕ್ಕನೆ ದೇವದೂತನೊಬ್ಬನು ಪ್ರತ್ಯಕ್ಷನಾಗಲು ಕೋಣೆಯೆಲ್ಲಾ ಪ್ರಕಾಶಮಯವಾಯಿತು. ಅವನು ಪೇತ್ರನನ್ನು ತಟ್ಟಿ ಎಬ್ಬಿಸಿ, “ಬೇಗ ಎದ್ದೇಳು!” ಎಂದನು. ಪೇತ್ರನ ಕೈಗಳಿಗೆ ಬಂಧಿಸಿದ್ದ ಸರಪಣಿಗಳು ಕಳಚಿಬಿದ್ದವು.
И вот, Ангел Господень предстал, и свет осиял темницу. Ангел, толкнув Петра в бок, пробудил его и сказал: встань скорее. И цепи упали с рук его.
8 “ನಿನ್ನ ಬಟ್ಟೆಗಳನ್ನೂ ಮೆಟ್ಟುಗಳನ್ನೂ ಧರಿಸಿಕೋ,” ಎಂದು ದೇವದೂತನು ಅವನಿಗೆ ಹೇಳಲು, ಪೇತ್ರನು ಅದರಂತೆ ಮಾಡಿದನು. “ನಿನ್ನ ನಿಲುವಂಗಿಯನ್ನು ಸುತ್ತಿಕೊಂಡು ನನ್ನನ್ನು ಹಿಂಬಾಲಿಸು,” ಎಂದು ದೇವದೂತನು ಹೇಳಿದನು.
И сказал ему Ангел: опояшься и обуйся. Он сделал так. Потом говорит ему: надень одежду твою и иди за мною.
9 ಪೇತ್ರನು ಸೆರೆಮನೆಯಿಂದ ಹೊರಗೆ ಅವನನ್ನು ಹಿಂಬಾಲಿಸಿ ಹೊರಟನು. ದೇವದೂತನು ಮಾಡುತ್ತಿರುವುದು ನಿಜವಾಗಿಯೂ ನಡೆಯುತ್ತಿದೆ ಎಂಬುದು ಅವನಿಗೆ ತಿಳಿಯಲಿಲ್ಲ. ತಾನು ದರ್ಶನ ಕಾಣುತ್ತಿರುವೆನೋ ಎಂದು ಭಾವಿಸಿದನು.
Петр вышел и следовал за ним, не зная, что делаемое Ангелом было действительно, а думая, что видит видение.
10 ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣದೊಳಗೆ ನಡೆಸುವ ಕಬ್ಬಿಣದ ದ್ವಾರಕ್ಕೆ ಅವರು ಬಂದರು. ಅದು ತನ್ನಷ್ಟಕ್ಕೆ ತಾನೇ ತೆರೆಯಲು ಅವರು ಅದನ್ನು ದಾಟಿ ಹೊರಗೆ ಬಂದರು. ಒಂದು ಬೀದಿಯನ್ನು ದಾಟುವವರೆಗೆ ನಡೆದು ಬಂದ ನಂತರ ಫಕ್ಕನೆ ದೇವದೂತನು ಪೇತ್ರನನ್ನು ಬಿಟ್ಟುಹೋದನು.
Пройдя первую и вторую стражу, они пришли к железным воротам, ведущим в город, которые сами собою отворились им; они вышли и прошли одну улицу, и вдруг Ангела не стало с ним.
11 ಆಗ ಪೇತ್ರನು ಸಂಪೂರ್ಣವಾಗಿ ಎಚ್ಚರಗೊಂಡು, “ಈಗ ಕರ್ತದೇವರು ತಮ್ಮ ದೂತನನ್ನು ಕಳುಹಿಸಿ ಹೆರೋದನ ಹಿಡಿತದಿಂದಲೂ ಯೆಹೂದ್ಯ ಜನರು ನಿರೀಕ್ಷಿಸುತ್ತಿದ್ದ ಎಲ್ಲಾ ಕೇಡಿನಿಂದಲೂ ನನ್ನನ್ನು ಉಳಿಸಿ ಕಾಪಾಡಿರುವರು ಎಂದು ಈಗ ನನಗೆ ಗೊತ್ತಾಗಿದೆ,” ಎಂದುಕೊಂಡನು.
Тогда Петр, придя в себя, сказал: теперь я вижу воистину, что Господь послал Ангела Своего и избавил меня из руки Ирода и от всего, чего ждал народ Иудейский.
12 ಅವನು ಇದನ್ನು ಗ್ರಹಿಸಿ, ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿ ಮರಿಯಳ ಮನೆಗೆ ಹೋದನು. ಅಲ್ಲಿ ಅನೇಕರು ಒಟ್ಟಾಗಿ ಕೂಡಿಬಂದು ಪ್ರಾರ್ಥನೆ ಮಾಡುತ್ತಿದ್ದರು.
И, осмотревшись, пришел к дому Марии, матери Иоанна, называемого Марком, где многие собрались и молились.
13 ಪೇತ್ರನು ಬಾಗಿಲನ್ನು ತಟ್ಟಿದಾಗ, ರೋದೆ ಎಂಬ ಸೇವಕಿ ಬಾಗಿಲು ತೆರೆಯಲು ಬಾಗಿಲ ಬಳಿಗೆ ಬಂದಳು.
Когда же Петр постучался у ворот, то вышла послушать служанка, именем Рода,
14 ಪೇತ್ರನ ಧ್ವನಿಯನ್ನು ಗುರುತಿಸಿ ಸಂತೋಷದಿಂದ ಕೂಡಿದವಳಾಗಿ ಬಾಗಿಲು ತೆರೆಯದೆ ಹಿಂದೆ ಓಡಿಹೋಗಿ, “ಪೇತ್ರನು ಬಾಗಿಲ ಬಳಿಯಲ್ಲಿದ್ದಾನೆ!” ಎಂದು ತಿಳಿಸಿದಳು.
и, узнав голос Петра, от радости не отворила ворот, но, вбежав, объявила, что Петр стоит у ворот.
15 ಆದರೆ ಅವರು, “ನಿನಗೆ ಹುಚ್ಚುಹಿಡಿದಿದೆ,” ಎಂದರು. ತಾನು ಹೇಳುವುದು ನಿಜ ಎಂದು ಆಕೆ ಒತ್ತಿ ಹೇಳುತ್ತಿರಲು ಅವರು, “ಅದು ಅವನ ದೂತನೇ ಆಗಿರಬೇಕು,” ಎಂದರು.
А те сказали ей: в своем ли ты уме? Но она утверждала свое. Они же говорили: это Ангел его.
16 ಆದರೆ ಪೇತ್ರನು ಬಾಗಿಲು ತಟ್ಟುತ್ತಲೇ ಇರಲು, ಅವರು ಹೋಗಿ ಬಾಗಿಲು ತೆರೆಯಲು ಅವನನ್ನು ಕಂಡು ಅತ್ಯಾಶ್ಚರ್ಯಗೊಂಡರು.
Между тем Петр продолжал стучать. Когда же отворили, то увидели его и изумились.
17 ಸುಮ್ಮನಿರಬೇಕೆಂದು ಪೇತ್ರನು ಅವರಿಗೆ ಕೈಸನ್ನೆ ಮಾಡಿ ಕರ್ತದೇವರು ಹೇಗೆ ತನ್ನನ್ನು ಸೆರೆಮನೆಯಿಂದ ಬಿಡಿಸಿ ಹೊರಗೆ ಕರೆದುಕೊಂಡು ಬಂದರು ಎಂಬುದನ್ನು ವಿವರಿಸಿದನು. “ಇದನ್ನು ಯಾಕೋಬನಿಗೆ ಹಾಗೂ ಸಹೋದರರಿಗೆ ತಿಳಿಸಿರಿ,” ಎಂದು ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.
Он же, дав знак рукою, чтобы молчали, рассказал им, как Господь вывел его из темницы, и сказал: уведомьте о сем Иакова и братьев. Потом, выйдя, пошел в другое место.
18 ಬೆಳಗಾದ ಮೇಲೆ ಪೇತ್ರನಿಗೆ ಏನಾಯಿತೆಂದು ಸೈನಿಕರ ನಡುವೆ ಬಹಳಷ್ಟು ಗೊಂದಲವಿತ್ತು.
По наступлении дня между воинами сделалась большая тревога о том, что сделалось с Петром.
19 ಹೆರೋದನು ಅವನನ್ನು ಹುಡುಕಿ ಕಾಣದೆ ಹೋದದ್ದರಿಂದ ಕಾವಲುಗಾರರನ್ನು ವಿಚಾರಿಸಿ, ಅವರಿಗೆ ಮರಣದಂಡನೆಯನ್ನು ವಿಧಿಸಿದನು. ಅನಂತರ ಹೆರೋದನು ಯೂದಾಯದಿಂದ ಕೈಸರೈಯಕ್ಕೆ ಹೋಗಿ ಅಲ್ಲಿ ಸ್ವಲ್ಪ ಸಮಯ ಇದ್ದನು.
Ирод же, поискав его и не найдя, судил стражей и велел казнить их. Потом он отправился из Иудеи в Кесарию и там оставался.
20 ಅವನು ಟೈರ್ ಮತ್ತು ಸೀದೋನಿನ ಜನರೊಂದಿಗೆ ಬಹು ಕೋಪವುಳ್ಳವನಾಗಿದ್ದನು. ಈಗ ಅವರೆಲ್ಲರೂ ಒಂದಾಗಿ ಅವನ ಬಳಿ ಬಂದು ಅರಸನ ನಂಬಿಗಸ್ತ ಸೇವಕನಾದ ಬ್ಲಾಸ್ತ ಎಂಬುವನ ಬೆಂಬಲವನ್ನು ಪಡೆದುಕೊಂಡು, ಸಂಧಾನ ಮಾಡಿಕೊಳ್ಳಲು ಅರಸನನ್ನು ಕೇಳಿಕೊಂಡರು. ಏಕೆಂದರೆ ಅವರ ಆಹಾರ ಧಾನ್ಯಗಳು ಅರಸನ ಸೀಮೆಯಿಂದ ಬರುತ್ತಿದ್ದವು.
Ирод был раздражен на Тирян и Сидонян; они же, согласившись, пришли к нему и, склонив на свою сторону Власта, постельника царского, просили мира, потому что область их питалась от области царской.
21 ನೇಮಕವಾದ ದಿನ ಹೆರೋದನು ತನ್ನ ರಾಜವಸ್ತ್ರಗಳನ್ನು ಧರಿಸಿಕೊಂಡು ಸಿಂಹಾಸನದ ಮೇಲೆ ಕುಳಿತುಕೊಂಡು ಜನರನ್ನುದ್ದೇಶಿಸಿ ಬಹಿರಂಗ ಭಾಷಣ ಮಾಡಿದನು.
В назначенный день Ирод, одевшись в царскую одежду, сел на возвышенном месте и говорил к ним;
22 “ಇದು ಮಾನವ ಧ್ವನಿಯಲ್ಲ ದೇವರದೇ!” ಎಂದು ಜನರು ಆರ್ಭಟಿಸಿದರು.
а народ восклицал: это голос Бога, а не человека.
23 ಹೆರೋದನು ದೇವರಿಗೆ ಸಲ್ಲಿಸಬೇಕಾದ ಮಹಿಮೆ ಸಲ್ಲಿಸದೇ ಹೋದದ್ದರಿಂದ ಕೂಡಲೇ ಒಬ್ಬ ದೇವದೂತನು ಅವನನ್ನು ಹೊಡೆಯಲು ಅವನು ಹುಳ ಬಿದ್ದು ಸತ್ತುಹೋದನು.
Но вдруг Ангел Господень поразил его за то, что он не воздал славы Богу; и он, быв изъеден червями, умер.
24 ದೇವರ ವಾಕ್ಯವಾದರೋ ವೃದ್ಧಿಯಾಗುತ್ತಾ ಪ್ರಸಾರಗೊಂಡಿತು.
Слово же Божие росло и распространялось.
25 ಬಾರ್ನಬ ಮತ್ತು ಸೌಲನು ತಮ್ಮ ಸೇವಾಕಾರ್ಯವನ್ನು ಮುಗಿಸಿ, ಮಾರ್ಕ ಎಂದು ಕರೆಯಲಾಗುತ್ತಿದ್ದ ಯೋಹಾನನನ್ನು ತಮ್ಮೊಂದಿಗೆ ಕರೆದುಕೊಂಡು ಯೆರೂಸಲೇಮಿನಿಂದ ಹೊರಟು ಹೋದರು.
А Варнава и Савл, по исполнении поручения, возвратились из Иерусалима в Антиохию, взяв с собою и Иоанна, прозванного Марком.

< ಅಪೊಸ್ತಲರ ಕೃತ್ಯಗಳ 12 >