< ಸಮುವೇಲನು - ದ್ವಿತೀಯ ಭಾಗ 8 >

1 ಇದರ ತರುವಾಯ ದಾವೀದನು ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿ, ಅವರಿಂದ ಮೇತೆಗ್ ಅಮ್ಮಹವನ್ನು ತೆಗೆದುಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.
וַֽיְהִי֙ אַֽחֲרֵי־כֵ֔ן וַיַּ֥ךְ דָּוִ֛ד אֶת־פְּלִשְׁתִּ֖ים וַיַּכְנִיעֵ֑ם וַיִּקַּ֥ח דָּוִ֛ד אֶת־מֶ֥תֶג הָאַמָּ֖ה מִיַּ֥ד פְּלִשְׁתִּֽים׃
2 ಹಾಗೆಯೇ ದಾವೀದನು ಮೋವಾಬ್ಯರನ್ನು ಸಹ ಸೋಲಿಸಿದನು. ಸೆರೆಯಾಳುಗಳನ್ನು ನೆಲದ ಮೇಲೆ ಹಗ್ಗದಿಂದ ಅಳತೆ ಮಾಡಿಸಿ, ಎರಡು ಪಾಲು ಜನರನ್ನು ಕೊಲ್ಲಿಸಿ, ಒಂದು ಪಾಲನ್ನು ಉಳಿಸಿದನು. ಹೀಗೆ ಮೋವಾಬ್ಯರು ದಾವೀದನಿಗೆ ಅಧೀನರಾಗಿ ಕಪ್ಪಕೊಡುವವರಾದರು.
וַיַּ֣ךְ אֶת־מוֹאָ֗ב וַֽיְמַדְּדֵ֤ם בַּחֶ֙בֶל֙ הַשְׁכֵּ֣ב אוֹתָ֣ם אַ֔רְצָה וַיְמַדֵּ֤ד שְׁנֵֽי־חֲבָלִים֙ לְהָמִ֔ית וּמְלֹ֥א הַחֶ֖בֶל לְהַחֲי֑וֹת וַתְּהִ֤י מוֹאָב֙ לְדָוִ֔ד לַעֲבָדִ֖ים נֹשְׂאֵ֥י מִנְחָֽה׃
3 ಇದಲ್ಲದೆ ದಾವೀದನು ಯೂಫ್ರೇಟೀಸ್ ನದಿಯ ಬಳಿಯಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವದಕ್ಕೆ ಹೋಗುತ್ತಿರುವಾಗ, ಚೋಬದ ಅರಸನಾದ ರೆಹೋಬನ ಮಗ ಹದದೆಜೆರನನ್ನು ಸೋಲಿಸಿದನು.
וַיַּ֣ךְ דָּוִ֔ד אֶת־הֲדַדְעֶ֥זֶר בֶּן־רְחֹ֖ב מֶ֣לֶךְ צוֹבָ֑ה בְּלֶכְתּ֕וֹ לְהָשִׁ֥יב יָד֖וֹ בִּֽנְהַר־׃
4 ದಾವೀದನು ಅವನಿಂದ ಸಾವಿರ ರಥಗಳನ್ನೂ, ಏಳು ಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ವಶಪಡಿಸಿಕೊಂಡನು. ನೂರು ರಥಗಳಿಗೆ ಕುದುರೆಗಳನ್ನು ಉಳಿಸಿ, ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ಯಿಸಿಬಿಟ್ಟನು.
וַיִּלְכֹּ֨ד דָּוִ֜ד מִמֶּ֗נּוּ אֶ֤לֶף וּשְׁבַע־מֵאוֹת֙ פָּרָשִׁ֔ים וְעֶשְׂרִ֥ים אֶ֖לֶף אִ֣ישׁ רַגְלִ֑י וַיְעַקֵּ֤ר דָּוִד֙ אֶת־כָּל־הָרֶ֔כֶב וַיּוֹתֵ֥ר מִמֶּ֖נּוּ מֵ֥אָה רָֽכֶב׃
5 ದಮಸ್ಕದ ಅರಾಮ್ಯರು ಚೋಬದ ಅರಸ ಹದದೆಜೆರನಿಗೆ ಸಹಾಯಮಾಡಲು ಬಂದಾಗ, ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸಂಹರಿಸಿಬಿಟ್ಟನು.
וַתָּבֹא֙ אֲרַ֣ם דַּמֶּ֔שֶׂק לַעְזֹ֕ר לַהֲדַדְעֶ֖זֶר מֶ֣לֶךְ צוֹבָ֑ה וַיַּ֤ךְ דָּוִד֙ בַּֽאֲרָ֔ם עֶשְׂרִֽים־וּשְׁנַ֥יִם אֶ֖לֶף אִֽישׁ׃
6 ತರುವಾಯ ದಾವೀದನು ದಮಸ್ಕದ ಅರಾಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಹೀಗೆ ಅರಾಮ್ಯರು ದಾವೀದನಿಗೆ ಅಧೀನರಾಗಿ, ಕಪ್ಪವನ್ನು ಕೊಡುವವರಾದರು. ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.
וַיָּ֨שֶׂם דָּוִ֤ד נְצִבִים֙ בַּאֲרַ֣ם דַּמֶּ֔שֶׂק וַתְּהִ֤י אֲרָם֙ לְדָוִ֔ד לַעֲבָדִ֖ים נוֹשְׂאֵ֣י מִנְחָ֑ה וַיֹּ֤שַׁע יְהוָה֙ אֶת־דָּוִ֔ד בְּכֹ֖ל אֲשֶׁ֥ר הָלָֽךְ׃
7 ದಾವೀದನು ಹದದೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು, ಅವುಗಳನ್ನು ಯೆರೂಸಲೇಮಿಗೆ ತಂದನು.
וַיִּקַּ֣ח דָּוִ֗ד אֵ֚ת שִׁלְטֵ֣י הַזָּהָ֔ב אֲשֶׁ֣ר הָי֔וּ אֶ֖ל עַבְדֵ֣י הֲדַדְעָ֑זֶר וַיְבִיאֵ֖ם יְרוּשָׁלִָֽם׃
8 ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ, ಬೇರೋತೈಯಿಂದಲೂ ಅರಸನಾದ ದಾವೀದನು ಅತ್ಯಧಿಕವಾಗಿ ಕಂಚನ್ನು ತೆಗೆದುಕೊಂಡು ಬಂದನು.
וּמִבֶּ֥טַח וּמִבֵּֽרֹתַ֖י עָרֵ֣י הֲדַדְעָ֑זֶר לָקַ֞ח הַמֶּ֧לֶךְ דָּוִ֛ד נְחֹ֖שֶׁת הַרְבֵּ֥ה מְאֹֽד׃ ס
9 ದಾವೀದನು ಹದದೆಜೆರನ ಸಮಸ್ತ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನವನ್ನು ಹಮಾತಿನ ಅರಸನಾದ ತೋವು ಕೇಳಿದಾಗ,
וַיִּשְׁמַ֕ע תֹּ֖עִי מֶ֣לֶךְ חֲמָ֑ת כִּ֚י הִכָּ֣ה דָוִ֔ד אֵ֖ת כָּל־חֵ֥יל הֲדַדְעָֽזֶר׃
10 ಅವನು ಅರಸನಾದ ದಾವೀದನ ಕ್ಷೇಮಸಮಾಚಾರವನ್ನು ವಿಚಾರಿಸಲೂ, ಹದದೆಜೆರನ ವಿರುದ್ಧ ಯುದ್ಧಮಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಅವನನ್ನು ಅಭಿನಂದಿಸಿ, ಹರಸುವಂತೆ, ತೋವು ತನ್ನ ಪುತ್ರನಾದ ಯೋರಾಮನನ್ನು ಬೆಳ್ಳಿ, ಬಂಗಾರ, ಕಂಚಿನ ಪಾತ್ರೆಗಳ ಸಹಿತವಾಗಿ ದಾವೀದನ ಬಳಿಗೆ ಕಳುಹಿಸಿದನು; ಏಕೆಂದರೆ ಹದದೆಜೆರನಿಗೆ ತೋವಿಯ ಸಂಗಡ ಯುದ್ಧಗಳಿದ್ದವು.
וַיִּשְׁלַ֣ח תֹּ֣עִי אֶת־יֽוֹרָם־בְּנ֣וֹ אֶל־הַמֶּֽלֶךְ־דָּ֠וִד לִשְׁאָל־ל֨וֹ לְשָׁל֜וֹם וּֽלְבָרֲכ֗וֹ עַל֩ אֲשֶׁ֨ר נִלְחַ֤ם בַּהֲדַדְעֶ֙זֶר֙ וַיַּכֵּ֔הוּ כִּי־אִ֛ישׁ מִלְחֲמ֥וֹת תֹּ֖עִי הָיָ֣ה הֲדַדְעָ֑זֶר וּבְיָד֗וֹ הָי֛וּ כְּלֵֽי־כֶ֥סֶף וּכְלֵֽי־זָהָ֖ב וּכְלֵ֥י נְחֹֽשֶׁת׃
11 ಅರಸನಾದ ದಾವೀದನು ಚಿನ್ನ, ಬೆಳ್ಳಿ ಮತ್ತು ಕಂಚಿನ ಎಲ್ಲಾ ವಸ್ತುಗಳನ್ನು ಯೆಹೋವ ದೇವರಿಗೆ ಸಮರ್ಪಿಸಿದನು. ಜೊತೆಗೆ ಅವನು ಸೋತ ಎಲ್ಲಾ ದೇಶಗಳಿಂದ ವಶಪಡಿಸಿಕೊಂಡ ವಸ್ತುಗಳನ್ನೂ ಅರ್ಪಿಸಿದನು.
גַּם־אֹתָ֕ם הִקְדִּ֛ישׁ הַמֶּ֥לֶךְ דָּוִ֖ד לַֽיהוָ֑ה עִם־הַכֶּ֤סֶף וְהַזָּהָב֙ אֲשֶׁ֣ר הִקְדִּ֔ישׁ מִכָּל־הַגּוֹיִ֖ם אֲשֶׁ֥ר כִּבֵּֽשׁ׃
12 ಅಂದರೆ, ಅರಾಮ್ಯರು, ಮೋವಾಬ್ಯರು, ಅಮ್ಮೋನ್ಯರು, ಫಿಲಿಷ್ಟಿಯರು, ಅಮಾಲೇಕ್ಯರು ಮತ್ತು ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನ ಬಳಿಯಿಂದ ಪಡೆದ ಕೊಳ್ಳೆಯನ್ನೂ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದನು.
מֵאֲרָ֤ם וּמִמּוֹאָב֙ וּמִבְּנֵ֣י עַמּ֔וֹן וּמִפְּלִשְׁתִּ֖ים וּמֵֽעֲמָלֵ֑ק וּמִשְּׁלַ֛ל הֲדַדְעֶ֥זֶר בֶּן־רְחֹ֖ב מֶ֥לֶךְ צוֹבָֽה׃
13 ದಾವೀದನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಅರಾಮ್ಯರನ್ನು ಹೊಡೆದು ಹಿಂದಿರುಗಿದಾಗ ಪ್ರಖ್ಯಾತಿ ಹೊಂದಿದನು.
וַיַּ֤עַשׂ דָּוִד֙ שֵׁ֔ם בְּשֻׁב֕וֹ מֵהַכּוֹת֥וֹ אֶת־אֲרָ֖ם בְּגֵיא־מֶ֑לַח שְׁמוֹנָ֥ה עָשָׂ֖ר אָֽלֶף׃
14 ಸಮಸ್ತ ಎದೋಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಇದರಿಂದ, ಎದೋಮ್ಯರೆಲ್ಲರು ದಾವೀದನಿಗೆ ಅಧೀನರಾದರು. ದಾವೀದನು ಹೋದಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.
וַיָּ֨שֶׂם בֶּאֱד֜וֹם נְצִבִ֗ים בְּכָל־אֱדוֹם֙ שָׂ֣ם נְצִבִ֔ים וַיְהִ֥י כָל־אֱד֖וֹם עֲבָדִ֣ים לְדָוִ֑ד וַיּ֤וֹשַׁע יְהוָה֙ אֶת־דָּוִ֔ד בְּכֹ֖ל אֲשֶׁ֥ר הָלָֽךְ׃
15 ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ ತನ್ನ ಸಮಸ್ತ ಜನರಿಗೂ ನೀತಿ ನ್ಯಾಯಗಳಿಂದ ನಡೆಸುತ್ತಿದ್ದನು.
וַיִּמְלֹ֥ךְ דָּוִ֖ד עַל־כָּל־יִשְׂרָאֵ֑ל וַיְהִ֣י דָוִ֗ד עֹשֶׂ֛ה מִשְׁפָּ֥ט וּצְדָקָ֖ה לְכָל־עַמּֽוֹ׃
16 ಚೆರೂಯಳ ಮಗ ಯೋವಾಬನು ಸೈನ್ಯದ ಅಧಿಪತಿಯಾಗಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನಾಗಿದ್ದನು.
וְיוֹאָ֥ב בֶּן־צְרוּיָ֖ה עַל־הַצָּבָ֑א וִיהוֹשָׁפָ֥ט בֶּן־אֲחִיל֖וּד מַזְכִּֽיר׃
17 ಅಹೀಟೂಬನ ಮಗ ಚಾದೋಕನೂ ಅಬಿಯಾತರನ ಮಗ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು.
וְצָד֧וֹק בֶּן־אֲחִיט֛וּב וַאֲחִימֶ֥לֶךְ בֶּן־אֶבְיָתָ֖ר כֹּהֲנִ֑ים וּשְׂרָיָ֖ה סוֹפֵֽר׃
18 ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರ ಮೇಲೆಯೂ ಪೆಲೇತ್ಯರ ಮೇಲೆಯೂ ಮುಖ್ಯಸ್ಥನಾಗಿದ್ದನು. ದಾವೀದನ ಪುತ್ರರು ಸಮಾಲೋಚಕರಾಗಿದ್ದರು.
וּבְנָיָ֙הוּ֙ בֶּן־יְה֣וֹיָדָ֔ע וְהַכְּרֵתִ֖י וְהַפְּלֵתִ֑י וּבְנֵ֥י דָוִ֖ד כֹּהֲנִ֥ים הָיֽוּ׃ פ

< ಸಮುವೇಲನು - ದ್ವಿತೀಯ ಭಾಗ 8 >