< ತಿಮೊಥೆಯನಿಗೆ ಬರೆದ ಎರಡನೆಯ ಪತ್ರಿಕೆ 3 >
1 ಆದರೆ ಕಡೆಯ ದಿವಸಗಳಲ್ಲಿ ಕಷ್ಟಕರವಾದ ಕಾಲಗಳು ಬರುವುವೆಂಬುದನ್ನು ಸಹ ತಿಳಿದುಕೋ.
caramadinESu klEzajanakAH samayA upasthAsyantIti jAnIhi|
2 ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿಕೊಳ್ಳುವವರೂ ಹಣದಾಶೆಯುಳ್ಳವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೇವದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ಅಶುದ್ಧರೂ
yatastAtkAlikA lOkA AtmaprEmiNO 'rthaprEmiNa AtmazlAghinO 'bhimAninO nindakAH pitrOranAjnjAgrAhiNaH kRtaghnA apavitrAH
3 ಮಾನವತ್ವವಿಲ್ಲದವರೂ ಸಮಾಧಾನವಾಗದವರೂ ಚಾಡಿಕೋರರೂ ಸಂಯಮವಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯದನ್ನು ಪ್ರೀತಿಸದವರೂ
prItivarjitA asandhEyA mRSApavAdinO 'jitEndriyAH pracaNPA bhadradvESiNO
4 ದ್ರೋಹಿಗಳೂ ದುಡುಕುವವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವುದಕ್ಕಿಂತಲೂ ಭೋಗಗಳನ್ನೇ ಪ್ರೀತಿಸುವವರೂ
vizvAsaghAtakA duHsAhasinO darpadhmAtA IzvarAprEmiNaH kintu sukhaprEmiNO
5 ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗಳೆಯುವವರೂ ಆಗಿರುವರು. ಇಂಥವರನ್ನು ಬಿಟ್ಟು ಪ್ರತ್ಯೇಕವಾಗಿರು.
bhaktavEzAH kintvasvIkRtabhaktiguNA bhaviSyanti; EtAdRzAnAM lOkAnAM saMmargaM parityaja|
6 ಇಂಥವರು ಮನೆಗಳಲ್ಲಿ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಛೆಗಳಿಂದ ಪ್ರೇರಣೆ ಹೊಂದಿ ಸುಲಭವಾಗಿ ಮೋಸಹೋಗುವ ಸ್ತ್ರೀಯರನ್ನು ವಶಮಾಡಿಕೊಳ್ಳುವರು.
yatO yE janAH pracchannaM gEhAn pravizanti pApai rbhAragrastA nAnAvidhAbhilASaizcAlitA yAH kAminyO
7 ಇಂಥ ಸ್ತ್ರೀಯರು ಯಾವಾಗಲೂ ಕಲಿಯುತ್ತಿದ್ದರೂ ಸತ್ಯದ ಜ್ಞಾನಕ್ಕೆ ಬರಲಾರದವರು ಆಗಿರುವರು.
nityaM zikSantE kintu satyamatasya tattvajnjAnaM prAptuM kadAcit na zaknuvanti tA dAsIvad vazIkurvvatE ca tE tAdRzA lOkAH|
8 ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ, ಈ ಸುಳ್ಳು ಬೋಧಕರು ಸಹ ಸತ್ಯವನ್ನು ವಿರೋಧಿಸುತ್ತಾರೆ. ಇದಲ್ಲದೆ ಇವರು ಬುದ್ಧಿಗೆಟ್ಟವರೂ ವಿಶ್ವಾಸದ ವಿಷಯದಲ್ಲಿ ಭ್ರಷ್ಠರೂ ಆಗಿ, ತಿರಸ್ಕಾರ ಹೊಂದಿರುತ್ತಾರೆ.
yAnni ryAmbrizca yathA mUsamaM prati vipakSatvam akurutAM tathaiva bhraSTamanasO vizvAsaviSayE 'grAhyAzcaitE lOkA api satyamataM prati vipakSatAM kurvvanti|
9 ಆದರೆ ಇವರು ಇನ್ನು ಮುಂದುವರಿಯಲಾರರು. ಯನ್ನ, ಯಂಬ್ರರ ಮೂರ್ಖತನವು ಎಲ್ಲರಿಗೂ ಸ್ಪಷ್ಟವಾಗಿ ತಿಳಿದುಬಂದಂತೆಯೇ, ಇವರದೂ ತಿಳಿದುಬರುವುದು.
kintu tE bahudUram agrasarA na bhaviSyanti yatastayO rmUPhatA yadvat tadvad EtESAmapi mUPhatA sarvvadRzyA bhaviSyati|
10 ನೀನಾದರೋ ನನ್ನ ಎಲ್ಲಾ ಬೋಧನೆ, ನನ್ನ ನಡತೆ, ನನ್ನ ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ,
mamOpadEzaH ziSTatAbhiprAyO vizvAsO rdharyyaM prEma sahiSNutOpadravaH klEzA
11 ನಾನು ಎಂತೆಂಥ ಹಿಂಸೆಗಳನ್ನು ಸಹಿಸಿಕೊಂಡೆನೆಂಬುದನ್ನೂ ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಕಷ್ಟಾನುಭವಗಳನ್ನೂ ನನಗುಂಟಾದ ಎಲ್ಲಾ ಹಿಂಸೆಗಳನ್ನೂ ನೀನು ಪೂರ್ಣವಾಗಿ ತಿಳಿದವನಾಗಿದ್ದೀ. ಆದರೆ ಕರ್ತದೇವರು ನನ್ನನ್ನು ಇವೆಲ್ಲವುಗಳಿಂದ ಬಿಡಿಸಿದರು.
AntiyakhiyAyAm ikaniyE lUstrAyAnjca mAM prati yadyad aghaTata yAMzcOpadravAn aham asahE sarvvamEtat tvam avagatO'si kintu tatsarvvataH prabhu rmAm uddhRtavAn|
12 ನಿಜವಾಗಿಯೂ ಕ್ರಿಸ್ತ ಯೇಸುವಿನಲ್ಲಿ ಭಕ್ತಿಯುಳ್ಳವರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.
parantu yAvantO lOkAH khrISTEna yIzunEzvarabhaktim Acaritum icchanti tESAM sarvvESAm upadravO bhaviSyati|
13 ಆದರೆ ದುಷ್ಟರೂ ಇತರರಂತೆ ನಟಿಸುವ ವೇಷಧಾರಿಗಳೂ ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ಹೆಚ್ಚಾದ ಕೆಟ್ಟತನಕ್ಕೆ ಸಾಗುವರು.
aparaM pApiSThAH khalAzca lOkA bhrAmyantO bhramayantazcOttarOttaraM duSTatvEna varddhiSyantE|
14 ನೀನಾದರೋ, ಕಲಿತು ನಿಶ್ಚಯಗೊಂಡವುಗಳಲ್ಲಿ ಮುಂದುವರಿಯುತ್ತಿರು. ನಿನಗೆ ಕಲಿಸಿಕೊಟ್ಟವರು ಯಾರೆಂಬುದು ನಿನಗೆ ತಿಳಿದಿದೆ.
kintu tvaM yad yad azikSathAH, yacca tvayi samarpitam abhUt tasmin avatiSTha, yataH kasmAt zikSAM prAptO'si tad vEtsi;
15 ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸದ ಮೂಲಕ ರಕ್ಷಣೆ ಹೊಂದುವಂತೆ ನಿನ್ನನ್ನು ಜ್ಞಾನಿಯನ್ನಾಗಿ ಮಾಡಲು ಶಕ್ತವಾಗಿರುವ ಪವಿತ್ರ ವೇದಗಳನ್ನು ನೀನು ಚಿಕ್ಕಂದಿನಿಂದಲೂ ತಿಳಿದವನಾಗಿದ್ದೀಯಲ್ಲಾ.
yAni ca dharmmazAstrANi khrISTE yIzau vizvAsEna paritrANaprAptayE tvAM jnjAninaM karttuM zaknuvanti tAni tvaM zaizavakAlAd avagatO'si|
16 ಪವಿತ್ರ ವೇದಗಳೆಲ್ಲವೂ ದೇವರ ಶ್ವಾಸದಿಂದಲೇ ಉಂಟಾದದ್ದು. ಅದು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಯ ಶಿಕ್ಷಣಕ್ಕೂ ಉಪಯುಕ್ತವಾಗಿದೆ.
tat sarvvaM zAstram IzvarasyAtmanA dattaM zikSAyai dOSabOdhAya zOdhanAya dharmmavinayAya ca phalayUktaM bhavati
17 ಆದ್ದರಿಂದ ದೇವರ ಮನುಷ್ಯನು ಪರಿಪೂರ್ಣನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
tEna cEzvarasya lOkO nipuNaH sarvvasmai satkarmmaNE susajjazca bhavati|